For Quick Alerts
ALLOW NOTIFICATIONS  
For Daily Alerts

ಕನ್ನಡ ರಾಜ್ಯೋತ್ಸವ ವಿಶೇಷ : ಕನ್ನಡ ನಾಡಿನ ಕುರಿತ ಅದ್ಬುತ ಸಾಹಿತ್ಯಗಳು

|

Kannada Rajyotsava Songs Lyrics: ನವೆಂಬರ್ 1 ಬಂತೆಂದರೆ ಸಾಕು ಕನ್ನಡಿಗರಲ್ಲಿ ಹಬ್ಬದ ಸಡಗರ ಗರಿ ಗೆದರುವುದು. ಈ ವರ್ಷ ನಾವೆಲ್ಲಾ 65ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿದ್ದೇವೆ. ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಕರ್ನಾಟಕ ಎಕೀಕರಣವಾಗಿರಲಿಲ್ಲ. ಮೈಸೂರು ಪ್ರಾಂತ್ಯ ಎಂಬ ಹೆಸರಿನ ಮೂಲಕ ಕರೆಯಲ್ಪಡುತ್ತಿದ್ದ ಕರ್ನಾಟಕ ಹಲವು ವಿಭಾಗಗಳಾಗಿ ಚದುರಿ ಹೋಗಿತ್ತು. ಚದುರಿದ್ದ ನಾಡನ್ನು 1956ರ ನವೆಂಬರ್ 1ರಂದು "ಕರ್ನಾಟಕ'' ಎಂದು ಮರುನಾಮಕರಣ ಮಾಡಲಾಯಿತು. ಅಂದಿನಿಂದ ಪ್ರತಿ ವರ್ಷ ನವೆಂಬರ್ 1ರಂದು ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ.

ಕನ್ನಡ ರಾಜ್ಯೋತ್ಸವ 2019: ಇತಿಹಾಸ, ಮಹತ್ವ ಮತ್ತು ಆಚರಣೆ

Kannada Rajyotsava

ಕನ್ನಡ ನಾಡು ಚೆಂದ, ಕನ್ನಡ ಭಾಷೆ ಇನ್ನೂ ಚೆಂದ. ಈ ನಾಡು, ಭಾಷೆಯನ್ನು ಹೊಗಳಿ ಹಲವಾರು ಕವಿಗಳು ನೂರಾರು ಸಾಹಿತ್ಯವನ್ನು ರಚಿಸಿದ್ದಾರೆ. ಇಲ್ಲಿ ನಾವು ಕನ್ನಡ ರಾಜ್ಯೋತ್ಸವ ಪ್ರಯುಕ್ತ ತುಂಬಾ ಪ್ರಸಿದ್ಧವಾಗಿರುವ ಸಾಹಿತ್ಯಗಳನ್ನು ನೀಡಿದ್ದೇವೆ ನೋಡಿ.

