For Quick Alerts
ALLOW NOTIFICATIONS  
For Daily Alerts

ನಿಮ್ಮ ರಾಶಿಚಕ್ರದ ಮೇಲೆ ವರ್ಷದ ಮೊದಲ ಚಂದ್ರಗ್ರಹಣದ ಪ್ರಭಾವ ಹೇಗಿದೆ?

|

ನೂತನ 2020ನೇ ಇಸವಿಯ ಮೊದಲ ಹುಣ್ಣಿಮೆಯ ಆಗಮನವಾಗುತ್ತಿದೆ. ಜನವರಿ 10ರಂದು ಭಾರತೀಯ ಕಾಲಮಾನ ರಾತ್ರಿ 10.37 ರಿಂದ ಪ್ರಾರಂಭಗೊಂಡು ಮುಂಜಾನೆ 2.42 ರವರೆಗೆ ಗ್ರಹಣ ಸಂಭವಿಸಲಿದೆ. ಆ ಮೂಲಕ ಆಕಾಶದಲ್ಲಿ ಪ್ರಕಾಶಮಾನವಾದ ವೈಭವವು ಆಕಾಶದಲ್ಲಿ ಗೋಚರವಾಗಲಿದೆ. ಆಕಾಶದಲ್ಲಿ ಆಗುವ ಈ ಬದಲಾವಣೆಯು ಜ್ಯೋತಿಷ್ಯಶಾಸ್ತ್ರದ ಪ್ರಕಾರ ನಿಮ್ಮ ರಾಶಿಚಕ್ರದ ಮೇಲೂ ಕೂಡ ಪರಿಣಾಮ ಬೀರಲಿದೆ. ಜನವರಿ 2020ರ ಈ ಹುಣ್ಣಿಮೆ ನಿಮ್ಮ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂದು ತಿಳಿದುಕೊಳ್ಳುವುದಕ್ಕೆ ನಿಮಗೆ ಆಸಕ್ತಿ ಇದೆಯೇ?.2020 ಮೊದಲ ಚಂದ್ರಗ್ರಹಣ: ಏನು ಮಾಡಬೇಕು, ಯಾವುದನ್ನು ಮಾಡಲೇಬಾರದು?

Lunar Eclipse

ಪ್ರತಿಯೊಬ್ಬರಿಗೂ ತಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಪ್ರತಿಯೊಂದು ರಾಶಿಗೂ ಕೂಡ ಅದರದ್ದೇ ಆದ ಪರಿಣಾಮಗಳಾಗುತ್ತದೆ. ನಿಮ್ಮ ಜೀವನ, ಕೆಲಸ, ವೈಯಕ್ತಿಕ ಬದುಕು ಇತ್ಯಾದಿಗಳ ಬಗ್ಗೆ ಕೆಲವು ಸೂಚನೆಗಳನ್ನು ರಾಶಿಫಲದ ಅನುಗುಣವಾಗಿ ನೀಡುವುದಕ್ಕೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸಾಧ್ಯವಾಗುತ್ತದೆ. ಹುಣ್ಣಿಮೆಯ ಫಲಾಫಲಗಳು ಬೇರೆಬೇರೆ ರಾಶಿಗೆ ಬೇರೆಬೇರೆಯಾಗಿರುತ್ತದೆ. ಹಾಗಾದ್ರೆ ಭವಿಷ್ಯವಾಣಿ ಏನು ಹೇಳುತ್ತದೆ. ಯಾವ ರಾಶಿಗೆ ಯಾವ ರೀತಿಯ ಪರಿಣಾಮ ಆಗುತ್ತದೆ ಎಂಬ ಬಗ್ಗೆ ತಿಳಿದುಕೊಳ್ಳೋಣ.2020 ಮೊದಲ ಚಂದ್ರಗ್ರಹಣ: ನೀವು ತಿಳಿಯಲೇಬೇಕಾದ ಸಂಗತಿಗಳು

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರು ವಿರಾಮ ತೆಗೆದುಕೊಳ್ಳುವುದಕ್ಕಾಗಿ ತಮ್ಮನ್ನ ತಾವು ಪ್ರೊತ್ಸಾಹಿಸಿಕೊಳ್ಳಬೇಕಾಗಿದೆ ಅಥವಾ ತಂಪು ಹುಣ್ಣಿಮೆಯ ಅಡಿಯಲ್ಲಿಯೂ ತಮ್ಮನ್ನ ತಾವು ಸುಟ್ಟುಕೊಳ್ಳುವಂತಾಗಬಹುದು. ನೀವು ನಿಮ್ಮ ಮನೆಯನ್ನು ಅಥವಾ ಜಗತ್ತನ್ನು ಆಳಬೇಕಾಗಿಲ್ಲ. ನೀವು ನಿರಾಳವಾಗಿರಬೇಕಾದ ಆರಾಮದಾಯಕ ವಾತಾವರಣವನ್ನು ಸೃಷ್ಟಿಸಿಕೊಳ್ಳಬೇಕು. ನಿಮ್ಮನ್ನ ನೀವು ವಿರಾಮ ತೆಗೆದುಕೊಳ್ಳುವುದಕ್ಕೆ ದೂಡುವುದರಿಂದಾಗಿ 2020ರ ಗುರಿಯನ್ನು ತಲುಪುದಕ್ಕೆ ಇದು ನೆರವಾಗುತ್ತದೆ.

ವೃಷಭ ರಾಶಿ

ವೃಷಭ ರಾಶಿ

ಯಾವುದೇ ಕಾರಣವೇ ಇಲ್ಲದೆ ಪ್ರಚೋದಿತವಾಗಿರುವ ಒತ್ತಡಭರಿತ ಸಂಭಾಷಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಮೊದಲು ನೀವು ಸಂಶೋಧನೆಯನ್ನು ಮಾಡಬೇಕಾಗಿದೆ. ನಿಮ್ಮ ಅಂತಃಪ್ರಜ್ಞೆ ಅಧಿಕವಾಗಿರಬಹುದು ಆದರೆ ನಿಮ್ಮ ಭಾವನೆಗಳನ್ನು ಚರ್ಚಿಸುವ ಮುನ್ನ ವಿಚಾರದ ಸತ್ಯಾಸತ್ಯತೆಯನ್ನು ನೀವು ಕಂಡುಕೊಳ್ಳಬೇಕಾಗುತ್ತದೆ. ನಿಮ್ಮ ಮಾಹಿತಿಗಳನ್ನು ಹಿಂತೆಗೆದುಕೊಳ್ಳುವುದಕ್ಕೆ ಸಾಧ್ಯವಾಗಲಿದೆಯೇ ಎಂಬ ಬಗ್ಗೆ ಖಾತ್ರಿ ಇರಲಿ. ಒಂದು ವೇಳೆ ಯಾವುದೇ ವಿಚಾರವು ನಿಮ್ಮನ್ನು ಕೊರೆಯುತ್ತಿದ್ದಲ್ಲಿ ಆ ವಿಚಾರದ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದಕ್ಕೆ ಸ್ವಲ್ಪ ಸಮಯ ನೀಡಿ ಮತ್ತು ನಂತರ ಮತ್ತೊಬ್ಬರ ಗಮನಕ್ಕೆ ತನ್ನಿ. ಆತುರ ಬೇಡ.

ಮಿಥುನ ರಾಶಿ

ಮಿಥುನ ರಾಶಿ

ಈ ಹುಣ್ಣಿಮೆಯ ಪರಿಣಾಮದಿಂದಾಗಿ ನಿಮ್ಮ ಕೆಲಸದ ಹಾದಿಯಲ್ಲಿ ಸ್ವಲ್ಪ ಹಿನ್ನಡೆಯಾಗುವ ಸಾಧ್ಯತೆ ಇದೆ. ಆದರೆ ಅದಕ್ಕಾಗಿ ಹೆಚ್ಚು ಚಿಂತೆ ಮಾಡಬೇಡಿ ಯಾಕೆಂದರೆ ಇದರ ಪರಿಣಾಮಗಳು ನಿಮ್ಮ ಮೇಲೆ ಕ್ಷಣಿಕವಾಗಿರುತ್ತದೆ. ಲಾಭದಾಯಕ ವ್ಯವಹಾರ ನಡೆಸುವುದು ಮತ್ತು ಹಣವನ್ನು ಉಳಿಸುವುದಕ್ಕೆ ಕಲಿಯುವುದು ಈ ಸಂದರ್ಬದಲ್ಲಿ ನಿಮಗೆ ಸವಾಲಿನ ಕೆಲಸವಾಗಬಹುದು. ಇದರ ಪರಿಣಾಮವಾಗಿ ನಿಮ್ಮ ಕನಸುಗಳು ನನಸಾಗುವುದಿಲ್ಲ ಎಂಬ ನಕಾರಾತ್ಮಕ ಭಾವನೆಗೆ ನೀವು ಹೋಗಬಹುದು. ಆದರೆ ಹೀಗೆ ಹಿಂದೆಜ್ಜೆ ಇಡುವುದಕ್ಕೆ ನಿರ್ಧರಿಸುವ ಮುನ್ನ ಮತ್ತೊಂದು ಅವಕಾಶವನ್ನು ನೀಡುವ ಬಗ್ಗೆ ಚಿಂತನೆ ನಡೆಸಿ. ಆ ಮೂಲಕ ನೀವು ಸಾಧಿಸಬೇಕು ಎಂದುಕೊಂಡಿರುವ ಕೆಲಸವನ್ನು ನಿರ್ವಹಿಸಲು ಪ್ರಯತ್ನಿಸಬೇಕು.

ಕರ್ಕ ರಾಶಿ

ಕರ್ಕ ರಾಶಿ

ನೀವು ಯಾವಾಗಲೂ ನಿಮ್ಮ ಭಾವನೆಗಳನ್ನು ಪ್ರತಿಪಾದಿಸಬೇಕಾಗಿಲ್ಲ ಅದರಲ್ಲೂ ಮುಖ್ಯವಾಗಿ ನಿಮ್ಮ ಪದಗಳು ಮತ್ತೊಬ್ಬರಿಗೆ ನೋಯಿಸಬಹುದು ಎಂದು ತಿಳಿದಿರುವಾಗ ಈ ರೀತಿ ಮಾಡಬೇಕಾಗಿಲ್ಲ. ಶಕ್ತಿಯ ಹೋರಾಟವನ್ನು ತಪ್ಪಿಸಬೇಕು ಮತ್ತು ನಿಮಗೆ ನೀವೇ ಶಕ್ತಿಯನ್ನು ತಂದುಕೊಳ್ಳಿ. ನೀವು ಹಂಚಿಕೊಳ್ಳುತ್ತಿರುವುದು ಸರಿಯಾಗಿದೆ ಎಂದು ನೀವು ಭಾವಿಸುತ್ತಿದ್ದು, ಎಷ್ಟು ಹಂಚಿಕೊಳ್ಳಬೇಕು ಎಂಬ ಬಗ್ಗೆ ನಿಮಗೆ ಖಾತ್ರಿ ಇಲ್ಲದೆ ಇದ್ದರೆ ನಿಮ್ಮ ಯೋಚನೆಗಳನ್ನು ಸಂಘಟಿಸಿ ಅವುಗಳ ಪರಿಶೀಲನೆಯನ್ನು ಮಾಗಿ ನಂತರ ಹಂಚಿಕೊಳ್ಳುವುದು ಸೂಕ್ತ.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರು ಗಮನವು ಅಷ್ಟು ಕೇಂದ್ರೀಕೃತವಾಗಿಲ್ಲ, ಆದರೆ ಅದನ್ನು ಅವರು ನಿಭಾಯಿಸಿಕೊಳ್ಳಬಹುದು. ಸ್ವಲ್ಪ ನಿಮ್ಮ ವಾತಾವರಣದಿಂದ ಹೊರಬರುವುದು ನಿಮಗೆ ಸಹಾಯಕವಾಗಬಲ್ಲದು. ಪರಿಶೀಲನೆಯಲ್ಲಿ ತೊಡಗುವುದು ಬಹಳ ಒಳ್ಳೆಯ ಉಪಾಯ. ನಿಮ್ಮದೇ ಆದ ಸ್ವಂತ ಜಗತ್ತಿನಲ್ಲಿ ಸ್ವಲ್ಪ ಸಮಯ ಕಳೆಯುವುದರಿಂದಾಗಿ ಆರಾಮವಾಗಬಹುದು. ನಾಟಕೀಯವಾಗಿರುವ ಮತ್ತು ವೃತ್ತಿಪರ ಸನ್ನಿವೇಶಗಳಿಂದ ಹೊರಗುಳಿಯುವುದರಿಂದಾಗಿ ನೀವು ನಿಮ್ಮನ್ನ ಮತ್ತು ನಿಮ್ಮ ಮನಸ್ಸನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು.

ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾರಾಶಿಯವರು ಸ್ನೇಹಿತರೊಂದಿಗೆ ಸ್ವಲ್ಪ ಉದ್ವೇಗಕ್ಕೆ ಒಳಗಾಗುವ ಸಾಧ್ಯತೆ ಇದೆ. ಅದಕ್ಕಾಗಿ ನಿಮ್ಮನ್ನ ನೀವು ಸಿದ್ಧಗೊಳಿಸಿಕೊಳ್ಳಬೇಕಿದೆ ಮತ್ತು ನಿಮ್ಮ ಉದ್ದೇಶದ ಬಗ್ಗೆ ನೀವು ಯೋಚಿಸಬೇಕಿದೆ. ನಿಮಗೆ ತಿಳುವಳಿಕೆ ನೀಡುವ ಸ್ನೇಹದ ಅವಧಿ ಮುಗಿದಿದೆಯೇ ಎಂಬ ಬಗ್ಗೆ ಆಲೋಚಿಸಿ? ನಿಜವಾಗಲೂ ನಿಮ್ಮ ಗಮನ ಅಗತ್ಯವಿರುವ ಸ್ನೇಹವು ನಿರ್ಲಕ್ಷಿಸಲ್ಪಟ್ಟಿದೆಯೇ ಎಂಬ ಬಗ್ಗೆ ಪ್ರಶ್ನೆ ಮಾಡಿಕೊಳ್ಳಿ. ಈ ಸಮಯದಲ್ಲಿ ಬಗೆಹರಿಯದ ಸಮಸ್ಯೆಯು ಭುಗಿಲೇಳುವ ಪರಿಣಾಮದಿಂದಾಗಿ ಸ್ನೇಹವು ಬರುತ್ತದೆ ಮತ್ತು ಹೋಗುತ್ತದೆ. ಆದಷ್ಟು ಸಮಾಧಾನದಿಂದ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಪ್ರಯತ್ನಿಸಿ ಮತ್ತು ಹೆಚ್ಚು ಚರ್ಚಿಸಬೇಡಿ. ಉದ್ವಿಗ್ನತೆಯನ್ನು ಪರಿಹರಿಸಿಕೊಳ್ಳದೇ ಇದ್ದಾಗ ಸಮಸ್ಯೆಗಳು ಉಲ್ಬಣವಾಗುವ ಸಾಧ್ಯತೆ ಇದೆ.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯವರಿಗೆ ಈ ಹುಣ್ಣಿಮೆಯು ಒಳ್ಳೆಯದನ್ನೂ ಜೊತೆಗೆ ಕೆಟ್ಟದ್ದು ಎರಡನ್ನೂ ಮಾಡಲಿದೆ. ವೃತ್ತಿಜೀವನವು ಅಭಿವೃದ್ಧಿ ಕಾಣುತ್ತದೆ. ಇದು ನಿಮ್ಮ ವೈಯಕ್ತಿಕ ಬದುಕಿನಲ್ಲಿ ಕೆಲವು ಉದ್ವಿಗ್ನತೆಗೆ ಕಾರಣವಾಗಬಹುದು. ಈ ಸಂದರ್ಭದಲ್ಲಿ ವೈಯಕ್ತಿಕ ಬದುಕು ಮತ್ತು ವೃತ್ತಿಜೀವನ ಎರಡನ್ನೂ ಬ್ಯಾಲೆನ್ಸ್ ಮಾಡುವುದು ಹೇಗೆ ಎಂಬುದನ್ನು ಕಲಿಯುವುದು ಬಹಳ ಮುಖ್ಯವಾಗಿದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಈ ಬಗ್ಗೆ ಸಂಭಾಷಣೆ ನಡೆಸುವುದು ಬಹಳ ಮುಖ್ಯ ಮತ್ತು ಆ ಮೂಲಕ ನಿಮ್ಮ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳುವುದಕ್ಕೆ ಸಾಧ್ಯವಾಗಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಹುಣ್ಣಿಮೆಯ ಈ ಸಂದರ್ಭದಲ್ಲಿ ವೃಶ್ಚಿಕ ರಾಶಿಯವರು ಉಗ್ರರು ಮತ್ತು ನೀತಿವಂತರಂತೆ ವರ್ತಿಸುವ ಸಾಧ್ಯತೆ ಇದೆ. ಈ ರಾಶಿಯವರು ನಾಟಕ ಮಾಡುವುದನ್ನು ಆದಷ್ಟು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಕೆಲವೊಮ್ಮೆ ನಿಮ್ಮನ್ನು ನೀವು ಸಾಬೀತು ಪಡಿಸುವುದು ಕಷ್ಟವಾಗಬಹು ಆದರೆ ನಿಮ್ಮ ಕೊನೆಯ ಒಂದು ಪದವೂ ಸಾಕು ನೀವು ಏನು ಹೇಳ ಬಯಸಿದ್ದೀರೋ ಅದನ್ನು ಸಮರ್ಪಕವಾಗಿ ತಲುಪಿಸುವುದಕ್ಕೆ. ನಕಾರಾತ್ಮಕವಾಗಿ ಹೋಗುವುದನ್ನು ತಪ್ಪಿಸಬಹುದು. ನಿಮ್ಮ ಅಭಿಪ್ರಾಯವನ್ನು ಮತ್ತೊಬ್ಬರಿಗೆ ಒತ್ತಾಯಿಸುವ ಮೂಲಕ ನೀವು ಗಳಿಸುವುದು ಏನೂ ಇಲ್ಲ ಎಂಬುದು ನಿಮಗೆ ತಿಳಿದಿದ್ದರೆ ಒಳ್ಳೆಯದು.

ಧನು ರಾಶಿ

ಧನು ರಾಶಿ

ಹಣಕಾಸು ವ್ಯವಸ್ಥೆಗೆ ಇವರು ಹೆಚ್ಚು ಒತ್ತು ನೀಡುತ್ತಿದ್ದಾರೆ ಮತ್ತು ಕಡಿಮೆ ಒತ್ತಡವುಂಟು ಮಾಡುವ ಕೆಲಸವನ್ನು ನೀವು ಕಂಡು ಹಿಡಿದುಕೊಳ್ಳುವವರೆಗೆ ಯಾವುದೇ ಕ್ರಿಯೆಯ ಯೋಜನೆಯನ್ನೂ ಪ್ರಾರಂಭಿಸದೇ ಇರುವುದು ಒಳ್ಳೆಯದು. ಸಾಲ ತೀರಿಸುವುದಕ್ಕೆ ನೀವು ಯಾವುದಾದರೂ ಮಾರ್ಗವನ್ನು ಕಂಡು ಹಿಡಿದುಕೊಳ್ಳಬೇಕು. ಹಣವು ನಿಮ್ಮ ವೈಯಕ್ತಿಕ ಸಂಬಂಧವನ್ನು ಕೂಡ ಬದಲಾಯಿಸಿ ಬಿಡಬಹುದು. ಭವಿಷ್ಯದಲ್ಲಿ ಸ್ಥಿರವಾದ ಆರ್ಥಿಕ ಪರಿಸ್ಥಿತಿಯನ್ನು ಹೊಂದುವುದಕ್ಕಾಗಿ ಆದಷ್ಟು ಈಗಿನಿಂದಲೇ ಪ್ಲಾನ್ ಮಾಡುವುದು ಒಳ್ಳೆಯದು.

ಮಕರ ರಾಶಿ

ಮಕರ ರಾಶಿ

ಜನವರಿಯ ಈ ಪೂರ್ಣ ಹುಣ್ಣಿಮೆಯು ಪ್ರೀತಿಯ ಜೀವನಕ್ಕೆ ಸಂಬಂಧಿಸಿದಂತೆ ಮಕರ ರಾಶಿಯವರಿಗೆ ಪ್ರಕ್ಷುಬ್ಧ ಕ್ಷಣವನ್ನು ನಿರ್ಮಾಣ ಮಾಡುತ್ತದೆ. ಪ್ರೀತಿಯ ಹಾದಿ ಸುಗಮವಾಗಿರುತ್ತದೆ. ನೀವು ಪ್ರೀತಿಯನ್ನು ಹಂಚುತ್ತೀರಿ ಮತ್ತು ಪ್ರೀತಿಯನ್ನು ಪಡೆದುಕೊಳ್ಳುತ್ತೀರಿ.

ಕುಂಭ ರಾಶಿ

ಕುಂಭ ರಾಶಿ

ಕುಂಭ ರಾಶಿಯವರು ಕಳೆದ ಹಲವು ದಿನಗಳಿಂದ ಬೇರೆಬೇರೆ ಕಾರಣಗಳಿಂದ ನಿರಾಶರಾಗಿದ್ದಾರೆ. ಇದೀಗ ಬಂದಿರುವ ತೋಳ ಹುಣ್ಣಿಮೆಯು ಕುಂಭ ರಾಶಿಯವರಿಗೆ ನಿರಾಶೆ ಹೊಂದಲು ಇನ್ನು ಮುಂದೆ ಅವಕಾಶ ನೀಡುವುದಿಲ್ಲ. ನೀವು ಸಿದ್ಧರಾಗಿದ್ದರೆ ಖಂಡಿತ ಇದೀಗ ಮಾತನಾಡುವುದಕ್ಕೆ ಸರಿಯಾದ ಸಮಯ. ಇಷ್ಟು ದಿನ ನಿಮ್ಮ ಸಹದ್ಯೋಗಿಗಳೊಂದಿಗೆ ಅನ್ಯಾ ಮತ್ತು ಸಮಸ್ಯೆಗಳ ಬಗ್ಗೆ ಬಾಯಿಮುಚ್ಚಿಕೊಂಡು ಸುಮ್ಮನಿದ್ದ ವಿಚಾರವನ್ನು ಇದೀಗ ಪ್ರಸ್ತಾಪಿಸಬಹುದು.

ಮೀನ ರಾಶಿ

ಮೀನ ರಾಶಿ

ನಿಮಗೆ ಭಾವನಾತ್ಮಕ ಮತ್ತು ಸಾಮರಸ್ಯದ ಭಾವನೆಯನ್ನು ಹೆಚ್ಚುತ್ತದೆ.ಸೌಂದರ್ಯವನ್ನು ಅನುಭವಿಸಲು ನೀವು ಇಲ್ಲಿದ್ದೀರಿ ಎಂದು ನೀವು ನಂಬುತ್ತೀರಿ. ನೀವು ಶ್ರಮಪಟ್ಟರೆ ನಿಮ್ಮ ಕಲ್ಪನೆಗಳನ್ನು ನಿಜವಾಗಿಸಬಹುದು. ನಿಮ್ಮ ಎಚ್ಚರಗೊಳ್ಳುವ ಜೀವನದ ಬೆಳಕಿನಲ್ಲಿ ನಿಮ್ಮ ಕನಸಿನ ಪ್ರಪಂಚದ ಮಿನುಗುಗಳು ಹೊರಹೊಮ್ಮುವುದನ್ನು ನೋಡಲು ನಿರೀಕ್ಷಿಸಿ.

English summary

January 2020 Lunar Eclipse How Will Affect Your Zodiac Sign

The first full moon of the new year and of the winter season will rise in the sky at 2:21 p.m. EST on January 10, 2020, peaking in all of its illuminated glory later that night. You'll want to know how the January 2020 full moon will affect you, as this cosmic event is likely to shift the astrological flow of energy, potentially creating minor obstacles for each sign on the fresh slate of the new year. Dubbed the "Wolf Moon" by early tribes, this full moon marks the time of year
X
Desktop Bottom Promotion