For Quick Alerts
ALLOW NOTIFICATIONS  
For Daily Alerts

ನಮ್ಮ ಭಾರತದಲ್ಲಿ ಮಾತ್ರ ಕಾಣ ಸಿಗುವ 18 ಆಸಕ್ತಿಕರ ಸಂಗತಿಗಳಿವು

|

ಏಪ್ರಿಲ್ 18 ವಿಶ್ವ ಪಾರಂಪರಿಕ ದಿನ. ಅದರ ವಿಶೇಷವಾಗಿ ಭಾರತದ ಪಾರಂಪರಿಕ ಸ್ಥಳಗಳ ಕುರಿತ ಕೆಲ ಆಸಕ್ತಿಕರ ಸಂಗತಿಗಳನ್ನು ಹೇಳುತ್ತಿದ್ದೇವೆ.

ಭಾರತ ಹಲವು ಅಧ್ಬುತಗಳನ್ನು ಹೊತ್ತಿರುವ ದೇಶ. ನಮ್ಮಲ್ಲಿ ಪ್ರತಿ ಪ್ರದೇಶದ ಮೂಲೆ ಮೂಲೆಯಲ್ಲೂ ಸಾಕಷ್ಟು ಅಚ್ಚರಿಗಳು ಕಾಣಲು ಸಿಗುತ್ತವೆ. ಹಾಗಾಗಿಯೇ ನಮ್ಮಲ್ಲಿ ವಿದೇಶದಿಂದ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚು.ಪ್ರತಿಯೊಂದು ಪ್ರವಾಸಿ ತಾಣಗಳೂ ಕೂಡ ಒಂದೊಂದು ಐತಿಹಾಸಿಕ ಹಿನ್ನೆಲೆಗಳನ್ನು ಹೊಂದಿವೆ.

Viral Videointeresting facts about India

ಇಂತಹ ಕೆಲವು ಸ್ಥಳಗಳ ಬಗ್ಗೆ ಹಾಗೂ ಅನಾದಿಕಾಲದಿಂದ ಪ್ರಚಲಿತದಲ್ಲಿರುವ ಆಚರಣೆಗಳ ಬಗ್ಗೆ ನಾವಿಲ್ಲಿ ಕೆಲವು ವಿಶೇಷ ಸಂಗತಿಗಳನ್ನು ನಿಮಗೆ ತಿಳಿಸುತ್ತಿದ್ದೇವೆ.

1. ಭಾರತದಲ್ಲಿ 32 ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಿವೆ.

1. ಭಾರತದಲ್ಲಿ 32 ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಿವೆ.

ತಾಜ್ ಮಹಲ್ ಜಗತ್ತಿನಲ್ಲಿಯೇ ಅತ್ಯಂತ ಪ್ರಸಿದ್ಧ ಸ್ಥಳವಾಗಿದ್ದು ಇದಲ್ಲದೇ ಇನ್ನೂ 31 ಇತರ ಸ್ಥಳಗಳು ಭಾರತದಲ್ಲಿವೆ. ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಇರುವ ವಿಶ್ವ ಪರಂಪರೆಯ ತಾಣಗಳು ಕೇವಲ 21 ಮಾತ್ರ.

ಕೇವಲ ಸಂಖ್ಯಾಬಲದಲ್ಲಿ ಮಾತ್ರ ಹೆಚ್ಚಲ್ಲದೆ ವೈವಿಧ್ಯತೆಯೂ ಇದೆ. ಈ ವೈವಿಧ್ಯತೆಗೆ ಸಾಕ್ಷಿಯಾಗಿ ನಮ್ಮಲ್ಲಿ ರಾಜಸ್ಥಾನದ ಬೆಟ್ಟದ ಕೋಟೆಗಳಿವೆ, ಶಿಮ್ಲಾ ಮತ್ತು ಡಾರ್ಜಲಿಂಗ್ ಪರ್ವತಸಾಲುಗಳಲ್ಲಿನ ರೈಲುಗಳಿವೆ, ದಕ್ಷಿಣ ಭಾರತದ ಪಶ್ಚಿಮ ದಿಕ್ಕಿನ ಪಶ್ಚಿಮ ಘಟ್ಟಗಳ ಸಾಲುಗಳು, ಮಹಾರಾಷ್ಟ್ರದ ಅಜಂತಾ ಮತ್ತು ಎಲ್ಲೋರಾ ಗುಹಾಂತರ ದೇವಾಲಯಗಳು, ಬಂಗಾಳದ ಸುಂದರ್ ಬನ್ಸ್ ಮಾಂಗ್ರೋವ್ ಅರಣ್ಯ, ಹಾಗೂ ಇನ್ನೂ ಹಲವು ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ತಾಣಗಳು ನಮ್ಮಲ್ಲಿವೆ.

ಹೀಗಿದ್ದೂ ಯುನೆಸ್ಕೋ ತಾಣಗಳು ನಮ್ಮಲ್ಲಿನ ಶ್ರೀಮಂತ ಸಂಸ್ಕೃತಿ, ಕಲೆಗಳು ಹಾಗೂ ನೈಸರ್ಗಿಕವಾಗಿರುವ ಅದ್ಭುತಗಳ ಲೋಕಕ್ಕೆ ಕೇವಲ ಮುನ್ನುಡಿಯಷ್ಟೇ ಎಂದು ಹೇಳಬಹುದು.

2. ಜಗತ್ತಿನ ಎಲ್ಲಾ ಪ್ರಮುಖ ಧರ್ಮಗಳ ಬೀಡು ಭಾರತ

2. ಜಗತ್ತಿನ ಎಲ್ಲಾ ಪ್ರಮುಖ ಧರ್ಮಗಳ ಬೀಡು ಭಾರತ

ಭಾರತದ ಜನಸಂಖ್ಯೆಯ ಶೇಕಡಾ 80 ರಷ್ಟು ಭಾಗ ಹಿಂದೂಗಳೇ ಆಗಿದ್ದರೂ ಭಾರತದಲ್ಲಿ ಜಗತ್ತಿನ ಪ್ರಮುಖ ಮತ್ತು ಸ್ಥಿರವಾದ ಧರ್ಮಗಳ ಜನರು ಭಾರತದಲ್ಲಿದ್ದಾರೆ ಇದರ ಜೊತೆಗೆ ಇನ್ನೂ ಕೆಲವು ಸೀಮಿತವಾದ ಪ್ರದೇಶದಲ್ಲಿರುವ ಧರ್ಮಗಳೂ ಭಾತರದಲ್ಲಿವೆ.

