For Quick Alerts
ALLOW NOTIFICATIONS  
For Daily Alerts

ಹೀಗೆ ಮಾಡಿದರೆ ದೇಶದಲ್ಲಿ ಭ್ರಷ್ಟಾಚಾರಾನೇ ಇರಲ್ಲ!

|

ಭ್ರಷ್ಟಾಚಾರ ಎನ್ನುವುದು ಸರ್ಕಾರಿ ಇಲಾಖೆಗಳ ನರನಾಡಿಗಳಲ್ಲಿ ತುಂಬಿ ಹೋಗಿದೆ. ಎಲ್ಲಿ ಹೋದರೂ ಸಣ್ಣ ಕೆಲಸ ಮಾಡಬೇಕಾದರೂ ಲಂಚ ಕೊಡಬೇಕಾದ ಪರಿಸ್ಥಿತಿ. ಇಷ್ಟು ಮಾತ್ರವಲ್ಲದೆ, ಅಧಿಕಾರಿಗಳು ಹಾಗೂ ರಾಜಕಾರಣಿಗಳು ಸೇರಿಕೊಂಡು ಸರ್ಕಾರಿ ಖಜಾನೆಯನ್ನೇ ಲೂಟಿ ಹೊಡೆಯುವಂತಹ ಕೆಲಸ ಮಾಡುತ್ತಲಿರುವರು. ಜನರಲ್ಲಿ ಜಾಗೃತಿ ಮೂಡಿ ಭ್ರಷ್ಟಾಚಾರದ ವಿರುದ್ಧ ಹಲವಾರು ಆಂದೋಲನಗಳು ನಡೆಯುತ್ತಲಿದ್ದರೂ ಭ್ರಷ್ಟಾಚಾರ ಮಾತ್ರ ಕಡಿಮೆ ಆಗುತ್ತಿಲ್ಲ. ಇದು ನಮ್ಮ ದೇಶದ ಸಮಸ್ಯೆ ಮಾತ್ರವಲ್ಲದೆ, ಅಭಿವೃದ್ಧಿ ಹೊಂದಿರುವ ದೇಶಗಳಾಗಿರುವ ಅಮೆರಿಕಾದಲ್ಲೂ ಭ್ರಷ್ಟಾಚಾರವು ಇದೆ. ಇದೇ ಕಾರಣಕ್ಕಾಗಿ ಡಿಸೆಂಬರ್ 9ನ್ನು ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನಾಗಿ 2005ರಿಂದ ಆಚರಿಸಿಕೊಂಡು ಬರಲಾಗುತ್ತಿದೆ.

International Anti-Corruption Day

ಡಿಸೆಂಬರ್ 9ರಂದು ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನಾಗಿ ಆಚರಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿ ಅಕ್ಟೋಬರ್ 31, 2003ರಲ್ಲಿ ಪ್ರಸ್ತಾವ ಮಂಡಿಸಲಾಯಿತು. ಭ್ರಷ್ಟಾಚಾರ ವಿರುದ್ಧ ಜಾಗೃತಿ ಮತ್ತು ಅದರ ವಿರುದ್ಧ ಹೋರಾಟ ಹಾಗೂ ತಡೆ ಇದರ ಪ್ರಮುಖ ಉದ್ದೇಶವಾಗಿದೆ. 2005ರ ಬಳಿಕ ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವು ಆಚರಣೆಗೆ ಬಂತು.