1. ಕುವೆಂಪು

1. ಕುವೆಂಪು

ಎಲ್ಲಾದರು ಇರು ಎಂತಾದರು ಇರು ||೨||

ಎಂದೆಂದಿಗೂ ನೀ ಕನ್ನಡವಾಗಿರು

ಕನ್ನಡವೇ ಸತ್ಯ, ಕನ್ನಡವೇ ನಿತ್ಯ

ಕನ್ನಡ ಗೋವಿನ ಓ ಮುದ್ದಿನ ಕರು ||೨||

ಕನ್ನಡತನ ಒಂದಿದ್ದರೆ, ಅಮ್ಮಗೆ ಕಲ್ಪತರು

ಕನ್ನಡವೇ ಸತ್ಯ, ಕನ್ನಡವೇ ನಿತ್ಯ

ಎಲ್ಲಾದರು ಇರು ಎಂತಾದರು ಇರು

ಎಂದೆಂದಿಗೂ ನೀ ಕನ್ನಡವಾಗಿರು

ನೀ ಮೆಟ್ಟುವ ನೆಲ, ಅದೆ ಕರ್ನಾಟಕ

ನೀನೇರುವ ಮಲೆ ಸಹ್ಯಾದ್ರಿ

ನೀ ಮೆಟ್ಟುವ ನೆಲ, ಅದೆ ಕರ್ನಾಟಕ

ನೀನೇರುವ ಮಲೆ ಸಹ್ಯಾದ್ರಿ

ನೀ ಮುಟ್ಟುವ ಮರ ಶ್ರೀಗಂಧದ ಮರ ||೨||

ನೀ ಕುಡಿಯುವ ನೀರ್ ಕಾವೇರಿ

ಪಂಪನ ಓದುವ ನಿನ್ನಾ ನಾಲಗೆ

ಕನ್ನಡವೇ ಸತ್ಯ

ಕುಮಾರವ್ಯಾಸನ ಆಲಿಪ ಕಿವಿಯದು

ಕನ್ನಡವೇ ನಿತ್ಯ

ಎಲ್ಲಾದರು ಇರು ಎಂತಾದರು ಇರು

ಎಂದೆಂದಿಗೂ ನೀ ಕನ್ನಡವಾಗಿರು

ಹರಿಹರ ರಾಘವರಿಗೆ ಎರಗುವ ಮನ

ಹಾಳಾಗಿಹ ಹಂಪೆಗೆ ಕೊರಗುವ ಮನ

ಹರಿಹರ ರಾಘವರಿಗೆ ಎರಗುವ ಮನ

ಹಾಳಾಗಿಹ ಹಂಪೆಗೆ ಕೊರಗುವ ಮನ

ಬೆಳ್ಗೊಳ ಬೇಲೂರ್‍ಗಳ ನೆನೆಯುವ ಮನ

ಮಲೆನಾಡಿಗೆ ಹೊಂಪುಳಿ ಹೋಗುವ ಮನ

ಕಾಜಾಣಕೆ ಗಿಳಿ, ಕೋಗಿಲೆ ಇಂಪಿಗೆ

ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ

ಕಾಜಾಣಕೆ ಗಿಳಿ, ಕೋಗಿಲೆ ಇಂಪಿಗೆ

ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ

ಮಾವಿನ ಹೊಂಗೆಯ ತಳಿರಿನ ತಂಪಿಗೆ

ರೋಮಾಂಚನಗೊಳುವಾ ತನು ಮನ

ಕನ್ನಡವೇ ಸತ್ಯ, ಕನ್ನಡವೇ ನಿತ್ಯ

ಎಲ್ಲಾದರು ಇರು ಎಂತಾದರು ಇರು

ಎಂದೆಂದಿಗು ನೀ ಕನ್ನಡವಾಗಿರು

ಎಲ್ಲಿದ್ದರೆ ಏನ್ ಎಂತಿದ್ದರೆ ಏನ್

ಎಲ್ಲಿದ್ದರೆ ಏನ್ ಎಂತಿದ್ದರೆ ಏನ್

ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ

ಅನ್ಯವೆನಲದೆ ಮಿಥ್ಯ

2. ಡಿಎಸ್‌ ಕರ್ಕಿ ( Hacchevu Kannadada Deepa Lyrics)

2. ಡಿಎಸ್‌ ಕರ್ಕಿ ( Hacchevu Kannadada Deepa Lyrics)