ಕೇರಳ ಮತ್ತು ಗೋವಾದಲ್ಲಿ ಸುತ್ತಾಡಿದರೆ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಚರ್ಚುಗಳು ಅಲ್ಲಲ್ಲಿ ಕಾಣಸಿಗುತ್ತವೆ. ಅದರಲ್ಲೂ ಗೋವಾದಲ್ಲಿ ಕ್ಯಾಥೋಲಿಕ್ ಸಂತ ಫ್ರಾನ್ಸಿಸ್ ಕ್ಸೇವಿಯರ್ ಅವರ ಅವಶೇಷಗಳು ಬಾಸಿಲಿಕಾ ಆಫ್ ಬೋಮ್ ಜೀಸಸ್ ನಲ್ಲಿ ಕಾಣಬಹುದು. ಫೋರ್ಟ್ ಕೊಚ್ಚಿಯ ಒಂದು ಪ್ರದೇಶವಾದ ಜೀವ್ ಟೌನ್ ನಲ್ಲಿ ಜುದಾಯಿಸಂ ನ ದೀರ್ಘ ಇತಿಹಾಸವನ್ನು ಕಾಣಬಹುದಾಗಿದೆ. ಮುಂಬೈನಾದ್ಯಂತ ಪಾರ್ಸಿ ಅಗ್ನಿ ದೇವಾಲಯಗಳು ಮತ್ತು ಮೌನ ಗೋಪುರಗಳು ಅಥವಾ ಸೈಲೆನ್ಸ್ ಟವರ್ ಗಳನ್ನು ಕಾಣಬಹುದಾಗಿದೆ.

ಗುಜರಾತ್, ರಾಜಸ್ಥಾನ ಮತ್ತು ದೆಹಲಿಯ ತುಂಬಾ ಸೊಗಸಾದ ಜೈನ ದೇವಾಯಗಳು ಮತ್ತು ಅಮೃತಶಿಲೆಯ ಪ್ರತಿಮೆಗಳನ್ನು ಕಾಣಬಹುದಾಗಿದೆ. ಸಿದ್ಧಾರ್ಥ ಗೌತಮ ಬುದ್ಧ ಜನಿಸಿದ ಮತ್ತು ಜೀವಿಸಿದ ಪ್ರದೇಶಗಳಾದ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಸಾಕಷ್ಟು ಬೌದ್ಧ ಯಾತ್ರಾ ಸ್ಥಳಗಳು ಇವೆ. ಸಿಖ್ ಧರ್ಮವು ಇಂದು ಭಾರತ ಮತ್ತು ಪಾಕಿಸ್ತಾನದಲ್ಲಿ ಹಂಚಿ ಹೋದ ಪಂಜಾಬ್ ನಲ್ಲಿ ಆರಂಭವಾಯಿತು. ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್ ಅಥವಾ ಸುವರ್ಣ ದೇವಾಲಯವು ಭಾರತದ ಅತ್ಯಂತ ಶಾಂತಿಯುತವಾದ, ಸುಂದರವಾದ ಮತ್ತು ಆಧ್ಯಾತ್ಮಿಕ ತಾಣವಾಗಿದೆ. ದೆಹಲಿಯಲ್ಲಿ ಅಮೃತಶಿಲೆಯಿಂದ ಮಾಡಿದ ಬಹಾಯಿ ಹೌಸ್ ಆಫ್ ವರ್ಷಿಪ್ ಅಥವಾ ಲೋಟಸ್ ಟೆಂಪಲ್ ಜಗತ್ತಿನಲ್ಲೇ ಅತೀ ಹೆಚ್ಚು ಜನರು ಭೇಟಿ ಮಾಡುವ ಸ್ಥಳಗಳಲ್ಲಿ ಒಂದಾಗಿದೆ. ಮುಸ್ಲಿಂ ರ ಸಂಖ್ಯೆ ಭಾರತದಲ್ಲಿ ಕೇವಲ 14 ಶೇಕಡಾ ಮಾತ್ರ ಇದ್ದರೂ ಮಸೀದಿಗಳು, ಸಮಾಧಿಗಳು, ದೇವಾಲಯಗಳು ಮತ್ತು ಇಮಾಂಬರಾಗಳು ದೇಶದ ತುಂಬೆಲ್ಲಾ ಇವೆ. (ಭಾರತದಲ್ಲಿ ಇಂಡೋನೇಷ್ಯಾ ವನ್ನು ಹೊರತು ಪಡಿಸಿದರೆ ಅತೀ ಹೆಚ್ಚು ಸಂಖ್ಯೆಯ ಮುಸ್ಲೀಮರು ಇದ್ದಾರೆ.

3. ಜಗತ್ತಿನಲ್ಲೇ ಅತೀ ಹೆಚ್ಚು ಸಂಖ್ಯೆಯ ಸಸ್ಯಾಹಾರಿಗಳು ಭಾರತದಲ್ಲಿ ಇದ್ದಾರೆ

3. ಜಗತ್ತಿನಲ್ಲೇ ಅತೀ ಹೆಚ್ಚು ಸಂಖ್ಯೆಯ ಸಸ್ಯಾಹಾರಿಗಳು ಭಾರತದಲ್ಲಿ ಇದ್ದಾರೆ

ಎಲ್ಲಾ ಭಾರತೀಯರೂ ಹಿಂದಗಳಾಗದೇ ಇದ್ದರೂ, ಎಲ್ಲಾ ಹಿಂದೂಗಳೂ ಸಸ್ಯಾಹಾರಿಗಳಾಗದೇ ಇದ್ದರೂ ಸಸ್ಯಾಹಾರ ಪಾರಂಪರಿಕ ಹಿಂದೂ ನಂಬಿಕೆಯ ಪ್ರಕಾರ ಸಸ್ಯಾಹಾರ ಒಂದು ಮುಖ್ಯವಾದ ಅಂಗವಾಗಿದೆ. ಭಾರತದಲ್ಲಿ ೨೦ ರಿಂದ ೪೦ ಶೇಕಡಾ ಜನಗಳು ಸಸ್ಯಾಹಾರಿಗಳಾಗಿದ್ದಾರೆ. ಹೀಗಾಗಿ ಸಸ್ಯಾಹಾರಿ ಪ್ರವಾಸಿಗರಿಗೆ ರುಚಿ ರುಚಿಯಾದ ದಾಲ್ (ಮಸೂರಿ), ಸಬ್ಜಿ (ತರಕಾರಿ ಪಲ್ಯ) ಅಥವಾ ಪನೀರ್ ನಿಂದ ಮಾಡಿದ ಅಡುಗೆ ಎಲ್ಲಿ ಬೇಕಾದರೂ ಸಿಗುತ್ತದೆ. (ಡೈರಿ ಉತ್ಪನ್ನಗಳನ್ನು ಹೆಚ್ಚಾಗಿ ಬಳಸುವುದರಿಂದ ಸಸ್ಯಾಹಾರಿಗಳಿಗೆ ಹೆಚ್ಚಿನ ತೊಂದರೆ ಉಂಟಾಗುತ್ತದೆ.)

