For Quick Alerts
ALLOW NOTIFICATIONS  
For Daily Alerts

ನವೆಂಬರ್‌ನಲ್ಲಿದೆ ಈ 5 ಪ್ರಮುಖ ಗ್ರಹಗಳ ಸಂಚಾರ!

|

ಸಾಲು ಸಾಲು ಹಬ್ಬಗಳನ್ನು ಕಳೆದು, ಇದೀಗ ನವೆಂಬರ್ ತಿಂಗಳಿಗೆ ಕಾಲಿಡುತ್ತಿದ್ದೇವೆ. ಈ ತಿಂಗಳಲ್ಲಿ ಹಬ್ಬಗಳು ಕಡಿಮೆಯಿದ್ದರೂ, ಪ್ರಮುಖ ಗ್ರಹಗಳ ಸಂಚಾರವಿದೆ. ಜ್ಯೋತಿಷ್ಯದಲ್ಲಿ ಗ್ರಹಗಳ ಸಂಚಾರ ಹೆಚ್ಚಿನ ಪ್ರಾಮುಖ್ಯತೆ ಪಡೆದಿದ್ದು, ಪ್ರತಿಯೊಂದು ಸಂಚಾರವು, ಪ್ರತಿಯೊಬ್ಬರ ಜೀವನದ ಮೇಲೆ ಪರಿಣಾಮ ಬೀರುವುದು ಸಹಜ.

ಅದು ಸಂತೋಷದ ರೂಪದಲ್ಲೂ ಇರಬಹುದು ಅಥವಾ ಕಷ್ಟಗಳ ರೂಪದಲ್ಲಾದರೂ ಇರಬಹುದು. ಅವು ನಿಮ್ಮ ನಿಮ್ಮ ರಾಶಿ, ಗ್ರಹಗಳ ಸ್ಥಾನವನ್ನು ಅವಲಂಬಿಸಿರುತ್ತದೆ. ಆದ್ದರಿಂದ ಇಲ್ಲಿ ನಾವಿಂದು ನವೆಂಬರ್‌ನಲ್ಲಿರುವ 5 ಗ್ರಹಗಳ ಸಂಚಾರ ಹಾಗೂ ಅದರಿಂದ ಉಂಟಾಗಬಹುದಾದ ದುಷ್ಪರಿಣಾಮಗಳನ್ನು ತಪ್ಪಿಸಲು ಮಾಡಬೇಕಾದ ಪರಿಹಾರಗಳ ಬಗ್ಗೆ ಹೇಳಲಿದ್ದೇವೆ.

Planet Transit in November 2022

ನವೆಂಬರ್‌ನಲ್ಲಿ 5 ಗ್ರಹಗಳ ಸಂಚಾರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

1. ವೃಶ್ಚಿಕ ರಾಶಿಗೆ ಶುಕ್ರನ ಸಂಚಾರ:

1. ವೃಶ್ಚಿಕ ರಾಶಿಗೆ ಶುಕ್ರನ ಸಂಚಾರ:

ನಿಮ್ಮ ಜಾತಕದಲ್ಲಿ ಪ್ರೀತಿ, ಸಂತೋಷ ಮತ್ತು ಎಲ್ಲಾ ಒಳ್ಳೆಯ ವಿಚಾರಗಳಿಗೆ ಕಾರಣವಾದ ಶುಕ್ರ ಗ್ರಹವು ಸರಿಯಾದ ಸ್ಥಾನದಲ್ಲಿ ಇರದಿದ್ದರೆ, ನಿಮ್ಮ ಜೀವನದಲ್ಲಿ ಪ್ರಕ್ಷುಬ್ಧತೆಯನ್ನು ತರಬಹುದು. ಆದ್ದರಿಂದ ಆತನನ್ನು ಒಲಿಸಿಕೊಳ್ಳಲು ಪ್ರಯತ್ನಿಸಿ. ಈ ಗ್ರಹವು 11 ನವೆಂಬರ್ 2022 ರಂದು (ಶುಕ್ರವಾರ) ತುಲಾ ರಾಶಿಯಿಂದ ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಿದೆ. ಈ ಸಂಚಾರವು ಸಂಜೆ 7:52ಕ್ಕೆ ಸಂಭವಿಸಲಿದೆ.