ಭ್ರಷ್ಟಾಚಾರ ವಿರೋಧಿ ದಿನ: ಧ್ಯೇಯ

ಭ್ರಷ್ಟಾಚಾರ ವಿರೋಧಿ ದಿನ: ಧ್ಯೇಯ

ಈ ದಿನದ ಧ್ಯೇಯ`ಭ್ರಷ್ಟಾಚಾರ ವಿರುದ್ಧ ಒಂದಾಗುವುದು' ಸ್ಥಿರ ಅಭಿವೃದ್ಧಿಯ ಗುರಿಯನ್ನು ಸಾಧಿಸಲು ಭ್ರಷ್ಟಾಚಾರವು ದೊಡ್ಡ ಮಟ್ಟದಲ್ಲಿ ಹಿನ್ನಡೆಯನ್ನು ಉಂಟು ಮಾಡುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಭ್ರಷ್ಟಾಚಾರ ನಿಗ್ರಹ ಮಾಡಬೇಕು ಎಂದು ಹಲವರು ಸಾಕಷ್ಟು ಹೋರಾಟ ನಡೆಸುತ್ತಿದ್ದಾರೆ, ಆದರೆ ಇದನ್ನು ಎಲ್ಲಿಂದ ಆರಂಭಿಸಬೇಕು ಎಂದು ತಿಳಿದಿರುವುದಿಲ್ಲ. ಭ್ರಷ್ಟಾಚಾರ ನಿಗ್ರಹವನ್ನು ಹೇಗೆಲ್ಲಾ ಮಾಡಬಹುದು ಹಾಗೂ ಇದರ ಪಾರದರ್ಶಕತೆ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

1. ಹಣವನ್ನು ಹಿಂಬಾಲಿಸಿ

1. ಹಣವನ್ನು ಹಿಂಬಾಲಿಸಿ

ಸರ್ಕಾರವು ಕೆಲವೊಂದು ಯೋಜನೆಗೆಂದು ಸಾವಿರಾರು ಕೋಟಿ ಅನುದಾನ ನೀಡುವುದು ಮತ್ತು ಇಲ್ಲಿ ಭ್ರಷ್ಟಾಚಾರ ಉಂಟಾಗುವಂತಹ ಸಾಧ್ಯತೆಯು ಹೆಚ್ಚಾಗಿರುವುದು. ಸರ್ಕಾರಿ ಯೋಜನೆಗಳ ಬಗ್ಗೆ ಗಮನವಿಡಬೇಕು, ಫಿಲಿಪೈನ್ ನಲ್ಲಿ ತೆರಿಗೆ ಹಣ ಹೇಗೆ ವಿನಿಯೋಗಿಸಲಾಗುತ್ತದೆ ಎಂದು ನೋಡಿದರೆ ನಿಮಗೆ ಈ ಬಗ್ಗೆ ಹೆಚ್ಚಿನ ಮಾಹಿತಿಗೆ ನೆರವಾಗುವುದು. ದೇಶದಾದ್ಯಂತ ಸ್ಥಳೀಯವಾಗಿ ವಿವಿಧ ಸರ್ಕಾರಿ ಸಂಸ್ಥೆಗಳು ನೇಮಿಸಿರುವಂತಹ ಹಲವಾರು ಸಮಿತಿಗಳಲ್ಲಿ ಭಾಗಿಯಾಗಬಹುದು. ಇದರಿಂದ ಸರ್ಕಾರಿ ಯೋಜನೆಗಳಲ್ಲಿ ಆಗುತ್ತಿರುವಂತಹ ಭ್ರಷ್ಟಾಚಾರದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು ನಿಮಗೆ ನೆರವಾಗುವುದು.

2. ಸರಬರಾಜು ಲೆಕ್ಕ ಮಾಡಿ

2. ಸರಬರಾಜು ಲೆಕ್ಕ ಮಾಡಿ

ಹೆಚ್ಚಾಗಿ ಸರ್ಕಾರಿ ಶಾಲೆಗಳಿಗೆ ಸರ್ಕಾರದಿಂದ ಪಠ್ಯ ಪುಸ್ತಕ, ಸಂಶೋಧನಾ ಸಲಕರಣೆಗಳು ಅಥವಾ ತರಗತಿಗಳಿಗೆ ಬೇಕಾಗಿರುವ ಕೆಲವೊಂದು ಸಾಮಗ್ರಿಗಳನ್ನು ಪೂರೈಕೆ ಮಾಡಲಾಗುತ್ತದೆ. ಇದನ್ನು ಗಮನಿಸಲು ದೊಡ್ಡಮಟ್ಟದ ಲೆಕ್ಕ ಪರಿಶೋಧಕರು ಆಗಬೇಕಾಗಿಲ್ಲ. ಇದರಲ್ಲಿ ಮುಖ್ಯವಾಗಿ ಭದ್ರತೆ ಹಾಗೂ ಪಾರದರ್ಶಕತೆ ಬೇಕಾಗಿರುವುದು. ಇಲ್ಲಿ ನೀವು ಸರ್ಕಾರವು ಸರಬರಾಜು ಮಾಡಿದಂತಹ ಸಾಮಗ್ರಿಗಳ ಬಗ್ಗೆ ಲೆಕ್ಕ ಹಾಕಿದರೆ ಆಗ ಭ್ರಷ್ಟಾಚಾರವಿದ್ದರೆ ತಿಳಿದುಬರುವುದು.

