For Quick Alerts
ALLOW NOTIFICATIONS  
For Daily Alerts

ವರ್ಷದಲ್ಲೇ ಡಿಸೆಂಬರ್‌ ತಿಂಗಳು ತುಂಬಾ ಬೆಸ್ಟ್, ಏಕೆ?

|

ಮಳೆಗಾಲ ಕಳೆದು ಚಳಿಗಾಲದ ಚುಮುಚುಮು ಚಳಿಯನ್ನು ಸವಿಯುವ ಸಮಯ ಮತ್ತೆ ಬಂದಾಗಿದೆ. ಹೌದು ಈ ವರ್ಷದ ಕೊನೆಯ ತಿಂಗಳಿಗೆ ನಾವೀಗ ಕಾಲಿಟ್ಟಿದ್ದೇವೆ. ಡಿಸೆಂಬರ್ ಎಂದರೆ ವಿಭಿನ್ನ ವಾತಾವರಣದ ಸವಿ ಇರುವ ತಿಂಗಳು. ವರ್ಷದ ಕೊನೆಯಲ್ಲಿ ಬರುವ ಹಬ್ಬಗಳ ಸಂಭ್ರಮಾಚರಣೆಗೆ ಎಲ್ಲರೂ ಕಾತರದಿಂದ ಇರುವ ತಿಂಗಳು. ಈ ವರ್ಷದಲ್ಲಿ ಮಾಡಬೇಕು ಎಂದುಕೊಂಡಿರುವ ಕೆಲಸಗಳಲ್ಲಿ ಬಾಕಿ ಉಳಿಸಿರುವ ಕೆಲಸಗಳನ್ನು ಸಂಪೂರ್ಣಗೊಳಿಸಲು ಇರುವುದು ಇನ್ನೊಂದೇ ತಿಂಗಳ ಸಮಯ!

ಈ ವರ್ಷದ ಕಹಿ ನೆನಪುಗಳನ್ನು ಮರೆತು ಮುಂದಿನ ವರ್ಷವನ್ನು ಸ್ವಾಗತಿಸಲು ಸಜ್ಜುಗೊಳ್ಳಬೇಕಿರುವ ತಿಂಗಳು. ತಣ್ಣನೆಯ ವಾತಾವರಣ, ಕ್ರಿಸ್ ಮಸ್ ನ ಹಬ್ಬದ ಸಂಭ್ರಮ ಈ ಡಿಸೆಂಬರ್ ತಿಂಗಳ ಸಂತೋಷವನ್ನು ಇಮ್ಮಡಿಗೊಳಿಸುತ್ತದೆ. ವರ್ಷ ಮುಗಿಯುತ್ತಾ ಬಂದು ಹೊಸ ವರ್ಷದ ಹೊಸ ಕಲ್ಪನೆಗಳಿಗೆ ಈ ತಿಂಗಳಲ್ಲಿ ರೂಪ ಸಿಗುತ್ತದೆ. ಎಲ್ಲರೂ ಕೂಡ ಹೊಸ ವರ್ಷಕ್ಕಾಗಿ ಕಾತುರರಾಗಿರುವ ತಿಂಗಳೆಂದರೆ ಅದು ಡಿಸೆಂಬರ್.

