Lunar Eclipse 2026: ಭಾರತದಲ್ಲಿ ಭಾಗಶಃ ಗ್ರಹಣ ಗೋಚರ: ಯಾವಾಗ, ಎಲ್ಲಿ ಮತ್ತು ಎಷ್ಟು ಹೊತ್ತು ಪರಿಣಾಮ ಬೀರುತ್ತೆ?

ವರ್ಷದ ಮೊದಲ ಚಂದ್ರಗ್ರಹಣ! ಭಾರತದಲ್ಲಿ ಆಂಶಿಕವಾಗಿ ಗೋಚರ.. ಸೂತಕ ಕಾಲವು ಅನ್ವಯ. ಯಾವಾಗ, ಎಲ್ಲಿ ಮತ್ತು ಎಷ್ಟು ಹೊತ್ತು ಇದರ ಪ್ರಭಾವ ಇರಲಿದೆ ಎಂಬುದರ ಮಾಹಿತಿ ಇಲ್ಲಿದೆ. ಹೌದು, 2026ರ ಮೊದಲ ಚಂದ್ರಗ್ರಹಣ (Lunar Eclipse 2026) ಮಾರ್ಚ್ 3ರಂದು ಫಾಲ್ಗುಣ ಪೂರ್ಣಿಮೆಯ ದಿನದಂದು ಸಂಭವಿಸಲಿದೆ. ಈ ಗ್ರಹಣ ಭಾರತದಲ್ಲಿ ಗೋಚರಿಸುವುದರಿಂದ, ಸೂತಕ ಕಾಲವೂ ಅನ್ವಯವಾಗಲಿದೆ.

ಭಾರತೀಯ ಕಾಲಮಾನದ ಪ್ರಕಾರ, ಸೂರ್ಯಗ್ರಹಣ (Chandra Grahan Date & Time) ಮಧ್ಯಾಹ್ನ 3:20ಕ್ಕೆ ಪ್ರಾರಂಭವಾಗಿ ಸಂಜೆ 6:47ಕ್ಕೆ ಮುಕ್ತಾಯಗೊಳ್ಳುತ್ತದೆ. ಒಟ್ಟು 3 ಗಂಟೆ 27 ನಿಮಿಷಗಳ ಕಾಲ (Lunar Eclipse 2026 Visibility in India) ನಡೆಯುವ ಈ ಗ್ರಹಣವು ಜ್ಯೋತಿಷ್ಯ ದೃಷ್ಟಿಯಿಂದಲೂ ಮಹತ್ವಪೂರ್ಣವಾಗಿದೆ.

Lunar Eclipse 2026 Visibility in India
Photo Credit: ಸಂಗ್ರಹ ಚಿತ್ರ: ಇಂಟರ್ನೆಟ್

ಗ್ರಹಣದ ಆರಂಭ: ಮಧ್ಯಾಹ್ನ 3:20 PM
ಖಗ್ರಾಸ (ಪೂರ್ಣ ಗ್ರಹಣ) ಆರಂಭ: ಸಂಜೆ 4:34 PM
ಗ್ರಹಣದ ಮಧ್ಯ ಕಾಲ: ಸಂಜೆ 5:33 PM
ಗ್ರಹಣದ ಮುಕ್ತಾಯ: ಸಂಜೆ 6:47 PM
ಒಟ್ಟು ಅವಧಿ: 3 ಗಂಟೆ 27 ನಿಮಿಷಗಳು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಣಗಳು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ಹೊಂದಿವೆ. ನಿರ್ದಿಷ್ಟವಾಗಿ ಹೇಳುವುದಾದರೆ, 2026ರ ಈ ಚಂದ್ರಗ್ರಹಣವು ಭಾರತದಲ್ಲಿ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಗ್ರಹಣದ ಅವಧಿಯಲ್ಲಿ ಸೂತಕ ಕಾಲವು ಅನ್ವಯವಾಗುತ್ತದೆ. ಇದನ್ನು ಧಾರ್ಮಿಕ ಮತ್ತು ಪೂಜಾ ಕಾರ್ಯಗಳಿಗೆ ಸಂಬಂಧಿಸಿದಂತೆ ಮುಖ್ಯವೆಂದು ಪರಿಗಣಿಸಲಾಗುತ್ತದೆ.

