For Quick Alerts
ALLOW NOTIFICATIONS  
For Daily Alerts

ಎಕ್ಸಾಂಗೆ ಓದಿನಷ್ಟೇ ಆರೋಗ್ಯ ಮುಖ್ಯ

|
Health Tips For Students During Exam
ಎಕ್ಸಾಂ ಎಂಬ ಪದ ಕೇಳಿದರೆ ಸಾಕು ಊಟ, ನಿದ್ದೆ ಎಲ್ಲಾ ಮಾಯ. ಮನೆಯಲ್ಲಿ ಅಧಿಕ ಮಾರ್ಕ್ಸ್ ತೆಗೆಯಬೇಕೆಂಬ ಒತ್ತಡ, ಮನಸ್ಸಿನಲ್ಲಿ ಮುಂದೆ ಉನ್ನತ ಕಂಪನಿಗಳಲ್ಲಿ ಹುದ್ದೆ ಸಿಗಬೇಕೆಂಬ ಕನಸು ಇವೆಲ್ಲವೂ ಪರೀಕ್ಷೆಯಲ್ಲಿ ಮತ್ತಷ್ಟು ಓದುವಂತೆ ಪ್ರೇರೇಪಿಸುತ್ತದೆ.

ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಪರಿಶ್ರಮ ಅಗತ್ಯ. ಆದರೆ ಆರೋಗ್ಯ ಕೆಟ್ಟರೆ ಪರೀಕ್ಷೆಯನ್ನು ಉತ್ತಮ ರೀತಿಯಲ್ಲಿ ಬರೆಯಲು ಸಾಧ್ಯವಿಲ್ಲ ಎಂಬುದು ನೆನಪಿರಲಿ.ಆದ್ದರಿಂದ ಓದುವುದರ ಜೊತೆ ಈ ಕೆಳಗಿನ ವಿಷಯಗಳಿಗೆ ಕೂಡ ಗಮನ ನೀಡಿದರೆ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಗಳಿಸಬಹುದು.

1.ಆಹಾರ:
ವಿಟಮಿನ್ ಬಿ ಮತ್ತು ಖನಿಜಾಂಶ ಅಧಿಕವಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು. ಇದರಿಂದ ಓದಲು ಬೇಕಾದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನೀಡುತ್ತದೆ. ಮಾಂಸ, ಮೊಟ್ಟೆ, ಪಾಲಾಕ್, ಕಿಡ್ನಿ ಬೀನ್ಸ್ , ನಟ್ಸ್, ಮೀನು ಮತ್ತು ಸೋಯಾ ಆಹಾರವನ್ನು ಸೇವಿಸಬೇಕು.

2. ವಿಟಮಿನ್ ಸಿ: ಓದುವಾಗ ತುಂಬಾ ಹೊಟ್ಟೆ ಹಸಿವಾಗುತ್ತದೆ. 3 ಹೊತ್ತಿಗಿಂತ ಹೆಚ್ಚು ಊಟ ಮಾಡಬೇಡಿ. ಹೊಟ್ಟೆ ತುಂಬಿದರೆ ನಿದ್ದೆ ಬರುವುದು. ಆದ್ದರಿಂದ ಕಿತ್ತಳೆ, ಒಣದ್ರಾಕ್ಷಿ, ನಟ್ಸ್, ಬಾದಾಮಿ ಇವುಗಳನ್ನು ಸೇವಿಸುವುದು ಒಳ್ಳೆಯದು.

3. ಬಾಳೆಹಣ್ಣು: ಪರೀಕ್ಷೆ ಸಮಯದಲ್ಲಿ ಬಾಳೆಹಣ್ಣು ತಿನ್ನುವುದು ಒಳ್ಳೆಯದು. ನೈಸರ್ಗಿಕವಾಗಿ ಸಕ್ಕರೆ ಅಂಶವಿರುವ ಹಣ್ಣುಗಳು ಮೆದುಳಿನ ಸಾಮರ್ಥ್ಯ ಹೆಚ್ಚಿಸಲು ಸಹಕಾರಿಯಾಗಿದೆ.

4. ತಿಂಡಿ: ದೇಹದಲ್ಲಿ ರಕ್ತದ ಪ್ರಮಾಣವನ್ನು ಸಮತೋಲನದಲ್ಲಿ ಇಡುವ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು. ಬೇಯಿಸಿದ ಸಿಹಿಗೆಣಸು, ಬ್ರೊಕೋಲಿ ಇವುಗಳ ಸೇವನೆ ಐಸ್, ಬರ್ಗರ್ ಗಿಂತ ಒಳ್ಳೆಯದು.

5. ಎಣ್ಣೆ ಪದಾರ್ಥ: ಸಲಾಡ್, ವೆಜಿಟೇಬಲ್ ಸೂಪ್ ಕುಡಿಯಬೇಕು. ಐಸ್ ಕ್ರೀಮ್, ಎಣ್ಣೆ ಪದಾರ್ಥಗಳನ್ನು ಸೇವಿಸದಿರುವುದು ಒಳ್ಳೆಯದು.

6. ದೇಹದಲ್ಲಿ ನೀರಿನಂಶ: ನೀರು, ಜ್ಯೂಸ್ ಕುಡಿಯುತ್ತಾ ದೇಹದಲ್ಲಿ ತೇವಾಂಶವನ್ನು ಕಾಪಾಡಬೇಕು. ದೇಹದಲ್ಲಿ ನೀರಿಂಶ ಕಡಿಮೆಯಾದರೆ ಸುಸ್ತು ಕಾಣಿಸಿಕೊಂಡು ಓದಲು ಕಷ್ಟವಾಗುವುದು.

ಆದ್ದರಿಂದ ಓದುವಿನ ಜೊತೆ ದೇಹದ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕು.

English summary

Health Tips For Students During Exam | Tips For Health | ಎಕ್ಸಾಂ ಸಮಯದಲ್ಲಿ ಆರೋಗ್ಯ ರಕ್ಷಣೆ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

During exam time not only study but good nutrition should be part of your study plan because it’s going to help you ace those tests.
Story first published: Wednesday, February 29, 2012, 11:59 [IST]
X
Desktop Bottom Promotion