ಜಾತಕದಲ್ಲಿ ಶುಕ್ರನನ್ನು ಬಲಪಡಿಸಲು ಪರಿಹಾರಗಳು:

ಲಕ್ಷ್ಮಿ ಅಥವಾ ಜಗದಂಬಾ ದೇವಿಯನ್ನು ಪೂಜಿಸಿ.

ಶುಕ್ರದೇವನನ್ನು ಸಮಾಧಾನಪಡಿಸಲು ಶುಕ್ರವಾರ ಉಪವಾಸವನ್ನು ಆಚರಿಸಿ.

ಖೀರ್, ಮೊಸರು, ಬೆಳ್ಳಿ, ಅಕ್ಕಿ ಇತ್ಯಾದಿ ಶುಕ್ರನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಿ.

ಪ್ರಯೋಜನಕಾರಿ ಫಲಿತಾಂಶಗಳಿಗಾಗಿ ಶುಕ್ರ ಯಂತ್ರವನ್ನು ಸ್ಥಾಪಿಸಿ.

ಶುಕ್ರ ಗ್ರಹ ಶಾಂತಿ ಪೂಜೆಯನ್ನು ಮಾಡಿ.

2. ವೃಷಭ ರಾಶಿಗೆ ಮಂಗಳನ ಹಿಮ್ಮುಖ ಸಂಚಾರ:

2. ವೃಷಭ ರಾಶಿಗೆ ಮಂಗಳನ ಹಿಮ್ಮುಖ ಸಂಚಾರ:

ಎಲ್ಲಾ ಗ್ರಹಗಳ ಹಿಮ್ಮುಖ ಚಲನೆಯು ಜ್ಯೋತಿಷ್ಯದಲ್ಲಿ ಮಹತ್ವ ಎಂದು ಪರಿಗಣಿಸಲಾಗುತ್ತದೆ, ಅದೇ ರೀತಿ, ವೃಷಭ ರಾಶಿಯಲ್ಲಿನ ಮಂಗಳನ ಹಿಮ್ಮುಖ ಸಾಗಣೆಯು ಪ್ರತಿಯೊಬ್ಬರ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರುತ್ತದೆ. ಈ ಸಾಗಣೆಯು 13 ನವೆಂಬರ್ 2022 ರಂದು (ಭಾನುವಾರ), ಮಧ್ಯಾಹ್ನ 01:32 ಕ್ಕೆ ನಡೆಯುತ್ತಿದೆ. ಅದೇ ದಿನ ಮತ್ತೊಂದು ಸಂಚಾರ ನಡೆಯುತ್ತಿರುವುದು ಗಮನಾರ್ಹ. ಅದರ ಬಗ್ಗೆ ಮುಂದೆ ತಿಳಿಸುವೆವು. ಅದಕ್ಕೂ ಮೊದಲು ಮಂಗಳನನ್ನು ಸಮಾಧಾನಗೊಳಿಸಲು ಪರಿಹಾರಗಳನ್ನು ನೋಡೋಣ.

ಜಾತಕದಲ್ಲಿ ಮಂಗಳನ ಸ್ಥಾನ ಬಲಪಡಿಸಲು ಪರಿಹಾರಗಳು:

ಕಾರ್ತಿಕೇಯ ಅಥವಾ ಹನುಮಂತನನ್ನು ಆರಾಧಿಸಿ.

ಮಂಗಳವಾರ ಉಪವಾಸವನ್ನು ಆಚರಿಸಿ.

