For Quick Alerts
ALLOW NOTIFICATIONS  
For Daily Alerts

Chankya Neeti: ಶತ್ರುವಿನ ವಿರುದ್ಧ ಗೆಲ್ಲಬೇಕಾ..? ಚಾಣಾಕ್ಯನ ಈ ನೀತಿ ಅನುಸರಿಸಿ..!

|

ಪ್ರತಿಯೊಬ್ಬರ ಜೀವನದಲ್ಲೂ ಶತ್ರು ಅನ್ನೋ ಆ ಒಬ್ಬ ವ್ಯಕ್ತಿ ಇದ್ದೇ ಇರ್ತಾನೆ. ಪ್ರತಿಬಾರಿ ಅವಮಾನ, ಸಂಕಟ, ದುಃಖ, ನೋವು ಎದುರಾದಾಗ ನಮ್ಮ ಶತ್ರುಗಳೇ ನಮ್ಮ ಕಣ್ಣಾ ಮುಂದೆ ಬರ್ತಾರೆ ಹೇಗಾದ್ರು ಮಾಡಿ ಅವನನ್ನ ಸೋಲಿಸಲೇ ಬೇಕು ಎಂಬ ಹಠ ಹೆಚ್ಚಾಗುತ್ತೆ.

ನಿಮಗೆಲ್ಲಾ ಚಾಣಕ್ಯನ ಬಗ್ಗೆ ಗೊತ್ತೇ ಇದೆ. ಚಾಣಕ್ಯ ಜಗತ್ತು ಕಂಡ ಶ್ರೇಷ್ಠ ವಿಧ್ವಾಂಸರಲ್ಲಿ ಒಬ್ಬ. ಚಾಣಕ್ಯನು ಪ್ರತಿಯೊಂದು ವಿಚಾರಕ್ಕೂ ತನ್ನದೇ ಆದ ನೀತಿಗಳನ್ನ ಪಾಲಿಸ್ಬೇಕು ಅಂತ ಹೇಳಿದ್ದಾನೆ. ಇಂದಿಗೂ ಜನ ಇದನ್ನ ಪಾಲಿಸ್ತಿದ್ದಾರೆ. ಯಾಕಂದ್ರೆ ಚಾಣಕ್ಯನ ನೀತಿ ಅನುಸರಿಸಿ ಸೋತವರು ಇಲ್ಲ. ಅದೇ ರೀತಿ ಶತ್ರುವನ್ನ ಯಾವ ರೀತಿ ಗೆಲ್ಲಬೇಕು ಅನ್ನೋ ಬಗ್ಗೆ ಕೂಡ ಚಾಣಕ್ಯನ ನೀತಿಯಲ್ಲಿ ಸವಿಸ್ತಾರವಾಗಿ ವಿವರಣೆ ನೀಡಲಾಗಿದೆ.

ಹಾಗಾದ್ರೆ ನಮ್ಮ ಶತ್ರುವನ್ನ ಮಟ್ಟ ಹಾಕಲು ಚಾಣಕ್ಯ ನೀಡಿರುವ ಆ ಪವರ್‌ಫುಲ್‌ ಸೂತ್ರಗಳು ಯಾವುದು ಅಂತ ಒಂದೊಂದಾಗೇ ತಿಳಿಯೋಣ ಬನ್ನಿ:

ಶತ್ರುಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ.

ಶತ್ರುಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ.

ಹೌದು, ಇದು ನಾವು ಮಾಡೋ ಮೊದಲನೇ ತಪ್ಪು. ಕೆಲವೊಂದು ಬಾರಿ ಶತ್ರುವಿನ ಬಗ್ಗೆ ನಾವು ತುಂಬಾ ಹಗುರವಾಗಿ ಆಲೋಚಿಸುತ್ತೇವೆ. ಆದ್ರೆ ಇದೇ ಸಮಯದಲ್ಲಿ ನಮ್ಮ ಶತ್ರು ನಮಗೆ ಖೆಡ್ಡಾ ತೋಡಬಹುದು. ಹೀಗಾಗಿ ತುಂಬಾನೇ ಹುಷಾರಾಗಿರ್ಬೇಕು. ಮೈಯೆಲ್ಲಾ ಕಣ್ಣಾಗಿಸಿ ನಮ್ಮ ರಕ್ಷಣೆಯನ್ನ ನಾವೇ ಮಾಡ್ಬೇಕು.

ಶತ್ರು ಬಲಶಾಲಿಯಾಗಿದ್ದಾಗ ಏನು ಮಾಡ್ವೇಕು..?

