For Quick Alerts
ALLOW NOTIFICATIONS  
For Daily Alerts

ವಿಶ್ವ ಓಜೋನ್ ದಿನ 2019: ಓಜೋನ್ ಪದರ ಕ್ಷೀಣಿಸುವುದರಿದ ಆರೋಗ್ಯ ಮತ್ತು ಪರಿಸರಕ್ಕೆ ಉಂಟಾಗುವ ದುಷ್ಪರಿಣಾಮಗಳು

|

ಇಂದು ವಿಶ್ವ ಓಜೋನ್ ದಿನ. ಪ್ರತಿ ವರ್ಷ ಸೆಪ್ಟೆಂಬರ್ 16 ರಂದು ವಿಶ್ವ ಓಜೋನ್ ದಿನವಾಗಿ ಆಚರಿಸಲಾಗುತ್ತದೆ. ಈ ಮೂಲಕ ವಿಶ್ವಕ್ಕೆ ಓಜೋನ್ ಪದರದ ಮಹತ್ವ , ಪ್ರಾಮುಖ್ಯತೆ ಮತ್ತು ಅದನ್ನು ಹೇಗೆ ಸಂರಕ್ಷಿಸಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.

Ozone Layer Depletion

ಆದರೆ, ಈ ದಿನದ ಆಚರಣೆ ಅಂದಿಗೆ ಮಾತ್ರ ಸೀಮಿತವಾಗಿ, ಓಜೋನ್ ರಕ್ಷಣೆಗೆ ವೈಯಕ್ತಿಕವಾಗಿ ಯಾರೂ ಆಸಕ್ತಿ ತೋರದಿರುವುದೇ ವಿಷಾದ!.

ಓಜೋನ್ ಎಂದರೇನು?

ಓಜೋನ್ ಎಂದರೇನು?

ಓಜೋನ್ ಎಂಬುದು ನೀಲಿ ಬಣ್ಣದ ನೈಸರ್ಗಿಕ ಅನಿಲವಾಗಿದೆ. ಇದು ಸೂರ್ಯನಿಂದ ಹೊರಹೊಮ್ಮುವ ನೇರಳಾತೀತ ಕಿರಣಗಳಿಂದ ಜೈವಿಕ ರಾಶಿಗಳನ್ನು ಸಂರಕ್ಷಿಸುತ್ತದೆ. ನೇರಳಾತೀತ (ಅಲ್ಟ್ರಾವೈಲಟ್-ವಿ) ಕಿರಣಗಳನ್ನು ಮೂರು ವಿಧದಲ್ಲಿ ವಿಂಗಡಿಸಲಾಗಿದೆ. ಅಲ್ಟ್ರಾವೈಲಟ್ -ಎ: ಕಡಿಮೆ ಶಕ್ತಿ ಹೊಂದಿರುವ ಈ ಕಿರಣದಿಂದ ಜೈವಿಕ ಜೀವರಾಶಿಗೆ ಅಷ್ಟೇನೂ ಹಾನಿ ಸಂಭವಿಸುವುದಿಲ್ಲ. ಅಲ್ಟ್ರಾವೈಲಟ್-ಬಿ: ಅಸಾಧಾರಣ ಸಾಮರ್ಥ್ಯ ಹೊಂದಿರುವ ಈ ಕಿರಣ ಜೈವಿಕ ಜೀವರಾಶಿ ಹಾಗೂ ಹಲವು ವಸ್ತುಗಳ ಮೇಲೆ ಅಗಾಧ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಮತ್ತು ಅಲ್ಟ್ರಾವೈಲಟ್ -ಸಿ: ವಾತಾರವರಣದಲ್ಲಿರುವ ಆಮ್ಲಜನಕವು ಈ ಕಿರಣಗಳನ್ನು ಹೀರಿಕೊಳ್ಳುತ್ತದೆ, ಆದ್ದರಿಂದ ಈ ಕಿರಣ ಭೂಮಿಯನ್ನು ತಲುಪುವುದೇ ಇಲ್ಲ.

