For Quick Alerts
ALLOW NOTIFICATIONS  
For Daily Alerts

ಸೋಮವಾರದ ದಿನ ಭವಿಷ್ಯ: 3 ಆಗಸ್ಟ್ 2020

|

ಜೀವನ ಎನ್ನುವುದು ಒಂದು ರಸ್ತೆ ಇದ್ದಂತೆ. ನಿರಾಸೆ ಎನ್ನುವುದು ರಸ್ತೆಯ ಉಬ್ಬು ತಗ್ಗುಗಳು. ನಾವು ಸಾಗುವ ದಾರಿಯಲ್ಲಿ ಉಬ್ಬು ತಗ್ಗುಗಳು ಬಂತೆಂದು ಮಾನಸಿಕವಾಗಿ ಕಿರಿಕಿರಿಗೆ ಒಳಗಾಗಿ ನಮ್ಮ ಸಂಚಾರವನ್ನು ನಿಲ್ಲಿಸಬಾರದು. ಎಂತಹದ್ದೇ ಉಬ್ಬು ತಗ್ಗುಗಳು ಎದುರಾದರೂ ನಿಧಾನವಾಗಿ ಅಥವಾ ಕಾಳಜಿಯಿಂದ ಅದನ್ನು ದಾಟಿ ಮುಂದೆ ಸಾಗಬೇಕು. ಆಗ ನಮ್ಮ ಸಂಚಾರ ಸುಗಮವಾಗುತ್ತದೆ. ನಮ್ಮ ಜೀವನದ್ದಲ್ಲೂ ಹಾಗೆಯೇ. ಯಾವುದಾದರೂ ಕಷ್ಟ, ಅಡೆತಡೆ ಅಥವಾ ಮೂರ್ಖರ ಚುಚ್ಚು ಮಾತುಗಳಿಗೆ ಕಿವಿಕೊಡುವುದು ಅಥವಾ ಅತಿಯಾದ ಚಿಂತೆಗೆ ಒಳಗಾಗಿ ಬೇಸರಗೊಳ್ಳುವ ಗೋಜಿಗೆ ಹೋಗಬಾರದು. ಸತ್ಯದ ದಾರಿಯಲ್ಲಿ, ಸಮತೋಲನದ ಮನಃಸ್ಥಿತಿಯಲ್ಲಿ ಮುಂದೆ ಸಾಗಬೇಕು. ಆಗ ನಮ್ಮ ಜೀವನ ಸುಖ ಹಾಗೂ ಸಂತೋಷದಿಂದ ಕೂಡಿರುತ್ತದೆ. ಅಲ್ಲದೆ ಇತರ ವ್ಯಕ್ತಿಗಳಿಗೂ ನಾವು ಮಾದರಿಯಾಗುತ್ತೇವೆ. ಬದುಕಿನಲ್ಲಿ ಸುಂದರ ಕನಸು ಹಾಗೂ ಆತ್ಮವಿಶ್ವಾಸವನ್ನು ತುಂಬಿಕೊಂಡು ಕೆಲಸವನ್ನು ಆರಂಭಿಸಿ. ನಿಮ್ಮ ಈ ಸುಂದರ ಬದುಕಿಗೆ ಗ್ರಹಗತಿಗಳ ಸಹಕಾರ ಎಷ್ಟರ ಮಟ್ಟಿಗೆ ಇದೆ ಎನ್ನುವುದನ್ನು ನೀವು ತಿಳಿದು ಕೊಳ್ಳಬೇಕೆಂದುಕೊಂಡಿದ್ದರೆ, ಬೋಲ್ಡ್ ಸ್ಕೈ ನಿಮಗಾಗಿ ನೀಡಿರುವ ಈ ಮುಂದಿನ ರಾಶಿ ಭವಿಷ್ಯವನ್ನು ಪರಿಶೀಲಿಸಿ....

