For Quick Alerts
ALLOW NOTIFICATIONS  
For Daily Alerts

ಅಂತರ್ಮುಖಿಗಳಿಂದ ಬಹಿರ್ಮುಖಿಗಳು ಕಲಿಯಬೇಕಾದ ಪ್ರಮುಖ ಪಾಠಗಳಿವು

|

ಯಾವುದೇ ಸಂದರ್ಭದಲ್ಲಾದರೂ ತಮ್ಮ ಉಪಸ್ಥಿತಿಯನ್ನು ಬೇಗನೆ ಪರಿಚಯಿಸಿಬಿಡುವವರು ಮತ್ತು ಎಲ್ಲರೊಂದಿಗೆ ಸುಲಭದೊಂದಿಗೆ ಬೆರತು ಮಾತನಾಡುವವರು ಸ್ವಭಾವ ಬಹಿರ್ಮುಖಿಗಳಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ಇವರು ಹೊಸಬರೊಂದಿಗೆ ಸ್ನೇಹ ಬೆಳೆಸುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಅಷ್ಟೇ ಯಾಕೆ ಯಾವುದಾದರೂ ಪರಿಸ್ಥಿತಿಯ ಲಾಭವನ್ನು ಬಹಳ ಬೇಗನೆ ಪಡೆದುಕೊಳ್ಳುವ ಚಾಕಚಕ್ಯತೆ ಇವರಿಗೆ ಇರುತ್ತದೆ. ಕ್ಷಣಮಾತ್ರದಲ್ಲಿ ಎಲ್ಲರನ್ನೂ ಸೆಳೆದು ಬಿಡುತ್ತಾರೆ ಮತ್ತು ಎಲ್ಲರಿಗೂ ಇವರು ಆಕ್ಟೀವ್ ಆಗಿದ್ದಾರೆ ಎಂದೆನಿಸತೊಡಗುತ್ತದೆ.

ಇನ್ನೊಂದೆಡೆ ಅಂತರ್ಮುಖಿಗಳು. ಇವರು ಸ್ವಲ್ಪ ನಾಚಿಕೆ ಸ್ವಭಾವದವರು. ಸಮಯ ಮತ್ತು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ ಏನನ್ನು ಹೇಳಬೇಕು, ಏನನ್ನು ಹೇಳಬಾರದು, ಹೇಗೆ ಬೆರೆಯಬೇಕು, ಹೇಗೆ ಇರಬಾರದು ಇತ್ಯಾದಿ ಎಲ್ಲವನ್ನೂ ಅವಲೋಕಿಸಿ ವರ್ತಿಸುವ ಸ್ವಭಾವ ಇವರದ್ದು. ಇಂತಹವರು ಸಮಾಜದಲ್ಲಿ ದಡ್ಡರು ಅಂತಲೋ ಅಥವಾ ಆಕ್ಟೀವ್ ಆಗಿ ಇರುವುದಿಲ್ಲ ಎಂಬಿತ್ಯಾದಿ ಅಪವಾದಗಳಿಂದ ಇದ್ದರೂ ಆಶ್ಚರ್ಯವಿಲ್ಲ. ನೀವು ನಿಮ್ಮ ಸ್ನೇಹಿತರೊಬ್ಬರ ಬಗ್ಗೆಯೇ ಹೀಗೆ ಅಂದುಕೊಂಡಿರಬಹುದು. ಅವನೊ ಅಥವಾ ಅವಳೋ ಸ್ವಲ್ಪ ವಿಚಿತ್ರ ಕೂಡಲೇ ಬೆರೆಯುವುದೇ ಇಲ್ಲ, ಅಂತರ್ಮುಖಿ ಸ್ವಭಾವ ಎಂದು ಅಂದುಕೊಂಡಿರಬಹುದು. ಆದರೆ ಅವರಿಂದ ಕಲಿತುಕೊಳ್ಳಬೇಕಾದದ್ದು ಸಾಕಷ್ಟಿದೆ ಎಂಬುದನ್ನು ಮರೆಯಬೇಡಿ.