4. ನಮ್ಮಲ್ಲಿ ಕೆಲವು ವಿಶೇಷವಾದ ಮತ್ತು ವಿಲಕ್ಷಣವಾದ ಅಂಚೆ ಕಚೇರಿಗಳಿವೆ.

4. ನಮ್ಮಲ್ಲಿ ಕೆಲವು ವಿಶೇಷವಾದ ಮತ್ತು ವಿಲಕ್ಷಣವಾದ ಅಂಚೆ ಕಚೇರಿಗಳಿವೆ.

ಜಗತ್ತಿನ ಅತ್ಯಂತ ದೊಡ್ಡ ಅಂಚೆ ಸಂಪರ್ಕವಾದ ಭಾರತಲ್ಲಿ ಕೆಲವು ಅಸಾಮಾನ್ಯ ಜಾಗಗಳಲ್ಲಿ ಅಂಚೆ ಕಚೇರಿಗಳಿವೆ. ಹಿಮಾಚಲ ಪ್ರದೇಶದ ಹಿಕ್ಕಿಂ ನಲ್ಲಿ ಜಗತ್ತಿನ ಅತ್ಯಂತ ಎತ್ತರದ ಸ್ಥಳದಲ್ಲಿರುವ ಅಂಚೆ ಕಚೇರಿ ಇದೆ (ಇದು ಜಗತ್ತಿನ ಅತ್ಯಂತ ಎತ್ತರದ ಮತದಾನ ಕೇಂದ್ರವೂ ಹೌದು). ಇದು ೧೫,೪೦೦ ಅಡಿ ಎತ್ತರದಲ್ಲಿ ಇದೆ. ಕಾಶ್ಮೀರದ ದಾಲ್ ಸರೋವರದಲ್ಲಿ ತೇಲುವ ಅಂಚೆ ಕಚೇರಿ ಇದೆ. ಇದರ ಜೊತೆಗೆ ಶ್ರೀನರಗದ ಪ್ರಸಿದ್ಧ ದೋಣಿ ಮನೆಗಳನ್ನು (ಹೌಸ್ ಬೋಟ್ಸ್) ಹೋಲುವ ಅಂಚೆ ಚೀಟಿಗಳ ಸಂಗ್ರಹಾಲಯವೂ ಇದೆ. ಎಪ್ಪತ್ತರ ದಶಕದಲ್ಲಿ ಕೆಲವು ರಾಜಸ್ಥಾನದ ಪಟ್ಟಣಗಳನ್ನು ಚಲಿಸುವ ಒಂಟೆ ಅಂಚೆ ಕಚೇರಿಯ ಮೂಲಕ ಸಂಪರ್ಕಿಸಲಾಗುತ್ತಿತ್ತು. ಇದೇ ರೀತಿ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ನಲ್ಲಿ ಹೇಸರಗತ್ತೆಯ ಮೇಲಿನ ಅಂಚೆ ಕಚೇರಿಗಳಿದ್ದವು.

5. ವಾರಣಾಸಿ ಜಗತ್ತಿನ ಅತ್ಯಂತ ಹಳೆಯ ಜನವಸತಿ ಇರುವ ನಗರವಾಗಿದೆ.

5. ವಾರಣಾಸಿ ಜಗತ್ತಿನ ಅತ್ಯಂತ ಹಳೆಯ ಜನವಸತಿ ಇರುವ ನಗರವಾಗಿದೆ.

ಭಾರತದ ಧಾರ್ಮಿಕವಾಗಿ ಮಹತ್ವವಾಗಿರುವ ವಾರಣಾಸಿ ಸುಮಾರು ೩೦೦೦ ವರ್ಷಗಳ ಹಿಂದೆ ಆರಂಭವಾದ ನಗರವಾಗಿದೆ. ಅಂದಿನಿಂದ ಇಂದಿನವರೆಗೆ ಅಲ್ಲಿ ಸತತವಾಗಿ ಜನವಸತಿ ಇರುವುದು ವಿಶೇಷವಾಗಿದೆ. ಹಿಂದೂಗಳ ನಂಬಿಕೆಯ ಪ್ರಕಾರ ಇದಕ್ಕೇ ಇನ್ನೂ ಹಿಂದಿನ ಇತಿಹಾಸವಿದ್ದು ಶಿವ ದೇವರು ೫೦೦೦ ವರ್ಷಗಳ ಹಿಂದೆ ಕಟ್ಟಿದ ನಗರವಾಗಿದೆ. ವಾರಣಾಸಿ ಅಥವಾ ಬನಾರಸ್ ಗಂಗಾ ನದಿಯ ಒಂದು ಪವಿತ್ರವಾದ ಜಾಗದಲ್ಲಿ ಇರುವ ನಗರವಾಗಿದೆ. ಬಹಳಷ್ಟು ಹಿಂದೂಗಳು ಇಲ್ಲಿಗೆ ಬಂದು ಸಾಯಬೇಕು ಎನ್ನುತ್ತಾರೆ. ಹೀಗೆ ಮಾಡಿದಾಗ ಮನುಷ್ಯನಿಗೆ ಹುಟ್ಟು, ಸಾವು ಮತ್ತು ಪುನರ್ಜನ್ಮದಿಂದ ಮುಕ್ತಿ ಸಿಗುತ್ತದೆ ಎಂದು ನಂಬುತ್ತಾರೆ. ಇಷ್ಟೆಲ್ಲಾ ಪಾರಂಪರಿಕ ತಾಣವಾಗಿದ್ದರೂ ನದಿಯ ತಟದಿಂದ ಹೊರಟ ಈ ನಗರ ಇಂದು ಆಧುನಿಕ ನಗರದಂತೆ ವ್ಯಾಪಿಸುತ್ತಿದೆ.