Reasons Why December Is The Best Month Of The Year

ಡಿಸೆಂಬರ್ ತಿಂಗಳು ಆರಂಭವಾಗುತ್ತಿದ್ದಂತೆ ಹಬ್ಬದ ಸಂಭ್ರಮವು ಎಲ್ಲಾ ಕಡೆ ಆರಂಭವಾಗುತ್ತದೆ. ಒಮ್ಮೆ ಕಳೆದ ವರ್ಷವನ್ನು ನೆನಪು ಮಾಡಿಕೊಂಡರೆ ವರ್ಷದುದ್ದಕ್ಕೂ ಹೇಗೆ ಕಳೆದಿದ್ದೀರಿ ಎಂಬುದು ನೆನಪಿಗೆ ಬರುತ್ತದೆ. ಕಳೆದು ಹೋಗುತ್ತಿರುವ ವರ್ಷದಲ್ಲಿ ಮಾಡಿದ ತಪ್ಪುಗಳನ್ನು ಮರೆತು, ಹೊಸ ವರ್ಷದಲ್ಲಿ ಆ ತಪ್ಪುಗಳು ಪುನರಾವರ್ತನೆ ಆಗದಂತೆ ನೋಡಿಕೊಳ್ಳುವುದಕ್ಕೆ ಏನು ಮಾಡಬಹುದೆಂದು ಯೋಚಿಸಿ ಹೊಸ ರೆಸಲ್ಯೂಷನ್ ಕೈಗೊಳ್ಳುವ ಸಮಯವೆಂದರೆ ಡಿಸೆಂಬರ್.

ಡಿಸೆಂಬರ್ ತಿಂಗಳು ವರ್ಷದ ಅತ್ಯದ್ಭುತ ತಿಂಗಳು ಎಂದರೆ ಅತಿಶಯೋಕ್ತಿ ಆಗಲಾರದು. ಡಿಸೆಂಬರ್ ಅನ್ನು ಬೆಸ್ಟ್ ತಿಂಗಳು ಎಂದು ಕರೆಯುವುದಕ್ಕೆ ಹಲವು ಕಾರಣಗಳಿವೆ. ಅಂತಹ ಕೆಲವು ಪ್ರಮುಖ ಕಾರಣಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ. ಮುಂದೆ ಓದಿ.

1. ತಣ್ಣನೆಯ ವಾತಾವರಣ

1. ತಣ್ಣನೆಯ ವಾತಾವರಣ

ಡಿಸೆಂಬರ್ ತಿಂಗಳಲ್ಲಿ ನೀವು ಸೂರ್ಯನ ಕಿರಣಗಳ ಶಾಖದಿಂದ ಸನ್ ಬರ್ನ್ ಆಗುತ್ತದೆ ಎಂಬ ಚಿಂತೆಯಿಂದ ದೂರವಿರಬಹುದು. ಹೌದು ಈ ತಿಂಗಳಲ್ಲಿ ನೀವು ಆರಾಮಾಗಿ ಹೊರಗಡೆ ಓಡಾಡಬಹುದು. ಬಿಸಿಬಿಸಿ ವಾತಾವರಣ ಇರುವುದಿಲ್ಲ. ಸೂರ್ಯನ ಕಿರಣಗಳನ್ನು ನೀವು ಎಂಜಾಯ್ ಮಾಡಬಹುದು. ಬೆವರುವಿಕೆ ಮತ್ತು ದೇಹವೆಲ್ಲಾ ವಾಸನೆಯಾಗುತ್ತದೆ ಎಂಬ ಚಿಂತೆಯಿಂದ ದೂರವಿರಬಹುದು. ನಿಮ್ಮ ಪ್ರೀತಿಯ ಸ್ವೆಟ್ಟರ್ ಗಳನ್ನು ಧರಿಸಬಹುದು, ಮಫ್ಲರ್ ಗಳನ್ನು ಧರಿಸಿ ಸ್ಟೈಲ್ ಮಾಡಬಹುದು ಮತ್ತು ಬಣ್ಣಬಣ್ಣದ ಸಾಕ್ಸ್ ಗಳಿಂದ ನಿಮ್ಮನ್ನ ನೀವು ಅಲಂಕರಿಸಿಕೊಳ್ಳಬಹುದು.

