For Quick Alerts
ALLOW NOTIFICATIONS  
For Daily Alerts

ರಾಷ್ಟ್ರೀಯ ಶಿಕ್ಷಣ ದಿನಾಚರಣೆ: ಇತಿಹಾಸ, ಮಹತ್ವ ಮತ್ತು ಸಂದೇಶಗಳು

|

"ಖಡ್ಗಕ್ಕಿಂತ ಲೇಖನಿ ಹರಿತ" ಇದು ಶಿಕ್ಷಣಕ್ಕಿರುವ ತಾಕತ್ತು. ಹಣ ಇದ್ದವನು ಕೆಲವನ್ನು ಮಾತ್ರ ಗೆಲ್ಲಬಲ್ಲ, ಶಿಕ್ಷಣ ಇದ್ದವನು ಜಗತ್ತನ್ನೇ ಗೆಲ್ಲಬಲ್ಲ. ಇದಕ್ಕೆ ಸಾಕ್ಷಿಯಾಗಿ ದೇಶದ ಮಹಾನ್ ನಾಯಕರು ಮಾಡಿರುವ ಸಾಧನೆಗಳ ಪಟ್ಟಿ ತುಂಬಾ ಉದ್ದವಿದೆ. ಈ ಜಗತ್ತಿನಲ್ಲಿ ಶಿಕ್ಷಣ, ವಿದ್ಯೆಗೆ ಇರುವ ಮಾನ್ಯತೆ ಯಾವುದೇ ಭೌತಿಕ ವಿಷಯಗಳಿಗೆ ಶಾಶ್ವತವಾಗಿ ಸಿಗಲು ಸಾಧ್ಯವೇ ಇಲ್ಲ. ಶಿಕ್ಷಣದ ಪ್ರಾಮುಖ್ಯತೆ ಬಗ್ಗೆ ಇಷ್ಟೆಲ್ಲಾ ಪೀಠಿಕೆ ಏಕೆ ಅಂದುಕೊಂಡಿದ್ದೀರಾ, ಕಾರಣ ಇಂದು ಶಿಕ್ಷಣದ ಮಹತ್ವ ಸಾರುವ "ರಾಷ್ಟ್ರೀಯ ಶಿಕ್ಷಣ ದಿನ''.

education

ದಿನದ ಮಹತ್ವ
ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದ ಪ್ರಯುಕ್ತ ಇಂದು "ರಾಷ್ಟ್ರೀಯ ಶಿಕ್ಷಣ ದಿನವಾಗಿ'' ಆಚರಣೆ ಮಾಡಲಾಗುತ್ತದೆ. ದೇಶದ ಶಿಕ್ಷಣ ಕ್ಷೇತ್ರಕ್ಕೆ ಆಜಾದ್ ಅವರು ನೀಡಿದ ಕೊಡುಗೆಯ ಸ್ಮರಣಾರ್ಥ 2008 ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ನವೆಂಬರ್ 11 ಅನ್ನು ರಾಷ್ಟ್ರೀಯ ಶಿಕ್ಷಣ ದಿನವೆಂದು ಆಚರಿಸಲು ಘೋಷಿಸಿತು. ಪರೀಕ್ಷಾ ಸಮಯದಲ್ಲಿ ಆಹಾರ ಕ್ರಮ ಹೀಗಿರಲಿ-'ನೆನಪಿನ ಶಕ್ತಿ' ಹೆಚ್ಚುತ್ತೆ

ಮೌಲಾನಾ ಅಬುಲ್ ಕಲಾಂ ಆಜಾದ್ ಕುರಿತು

ಮೌಲಾನಾ ಅಬುಲ್ ಕಲಾಂ ಆಜಾದ್ ಕುರಿತು

1. ಆಜಾದ್ ಅವರ ಸಂಪೂರ್ಣ ಹೆಸರು - ಮೌಲಾನಾ ಸಯ್ಯಿದ್ ಅಬುಲ್ ಕಲಾಂ ಗುಲಾಮ್ ಮುಹಿಯುದ್ದೀನ್ ಅಹ್ಮದ್ ಬಿನ್ ಖೈರುದ್ದೀನ್ ಅಲ್ ಹುಸೇನಿ ಆಜಾದ್.

