For Quick Alerts
ALLOW NOTIFICATIONS  
For Daily Alerts

ಸೆ. 25ಕ್ಕೆ ಸರ್ವ ಪಿತೃ ಅಮವಾಸ್ಯೆ: ಈ ದಿನ ಹೀಗೆ ಮಾಡಿದರೆ ಕಷ್ಟಗಳು ದೂರಾಗುವುದು

|

ಪಿತೃಪಕ್ಷ ಸೆಪ್ಟೆಂಬರ್‌ 10ರಿಂದ ಪ್ರಾರಂಭವಾಗಿತ್ತು, ಇದೀಗ ಸೆಪ್ಟೆಂಬರ್‌ 25ಕ್ಕೆ ಮುಕ್ತಾಯವಾಗಲಿದೆ. ಪಿತೃಪಕ್ಷ ಹಿಂದೂಗಳಿಗೆ ತುಂಬಾನೇ ಮಹತ್ವವಾದದ್ದು. ಈ ಸಂದರ್ಭದಲ್ಲಿ ಮರಣವೊಂದಿರುವ ಹಿರಿಯರಿಗೆ ತರ್ಪಣ ನೀಡಿ, ಅವರ ಆಶೀರ್ವಾದ ಪಡೆಯಲಾಗುವುದು. ಪಿತೃಪಕ್ಷ ಆಚರಣೆ ಮಾಡುವುದರಿಂದ ಪಿತೃದೋಷವಿದ್ದರೆ ನಿವಾರಣೆಯಾಗುವುದು. ಪಿತೃಪಕ್ಷ ಅಶ್ವನಿ ಮಾಸದ ಅಮವಾಸ್ಯೆಯಂದು ಮುಕ್ತಾಯವಾಗಲಿದೆ.

Sarva Pitru Moksha Amavasya

ಸೆಪ್ಟೆಂಬರ್ 25ಕ್ಕೆ ಸರ್ವ ಪಿತೃ ಅಮವಾಸ್ಯೆ ಇದನ್ನು ಮಹಾಲಯ ಅಮವಾಸ್ಯೆ ಎಂದು ಕೂಡ ಕರೆಯಲಾಗುವುದು. ಸರ್ವ ಪಿತೃ ಅಮವಾಸ್ಯೆಯನ್ನು ಅಶ್ವಿನ ಮಾಸದ ಕೃಷ್ಣ ಪಕ್ಷದಲ್ಲಿ ಆಚರಿಸಲಾಗುತ್ತಿದೆ.

 ಸರ್ವ ಪಿತೃ ಅಮವಾಸ್ಯೆಯ ಮಹತ್ವ

ಸರ್ವ ಪಿತೃ ಅಮವಾಸ್ಯೆಯ ಮಹತ್ವ

ಪಿತೃದೋಷ ಒಳ್ಳೆಯದಲ್ಲ. ಕೆಲವರಿಗೆ ಕುಂಡಲಿಯಲ್ಲಿ ಪಿತೃದೋಷವಿರುತ್ತದೆ, ಇನ್ನು ಕೆಲವರಿಗೆ ಕರ್ಮಫಲದಿಂದಾಗಿ ಪಿತೃದೋಷ ಉಂಟಾಗಿರುತ್ತದೆ. ಪಿತೃದೋಷ ಹೋಗಲಾಡಿಸಲು ಈ ಪಿತೃಪಕ್ಷ ಸೂಕ್ತವಾದ ಸಂದರ್ಭವಾಗಿದೆ. ಪಿತೃಪಕ್ಷದಲ್ಲಿ ಹಿರಿಯರಿಗೆ ತರ್ಪಣ ನೀಡುವುದರಿಂದ ಪಿತೃದೋಷ ನೀಗುವುದು, ಅದರಲ್ಲೂ ಸರ್ವ ಪಿತೃ ಅಮವಾಸ್ಯೆಯಂದು ತರ್ಪಣ ನೀಡಿದರೆ ನಿಮ್ಮ ಎಲ್ಲಾ ಹಿರಿಯರು ಸಂತುಷ್ಟರಾಗಿ ನಿಮ್ಮನ್ನು ಆಶೀರ್ವದಿಸುತ್ತಾರೆ. ಇದರಿಂದಾಗಿ ಪಿತೃದೋಷವಿದ್ದರೆ ಅದು ನಿವಾರಣೆಯಾಗಿ ಏಳಿಗೆ ಉಂಟಾಗಲಿದೆ.