6. ಭಾರತ ಜಗತ್ತಿನ ಎರಡನೇ ದೊಡ್ಡ ಆಂಗ್ಲಭಾಷೆ ಮಾತನಾಡುವ ದೇಶ

6. ಭಾರತ ಜಗತ್ತಿನ ಎರಡನೇ ದೊಡ್ಡ ಆಂಗ್ಲಭಾಷೆ ಮಾತನಾಡುವ ದೇಶ

  1. ಅಮೇರಿಕಾ ಸಂಯುಕ್ತ ಸಂಸ್ಥಾನವನ್ನು ಹೊರತುಪಡಿಸಿದರೆ ಅತೀ ಹೆಚ್ಚು ಆಂಗ್ಲಭಾಷೆ ಮಾತನಾಡುವ ಜನಸಂಖ್ಯೆ ಭಾರತದಲ್ಲಿದೆ. ಇಂಗ್ಲೀಷ್ ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಒಂದಾಗಿದ್ದು ಕೇಂದ್ರ ಸರ್ಕಾರದ ಜಂಟಿ ಅಧಿಕೃತ ಭಾಷೆಯಾಗಿದೆ (ಹಿಂದಿಯ ಜೊತೆಗೆ). ಭಾರತದಲ್ಲಿ ಕೇವಲ ೧೦% ಜನರಿಗಷ್ಟೇ ಇಂಗ್ಲೀಷ್ ಬರುತ್ತದೆ ಮತ್ತು ಅದರಲ್ಲೂ ಕೆಲವೇ ಜನರಿಗೆ ಇಂಗ್ಲೀಷ್ ಪ್ರಾಥಮಿಕ ಭಾಷೆಯಾಗಿದೆ. ಹೀಗಿದ್ದೂ ಇಷ್ಟು ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲಿ ಇಂಗ್ಲೀಷ್ ಮಾತ್ರ ಬರುವ ಪ್ರಯಾಣಿಕನೊಬ್ಬ ಎಲ್ಲಿ ಬೇಕಾದರೂ ಪ್ರಯಾಣಿಸಿ ಇಂಗ್ಲೀಷಿನಲ್ಲೇ ಮಾತನಾಡಿ ಬರಬಹುದಾಗಿದೆ.

7. ಭಾರತದಲ್ಲಿ ವಿದೇಶಿ ಉಚ್ಚಾರದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ.

ನಿಮಗೆ ಇಂಗ್ಲೀಷ್ ಅಷ್ಟೇ ಸರಿಯಾಗಿ ಬರುತ್ತಿದ್ದ ಮಾತ್ರಕ್ಕೆ ನೀವು ಅದೇ ಭಾಷೆಯಲ್ಲಿ ಮಾತನಾಡಬೇಕೆಂದೇನಿಲ್ಲ. ಇತರ ಭಾಷೀಯರು ತಮ್ಮ ಭಾಷೆ ಮಾತನಾಡಲು ಪ್ರಯತ್ನ ಪಡುತ್ತಾರೆ ಎಂದಾಗ ಭಾರತೀಯರು ಬಹಳ ಬೆಂಬಲ ಕೊಡುತ್ತಾರೆ. ಇದು ಹಿಂದಿ, ಬೆಂಗಾಲಿ, ತಮಿಳು ಅಥವಾ ಇನ್ಯಾವುದೇ ಸ್ಥಳೀಯ ಭಾಷೆಯೇ ಆಗಿರಲಿ. ನೀವು ಆ ಭಾಷ್ಯೆಯನ್ನು ಮಾತನಾಡಲು ಪ್ರಯತ್ನಿಸುವುದೇ ಅವರಿಗೆ ಒಂದು ರೀತಿಯ ಉತ್ತೇಜನವಿದ್ದಂತೆ. ಭಾರತೀಯರೂ ಹಲವು ಭಾಷೆಗಳನ್ನು ಮತ್ತು ಉಚ್ಚಾರಣೆಯನ್ನು ಕೇಳಿರುವ ಕಾರಣ ನೀವು ಯಾವುದೇ ಒಂದು ಪದವನ್ನು ಸರಿಯಾಗಿ ಉಚ್ಚರಿಸದೇ ಇದ್ದಾಗ ಅಥವಾ ಕ್ರಿಯಾಪದದ ಅಂತ್ಯದಲ್ಲಿ ನಿಮ್ಮದೇ ಭಾಷೆಯನ್ನು ಬಳಸಿದಾಗಲೂ ಚಿಂತಿಸುವುದಿಲ್ಲ ಮತ್ತು ಅರ್ಥ ಮಾಡಿಕೊಳ್ಳುತ್ತಾರೆ. ನಿಮ್ಮ ತಪ್ಪುತಪ್ಪಾದ ಹಿಂದಿಯನ್ನು ಪ್ರಯೋಗಮಾಡುತ್ತಿರುವ ವ್ಯಕ್ತಿ ಮನೆಯಲ್ಲಿ ಬೆಂಗಾಲಿ ಮತ್ತು ಕೆಲಸದ ಜಾಗದಲ್ಲಿ ಇಂಗ್ಲೀಷನ್ನು ಮಾತನಾಡುತ್ತಿರಬಹುದು. ಮತ್ತು ವಿಭಿನ್ನ ಭಾಷೆಯನ್ನು ಕೇಳಲು ಅವರ ಕಿವಿಗಳು ಸಿದ್ಧವಾಗಿರುತ್ತವೆ.

 ಏಷ್ಯಾದ ಸಿಂಹ

ಏಷ್ಯಾದ ಸಿಂಹ

8. ಏಷ್ಯಾದ ಸಿಂಹವನ್ನು ನೀವು ಪಶ್ಚಿಮ ಭಾರತದಲ್ಲಿ ಕಾಣಬಹುದಾಗಿದೆ.

ಏಷ್ಯಾದ ಸಿಂಹ ಅಥವಾ ಪರ್ಷಿಯನ್ ಸಿಂಹ ಎಂದು ಕರೆಯಲಾಗುವ ಸಿಂಹಗಳು ಓಂದು ಸಮಯದಲ್ಲಿ ಮಧ್ಯ ಪ್ರಾಚ್ಯದಿಂದ ಆರಂಭವಾಗಿ ಭಾರತದವರೆಗೂ ಜೀವಿಸುತ್ತಿದ್ದವು. ಇದು ಇಂದು ಅಳಿವಿನಂಚಿನಲ್ಲಿರುವ ಸಿಂಹದ ತಳಿಯಾಗಿದ್ದು ಕೇವಲ ಭಾರತದ ಗುಜರಾತಿನ ಗಿರ್ ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿ ತಾಣದಲ್ಲಿ ಮಾತ್ರ ಕಾಣಬಹುದಾಗಿದೆ. ಇಲ್ಲಿನ ಸಿಂಹದ ಸಂಖ್ಯೆಗಳು ಹಿಂದಿನ ಕೆಲವು ವರ್ಷಗಳಿಂದ ಹೆಚ್ಚಾಗುತ್ತಲೇ ಇದೆ. ಈ ಸಿಂಹಗಳು ಗುಜರಾತಿನ ಕಡಲತೀರದಲ್ಲಿ ಸುತ್ತುತ್ತಿರುವುದನ್ನು ಇತ್ತೀಚೆಗೆ ಗಮನಿಸಲಾಗಿದೆ.