2. ಕ್ರಿಸ್ ಮಸ್ ಹಬ್ಬದ ಸಂಭ್ರಮ

2. ಕ್ರಿಸ್ ಮಸ್ ಹಬ್ಬದ ಸಂಭ್ರಮ

ಡಿಸೆಂಬರ್ ತಿಂಗಳ ಮತ್ತೊಂದು ಅತ್ಯುತ್ತಮ ವಿಚಾರವೆಂದರೆ ಕ್ರಿಸ್ ಮಸ್ ಹಬ್ಬ. ತಿಂಗಳಿಡೀ ಕ್ರಿಸ್ ಮಸ್ ಹಬ್ಬದ ಸಂಭ್ರಮ ಮೇಳೈಸಿರುತ್ತದೆ. ಮನೆಮನೆಯಲ್ಲೂ ಕೂಡ ಕ್ರಿಸ್ ಮಸ್ ಹಬ್ಬಕ್ಕಾಗಿ ತಯಾರಿಗಳು ಜೋರಾಗಿರುತ್ತದೆ. ಕ್ರಿಸ್ ಮಸ್ ಟ್ರೀಗಳು ಅಲಂಕಾರದಿಂದ ಕಂಗೊಳಿಸುವ ಸಮಯ ಡಿಸೆಂಬರ್. ಕ್ರಿಸ್ ಮಸ್ ಹಬ್ಬಕ್ಕಾಗಿ ಮಕ್ಕಳು, ಕುಟುಂಬಸ್ಥರು, ಸ್ನೇಹಿತರು ಒಟ್ಟಿಗೆ ಸೇರಿ ಎಂಜಾಯ್ ಮಾಡುವ ಸುಸಮಯ ಅಂದರೆ ಅದು ಡಿಸೆಂಬರ್.

3. ಉಡುಗೊರೆಗಳು ಮತ್ತು ಕುಕ್ಕೀಸ್ ಗಳು

3. ಉಡುಗೊರೆಗಳು ಮತ್ತು ಕುಕ್ಕೀಸ್ ಗಳು

ಡಿಸೆಂಬರ್ ತಿಂಗಳು ಎಂದರೆ ಈಗಾಗಲೇ ಮೇಲೆ ಹೇಳಿದಂತೆ ಕ್ರಿಶ್ಚಿಯನ್ ಸಮುದಾಯದವರಿಗೆ ಕ್ರಿಸ್ ಮಸ್ ಹಬ್ಬದ ಸಂಭ್ರಮವಿರುತ್ತದೆ. ಹಾಗಿರುವಾಗ ಹಬ್ಬದ ತಯಾರಿಗಾಗಿ ಕುಕ್ಕೀಸ್ ಗಳ ತಯಾರಿಕೆಯಲ್ಲಿ, ಕೇಕ್ ಗಳ ತಯಾರಿಕೆಯಲ್ಲಿ ಮತ್ತು ವಿಭಿನ್ನ ಗಿಫ್ಟ್ ಗಳನ್ನು ರೆಡಿ ಮಾಡುವುದರಲ್ಲಿ ಬ್ಯುಸಿಯಾಗಿರುವ ಸಮಯ ಡಿಸೆಂಬರ್. ಹಲವಾರು ಉಡುಗೊರೆಗಳು ಮತ್ತು ಶುಭಾಶಯಗಳ ಮಹಾಪೂರವೇ ಈ ತಿಂಗಳಲ್ಲಿ ಇರುತ್ತದೆ. ಯಾರು ತಾನೆ ಉಡುಗೊರೆಗಳನ್ನು ಇಷ್ಟ ಪಡುವುದಿಲ್ಲ ಹೇಳಿ. ಇನ್ನು ಉಡುಗೊರೆ ಕೊಟ್ಟ ಮೇಲೆ ಬರಿಗೈಯಲ್ಲಿ ಉಡುಗೊರೆ ಕೊಟ್ಟವರನ್ನು ಕಳುಹಿಸಲು ಸಾಧ್ಯವೇ. ಅವರಿಗಾಗಿ ರುಚಿರುಚಿಯಾದ ಕುಕ್ಕೀಸ್ ಗಳನ್ನು ತಯಾರಿಸಿ ಹಂಚುವುದು ಸರ್ವೇಸಾಮಾನ್ಯ.

