For Quick Alerts
ALLOW NOTIFICATIONS  
For Daily Alerts

Raksha Bandhan 2022: ರಕ್ಷಾಬಂಧನದಂದು ಸಹೋದರನ ಸುರಕ್ಷತೆಗಾಗಿ ಸಹೋದರಿಯರು ಈ ದೇವರನ್ನು ಪ್ರಾರ್ಥಿಸಿ

|

ತಮ್ಮ ಸಹೋದರನ ದೀರ್ಘಾಯುಷ್ಯ, ಎಲ್ಲ ಸಮಯದಲ್ಲೂ ಅವನಿಗೆ ಸುರಕ್ಷತೆ ಸಿಗಲಿ ಎಂದು ದೈವವನ್ನು ಪ್ರಾರ್ಥಿಸಿ ಆತನ ಕೈಗೆ ಕಟ್ಟುವ ರಕ್ಷಾ ಬಂಧನ ಹಿಂದೂ ಧರ್ಮದಲ್ಲಿ ಬಹಳ ಪ್ರಾಮುಖ್ಯತೆ ಹೊಂದಿದೆ. 2022ರ ಇದೇ ಆಗಸ್ಟ್‌ 11ರಂದು ಇಂಥಾ ಅಪೂರ್ವ ಸಂಬಂಧ ಸಾರುವ ಹಬ್ಬ ಆಚರಿಸಲಾಗುತ್ತಿದೆ. ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಆಚರಿಸುವ ರಕ್ಷಾಬಂಧನ ಶುಭ ಮುಹೂರ್ತ 2022ರ ಆಗಸ್ಟ್ 11 ರಂದು ಬೆಳಿಗ್ಗೆ 10:38ಕ್ಕೆ ಪ್ರಾರಂಭವಾಗುತ್ತದೆ ಮತ್ತು 12 ಆಗಸ್ಟ್ ರಂದು ಬೆಳಿಗ್ಗೆ 07:05 ಕ್ಕೆ ಮುಕ್ತಾಯವಾಗುತ್ತದೆ.

ಜ್ಯೋತಿಷ್ಯಾಸ್ತ್ರದ ಪ್ರಕಾರ ಈ ರಕ್ಷಾ ಬಂಧನದಂದು ತಮ್ಮ ಸಹೋದರನ ಸುರಕ್ಷತೆಗಾಗಿ ಸಹೋದರಿಯರು ಯಾವ ದೇವರನ್ನು ಹೇಗೆ ಪ್ರಾರ್ಥಿಸಬೇಕು, ತಮ್ಮ ಸಹೋದರ ಜತೆ ಇಲ್ಲದಾಗ ರಕ್ಷಾ ಬಂಧನ ಪೂಜೆ ಹೇಗೆ ಮಾಡಬೇಕು ಮುಂದೆ ನೋಡೋಣ:

ಗಣೇಶ ಮತ್ತು ರಕ್ಷಾ ಬಂಧನ

ಗಣೇಶ ಮತ್ತು ರಕ್ಷಾ ಬಂಧನ

ರಕ್ಷಾ ಬಂಧನದಂದು ಎಲ್ಲಾ ವಿಧಿ-ವಿಧಾನಗಳೊಂದಿಗೆ ಗಣಪತಿಯನ್ನು ಪೂಜಿಸಿ, ಗಣಪತಿಗೆ ಹಸಿರು ಬಣ್ಣದ ರಾಖಿಯನ್ನು ಕಟ್ಟಿ ಮತ್ತು ಬೇಳೆ ಹಿಟ್ಟಿನಿಂದ ಮಾಡಿದ ಲಡ್ಡುಗಳ ಅರ್ಪಿಸಿ. ಈ ರೀತಿ ಗಣಪತಿಯನ್ನು ಪೂಜಿಸಿದರೆ ನಿಮ್ಮ ಸಹೋದರನ ಜೀವನದಿಂದ ಎಲ್ಲಾ ಅಡೆತಡೆಗಳನ್ನು ನಿವಾರಣೆಯಾಗುತ್ತದೆ ಮತ್ತು ಸಂತೋಷ, ಸಮೃದ್ಧಿಯಿಂದ ಆಶೀರ್ವದಿಸಲ್ಪಡುತ್ತಾರೆ.

ಹನುಮಂತನಿಗೆ ಶರಣು

ಹನುಮಂತನಿಗೆ ಶರಣು

ಹನುಮಂತನಿಗೆ ಕೇಸರಿ ಅಥವಾ ಕೆಂಪು ಬಣ್ಣದ ರಾಖಿಯನ್ನು ಕಟ್ಟಿ ಮತ್ತು ರವೆಯಿಂದ ತಯಾರಿಸಿದ ಸಿಹಿಯನ್ನು ಅರ್ಪಿಸಿ. ಆಂಜನೇಯ ಆಶೀರ್ವಾದದಿಂದ ನಿಮ್ಮ ಸಹೋದರ ವಿಶೇಷವಾಗಿ ದುಷ್ಟ ಅಥವಾ ನಕಾರಾತ್ಮಕ ಶಕ್ತಿಯಿಂದ ಸುರಕ್ಷಿತವಾಗಿರುವರು.