9. ಉತ್ತರ ಭಾರತದ ಉತ್ತರಪ್ರದೇಶವು ಜಗತ್ತಿನ ಐದನೇ ಅತೀ ಹೆಚ್ಚು ಜನಸಂಖ್ಯೆ ಇರುವ ದೇಶವಾಗಬಹುದಾಗಿದೆ.

ಭಾರತದ ಒಂದು ರಾಜ್ಯವಾದ ಉತ್ತರಪ್ರದೇಶದ ಜನಸಂಖ್ಯೆ ೨೦ ಕೋಟಿಯಾಗಿದೆ. ಇದು ಜಪಾನ್, ಮೆಕ್ಸಿಕೊ ಅಥವಾ ರಷ್ಯಾದ ಜನಸಂಖ್ಯೆಗಿಂತಲೂ ಹೆಚ್ಚಾಗಿದೆ. ಉತ್ತರ ಪ್ರದೇಶದಲ್ಲಿ ತಾಜ್ ಮಹಲ್ ವಾರಣಾಸಿಯಂತಹ ಪ್ರಸಿದ್ಧ ಸ್ಥಳಗಳಿವೆ ಇದು ಬಹಳ ದೊಡ್ಡದಾಗಿದ್ದು (೯೪,೦೦೦ ಚದರ ಮೈಲಿಗಳಾಗಿದ್ದು ಮಿಚಿಗನ್ ಗಿಂತ ದೊಡ್ಡದಾಗಿದೆ) ಜನಸಾಂದ್ರತೆಯೂ ಹೆಚ್ಚಾಗಿದೆ. ಇಲ್ಲಿ ಮುಘಲರ ಹಳೆಯ ನಗರವಾದ ಪಥೇಪುರ್ ಸಿಕ್ರಿ, ವನ್ಯಜೀವಿ ತಾಣಗಳು, ಲಕ್ನೋ ದ ಇಮಾಂಬರಾ ಸಂಕೀರ್ಣಗಳು ಹಾಗೂ ಸಾರಾನಾಥ್ ನ ಬೌದ್ಧ ತಾಣಗಳಿವೆ.

10. ಭಾರತದ ಕುಂಭ ಮೇಳ

10. ಭಾರತದ ಕುಂಭ ಮೇಳ

10. ಭಾರತದ ಕುಂಭ ಮೇಳ ಜಗತ್ತಿನ ಅತೀ ಹೆಚ್ಚು ಜನ ಸೇರುವ ಮೇಳವಾಗಿದೆ.

ಹಿಂದೂ ಯಾತ್ರೆಯಾದ ಕುಂಭ ಮೇಳವು ವರ್ಷದಿಂದ ವರ್ಷಕ್ಕೆ ದೊಡ್ಡದಾಗುತ್ತಲೇ ಇದೆ. ಇದು ಮೂರು ವರ್ಷಗಳಿಗೊಮ್ಮೆ ನಡೆಯುವ ಉತ್ಸವವಾಗಿದ್ದು ಅಲ್ಲಾಹಾಬಾದ್, ಹರಿದ್ವಾರ್, ನಾಸಿಕ್ ಮತ್ತು ಉಜ್ಜೈನಿಯಲ್ಲಿ ಒಂದಾದ ನಂತರ ಒಂದರಂತೆ ನಡೆಯುತ್ತದೆ. ಆದರೆ ಅಲ್ಲಾಹಾಬಾದ್ ನಲ್ಲಿ ೧೨ ವರ್ಷಗಳಿಗೊಮ್ಮೆ ನಡೆಯುವ ಕುಂಭ ಮೇಳವು ಅತ್ಯಂತ ದೊಡ್ಡಮಟ್ಟದ್ದು ಮತ್ತು ಪವಿತ್ರವಾದುದಾಗಿದೆ. ಕಳೆದ ೨೦೧೩ ರಲ್ಲಿ ನಡೆದ ಕುಂಭಮೇಳದಲ್ಲಿ ೫೫ ದಿನಗಳ ಅವಧಿಯಲ್ಲಿ ಸುಮಾರು ೧೦ ಕೋಟಿ ಜನರು ಗಂಗಾ ಮತ್ತು ಯಮುನಾ ನದಿಗಳ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.

11. ನಮ್ಮ ದೇಶವು ಬಹಳ ಹಿಂದಿನಿಂದಲೂ ಫ್ಯಾಷನ್ ನ ಕೇಂದ್ರವಾಗಿದೆ.

ಪ್ರಾಚೀನ ಕಾಲದಿಂದಲೂ, ಭಾರತೀಯ ಜವಳಿ ಪ್ರಪಂಚದಾದ್ಯಂತ ವ್ಯಾಪಾರವಾಗುತ್ತಿತ್ತು ಅಲ್ಲದೆ ದೇಶವು ಬಹಳ ಹಿಂದಿನಿಂದಲೂ ಅತ್ಯುತ್ತಮವಾದ ಹತ್ತಿ ಮತ್ತು ರೇಷ್ಮೆಯ ಉತ್ಪಾದಕ ಎಂಬ ಹೆಗ್ಗಳಿಗೆಗೆ ಪಾತ್ರವಾಗಿದೆ. ೧೯ ಮತ್ತು ೨೦ ನೇ ಶತಮಾನದ ವಸಾಹತು ಷಾಹಿಯ ಒಂದು ಪ್ರಮುಖ ದುಷ್ಪರಿಣಾಮ ಎಂದರೆ ಭಾರತದ ಜವಳಿ ಉದ್ಯಮ ತೀರಾ ಬಡವಾಯಿತು. ಭಾರತದ ಜವಳಿ ಉದ್ಯಮವನ್ನು ನಾಶಪಡಿಸಿ ಜಗತ್ತಿನಾದ್ಯಂತ ಜವಳಿ ಉದ್ಯಮವನ್ನು ತಮ್ಮ ಕೈವಶಮಾಡಲು ಬ್ರೀಟೀಷರು ಮಾಡಿದ ಉಪಾಯವಾಗಿತ್ತು.