3. ತಂತ್ರಜ್ಞಾನದ ನೆರವು

3. ತಂತ್ರಜ್ಞಾನದ ನೆರವು

ನಿಮಗೆ ಹೆಚ್ಚಾಗಿ ತಂತ್ರಜ್ಞಾನದ ಬಗ್ಗೆ ತಿಳಿದಿದ್ದರೆ ಆಗ ನೀವು ಭ್ರಷ್ಟಾಚಾರದ ಬಗ್ಗೆ ಒಂದು ವೆಬ್ ಸೈಟ್ ಅನ್ನು ತಯಾರಿಸಬಹುದು ಮತ್ತು ಅದರ ಬಗ್ಗೆ ದಾಖಲೆಗಳನ್ನು ನೀಡಬಹುದು. ಇದಕ್ಕಾಗಿ ಮೊಬೈಲ್ ಆಪ್ ಕೂಡ ತಯಾರಿಸಿಕೊಳ್ಳಬಹುದು. ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ನೀವು ಹಂಚಿಕೊಂಡರೆ ಆಗ ಭ್ರಷ್ಟಾಚಾರ ನಿಗ್ರಹಕ್ಕೆ ಅದು ಅತೀ ಪರಿಣಾಮಕಾರಿ ಆಗಿರುವುದು.

4. ಕಾಮಿಕ್ಸ್ ಮತ್ತು ಕಾರ್ಟೂನ್

4. ಕಾಮಿಕ್ಸ್ ಮತ್ತು ಕಾರ್ಟೂನ್

ಭ್ರಷ್ಟಾಚಾರ ವಿರೋಧಿ ಹೇಳಿಕೆ ನೀಡಲು ಕಾಮಿಕ್ಸ್ ತುಂಬಾ ಪರಿಣಾಮಕಾರಿ ಆಗಿರುವುದು. ಚಿತ್ರಗಳು ಮತ್ತು ಕೆಲವು ಪರಿಣಾಮಕಾರಿ ಬರಹವು ತುಂಬಾ ನೆರವಿಗೆ ಬರುವುದು. ಕಾಮಿಕ್ಸ್ ಮತ್ತು ಕಾರ್ಟೂನ್ ಗಳು ಜನರಿಗೆ ಬೇಗನೆ ಅರ್ಥ ಕೂಡ ಆಗುವುದು. ಇದಕ್ಕಾಗಿ ಒಂದು ಪೆನ್ ಮತ್ತು ಪೇಪರ್ ಬೇಕಷ್ಟೇ.

5. ಕ್ರೀಡೆ

5. ಕ್ರೀಡೆ

ನಿಮ್ಮ ನೆಚ್ಚಿನ ಕ್ರೀಡೆ ಯಾವುದು? ಭ್ರಷ್ಟಾಚಾರ ವಿರೋಧಿ ಓಟ ಮತ್ತು ಕೆಲವೊಂದು ಪಂದ್ಯಗಳನ್ನು ಆಯೋಜಿಸುವ ಮೂಲಕವಾಗಿ ಜನರಲ್ಲಿ ಇದರ ಬಗ್ಗೆ ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿಸಬಹುದಾಗಿದೆ. ಕ್ರೀಡೆಯು ಯುವ ಜನರಿಗೆ ಇಷ್ಟವಾಗಿರುವ ಕಾರಣದಿಂದ ಅವರು ಕೂಡ ಇದನ್ನು ಬೇಗನೆ ಒಪ್ಪಿಕೊಳ್ಳುವರು.