ಸಂವತ್ಸರ: ಶಾರ್ವರಿ

ಆಯನ: ದಕ್ಷಿಣಾಯನ

ಋತು: ಹೇಮಂತ

ಮಾಸ: ಶ್ರಾವಣ

ಪಕ್ಷ: ಶುಕ್ಲ

ತಿಥಿ: ಪೂರ್ಣಿಮಾ

ನಕ್ಷತ್ರ: ಉತ್ತರ ಆಷಾಢ

ರಾಹುಕಾಲ: ಬೆಳಿಗ್ಗೆ 7.25 ರಿಂದ 9.05 ರವರೆಗೆ

ಗುಳಿಕಕಾಲ: ಮಧ್ಯಾಹ್ನ 2.08 ರಿಂದ 3.49 ರವರೆಗೆ

ಯಮಗಂಡಕಾಲ: ಬೆಳಿಗ್ಗೆ 10.46 ರಿಂದ 12.27 ರವರೆಗೆ

ದುರ್ಮುಹೂರ್ತ: ಮಧ್ಯಾಹ್ನ 12.54 ರಿಂದ 1.48 ರವರೆಗೆ

ಸೂರ್ಯೋದಯ: ಬೆಳಿಗ್ಗೆ 5.44

ಸೂರ್ಯಾಸ್ತ: ಸಂಜೆ 7.10

ಮೇಷ ರಾಶಿ

ಮೇಷ ರಾಶಿ

ಹಣದ ದೃಷ್ಟಿಯಿಂದ ದಿನವು ನಿಮಗೆ ಅದೃಷ್ಟವಾಗಿರುತ್ತದೆ. ಇಂದು ಆಭರಣಗಳಿಗಾಗಿ ಶಾಪಿಂಗ್ ಮಾಡಬಹುದು. ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ಸಂತೋಷ ಇರುತ್ತದೆ. ಪ್ರತಿ ಸಣ್ಣ ಮತ್ತು ದೊಡ್ಡ ನಿರ್ಧಾರಗಳಲ್ಲಿ ಸಂಗಾತಿಯು ನಿಮ್ಮನ್ನು ಬೆಂಬಲಿಸುತ್ತಾರೆ. ಕುಟುಂಬ ಸದಸ್ಯರಲ್ಲಿ ಪರಸ್ಪರ ವಾತ್ಸಲ್ಯ ಇರುತ್ತದೆ. ಜತೆಗೆ ಅವರೊಂದಿಗೆ ಸಮಯ ಕಳೆಯಲು ಅವಕಾಶ ಇದೆ. ಮಕ್ಕಳೊಂದಿಗೆ ಸಾಕಷ್ಟು ಮೋಜು ಮಾಡುತ್ತೀರಿ. ತಾಯಿಯ ಆರೋಗ್ಯದಲ್ಲಿನ ಸುಧಾರಣೆಯು ನಿಮ್ಮನ್ನು ಒತ್ತಡರಹಿತರಾಗಿಸುತ್ತದೆ. ನೌಕರರಿಗೆ ದಿನವು ಸಾಮಾನ್ಯವಾಗಿರುತ್ತದೆ. ಉದ್ಯಮಿಗಳು ಇಂದು ಪ್ರಯಾಣಿಸಬೇಕಾಗಬಹುದು, ಅದು ಅವರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ದೀರ್ಘಕಾಲದ ಯಾವುದೇ ಒಪ್ಪಂದವು ಇಂದು ಪೂರ್ಣಗೊಳ್ಳಬಹುದು.