ಇತ್ತೀಚೆಗೆ ಭಾರತದ ಫ್ಯಾಷನ್ ಉದ್ಯಮ ಇನ್ನೊಮ್ಮೆ ಪ್ರಗತಿ ಕಾಣುತ್ತಿದೆ. ದೆಹಲಿ, ಮುಂಬೈ ಮತ್ತು ಬೆಂಗಳೂರುಗಳಲ್ಲಿ ಫ್ಯಾಷನ್ ವೀಕ್ ಗಳನ್ನು ಆಯೋಜಿಸಲಾಗುತ್ತದೆ. ಇದರ ಜೊತೆಗೆ ಪಾರಂಪರಿಕ ಉಡುಪಿಗೆ ಆಧುನಿಕ ಸ್ಪರ್ಷ ನೀಡುವ ಕೆಲಸವೂ ನಡೆಯುತ್ತದೆ. ಹಲವು ಸಾಂಪ್ರದಾಯಿಕ ಪದ್ಧತಿಗಳಾದ ಕೈಮಗ್ಗ, ಬ್ಲಾಕ್ ಪ್ರಿಂಟಿಂಗ್ ಭಾರತದಾದ್ಯಂತ ಮತ್ತು ಜಗತ್ತಿನಾದ್ಯಂತ ಇದೆ.

ಮೇಘಾಲಯ

ಮೇಘಾಲಯ

12. ಮರುಭೂಮಿಯಾದ್ಯಂತ ವಿಶಾಲವಾದ ಹಂತ ಹಂತವಾಗಿ ಕೆತ್ತಿದ ಬಾವಿಗಳಿವೆ ಮತ್ತು ಇವು ತುಂಬಾ ತಣ್ಣಗಾಗಿವೆ.

ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಬಿಸಿ ಹವಾಮಾನವಿದ್ದು ನೀರು ಸಾಕಷ್ಟು ಲಭ್ಯವಿಲ್ಲ. ಸಾಕಷ್ಟು ಬಾರಿ ಬಹಳ ಆಳದ ಬಾವಿಯನ್ನು ತೆಗೆದಾಗ ಮಾತ್ರ ನೀರು ಲಭ್ಯವಾಗುತ್ತದೆ. ದೆಹಲಿ, ರಾಜಸ್ಥಾನ ಮತ್ತು ಗುಜರಾತಿನ ಅನೇಕ ಬಾವಿಗಳನ್ನು ಬಹಳ ದೊಡ್ಡದಾಗಿ ಮಾಡಲಾಗಿದೆ. ಇವು ಆಳವಾಗಿಯೂ ಇರುತ್ತವೆ ಮತ್ತು ದೇವಾಲಯ ಅಥವಾ ಮಸೀದಿಯ ರೀತಿಯಲ್ಲಿ ಅಲಂಕರಿಸಲಾಗಿರುತ್ತದೆ. ಇದರಲ್ಲಿ ಜಿಗ್ ಜಾಗ್ ಮಾದರಿಯಲ್ಲಿರುವ ಮೆಟ್ಟಿಲುಗಳು ನೀರಿನ ತನಕ ದಾರಿ ಮಾಡಿಕೊಡುತ್ತವೆ ಹಾಗೂ ಅಲ್ಲಲಿ ಸುರಂಗಗಳು ಮತ್ತು ಬಾಲ್ಕನಿಗಳು ಕಾಣಸಿಗುತ್ತವೆ. ಈ ಬಾವಿಗಳು ಭೇಟಿಮಾಡುವ ಸ್ಥಳಗಳಾಗಿರುತ್ತಿದವು ಅದರಲ್ಲೂ ಮಹಿಳೆಯರ ನೆಚ್ಚಿನ ತಾಣವಾಗಿರುತ್ತಿತ್ತು. ಈ ಬಾವಿಗಳು ಕ್ರಿಸ್ತ ಪೂರ್ವ ೫೦೦ ರ ಸಮಯದಿಂದಲೂ ಇದ್ದವು. ಇದರಲ್ಲಿ ಹೆಚ್ಚಿನವು ಈಗ ಕೆಲಸ ಮಾಡುತ್ತಿಲ್ಲ ಹಾಗೂ ಇನ್ನೂ ಕೆಲವಕ್ಕೆ ದುರಸ್ತಿ ಬೇಕಾಗಿದೆ. ಆದರೆ ಇನ್ನೂ ಕೆಲವು, ಉದಾಹರಣೆಗೆ ಅಹಮದಾಬಾದ್ ಹೊರಗಿರುವ ಆಡಲಾಜ್ ವಾವ್ ಜೈಪುರದ ಹೊರಗಿರುವ ಚಾಂದ್ ಬಾವ್ರಿ ಅಚ್ಚುಕಟ್ಟಾಗಿವೆ ಮತ್ತು ನೋಡಲು ಸುಂದರವಾಗಿವೆ.

13. ಮೇಘಾಲಯ ಜಗತ್ತಿನ ಅತ್ಯಂತ ತೇವಭರಿತವಾದ ಜನಜೀವನ ಇರುವ ಪ್ರದೇಶವಾಗಿದೆ.

ರಾಜಸ್ಥಾನದ ಮರುಭೂಮಿಯಷ್ಟು ಪ್ರಸಿದ್ಧವಾಗದೇ ಇರುವ ಭಾರತದ ಈಶಾನ್ಯ ಭಾಗದ ಮೇಘಾಲಯವು ಜಗತ್ತಿನಲ್ಲೇ ಅತ್ಯಂತ ತೇವಭರಿತವಾದ ಜನಜೀವನ ಇರುವ ಪ್ರದೇಶವಾಗಿದೆ. ಖಾಸಿ ಬೆಟ್ಟದ ಪ್ರದೇಶವಾದ ಮಾಸೀನ್ರಾಂ ಎಂಬ ಹಳ್ಳಿಯು ವರ್ಷಕ್ಕೆ ಸರಾಸರಿ ೪೬೭ ಇಂಚು ಮಳೆಯನ್ನು ಪಡೆಯುತ್ತದೆ. ಇಲ್ಲೇ ೧೦ ಮೈಲಿನ ದೂರದಲ್ಲಿ ಇರುವ ಚಿರಾಪುಂಜಿಯು ಎರಡನೇ ಸ್ಥಾನದಲ್ಲಿದೆ.

14. ಮೇಘಾಲಯದ ಸಾಂಪ್ರದಾಯಿಕ ಸೇತುವೆಗಳನ್ನು ಬದುಕಿರುವ ಮರಗಳಿಂದಲೇ ಮಾಡಿದ್ದಾಗಿದೆ.

