Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಂದ್ರಗ್ರಹಣದಿಂದ ಬರಲಿದೆ ಅದೃಷ್ಟದ ದಿನಗಳು: ಈ ರಾಶಿಯವರ ಜೀವನದಲ್ಲಿ ಹೊಸ ಆರಂಭ!
ಮಾರ್ಚ್ 3ರ ಹುಣ್ಣಿಮೆಯ ದಿನದಂದು ಚಂದ್ರಗ್ರಹಣ ಸಂಭವಿಸುತ್ತಿದೆ. ಈ ಚಂದ್ರಗ್ರಹಣವು ಅತ್ಯಂತ ಪ್ರಮುಖ ವಿದ್ಯಮಾನವಾಗಿ ನೋಡಲಾಗಿದೆ. ಭಾರತದಲ್ಲಿ ಗೋಚರವಾಗುವ ಈ ಚಂದ್ರಗ್ರಹಣವು ಎಲ್ಲಾ ಗ್ರಹ, ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡಲಿದೆ. ಮಾರ್ಚ್ 3 2026 ರಂದು ಮಧ್ಯಾಹ್ನ 3:20 ರಿಂದ ಸಂಜೆ 6:47 ರ ವರೆಗೆ ಸಂಪೂರ್ಣ ಚಂದ್ರಗ್ರಹಣ ಸಂಭವಿಸಲಿದೆ.
ಜ್ಯೋತಿಷ್ಯದ ಪ್ರಕಾರ 2026 ರ ಮೊದಲ ಚಂದ್ರಗ್ರಹಣವು ಮಾರ್ಚ್ ತಿಂಗಳಲ್ಲಿ ಸಂಭವಿಸಲಿದ್ದು, ಸೂರ್ಯನ ಸಿಂಹ ರಾಶಿಯಲ್ಲಿ ಈ ವಿದ್ಯಮಾನ ನಡೆಯುತ್ತಿದೆ. ಈ ಚಂದ್ರಗ್ರಹಣದ ಪ್ರಭಾವವು ಮೇಷ ರಾಶಿಯಿಂದ ಮೀನ ರಾಶಿಯವರೆಗಿನ ಎಲ್ಲಾ ರಾಶಿ ಜನರ ಜೀವನದ ಮೇಲೆಯೂ ಉಂಟು ಮಾಡಲಿದೆ. ಅವರಲ್ಲಿ ಕೆಲವು ರಾಶಿ ಜನರಿಗೆ ಶುಭ ಹಾಗೆ ಮತ್ತೆ ಕೆಲವು ರಾಶಿಗಳಿಗೆ ಅಶುಭವಾಗುತ್ತದೆ.

ಭಾರತದಲ್ಲಿ ಚಂದ್ರೋದಯವು ಸಂಜೆ 6:22 ಕ್ಕೆ ಆಗುವ ನಿರೀಕ್ಷೆಯಿದೆ. ಗ್ರಹಣವು ಸಂಜೆ 6:47 ಕ್ಕೆ ಕೊನೆಗೊಳ್ಳುವುದರಿಂದ ಗ್ರಹಣವನ್ನು ಸುಮಾರು 25 ನಿಮಷಗಳ ಕಾಲ ವೀಕ್ಷಿಸಬಹುದು. ಸಿಂಹ ರಾಶಿಯ ಗ್ರಹವಾಗಿರುವ ಸೂರ್ಯನಲ್ಲಿ ಈ ಚಂದ್ರಗ್ರಹಣ ಉಂಟಾಗುತ್ತಿದೆ. ಹಾಗಾದ್ರೆ ಈ ಚಂದ್ರಗ್ರಹಣವು ಯಾವ ರಾಶಿಯವರಿಗೆ ಶುಭದಾಯಕ ಹಾಗೆ ಯಾವ ರಾಶಿಯವರಿಗೆ ಇದು ಅದೃಷ್ಟಕರ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮೇಷ ರಾಶಿ
ವರ್ಷದ ಮೊದಲ ಚಂದ್ರಗ್ರಹಣವು ಮೇಷ ರಾಶಿಯವರಿಗೆ ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ. ಈ ಮೇಷ ರಾಶಿಯ ಅಧಿಪತಿ ಮಂಗಳ. ಜ್ಯೋತಿಷ್ಯದ ಪ್ರಕಾರ ಮಂಗಳ ಮತ್ತು ಸೂರ್ಯ ಒಂದೇ ರೀತಿಯ ಶುಭವನ್ನು ತರುವ ಗ್ರಹಗಳು, ಹೀಗಾಗಿ ಮೇಷ ರಾಶಿಯವರಿಗೆ ಈ ಚಂದ್ರಗ್ರಹಣವು ಲಾಭದಾಯಕವಾಗಲಿದೆ. ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಕೆಲಸ ಮಾಡುವವರಿಗೆ ಬಡ್ತಿ ಮತ್ತು ಸಂಬಳ ಹೆಚ್ಚಳದ ಸಾಧ್ಯತೆಗಳಿವೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಆರ್ಥಿಕ ಪರಿಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಶ್ರಮದಾಯಕ ಕೆಲಸಗಳು ನೀವು ಅಂದುಕೊಂಡಿದ್ದ ಫಲಿತಾಂಶ ತರಲಿದೆ.