ಅದೃಷ್ಟ ಬಣ್ಣ: ಕಿತ್ತಳೆ

ಅದೃಷ್ಟ ಸಂಖ್ಯೆ: 8

ಅದೃಷ್ಟ ಸಮಯ: ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 3:00 ರವರೆಗೆ

ವೃಷಭ ರಾಶಿ

ವೃಷಭ ರಾಶಿ

ನಿಮ್ಮ ಪ್ರಸಕ್ತ ನಡೆಯುತ್ತಿರುವ ಯಾವುದೇ ಪ್ರಯತ್ನಗಳಲ್ಲಿ ವಿಫಲವಾದರೆ ನಿಮಗೆ ದೊಡ್ಡ ಹಾನಿ ಉಂಟಾಗುತ್ತದೆ. ಇಂದು ನೀವು ಅನಗತ್ಯ ವಿಷಯಗಳಲ್ಲಿ ಭಾಗಿಯಾಗುತ್ತೀರಿ ಅದು ನಿಮ್ಮ ಎಲ್ಲಾ ಯೋಜನೆಗೆ ಅಡ್ಡಿಯಾಗುತ್ತದೆ. ಆದರೂ, ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ಯಶಸ್ಸನ್ನು ನಿರೀಕ್ಷಿಸಲಾಗುತ್ತದೆ. ದಿನ ಪ್ರಯಾಣಕ್ಕೆ ಅನುಕೂಲಕರವಾಗಿಲ್ಲ. ಇಂದು ವಾಹನವನ್ನು ಬಳಸುವಾಗ ವಿಶೇಷ ಕಾಳಜಿ ವಹಿಸಿ. ಯಾವುದೇ ಹಣಕಾಸಿನ ನಿರ್ಧಾರಗಳನ್ನು ಅವಸರದಲ್ಲಿ ಮಾಡಬೇಡಿ ಮತ್ತು ಮಾತುಕತೆ ನಡೆಸುವಾಗ ಜಾಗರೂಕರಾಗಿರಿ. ಕೌಟುಂಬಿಕ ಜೀವನದಲ್ಲಿ ಶಾಂತಿ ಇರುತ್ತದೆ. ಕುಟುಂಬದೊಂದಿಗೆ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 24

ಅದೃಷ್ಟ ಸಮಯ: ಮಧ್ಯಾಹ್ನ 1:45 ರಿಂದ 3:30 ರವರೆಗೆ

ಮಿಥುನ ರಾಶಿ

ಮಿಥುನ ರಾಶಿ

ನಿಮ್ಮ ಸಂಗಾತಿಯೊಂದಿಗಿನ ಹಾಳಾದ ಸಂಬಂಧವು ಇಂದು ಸುಧಾರಿಸುವ ಸಾಧ್ಯತೆಯಿದೆ, ಅದು ನಿಮ್ಮ ವೈವಾಹಿಕ ಜೀವನದಲ್ಲಿ ಮತ್ತೊಮ್ಮೆ ಪ್ರೀತಿ ಮತ್ತು ಶಾಂತಿಯನ್ನು ತರುತ್ತದೆ. ಸಂಗಾತಿಯು ನಿಮ್ಮಿಂದ ಹೆಚ್ಚಿನ ಸಮಯವನ್ನು ಕೋರಬಹುದು, ಮಕ್ಕಳಿಂದ ನೀವು ಸಂತೋಷವನ್ನು ಪಡೆಯುತ್ತೀರಿ. ಇಂದ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ತುಂಬಾ ಕಾರ್ಯನಿರತರಾಗಿರುತ್ತೀರಿ ಆದರೆ, ಕುಟುಂಬ ಸದಸ್ಯರ ಸಹಾಯದಿಂದ ಎಲ್ಲವನ್ನೂ ಸುಲಭವಾಗಿ ನಿರ್ವಹಿಸುತ್ತೀರಿ. ಕೆಲಸದಲ್ಲಿ ದಿನವು ತುಂಬಾ ಶುಭವಾಗಿರುತ್ತದೆ. ವ್ಯಾಪಾರಸ್ಥರು ಇಂದು ಕೆಲವು ಪ್ರಮುಖ ಯಶಸ್ಸನ್ನು ಪಡೆಯಬಹುದು. ವ್ಯವಹಾರವನ್ನು ವಿಸ್ತರಿಸಲು ಬಯಸಿದರೆ ಉತ್ತಮ ಅವಕಾಶಗಳನ್ನು ನಿರೀಕ್ಷಿಸಲಾಗಿದೆ. ಉದ್ಯೋಗಿಗಳಿಗೆ ದಿನ ಸಾಮಾನ್ಯವಾಗಿರುತ್ತದೆ.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 16

