For Quick Alerts
ALLOW NOTIFICATIONS  
For Daily Alerts

2020 ಮೊದಲ ಚಂದ್ರಗ್ರಹಣ: ನೀವು ತಿಳಿಯಲೇಬೇಕಾದ ಸಂಗತಿಗಳು

|

ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಅಡ್ಡಬಂದಾಗ ಸೂರ್ಯನ ಕಿರಣಗಳು ಚಂದ್ರನ ಮೇಲೆ ನೇರವಾಗಿ ಬೀಳದೇ ಭೂಮಿಯ ನೆರಳು ಬೀಳುತ್ತದೆ. ಹೀಗಾದಾಗ ಚಂದ್ರ, ಭೂಮಿ ಮತ್ತು ಸೂರ್ಯ ಮೂರೂ ಒಂದೇ ಸರಳರೇಖೆಯಲ್ಲಿರುತ್ತವೆ. ಈ ನೈಸರ್ಗಿಕ ಪ್ರಕ್ರಿಯೆಯನ್ನೇ ಚಂದ್ರಗ್ರಹಣವೆನ್ನುತ್ತೇವೆ.

ಈ ವರ್ಷದ ಪ್ರಥಮ ಚಂದ್ರಗ್ರಹಣ ಮೊದಲ ಹುಣ್ಣಿಮೆಯಂದು ಅಂದರೆ 2020ರ ಜನವರಿ 10ರಂದು ಜರುಗಲಿದೆ. ಈ ಚಂದ್ರಗ್ರಹಣ ಭೂಮಿಯ ಬಹುತೇಕ ರಾಷ್ಟ್ರಗಳಲ್ಲಿ ಸ್ಪಷ್ಟವಾಗಿ ಕಾಣಿಸಲಿದೆ. ಆದರೆ ಇದು ಪೂರ್ಣಪ್ರಮಾಣದ ಗ್ರಹಣವಾಗುವುದಿಲ್ಲ, ಬದಲಿಗೆ ಅರೆಚಂದ್ರಗ್ರಹಣವಾಗಲಿದೆ(penumbral). ಈ ವರ್ಷದಲ್ಲಿ ಈ ಪರಿಯ ಒಟ್ಟು ನಾಲ್ಕು ಚಂದ್ರಗ್ರಹಣವಾಗಲಿವೆ. ಇವು ಸಂಭವಿಸುವ ಉಳಿದ ದಿನಾಂಕಗಳೆಂದರೆ ಜೂನ್ 5, ಜುಲೈ 5 ಮತ್ತು ನವೆಂಬರ್ 30. ಜನವರಿಯ ಗ್ರಹಣ ಏಷಿಯಾ, ಯೂರೋಪ್, ಆಸ್ಟ್ರೇಲಿಯಾ ಮತ್ತು ಆಫ್ರಿಕಾಗಳಲ್ಲಿ ಗೋಚರಿಸಲಿದೆ. ನಿಮ್ಮ ರಾಶಿಚಕ್ರದ ಮೇಲೆ ವರ್ಷದ ಮೊದಲ ಚಂದ್ರಗ್ರಹಣದ ಪ್ರಭಾವ ಹೇಗಿದೆ?

ಚಂದ್ರಗ್ರಹಣದ ಸಮಯದಲ್ಲಿ ಏನು ಸಂಭವಿಸುತ್ತದೆ?

ಚಂದ್ರಗ್ರಹಣದ ಸಮಯದಲ್ಲಿ ಏನು ಸಂಭವಿಸುತ್ತದೆ?

