Just In
Don't Miss
- Technology
ಶಿಯೋಮಿಯಿಂದ ಮತ್ತೆ ಹೊಸ ಸ್ಮಾರ್ಟ್ಬ್ಯಾಂಡ್ ಲಾಂಚ್; ಇದರ ಫೀಚರ್ಸ್ ಏನು?
- News
2022ರ ಅಮರನಾಥ ಯಾತ್ರೆ ತಾತ್ಕಾಲಿಕವಾಗಿ ರದ್ದು
- Automobiles
ಭಾರತದಲ್ಲಿ ಹೊಸ ಡುಕಾಟಿ ಸ್ಟ್ರೀಟ್ಫೈಟರ್ ವಿ4 ಎಸ್ಪಿ ಬೈಕ್ ಬಿಡುಗಡೆ
- Education
Mysore University Recruitment 2022 : ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
IND vs ENG 5ನೇ ಟೆಸ್ಟ್: 'ಚೀರಿಯೋ ವಿರಾಟ್'; ಇಂಗ್ಲೆಂಡ್ ಪ್ರೇಕ್ಷಕರಿಂದ ಕೊಹ್ಲಿಗೆ ಅವಮಾನ
- Finance
ಷೇರು ಪೇಟೆ ಶುಭಾರಂಭ: ಮತ್ತೆ ಎಲ್ಐಸಿ ಸ್ಟಾಕ್ ಜಿಗಿತ
- Movies
HR ಆಗಿ ಕೆಲಸ ಮಾಡಿದ್ದ ಪವಿತ್ರಾ ಲೋಕೇಶ್: ಹೀರೊಯಿನ್ ಆಗಲಿಲ್ಲ ಯಾಕೆ?
- Travel
ಪಶ್ಚಿಮಘಟ್ಟಗಳಲ್ಲಿ ಮಾನ್ಸೂನ್ ನಲ್ಲಿ ಅನ್ವೇಷಿಸಬಹುದಾದ ಸ್ಥಳಗಳು
ಜ್ಯೋತಿಷ್ಯ: ಈ ರಾಶಿಯವರಿಗೆ ಸವಾಲನ್ನು ಸ್ವೀಕರಿಸುವುದೇ ಇಷ್ಟವಂತೆ..!
ಬದುಕು ಎಂದ ಮೇಲೆ ಸವಾಲುಗಳು, ಏಳು ಬೀಳುಗಳು ಇದ್ದೇ ಇರುತ್ತದೆ. ಆದರೆ ಹಲವರು ಇಂಥ ಸವಾಲುಗಳನ್ನು ಮೆಟ್ಟಿ ಯಶಸ್ಸು ಗಳಿಸಲು ಪ್ರಯತ್ನಿಸುತ್ತಾರೆ, ಇನ್ನು ಹಲವರು ಸವಾಲುಗಳು ಇರಲೇಬಾರದು ಎಂದು ಬದುಕಿನ ಪ್ರತಿಯೊಂದು ಕ್ಷಣದಲ್ಲೂ ಸುರಕ್ಷಿತವಾಗಿ ಹೆಜ್ಜೆ ಇಡುತ್ತಾರೆ.
ಜ್ಯೋತಿಶಾಸ್ತ್ರದ ಪ್ರಕಾರ ಈ ರಾಶಿಯವರು ಸವಾಲುಗಳನ್ನು ಎದುರಿಸುವವರು, ಅಪಾಯವನ್ನು ಸ್ವೀಕರಿಸಿ ಗೆಲ್ಲುವವರು ಎನ್ನಲಾಗುತ್ತದೆ.
ಯಾವ ರಾಶಿಯವರು, ನೀವು ಸಹ ಆ ರಾಶಿಗೆ ಸೇರುತ್ತೀರಾ, ನಿಮ್ಮ ಎಂಥಾ ಸ್ವಭಾವ ಮುಂದೆ ನೋಡೋಣ:

ಮಿಥುನ ರಾಶಿ
ಮಿಥುನ ರಾಶಿಯವರು ತಮ್ಮ ದ್ವಂದ್ವ ವ್ಯಕ್ತಿತ್ವಕ್ಕೆ ಖ್ಯಾತರಾಗಿದ್ದಾರೆ, ಇದು ಅವರ ಮನಸ್ಥಿತಿಯ ಮೇಲೂ ಪ್ರತಿಫಲಿಸುತ್ತದೆ. ಅವರು ಇದ್ದಕ್ಕಿದ್ದಂತೆ ಬಂದ ಯಾವುದೇ ಕೆಲಸವನ್ನು ಅಥವಾ ಏನಾದರೂ ಮಾಡಲು ಬಯಸದೇ ಇದ್ದರೆ, ಅವರು ಅದನ್ನು ಮಾಡುವುದೇ ಇಲ್ಲ. ಆ ಕ್ಷಣದ ನಿರ್ಧಾರ ತೆಗೆದುಕೊಳ್ಳುವುದು ಈ ರಾಶಿಯವರಿಗೆ ದೊಡ್ಡ ವಿಷಯವೇ, ಹಾಗಾಗಿ ರಿಸ್ಕ್ ತೆಗೆದುಕೊಳ್ಳುವುದು ಅವರಿಗೆ ಅಷ್ಟು ದೊಡ್ಡ ವಿಷಯವೇ ಅಲ್ಲ.