ಅದೃಷ್ಟ ಸಮಯ: ಸಂಜೆ 7:00 ರಿಂದ 9:00 ರವರೆಗೆ

ಕರ್ಕ ರಾಶಿ

ಕರ್ಕ ರಾಶಿ

ಕುಟುಂಬ ಸದಸ್ಯರ ನಡುವಿನ ವ್ಯತ್ಯಾಸಗಳು ಮತ್ತು ಅವರಲ್ಲಿ ಪರಸ್ಪರ ತಿಳುವಳಿಕೆ ಕಡಿಮೆಯಾದ ಕಾರಣ ಮನೆಯ ವಾತಾವರಣವು ತೊಂದರೆಗೊಳಗಾಗುತ್ತದೆ. ಪೋಷಕರೊಂದಿಗೆ ಭಿನ್ನಾಭಿಪ್ರಾಯಗಳನ್ನು ಎದುರಿಸಬಹುದು. ನಿಮ್ಮ ತಪ್ಪು ವರ್ತನೆ ಅವರನ್ನು ದುಃಖಿಸುವಂತೆ ಮಾಡಬಹುದು. ಬಹಳ ಚಿಂತನಶೀಲವಾಗಿ ಕೆಲಸ ಮಾಡುವುದು ಉತ್ತಮ. ಕೆಲಸದ ಹೊರೆ ಹೆಚ್ಚು ಆಗುವುದಿಲ್ಲ, ಆದರೆ ನಿಮ್ಮ ಸೋಮಾರಿತನದಿಂದಾಗಿ ನೀವು ಗಮನ ಹರಿಸುವುದಿಲ್ಲ. ನಿರುದ್ಯೋಗಿಗಳಿಗೆ ಇಂದು ಉದ್ಯೋಗ ದೊರೆಯುವ ಸಾಧ್ಯತೆ ಹೆಚ್ಚು. ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುಯುತ್ತದೆ. ನಿಮ್ಮ ಸಂಗಾತಿ ಮತ್ತು ಮಕ್ಕಳಿಂದ ಸಂತೋಷವನ್ನು ಪಡೆಯುತ್ತೀರಿ. ಪ್ರೀತಿಯ ವಿಷಯಗಳಲ್ಲಿ ದಿನವು ಉತ್ತಮವಾಗಿಲ್ಲ. ತಪ್ಪು ತಿಳುವಳಿಕೆ ನಿಮ್ಮಿಬ್ಬರ ನಡುವೆ ವಿವಾದಗಳಿಗೆ ಕಾರಣವಾಗಬಹುದು.

ಅದೃಷ್ಟ ಬಣ್ಣ: ಕಂದು

ಅದೃಷ್ಟ ಸಂಖ್ಯೆ: 48

ಅದೃಷ್ಟ ಸಮಯ: ಸಂಜೆ 6:20 ರಿಂದ 8:20 ರವರೆಗೆ

 ಸಿಂಹ ರಾಶಿ

ಸಿಂಹ ರಾಶಿ

ಆರ್ಥಿಕ ವಿಷಯಗಳಲ್ಲಿ ದಿನವು ಪ್ರಯೋಜನಕಾರಿಯಾಗಲಿದೆ. ಯಾವುದೇ ಹಣಕಾಸಿನ ಸಮಸ್ಯೆಗಳನ್ನು ಎದುರಿಸುವುದಿಲ್ಲ ಮತ್ತು ಹೆಚ್ಚುವರಿಯಾಗಿ ಪ್ರಯೋಜನಗಳನ್ನು ಸಹ ಪಡೆಯುವಿರಿ. ಕೆಲಸ ಅಥವಾ ವ್ಯವಹಾರವಾಗಲಿ ಹೊಸದನ್ನು ಮಾಡಲು ಪ್ರಯತ್ನಿಸುತ್ತಿದ್ದರೆ ಯಶಸ್ಸನ್ನು ಪಡೆಯಬಹುದು. ಕುಟುಂಬ ಜೀವನದಲ್ಲಿ ಸಂತೋಷವು ಇರುತ್ತದೆ ಮತ್ತು ನಿಮ್ಮ ಪ್ರೀತಿಪಾತ್ರರೊಡನೆ ಕಳೆಯುವ ಸಮಯವು ಸಂತೋಷದಿಂದ ತುಂಬಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಸ್ವಲ್ಪ ಜಗಳ ಆಗುವ ಸಾಧ್ಯತೆ ಇದೆ, ಆದರೆ ಕ್ರಮೇಣ ಎಲ್ಲವೂ ಸಾಮಾನ್ಯವಾಗುತ್ತದೆ. ಇಂದು ನಿಮ್ಮ ಸ್ವಂತ ನಿರ್ಧಾರಗಳು ನಿಮ್ಮನ್ನು ಗೊಂದಲಕ್ಕೆ ಸಿಲುಕಿಸುತ್ತದೆ. ತಾಳ್ಮೆಯಿಂದಿರಿ ಮತ್ತು ನಿಮ್ಮನ್ನು ನಂಬಿರಿ. ಅಪರಿಚಿತರ ಬಗ್ಗೆ ಎಚ್ಚರದಿಂದಿರಿ.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 7

