Latest Updates
-
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ!
2020 ಮೊದಲ ಚಂದ್ರಗ್ರಹಣ: ಏನು ಮಾಡಬೇಕು, ಯಾವುದನ್ನು ಮಾಡಲೇಬಾರದು?
ಕಂಕಣಗ್ರಸ್ತ ಸೂರ್ಯಗ್ರಹಣವು ಘಟಿಸಿ ಇನ್ನೇನೂ 15 ದಿನವೂ ಕಳೆದಿಲ್ಲ. ನಾವೆಲ್ಲರೂ ಮತ್ತೊಂದು ಗ್ರಹಣಕ್ಕೆ ತಯಾರಾಗಬೇಕಾಗಿದೆ. ಹೌದು, ವರ್ಷದ ಮೊದಲ ಗ್ರಹಣವು ಜನವರಿ 10ರಂದು ಸಂಭವಿಸಲಿದೆ. ಇದೇ ಬರುವ ಶುಕ್ರವಾರ ಚಂದ್ರಗ್ರಹಣವು ನಡೆಯಲಿದ್ದು, ರಾತ್ರಿ 10.30ರಿಂದ ತಡರಾತ್ರಿ 2.35ರ ತನಕ ಈ ಗ್ರಹಣವು ಇರಲಿದೆ. ವರ್ಷದ ಮೊದಲ ಗ್ರಹಣವು ಸುಮಾರು 4 ಗಂಟೆ ಮತ್ತು ಐದು ನಿಮಿಷ ಕಾಲ ಇರಲಿದೆ. ಅಂಶಿಕವಾಗಿರುವ ಚಂದ್ರಗ್ರಹಣವನ್ನು "ತೋಳ ಚಂದ್ರಗ್ರಹಣ" ಎಂದೂ ಕರೆಯುವರು.
ಈ ಗ್ರಹಣವು ಏಷ್ಯಾ, ಯುರೋಪ್ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಗೋಚರವಾಗಲಿದೆ. ವೈಜ್ಞಾನಿಕವಾಗಿ ಚಂದ್ರಗ್ರಹಣವೆಂದರೆ ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿಯು ಹಾದು ಹೋಗುವುದು. ಆದರೆ ಇದರ ಬಗ್ಗೆ ಕೆಲವು ಜನರಲ್ಲಿ ಭೀತಿ ಹಾಗೂ ಕೆಲವು ಮೂಢನಂಬಿಕೆಗಳು ಕೂಡ ಇದೆ. ಆಶಾವಾದಿಗಳು ಇದು ಜೀವನದ ಇದು ತುಂಬಾ ಧನಾತ್ಮಕ ಎಂದು ಭಾವಿಸುವರು. ಇನ್ನು ಕೆಲವರು ಇದನ್ನು ನಕಾರಾತ್ಮಕ ಎಂದು ಹೇಳುವರು. ನಿಮ್ಮ ರಾಶಿಚಕ್ರದ ಮೇಲೆ ವರ್ಷದ ಮೊದಲ ಚಂದ್ರಗ್ರಹಣದ ಪ್ರಭಾವ ಹೇಗಿದೆ?