Important Lessons Extroverts Can Always Learn From Introverts

ನಿಮಗೇ ತಿಳಿಯದಂತೆ ಇವರು ಬಹಳ ಬುದ್ದಿವಂತರಾಗಿರುತ್ತಾರೆ. ಸಮಯ ಸಂದರ್ಭ ಬಂದಾಗ ತಮ್ಮ ಚಾಕಚಕ್ಯತೆಯನ್ನು ಪ್ರದರ್ಶಿಸುತ್ತಾರೆ. ಇವರ ತಾಳ್ಮೆಯೇ ಇವರ ಯಶಸ್ಸಿನ ಗುಟ್ಟು ಎಂಬುದು ನಿಮಗೆ ಗೊತ್ತೆ.

ಹೌದು ಸೂಕ್ಷ್ಮ ಸ್ವಭಾವದ ವ್ಯಕ್ತಿಗಳಿಂದ ಅಂದರೆ ಅಂತರ್ಮುಖಿ ಸ್ವಭಾವದವರಿಗೆ ಕೂಡಲೇ ಪ್ರತಿಕ್ರಿಯಿಸುವ ವ್ಯಕ್ತಿತ್ವದ ಬಹಿರ್ಮುಖಿ ಸ್ವಭಾವದವರು ಪ್ರಮುಖವಾಗಿ ಈ ಆರು ಪಾಠಗಳನ್ನು ಕಲಿತುಕೊಳ್ಳಲೇಬೇಕು. ಯಾವುದು ಆ ಆರು ಪಾಠಗಳು? ಮುಂದೆ ಓದಿ.

1. ಒಳ್ಳೆಯ ಕೇಳುಗರಾಗುವುದು

1. ಒಳ್ಳೆಯ ಕೇಳುಗರಾಗುವುದು

ಅಂತರ್ಮುಖಿಗಳು ಮಾತನಾಡುವುದಕ್ಕಿಂತ ಹೆಚ್ಚು ಕೇಳುವುದರಲ್ಲಿ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾರೆ. ಚಿಕ್ಕದಾಗಿ ಹೇಳುವುದಾದರೆ ಅವರು ಉತ್ತಮ ಕೇಳುಗರು ಮತ್ತು ತಮ್ಮ ಸುತ್ತಲು ಇರುವುದನ್ನು ಹೆಚ್ಚು ಗಮನವಿಟ್ಟು ನೋಡುತ್ತಾರೆ. ಅವರು ಹಿಂಭಾಗದ ಸ್ಥಳವನ್ನು ಹೆಚ್ಚು ಇಷ್ಟಪಡುತ್ತಾರೆ ಅಂದರೆ ಅವರ ಸುತ್ತ ನಡೆಯುವ ಯಾವುದೇ ಕಾರ್ಯಕ್ರಮದಲ್ಲಿ ಅಥವಾ ಜನರೊಂದಿಗೆ ತಕ್ಷಣವೇ ಮುನ್ನುಗ್ಗುವುದಕ್ಕಿಂತ ನಿಧಾನವಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಏನು ಮಾಡಬೇಕು ಎಂಬಂತೆ ಆಲೋಚನೆ ಮಾಡುತ್ತಾರೆ. ಹಾಗಂದ ಮಾತ್ರಕ್ಕೆ ಬಹಿರ್ಮುಖಿಗಳು ಕೂಡ ಕಡಿಮೆ ಮಾತನಾಡಬೇಕು ಎಂದರ್ಥವಲ್ಲ ಮತ್ತು ಕಡಿಮೆ ಬೆರೆಯಬೇಕು ಎಂಬುದಲ್ಲ. ಬಹಿರ್ಮುಖಿಗಳು ಏನನ್ನು ಹೇಳುತ್ತಿದ್ದೇವೆ ಎಂಬುದನ್ನು ಹೆಚ್ಚು ತಾಳ್ಮೆಯಿಂದ ಕೇಳುವವರಾಗಬೇಕು ಅಷ್ಟೇ. ಆ ಮೂಲಕ ಅವರು ವಿಚಾರವನ್ನು ಕೇಳಿಸಿಕೊಳ್ಳುವ ಸ್ವಭಾವವನ್ನು ಬೆಳೆಸಿಕೊಳ್ಳಬೇಕು ಎಂಬುದಾಗಿದೆ.