ಅದೃಷ್ಟ ಸಮಯ: ಸಂಜೆ 7:00 ರಿಂದ 9:25 ರವರೆಗೆ

ಕನ್ಯಾ ರಾಶಿ

ಕನ್ಯಾ ರಾಶಿ

ಮೂರನೆಯ ವ್ಯಕ್ತಿಯ ಹಸ್ತಕ್ಷೇಪದಿಂದಾಗಿ ದಾಂಪತ್ಯ ಜೀವನದಲ್ಲಿ ವಿವಾದಗಳು ಉಂಟಾಗುತ್ತವೆ, ಅದು ನಿಮ್ಮಿಬ್ಬರ ನಡುವೆ ತಪ್ಪು ತಿಳುವಳಿಕೆಯನ್ನು ಉಂಟುಮಾಡುತ್ತದೆ. ನೀವು ವಿಷಯವನ್ನು ನಿಭಾಯಿಸಲು ಬಯಸಿದರೆ ನಡವಳಿಕೆಯನ್ನು ಸರಿಯಾಗಿ ಇರಿಸಿ. ಅಲ್ಲದೆ ಅಂತಹ ಸಂದರ್ಭಗಳಲ್ಲಿ ಮೌನವಾಗಿರುವುದು ಉತ್ತಮ. ಪ್ರಣಯ ಜೀವನದ ವಿಚಾರದಲ್ಲಿ ದಿನವು ಅದ್ಭುತವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಕಳೆದ ಕ್ಷಣಗಳು ನಿಮಗೆ ಸ್ಮರಣೀಯ ಎನಿಸುತ್ತದೆ. ಇಂದು ನಿಮ್ಮ ಉಜ್ವಲ ಮತ್ತು ಸುಂದರವಾದ ಭವಿಷ್ಯದ ಯೋಜನೆಗಳು ನೆರವೇರಬಹುದು. ಸಮಯ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ಕೆಲಸದ ಸ್ಥಳದಲ್ಲಿ ಉತ್ತಮ ಫಲಿತಾಂಶಗಳನ್ನು ಸಾಧಿಸಬಹುದು. ಪೂರ್ವಜರ ಆಸ್ತಿ ಇಂದು ನಿಮಗೆ ಪ್ರಯೋಜನವನ್ನು ನೀಡುತ್ತದೆ.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 12