2. ಆರಂಭದಲ್ಲಿ ತಂದೆಯಿಂದಲೇ ಶಿಕ್ಷಣ ಪಡೆದ ಆಜಾದ್, ನಂತರ ಅಲ್ಲಿನ ಪ್ರಸಿದ್ಧ ಶಿಕ್ಷಕರಿಂದ ಶಿಕ್ಷಣವನ್ನು ಪಡೆದರು.

3. ಆಜಾದ್ ಅವರು ಅರೇಬಿಕ್ ಮತ್ತು ಪರ್ಷಿಯನ್ ಭಾಷೆಯನ್ನು ಸಹ ಕಲಿತಿದ್ದರು.

4. ತತ್ವಶಾಸ್ತ್ರ, ಗಣಿತ ಮತ್ತು ಬೀಜಗಣಿತವನ್ನು ಪ್ರಮುಖ ವಿಷಯವಾಗಿ ಅಧ್ಯಯನ ಮಾಡಿದರು. ನಂತರ ಸ್ವತಃ ಅಧ್ಯಯನ ಮಾಡುವ ಮೂಲಕ ಇಂಗ್ಲಿಷ್ ಭಾಷೆ, ವಿಶ್ವದ ಇತಿಹಾಸ ಮತ್ತು ರಾಜಕೀಯವನ್ನು ಅರಿತರು.

5. ಬಂಗಾಳದ ಇಬ್ಬರು ಪ್ರಮುಖ ಕ್ರಾಂತಿಕಾರಿಗಳಾದ ಅರವಿಂದ ಘೋಷ್ ಮತ್ತು ಶ್ಯಾಮ್ ಸುಂದರ್ ಚಕ್ರವರ್ತಿ ಅವರನ್ನು ಭೇಟಿಯಾದ ನಂತರ, ಬ್ರಿಟಿಷ್ ಆಡಳಿತದ ವಿರುದ್ಧ ಕ್ರಾಂತಿಕಾರಿ ಚಳವಳಿಗೆ ಧುಮುಕಿದರು.

6. ಆಜಾದ್ ಅವರು ಎರಡೇ ವರ್ಷಗಳಲ್ಲಿ ಉತ್ತರ ಭಾರತ ಮತ್ತು ಬಾಂಬೆಯಾದ್ಯಂತ ರಹಸ್ಯ ಕ್ರಾಂತಿಕಾರಿ ಕೇಂದ್ರಗಳನ್ನು ಸ್ಥಾಪಿಸಿದರು.

7. 1912ರಲ್ಲಿ ಮುಸ್ಲಿಮರಲ್ಲಿ ದೇಶಭಕ್ತಿಯ ಭಾವನೆಯನ್ನು ಹೆಚ್ಚಿಸಲು 'ಅಲ್-ಹಿಲಾಲ್' ಎಂಬ ಉರ್ದು ವಾರಪತ್ರಿಕೆಯನ್ನು ಪ್ರಾರಂಭಿಸಿದರು.

8. ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಪಂಡಿತ್ ಜವಾಹರಲಾಲ್ ನೆಹರೂ ಅವರ ಸಂಪುಟದಲ್ಲಿ 1947ರಿಂದ 1958ರವರೆಗೆ ಪ್ರಥಮ ಶಿಕ್ಷಣ ಸಚಿವರಾಗಿ ದೇಶಕ್ಕೆ ಸೇವೆ ಸಲ್ಲಿಸಿದರು. 22ರ ಫೆಬ್ರವರಿ 1958ರಂದು ಹೃದಯಾಘಾತದಿಂದ ಅವರು ನಿಧನರಾದರು.

ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರಾಗಿ ಆಜಾದ್

ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರಾಗಿ ಆಜಾದ್

1888ರ ನವೆಂಬರ್ 11ರಂದು ಜನಿಸಿದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಭಾರತದ ಮೊದಲ ಶಿಕ್ಷಣ ಸಚಿವರಾಗಿದ್ದರು. ಆಗಸ್ಟ್ 15ರ 1947 ರಿಂದ ಫೆಬ್ರವರಿ 2ರ 1958 ರವರೆಗೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಸ್ತುತ್ಯರ್ಹ. ದೇಶಕ್ಕೆ ಸ್ವಾತಂತ್ರ ದೊರೆತ ನಂತರ ರಾಷ್ಟ್ರದ ಇಡೀ ಶಿಕ್ಷಣ ವ್ಯವಸ್ಥೆಗೆ ಅಡಿಪಾಯ ಹಾಕುವ ನಿಟ್ಟಿನಲ್ಲಿ ಮೌಲಾನಾ ಅವರ ಕೊಡುಗೆ ನೆನೆಯಲೇಬೇಕು.

ಶಿಕ್ಷಣ ಸಚಿವರಾಗಿ ಆಜಾದ್ ಮುಕ್ತ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಮಹತ್ವದ ಕ್ರಮಗಳನ್ನು ಕೈಗೊಂಡರು. 1951ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯನ್ನು ಪ್ರಾರಂಭಿಸಿದವರು ಆಜಾದ್. ಇಂದು ದೆಹಲಿ ವಿಶ್ವವಿದ್ಯಾಲಯವಾಗಿ ಮಾರ್ಪಾಡಾಗಿರುವ ಅಂದಿನ ದೆಹಲಿಯ ದಿ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್ ಅನ್ನು ಸ್ಥಾಪಿಸಿದ ಕೀರ್ತಿ ಸಹ ಆಜಾದ್ ಗೆ ಸಲ್ಲುತ್ತದೆ. ಅಲ್ಲದೇ, 1953ರಲ್ಲಿ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗವನ್ನು ಸ್ಥಾಪಿಸಿ ದೇಶದಲ್ಲಿ ಹತ್ತಾರು ವಿಶ್ವವಿದ್ಯಾಲಯಗಳ ಹುಟ್ಟು ಹಾಗೂ ಇಂದಿನ ಉಳಿವಿಗೆ ಕಾರಣರಾಗಿದ್ದಾರೆ ಆಜಾದ್.

ಶಿಕ್ಷಣಕ್ಕೆ ಸಂಬಂಧಿಸಿದ ಗಣ್ಯರ ಪ್ರಮುಖ ಸಂದೇಶಗಳು

ಸಂದೇಶ 1

ಸಂದೇಶ 1

* ಇಡೀ ಜಗತ್ತನ್ನೇ ಬದಲಾಯಿಸಲು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಅಸ್ತ್ರ ಶಿಕ್ಷಣ - ನೆಲ್ಸನ್ ಮಂಡೇಲಾಎಕ್ಸಾಂಗೆ ಓದಿನಷ್ಟೇ ಆರೋಗ್ಯ ಮುಖ್ಯ

ಸಂದೇಶ 2

ಸಂದೇಶ 2

* ಶಾಲೆ ಮತ್ತು ಜೀವನದ ನಡುವಿನ ವ್ಯತ್ಯಾಸವೆಂದರೆ, ಶಾಲೆಯಲ್ಲಿ ಮೊದಲು ನಿಮಗೆ ಪಾಠ ಕಲಿಸುತ್ತಾರೆ ನಂತರ ಪರೀಕ್ಷೆಯನ್ನು ನೀಡಲಾಗುತ್ತದೆ. ಆದರೆ ಜೀವನದಲ್ಲಿ ನಿಮಗೆ ಮೊದಲು ಪರೀಕ್ಷೆಗಳು ಎದುರಾಗುತ್ತದೆ, ನಂತರ ಅದರಿಂದ ನಾವು ಪಾಠ ಕಲಿಯುತ್ತೇವೆ- ಟಾಮ್ ಬೊಡೆಟ್