ಗ್ರಹಣದ ಸಮಯದಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಆದರೆ ಪೂರ್ಣಪ್ರಮಾಣದಲ್ಲಿ ಅಲ್ಲ, ಬದಲಿಗೆ ಗರಿಷ್ಟ ಗ್ರಹಣದ ಸಮಯದಲ್ಲಿ ಶೇಕಡಾ 90 ರಷ್ಟನ್ನು ಮರೆಮಾಚುತ್ತದೆ. ಹೀಗಾದಾಗ, ಚಂದ್ರನ ಅಂಚು ಮಾತ್ರವೇ ಪ್ರಖರವಾಗಿರುತ್ತದೆ ಮತ್ತು ಒಳಗಿನ ಭಾಗ ಮಸುಕಾಗಿರುತ್ತದೆ. ಈ ಪ್ರಖರತೆ ಮತ್ತು ಮಸುಕಾಗಿರುವುದನ್ನು ನಮ್ಮ ಕಣ್ಣುಗಳು ಅಷ್ಟು ಸುಲಭವಾಗಿ ಗ್ರಹಿಸಲಾರದ ಕಾರಣ ಗ್ರಹಣವಾಗಿದ್ದರೂ ನಮಗೆ ಚಂದ್ರ ಹುಣ್ಣಿಮೆಯ ಚಂದ್ರನಂತೆಯೇ ಕಾಣುತ್ತಾನೆ. ಅದರಲ್ಲೂ, ಮೋಡ ಅಥವಾ ಇತರ ಅಡ್ಡಿಯಾಗುವ ಇತರ ಅಂಶಗಳೇನೂ ಇಲ್ಲದ ಸ್ಪಷ್ಟ ಆಕಾಶವಾಗಿದ್ದಾಗ ಮಾತ್ರ. ಆದರೆ ಉಪಕರಣಗಳು ಈ ವ್ಯತ್ಯಾಸವನ್ನು ಸುಲಭವಾಗಿ ಗ್ರಹಿಸಬಲ್ಲವು. ಪೂರ್ಣಚಂದ್ರಗ್ರಹಣದ ಸಮಯದಲ್ಲಿ ಚಂದ್ರನ ಬಣ್ಣ ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ. ಆದರೆ ಪಾರ್ಶ್ವಚಂದ್ರಗ್ರಹಣದ ಸಮಯದಲ್ಲಿ ಇದು ಬೂದು ಬಣ್ಣದಲ್ಲಿರುತ್ತದೆ. ಹಾಗಾಗಿ ತೋಳದ ಬಣ್ಣವನ್ನು ಈ ಗ್ರಹಣಕ್ಕೆ ಉಪಮೇಯವಾಗಿ ಪಾಶ್ಚಾತ್ಯರು Full Wolf Moon eclipse ಎಂದು ಕರೆಯುತ್ತಾರೆ.

ನೀವು ಚಂದ್ರ ಗ್ರಹಣ ನೋಡಬೇಕೆ, ಈ ಬಗ್ಗೆ ಇರಲಿ ಎಚ್ಚರ!

ನೀವು ಚಂದ್ರ ಗ್ರಹಣ ನೋಡಬೇಕೆ, ಈ ಬಗ್ಗೆ ಇರಲಿ ಎಚ್ಚರ!

ಜನವರಿ ಹತ್ತರಂದು ಚಂದ್ರಗ್ರಹಣದ ಸಮಯದಲ್ಲಿ ಚಂದ್ರನ ಬಣ್ಣ ಬದಲಾಗುವುದನ್ನು ನೋಡುವ ಹುಮ್ಮಸ್ಸು ನಿಮಗಿದ್ದರೆ ಈ ಕೆಳಗಿನ ಮಾಹಿತಿಗಳು ನಿಮಗೆ ತಿಳಿದಿರಬೇಕು. ಈ ವರ್ಷದ ಪ್ರಥಮ ಚಂದ್ರಗ್ರಹಣ ಜನವರಿ 10-11 ರ ರಾತ್ರಿ ಸಂಭವಿಸುತ್ತದೆ. (ಹುಣ್ಣಿಮೆಯ ರಾತ್ರಿ) ಭಾರತದ ಬಹುತೇಕ ಎಲ್ಲಾ ಭಾಗಗಳಲ್ಲಿಯೂ ಇದು ಸ್ಪಷ್ಟವಾಗಿ ಗೋಚರಿಸಲಿದೆ. ಭಾರತೀಯ ಕಾಲಮಾನದ (IST) ಪ್ರಕಾರ ರಾತ್ರಿ 10.37 ರಿಂದ ಪ್ರಾರಂಭಗೊಂಡು ಮುಂಜಾನೆ 2.42 ರವರೆಗೆ ಗ್ರಹಣ ಸಂಭವಿಸಲಿದೆ. 2020 ಮೊದಲ ಚಂದ್ರಗ್ರಹಣ: ಏನು ಮಾಡಬೇಕು, ಯಾವುದನ್ನು ಮಾಡಲೇಬಾರದು?

ಈ ಸಂದರ್ಭದಲ್ಲಿ ಏನಾದರೂ ಮುನ್ನೆಚ್ಚರಿಕೆ ವಹಿಸಬೇಕೇ?

ಈ ಸಂದರ್ಭದಲ್ಲಿ ಏನಾದರೂ ಮುನ್ನೆಚ್ಚರಿಕೆ ವಹಿಸಬೇಕೇ?