ಸೂರ್ಯನಿಂದ ಬರುವ ನೇರಳಾತೀತ ಕಿರಣಗಳು ನೇರವಾಗಿ ಭೂಮಿಗೆ ತಲುಪುವುದನ್ನು ಓಜೋನ್ ಪದರ ತಡೆಗಟ್ಟುವ ಕಾರ್ಯವನ್ನು ನಿರ್ವಹಿಸುತ್ತದೆ. ಆದರೆ ವಾತಾವರಣ ವೈಪರೀತ್ಯದಿಂದ ಉಂಟಾಗುತ್ತಿರುವ ಓಜೋನ್ ಪದರದ ರಂಧ್ರದಿಂದಾಗಿ ಸೂರ್ಯನ ಅಲ್ಟ್ರಾವೈಲಟ್-ಬಿ ಕಿರಣಗಳು ನೇರವಾಗಿ ಭೂಮಿಯನ್ನು ತಲುಪಲು ಕಾರಣವಾಗುತ್ತದೆ. ಇದರಿಂದ ಮನುಷ್ಯನಿಗೆ ಚರ್ಮದ ಸಮಸ್ಯೆಗಳು, ಕ್ಯಾನ್ಸರ್, ರೋಗನಿರೋಧಕ ಶಕ್ತಿ ಕ್ಷೀಣಿಸುವುದು ಸೇರಿದಂತೆ ಮಾರಕ ರೋಗಗಳಿಗೆ ಕಾರಣವಾಗುತ್ತಿದೆ.

ಓಜೋನ್ ಪದರದ ರಂಧ್ರದಿಂದ ಉಂಟಾಗುವ ಆರೋಗ್ಯ ಸಂಬಂಧಿ ಸಮಸ್ಯೆಗಳು

ಓಜೋನ್ ಪದರ ಕರಗುತ್ತಿರುವುದರಿಂದ ನಾವೆಲ್ಲಾ ಬದುಕುತ್ತಿರುವ ಪರಿಸರದ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತಿದೆ. ಮನುಷ್ಯ ಸೇರಿದಂತೆ ಸಕಲ ಜೀವರಾಶಿಗಳಿಗೂ ಓಜೋನ್ ಪದರ ಮಾರಣಾಂತಿಕ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಓಜೋನ್ ರಂಧ್ರದಿಂದ ಯಾವೆಲ್ಲಾ ಸಮಸ್ಯೆಗಳು ಮನುಷ್ಯನನ್ನು ಕಾಡುತ್ತಿದೆ ಗೊತ್ತೆ.

ತ್ವಚೆಗೆ ಪರಿಣಾಮ

ತ್ವಚೆಗೆ ಪರಿಣಾಮ

ಓಜೋನ್ ಪದರ ಕ್ಷೀಣಿಸುತ್ತಿರುವುದರಿಂದ ಬಿಳಿ ತ್ವಚೆವುಳ್ಳವರು ಅತಿ ಹೆಚ್ಚು ಅಪಾಯಕಾರಿ ಪರಿಸ್ಥಿತಿ ಎದುರಿಸಲಿದ್ದಾರೆ. ಸೂರ್ಯನ ಸಮಸ್ಯೆಯ ಅಲ್ಟ್ರಾವೈಲಟ್-ಬಿ ಕಿರಣಗಳು ನೇರವಾಗಿ ಭೂಮಿಗೆ ಅಪ್ಪಳಿಸುವುದರಿಂದ ಬಿಳಿ ತ್ವಚೆ ಇರುವವರಿಗೆ ಚರ್ಮ ಕ್ಯಾನ್ಸರ್ ನಂಥ ಕಾಯಿಲೆ ಶೀಘ್ರ ಬರಲಿದೆ. ಚರ್ಮ ಕ್ಯಾನ್ಸರ್ ನಲ್ಲಿ ಬಸಲ್ ಸೆಲ್ ಕಾರ್ಸಿನೋಮಾ, ಸ್ಕ್ವಾಮಸ್ ಸೆಲ್ ಕಾರ್ಸಿನೋಮಾ ಮತ್ತು ಮಾಲಿಗನಂಟ್ ಮೆಲೆನೋಮಾ ಎಂಬ ಮೂರು ಮುಖ್ಯ ವಿಧಗಳಿದೆ. ವಿಶ್ವಾದ್ಯಂತ ವರ್ಷಕ್ಕೆ ಅಂದಾಜು 3 ಲಕ್ಷ ಮಂದಿ ಚರ್ಮ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ.