4. ಕಂಬಳಿ ಹೊದ್ದು ಮಲಗಲು ಡಿಸೆಂಬರೇ ಬೆಸ್ಟ್ ತಿಂಗಳು

4. ಕಂಬಳಿ ಹೊದ್ದು ಮಲಗಲು ಡಿಸೆಂಬರೇ ಬೆಸ್ಟ್ ತಿಂಗಳು

ಬೇಸಿಗೆಯ ಬಿಸಿಲಿನ ಝಳಕ್ಕೆ ಕಪಾಟಿನ ಮೂಲೆ ಸೇರಿದ್ದ ಕಂಬಳಿ ಹೊರಗೆ ಬರುವ ಸಮಯ ಡಿಸೆಂಬರ್. ಹೌದು ಚುಮುಚುಮು ಚಳಿಯ ಈ ಸಂದರ್ಭದಲ್ಲಿ ಬೆಚ್ಚಗೆ ಮಲಗಲು ಕಂಬಳಿ ಹೊರಗೆ ಬರುತ್ತದೆ. ಬೆಚ್ಚಗಿನ ಅನುಭವ ನೀಡುವ ಕಂಬಳಿಯನ್ನು ಪ್ರೀತಿಸುವವರಿಗೆ ಡಿಸೆಂಬರ್ ಖಂಡಿತ ಇಷ್ಟವಾಗುತ್ತದೆ. ಕಂಬಳಿ ನೀಡುವ ಬೆಚ್ಚಗಿನ ಅನುಭವ ಎಂತವರನ್ನು ಕೂಡ ಚಳಿಗಾಲವನ್ನು ಇಷ್ಟ ಪಡುವಂತೆ ಮಾಡುತ್ತದೆ.

5. ಹೊಸ ವರ್ಷದ ಆರಂಭಕ್ಕೆ ಕ್ಷಣಗಣನೆ

5. ಹೊಸ ವರ್ಷದ ಆರಂಭಕ್ಕೆ ಕ್ಷಣಗಣನೆ

ವರ್ಷದ ಕೊನೆಯ ತಿಂಗಳು ಡಿಸೆಂಬರ್. ಹೊಸ ವರ್ಷದ ಆರಂಭಕ್ಕೆ ಕೆಲವು ದಿನಗಳು ಬಾಕಿ ಉಳಿದಿರುತ್ತದೆ. ಹೊಸ ವರ್ಷವನ್ನು ಸಂಭ್ರಮದಿಂದ ಬರ ಮಾಡಿಕೊಳ್ಳುವುದಕ್ಕೆ ಎಲ್ಲರೂ ಕೂಡ ಕಾತುರರಾಗಿರುತ್ತಾರೆ. ಹೊಸ ವರ್ಷದಲ್ಲಿ ಏನು ಮಾಡಬೇಕು ಎಂಬ ರೆಸಲ್ಯೂಷನ್ ತೆಗೆದುಕೊಳ್ಳುವುದಕ್ಕೆ ಪ್ಲಾನ್ ಮಾಡಬಹುದಾದ ತಿಂಗಳು ಡಿಸೆಂಬರ್. ವರ್ಷವಿಡೀ ಹಿಡಿದುಕೊಂಡಿದ್ದ ದ್ವೇಷವನ್ನು ಮರೆತು ಹೊಸ ವರ್ಷದಲ್ಲಿ ಸ್ನೇಹ ಸಂಪಾದನೆಗೆ ಮುಂದಾಗಲು ಇದುವೇ ಸರಿಯಾದ ಸಮಯ!