ಭಾರತದಲ್ಲಿ ಗ್ರಹಣದ ಗೋಚರತೆ

ಪಂಚಾಂಗದ ಪ್ರಕಾರ, ಈ ಚಂದ್ರಗ್ರಹಣ ಮಾರ್ಚ್ 3, ಮಂಗಳವಾರದಂದು ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ, ಮಧ್ಯಾಹ್ನ 3 ಗಂಟೆ 20 ನಿಮಿಷಕ್ಕೆ ಗ್ರಹಣ ಆರಂಭಗೊಳ್ಳಲಿದೆ. ಇದು ಸಂಜೆ 6 ಗಂಟೆ 47 ನಿಮಿಷಕ್ಕೆ ಕೊನೆಗೊಳ್ಳಲಿದ್ದು, ಒಟ್ಟಾರೆ 3 ಗಂಟೆ 27 ನಿಮಿಷಗಳ ಕಾಲ ಆಕಾಶದಲ್ಲಿ ಗೋಚರಿಸಲಿದೆ.

ಮಾರ್ಚ್ 3ರಂದು ಮಧ್ಯಾಹ್ನ 3:20ಕ್ಕೆ ಚಂದ್ರಗ್ರಹಣ ಆರಂಭವಾಗಲಿದೆ. ಸಂಜೆ 4:34ಕ್ಕೆ ಖಗ್ರಾಸ ಸ್ಥಿತಿಯು ಶುರುವಾಗಲಿದ್ದು, ಚಂದ್ರನು ಸಂಪೂರ್ಣವಾಗಿ ಭೂಮಿಯ ನೆರಳಿನಲ್ಲಿ ಸೇರಿಕೊಳ್ಳುತ್ತಾನೆ. ಗ್ರಹಣದ ಮಧ್ಯಾವಧಿಯು 5:33ಕ್ಕೆ ಸಂಭವಿಸುತ್ತದೆ. ಅಂತಿಮವಾಗಿ, ಸಂಜೆ 6:47ಕ್ಕೆ ಇದು ಪೂರ್ಣಗೊಳ್ಳಲಿದೆ. ಖಗ್ರಾಸದ ಒಟ್ಟು ಅವಧಿ ಸುಮಾರು 59 ನಿಮಿಷಗಳಾಗಿದ್ದು, ಖಗೋಳ ಘಟನೆಯ ಪ್ರಮುಖ ಹಂತ ಇದಾಗಿದೆ.

ಸೂತಕ ಕಾಲದ ಮಹತ್ವ

ಭಾರತದಲ್ಲಿ ಈ ಚಂದ್ರಗ್ರಹಣ 'ಗ್ರಸ್ತೋದಯ' ರೂಪದಲ್ಲಿ ಗೋಚರಿಸಲಿದೆ. ಅಂದರೆ, ಚಂದ್ರನು ಉದಯಿಸುವಾಗ ಈಗಾಗಲೇ ಗ್ರಹಣ ಆರಂಭವಾಗಿರುತ್ತದೆ. ಹೀಗಾಗಿ, ಗ್ರಹಣದ ಪ್ರಾರಂಭಿಕ ಹಂತ ಅಥವಾ ಸಂಪೂರ್ಣ ಖಗ್ರಾಸದ ದೃಶ್ಯವು ನೇರವಾಗಿ ಗೋಚರಿಸುವುದಿಲ್ಲ. ಬಹುತೇಕ ಸ್ಥಳಗಳಲ್ಲಿ, ಜನರಿಗೆ ಗ್ರಹಣದ ಅಂತಿಮ ಹಂತವನ್ನು ಮಾತ್ರ ನೋಡಲು ಸಾಧ್ಯ.

ಭಾರತದಲ್ಲಿ ಈ ಚಂದ್ರಗ್ರಹಣದ ಗೋಚರ ಅವಧಿಯು ಅತ್ಯಂತ ಸೀಮಿತವಾಗಿರುತ್ತದೆ. ಗ್ರಹಣದ ಒಟ್ಟು ಅವಧಿ 3 ಗಂಟೆ 27 ನಿಮಿಷಗಳಾಗಿದ್ದರೂ, ದೆಹಲಿಯಲ್ಲಿ ಚಂದ್ರೋದಯವು ಸಂಜೆ 6:22ಕ್ಕೆ ಆಗುತ್ತದೆ. ಅಂತಿಮವಾಗಿ 6:47ಕ್ಕೆ ಗ್ರಹಣ ಮುಕ್ತಾಯಗೊಳ್ಳುವುದರಿಂದ, ದೆಹಲಿಯ ಜನರಿಗೆ ಸುಮಾರು 25 ನಿಮಿಷಗಳ ಕಾಲ ಮಾತ್ರ ಇದನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.