ಒಂದು ವೇಳೆ ನಿಮ್ಮ ಶತ್ರುವೇನಾದ್ರು ನಿಮಗಿಂತ ಬಲಶಾಲಿ ಅನ್ನಿಸಿದ್ರೆ, ಅದು ಬುದ್ಧಿಯಲ್ಲಿ ಇರ್ಬಹುದು ಅಥವಾ ಶಕ್ತಿಯಲ್ಲಿ ಇರಬಹುದು. ಅಂತಹ ಸಮಯದಲ್ಲಿ ನೀವು ಸರಿಯಾದ ಸಮಯಕ್ಕಾಗಿ ಕಾಯಬೇಕು. ಇಲ್ಲವಾದಲ್ಲಿ ನಿಮಗೆ ತೊಂದರೆಯಾಗೋ ಸಾಧ್ಯತೆ ಹೆಚ್ಚು. ಹೀಗಾಗಿ ನೀವು ಶತ್ರುವನ್ನ ಮಣಿಸಲು ಪೂರ್ವ ಯೋಜಿತವಾಗಿ ತಂತ್ರಗಳನ್ನು ರೂಪಿಸಬೇಕು.

ಶತ್ರುವನ್ನು ದೈರ್ಯದಿಂದ ಎದುರಿಸಿ

ಶತ್ರುವನ್ನು ದೈರ್ಯದಿಂದ ಎದುರಿಸಿ

ಚಾಣಕ್ಯನ ಪ್ರಕಾರ ಪ್ರತಿಯೊಬ್ಬ ಮನುಷ್ಯನಿಗೂ ಗೊತ್ತಿರುವ ಹಾಗೂ ಗೊತ್ತಿಲ್ಲದೇ ಇರುವ ಶತ್ರುಗಳು ಇದ್ದೇ ಇರುತ್ತಾರೆ. ಆದ್ರಲ್ಲಿ ಕೆಲವರು ಮುಂದುಗಡೆ ಕಾಣಿಸಿಕೊಳ್ಳೋದಿಲ್ಲ. ಅಂತಹ ಶತ್ರುಗಳು ತುಂಬಾನೇ ಡೇಂಜರಸ್. ಒಂದು ಮಾತನ್ನು ನೆನಪಿನಲ್ಲಿಟ್ಟುಕೊಳ್ಳಿ ಶತ್ರುವನ್ನು ಎದುರಿಸುವಾಗ ಎಂದಿಗೂ ದೈರ್ಯ ಕಳೆದುಕೊಳ್ಳಬೇಡಿ. ನಿಮ್ಮಲ್ಲಿರುವ ಆ ದೈರ್ಯವೇ ನಿಮ್ಮನ್ನು ಗೆಲುವಿನೆಡೆಗೆ ಕರೆದುಕೊಂಡು ಹೋಗುವ ದಾರಿಯಾಗಬಹುದು.

ಮುಂಜಾಗರೂಕತೆಯಿಂದ ಹೆಜ್ಜೆಇಡಿ.

ಚಾಣಕ್ಯ ಹೇಳೋ ಪ್ರಕಾರ ಸಮಸ್ಯೆ ಅಥವಾ ಬಿಕ್ಕಟ್ಟು ಹೇಳಿ ಕೇಳಿ ಬರೋದಿಲ್ಲ. ಕೆಲವೊಂದು ಬಾರಿ ನಾವು ಊಹಿಸದಿದ್ದರೂ ಕೂಡ ಸಂಕಷ್ಟಗಳು ಎದುರಾಗುತ್ತದೆ. ಇಂತಹ ಸಮಯದಲ್ಲಿ ಎಲ್ಲವನ್ನೂ ಎದುರಿಸಲು ಸಿದ್ಧವಿರಬೇಕು. ಅದಕ್ಕೆ ಹೇಳೋದು ಭವಿಷ್ಯದಲ್ಲಿ ಆಗುವ ತೊಂದರೆಗೆ ತಯಾರಿ ಮುಂಚೆಯೇ ನಡೆದಿರಬೇಕು. ಹಾಗಾದಾಗ ಮಾತ್ರ ಯಶಸ್ಸು ಒಲಿಯೋದಕ್ಕೆ ಸಾಧ್ಯ.

ರೋಗ, ದು:ಖ ಮತ್ತು ಸಂಕಷ್ಟಗಳು ಕೂಡ ನಮ್ಮ ಶತ್ರುಗಳೇ..!

ರೋಗ, ದು:ಖ ಮತ್ತು ಸಂಕಷ್ಟಗಳು ಕೂಡ ನಮ್ಮ ಶತ್ರುಗಳೇ..!