2. ನಿಮಗಾಗಿ ನಿಮ್ಮ ಸಮಯ ಮೀಸಲಿಡುವುದು

2. ನಿಮಗಾಗಿ ನಿಮ್ಮ ಸಮಯ ಮೀಸಲಿಡುವುದು

ಇತರೆ ಸ್ನೇಹಿತರು ಮತ್ತು ಕೇವಲ ಜನರೊಂದಿಗೆ ಯಾವಾಗಲೂ ಸಮಯ ಕಳೆಯುವುದು ಮಾತ್ರವಲ್ಲ ಬದಲಾಗಿ ತಮಗೆ ತಾವು ಸಮಯ ನೀಡುವುದು ಕೂಡ ಬಹಳ ಒಳ್ಳೆಯದು. ಅಂತರ್ಮುಖಿಗಳು ಹೆಚ್ಚಿನ ಸಮಯವನ್ನು ಹೊಸತನ್ನ ಅನ್ವೇಷಣೆ ಮಾಡಲು ಮತ್ತು ತಮ್ಮ ಮನಸ್ಸನ್ನು ಪುನಃಶ್ಚೇತನಗೊಳಿಸುವುದಕ್ಕಾಗಿ ಬಳಸುತ್ತಾರೆ. ಅನಗತ್ಯ ವ್ಯಕ್ತಿಗಳು ಮತ್ತು ಆಲೋಚನೆಗಳಿಂದ ತಮ್ಮನ್ನ ತಾವು ಪ್ರತ್ಯೇಕಿಸಿಕೊಳ್ಳುವುದಕ್ಕಾಗಿ ಅವರು ತಮ್ಮ ಶಕ್ತಿಯನ್ನು ವಿನಿಯೋಗಿಸುತ್ತಾರೆ ಮತ್ತು ಆ ಮೂಲಕ ಆಂತರಿಕ ಶಾಂತಿಯನ್ನು ಪಡೆಯುತ್ತಾರೆ. ತಮ್ಮ ಜೊತೆಗೆ ತಾವು ಸಮಯ ಕಳೆಯುವ ಮೂಲಕ ಅಂತರ್ಮುಖಿಗಳು ವಿಭಿನ್ನ ರೀತಿಯ ಧನಾತ್ಮಕ ಶಕ್ತಿಯನ್ನು ಹೊಂದುತ್ತಾರೆ. ಬಹಿರ್ಮುಖಿಗಳು ಈ ಸ್ವಭಾವವನ್ನು ಅವರಿಂದ ಕಲಿಯುವುದರಿಂದಾಗಿ ಸ್ವಲ್ಪ ಗುಣಮಟ್ಟದ ಸಮಯ ಕಳೆಯುವುದರಿಂದಾಗಿ ಆಂತರಿಕ ಶಾಂತಿ, ಶಕ್ತಿ ಮತ್ತು ಉತ್ಸಾಹವನ್ನು ಪುನಃ ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ನೀವು ಪುಸ್ತಕವನ್ನು ಕೂಡ ಓದಬಹುದು ಅಥವಾ ವಾಕಿಂಗ್ ಮಾಡುವುದಕ್ಕೆ ತೆರಳಬಹುದು. ಇದು ನಿಮಗೆ ನಿಮ್ಮ ಅವ್ಯವಸ್ಥೆಯಿಂದ ದೂರವಿರಲು ಸಹಾಯ ಮಾಡುವುದಿಲ್ಲ ಆದರೆ ಖಂಡಿತ ನಿಮ್ಮ ಭವಿಷ್ಯ ಮತ್ತು ವೃತ್ತಿ ಬದುಕಿನ ಬಗ್ಗೆ ನಿರ್ಧಾರ ಕೈಗೊಳ್ಳುವುದಕ್ಕೆ ನೆರವು ನೀಡುತ್ತದೆ.