ಭಗವಾನ್ ಶಿವನ ಪ್ರಾರ್ಥನೆ

ಭಗವಾನ್ ಶಿವನ ಪ್ರಾರ್ಥನೆ

ಸಹೋದರ-ಸಹೋದರಿ ಇಬ್ಬರೂ ಒಂದೇ ಸ್ಥಳದಲ್ಲಿ ಅಥವಾ ನಗರದಲ್ಲಿ ವಾಸಿಸದಿದ್ದರೆ ಶಿವನಿಗೆ ಹೀಗೆ ಪೂಜೆ ಮಾಡಿ. ಈ ದಿನದಂದು ಶಿವನಿಗೆ ಬಿಳಿ ಅಥವಾ ಹಳದಿ ಬಣ್ಣದ ರಾಖಿಯನ್ನು ಕಟ್ಟಿ, ಅನ್ನದ ಪಾಯಸವನ್ನು ಅರ್ಪಿಸುವ ಮೂಲಕ ಪೂಜಿಸಿ. ಇದು ಖಂಡಿತವಾಗಿಯೂ ನಿಮ್ಮ ಸಹೋದರನನ್ನು ಎಲ್ಲಾ ಶುಭ ಆರಂಭಗಳೊಂದಿಗೆ ಆಶೀರ್ವದಿಸುವ ಮೂಲಕ ಜೀವನದಲ್ಲಿ ಯಶಸ್ಸನ್ನು ನೀಡುತ್ತದೆ.

ಭಗವಾನ್ ವಿಷ್ಣುವಿನ ಪೂಜೆ

ಭಗವಾನ್ ವಿಷ್ಣುವಿನ ಪೂಜೆ

ಒಂದು ವೇಳೆ, ಅನಿರೀಕ್ಷಿತ ಕಾರಣಗಳಿಂದ ನಿಮಗೆ ರಾಖಿ ಕಟ್ಟಲು ಸಾಧ್ಯವಾಗದಿದ್ದರೆ ಚಿಂತಿಸಬೇಡಿ. ನಿಮ್ಮ ಸಹೋದರ ಸಾರ್ವಕಾಲಿಕವಾಗಿ ನಿಮ್ಮ ಮನಸ್ಸಿನಲ್ಲಿದ್ದಾನೆ ಮತ್ತು ನೀವು ಒಟ್ಟಿಗೆ ಕಳೆದ ಸಮಯವನ್ನು ಯಾವಾಗಲೂ ಸಂತೋಷದಿಂದ ನೆನಪು ಮಾಡಿಕೊಳ್ಳಿ. ಈ ದಿನದಂದು, ವಿಷ್ಣುವಿಗೆ ಹಳದಿ ಬಣ್ಣದ ರಾಖಿ ಮತ್ತು ಸಿಹಿಯನ್ನು ಪೂರ್ಣ ಹೃದಯದಿಂದ ಅರ್ಪಿಸಿ ನಂತರ ನಿಮ್ಮ ಸಹೋದರನಿಗೆ ಶುಭ ಹಾರೈಸಿ.

ಕೃಷ್ಣನಿಗೆ ನವಿಲು ಬಣ್ಣದ ರಾಖಿ

ಕೃಷ್ಣನಿಗೆ ನವಿಲು ಬಣ್ಣದ ರಾಖಿ

ನೀವು ಭಗವಾನ್ ಕೃಷ್ಣನ ಭಕ್ತರಾಗಿದ್ದರೆ ಮತ್ತು ನಿಮ್ಮ ಸಹೋದರನು ತನ್ನ ಮುದ್ದಾದ ಚೇಷ್ಟೆಗಳಿಂದ ನಿಮಗೆ ಅಪಾರ ಸಂತೋಷ ನೀಡಿ ಪ್ರೀತಿಸುತ್ತಿದ್ದರೆ, ಹಳದಿ ಅಥವಾ ನವಿಲು ಬಣ್ಣದ ರಾಖಿಯನ್ನು ಭಗವಾನ್ ವಾಸುದೇವನಿಗೆ ಕಟ್ಟಿ ಮತ್ತು ಹಾಲಿನ ಸಿಹಿಯನ್ನು ಅರ್ಪಿಸಿ. ಶ್ರೀಕೃಷ್ಣನು ಸದಾ ನಿನ್ನ ಸಹೋದರನನ್ನು ರಕ್ಷಿಸಲಿ ಎಂದು ಶ್ರದ್ಧೆಯಿಂದ ಪ್ರಾರ್ಥಿಸಿ. ಅವನು ತನ್ನ ಜೀವನದಲ್ಲಿ ಯಾವುದೇ ತೊಂದರೆಯಲ್ಲಿದ್ದಾಗ, ಅವನ ಸುತ್ತಲೂ ತನ್ನ ರಕ್ಷಣಾತ್ಮಕ ಕವಚವಾಗಿರಲು ಭಗವಾನ್ ಕೃಷ್ಣನನ್ನು ಪೂಜಿಸಿ.

English summary

Raksha Bandhan Astrological Remedies for Good Luck of Brother in kannada

Here we are discussing about Raksha Bandhan Astrological Remedies for Good Luck of Brother in kannada. Read more.
Story first published: Tuesday, August 9, 2022, 14:33 [IST]
X
Desktop Bottom Promotion