For Quick Alerts
ALLOW NOTIFICATIONS  
For Daily Alerts

ವಿನಾಯಕ ಚತುರ್ಥಿಗೆ ಈ ಪರಿಹಾರ ಮಾಡಿದರೆ ಸಮಸ್ಯೆಗಳು ದೂರಾಗುವುದು, ಹಣದ ಕೊರತೆಯೇ ಇರಲ್ಲ

|

ಗಣಪತಿ ಬಪ್ಪ ಮೋರಿಯ...... ವಿನಾಯಕ ಚತುರ್ಥಿಯಂದು ಅಂದರೆ ಆಗಸ್ಟ್‌ 31ರಂದು ಗಣಪತಿಯನ್ನು ಸ್ವಾಗತಿಸಲು ಮನ-ಮನೆಗಳಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಯಾರು ಭಕ್ತಿಯಿಂದ ಗಣೇಶನನ್ನು ಪೂಜಿಸುತ್ತಾರೋ ಅವರನ್ನು ಗಣಪ ಎಂದಿಗೂ ಕೈ ಬಿಡಲ್ಲ.

Vinayaka Chathurti

ಈ ವರ್ಷ ಗಣೇಶ ಚತುರ್ಥಿ ಬುಧವಾರದಂದು ಬಂದಿದೆ. ಬುಧವಾರ ಗಣಪನಿಗೆ ತುಂಬಾ ವಿಶೇಷವಾದ ದಿನ. ಬುಧವಾರ ಗಣೇಶನಿಗೆ ದೂರ್ವ ಅರ್ಪಿಸಿ ಪೂಜಿಸಿದರೆ ತುಂಬಾ ಒಳತಾಗುವುದು ಎಂಬುವುದು ಧಾರ್ಮಿಕ ನಂಬಿಕೆ, ಇದೀಗ ಬುಧವಾರ ವಿನಾಯಕ ಚತುರ್ಥಿ ಆಚರಿಸುವಾಗ ಕೆಲವೊಂದು ಪರಿಹಾರಗಳನ್ನು ಮಾಡಿದರೆ ನಿಮ್ಮ ನಾನಾ ಸಮಸ್ಯೆಗೆ ಶುಭ ಫಲ ಸಿಗುತ್ತದೆ.

ಸಂಪತ್ತು ವೃದ್ಧಿಗೆ

ಸಂಪತ್ತು ವೃದ್ಧಿಗೆ

*11 ದೂರ್ವಾ ಹಾಗೂ ಒಂದು ಅರಿಶಿನ ಕೊಂಬು ತೆಗೆದುಕೊಂಡು ಅದನ್ನು ಹಳದಿ ಬಟ್ಟೆಯಲ್ಲಿ ಗಂಟು ಹಾಕಿ ಗಣಪತಿಯ ಮುಂದೆ ಇಟ್ಟು ಅನಂತ ಚತುರ್ದಶಿವರೆಗೆ ಪೂಜಿಸಿ ನಂತರ ಅದನ್ನು ನೀವು ಹಣವನ್ನು ಇರಿಸುವ ಸ್ಥಳದಲ್ಲಿ ಇರಿಸಿ.

* ಮನೆಯ ಕಷ್ಟಗಳು ದೂರಾಗಿ ಆರ್ಥಿಕ ಸಂಪತ್ತು ವೃದ್ಧಸಲುಗಣೇಶ ಚತುರ್ಥಿಯ ದಿನದಂದು ಸ್ನಾನ ಮಾಡಿ ಗಣಪತಿಗೆ ಬೆಲ್ಲದೊಂದಿಗೆ ಶುದ್ಧ ತುಪ್ಪವನ್ನು ಅರ್ಪಿಸಿ. ನಂತರ ಬೆಲ್ಲವನ್ನು ಹಸುವಿಗೆ ನೀಡಿ.

ಸಂಕಲ್ಪ ನೆರವೇರಲು

ಸಂಕಲ್ಪ ನೆರವೇರಲು

ಗಣೇಶ ಚತುರ್ಥಿಯ ದಿನದಂದು ಬೆಲ್ಲದಿಂದ 21 ಸಣ್ಣ ಉಂಡೆಗಳನ್ನು ಮಾಡಿ ಗಣೇಶ ದೇವಸ್ಥಾನಕ್ಕೆ ಹೋಗಿ ದೂರ್ವಾದೊಂದಿಗೆ ಈ ಬೆಲ್ಲದ ಉಂಡೆಗಳನ್ನು ಅರ್ಪಿಸಿ ಗಣಪತಿಗೆ ನಿಮ್ಮ ಇಷ್ಟಾರ್ಥವನ್ನು ಹೇಳಿ. ಹೀಗೆ ಮಾಡಿದರೆ ನೀವು ಬಯಸಿದ್ದು ನೆರವೇರುವುದು.

