For Quick Alerts
ALLOW NOTIFICATIONS  
For Daily Alerts

ಜ್ಯೋತಿಷ್ಯ ಪ್ರಕಾರ ಮಂಗಳವಾರ ಈ ಕಾರ್ಯಗಳನ್ನು ಅಪ್ಪಿ ತಪ್ಪಿಯೂ ಮಾಡಬಾರದು

|

ಮಂಗಳವಾರದ ಅಧಿಪತಿ ಮಂಗಳಗ್ರಹ, ಅಲ್ಲದೆ ಹಿಂದೂ ಧರ್ಮದಲ್ಲಿ ಮಂಗಳವಾರವನ್ನು ಹನುಮಂತನ ದಿನ ಎಂದು ಪರಿಗಣಿಸಲಾಗಿದೆ. ಮಂಗವಾರದಂದು ಹನುಮಂತನನ್ನು ಶ್ರದ್ಧಾ, ಭಕ್ತಿಯಿಂದ ಪೂಜಿಸಿದರೆ ಬದುಕಿನ ಎಲ್ಲಾ ಕಷ್ಟಗಳು ದೂರವಾಗುವುದು, ಅಲ್ಲದೆ ಬದುಕಿನಲ್ಲಿ ಕಷ್ಟಗಳನ್ನು ಎದುರಿಸುವ ಶಕ್ತಿ ಕೂಡ ದೊರೆಯುವುದು.

ವಾಯು ಪುತ್ರ, ರಾಮನ ಭಕ್ತ ಹನುಮಂತನಿಗೆ ಈ ದಿನದಂದು ವಿಶೇಷ ಪೂಜೆ ಸಲ್ಲಿಸಲಾಗುವುದು. ಹನುಮಂತನ ಗುಡಿಗೆ ಹೋಗಿ ಪ್ರಾರ್ಥಿಸಿ , ಪ್ರಸಾದವನ್ನು ಅರ್ಪಿಸಿ, ಅದನ್ನು ಅಲ್ಲಿ ಬಂದ ಭಕ್ತಾದಿಗಳಿಗೆ ಹಂಚಿದರೆ ಒಳಿತಾಗುವುದು.

ಇನ್ನು ಜ್ಯೋತಿಷ್ಯದ ಪ್ರಕಾರದ ಮಂಗಳವಾರದ ಬಗ್ಗೆ ಕೆಲವೊಂದು ನಂಬಿಕೆಗಳಿವೆ. ಈ ದಿನ ಕೆಲವೊಂದು ಕಾರ್ಯಗಳನ್ನು ಮಾಡಬಾರದು ಎನ್ನುತ್ತಾರೆ. ಒಂದು ವೇಳೆ ಆ ಕಾರ್ಯಗಳನ್ನು ಮಾಡಿದರೆ ಮಂಗಳ ದೋಷ ಉಂಟಾಗುವುದು ಎಂದು ಹೇಳಲಾಗುವುದು.

ಜ್ಯೋತಿಷ್ಯ ಪ್ರಕಾರ ಮಂಗಳವಾರದಂದು ಯಾವ ಕಾರ್ಯಗಳನ್ನು ಮಾಡಬಾರದು ನೋಡಿ:

ಶೇವಿಂಗ್, ಕಟ್ಟಿಂಗ್ ಮಾಡುವಂತಿಲ್ಲ

ಶೇವಿಂಗ್, ಕಟ್ಟಿಂಗ್ ಮಾಡುವಂತಿಲ್ಲ

ಮಂಗಳವಾರದಂದು ಶೇವಿಂಗ್, ಕಟ್ಟಿಂಗ್ ಮಾಡುವಂತಿಲ್ಲ ಎಂದು ಹೇಳಲಾಗುವುದು. ಎಷ್ಟೋ ಜನರು ಇದನ್ನು ತುಂಬಾ ಕಟ್ಟು ನಿಟ್ಟಾಗಿ ಪಾಲಿಸುತ್ತಾರೆ ಕೂಡ. ಮನುಷ್ಯನ ದೇಹದ ಮೇಲೆ ಮಂಗಳನ ಪ್ರಭಾವ ಇರುತ್ತದೆ, ಮಂಗಳವಾರ ಕೂದಲು ಕತ್ತರಿಸುವುದು, ಶೇವಿಂಗ್ ಮಾಡುವುದು ಮಾಡಿದರೆ ಗಾಯವಾಗಬಹುದು ಎಂದು ಹೇಳಲಾಗುತ್ತದೆ. ಎಷ್ಟೋ ಜನರು ಈ ದಿನ ಮನೆ ಕೂಡ ಸ್ವಚ್ಛ ಮಾಡುವುದಿಲ್ಲ. ಮಂಗಳವಾರ ಉಗುರುಗಳನ್ನು ಕೂಡ ಕತ್ತರಿಸುವುದಿಲ್ಲ.