ಸಿಂಹ ರಾಶಿ
ವರ್ಷದ ಮೊದಲ ಚಂದ್ರಗ್ರಹಣದಿಂದಾಗಿ ಸಿಂಹ ರಾಶಿಯವರಿಗೆ ಅದೃಷ್ಟ ಸಿಗುತ್ತದೆ. ಕೆಲಸದಲ್ಲಿ ನಿಮ್ಮ ನಾಯಕತ್ವ ಕೌಶಲ್ಯಗಳು ಸುಧಾರಿಸುತ್ತವೆ. ಕಚೇರಿಯಲ್ಲಿ ಉನ್ನತ ಅಧಿಕಾರಿಗಳಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ. ಕೆಲವರಿಗೆ ಹೊಸ ಜವಾಬ್ದಾರಿಗಳು ಸಿಗಬಹುದು. ಮುಖ್ಯ ವಿಷಯವೆಂದರೆ ಕೋಪವನ್ನು ನಿಯಂತ್ರಿಸುವುದು. ಇಲ್ಲದಿದ್ದರೆ ಆ ಕೋಪವು ಸಂಬಂಧಗಳಿಗೆ ಹಾನಿ ಮಾಡುತ್ತದೆ. ನಿಮ್ಮ ಆರ್ಥಿಕ ಸಮಸ್ಯೆಗಳನ್ನು ಈ ವೇಳೆ ಬಗೆಹರಿಸಿಕೊಳ್ಳುವಿರಿ. ನಿಮ್ಮ ಹಣಕಾಸಿನ ವಿಚಾರದಲ್ಲಿ ಆಪ್ತರಿಂದ ದೊಡ್ಡ ಮೊತ್ತ ಸಿಗಲಿದೆ. ಕೆಲಸದಲ್ಲಿ ಪ್ರಮಾಣಿಕ ಪ್ರಯತ್ನಗಳಲ್ಲಿ ಶುಭವಿದೆ. ವಿವಾಹ ಸಂಬಂಧಿತ ವಿಚಾರವಾಗಿ ನಿಮ್ಮಲ್ಲಿ ಹೊಸ ರೀತಿಯ ಆಲೋಚನೆಗಳು ಬರಲಿದೆ.
ಧನು ರಾಶಿ
2026 ರ ಮೊದಲ ಚಂದ್ರಗ್ರಹಣದಿಂದಾಗಿ ಧನು ರಾಶಿಯವರಿಗೆ ಉತ್ತಮ ಫಲಿತಾಂಶಗಳು ಸಿಗಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು. ನಿರುದ್ಯೋಗಿ ಯುವಕ ಅಥವಾ ಯುವತಿಯರು ಸೂಕ್ತ ಬೆಂಬಲದೊಂದಿಗೆ ಅವಕಾಶಗಳ ಪಡೆಯಬಹುದು. ವಿದೇಶ ಪ್ರಯಾಣದ ಅವಕಾಶಗಳು ಬರಬಹುದು. ಸಾಲದ ಪ್ರಮಾಣ ಇಳಿಕೆಯಾಗುವುದು ನಿಮ್ಮಲ್ಲಿ ನೆಮ್ಮದಿಗೆ ಕಾರಣವಾಗಲಿದೆ. ಮೂಲ ಆದಾಯದಲ್ಲಿ ಹೆಚ್ಚಳ ನಿರೀಕ್ಷಿಸಬಹುದು. ವ್ಯಾಪಾರ ಸಂಬಂಧಿತ ಅಡ್ಡಿಗಳು ನಿವರಣೆಯಾಗುವ ಸಮಯವಿದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications