Just In
Don't Miss
- News
ಪಾಕಿಸ್ತಾನ: ಕರಾಚಿಯ ಮಸೀದಿಯ ಮೇಲೆ ಮತ್ತೊಂದು ದಾಳಿ- ವಿಡಿಯೋ
- Finance
Adani Stocks: ಅದಾನಿ ಸಂಸ್ಥೆ ಮೌಲ್ಯ ಅರ್ಧದಷ್ಟು ಇಳಿಕೆ, 108 ಬಿಲಿಯನ್ ಡಾಲರ್ ನಷ್ಟ
- Technology
ನಿಮ್ಮ ರಕ್ಷಣೆಗೆ ನೆರವಾಗಲಿವೆ ಈ ಗ್ಯಾಜೆಟ್ಗಳು; ಮಹಿಳೆಯರಿಗಂತೂ ಅಗತ್ಯ!
- Automobiles
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
- Sports
ಸ್ಪಿನ್ನರ್ಗಳ ವಿರುದ್ಧ ಪರದಾಡುವ ಕೊಹ್ಲಿಗೆ ಆಸಿಸ್ ಸರಣಿಗೂ ಮುನ್ನ ಪಠಾಣ್ 'ಆಕ್ರಮಣಕಾರಿ' ಸಲಹೆ!
- Movies
Jothe Jotheyali: ಅನುಳಿಂದ ಮತ್ತೆ ದೂರ ಆಗುತ್ತಾನಾ ಆರ್ಯ..?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Luckiest Zodiac Sign 2023: ಈ 6 ರಾಶಿಗಳಿಗೆ ತುಂಬಾನೇ ಅದೃಷ್ಟದ ವರ್ಷವಾಗಲಿದೆ
ಹೊಸ ವರ್ಷಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿದೆ, ಈ ವರ್ಷ ಏನೇ ಆಗಿರಲಿ ಬರುವ ಹೊಸ ವರ್ಷ ಎಲ್ಲರಿಗೂ ಹರ್ಷವನ್ನು ತರಲಿ ಎಂಬುವುದೇ ನಮ್ಮ ಆಶಯ....
ಜ್ಯೋತಿಷ್ಯದಲ್ಲಿ ಗ್ರಹ ಗತಿಗಳ ಅಧ್ಯಯನ ಮಾಡಿ ಹೊಸ ವರ್ಷ ಯಾವ ರಾಶಿಯವರಿಗೆ ಹೇಗಿರಲಿದೆ ಎಂದು ಹೇಳಲಾಗುವುದು. ಭವಿಷ್ಯ ನಮ್ಮ ಮುಂದಿನ ಬದುಕಿನ ಬಗ್ಗೆ ತಿಳಿಯಲು ಹಾಗೂ ಯಾವ ವಿಚಾರದಲ್ಲಿ ಮುನ್ನೆಚ್ಚರಿಕೆವಹಿಸಬೇಕು ಎಂದು ಅರಿಯಲು ಸಹಾಯ ಮಾಡುತ್ತದೆ. 2023ರ ವರ್ಷ ಭವಿಷ್ಯ ಪ್ರಕಾರ 2023 ಕೆಲ ರಾಶಿಗಳಿಗೆ ಅದೃಷ್ಟದ ವರ್ಷವಾಗಲಿದೆಯಂತೆ. ಏಕೆಂದರೆ 2023ರಲ್ಲಿ ನಡೆಯಲಿರುವ ಗ್ರಹ ಸಂಚಾರಗಳು ಈ ರಾಶಿಯವರಿಗೆ ಅನುಕೂಲಕರವಾಗಿದೆ. 2023 ಯಾವ ರಾಶಿಯವರಿಗೆ ಲಕ್ಕಿ ಆಗಲಿದೆ ಎಂದು ನೋಡೋಣ:

ವೃಷಭ ರಾಶಿ
ವೃಷಭ ರಾಶಿಯವರಿಗೆ ಹೊಸ ವರ್ಷ ಅಂದರೆ 2023 ತುಂಬಾ ಅದ್ಭುತವಾಗಿರಲಿದೆ. ಈ ವರ್ಷ ನಿಮ್ಮ ಎಲ್ಲಾ ಕನಸುಗಳು ನನಸಾಗಲಿದೆ, ಆಸ್ತಿಯ ವಿಷಯದಲ್ಲಿ ನೋಡುವುದಾದರೆ ನಿಮಗೆ ತುಂಬಾನೇ ಒಳ್ಳೆಯದಿದೆ, ಕೆಲವರು ಆಸ್ತಿ ಸಂಗ್ರಹಿಸಿದರೆ, ಆಸ್ತಿ ಮಾರಾಟ ಬಯಸಿದವರು ಒಳ್ಳೆಯ ಲಾಭ ಪಡೆಯಲಿದ್ದೀರಿ. ವರ್ಷದ ಮಧ್ಯದಲ್ಲಿ ದೊಡ್ಡ ಆಸ್ತಿ ವ್ಯವಹಾರ ಸಂಭವಿಸಬಹುದು, ಏಕೆಂದರೆ ಈ ಸಮಯದಲ್ಲಿ ಶನಿ ದೇವನ ವಿಶೇಷ ಕೃಪೆ ನಿಮ್ಮ ಮೇಲಿರುತ್ತದೆ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ 2023 ವರ್ಷವು ತುಂಬಾ ಅದೃಷ್ಟಶಾಲಿಯಾಗಲಿದೆ. ನಿಮ್ಮ ಎಲ್ಲಾ ಕನಸುಗಳು ಈ ಅತ್ತೆಯಿಂದ ನನಸಾಗುವ ಸಾಧ್ಯತೆಯಿದೆ. ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು. ಈ ವರ್ಷ ನಿಮ್ಮ ಎಲ್ಲಾ ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳಲು ಪ್ರಾರಂಭಿಸುತ್ತವೆ, ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಅಲ್ಲದೆ, ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವು ಬಲವಾಗಿರುತ್ತದೆ. ಈ ವರ್ಷ ನೀವು ದೀರ್ಘ ಪ್ರಯಾಣದ ಅವಕಾಶಗಳನ್ನು ಹೊಂದಿರುತ್ತೀರಿ. ನೀವು ಉದ್ಯೋಗದಲ್ಲಿ ಬಡ್ತಿ ಅಥವಾ ವರ್ಗಾವಣೆಯನ್ನು ಪಡೆಯಬಹುದು, ಅದು ನಿಮಗೆ ಪ್ರಯೋಜನವನ್ನು ನೀಡುತ್ತದೆ.

ತುಲಾ ರಾಶಿ
2023 ರ ವರ್ಷವು ತುಲಾ ರಾಶಿಯವರಿಗೆ ವೃತ್ತಿಜೀವನದ ವಿಷಯದಲ್ಲಿ ತುಂಬಾನೇ ಚೆನ್ನಾಗಿದೆ. ನೀವು ವೃತ್ತಿ ಜೀವನದಲ್ಲಿ ಬಡ್ತಿ ಪಡೆಯುತ್ತೀರಿ. ವ್ಯಾಪಾರದಲ್ಲಿಯೂ ಪ್ರಗತಿ ಕಾಣುವಿರಿ. ನಿಮ್ಮ ಎದುರಾಳಿಗಳ ವಿರುದ್ಧ ಸುಲಭ ಜಯ ಸಾಧಿಸುವಿರಿ. ವಿದೇಶಕ್ಕೆ ಹೋಗ ಬಯಸುವವರಿಗೆ ಅವಕಾಶಗಳು ಕೂಡಿ ಬರಲಿದೆ. ನೀವು ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ಅನುಭವಿಸುವಿರಿ.

ವೃಶ್ಚಿಕ ರಾಶಿ
ಹೊಸ ವರ್ಷದಲ್ಲಿ ನೀವು ಕೂಡ ಅನೇಕ ಉತ್ತಮ ಪ್ರಯೋಜನಗಳನ್ನು ಪಡೆಯುತ್ತೀರಿ. 2023 ರ ವರ್ಷವು ನಿಮಗೆ ಅದೃಷ್ಟದ ವರ್ಷವಾಗಲಿದೆ. ವೃತ್ತಿಜೀವನದ ದೃಷ್ಟಿಯಿಂದ ಅಂತೂ ಈ ಹೊಸ ವರ್ಷವು ನಿಮಗೆ ತುಂಬಾ ಒಳ್ಳೆಯದು. ಉದ್ಯೋಗಾಕಾಂಕ್ಷಿಗಳಿಗೆ ಈ ವರ್ಷ ಬಡ್ತಿ ಮತ್ತು ಸಂಬಳ ಹೆಚ್ಚಳವಾಗುವ ಸಂಪೂರ್ಣ ಅವಕಾಶಗಳಿವೆ. ಅಲ್ಲದೆ ಮದುವೆಗೆ ಸಂಬಂದ ಹುಡುಕುತ್ತಿದ್ದರೆ ಸಂಬಂಧ ಕೂಡಿ ಬರಲಿದೆ. ವಿದೇಶಕ್ಕೆ ಹೋಗುವ ಅವಕಾಶ ಸಿಗಲಿದೆ. ಈ ವರ್ಷ ನೀವು ಅನೇಕ ಧಾರ್ಮಿಕ ಪ್ರವಾಸಗಳನ್ನು ಕೈಗೊಳ್ಳುತ್ತೀರಿ.