6. ಯುವ ಸಮೂಹ

6. ಯುವ ಸಮೂಹ

ಭ್ರಷ್ಟಾಚಾರ ವಿರುದ್ಧ ಧ್ವನಿ ಎತ್ತುವಂತಹ ಯುವ ಸಮೂಹವು ಸ್ಥಳೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ನಿಮಗೆ ಕಾಣಲು ಸಿಗುವುದು. ಪ್ರತಿಯೊಂದು ಸಮೂಹಕ್ಕೂ ತನ್ನದೇ ಆಗಿರುವಂತಹ ಗುರಿ ಇರುವುದು. ಆದರೆ ಇವರೆಲ್ಲರೂ ಭ್ರಷ್ಟಾಚಾರದ ಬಗ್ಗೆ ಮುಕ್ತವಾಗಿ ಮಾತನಾಡುವರು ಮತ್ತು ಸಮಾಜದಲ್ಲಿ ಇದರಿಂದ ಆಗುವಂತಹ ಅಡ್ಡ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವರು. ಇಂತಹ ಸಮೂಹಗಳು ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿ ಒಂದೇ ವೇದಿಕೆಯಡಿ ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುವುದು.

7. ಪ್ರತಿಭಟನೆ

7. ಪ್ರತಿಭಟನೆ

ಪ್ರತಿಭಟನೆ ಎನ್ನುವುದು ಎಲ್ಲದರ ವಿರುದ್ಧ ಗಮನ ಸೆಳೆಯಲು ಅತ್ಯುತ್ತಮವಾದ ವಿಧಾನವಾಗಿದೆ. ಭ್ರಷ್ಟಾಚಾರ ವಿರುದ್ಧ ಧ್ವನಿ ಎತ್ತಲು ದೊಡ್ಡ ಮಟ್ಟದಲ್ಲಿ ಬಂದು ಹೋರಾಟ ನಡೆಸಬೇಕಾಗಿದೆ. ಪ್ರತಿಭಟನೆ, ಧರಣಿ ಇತ್ಯಾದಿಗಳು ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸಲು ಅತ್ಯುತ್ತಮ ವೇದಿಕೆಯಾಗಿದೆ.

8. ದೂರು

8. ದೂರು

ಸಾರ್ವಜನಿಕರ ಸಹಿ ಸಂಗ್ರಹ ಮಾಡಿಕೊಂಡು ಭ್ರಷ್ಟಾಚಾರ ವಿರುದ್ಧ ದೂರು ನೀಡುವುದು. ಇದರ ಬಗ್ಗೆ ಸರ್ಕಾರಿ ಅಧಿಕಾರಿಗಳು ಮತ್ತು ಶಾಲಾ ಅಧಿಕಾರಿಗಳಿಗೆ ದೂರು ನೀಡಿದರೆ ಆಗ ಅಲ್ಲಿ ನಡೆಯುವಂತಹ ಭ್ರಷ್ಟಾಚಾರವು ಹತೋಟಿಗೆ ಬರುವುದು.

9. ಚುನಾವಣೆ ಸಂದರ್ಭದಲ್ಲಿ

9. ಚುನಾವಣೆ ಸಂದರ್ಭದಲ್ಲಿ

ರಾಜಕಾರಣಿಗಳು ಪ್ರತಿಯೊಂದು ಚುನಾವಣೆ ಬಂದ ವೇಳೆ ಹಲವಾರು ರೀತಿಯ ಭರವಸೆಗಳನ್ನು ನೀಡುವರು ಮತ್ತು ಇದನ್ನು ಈಡೇರಿಸುವುದಾಗಿ ಹೇಳುವರು. ಆದರೆ ಅದು ಐದು ವರ್ಷ ಕಳೆದರೂ ಈಡೇರುವುದೇ ಇಲ್ಲ. ಹೀಗಾಗಿ ಚುನಾವಣಾ ಸಮಯದಲ್ಲಿ ರಾಜಕಾರಣಿಗಳು ಪ್ರಚಾರಕ್ಕೆ ಬರುವ ವೇಳೆ ನೀವು ಅವರ ಭರವಸೆಗಳ ಬಗ್ಗೆ ಪ್ರಶ್ನೆ ಮಾಡಬಹುದು. ಸ್ಥಳೀಯ ನಾಯಕರಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಸಹಿ ಮಾಡುವಂತೆ ಹೇಳಬಹುದು ಅಥವಾ ಪ್ರತಿಜ್ಞೆ ಮಾಡಿಸಬಹುದು. ಚುನಾವಣೆ ಸಂದರ್ಭದಲ್ಲಿ ಹಣಕ್ಕಾಗಿ ಮತ ಚಲಾಯಿಸುವುದು ಮತ್ತು ಪಡೆಯುವುದು ಕೂಡ ಭ್ರಷ್ಟಾಚಾರದ ಒಂದು ಭಾಗವಾಗಿದೆ. ಮತದಾರರು ಕೂಡ ತಮ್ಮ ಹಕ್ಕನ್ನು ಹಣಕ್ಕಾಗಿ ಮಾರಬಾರದು.