3. ಮಾತನಾಡುವ ಮುನ್ನ ವಿಚಾರವನ್ನು ವಿಮರ್ಶಿಸಿ

3. ಮಾತನಾಡುವ ಮುನ್ನ ವಿಚಾರವನ್ನು ವಿಮರ್ಶಿಸಿ

ಅಂತರ್ಮುಖಿಗಳು ಯಾವುದೇ ವಿಚಾರದ ಬಗ್ಗೆಯೇ ಆಗಲಿ ತಮ್ಮ ಅಭಿಪ್ರಾಯವನ್ನು ಮಂಡಿಸುವ ಮುನ್ನ ವಿಮರ್ಶೆ ಮಾಡುವುದಕ್ಕೆ ಮುಂದಾಗುತ್ತಾರೆ. ಸಂಭಾಷಣೆಗೆ ತೆರಳುವ ಮುನ್ನ ಯಾವ ಪದಗಳನ್ನು ಬಳಕೆ ಮಾಡಬೇಕು ಎಂಬ ವಿಚಾರದಲ್ಲಿ ಇವರದ್ದು ಬಹಳ ಒಳ್ಳೆಯ ಆಯ್ಕೆ ಇರುತ್ತದೆ. ಅಂತರ್ಮುಖಿಗಳು ತಮ್ಮ ಆಲೋಚನೆಯನ್ನು ಪದಗಳಲ್ಲಿ ಹೇಳುತ್ತಿದ್ದಾರೆ ಅಂದರೆ ಅದು ಅವರ ಮನಸ್ಸಲ್ಲೂ ಸ್ಪಷ್ಟವಾಗಿರುತ್ತದೆ. ಮೊದಲು ಅವರು ತಮ್ಮ ಆಲೋಚನೆಗಳನ್ನು ಒಟ್ಟಗೂಡಿಸುತ್ತಾರೆ ಮತ್ತು ನಂತರ ವಿಮರ್ಶೆ ಮಾಡಿ ಹೇಳಬೇಕೇ ಅಥವಾ ಬೇಡವೇ ಎಂಬುದಾಗಿ ಚಿಂತಿಸುತ್ತಾರೆ. ಒಮ್ಮೆ ಅವರಿಗೆ ಅವರ ನಿರ್ಧಾರದ ಬಗ್ಗೆ ಖಾತ್ರಿಯಾದರೆ ಇತರರೊಂದಿಗೆ ಅವರು ಅದನ್ನು ಹಂಚಿಕೊಳ್ಳುತ್ತಾರೆ. ಬಹಿರ್ಮುಖಿಗಳು ಕೂಡ ಇದನ್ನು ಕಲಿತುಕೊಳ್ಳಬಹುದು. ಯಾವಾಗಲೂ ಕೂಡ ಆಲೋಚಿಸುವುದು ಮತ್ತು ವಿಮರ್ಶಿಸಿ ಮಾತನಾಡುವುದು ಬಹಳ ಒಳ್ಳೆಯದು. ಈ ಸ್ವಭಾವದಿಂದಾಗಿ ತಪ್ಪಿನ ನಂತರ ಪಶ್ಚಾತ್ತಾಪ ಪಡುವುದು ತಪ್ಪುತ್ತದೆ.

4. ತನ್ನೊಳಗೆ ತಾನೇ ಪ್ರೇರಣೆ ಪಡೆದುಕೊಳ್ಳುವುದು

4. ತನ್ನೊಳಗೆ ತಾನೇ ಪ್ರೇರಣೆ ಪಡೆದುಕೊಳ್ಳುವುದು

ಬಾಹ್ಯ ಮೂಲಗಳಿಂದ ಬಹಿರ್ಮುಖಿಗಳು ಪ್ರೇರಣೆಯನ್ನು ಪಡೆದರೆ, ಅಂತರ್ಮುಖಿಗಳು ತಮ್ಮೊಳಗೆ ತಾವೇ ಪ್ರೇರಣೆಯನ್ನು ಪಡೆದುಕೊಳ್ಳುವ ಗುಣ ಹೊಂದಿರುತ್ತಾರೆ. ಅವರಿಗೆ ಬಾಹ್ಯ ಮೂಲಗಳ ಅಗತ್ಯವಿರುವುದಿಲ್ಲ ಅಂದರೆ ಸ್ನೇಹಿತರು, ಇತರರು ಮಾತನಾಡುವ ಪ್ರೇರಣೆಯ ಮಾತುಗಳು, ಭಾಷಣಗಳು ಇತ್ಯಾದಿಗಳಿಂದ ಮತ್ತು ಇತರರು ಬಹಿರ್ಮುಖಿಗಳಿಗೆ ಶಕ್ತಿ ಮತ್ತು ಪ್ರೇರಣೆಯನ್ನು ತುಂಬಬೇಕಾಗುತ್ತದೆ. ಆದರೆ ಅಂತರ್ಮುಖಿಗಳಿಗೆ ನೈಸರ್ಗಿಕವಾಗಿ ತಮಗೆ ತಾವೇ ಪ್ರೇರಣೆಗೊಳ್ಳುವ ಮತ್ತು ತಮ್ಮನ್ನ ತಾವೇ ವಿಮರ್ಶೆ ಮಾಡಿಕೊಂಡು ತಮ್ಮದೇ ಐಡಿಯಾಗಳ ಮೂಲಕ ಅನ್ವೇಷಣೆಗೆ ಒಳಪಡುವ ಸಾಮರ್ಥ್ಯವಿರುತ್ತದೆ. ಒಂದು ವೇಳೆ ಅವರಿಗೆ ಯಾರೂ ಕೂಡ ಪ್ರೇರಣೆ ಮಾಡುವವರು ಅಥವಾ ಸಲಹೆ ನೀಡುವವರು ಇಲ್ಲದೇ ಇದ್ದರೂ ಕೂಡ ಅಂತರ್ಮುಖಿಗಳು ಬೇಸರಗೊಂಡು ತಮ್ಮ ಆತ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲ. ಇದೇ ರೀತಿಯಾಗಿ ಬಹಿರ್ಮುಖಿಗಳು ಕೂಡ ಸ್ವಯಂ-ಪ್ರೇರಣೆಗೊಳ್ಳುವ ಸ್ವಭಾವವನ್ನು ಬೆಳೆಸಿಕೊಳ್ಳುವುದು ಬಹಳ ಒಳ್ಳೆಯದು.