6. ರಜಾದಿನಗಳು ಮತ್ತು ಪ್ರವಾಸಗಳು

6. ರಜಾದಿನಗಳು ಮತ್ತು ಪ್ರವಾಸಗಳು

ಡಿಸೆಂಬರ್ ಎಂದರೆ ರಜಾದಿನಗಳನ್ನು ಎಂಜಾಯ್ ಮಾಡಬಹುದು. ಸಂತೋಷದಿಂದ ಯಾವುದಾದರೂ ಟ್ರಿಪ್ ಹಾಕಬಹುದು. ಈ ಸಮಯದಲ್ಲಿ ಕುಟುಂಬದ ಜೊತೆಯೋ ಅಥವಾ ಸ್ನೇಹಿತರ ಜೊತೆಯೋ ದೂರದ ಪ್ರವಾಸ ಕೈಗೊಳ್ಳುವುದಕ್ಕಿಂತ ಅತ್ಯುತ್ತಮ ಪ್ಲಾನ್ ಇನ್ಯಾವುದಿರುವುದಕ್ಕೆ ಸಾಧ್ಯ ಹೇಳಿ? ವರ್ಷವಿಡೀ ಕೆಲಸ, ಒತ್ತಡದ ಜೀವನದಿಂದ ಬಳಲಿದ್ದವರಿಗೆ ಪ್ರವಾಸದ ಮೂಡ್ ನಿಂದ ರಿಲ್ಯಾಕ್ಸ್ ಮಾಡಿಕೊಳ್ಳಿಕೊಳ್ಳುವುದಕ್ಕೆ ಡಿಸೆಂಬರ್ ಬಹಳ ಅತ್ಯುತ್ತಮವಾಗಿರುವ ತಿಂಗಳು. ನಿಮ್ಮ ಕೂಡಿಟ್ಟ ಹಣವನ್ನು ಪ್ರವಾಸಕ್ಕಾಗಿ ವಿನಿಯೋಗಿಸಬಹುದಾದ ತಿಂಗಳೆಂದರೆ ಅದು ಡಿಸೆಂಬರ್. ಹಲವು ತಾಣಗಳ ಸೌಂದರ್ಯವನ್ನು ಸವಿದು ನಿಮ್ಮ ಮೂಡನ್ನು ರಿಫ್ರೆಶ್ ಮಾಡಿಕೊಳ್ಳಲು ಇದುವೇ ಸರಿಯಾದ ಸಮಯ. ಹೊರಟು ಹೋಗುತ್ತಿರುವ ವರ್ಷಕ್ಕೆ ಗುಡ್ ಬಾಯ್ ಹೇಳುತ್ತಾ ನೀವು ಪ್ರವಾಸದ ಸವಿಯನ್ನು ಸವಿದು ಹೊಸ ವರ್ಷವನ್ನು ಬರ ಮಾಡಿಕೊಳ್ಳಬಹುದು.

7. ಹಾಟ್ ಡ್ರಿಂಕ್ಸ್ ಗಳು ಮತ್ತು ಆಹಾರಗಳು

7. ಹಾಟ್ ಡ್ರಿಂಕ್ಸ್ ಗಳು ಮತ್ತು ಆಹಾರಗಳು

ಹಾಟ್ ಡ್ರಿಂಕ್ಸ್ ಗಳನ್ನು ಸೇವಿಸುತ್ತಾ, ಬಿಸಿಬಿಸಿ ಆಹಾರವನ್ನು ಸವಿಯುವುದಕ್ಕೆ ಈ ತಿಂಗಳೇ ಬೆಸ್ಟ್. ವರ್ಷವಿಡೀ ಕಾಫಿ, ಟೀ ಕುಡಿಯುವುದಕ್ಕೆ ಇಷ್ಟಪಡುತ್ತಿದ್ದರೂ ಕೂಡ ಖಂಡಿತ ಈ ತಿಂಗಳಲ್ಲಿ ಹಾಟ್ ಡ್ರಿಂಕ್ಸ್ ಗಳನ್ನು ಸೇವಿಸುವುದಕ್ಕೆ ಇಷ್ಟಪಡುತ್ತಾರೆ. ಡಿಸೆಂಬರ್ ಅನ್ನು ರುಚಿಯನ್ನು ಅಧಿಕಗೊಳಿಸುವ ತಿಂಗಳು ಎಂದು ಕರೆದರೆ ತಪ್ಪಾಗಲಿಕ್ಕಿಲ್ಲ. ಕೇವಲ ರುಚಿಗಾಗಿ ಮಾತ್ರ ಹಾಟ್ ಡ್ರಿಂಕ್ಸ್ ಅಲ್ಲ ಬದಲಾಗಿ ನಿಮ್ಮನ್ನ ಬೆಚ್ಚಗಿಡುವುದಕ್ಕೂ ಕೂಡ ಈ ಹಾಟ್ ಡ್ರಿಂಕ್ಸ್ ಗಳು ನೆರವು ನೀಡುತ್ತವೆ. ಹಾಟ್ ಚಾಕಲೇಟ್ ಅನ್ನು ಈ ತಿಂಗಳಲ್ಲಿ ನೀವು ತಯಾರಿಸಿ ಸವಿಯಬಹುದು. ಮನೆಗೆ ಬಂದ ಅತಿಥಿಗಳಿಗೆ ಅದನ್ನು ಕೊಟ್ಟು ಎಂಜಾಯ್ ಮಾಡಬಹುದು.

