For Quick Alerts
ALLOW NOTIFICATIONS  
For Daily Alerts

ಜುಲೈ 5ಕ್ಕೆ ಚಂದ್ರಗ್ರಹಣ: ಭಾರತಕ್ಕಿಲ್ಲ ಈ ಚಂದ್ರಗ್ರಹಣ ಸೂತಕ, ಏಕೆ?

|

2020ರ ಮೂರನೇ ಚಂದ್ರಗ್ರಹಣ ಜುಲೈ 5ರಂದು ಸಂಭವಿಸಲಿದೆ. ಭಾರತದಲ್ಲಿ ಇದು ಕಂಡು ಬರುವುದಿಲ್ಲ. ಲ್ಯಾಟಿನ್ ಅಮೆರಿಕನ್ ದೇಶಗಳು, ಯುಎಸ್‌ಎ, ಮೆಕ್ಸಿಕೋ, ಕೆನಡಾ, ಕ್ಯೂಬಾ ಸೇರಿದಂತೆ ಪಶ್ಚಿಮ ಯುರೋಪಿಯನ್ ರಾಷ್ಟ್ರಗಳಲ್ಲಿ ಚಂದ್ರಗ್ರಹಣ ಗೋಚರಿಸಲಿದೆ.

July 5th 2020 Lunar Eclipse

ಈ ಬಾರಿ ಗೋಚರಿಸಲಿರುವ ಗ್ರಹಣ ಪೆನಂಬ್ರಲ್‌ ಚಂದ್ರಗ್ರಹಣ ಇದನ್ನು ನೆರಳು ಚಂದ್ರಗ್ರಹಣ ಎಂದು ಕೂಡ ಕರೆಯುತ್ತಾರೆ. ಇಲ್ಲಿ ಚಂದ್ರನ ಮೇಲೆ ಭೂಮಿಯ ನೆರಳು ಮಾತ್ರ ಆವರಿಸುತ್ತದೆ. ಭಾರತದ ಇದನ್ನು ಗ್ರಹಣವೆಂದು ಪರಿಗಣಿಸುವುದಿಲ್ಲ ಏಕೆಂದರೆ ಯುರೋಪಿಯನ್ ರಾಷ್ಟ್ರಗಳಲ್ಲಿ ಈ ಚಂದ್ರಗ್ರಹಣ ಗೋಚರಿಸುವಾಗ ಭಾರತದಲ್ಲಿ ಹಗಲು ಹೊತ್ತಾಗಿರುತ್ತದೆ. ಆದ್ದರಿಂದ ಇದರ ಪರಿಣಾಮ ಹಾಗೂ ಸೂತಕ ಅವಧಿ ಅಷ್ಟಾಗಿ ಮಾನ್ಯವಾಗಿರುವುದಿಲ್ಲ.

ಚಂದ್ರಗ್ರಹಣ ಸಮಯ

ಚಂದ್ರಗ್ರಹಣ ಸಮಯ

ಜುಲೈ 4 ಮತ್ತು 5 ರ ರಾತ್ರಿ ಚಂದ್ರ ಗ್ರಹಣ ನಡೆಯಲಿದೆ. ಭಾರತದಲ್ಲಿ, ಇದು ಜುಲೈ 5 ರ ಬೆಳಿಗ್ಗೆ 8:30 ರಿಂದ 11:30 ರವರೆಗೆ ಇರುತ್ತದೆ. ಗ್ರಹಣವು 2 ಗಂಟೆ 45 ನಿಮಿಷಗಳವರೆಗೆ ಇರುತ್ತದೆ.

ಈ ಚಂದ್ರಗ್ರಹಣ ಬಗ್ಗೆ ಜ್ಯೋತಿಷ್ಯಶಾಸ್ತ್ರ ಏನು ಹೇಳುತ್ತದೆ?

ಈ ಚಂದ್ರಗ್ರಹಣ ಬಗ್ಗೆ ಜ್ಯೋತಿಷ್ಯಶಾಸ್ತ್ರ ಏನು ಹೇಳುತ್ತದೆ?