ಅದೃಷ್ಟ ಸಮಯ: ಮಧ್ಯಾಹ್ನ 12:30 ರಿಂದ 9:00 ರವರೆಗೆ

ತುಲಾ ರಾಶಿ

ತುಲಾ ರಾಶಿ

ಕೆಲಸದಲ್ಲಿ ದಿನವು ತುಂಬಾ ಕಾರ್ಯನಿರತವಾಗಿರುತ್ತದೆ ಇದರಿಂದ ಸುಸ್ತಾಗಿರುತ್ತದೆ. ಕೆಲವು ಸಮಯದಿಂದ ಕಚೇರಿಯಲ್ಲಿ ನಿಮ್ಮ ಕೆಲವು ಕೆಲಸಗಳನ್ನು ಮುಂದೂಡುತ್ತಿದ್ದೀರಿ, ಆದರೆ ಇಂದು ನೀವು ಆ ಎಲ್ಲಾ ಕಾರ್ಯಗಳನ್ನು ಸಮಯಕ್ಕೆ ಪೂರ್ಣಗೊಳಿಸಬೇಕು. ವ್ಯವಹಾರದ ವಿಷಯಗಳಲ್ಲಿ ಗೊಂದಲ ಉಂಟಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಯಾರನ್ನೂ ಸಂಪರ್ಕಿಸದೆ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ಕುಟುಂಬ ಸದಸ್ಯರೊಂದಿಗಿನ ಭಿನ್ನಾಭಿಪ್ರಾಯವು ಅವರೊಂದಿಗೆ ವಿವಾದಗಳಿಗೆ ಕಾರಣವಾಗಬಹುದು. ನೀವು ಅವರೊಂದಿಗೆ ಕುಳಿತು ನಿಮ್ಮ ದೃಷ್ಟಿಕೋನವನ್ನು ವಿವರಿಸಬೇಕು. ಇಂದು, ನಿಮ್ಮ ಸಂಗಾತಿಯಿಂದ ನಿಮಗೆ ಯಾವುದೇ ವಿಶೇಷ ಬೆಂಬಲ ಸಿಗುವುದಿಲ್ಲ. ಪ್ರಣಯ ಜೀವನದಲ್ಲಿ ಸಮಸ್ಯೆ ಇರಬಹುದು. ನಿಮ್ಮ ಸಂಗಾತಿಗೆ ನೀಡಿದ ಭರವಸೆಯನ್ನು ಈಡೇರಿಸದ ಕಾರಣ ನಿಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳಿರುವ ಸಾಧ್ಯತೆಯಿದೆ.

ಅದೃಷ್ಟ ಬಣ್ಣ: ತಿಳಿ ನೀಲಿ

ಅದೃಷ್ಟ ಸಂಖ್ಯೆ: 21

ಅದೃಷ್ಟ ಸಮಯ: ಸಂಜೆ 5:55 ರಿಂದ 8:15 ರವರೆಗೆ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಇಂದು ಸಂಬಂಧಿಕರು ಮನೆಗೆ ಬರಬಹುದು, ಇದರಿಂದಾಗಿ ವಾತಾವರಣವು ತುಂಬಾ ಉತ್ತಮವಾಗಿರುತ್ತದೆ. ನೀವೂ ಅವರ ಆತಿಥ್ಯಕ್ಕೆ ಪ್ರಾಮುಖ್ಯ ವಹಿಸುತ್ತೀರಿ, ಯಾವುದೇ ನ್ಯೂನತೆ ಮಾಡುವುದಿಲ್ಲ. ಒಡಹುಟ್ಟಿದವರೊಂದಿಗೆ ಪರಸ್ಪರ ತಿಳುವಳಿಕೆ ಹೆಚ್ಚಾಗುತ್ತದೆ. ನೀವು ಅವರೊಂದಿಗೆ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸಬಹುದು. ಪ್ರಣಯ ಜೀವನದಲ್ಲಿ ಒಬ್ಬರಿಗೊಬ್ಬರು ಹೆಚ್ಚು ಸಮಯ ಕಳೆಯುವುದರಿಂದ, ನಿಮ್ಮ ಪ್ರೀತಿ ಹೆಚ್ಚಾಗುತ್ತದೆ. ಸಂಗಾತಿಯೊಂದಿಗಿನ ಸಂಬಂಧವು ಸಿಹಿಯಾಗಿರುತ್ತದೆ. ನಿರುದ್ಯೋಗಿಗಳು ಸಮಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನೀವು ಇಂದು ತಡವಾಗಿ ಕಚೇರಿಯನ್ನು ತಲುಪಿದರೆ ನಿಮಗಾಗಿ ದೊಡ್ಡ ಸಮಸ್ಯೆ ಉದ್ಭವಿಸಬಹುದು. ಆರೋಗ್ಯ ವಿಷಯಗಳು ಇಂದು ಉತ್ತಮವಾಗಿರುತ್ತವೆ. ತುಂಬಾ ನಿರಾಳರಾಗುತ್ತೀರಿ. ಇಂದು ನೀವು ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೀರಿ.