 ಗಣೇಶ ಯಂತ್ರವನ್ನು ಸ್ಥಾಪಿಸಿ

ಗಣೇಶ ಯಂತ್ರವನ್ನು ಸ್ಥಾಪಿಸಿ

ಗಣೇಶ ಚತುರ್ಥಿಯ ದಿನದಂದು ಗಣೇಶ ಯಂತ್ರವನ್ನು ಸರಿಯಾದ ರೀತಿಯಲ್ಲಿ ಸ್ಥಾಪಿಸಿ. ಅದನ್ನು ನಿಯಮಿತವಾಗಿ ಪೂಜೆ ಮಾಡಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ, ಸುಖ, ಶಾಂತಿ ನೆಲೆಸುತ್ತದೆ.

 ಗಣೇಶನಿಗೆ ಅಭಿಷೇಕ

ಗಣೇಶನಿಗೆ ಅಭಿಷೇಕ

ಗಣೇಶ ಉತ್ಸವದಲ್ಲಿ ಗಣಪತಿಗೆ ಅಭಿಷೇಕ ಮಾಡುವುದರಿಂದ ವಿಶೇಷ ಫಲ ದೊರೆಯುತ್ತದೆ. ಈ ದಿನ ಗಣೇಶನಿಗೆ ಶುದ್ಧ ನೀರಿನಿಂದ ಅಭಿಷೇಕ ಮಾಡಿ. ಇದರೊಂದಿಗೆ ಗಣಪತಿ ಅಥರ್ವಶೀರ್ಷ ಪಠಿಸಿ.

ವಿಘ್ನ ನಿವಾರಿಸಲು

ವಿಘ್ನ ನಿವಾರಿಸಲು

ನೀವು ಕೆಲವು ತೊಂದರೆಗಳಿಂದ ಸುತ್ತುವರೆದಿದ್ದರೆ ಅದನ್ನು ನಿವಾರಿಸಲು ಗಣೇಶ ಉತ್ಸವದ ಸಮಯದಲ್ಲಿ, ಗಣಪತಿಯ, 'ಓಂ ಗಂ ಗೌಂ ಗಣಪತಯೇ ವಿಘ್ನ ವಿನಾಶಿನೇ ಸ್ವಾಹಾ' ಎಂಬ ಮಂತ್ರವನ್ನು 21 ಬಾರಿ ಪಠಿಸಿ.

 ಸಂತೋಷದ ದಾಂಪತ್ಯ ಜೀವನಕ್ಕಾಗಿ

ಸಂತೋಷದ ದಾಂಪತ್ಯ ಜೀವನಕ್ಕಾಗಿ

ಪತಿ-ಪತ್ನಿಯರ ನಡುವೆ ಯಾವುದೋ ವಿಷಯಕ್ಕೆ ಜಗಳವಾದರೆ, ಗಣೇಶ ಚತುರ್ಥಿಯ ದಿನದಂದು ಇಬ್ಬರೂ ಸೇರಿ 11 ಅಥವಾ 21 ಜೋಡಿ ದೂರ್ವಾವನ್ನು ಗಣಪತಿಗೆ ಅರ್ಪಿಸಬೇಕು. ಹೀಗೆ ಮಾಡುವುದರಿಂದ ದಾಂಪತ್ಯ ಜೀವನದಲ್ಲಿನ ಸಮಸ್ಯೆಗಳು ದೂರಾಗಿ ಸಂತೋಷ ಹೆಚ್ಚುವುದು.

ಇತರ ಪರಿಹಾರಗಳು

* ನೀವು ಮಾತನಾಡಲು ಹಿಂಜರಿಯುತ್ತಿದ್ದರೆ ಅಥವಾ ತೊದಲುವಿಕೆ ಮತ್ತು ಬಿಕ್ಕಿ-ಬಿಕ್ಕಿ ಮಾತನಾಡುವದೋಷಗಳನ್ನು ಹೊಂದಿದ್ದರೆ, ಗಣೇಶನಿಗೆ ಬಾಳೆಹಣ್ಣಿನ ಮಾಲೆಯನ್ನು ಮಾಡಿ ಹಾಕಿ.