ಶತ್ರುವು ಮನುಷ್ಯನ ರೂಪದಲ್ಲಿ ಮಾತ್ರ ದಾಳಿ ನಡೆಸಬೇಕೆಂದಿಲ್ಲ. ನಮಗೆ ಎದುರಾಗೋ ದುಃಖ, ಸಂಕಷ್ಟ, ರೋಗಗಳು ಕೂಡ ಒಂದು ರೀತಿ ಶತ್ರುಗಳೇ. ಇದರಿಂದ ನಮಗೆ ವಾಸಿ ಮಾಡಲು ಆಗದಂತಹ ತೊಂದರೆ ಎದುರಾಗಬಹುದು. ಹೀಗಾಗಿ ಇವುಗಳ ಬಗ್ಗೆ ಕೂಡ ತುಂಬಾನೇ ಹುಷಾರಾಗಿ ಇರಬೇಕು.

ಪ್ಯಾನಿಕ್ ಆಗಬೇಡಿ..!

ಅದೆಂತಹ ಕಠಿಣ ಪರಿಸ್ಥಿತಿಯೇ ಎದುರಾದ್ರೂ ಕೂಡ ಪ್ಯಾನಿಕ್ ಆಗಬಾರದು. ಈ ಸಂದರ್ಭದಲ್ಲಿ ನೀವು ಹಿರಿಯರ ಅಥವಾ ಜ್ಞಾನಿಗಳ ಸಲಹೆ ಪಡೆಯಬಹುದು. ಅಂತಹ ಸಲಹೆಗಳು ನಿಮಗೆ ದಾರಿ ದೀಪವಾಗಬಹುದು. ಮುಂದೆ ಎದುರಾಗೋ ಸಮಸ್ಯೆಗಳಿಗೆ ಪರಿಹಾರ ನೀಡಬಹುದು.

ಶತ್ರುವಿನ ದೌರ್ಬಲ್ಯಗಳನ್ನು ತಿಳಿದುಕೊಳ್ಳಿ..!

ಶತ್ರುವಿನ ದೌರ್ಬಲ್ಯಗಳನ್ನು ತಿಳಿದುಕೊಳ್ಳಿ..!

ಚಾಣಕ್ಯನ ನೀತಿಯ ಪ್ರಕಾರ ಶತ್ರುವಿನ ಚಲನವಲನಗಳ ಬಗ್ಗೆ ನೀವು ಯಾವಾಗಲೂ ಒಂದು ಕಣ್ಣು ಇಟ್ಟಿರಲೇಬೇಕು. ಆತನ ದೌರ್ಬಲ್ಯಗಳೇನು ಎಂಬುದು ನಿಮಗೆ ಖಂಡಿತ ಗೊತ್ತಿರಲೇಬೇಕು. ಶತ್ರುವಿನ ವಿಕ್‌ನೆಸ್‌ ಬಗ್ಗೆ ನೀವು ತಿಳಿದುಕೊಂಡಿದ್ದರೆ ಅದು ನಿಮ್ಮ ಗೆಲುವಿನ ಮೊದಲ ಹೆಜ್ಜೆ. ಆತನ ದೌರ್ಬಲ್ಯಗಳೇ ನಿಮಗೆ ಪ್ಲಸ್‌ ಆಗಬಹುದು.

ಶತ್ರುವಿನಿಂದ ಒಂದು ಹೆಜ್ಜೆ ಮುಂದೆ ಇರಿ..!

ಸೋಲು-ಗೆಲುವುಗಳನ್ನು ಜೀವನದಲ್ಲಿ ಸಮನಾಗಿ ಸ್ವೀಕರಿಸಬೇಕು ಅನ್ನೋ ಮಾತಿದೆ. ಆದರೆ ಸೋಲು ಬಂದಾಗ ಮನುಷ್ಯ ಸಂಪೂರ್ಣವಾಗಿ ಕುಗ್ಗಿ ಹೋಗುತ್ತಾನೆ. ನಿಮಗೆ ಸೋಲು ಇಷ್ಟ ಇಲ್ಲ ಅಂದ ಮೇಲೆ ನೀವು ಯಾವಾಗಲೂ ನಿಮ್ಮ ಶತ್ರುವಿನಿಂದ ಒಂದು ಹೆಜ್ಜೆ ಮುಂದೆ ಇದ್ದರೆ ಒಳ್ಳೇದು. ನಿಮ್ಮ ಪ್ರಾಬಲ್ಯ ಎಷ್ಟರ ಮಟ್ಟಿಗೆ ಇರಬೇಕು ಅಂದರೆ ಆತನಿಗೆ ನಿಮ್ಮನ್ನು ಸೋಲಿಸೋದು ಅಸಾಧ್ಯ ಎಂದೆನಿಸಬೇಕು.

ಚಾಣಕ್ಯ ಈ ಸೂತ್ರಗಳನ್ನು ಪಾಲಿಸಿದರೆ ನಿಮ್ಮ ಶತ್ರುವನ್ನು ನೀವು ಸುಲಭವಾಗಿ ಮಣಿಸಬಹುದು.

English summary

How to achieve success against enemy in chanakya policy...!

here are the policy of chanakya to defeat the enemy kannada,
X
Desktop Bottom Promotion