ಇಲ್ಲಿನ ಪರ್ವತ ಶ್ರೇಣಿಗಳಲ್ಲಿನ ಅದ್ಭುತವಾದ ಸೇತುವೆಗಳನ್ನು ಕಣಿವೆಗಳು ಮತ್ತು ತೊರೆಗಳ ಆಚೆಗೆ ಮರದ ಬೇರುಗಳು ಮತ್ತು ಬಳ್ಳಿಗಳನ್ನು ತಮಗೆ ಬೇಕಾದ ರೀತಿಯಲ್ಲಿ ಬೆಳೆಸುವುದರ ಮೂಲಕ ಮಾಡಲಾಗಿದೆ. ಇವುಗಳ ರಚನೆಗೆ ಬಹಳ ವರ್ಷಗಳು ಬೇಕಾದರೂ ಒಮ್ಮೆ ರಚನೆಯಾದ ಬಳಿಕ ಮೇಘಾಲಯದ ತೇವಭರಿತ ವಾತಾವರಣಕ್ಕೆ ಹಾಳಾಗುವ ಮರದ ಸೇತುವೆಗಳಿಗಿಂತ ಅದೇಷ್ಟೊ ಗಟ್ಟಿಯಾಗಿರುತ್ತವೆ.

ಪದ್ಮನಾಭಸ್ವಾಮೀ ದೇವಾಲಯ

ಪದ್ಮನಾಭಸ್ವಾಮೀ ದೇವಾಲಯ

15. ಪದ್ಮನಾಭಸ್ವಾಮೀ ದೇವಾಲಯ ಜಗತ್ತಿನ ಅತ್ಯಂತ ಶ್ರೀಮಂತ ದೇವಾಲಯ

ಕೇರಳದ ರಾಜಧಾನಿ ತಿರುವನಂತಪುರಂನಲ್ಲಿರುವ ಪದ್ಮನಾಭಸ್ವಾಮೀ ದೇವಾಲಯ ಕೇವಲ ಹಿಂದೂ ದೇವಾಲಯಗಳಲ್ಲಿ ಶ್ರೀಮಂತವಾಗಿರುವುದಲ್ಲದೇ ಜಗತ್ತಿನಲ್ಲೇ ಅತ್ಯಂತ ಶ್ರೀಮಂತವಾದ ಪೂಜಾ ಸ್ಥಳವೆಂದು ನಂಬಲಾಗಿದೆ. ಕಳೆದ ೧೩೦ ವರ್ಷಗಳಲ್ಲಿ ಮೊದಲ ಬಾರಿಗೆ ೨೦೧೧ ರಲ್ಲಿ ಕಮಾನುಗಳನ್ನು ತೆರೆದಾಗ ನೂರಾರು ಕೋಟಿ ಬೆಲೆಬಾಳುವ ಚಿನ್ನ ಬೆಳ್ಳಿ ಮತ್ತು ಬೆಲೆಬಾಳುವ ಕಲ್ಲುಗಳು ಇಲ್ಲಿ ಸಿಕ್ಕಿದ್ದವು. ಇದು ೧೬ ನೆಯ ಶತಮಾನದ ದೇವಾಲಯವಾಗಿದ್ದು ಕೇರಳದ ಇತರ ದೇವಾಲಯಗಳಂತ ಇಲ್ಲಿ ಕೇವಲ ಹಿಂದೂಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಆದರೆ ಇಲ್ಲಿನ ನಡಿಗೆ ಮಾರ್ಗದ ಮೂಲಕ ಹಿಂದೂಗಳಲ್ಲದವರು ಪದ್ಮನಾಭ ಸ್ವಾಮಿ ದೇವಾಲಯದ ನೋಟವನ್ನು ಆಸ್ವಾದಿಸಬಹುದಾಗಿದೆ. ಇಲ್ಲೇ ಸಮೀಪದಲ್ಲಿರುವ ತಿರುವಾಂಕೂರು ರಾಜಮನೆತನಕ್ಕೆ ಸೇರಿದ ಕುತಿರಾಮಲಿಕ ಅರಮನೆಗೆ ಭೇಟಿ ನೀಡಬಹುದಾಗಿದೆ.

16. ಜಗತ್ತಿನ ಅತೀ ದೊಡ್ಡ ಸೌರ ಗಡಿಯಾರ ಭಾರತದಲ್ಲಿದೆ.

ಭಾರತೀಯರು ಖಗೋಳಶಾಸ್ತ್ರದಲ್ಲಿ ಪರಿಣಿತರು. ಚಿಕ್ಕ ದೂರದರ್ಶಕಗಳು ಅಲ್ಲದೇ ೧೮ ನೆಯ ಶತಮಾನದ ಜೈಪುರ ಮತ್ತು ದೆಹಲಿಯ ಜಂತರ್ ಮಂತರ್ ಸಂಕೀರ್ಣಗಳು ಖಗೋಳ ವಿಜ್ಞಾನವನ್ನು ಬೇರೆಯ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ. ಇವನ್ನೇ ಖಗೋಳ ಕೋಷ್ಟಕಗಳನ್ನು ತಯಾರಿಸಲು ಮತ್ತು ಸೂರ್ಯನ, ಚಂದ್ರನ ಮತ್ತು ಗ್ರಹಗಳ ಚಲನೆಯನ್ನು ಬರಿಗಣ್ಣಿನಿಂದ ನೋಡಲು ಸಹಾಯಕವಾಗಿರುತ್ತಿತ್ತು. ಜೈಪುರದ ಜಂತರ್ ಮಂತರ್ ಅತ್ಯಂತ ದೊಡ್ಡದಾಗಿದ್ದು ಇದರಲ್ಲಿ ೧೯ ವಾಸ್ತುಶಿಲ್ಪದ ಖಗೋಳ ಉಪಕರಣಗಳಿದ್ದು ಇಲ್ಲಿನ ಸೌರ ಗಡಿಯಾರ ಜಗತ್ತಿನಲ್ಲೇ ಅತ್ಯಂತ ದೊಡ್ಡ ಸೌರ ಗಡಿಯಾರವಾಗಿದೆ. ದೆಹಲಿಯ ಜಂತರ್ ಮಂತರ್ ಚಿಕ್ಕದಾಗಿದ್ದು ಕಡಿಮೆ ಜನಸಂದಣಿ ಇರುವ ಸ್ಥಳವಾಗಿದೆ. ಇಲ್ಲಿ ಕೆಲವು ರಚನೆಗಳ ಮೇಲಿನ ತನಕ ನೀವು ಹೋಗಬಹುದಾಗಿದೆ.