* ನಿಮ್ಮ ಯಾವುದೇ ಕೆಲಸವು ಪೂರ್ಣಗೊಳ್ಳದೆ ನಿಂತು ಹೋಗುತ್ತಿದ್ದರೆ 4 ತೆಂಗಿನಕಾಯಿಯನ್ನು ಮಾಲೆ ಮಾಡಿ ಗಣೇಶನಿಗೆ ಅರ್ಪಿಸಿ ಗಣೇಶನನ್ನು ಪ್ರಾರ್ಥಿಸಿ. ನಿಮ್ಮ ಕೆಲಸವು ನಿರ್ವಿಘ್ನವಾಗಿ ನೆರವೇರುವುದು.

* ಗಣೇಶ ಚತುರ್ಥಿಯಂದು ಆನೆಗೆ ಆಹಾರ ತಿನ್ನಿಸಿ ಹಾಗೂ ಗಣೇಶನ ದೇವಸ್ಥಾನಕ್ಕೆ ಹೋಗಿ ನಿಮ್ಮ ಸಮಸ್ಯೆ ದೂರವಾಗಲು ದೇವರನ್ನು ಪ್ರಾರ್ಥಿಸಿ. ಕೆಲವೇ ದಿನಗಳಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ.

ಬುಧವಾರ ಈ ಪರಿಹಾರಗಳನ್ನು ಮಾಡಿ

ಬುಧವಾರ ಈ ಪರಿಹಾರಗಳನ್ನು ಮಾಡಿ

* ಮಗಳಿಗೆ ಮದುವೆ ತಡವಾಗುತ್ತಿದ್ದರೆ ಗಣೇಶ ಚತುರ್ಥಿಯಂದು ಮಗಳಿಗೆ ಮದುವೆಯಾಗಬೇಕೆಂದು ಬಯಸಿ ಉಪವಾಸವಿದ್ದು ಗಣಪನನ್ನು ಪೂಜಿಸಿ, ಕೂಡಲೇ ಒಳ್ಳೆಯ ಸಂಬಂಧ ಕೂಡಿ ಬರುವುದು.

* ಹುಡುಗನಿಗೆ ಮದುವೆ ತಡವಾಗುತ್ತಿದ್ದರೆ ಣೇಶ ಚತುರ್ಥಿಯಂದು ಗಣೇಶನಿಗೆ ಹಳದಿ ಬಣ್ಣದ ಸಿಹಿಯನ್ನು ಅರ್ಪಿಸಬೇಕು. ಇದರಿಂದ ಬೇಗನೆ ಕಂಕಣ ಬಲ ಕೂಡಿ ಬರುವುದು.

ಗಣೇಶ ಚತುರ್ಥಿಯ ಪೂಜೆಯ ಸಮಯದಲ್ಲಿ ಕೆಂಪು ಬಟ್ಟೆಯ ಮೇಲೆ ಶ್ರೀಯಂತ್ರವನ್ನು ಇಟ್ಟು ಅದರ ಮಧ್ಯದಲ್ಲಿ ವೀಳ್ಯದೆಲೆಯನ್ನು ಇರಿಸಿದರೆ, ಗಣೇಶನು ಪ್ರಸನ್ನನಾಗುತ್ತಾನೆ.ರ ನಂತರ ಈ ಬಟ್ಟೆಯನ್ನು ಸುರಕ್ಷಿತವಾಗಿ ಮನೆ ಕಬೋರ್ಡ್ ಅಥವಾ ಪೆಟ್ಟಿಗೆಯಲ್ಲಿ ಇಟ್ಟರೆ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ.

ಮನೆಯ ಪ್ರಗತಿಯಲ್ಲಿ ಸಮಸ್ಯೆಗಳಿದ್ದರೆ ಅಥವಾ ಏನಾದರೂ ತೊಂದರೆಯಾಗಿದ್ದರೆ, ಚತುರ್ಥಿಯ ದಿನದಂದು ಮನೆಯ ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ವೀಳ್ಯದೆಲೆಯನ್ನು ಬೆಳ್ಳಿಯ ಪಾತ್ರೆಯಲ್ಲಿ ಇರಿಸಿ. ಅನಂತ ಚತುರ್ದಶಿಯವರೆಗೆ ದೀಪ ಬೆಳಗಿ ಧೂಪ ಹಚ್ಚಿ. ಹೀಗೆ ಮಾಡಿದರೆ ನಿಮ್ಮ ಸಮಸ್ಯೆ ದೂರಾಗುವುದು.

English summary

Do These Remedies On Vinayaka Chathurti To Get Good Luck And Prosperity

If you do these remedies on Ganesha festival you get good luck and prosperity and all your marriage related problem get sort out, read on....
Story first published: Monday, August 29, 2022, 8:47 [IST]
X
Desktop Bottom Promotion