10. ಕ್ರೌಡ್ ಸೋರ್ಸಿಂಗ್ ಚುನಾವಣಾ ಮೇಲ್ವಿಚಾರಣೆ

10. ಕ್ರೌಡ್ ಸೋರ್ಸಿಂಗ್ ಚುನಾವಣಾ ಮೇಲ್ವಿಚಾರಣೆ

ಟ್ವೀಟ್, ಟೆಕ್ಸ್ಟ್, ಈ ಮೇಲ್ ಇತ್ಯಾದಿಗಳ ಮೂಲಕ ಕೆಲವೊಂದು ಸಂದರ್ಭದಲ್ಲಿ ಚುನಾವಣೆಗಳ ವೇಳೆ ನಡೆಯುತ್ತಿರುವಂತಹ ಭ್ರಷ್ಟಾಚಾರದ ಬಗ್ಗೆ ಜನರ ಗಮನ ಸೆಳೆಯಬಹುದು. ದೇಶದಲ್ಲಿ ನಡೆಯುತ್ತಿರುವ ಚುನಾವಣಾ ಭ್ರಷ್ಟಾಚಾರದ ಬಗ್ಗೆ ನೀವು ಕ್ರೌಡ್ ಸೋರ್ಸಿಂಗ್ ಮೂಲಕ ಜನರಿಗೆ ತಿಳಿಸಬಹುದು. ನಿಮ್ಮ ಸಮೂಹದಲ್ಲಿ ಇರುವಂತಹ ಜನರು ಏನು ಮಾಡುತ್ತಿದ್ದಾರೆ ಎಂದು ತಿಳಿಯಲು ನೀವು ಕೆಲವು ಮಾಹಿತಿಗಳನ್ನು ಆನ್ ಲೈನ್ ಮ್ಯಾಪ್ ಮೂಲಕವೂ ನೀಡಬಹುದು.

ಈ ಎಲ್ಲಾ ಸಲಹೆಗಳೂ ತುಂಬಾ ನೆರವಿಗೆ ಬರಲಿದೆ ಎಂದು ನಾವು ಭಾವಿಸಿದ್ದೇವೆ. ಭ್ರಷ್ಟಾಚಾರ ನಿಗ್ರಹದ ಬಗ್ಗೆ ನಿಮಗೆ ಇನ್ನಷ್ಟು ಮಾಹಿತಿ ಇದ್ದರೆ ಅದನ್ನು ಹಂಚಿಕೊಳ್ಳಲು ಹಿಂಜರಿಯಬೇಡಿ. ಅಂತಿಮವಾಗಿ ಹೇಳುಬೇಕಾದ ವಿಚಾರವೆಂದರೆ ಯಾವಾಗಲೂ ಭ್ರಷ್ಟಾಚಾರದಲ್ಲಿ ತೊಡಗಿರುವವರ ಬಗ್ಗೆ ಮಾಹಿತಿ ಹೊರಹಾಕಲು ಅಪಾಯವು ಇರುವುದು, ಈ ಬಗ್ಗೆ ಎಚ್ಚರವಹಿಸಿ ಜಾಣ್ಮೆಯಿಂದ ಯುವಜನರು ಕಾರ್ಯಪ್ರವೃತ್ತರಾಗಬೇಕಿದೆ.

English summary

International Anti-Corruption Day: Theme And How Can People Fight Corruption

December 9, is observed as the International Anti-Corruption day since the year 2005. The United Nations General Assembly on October 31, 2003, adopted the United Nations Convention against Corruption, and designated December 9 International Anti-Corruption Day, in order to raise awareness about corruption and of the role of Convention in fighting and preventing it. This convention came into force in the year 2005, and since then the day is being observed annually.
X
Desktop Bottom Promotion