5. ಆಳವಾದ ಮತ್ತು ಅರ್ಥಪೂರ್ಣವಾದ ಸಂಪರ್ಕವನ್ನು ಸ್ಥಾಪಿಸುವುದು

5. ಆಳವಾದ ಮತ್ತು ಅರ್ಥಪೂರ್ಣವಾದ ಸಂಪರ್ಕವನ್ನು ಸ್ಥಾಪಿಸುವುದು

ಜನರೊಂದಿಗೆ ಅಂತರ್ಮುಖಿಗಳದ್ದು ಆಳವಾದ ಮತ್ತು ಅರ್ಥಪೂರ್ಣವಾಗಿರುವ ಸಂಬಂಧವಾಗಿರುತ್ತದೆ. ದೊಡ್ಡ ತಂಡದೊಂದಿಗೆ ಫ್ಯಾನ್ಸಿಯಾಗಿರುವುದಕ್ಕೆ ಅವರಿಗೆ ಇಷ್ಟವಿಲ್ಲ ಮತ್ತು ತಮ್ಮ ಪ್ರತಿಯೊಂದು ಸಣ್ಣ ಆಲೋಚನೆಯನ್ನೂ ಅವರು ಎಲ್ಲರೊಂದಿಗೆ ಹಂಚಿಕೊಳ್ಳುವುದಿಲ್ಲ. ಅವರು ಕೆಲವೇ ಕೆಲವು ಬಹಳ ಆತ್ಮೀಯವಾದ ಮತ್ತು ಅರ್ಥಪೂರ್ಣವಾದ ಸ್ನೇಹಿತರನ್ನು ಹೊಂದಿರುತ್ತಾರೆ. ಸ್ವಾರ್ಥಿ ಮತ್ತು ಕೌಶಲ್ಯತೆಯಿಂದ ಬಲಿಹಾಕುವ ಅಂದರೆ ಮೋಸ ಮಾಡುವ ಜನರೊಂದಿಗೆ ಇವರು ಬೆರೆಯುವುದಿಲ್ಲ. ಅನಗತ್ಯ ವಿಚಾರದ ಬಗ್ಗೆ ಮಾತನಾಡುವುದನ್ನು ಇವರು ತಪ್ಪಿಸುತ್ತಾರೆ ಮತ್ತು ಆಳವಾದ ಚರ್ಚೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳುವುದಕ್ಕೆ ಇಷ್ಟಪಡುತ್ತಾರೆ. ಬಹಿರ್ಮುಖಿಗಳು ಕೂಡ ಇದನ್ನು ಮಾಡಬಹುದು. ನೀವು ಸೌಹಾರ್ದಯುತವಾಗಿ ಬೆರೆಯುವ ವ್ಯಕ್ತಿಯಾಗಿದ್ದರೆ ಖಂಡಿತ ಅದರಲ್ಲಿ ತಪ್ಪಿಲ್ಲ ಆದರೆ ಸಣ್ಣದಾದ ನಿಜವಾದ ಅತ್ಯುತ್ತಮ ಸ್ನೇಹಿತರ ತಂಡವನ್ನು ಹೊಂದಿರುವುದು ಒಳ್ಳೆಯದು. ನಿಮ್ಮ ಕಷ್ಟದ ಸಮಯದಲ್ಲಿ ನಿಜಕ್ಕೂ ಸಹಾಯ ಮಾಡುವವರ ಸಂಘ ಒಳಿತು ಅಲ್ಲವೇ?