ಅದೃಷ್ಟ ಬಣ್ಣ: ಕಂದು

ಅದೃಷ್ಟ ಸಂಖ್ಯೆ: 4

ಅದೃಷ್ಟ ಸಮಯ: ಮಧ್ಯಾಹ್ನ 12:30 ರಿಂದ 5:00 ರವರೆಗೆ

ಧನು ರಾಶಿ

ಧನು ರಾಶಿ

ವೈವಾಹಿಕ ಜೀವನದಲ್ಲಿ ಸಂಗಾತಿಯೊಂದಿಗೆ ಸಾಕಷ್ಟು ಸಮಯ ಕಳೆಯಲು ನಿಮಗೆ ಅವಕಾಶ ಸಿಗುವುದಿಲ್ಲ. ಪ್ರೇಮಿಗಳಿಗೆ ದಿನವು ಉತ್ತಮವಾಗಿರುತ್ತದೆ. ನಿಮ್ಮ ಸಂಬಂಧದ ಬಗ್ಗೆ ಕುಟುಂಬ ಸದಸ್ಯರ ಚರ್ಚಿಸಲು ಸಂಪರ್ಕಿಸಲು ಸಮಯ ಒಳ್ಳೆಯದು. ಕೆಲಸದಲ್ಲಿ ದಿನವು ನಿಮ್ಮ ತಾಳ್ಮೆಯನ್ನು ಪರೀಕ್ಷಿಸಬಹುದು. ಇದ್ದಕ್ಕಿದ್ದಂತೆ ಕೆಲಸದ ಹೊರೆ ಇಂದು ಹೆಚ್ಚಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ತುಂಬಾ ಶಾಂತಿಯುತವಾಗಿ ಮತ್ತು ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕು. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆದರೂ ಈ ಸಮಯದಲ್ಲಿ ನೀವು ಉಳಿತಾಯದತ್ತ ಗಮನ ಹರಿಸಬೇಕಾಗಿದೆ. ಆರೋಗ್ಯದ ದೃಷ್ಟಿಯಿಂದ ಉತ್ತಮ ದಿನ. ಇಂದು ನೀವು ಸಾಕಷ್ಟು ತೃಪ್ತಿ ಮತ್ತು ಉತ್ತಮತೆಯನ್ನು ಅನುಭವಿಸುವಿರಿ.

ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 15

ಅದೃಷ್ಟ ಸಮಯ: ಮಧ್ಯಾಹ್ನ 1:45 ರಿಂದ 7:00 ರವರೆಗೆ

ಮಕರ ರಾಶಿ

ಮಕರ ರಾಶಿ

ಹೆತ್ತವರ ಅನಾರೋಗ್ಯದಿಂದಾಗಿ ನಿಮ್ಮ ಆತಂಕ ಇಂದು ಹೆಚ್ಚಾಗಬಹುದು. ಕೆಲವು ಹಳೆಯ ಸಮಸ್ಯೆಗಳು ಕುಟುಂಬ ಸದಸ್ಯರಲ್ಲಿ ವಿವಾದಗಳಿಗೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ಸಾಕಷ್ಟು ಕಿರಿಕಿರಿ ಅನುಭವಿಸುವಿರಿ. ನಿಮಗಿಂತ ಹಿರಿಯರ ಬಗ್ಗೆ ಗೌರವ ಇಟ್ಟುಕೊಳ್ಳುವುದು ಉತ್ತಮ. ಇಂದು ಯಾವುದೇ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಕೆಲಸದಲ್ಲಿ ದಿನ ಕಠಿಣವಾಗಿರುತ್ತದೆ. ಉನ್ನತ ಅಧಿಕಾರಿಗಳ ನಿರಂತರ ಹಸ್ತಕ್ಷೇಪದಿಂದಾಗಿ ನೀವು ತುಂಬಾ ನಿರಾಶೆಗೊಳ್ಳುವಿರಿ. ನಿಮ್ಮ ಪ್ರತಿಭೆಯನ್ನು ತೋರಿಸಲು ಸರಿಯಾದ ಅವಕಾಶ ಸಿಗುತ್ತಿಲ್ಲ ಎಂದು ನೀವು ಭಾವಿಸಿದರೆ ನಿಮ್ಮ ಕೆಲಸವನ್ನು ಬದಲಾಯಿಸಲು ಪ್ರಯತ್ನಿಸಿ. ನಿಮ್ಮ ಅದೃಷ್ಟವು ನಿಮ್ಮನ್ನು ಸರಿಯಾದ ಸ್ಥಳಕ್ಕೆ ಕರೆದೊಯ್ಯುತ್ತದೆ. ಹಣದ ದೃಷ್ಟಿಯಿಂದ ದಿನ ಪ್ರಯೋಜನಕಾರಿಯಾಗಲಿದೆ. ಇಂದು ನಿರೀಕ್ಷಿಸಿದ ಆರ್ಥಿಕ ಲಾಭವನ್ನು ಪಡೆಯುವ ನಿರೀಕ್ಷೆಯಿದೆ.