ಸಂದೇಶ 3

ಸಂದೇಶ 3

* ನಾವು ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವ ಮೂಲಕ ಕಲಿಯುತ್ತೇವೆಯೋ ಹೊರತು, ನಾವಾಗಿಯೇ ಪ್ರಶ್ನೆ ಇಲ್ಲದೆ ಉತ್ತರವನ್ನು ಹುಡುಕುವ ಪ್ರಯತ್ನವನ್ನೇ ಮಾಡುವುದಿಲ್ಲ- ಲಾಯ್ಡ್ ಅಲೆಕ್ಸಾಂಡರ್

ಸಂದೇಶ 4

ಸಂದೇಶ 4

* ಒಬ್ಬ ವ್ಯಕ್ತಿಗೆ ಒಂದು ಮೀನು ಕೊಟ್ಟರೆ ನೀವು ಅವನಿಗೆ ಒಂದು ದಿನದ ಆಹಾರ ಕೊಟ್ಟಂತೆ, ಆದರೆ ಅದೇ ವ್ಯಕ್ತಿಗೆ ಮೀನು ಹಿಡಿಯುವುದನ್ನೇ ಕಲಿಸಿದರೆ ಮತ್ತು ನೀವು ಅವನಿಗೆ ಆತನ ಜೀವಿತಾವಧಿ ಆಹಾರ ನೀಡಿದಂತೆ - ಮೈಮೋನೈಡ್ಸ್

ವಿದ್ಯಾರ್ಥಿಗಳು ಅರ್ಧಕ್ಕೆ ಶಾಲೆ ಬಿಡಲು ಕಾರಣವೇನು ಗೊತ್ತೇ?

ಸಂದೇಶ 5

ಸಂದೇಶ 5

* ಶಾಲೆಯಲ್ಲಿ ನಾವು ಏನ್ನನ್ನು ಕಲಿತಿದ್ದೇವೋ ಅದ್ದನ್ನು ಮರೆತ ನಂತರವೂ ನೆನಪಿನಲ್ಲೇ ಉಳಿಯುವುದೇ ಶಿಕ್ಷಣ - ಆಲ್ಬರ್ಟ್ ಐನ್ ಸ್ಟೈನ್

ಸಂದೇಶ 6

ಸಂದೇಶ 6

*ನೀವು ಏನು ಮಾಡಬಾರದು ಎಂಬುದು ನೀವು ಮಾಡಬಹುದಾದ ವಿಷಯಗಳ ಮೇಲೆ ಹಸ್ತಕ್ಷೇಪ ಮಾಡಲು ಬಿಡಬೇಡಿ -ಜಾನ್ ಆರ್ ವುಡನ್

ಸಂದೇಶ 7

ಸಂದೇಶ 7

* ಶಿಕ್ಷಣ ಎಂಬುದು ಕೇವಲ ಕೆಲಸವನ್ನು ಹೇಳಿಕೊಡುವುದಲ್ಲ, ಅದು ಜೀವನವನ್ನೇ ಕಲಿಸುತ್ತದೆ - ಡಬ್ಲ್ಯು ಇ ಬಿ ದು ಬ್ಯಾಸ್

ಸಂದೇಶ 8

ಸಂದೇಶ 8

* ಶಿಕ್ಷಣವು ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ, ಆತ್ಮವಿಶ್ವಾಸವು ಭರವಸೆಯನ್ನು ತುಂಬುತ್ತದೆ, ಭರವಸೆ ಶಾಂತಿಯನ್ನು ಬೆಳೆಸುತ್ತದೆ - ಕನ್ಫ್ಯೂಷಿಯಸ್

English summary

National Education Day 2019: History, Significance and Messages

National Education Day 2019: National Education Day is celebrated every year on 11 November in memory of Maulana Abul Kalam Azad. Various campaigns and programs are organized on this day to spread awareness about education so that people can become aware of and attracted to education. Maulana Abul Kalam was born on November 11, 1888
X
Desktop Bottom Promotion