ಸಿಂಹ ರಾಶಿಯವರಿಗೆ ಹಣ ಲಾಭ
ಸಿಂಹ ರಾಶಿಯ ಶನಿದೇವನು ವರ್ಷದ ಆರಂಭದಲ್ಲಿ ನಿಮ್ಮ ಆರನೇ ಮನೆಯಲ್ಲಿರುತ್ತಾನೆ. ಜನವರಿ 17, 2023ರ ನಂತ ನಿಮ್ಮ ಏಳನೇ ಮನೆಗೆ ಹೋಗುತ್ತಾನೆ, ಅಲ್ಲಿ ಅವನು ಅಪಾರ ಶಕ್ತಿಯನ್ನು ಪಡೆಯುತ್ತಾನೆ. ಅವನು ಸಾಕಷ್ಟು ಶಕ್ತಿಯನ್ನು ಪಡೆಯುತ್ತಾನೆ ಮತ್ತು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಸಹಾಯ ಮಾಡುತ್ತಾನೆ. ಸಿಂಹ ರಾಶಿಯವರಿಗೆ ಈ ವರ್ಷ ಯಶಸ್ವಿಯಾಗಲಿದೆ.
ಸೂರ್ಯನ ಅನುಗ್ರಹದಿಂದ, ಹೊಸ ವರ್ಷವು ತುಂಬಾ ಚೆನ್ನಾಗಿ ಪ್ರಾರಂಭವಾಗುತ್ತದೆ ಮತ್ತು ಅದು ನಿಮಗೆ ಉತ್ತಮ ಅದೃಷ್ಟವನ್ನು ತರುತ್ತದೆ. ಹನ್ನೊಂದನೇ ಮನೆಯಲ್ಲಿ ಸೂರ್ಯನ ಸ್ಥಾನದಿಂದಾಗಿ, ನಿಮ್ಮ ಪ್ರಯತ್ನಗಳು ನಿಮಗೆ ಗಮನಾರ್ಹ ಆರ್ಥಿಕ ಲಾಭಗಳನ್ನು ಮಾಡಲು ಅವಕಾಶವನ್ನು ನೀಡುತ್ತದೆ. ಏಳನೇ ಮನೆಯಲ್ಲಿ ಶನಿಯ ಸಂಚಾರದ ಪ್ರಭಾವದಿಂದ, ವ್ಯಾಪಾರ ಲಾಭದಲ್ಲಿ ಹೆಚ್ಚಳ ಕಂಡುಬರುತ್ತದೆ ಮತ್ತು ಗುರು ಒಂಬತ್ತನೇ ಮನೆಯಲ್ಲಿ ಸಾಗಿದಾಗ ನೀವು ಸುಧಾರಣೆಗಳನ್ನು ನೋಡುತ್ತೀರಿ. ನಿಮ್ಮ ಪ್ರಸ್ತುತ ಕೆಲಸದಲ್ಲಿ ನೀವು ಹಣವನ್ನು ಗಳಿಸುವ ಉತ್ತಮ ಅವಕಾಶಗಳಿವೆ.

ಕುಂಭ ರಾಶಿ
ಇನ್ನು ಕುಂಭ ರಾಶಿಯವರಿಗೂ ಅಷ್ಟೇ ವರ್ಷದ ಆರಂಭದಲ್ಲಿ ಸ್ವಲ್ಪ ಏರಳಿತ ಕಂಡು ಬಂದರೂ ನಂತರ ಈ ವರ್ಷ ಪೂರ್ತಿ ಆರ್ಥಿಕ ವಿಷಯದಲ್ಲಿ ತುಂಬಾನೇ ಚೆನ್ನಾಗಿರುತ್ತದೆ. ನಿಮಗೆ ಹಣ ಉಳಿತಾಯ ಮಾಡಲು ಸಾಧ್ಯವಾಗುವುದು.