ಕಣ್ಣಿಗೆ ಪರಿಣಾಮ

ಕಣ್ಣಿಗೆ ಪರಿಣಾಮ

ಅಲ್ಟ್ರಾವೈಲಟ್-ಬಿ ನಂಥ ನೇರಳಾತೀತ ಕಿರಣಗಳು ನೇರವಾಗಿ ಕಣ್ಣಿಗೆ ಬಿದ್ದರೆ ನಮ್ಮ ಕಣ್ಣುಗಳ ಮೇಲೆ ಗಂಭೀರ ಸ್ವರೂಪದ ಪರಿಣಾಮ ಬೀರಲಿದೆ. ಕಣ್ಣಿನ ಬಹುಮುಖ್ಯ ಭಾಗ ಲೆನ್ಸ್ ಸೇರಿದಂತೆ, ಕಾರ್ನಿಯಾ, ಕಣ್ಣಿನ ರಕ್ಷಾಕವಚಗಳು ಹಾನಿಯಾಗಲಿದೆ. ಅಲ್ಟ್ರಾವೈಲಟ್-ಬಿ ಕಿರಣಗಳಿಗೆ ಕಣ್ಣನ್ನು ಹೆಚ್ಚು ಒಡ್ಡುವುದರಿಂದ "ಮಂಜುಕುರುಡು'' ಆವರಿಸುವ ಸಾಧ್ಯತೆ ಇದೆ. ಇದು ಇನ್ನೂ ಹೆಚ್ಚಾದಲ್ಲಿ ಕಣ್ಣು ದೀರ್ಘ ಕಾಲದ ಸಮಸ್ಯೆಯನ್ನು ಎದುರಿಸಬಹುದು. ಕಣ್ಣಿನ ಮಸೂರದ ಮೇಲೆ ಅಲ್ಟ್ರಾವೈಲಟ್-ಬಿ ಕಿರಣ ನೇರವಾಗಿ ಅಪ್ಪಳಿಸಿರುವುದರಿಂದ ಶಾಶ್ವತವಾಗಿ ಕಣ್ಣನ್ನು ಕಳೆದಕೊಂಡವರ ಸಂಖ್ಯೆ ವಿಶ್ವಾದ್ಯಂತ ಹೆಚ್ಚುತ್ತಲೇ ಇದೆ. ಶೇಕಡಾ 10ರಷ್ಟು ಓಜೋನ್ ಪದರ ಕರಗಿದರೆ ಜಾಗತಿಕವಾಗಿ ವಾರ್ಷಿಕವಾಗಿ ಅಂದಾಜು 2ದಶಲಕ್ಷ ಮಂದಿ ಕಣ್ಣನ್ನು ಕಳೆದುಕೊಳ್ಳಲಿದ್ದಾರೆ.

ರೋಗ ನಿರೋಧಕ ಶಕ್ತಿಗೆ

ರೋಗ ನಿರೋಧಕ ಶಕ್ತಿಗೆ

ನಮ್ಮ ದೇಹ ರೋಗದ ವಿರುದ್ಧ ಹೋರಾಡಲು ಸಾಮರ್ಥ್ಯ ನೀಡುವುದು ರೋಗನಿರೋಧಕ ಶಕ್ತಿ. ಆದರೆ ಯುವಿ-ಬಿ ಕಿರಣಕ್ಕೆ ದೇಹವನ್ನು ಹೆಚ್ಚು ಒಡ್ಡಿದಷ್ಟು ನಮ್ಮ ದೇಹದಲ್ಲಿರುವ ರೋಗನಿರೋಧಕ ಶಕ್ತಿ ಕುಗ್ಗುತ್ತದೆ. ಇತ್ತೀಚಿನ ಅಧ್ಯಯನದ ಪ್ರಕಾರ ಅತಿ ಹೆಚ್ಚು ಯುವಿ-ಬಿ ಕಿಣಗಳಿಗೆ ನಮ್ಮ ದೇಹವನ್ನು ಒಡ್ಡಿದರೆ ಕೆಲವು ವೈರಸ್ ಗಳು ಸಕ್ರಿಯಗೊಳ್ಳಬಹುದು ಎಂದು ತಿಳಿಸಿದೆ.