ಮೇಕಪ್ ಸಾಧನಗಳನ್ನು ಕೊಳ್ಳಬಾರದು

ಮೇಕಪ್ ಸಾಧನಗಳನ್ನು ಕೊಳ್ಳಬಾರದು

ಮಂಗಳವಾರ ಸೌಂದರ್ಯವರ್ಧಕ ಸಾಧನಗಳನ್ನು ಕೊಳ್ಳಬಾರದು, ಸೌಂದರ್ಯವರ್ಧಕ ಸಾಧನಗಳನ್ನು ಕೊಳ್ಳುವುದರಿಂದ ವೈವಾಹಿಕ ಸಂಬಂಧದಲ್ಲಿ ಸಮಸ್ಯೆ ಉಂಟಾಗುವುದು ಎಂಬ ನಂಬಿಕೆ ಇದೆ.

ಮಂಗಳವಾರ ಹಿರಿಯ ಸಹೋದರನ ಜೊತೆ ಜಗಳವಾಡಬಾರದು

ಮಂಗಳವಾರ ಹಿರಿಯ ಸಹೋದರನ ಜೊತೆ ಜಗಳವಾಡಬಾರದು

ಮಂಗಳ ಗ್ರಹವನ್ನು ಹಿರಿಯ ಸಹೋದರ ಎಂದು ಪರಿಗಣಿಸಲಾಗಿದೆ. ಮಂಗಳವಾರ ಹಿರಿಯ ಸಹೋದರ ಜೊತೆ ಜಗಳವಾಡಿದರೆ ಮಂಗಳ ಗ್ರಹದ ಕೆಟ್ಟ ಪರಿಣಾಮ ಎದುರಿಸಬೇಕಾಗುವುದು. ಕುಟುಂಬದಲ್ಲಿ ಸಮಸ್ಯೆಗಳು ಹೆಚ್ಚಾಗುವುದು.

ಮೀನು ತಿನ್ನಬಾರದು

ಮೀನು ತಿನ್ನಬಾರದು

ಮಂಗಳವಾರದಂದು ಮೀನು ತಿನ್ನಬಾರದು ಎಂಬ ನಂಬಿಕೆ ಇದೆ.

ಕಡು ಬಣ್ಣದ ಬಟ್ಟೆ ಧರಿಸಬಾರದು

ಕಡು ಬಣ್ಣದ ಬಟ್ಟೆ ಧರಿಸಬಾರದು

ಮಂಗಳವಾರದಂದು ಕೆಂಪು ಬಣ್ಣದ ಬಟ್ಟೆ ಧರಿಸಿದರೆ ಒಳ್ಳೆಯದು, ಇದರಿಂದ ಮಂಗಳ ದೊಷ ಕಡಿಮೆಯಾಗುವುದು ಎಂದು ಹೇಳಲಾಗುವುದು.

ಭೂಮಿ ಅಗೆಯಬಾರದು

ಭೂಮಿ ಅಗೆಯಬಾರದು

ಮಂಗಳವಾರದೆಂದು ಮನೆ ಪೌಂಡೇಷನ್‌ಗೆ ಭೂಮಿ ಅಗೆಯಬಾರದೆಂದು ಹೇಳಲಾಗುವುದು. ಮಂಗಳನನ್ನು ಭೂಮಿ ಪುತ್ರ ಎಂದು ಹೇಳಲಾಗುವುದು. ಹಾಗಾಗಿ ಮಂಗಳವಾರದೆಂದು ಭೂಮಿ ಅಗೆಯಬಾರದು.

English summary

Never Ever Do These Things On Tuesday in Kannada

Never Ever Do These Things On Tuesday in Kannada, Read on...
Story first published: Tuesday, July 6, 2021, 9:24 [IST]
X
Desktop Bottom Promotion