 ಸರ್ವ ಪಿತೃ ಅಮವಾಸ್ಯೆ ತಿಥಿ

ಸರ್ವ ಪಿತೃ ಅಮವಾಸ್ಯೆ ತಿಥಿ

ಸರ್ವ ಪಿತೃ ಅಮವಾಸ್ಯೆ ದಿನಾಂಕ ಸೆಪ್ಟೆಂಬರ್ 25

ಅಮವಾಸ್ಯೆ ತಿಥಿ ಪ್ರಾರಂಭ: ಸೆಪ್ಟೆಂಬರ್ 25 ಮುಂಜಾನೆ 03:12ಕ್ಕೆ

ಅಮವಾಸ್ಯೆ ತಿಥಿ ಮುಕ್ತಾಯ: ಸೆಪ್ಟೆಂಬರ್ 26 ಮುಂಜಾನೆ 03:23ಕ್ಕೆ

ರೋಹಿಣಿ ಮುಹೂರ್ತ: 11:48ರಿದ 12:37ರವರೆಗೆ

ಅಪರಾಹ್ನ ಕಾಲ: ಮಧ್ಯಾಹ್ನ 01:25ರಿಂದ 03:50ರವರೆಗೆ

ಸರ್ವ ಪಿತೃಪಕ್ಷ ಅಮವಾಸ್ಯೆ ನಿಯಮಗಳು

ಸರ್ವ ಪಿತೃಪಕ್ಷ ಅಮವಾಸ್ಯೆ ನಿಯಮಗಳು

* ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಬೇಕು

* ಈ ದಿನ ಸಾತ್ವಿಕ ಆಹಾರ ಸೇವಿಸಬೇಕು

* ಶ್ರಾದ್ಧ ಕಾರ್ಯ ಮಾಡಬೇಕು

* ಬ್ರಾಹ್ಮಿಣರಿಗೆ ಆಹಾರ, ಹಣ್ಣು, ಬಟ್ಟೆಯನ್ನು ನೀಡಿ, ಅವರ ಪಾದ ಮುಟ್ಟಿ ನಮಸ್ಕರಿಸಬೇಕು.

* ಕೆಲವರು ಪವಿತ್ರ ನದಿಗಳ ತಟದಲ್ಲಿ ಶ್ರಾದ್ಧ ಕಾರ್ಯ ಮಾಡುತ್ತಾರೆ,

ಈ ದಿನ ಹೀಗೆ ಮಾಡಿದರೆ ಶುಭ ಫಲ ಪಡೆಯುವಿರಿ

ಈ ದಿನ ಹೀಗೆ ಮಾಡಿದರೆ ಶುಭ ಫಲ ಪಡೆಯುವಿರಿ

ಹಸುವಿಗೆ ಹಸಿರು ಮೇವು ನೀಡಿ

ಸರ್ವ ಪಿತೃ ಅಮಾವಾಸ್ಯೆಯ ದಿನ ಪೂರ್ವಜರನ್ನು ಮೆಚ್ಚಿಸಲು ಹಸುವಿಗೆ ಹಸಿರು ಮೇವು ನೀಡಬೇಕು.

ಆಲದ ಮರಕ್ಕೆ ಪೂಜೆ ಮಾಡಿ

ಸರ್ವಪಿತ್ರ ಅಮಾವಾಸ್ಯೆಯಂದು ಆಲದ ಮರದ ಬಳಿ ದೀಪ ಹಚ್ಚಿದರೆ ಸಂತುಷ್ಟರಾಗಿ ನಮ್ಮನ್ನು ಆಶೀರ್ವದಿಸುತ್ತಾರೆ.

ದಾನ ಮಾಡಿ

ಜ್ಯೋತಿಷ್ಯ ಪ್ರಕಾರ ಸರ್ವ ಪಿತೃ ಅಮಾವಾಸ್ಯೆಯಂದು ದಾನ ಮಾಡುವುದು ತುಂಬಾ ಒಳ್ಳೆಯದು. ಈ ದಿನ ದಾನ ಮಾಡುವುದರಿಂದ ಪುಣ್ಯ ಬರುತ್ತದೆ. ಸರ್ವ ಪಿತೃ ಅಮಾವಾಸ್ಯೆಯಂದು ಬ್ರಾಹ್ಮಣನಿಗೆ ಸಾಮಾನ್ಯ ದಾನವನ್ನು ಮಾಡಬೇಕು. ಹಾಗೆಯೇ ಬೆಳ್ಳಿಯನ್ನು ದಾನ ಮಾಡುವುದು ಶ್ರೇಷ್ಠವೆಂದು ಪರಿಗಣಿಸಲಾಗಿದೆ.

English summary

Sarva Pitru Moksha Amavasya 2022: Date, Rituals And Significance in Kannada

Sarva Pitru Moksha Amavasya 2022: Here are information about rituals and significance read on....
X
Desktop Bottom Promotion