ಗ್ರಹಣ ಎಲ್ಲೆಲ್ಲಿ ಕಾಣಿಸಲಿದೆ?

ಇತರೆ ನಗರಗಳಲ್ಲಿ ಚಂದ್ರೋದಯದ ಸಮಯಕ್ಕೆ ಅನುಗುಣವಾಗಿ ಗ್ರಹಣದ ಗೋಚರ ಅವಧಿ ವ್ಯತ್ಯಾಸವಾಗಬಹುದು. ಆದರೆ, ಈಶಾನ್ಯ ಭಾರತದ ಕೆಲವು ರಾಜ್ಯಗಳಲ್ಲಿ ಗ್ರಹಣದ ದೃಶ್ಯಾವಧಿಯು ತುಸು ಹೆಚ್ಚಿದ್ದು, ಸುಮಾರು 59 ನಿಮಿಷಗಳವರೆಗೆ ಸ್ಪಷ್ಟವಾಗಿ ಕಾಣಿಸುವ ಸಾಧ್ಯತೆ ಇದೆ.

ಭಾರತದಲ್ಲಿ, ಅಸ್ಸಾಂ, ನಾಗಾಲ್ಯಾಂಡ್, ಮಿಜೋರಾಂ, ಮಣಿಪುರ, ಅರುಣಾಚಲ ಪ್ರದೇಶ ಹಾಗೂ ಪಶ್ಚಿಮ ಬಂಗಾಳದ ಈಶಾನ್ಯ ಭಾಗಗಳಲ್ಲಿ ಮಾತ್ರ ಗ್ರಹಣದ ಅಂತಿಮ ಹಂತ ಮತ್ತು ಮುಕ್ತಾಯವನ್ನು ಸ್ಪಷ್ಟವಾಗಿ ವೀಕ್ಷಿಸಲು ಸಾಧ್ಯ. ಉಳಿದ ಭಾರತದಲ್ಲಿ ಚಂದ್ರೋದಯವಾಗುವ ಹೊತ್ತಿಗೆ ಖಗ್ರಾಸವು ಈಗಾಗಲೇ ಮುಗಿದಿರುತ್ತದೆ, ಆದುದರಿಂದ ಗ್ರಹಣದ ಕೊನೆಯ ಭಾಗ ಮಾತ್ರ ಗೋಚರವಾಗುತ್ತದೆ.

ಶುಭ ಕಾರ್ಯಗಳು ನಡೆಯಲ್ಲ!

ಧಾರ್ಮಿಕ ನಂಬಿಕೆಗಳ ಪ್ರಕಾರ, ಚಂದ್ರಗ್ರಹಣದ ಸೂತಕ ಕಾಲವು ಗ್ರಹಣ ಆರಂಭವಾಗುವ 9 ಗಂಟೆಗಳ ಮೊದಲೇ ಶುರುವಾಗುತ್ತದೆ. ಈ ರೀತಿ, ಮಾರ್ಚ್ 3ರಂದು ಬೆಳಿಗ್ಗೆ 6:20ರಿಂದಲೇ ಸೂತಕ ಕಾಲವು ಜಾರಿಗೆ ಬರಲಿದೆ. ಸೂತಕದ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳು, ಪೂಜೆ, ಪಾಠ ಅಥವಾ ಧಾರ್ಮಿಕ ವಿಧಿಗಳನ್ನು ನಡೆಸಲಾಗುವುದಿಲ್ಲ.

ದೇವಾಲಯಗಳಲ್ಲಿ ದೇವರ ಪ್ರತಿಮೆಗಳನ್ನು ಸ್ಪರ್ಶಿಸುವುದು ನಿಷಿದ್ಧ ಎಂದು ಹೇಳಲಾಗುತ್ತದೆ. ಆದರೂ, ಈ ಅವಧಿಯಲ್ಲಿ ಮಾನಸಿಕವಾಗಿ ಜಪ, ಧ್ಯಾನ ಮತ್ತು ಪ್ರಾರ್ಥನೆಗಳನ್ನು ಮಾಡಬಹುದು. ಸೂತಕ ಕಾಲದ ನಿಯಮಗಳನ್ನು ಅನುಸರಿಸುವುದು ಧಾರ್ಮಿಕವಾಗಿ ಮಹತ್ವಪೂರ್ಣವೆನಿಸಿದೆ.

English summary

Lunar Eclipse 2026: Chandra Grahan Date & Time; Only 25 Minutes of Visibility in India

Lunar Eclipse 2026: Chandra Grahan Date & Time; Only 25 Minutes of Visibility in India
X
Desktop Bottom Promotion