ಗೋಧಿ, ಕೆಂಪು ಮಸೂರ, ಬೆಲ್ಲ, ತಾಮ್ರದ ಪಾತ್ರೆ ಮುಂತಾದ ಮಂಗಳ ಗ್ರಹಕ್ಕೆ ಸಂಬಂಧಿಸಿದ ವಸ್ತುಗಳನ್ನು ಬಡವರಿಗೆ ಮತ್ತು ನಿರ್ಗತಿಕರಿಗೆ ದಾನ ಮಾಡಿ.

ಮಂಗಳನ ಅನುಗ್ರಹವನ್ನು ಪಡೆಯಲು ಮಂಗಳ ಯಂತ್ರವನ್ನು ಸ್ಥಾಪಿಸಿ .

3. ವೃಶ್ಚಿಕ ರಾಶಿಗೆ ಬುಧ ಸಂಚಾರ:

3. ವೃಶ್ಚಿಕ ರಾಶಿಗೆ ಬುಧ ಸಂಚಾರ:

ವೃಷಭ ರಾಶಿಗೆ ಮಂಗಳನ ಹಿಮ್ಮುಖ ಸಂಚಾರದ ದಿನವೇ, ವೃಶ್ಚಿಕ ರಾಶಿಯಲ್ಲಿ ಬುಧನ ಸಂಚಾರ ನಡೆಯುತ್ತಿದೆ. ಜ್ಯೋತಿಷ್ಯದಲ್ಲಿ ಮಂಗಳ ಮತ್ತು ಬುಧ ಎರಡನ್ನೂ ಪ್ರಮುಖ ಗ್ರಹಗಳೆಂದು ಪರಿಗಣಿಸಲಾಗಿದೆ. ಕನ್ಯಾರಾಶಿ ಮತ್ತು ಮಿಥುನ ರಾಶಿಯ ಅಧಿಪತಿ ಬುಧನು 13 ನವೆಂಬರ್ 2022 ರಂದು (ಭಾನುವಾರ), ರಾತ್ರಿ 09:06 ಕ್ಕೆ ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ.

ಬುಧನ ಅನುಗ್ರಹ ಬಲಪಡಿಸಲು ಪರಿಹಾರಗಳು:

ಆದಷ್ಟು ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಿ.

ವಿಷ್ಣುವನ್ನು ಆರಾಧಿಸಿ.

ಬುಧವಾರ ಉಪವಾಸವನ್ನು ಆಚರಿಸಿ.

ಪಾಲಕ್, ನೀಲಿ ಹೂವುಗಳು, ಹಸಿರು ಬಟ್ಟೆ, ಇತ್ಯಾದಿ ಬುಧಕ್ಕೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಿ.

ಬುಧವನ್ನು ಸಮಾಧಾನಪಡಿಸಲು ಬುಧ ಯಂತ್ರವನ್ನು ಸ್ಥಾಪಿಸಿ .

ಬುದ್ಧ ಗ್ರಹ ಶಾಂತಿ ಪೂಜೆಯನ್ನು ಮಾಡಿ.

4. ವೃಶ್ಚಿಕ ರಾಶಿಗೆ ಸೂರ್ಯನ ಸಂಚಾರ:

4. ವೃಶ್ಚಿಕ ರಾಶಿಗೆ ಸೂರ್ಯನ ಸಂಚಾರ:

ವೃಶ್ಚಿಕ ರಾಶಿಗೆ ಬುಧನ ನಂತರ, ಸೌರಮಂಡಲದ ರಾಜನಾದ ಸೂರ್ಯನು ಸಂಚಾರ ಬೆಳೆಸುತ್ತಾನೆ. ಇದು 16 ನವೆಂಬರ್ 2022 (ಬುಧವಾರ) ರಂದು ಸಂಜೆ 06:58 ಕ್ಕೆ ಸಂಭವಿಸಲಿದೆ.