ಸಾಮಾನ್ಯವಾಗಿ ಗ್ರಹಣದ ಕುರಿತಾಗಿ ಎಲ್ಲರಲ್ಲಿಯೂ ಗೊಂದಲವಿರುತ್ತದೆ. ಸೂರ್ಯಗ್ರಹಣವನ್ನು ಎಂದಿಗೂ ಬರಿಗಣ್ಣಿನಿಂದ ನೋಡಬಾರದು. ಆದರೆ ಚಂದ್ರಗ್ರಹಣ ಸೂರ್ಯನ ಪ್ರತಿಫಲಿತ ಕಿರಣಗಳಾದ ಕಾರಣ ಇದನ್ನು ಬರಿಗಣ್ಣಿನಿಂದ ನೋಡಬಹುದು. ಈ ಗ್ರಹಣ ಪ್ರಾರಂಭದಿಂದ ಕೊನೆಯಾಗುವವರೆಗೆ ಎರಡು ಹಂತಗಳಾಗಿ ವಿಂಗಡಿಸಬಹುದು. ಮೊದಲು ಭೂಮಿಯ ನೆರಳು ಚಂದ್ರನ ಮೇಲೆ ಒಂದು ಪಾರ್ಶ್ವದಿಂದ ಬೀಳುತ್ತಾ ನಿಧಾನವಾಗಿ ಆವರಿಸುತ್ತಾ ಹೋಗುತ್ತದೆ. ಪೂರ್ಣಗ್ರಹಣದ ಸಮಯದಲ್ಲಿ ಚಂದ್ರ ಶೇಕಡಾ ತೊಂಭತ್ತರಷ್ಟು ಗ್ರಹಣಕ್ಕೊಳಗಾಗುತ್ತಾನೆ. ಬಳಿಕ ಇನ್ನೊಂದು ಪಾರ್ಶ್ವದಿಂದ ನೆರಳು ಸರಿಯುತ್ತಾ ಚಂದ್ರ ಇನ್ನೊಂದು ಪಕ್ಕದಿಂದ ಪ್ರಕಟಗೊಳ್ಳುತ್ತಾ ಹೋಗುತ್ತಾನೆ. ಈ ಎಲ್ಲಾ ಹಂತಗಳನ್ನು ಬರಿಗಣ್ಣಿನಿಂದ ಸುರಕ್ಷಿತವಾಗಿ ಗಮನಿಸಬಹುದು ಎಂದು ತಜ್ಞರು ತಿಳಿಸುತ್ತಾರೆ. ಆದರೆ ಉಪಕರಣಗಳ ಮೂಲಕ ವೀಕ್ಷಿಸಿದರೆ ಇದನ್ನು ಇನ್ನೂ ಚೆನ್ನಾಗಿ ಕಾಣಬಹುದು.

ಮೌಢ್ಯತೆ ಬೇಡ

ಮೌಢ್ಯತೆ ಬೇಡ

ಆದರೆ ಕೆಲವು ಸಂಪ್ರದಾಯಗಳ ಪ್ರಕಾರ ಗ್ರಹಣದ ಸಮಯದಲ್ಲಿ ದೇಹದ ಚಕ್ರಗಳು ಪ್ರಭಾವಕ್ಕೊಳಗಾಗುತ್ತವೆ. ಇದನ್ನು ತಡೆಯಲು ಕೆಲವು ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗುತ್ತದೆ. ಕೆಲವರು ಆಹಾರ ಸೇವಿಸದಂತೆ, ಹೊರಗೆ ಹೋಗದಂತೆ ಅಥವಾ ನೀರು ಕುಡಿಯದಂತೆ ಎಚ್ಚರ ವಹಿಸುತ್ತಾರೆ. ಆದರೆ ಇವುಗಳಿಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲದ ಕಾರಣ ಈ ಬಗ್ಗೆ ಯಾವುದೇ ಖಚಿತವಾದ ನಿರ್ಬಂಧನೆಗಳನ್ನು ವಿಜ್ಞಾನ ಹೇರಿಲ್ಲ ಅಥವಾ ಯಾವುದೇ ಆಹಾರವನ್ನು ಸೇವಿಸಲು ಅಥವಾ ಸೇವಿಸದಿರುವಂತೆ ಕಟ್ಟುಪಾಡನ್ನು ಹೇರಿಲ್ಲ. ವಿಜ್ಞಾನದ ಪ್ರಕಾರ ಇದು ಸಹಾ ಇತರ ಯಾವುದೇ ಹುಣ್ಣಿಮೆಯ ದಿನದಂತಹ ದಿನವೇ ಆಗಿದ್ದು ಈ ಸಮಯದಲ್ಲಿ ಚಂದ್ರನ ಬೆಳಕು ಕೊಂಚ ಮಸುಕಾಗುತ್ತದೆಯೇ ವಿನಃ ಬೇರಾವ ತೊಂದರೆಯೂ ಇಲ್ಲ.

English summary

Lunar Eclipse January 2020: Date, Time And Must Knowing Things

Here we are dscussing about Date, Time and Must Knowing about 2020 January Lunar Eclipse. A lunar eclipse is a celestial event when the earth blocks sunlight from directly touching the moon's surface and this in a way, creates an imperfect alignment of the three solar creations-sun, moon, and the earth. Read more.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X