ಪರಿಸರ

ಪರಿಸರ

ಮನುಷ್ಯ-ಪ್ರಾಣಿಜಗತ್ತಿನ ಮೇಲೆ ಮಾತ್ರ ನಕಾರಾತ್ಮಕ ಪರಿಣಾಮ ಬೀರದ ಯವಿ ಕಿರಣಗಳು ಸಸ್ಯ ಸಂಕುಲದ ಮೇಲೂ ತನ್ನ ಪ್ರಭಾವ ಬೀರಲಿದೆ. ಯುವಿ-ಬಿ ಕಿರಣಗಳು ಅತಿ ಹೆಚ್ಚು ಭೂಮಿಯ ಮೇಲೆ ಬಿದ್ದರೆ ಹಲವು ಸಸ್ಯಪ್ರಬೇಧಗಳು ನಾಶವಾಗುತ್ತದೆ ಹಾಗೂ ಜಾಗತಿಕ ಮಟ್ಟದಲ್ಲಿ ಆಹಾರ ಉತ್ಪನ್ನ ಮಟ್ಟವೂ ಕುಸಿಯುತ್ತದೆ ಎನ್ನಲಾಗಿದೆ. ನಮ್ಮೇಲ್ಲಾ ಮಾನವ-ಪ್ರಾಣಿ ಸಂಕುಲಗಳು ಸಸ್ಯ ಪ್ರಬೇಧವನ್ನು ಅವಲಂಬಿಸಿ ಬದುಕುತ್ತಿದ್ದೇವೆ. ನಮ್ಮ ಹಾಗೂ ಸಸ್ಯಗಳ ಉಸಿರಾಟ ಪ್ರಕ್ರಿಯೆ ಸೇರಿದಂತೆ ಪ್ರತಿ ಹಂತದಲ್ಲೂ ಒಂದಕ್ಕೊಂದು ಜೈವಿಕ ಕೊಂಡಿ ಉಂಟಾಗಿದೆ. ಇದನ್ನು ಹೊರತುಪಡಿಸಿ ಸಸ್ಯ ಪ್ರಬೇಧದಲ್ಲಿ ಯಾವುದೇ ಬದಲಾವಣೆಯಾದರೂ ಇಡೀ ಜಗತ್ತೆ ಗಂಭೀರ ಸಮಸ್ಯೆ ಎದುರಿಸಲಿದೆ.

ಓಜೋನ್ ಪದರ ಕ್ಷೀಣಿಸುವುದನ್ನು ತಡೆಗಟ್ಟಬಹುದೇ?

ಓಜೋನ್ ಪದರ ಕ್ಷೀಣಿಸುವುದನ್ನು ತಡೆಗಟ್ಟಬಹುದೇ?

1. ಕಾರಿನ ಬಳಕೆ ಕಡಿಮೆ ಮಾಡಿ: ಕಾರಿನ ಅತಿ ಹೆಚ್ಚು ಬಳಕೆಯಿಂದ ಅದು ಹೊರಸೂಸುವ ಅಪಾಯಕಾರಿ ಅನಿಲ ಓಜೊನ್ ಪದರವನ್ನು ಹಾಳು ಮಾಡುತ್ತಿದೆ. ಆದಷ್ಟು ಸೈಕಲ್, ಸಾರ್ವಜನಿಕ ಸಾರಿಗೆ, ಕಾರ್ ಪೂಲ್, ಮೆಟ್ರೋ ಬಳಕೆ ಮಾಡಿ.

2. ಶುಚಿಹೊಳಿಸುವ ಪ್ರಾಡಕ್ಸ್ ಬೇಡ: ನಾವು ನಿತ್ಯ ಬಳಸುವ ಹಲವು ಸ್ವಚ್ಚಗೊಳಿಸುವ ದ್ರಾವಣಗಳು ಅಪಾಯಕಾರಿ/ವಿಷಕಾರಿ ಅನಿಲವನ್ನು ಹೊರಸೂಸುತ್ತಿದೆ. ಇದರ ಬದಲಾಗಿ ವಿಷಕಾರಿಯಲ್ಲದ ವಿನಿಗರ್, ಬೈಕಾರ್ಬನೇಟ್ ನಂಥ ವಸ್ತುಗಳನ್ನು ಬಳಸುವುದರಿಂದ ಓಜೋನ್ ಗೆ ನಮ್ಮಿಂದಾಗುವ ಹಾನಿಯನ್ನು ತಪ್ಪಿಸಬಹುದು.

3. ತಾಜಾ ಪದಾರ್ಥ ಬಳಸಿ: ತಾಜಾ ಪದಾರ್ಥಗಳನ್ನು ಹೆಚ್ಚು ಬಳಸಿ. ದೂರದಿಂದ ಪ್ರಯಾಣಿಸಿದ ವಸ್ತುಗಳ ಬಳಕೆ ಆದಷ್ಟು ಬೇಡ. ಇದರಲ್ಲಿ ಅತಿ ಹೆಚ್ಚು ನ್ಯುಟ್ರಿಕ್ ಆಕ್ಸೈಡ್ ಉತ್ಪತಿಯಾಗಿರುತ್ತದೆ, ಇದು ಸಹ ಓಜೋನ್ ಪದರ ಹಾಗೂ ನಮಗೂ ಹಾನಿಕರ.