6. ಗೌಪ್ಯತೆಯನ್ನು ಗೌರವಿಸುವುದು

6. ಗೌಪ್ಯತೆಯನ್ನು ಗೌರವಿಸುವುದು

ಇತರ ವ್ಯಕ್ತಿಗಳ ಗೌಪ್ಯತೆ ಮತ್ತು ಅವರ ಗಡಿಯನ್ನು ಮೀರಿ ವರ್ತಿಸುವುದನ್ನು ಅಂತರ್ಮುಖಿಗಳು ಬಯಸುವುದಿಲ್ಲ. ಪ್ರತಿಯೊಬ್ಬರ ಭಾವನೆಯನ್ನೂ ಕೂಡ ಇವರು ಗೌರವಿಸುತ್ತಾರೆ. ರೋಮಾಂಚನಕಾರಿ ಅಥವಾ ಸಾಹಸಮಯ ಕೆಲಸಕ್ಕಾಗಿ ಇತರರನ್ನು ತಳ್ಳುವ ಸ್ವಭಾವ ಇವರಿಗೆ ಇರುವುದಿಲ್ಲ. ತಮ್ಮ ಪ್ರೈವೆಸಿಯನ್ನು ಮತ್ತು ತಮ್ಮ ಜೀವನದ ಗಡಿಯನ್ನು ಇತರರು ದಾಟಿ ಬಂದು ಇಲ್ಲಸಲ್ಲದ್ದು ಮಾಡುವುದು ಕೂಡ ಇವರಿಗೆ ಇಷ್ಟವಾಗುವುದಿಲ್ಲ. ಬಹಳ ಕುತೂಹಲಕಾರಿ ಮತ್ತು ಆಶ್ಚರ್ಯಕಾರಿಯಾಗಿರುವುದಕ್ಕಾಗಿ ನಿಮ್ಮ ಸ್ನೇಹಿತರನ್ನು ಪ್ರೇರೇಪಿಸುವುದು ಒಳ್ಳೆಯ ಸ್ವಭಾವವೇ ಆದರೆ ಅದು ಅವರಿಗೆ ನಿಜಕ್ಕೂ ಇಷ್ಟವಿದೆಯೇ ಎಂಬುದನ್ನು ಅರ್ಥೈಸಿಕೊಂಡು ಮುನ್ನಡೆಯಬೇಕು. ಅವರ ಜೀವನದಲ್ಲಿ ನಿಮ್ಮ ಸ್ಥಾನವೇನು ಎಂಬ ಅರಿವು ನಿಮಗಿರಬೇಕು.

ಖಂಡಿತ ಈ ಸ್ವಭಾವವನ್ನು ಅಂತರ್ಮುಖಿಗಳಿಂದ ಬಹಿರ್ಮುಖಿಗಳು ಅಳವಡಿಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಕಲಿಯುವಿಕೆಯಲ್ಲಿ ಯಾವುದೇ ತಪ್ಪಿಲ್ಲ. ಹಾಗಾಗಿ ಕೆಲವು ಅದ್ಭುತ ಗುಣಗಳನ್ನು ಇನ್ನೊಬ್ಬರಿಂದ ಅಳವಡಿಸಿಕೊಂಡು ನಡೆದರೆ ಖಂಡಿತ ಜೀವನ ಮತ್ತಷ್ಟು ಸುಂದರವಾಗಲಿದೆ.

English summary

Important Lessons Extroverts Can Always Learn From Introverts

Extroverts are seen as people who can make their presence acknowledged quite easily and are known as go-getters. They can easily become friends with new people and can also dominate the situation at times. Introverts, on the other hand, are seen as shy or reticent people who feel comfortable in a calm or minimally stimulating environment. They might often perceive their surroundings to be overwhelming and fast-paced and feel drained after socializing. But this doesn't mean they are not important for our society. You might think that your friend is weird, simply because they are introverts and yet extroverts can learn so much from them.
Story first published: Wednesday, September 18, 2019, 17:51 [IST]
X
Desktop Bottom Promotion