ಚಂದ್ರಗ್ರಹಣ ವೇಳೆ ಮಾಡಬಹುದಾದ ಕೆಲಸಗಳು
1. ಚಂದ್ರಗ್ರಹಣದ ವೇಳೆ ಆಹಾರವು ತನ್ನ ಶುದ್ಧತೆ ಕಳೆದುಕೊಳ್ಳಬಾರದು ಎಂದಿದ್ದರೆ ಆಗ ನೀವು ಗರಿಕೆ ಹುಲ್ಲನ್ನು ಅದಕ್ಕೆ ಹಾಕಿಡಿ. ಇದು ವಿಕಿರಣಗಳ ಕೆಟ್ಟ ಪರಿಣಾಮ ತಡೆಯುವುದು. ಪುರಾಣಗಳ ಪ್ರಕಾರ ಗರಿಕೆ ಹುಲ್ಲಿಗೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ ಆಶೀರ್ವಾದವಿದೆ.
2. ಜನ್ಮ ಕುಂಡಲಿಯಲ್ಲಿ ಇರುವಂತಹ ಕಾಳಸರ್ಪ ದೋಷ ನಿವಾರಣೆ ಮಾಡಲು ಗ್ರಹಣ ಸಮಯದಲ್ಲಿ ಮೃತ್ಯುಂಜಯ ಜಪ ಮಾಡಿ.
"ಓಂ ತ್ರಯಂಬಕಂ ಯಜಮಹೇ ಸುಗಂಧಿಮ್ ಪುಷ್ಟಿ-ವರ್ಧನಂ,
ಉರ್ರುಕಾಮಿವ ಬಂಧನ ಮೃತ್ಯೊರ್ಮುಕ್ಷಿಯಾ ಮಮೃತತ್''
ಅಥವಾ ಈ ಮಂತ್ರ ಜಪಿಸಿ
ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ
ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ

ಚಂದ್ರಗ್ರಹಣ ವೇಳೆ ಮಾಡಬಹುದಾದ ಕೆಲಸಗಳು
3. ಗರ್ಭಿಣಿಯರಿಗೆ ಈ ಮಂತ್ರ
ಓಂ ದೇವಕಿ ಸುತ ಗೋವಿಂದ ವಾಸುದೇವ ಜಗಪತೇ ದೇಹಿಮೆ ತನಯಂ
ಕೃಷ್ಣ ತ್ವಮಹಂ ಶರಣಾಗತಃ
4. ಚಂದ್ರಗ್ರಹಣದ ಬಳಿಕ ತಯಾರಿಸಿದ ಆಹಾರ ಮಾತ್ರ ಸೇವಿಸಿ.
5. ಚಂದ್ರಗ್ರಹಣದ ಬಳಿಕ ಸ್ನಾನ ಮಾಡಿ.
6. ಪಿತೃಗಳ ಹೆಸರಿನಲ್ಲಿ ಏನಾದರೂ ದಾನ ಮಾಡಿ.
7. ಗೋವು, ಜಮೀನು ಅಥವಾ ಧಾನ್ಯ ದಾನ ಮಾಡಿ.2020 ಮೊದಲ ಚಂದ್ರಗ್ರಹಣ: ನೀವು ತಿಳಿಯಲೇಬೇಕಾದ ಸಂಗತಿಗಳು

ಚಂದ್ರಗ್ರಹಣ ವೇಳೆ ಮಾಡಬಾರದ ಕಾರ್ಯಗಳು
1. ಚಂದ್ರಗ್ರಹಣದ ವೇಳೆ ಮಲಗಬೇಡಿ.
2. ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಡಿ
3. ಚಂದ್ರಗ್ರಹಣ ವೇಳೆ ಆಹಾರ ಸೇವಿಸಿದ್ದರೆ ಮುಂದಿನ ಮೂರು ದಿನಗಳ ಕಾಲ ಉಪವಾಸ ಮಾಡಿ.
4. ಚಂದ್ರಗ್ರಹಣ ವೇಳೆ ಪ್ರಾಣಿಗಳ (ಆನೆ ಅಥವಾ ಕುದುರೆ) ಮೇಲೆ ಕುಳಿತುಕೊಳ್ಳಬೇಡಿ.
ಇದು ವರ್ಷದ ಮೊದಲ ಗ್ರಹಣವಾಗಿದೆ. ಇದರ ಬಳಿಕ ಜೂನ್ 5, ಜುಲೈ 5 ಮತ್ತು ನವಂಬರ್ 30ರಂದು ಕೂಡ ಗ್ರಹಣ ಸಂಭವಿಸಲಿದೆ.



Click it and Unblock the Notifications