4. ಕೀಟನಾಶಕ ಬೇಡ: ಸಸ್ಯಗಳಿಗೆ ಸಿಂಪಡಿಸುವ ಕೀಟನಾಶಗಳ ಬಳಕೆಯನ್ನು ತಡೆಗಟ್ಟಿ. ಇದು ಓಜೋನ್ ಗೆ ಅಪಾಯಕಾರಿ. ಅದರ ಬದಲಾಗಿ ಜೈವಿಕ ಗೊಬ್ಬರಗಳು, ಕೀಟನಾಶಕಗಳನ್ನು ಬಳಸಿ. 5. ವಿದ್ಯುತ್ ವಾಹನ ಬಳಸಿ: ಇಂಧನ ಹೊರಸೂಸುವ ಪೆಟ್ರೋಲ್, ಡೀಸೆಲ್ ವಾಹನಗಳನ್ನು ಕಡಿಮೆ ಮಾಡಿ ಇನ್ನು ಮುಂದೆ ವಿದ್ಯುತ್ ಚಾಲಿತ ವಾಹನಗಳನ್ನು ಬಳಸಿ.

6. ಎಲೆಕ್ಸ್ರಾನಿಕ್ ಉಪಕರಣ: ಎ.ಸಿ, ಫ್ರಿಡ್ಜ್, ಮೊಬೈಲ್ ಗಳು ಹೊರಹಾಕುವ ಅನಿಗಳು ಸಹ ಓಜೋನ್ ಪದರಕ್ಕೆ ಸಾಕಷ್ಟು ಹಾನಿ ಉಂಟು ಮಾಡುತ್ತಿದೆ. ಸಾಧ್ಯವಾದಷ್ಟು ಇವುಗಳ ಬಳಕೆ ನಿಲ್ಲಿಸಿ.

ಯುವಿ ಕಿರಣಗಳಿಂದ ನಮ್ಮ ರಕ್ಷಣೆ ಹೇಗೆ?

ಯುವಿ ಕಿರಣಗಳಿಂದ ನಮ್ಮ ರಕ್ಷಣೆ ಹೇಗೆ?

1. ಸೂರ್ಯನ ಕಿರಣಗಳಿಗೆ ನಿಮ್ಮ ದೇಹವನ್ನು ಹೆಚ್ಚು ಒಡ್ಡುವುದು ಬೇಡ

2. ಬಲವಾದ ಸೂರ್ಯನ ಕಿರಣಗಳು ಇರುವ ಸ್ಥಳಗಳಲ್ಲಿ ಸಂಚರಿಸುವಾಗ ಅಗಲವಾದ ಟೋಪಿ, ಯುವಿ ಸಂರಕ್ಷಿತ ಕನ್ನಡಕ, ತುಂಬು ತೋಳಿನ ಬಟ್ಟೆಗಳನ್ನು ಧರಿಸಿ

3. ಬೆಳಗ್ಗೆ 10ರಿಂದ 3ಗಂಟೆಯವರೆಗೆ ಸೂರ್ಯನ ಕಿರಣಗಳು ಪ್ರಬಲವಾಗಿರುತ್ತದೆ. ಈ ಸಮಯದಲ್ಲಿ ಸೂರ್ಯನ ಕಿರಣಗಳು ನಿಮ್ಮ ಮೈ ತಾಗದಂತೆ ಎಚ್ಚರವಹಿಸಿ.

4. ಸೂರ್ಯನ ಕಿರಣಗಳು ತ್ವಚೆಗೆ ಅಪಾಯ ಉಂಟುಮಾಡದಂತೆ ಎಸ್ ಪಿಎಫ್ 15ಕ್ಕಿಂತ ಮೇಲ್ಪಟ್ಟ ಸೂರ್ಯಸಂರಕ್ಷಿತ (ಸನ್ ಸ್ಕ್ರೀಂ) ಕ್ರೀಮ್ ಗಳನ್ನು ಆಗಾಗ್ಗೆ ಹಚ್ಚಿರಿ.

5. ಗಾಢ ಬಣ್ಣಗಳ ಬಟ್ಟೆಗಳನ್ನು ಧರಿಸಬೇಡಿ. ತಿಳಿಬಣ್ಣದ ಬಟ್ಟೆಗಳನ್ನು ಆದಷ್ಟು ಧರಿಸಿ. ಗಾಢ ಬಣ್ಣಗಳು ಸೂರ್ಯನ ಕಿರಣಗಳನ್ನು ಹೆಚ್ಚಾಗಿ ಹಾಗೂ ಬಹು ಬೇಗ ಸೆಳೆಯುತ್ತದೆ.

English summary

Ozone Layer Depletion Health and Environmental Effects

Every year September 16 is marked as the International Day for the Preservation of the Ozone Layer. The ozone layer acts as a natural filter, absorbing most of the sun's burning ultraviolet (UV) rays. Stratospheric ozone depletion leads to an increase in UV-B that reach the earth's surface, where it can disrupt biological processes and damage a number of materials.
X
Desktop Bottom Promotion