8. ಕೌಟುಂಬಿಕ ಕಾರ್ಯಕ್ರಮಗಳು

8. ಕೌಟುಂಬಿಕ ಕಾರ್ಯಕ್ರಮಗಳು

ಖಂಡಿತ ಡಿಸೆಂಬರ್ ತಿಂಗಳು ಕೌಟುಂಬಿಕ ಕಾರ್ಯಕ್ರಮಗಳಿಂದ ನಿಮ್ಮ ಕುಟುಂಬದ ಸದಸ್ಯರನ್ನು ಭೇಟಿ ಮಾಡಬಹುದಾದ ಬೆಸ್ಟ್ ತಿಂಗಳು. ಚಳಿಗಾಲದ ರಜಾ ದಿನಗಳಲ್ಲಿ ನಿಮ್ಮ ಅಜ್ಜಅಜ್ಜಿಯರನ್ನು ಭೇಟಿ ಮಾಡಿ ಅವರೊಂದಿಗೆ ಸಮಯ ಕಳೆದು ಖುಷಿ ಪಡುವ ದಿನಗಳಾಗಿರುತ್ತದೆ. ಹೀಗೆ ದೂರದಲ್ಲಿರುವು ಕುಟುಂಬದ ಎಲ್ಲಾ ಸದಸ್ಯರನ್ನು ಭೇಟಿ ಮಾಡಿ ಅವರೊಂದಿಗೆ ಕಳೆಯುವ ಸಮಯವು ನಿಮ್ಮ ವರ್ಷದ ಎಲ್ಲಾ ತಿಂಗಳಿಗಿಂತ ಡಿಸೆಂಬರ್ ಅನ್ನು ಹೆಚ್ಚು ಪ್ರೀತಿಸುವಂತೆ ಮತ್ತು ಸಂತೋಷದಿಂದ ಇರುವಂತೆ ಮಾಡುತ್ತದೆ. ಅಜ್ಜಿ ಕೈಯಡುಗೆ ಅಂದರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ. ಖಂಡಿತ ಅದರ ಸವಿಯನ್ನು ಸವಿಯುವುದಕ್ಕೆ ಈ ಸಮಯ ಹೇಳಿ ಮಾಡಿಸಿರುತ್ತದೆ.