ಹಚ್ಚೇವು ಕನ್ನಡದ ದೀಪ

ಕರುನಾಡ ದೀಪ ಸಿರಿನುಡಿಯ ದೀಪ

ಒಲವೆತ್ತಿ ತೋರುವ ದೀಪ || ಪ ||

ಬಹುದಿನಗಳಿಂದ ಮೈಮರೆವೆಯಿಂದ

ಕೂಡಿರುವ ಕೊಳೆಯ ಕೊಚ್ಚೇವು

ಎಲ್ಲೆಲ್ಲಿ ಕನ್ನಡದ ಕಂಪು ಸೂಸ-

ಲಲ್ಲಲ್ಲಿ ಕರಣ ಚಾಚೇವು

ನಡುನಾಡೆ ಇರಲಿ, ಗಡಿನಾಡೆ ಇರಲಿ

ಕನ್ನಡದ ಕಳೆಯ ಕೆಚ್ಚೇವು

ಮರೆತೇವು ಮರವ ತೆರೆದೇವು ಮನವ

ಎರೆದೇವು ಒಲವ - ಹಿಡಿ ನೆನಪ

ನರನರವನೆಲ್ಲ ಹುರಿಗೊಳಿಸಿ ಹೊಸೆದು

ಹಚ್ಚೇವು ಕನ್ನಡದ ದೀಪ.|| 1 ||

ಕಲ್ಪನೆಯ ಕಣ್ಣು ಹರಿವನಕ ಸಾಲು

ದೀಪಗಳ ಬೆಳಕ ಬೀರೇವು

ಹಚ್ಚಿರುವ ದೀಪದಲಿ ತಾಯರೂಪ

ಅಚ್ಚಳಿಯದಂತೆ ತೋರೇವು

ಒಡಲೊಡಲ ಕೆಚ್ಚಿನ ಕಿಡಿಗಳನ್ನು

ಗಡಿನಾಡಿನಾಚೆ ತೂರೇವು

ಹೊಮ್ಮಿರಲು ಪ್ರೀತಿ ಎಲ್ಲಿನದು ಭೀತಿ?

ನಾಡೊಲವೆ ನೀತಿ ಹಿಡಿನೆನಪ

ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ || ೨ ||

ಕರುನಾಡಿನರಿವ ನೆರೆತೀವಿ ಭಾವ

ದಲಿ ಜೀವನಾಡಿ ನುದಿಸೇವು

ತೆರೆತೆರೆದ ಕಣ್ಣಿನಲಿ ನೇಹವೆರೆದು

ನವ ಜ್ಯೋತಿಯನ್ನೆ ಮುಡಿಸೇವು

ನಮ್ಮನ್ನವುಂಡು ಅನ್ಯಾಯಗೈಯು-

ವಂಥವರ ಹುಚ್ಚ ಬಿಡಿಸೇವು

ಇಹುದೆಮಗೆ ಛಲವು, ಕನ್ನಡಿಗರ ಬಲವು

ಕನ್ನಡದ ಒಲವು - ಹಿಡಿ ನೆನವು

ನಮ್ಮೆದೆಯ ಕೆಚ್ಚುನೆಚ್ಚುಗಳನೂಡಿ

ಹಚ್ಚೇವು ಕನ್ನಡದ ದೀಪ || ೩ ||

ನಮ್ಮವರು ಗಳಿಸಿದ ಹೆಸರುಳಿಸಲು

ಎಲ್ಲಾರು ಒಂದುಗೂಡೇವು

ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ

ಮಾತೆಯನು ಪೂಜೆಮಾಡೇವು

ನಮ್ಮುಸಿರು ತೀಡುವೀ ನಾಡಿನಲ್ಲಿ

ಮಾಂಗಲ್ಯಗೀತ ಹಾಡೇವು

ತೊರೆದೇವು ಮರುಳ ಕಡೆದೇವು ಇರುಳ

ಪಡೆದೇವು ತಿರುಳ ಹಿರಿನೆನಪಾ

ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ

ಹಚ್ಚೇವು ಕನ್ನಡದ ದೀಪ|| ೪ ||

3. ಕುವೆಂಪು (Barisu Kannada Dindima Lyrics)

3. ಕುವೆಂಪು (Barisu Kannada Dindima Lyrics)