ಸಾಂಪ್ರದಾಯಿಕ ಸಿಹಿತಿನಿಸು

ಸಾಂಪ್ರದಾಯಿಕ ಸಿಹಿತಿನಿಸು

17. ಭಾರತದಲ್ಲಿ 140 ಕ್ಕೂ ಹೆಚ್ಚು ಬಗೆಯ ಸಾಂಪ್ರದಾಯಿಕ ಸಿಹಿತಿನಿಸುಗಳಿವೆ.

ಭಾರತದ ಪ್ರತಿಯೊಂದು ಪ್ರದೇಶವೂ ತನ್ನದೇ ಆದ ಸಿಹಿತಿನಿಸು ಮತ್ತು ಮಸಾಲೆಯುಕ್ತ ಸಿಹಿತಿನಿಸನ್ನು ಹೊಂದಿದೆ. ಆಗ್ರಾದ ಕುಂಬಳಕಾಯಿಯಿಂದ ತಯಾರಿಸಿದ ಪೇಠಾ, ದೆಹಲಿಯಲ್ಲಿ ಚಳಿಗಾಲದಲ್ಲಿ ಮಾತ್ರ ಸಿಗುವ ಮಂಥಿಸಿದ ಹಾಲಿನ ನೊರೆಯಿಂದ ತಯಾರಿಸುವ ದೌಲತ್ ಕಿ ಛಾಟ್, ಹಾಲಿನ ಉಪ ಉತ್ಪನ್ನವಾದ ಸಕ್ಕರೆ ಪಾಕದಲ್ಲಿ ನೀಡಲಾಗುವ ಬಂಗಾಳದ ರಸಗುಲ್ಲಾ, ಉತ್ತರ ಭಾರತದ ಪ್ರಸಿದ್ಧ ಕ್ಯಾರೆಟ್ ಹಲ್ವಾ, ಖೀರ್ ಅಕ್ಕಿ ಕಡುಬು, ಪಿಸ್ತಾ ಅಥವಾ ಕೇಸರಿ ಸುವಾಸನೆಯ ಕುಲ್ಫಿಯು ಭಾರತದ ಗೆಲಾಟೋ ಆಗಿದೆ, ಕಡಲೆಹಿಟ್ಟಿನಿಂದ ತಯಾರಿಸಲಾದ ಹಾಗೂ ಹಿಂದೂ ದೇವರಿಗೆ ನೀಡೂವ ಸಾಮಾನ್ಯ ಅರ್ಪಣೆಯಾದ ಲಡ್ಡೂ. ಹಿಟ್ಟನ್ನು ಎಣ್ಣೆಯಲ್ಲಿ ಕರೆದು ಸಿಹಿಪಾಕದಲ್ಲಿ ಹಾಕಿ ಮಾಡುವ ಜಲೇಬಿ. ಭಾರತದ ಸಿಹಿತಿನಿಸುಗಳು ಸಾಮನ್ಯವಾಗಿ ಬಹಳ ಸಿಹಿಯಾಗಿದ್ದು, ತುಪ್ಪದಲ್ಲಿ ಮಾಡಿರಲಾಗುತ್ತದೆ ಮತ್ತು ಏಲಕ್ಕಿ, ದಾಲ್ಚಿನಿ, ಲವಂಗ, ಕೇಸರಿ, ತೆಂಗಿನಕಾಯಿ, ಗುಲಾಬಿ ಸುವಾಸಿತ ದ್ರವ್ಯ ಮತ್ತು ಬೀಜಗಳ ಸುವಾಸನೆಯಿಂದ ಕೂಡಿರುತ್ತದೆ. ಭಾರತದ ಸಿಹಿತಿನಿಸುಗಳ ವಿಶೇಷತೆ ಎಂದರೆ ಯಾವ ವಸ್ತು ಹಾಕಿ ತಿನಿಸುಗಳನ್ನು ಮಾಡಲಾಗಿದೆ ಎಂದು ಗಮನಿಸಬಹುದಾಗಿದೆ. ಇದು ವಿದೇಶಿ ತಿನಿಸುಗಳಲ್ಲಿ ಸಾಧ್ಯವಿಲ್ಲ. ಹೀಗಾಗಿ ಇವು ಆರೋಗ್ಯಕರವಾಗಿರುತ್ತವೆ.. ಅಲ್ಲವೇ?

18. ದೆಹಲಿಯ ಖಾರಿ ಬಾವೋಲಿ ಜಗತ್ತಿನ ಅತ್ಯಂತ ದೊಡ್ಡ ಸಂಬಾರ ಪದಾರ್ಥಗಳ ಮಾರುಕಟ್ಟೆಯಾಗಿದೆ.

ಹಳೆ ದೆಹಲಿಯ ಬೀದಿಗಳಲ್ಲಿರುವ ಖಾರಿ ಬಾವೋಲಿ ಯ ಸಮೀಪ ಹೋಗಿತ್ತಿದ್ದಂತೆ ಅಲ್ಲಿನ ಮಸಾಲೆ ಪದಾರ್ಥಗಳ ಸುವಾಸನೆಯಿಂದ ನೀವು ಆ ಪ್ರದೇಶಕ್ಕೆ ಹೋಗುತ್ತಿದ್ದೀರಿ ಎಂದು ಗೊತ್ತಾಗುತ್ತದೆ. ಇಲ್ಲಿನ ಸೈಕಲ್ ಗಳು ಮತ್ತು ಎತ್ತಿನ ಬಂಡಿಗಳೂ ಅದೇ ಸುವಾಸನೆಯಿಂದ ಕೂಡಿರುತ್ತವೆ. ಈ ಮಾರುಕಟ್ಟೆಯು ನಾಲ್ಕು ಶತಮಾನ ಹಳೆಯದಾಗಿದ್ದು ಇಲ್ಲಿ ಇಡಿ ಒಣ ಹಣ್ಣುಗಳನ್ನು, ಬೀಜಗಳನ್ನು ಮತ್ತು ಸಿಹಿತಿನಿಸುಗಳ ತಯಾರಿಕೆಗೆ ಬೇಕಾದ ಸಾಮಗ್ರಿಗಳನ್ನು ಜೊತೆಗೆ ಮಸಾಲಾ ಪದಾರ್ಥಗಳನ್ನೂ ಮಾರಾಟ ಮಾಡಲಾಗುತ್ತದೆ.

English summary

Facts About India That May Surprise You

On world heritage day we are giving some interesting Facts About India That May Surprise You
X
Desktop Bottom Promotion