ಸಿಂಹ ರಾಶಿ
ಸಿಂಹ ರಾಶಿಚಕ್ರವು ಬಯಸಿದರೆ ಏನನ್ನೇ ಆದರೂ ಸಹ ಸಾಧಿಸುತ್ತಾರೆ. ಅವರು ಬಯಸಿದರೆ ಅವರಿಗೆ ಅಪಾಯಗಳನ್ನು ತೆಗೆದುಕೊಳ್ಳುವುದು ದೊಡ್ಡ ವಿಷಯವಲ್ಲ. ಸವಾಲನ್ನು ಸ್ವೀಕರಿಸಿ ಎಷ್ಟೇ ಕಷ್ಟ ಆದರೂ ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ. ಅವರು ಅಪಾಯಗಳನ್ನು ತೆಗೆದುಕೊಂಡಾಗ ಅವರನ್ನು ಅವರೇ ಹೆಚ್ಚು ಮುಂದೂಡಿಕೊಳ್ಳುತ್ತಾರೆ, ಗೆಲ್ಲಲು ಮುಂದೆ ಹೆಜ್ಜೆ ಹಾಕುತ್ತಾರೆ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಖಚಿತವಾಗಿ ಧೈರ್ಯಶಾಲಿ ಆತ್ಮ. ಅವರು ಅಪಾಯವನ್ನು ತೆಗೆದುಕೊಳ್ಳುತ್ತಾರೆ ಏಕೆಂದರೆ ನೀವು ಯಾವಾಗಲೂ ಸುರಕ್ಷಿತವಾಗಿ ಬದುಕುತ್ತಿದ್ದರೆ ಅರ್ಥವಿಲ್ಲ, ಸವಾಲಿನಲ್ಲಿ ನೀವು ಪ್ರಾಪಂಚಿಕ ಜೀವನವನ್ನು ನಡೆಸುತ್ತೀರಿ ಮತ್ತು ಹೊಸದನ್ನು ಕಲಿಯುವಿರಿ ಎಂಬ ಸಿದ್ಧಾಂತವನ್ನು ಅವರು ನಂಬುತ್ತಾರೆ. ಅವರು ಉತ್ಸಾಹ ಮತ್ತು ವೈವಿಧ್ಯತೆಯನ್ನು ಪ್ರೀತಿಸುತ್ತಾರೆ.

ಧನು ರಾಶಿ
ಧನು ರಾಶಿಚಕ್ರದವರು ತುಂಬಾ ಸಾಹಸಮಯ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅವರು ಹೊಸ ವಿಷಯಗಳನ್ನು ಕಲಿಯಲು ಇಷ್ಟಪಡುತ್ತಾರೆ, ತಮ್ಮ ಜೀವನದ ಪುಟಗಳಿಗೆ ವಿಭಿನ್ನ ಅನುಭವಗಳನ್ನು ಸೇರಿಸಲು ಬಯಸುತ್ತಾರೆ. ಅದಕ್ಕಾಗಿಯೇ ಅವರು ಬಂದ ಎಲ್ಲ ಹೊಸತನಗಳನ್ನು ಸ್ವೀಕರಿಸುತ್ತಾರೆ. ಅವರು ಹೆಚ್ಚಾಗಿ ಅಪಾಯಕಾರಿ ಮಾರ್ಗವನ್ನು ತೆಗೆದುಕೊಳ್ಳಲು ಇಷ್ಟಪಡುತ್ತಾರೆ.

ಕುಂಭ ರಾಶಿ
ಬೇರೆ ಯಾರೂ ಅದರೊಂದಿಗೆ ಮುಂದುವರಿಯಲು ಸಿದ್ಧರಿಲ್ಲ ಎಂದು ಕುಂಭ ರಾಶಿಯವರಿಗೆ ಅನಿಸಿದರೆ ಅವರು ಅದನ್ನು ಮಾಡಲು ಬುಸಯತ್ತಾರೆ ಮತ್ತು ಈ ಅಪಾಯವನ್ನು ತೆಗೆದುಕೊಳ್ಳುವ ವರ್ತನೆಯು ಕೆಲಸದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಕುಂಭ ರಾಶಿಯವರ ವ್ಯಕ್ತಿತ್ವವು ತುಂಬಾ ವೈಯಕ್ತಿಕವಾಗಿದೆ. ಈ ಹಿಂದೆ ಯಾರೂ ನಡೆಯದ ಹಾದಿಯನ್ನು ಹಿಡಿಯಲು ಅವರು ಹೆದರುವುದಿಲ್ಲ. ಅವರು ಹೊಸ ವಿಷಯಗಳನ್ನು ಪ್ರಯತ್ನಿಸಲು ಇಷ್ಟಪಡುತ್ತಾರೆ.