ಬಾರಿಸು ಕನ್ನಡ ಡಿಂಡಿಮವ

ಓ ಕರ್ನಾಟಕ ಹೃದಯ ಶಿವ

ಬಾರಿಸು ಕನ್ನಡ ಡಿಂಡಿಮವ

ಸತ್ತಂತಿಹರನು ಬಡಿದೆಚ್ಚರಿಸು

ಕಚ್ಚಾಡುವರನು ಕೂಡಿಸಿ ಒಲಿಸು

ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು

ಒಟ್ಟಿಗೆ ಬಾಳುವ ತೆರದಲಿ ಹರಸು

ಬಾರಿಸು ಕನ್ನಡ ಡಿಂಡಿಮವ ||

ಚೈತ ಶಿವೇತರ ಕೃತಿ ಕೃತಿಯಲ್ಲಿ

ಮೂಡಲಿ ಮಂಗಳ ಮತಿ ಮತಿಯಲ್ಲಿ

ಕವಿ ಋಷಿ ಸಂತರ ಆದರ್ಶದಲಿ

ಸರ್ವೋದಯವಾಗಲಿ ಸರ್ವರಲಿ

ಬಾರಿಸು ಕನ್ನಡ ಡಿಂಡಿಮವ

ಹುಯಿಲಗೋಳ ನಾರಾಯಣರು

ಹುಯಿಲಗೋಳ ನಾರಾಯಣರು

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು || ಪ ||

ರಾಜನ್ಯರಿಪು ಪರಶುರಾಮನಮ್ಮನ ನಾಡು

ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು

ಓಜೆಯಿಂ ಮೆರೆದರಸುಗಳ ಸಾಹಸದ ಸೂಡು

ತೇಜವನು ನಮಗೀವ ವೀರವೃಂದದ ಬೀಡು

ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು

ಜಕ್ಕಣನ ಶಿಲ್ಪ ಕಲೆಯಚ್ಚರಿಯ ಕರುಗೋಡು

ಚೊಕ್ಕ ಮತಗಳ ಸಾರಿದವರಿಗಿದು ನೆಲೆವೀಡು

ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು

ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು

ಕಾವೇರಿ ಗೋದೆಯರು ಮೈದೊಳೆವ ನಲುನಾಡು

ಆವಗಂ ಸ್ಫೂರ್ತಿಸುವ ಕಬ್ಬಿಗರ ನಡೆಮಾಡು

ಕಾವ ಗದುಗಿನ ವೀರನಾರಾಯಣನ ಬೀಡು.

ಉದಯವಾಯಿತು ನಮ್ಮ ಚೆಲುವ ನಮ್ಮ ಕನ್ನಡ ನಾಡು

- ಕೆ. ಎಸ್. ನಿಸಾರ್ ಅಹಮದ್ (23 Jogada Siri Belakinalli Song Lyrics in Kannada)

- ಕೆ. ಎಸ್. ನಿಸಾರ್ ಅಹಮದ್ (23 Jogada Siri Belakinalli Song Lyrics in Kannada)

ನಿತ್ಯೋತ್ಸವ

ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ,

ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ,

ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ

ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ...

ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ,

ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ,

ಓಲೆ ಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲಿ

ನಿತ್ಯೋತ್ಸವ ತಾಯಿ, ನಿತ್ಯೋತ್ಸವ ನಿನಗೆ....

ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ,

ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ,

ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ

ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು… ( Huttidare Kannada Nadalli Huttabeku Lyrics in Kannada)

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು… ( Huttidare Kannada Nadalli Huttabeku Lyrics in Kannada)

ಸಂಗೀತ:ಹಂಸಲೇಖ

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು...

ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು...

ಬದುಕಿದು ಜಟಕಾ ಬಂಡಿ..

ಇದು ವಿಧಿಯೋಡಿಸುವ ಬಂಡಿ...

ಬದುಕಿದು ಜಟಕಾ ಬಂಡಿ..

ವಿಧಿ ಅಲೆದಡಿಸುವ ಬಂಡಿ...

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು...

ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು...

ಕಾಶೀಲಿ ಸ್ನಾನ ಮಾಡು..

ಕಾಶ್ಮೀರ ಸುತ್ತಿ ನೋಡು...

ಜೋಗದ ಗುಂಡಿ ಒಡೆಯ

ನಾನೆಂದೂ ಕೂಗಿ ಹಾಡು...

ಅಜಂತಾ ಎಲ್ಲೋರನ

ಬಾಳಲ್ಲಿ ಒಮ್ಮೆ ನೋಡು...