ಸೂರ್ಯನನ್ನು ಬಲಪಡಿಸಲು ಪರಿಹಾರಗಳು:

ನಿಮಗೆ ಸಾಧ್ಯವಾದಷ್ಟು ಕೇಸರಿ ಅಥವಾ ಕೆಂಪು ಬಟ್ಟೆಗಳನ್ನು ಧರಿಸಿ.

ಪ್ರತಿದಿನ ಸೂರ್ಯ ದೇವ ಮತ್ತು ವಿಷ್ಣುವನ್ನು ಪೂಜಿಸಿ.

ಭಾನುವಾರದಂದು ಉಪವಾಸಗಳನ್ನು ಆಚರಿಸಿ.

ತಾಮ್ರ, ಬೆಲ್ಲ, ಕೆಂಪು ಹೂವುಗಳು ಮುಂತಾದ ಸೂರ್ಯನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಿ.

ಸೂರ್ಯ ಯಂತ್ರವನ್ನು ಸ್ಥಾಪಿಸಿ.

ಸೂರ್ಯ ಗ್ರಹ ಶಾಂತಿ ಪೂಜೆಯನ್ನು ಮಾಡಿ.

5. ಮೀನ ರಾಶಿಗೆ ಗುರು ನೇರ ಸಂಚಾರ:

5. ಮೀನ ರಾಶಿಗೆ ಗುರು ನೇರ ಸಂಚಾರ:

ಗುರು ಗ್ರಹವು 24 ನವೆಂಬರ್ 2022 ರಂದು (ಗುರುವಾರ) ಸಂಜೆ 04:36ಕ್ಕೆ ಮೀನ ರಾಶಿಯಲ್ಲಿ ನೇರವಾಗಿ ಸಂಚಾರ ಮಾಡುತ್ತಿದೆ. ಜ್ಯೋತಿಷ್ಯದಲ್ಲಿ ಗುರುವು ಪ್ರಮುಖ ಮತ್ತು ಮಹತ್ವದ ಗ್ರಹವಾಗಿದ್ದು, ಇದನ್ನು ಸಾಮಾನ್ಯವಾಗಿ ಲಾಭದಾಯಕ ಗ್ರಹವೆಂದು ಪರಿಗಣಿಸಲಾಗುತ್ತದೆ. ಈಗ ತನ್ನದೇ ಆದ ಚಿಹ್ನೆಯಲ್ಲಿ ಸಂಚಾರ ನಡೆಸುವುದರಿಂದ, ವಿಭಿನ್ನ ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ಉತ್ತಮ ದಿನಗಳು ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ಗುರುಗ್ರಹವನ್ನು ಬಲಪಡಿಸಲು ಪರಿಹಾರಗಳು:

ಹಳದಿ ಅಥವಾ ಕ್ರೀಮ್ ಬಣ್ಣದ ಬಟ್ಟೆಗಳನ್ನು ಧರಿಸಿ.

ಪ್ರತಿದಿನ ಭಕ್ತಿಯಿಂದ ಶಿವನನ್ನು ಆರಾಧಿಸಿ.

ಗುರುವಾರದಂದು ಉಪವಾಸವನ್ನು ಆಚರಿಸಿ.

ಗುರುಗ್ರಹಕ್ಕೆ ಸಂಬಂಧಿಸಿದ ಹಳದಿ ಬಟ್ಟೆ, ಬೇಳೆಕಾಳು, ಹಳದಿ ಹೂಗಳು, ಅರಿಶಿನ ಇತ್ಯಾದಿಗಳನ್ನು ದಾನ ಮಾಡಿ.

ಗುರು ಯಂತ್ರವನ್ನು ಸ್ಥಾಪಿಸಿ .

ಗುರು ಗ್ರಹ ಶಾಂತಿ ಪೂಜೆಯನ್ನು ಮಾಡಿ .

English summary

Planet Transit in November 2022 Dates and Effects

Here we talking about Planet Transit in November 2022 Dates and Effects, read on
Story first published: Tuesday, November 1, 2022, 8:51 [IST]
X
Desktop Bottom Promotion