ಪಂಚಾಂಗದ ಪ್ರಕಾರ ಈ ದಿನ ಸೂರ್ಯನು ಮಿಥುನ ರಾಶಿಯಲ್ಲಿರುತ್ತಾನೆ. ನೆರಳು ಚಂದ್ರಗ್ರಹಣ ಅಂದರೆ ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದು ಉಂಟಾಗುವ ಚಂದ್ರಗ್ರಹಣವಾಗಿರುವುದರಿಂದ ಜ್ಯೋತಿಷ್ಯದಲ್ಲಿ ಸೂತಕದ ಅವಧಿ ಮಾನ್ಯವಾಗಿಲ್ಲ. ಆದ್ದರಿಂದ ಯಾವುದೇ ಧಾರ್ಮಿಕ ಮತ್ತು ಶುಭ ಕಾರ್ಯಗಳನ್ನು ಈ ಚಂದ್ರಗ್ರಹಣ ವೇಳೆ ಮಾಡಲು ಯಾವುದೇ ನಿರ್ಬಂಧವಿರುವುದಿಲ್ಲ.

ಸತತ ಮೂರನೇ ಬಾರಿ ಗುರುಪೂರ್ಣಿಮೆಯಂದೇ ಸಂಭವಿಸಲಿದೆ ಚಂದ್ರಗ್ರಹಣ

ಸತತ ಮೂರನೇ ಬಾರಿ ಗುರುಪೂರ್ಣಿಮೆಯಂದೇ ಸಂಭವಿಸಲಿದೆ ಚಂದ್ರಗ್ರಹಣ

ಗುರು ಪೂರ್ಣಿಮೆಯ ತಿಥಿ ಈ ಬಾರಿ ಜುಲೈ 4 ರ ಶನಿವಾರ ರಾತ್ರಿ 11:33ಕ್ಕೆ ಪ್ರಾರಂಭವಾಗಲಿದೆ. ಜುಲೈ 5ರಂದು ರಾತ್ರಿ 10 ಗಂಟೆ 13 ನಿಮಿಷಕ್ಕೆ ಈ ಹುಣ್ಣಿಮೆ ತಿಥಿ ಅಂತ್ಯವಾಗಲಿದೆ. ಭಾನುವಾರ ಜುಲೈ 5ರಂದು ಬೆಳಗ್ಗೆ 8: 38 ಕ್ಕೆ ಗ್ರಹಣವು ಆರಂಭವಾಗಲಿದ್ದು, ಬೆಳಗ್ಗೆ 11;21 ನಿಮಿಷಕ್ಕೆ ಗ್ರಹಣವು ಅಂತ್ಯಗೊಳ್ಳಲಿದೆ. ಇದಕ್ಕೂ ಮೊದಲು 2018ರಲ್ಲಿ ಜುಲೈ 27ರಂದು ಮತ್ತು 2019ರಲ್ಲಿ ಜುಲೈ 16ರಂದಯ ಗುರು ಪೂರ್ಣಿಮೆ ಮತ್ತು ಚಂದ್ರಗ್ರಹಣ ಒಂದೇ ದಿನ ನಡೆದಿತ್ತು.

ಒಂದೇ ತಿಂಗಳ ಅಂತರದಲ್ಲಿ 3 ಗ್ರಹಣ

ಒಂದೇ ತಿಂಗಳ ಅಂತರದಲ್ಲಿ 3 ಗ್ರಹಣ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 3 ಗ್ರಹಣಗಳು ಅಲ್ಪಾವಧಿಯಲ್ಲಿ ಸಂಭವಿಸುವುದು ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಜೂನ್‌ 5ರಿಂದ 6ರ ಮಧ್ಯರಾತ್ರಿಯ ಅವಧಿಯಲ್ಲಿ ಚಂದ್ರಗ್ರಹಣ ಸಂಭವಿಸಿತು. ಅದಾದ 16 ದಿನಗಳ ಅಂತರದಲ್ಲಿ ಜೂನ್‌ 21ರಂದು ಸೂರ್ಯಗ್ರಹಣ ಸಂಭವಿಸಿತ್ತು. ಇದೀಗ ಜುಲೈ 5ರಂದು ಮತ್ತೊಂದು ಚಂದ್ರಗ್ರಹಣ ಸಂಭವಿಸಲಿದೆ.

English summary

Penumbral Lunar Eclipse July 4-5 2020: Date, timings and when, how to watch

Countries Will witness July 5 Penumbral Lunar Eclipse,Here are more information read on...
X
Desktop Bottom Promotion