ಬಾದಾಮಿ ಐಹೊಳೆಯ

ಚಂದಾ ನಾ ತೂಕ ಮಾಡು...

ಕಲಿಯೋಕೆ ಕೋಟಿ ಬಾಷೆ

ಆಡೋಕೆ ಒಂದೇ ಬಾಷೆ...

ಕನ್ನಡ ಕನ್ನಡ

ಕಸ್ತೂರಿ ಕನ್ನಡಾ...

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು...

ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು...

ಬದುಕಿದು ಜಟಕಾ ಬಂಡಿ..

ಇದು ವಿಧಿಯೋಡಿಸುವ ಬಂಡಿ...

ಬದುಕಿದು ಜಾತಕ ಬಂಡಿ..

ವಿಧಿ ಗುರಿ ತೋರಿಸುವ ಬಂಡಿ...

ದ್ಯಾನಕ್ಕೆ ಭೂಮಿ ಇದು..

ಪ್ರೇಮಕ್ಕೆ ಸ್ವರ್ಗ ಇದು...

ಸ್ನೇಹಕ್ಕೆ ಶಾಲೆ ಇದು..

ಜ್ಞಾನಕ್ಕೆ ಪೀಠ ಇದು...

ಕಾಯಕ್ಕೆ ಕಲ್ಪ ಇದು..

ಶಿಲ್ಪಕ್ಕೆ ಕಲ್ಪ ಇದು...

ನಾಟ್ಯಕ್ಕೆ ನಾಡಿ ಇದು..

ನಾದಾಂತರಂಗವಿದು...

ಕುವೆಂಪು ಬೇಂದ್ರೆ ಇಂದ..

ಕಾರಂತ ಮಾಸ್ತಿ ಇಂದ...

ಧನ್ಯವೀ ಕನ್ನಡ..

ಕಾಗಿನ ಕನ್ನಡಾ...

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು...

ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು...

ಬದುಕಿದು ಜಟಕಾ ಬಂಡಿ..

ಇದು ವಿಧಿಯೋಡಿಸುವ ಬಂಡಿ...

ಬದುಕಿದು ಜಟಕಾ ಬಂಡಿ..

ವಿಧಿ ಧದ ಸೇರಿಸುವ ಬಂಡಿ...

ಬಾಳಿನ ಬೆನ್ನು ಹತ್ತಿ..

ನೂರಾರು ಊರು ಸುತ್ತಿ...

ಏನೇನೋ ಕಂಡ ಮೇಲೂ..

ನಮ್ಮೂರೇ ನಮಗೆ ಮೇಲೂ...

ಕೈಲಾಸಂ ಕಂಡ ನಮಗೆ..

ಕೈಲಾಸ ಯಾಕೆ ಬೇಕು...

ದಾಸರ ಕಂಡ ನಮಗೆ..

ವೈಕುಂಟ ಯಾಕೆ ಬೇಕು...

ಮುಂದಿನ ನನ್ನ ಜನ್ಮ..

ಬರದಿಟ್ಟನಂತೆ ಬ್ರಹ್ಮ...

ಇಲ್ಲಿಯೇ ಇಲ್ಲಿಯೇ

ಎಂದಿಗೂ ನಾನ್ ಇಲ್ಲಿಯೇ...

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು...

ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು...

ಬದುಕಿದು ಜಟಕಾ ಬಂಡಿ.. ಇದು ವಿಧಿಯೋಡಿಸುವ ಬಂಡಿ...

ಬದುಕಿದು ಜಟಕಾ ಬಂಡಿ.. ವಿಧಿ ದಡ ಸೇರಿಸುವ ಬಂಡಿ...

English summary

Kannada Rajyotsava Songs Lyrics : Famous Kannada Rajyotsava Songs Lyrics in Kannada

Kannada Rajyotsava, also known as Karnataka Formation Day, is celebrated on 1 November of every year. On this special day we have listes 5 famous kannada poem. Have a look.
X
Desktop Bottom Promotion