9. ಎಲ್ಲಾ ಕಡೆಗಳಲ್ಲೂ ಮಂಜು ಮಂಜು

9. ಎಲ್ಲಾ ಕಡೆಗಳಲ್ಲೂ ಮಂಜು ಮಂಜು

ಭಾರತದ ಕೆಲವು ಪ್ರದೇಶಗಳು ಡಿಸೆಂಬರ್ ತಿಂಗಳಲ್ಲಿ ಹಿಮದಿಂದ ಆವೃತ್ತವಾಗಿ ಚುಮುಚುಮು ಚಳಿಯ ಅನುಭವವನ್ನು ನೀಡುತ್ತದೆ. ದೆಹಲಿ, ಮುಂಬೈ, ಕಾಶ್ಮೀರದಂತ ಭಾರತದ ಭೂ ಪ್ರದೇಶದಲ್ಲಿ ಬೆಂಕಿ ಹಾಕಿಕೊಂಡು ಅದರ ಮುಂದೆ ಕುಳಿತು ದೇಹವನ್ನು ಬೆಚ್ಚಗೆ ಮಾಡಿಕೊಳ್ಳುವುದು ಸರ್ವೇಸಾಮಾನ್ಯ. ಬಿಸಿ ಬಿಸಿ ಸೂಪ್ ಕುಡಿಯುವುದು ಮತ್ತು ಚಳಿಗೆ ಬಿಸಿಬಿಸಿ ಚಾಯ್ ಸವಿಯುವುದು ನಿಮ್ಮನ್ನ ಮತ್ತಷ್ಟು ಹಿತವಾಗುವಂತೆ ಮಾಡುತ್ತದೆ. ಹಾಗಾಗಿ ಡಿಸೆಂಬರ್ ತಿಂಗಳು ಚುಮುಚುಮು ಚಳಿಯಿಂದ ನಿಮ್ಮನ್ನ ಆಹ್ಲಾದವಾಗಿಸುತ್ತದೆ.

10. ಪಾರ್ಟಿ ಮಾಡುವುದಕ್ಕೆ ಅತ್ಯುತ್ತಮ ಸಮಯ

10. ಪಾರ್ಟಿ ಮಾಡುವುದಕ್ಕೆ ಅತ್ಯುತ್ತಮ ಸಮಯ

ಹಳೆಯ ವರ್ಷವನ್ನು ಬೀಳ್ಕೊಡುತ್ತಾ ಹೊಸ ವರ್ಷವನ್ನು ತುಂಬು ಹೃದಯದಿಂದ ಬರಮಾಡಿಕೊಳ್ಳುವ ಸಮಯ ಇದಾಗಿರುವುದಕ್ಕೆ ಈ ತಿಂಗಳಲ್ಲಿ ಸೆಲೆಬ್ರೇಷನ್ ಗಳು ಅಧಿಕವಾಗಿರುವಂತೆ ಪ್ಲಾನ್ ಮಾಡಬಹುದು. ಪಾರ್ಟಿ ಮಾಡುವುದಕ್ಕೆ ಖಂಡಿತ ಡಿಸೆಂಬರ್ ಬೆಸ್ಟ್ ಟೈಮ್. ಕ್ರಿಸ್ ಮಸ್ ಪಾರ್ಟಿ, ಕ್ರಿಸ್ ಮಸ್ ಈವ್ ಪಾರ್ಟಿ, ಹೊಸ ವರ್ಷದ ಪಾರ್ಟಿ ಹೀಗೆ ಪಾರ್ಟಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಎಂಜಾಯ್ ಮಾಡುವುದಕ್ಕೆ ಈ ತಿಂಗಳಲ್ಲಿ ಹಲವು ಕಾರಣಗಳು ಲಭ್ಯವಾಗುತ್ತದೆ. ಖಂಡಿತ ನೀವೂ ಕೂಡ ಡಿಸೆಂಬರ್‌ ತಿಂಗಳನ್ನು ಮನಸ್ಪೂರ್ತಿಯಾಗಿ ಎಂಜಾಯ್ ಮಾಡುತ್ತೀರಿ ಮತ್ತು ಈ ವರ್ಷದ ಕೊನೆಯ ತಿಂಗಳನ್ನು ಮರೆಯದ ತಿಂಗಳಾಗಿ ಮಾಡಿಕೊಳ್ಳುತ್ತೀರಿ ಎಂಬುದು ನಮ್ಮ ನಂಬಿಕೆ.

English summary

Reasons Why December Is The Best Month Of The Year

Here are the best reasons why december is the best month of the year. Take a look.
X
Desktop Bottom Promotion