ಅದೃಷ್ಟ ಬಣ್ಣ: ಮರೂನ್

ಅದೃಷ್ಟ ಸಂಖ್ಯೆ: 24

ಅದೃಷ್ಟ ಸಮಯ: ಬೆಳಿಗ್ಗೆ 9:40 ರಿಂದ ಸಂಜೆ 5:30 ರವರೆಗೆ

ಕುಂಭ ರಾಶಿ

ಕುಂಭ ರಾಶಿ

ಕೆಲಸದಲ್ಲಿ ದಿನವು ಸ್ವಲ್ಪ ಕಠಿಣವಾಗಿರುತ್ತದೆ. ನೀವು ಬಯಸಿದ ಫಲಿತಾಂಶವನ್ನು ಪಡೆಯಲು ಬಯಸಿದರೆ ಹೆಚ್ಚು ಶ್ರಮಿಸಬೇಕು. ವೈಫಲ್ಯಗಳಿಗೆ ಹೆದರಬೇಡಿ. ಮನೆಯ ವಿಷಯಗಳು ಕೆಲವು ತೊಂದರೆಗಳಿಗೆ ಕಾರಣವಾಗಬಹುದು. ಕುಟುಂಬ ಸದಸ್ಯರ ನಡುವಿನ ವ್ಯತ್ಯಾಸವು ಮನೆಯಲ್ಲಿ ಗೊಂದಲವನ್ನು ಉಂಟುಮಾಡಬಹುದು. ನೀವು ತಾಳ್ಮೆಯಿಂದಿರಬೇಕು. ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಉಳಿಯುತ್ತದೆ. ಸಂಗಾತಿಯ ನಡವಳಿಕೆಯಲ್ಲಿ ನೀವು ದೊಡ್ಡ ಬದಲಾವಣೆಯನ್ನು ನೋಡುತ್ತೀರಿ. ಸಂಗಾತಿಯ ವಿಶೇಷ ಬೆಂಬಲದ ಕೊರತೆಯಿಂದಾಗಿ ಇಂದು ತುಂಬಾ ನಿರಾಶೆಗೊಳ್ಳುವಿರಿ. ಅವರು ನಿಮ್ಮ ಬಗ್ಗೆ ಏನಾದರೂ ಅಸಮಾಧಾನ ಹೊಂದಿರಬಹುದು. ಆರೋಗ್ಯವು ಉತ್ತಮವಾಗಿರುತ್ತದೆ.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 34

ಅದೃಷ್ಟ ಸಮಯ: ಮಧ್ಯಾಹ್ನ 12:00 ರಿಂದ 4:25 ರವರೆಗೆ

ಮೀನ ರಾಶಿ

ಮೀನ ರಾಶಿ

ಹಠಾತ್ ಹಣದ ಲಾಭವು ನಿಮ್ಮ ಹಣಕಾಸಿನ ಸ್ಥಿತಿಯನ್ನು ಬಲಪಡಿಸುತ್ತದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ಕುಟುಂಬದೊಂದಿಗೆ ದಿನವನ್ನು ಚೆನ್ನಾಗಿ ಕಳೆಯುತ್ತೀರಿ ಮತ್ತು ಯಾವುದೇ ಕುಟುಂಬ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಲು ನಿಮಗೆ ಸಾಧ್ಯವಾಗುತ್ತದೆ. ಹಿರಿಯರು ನಿಮ್ಮೊಂದಿಗೆ ಸಂತೋಷವಾಗಿರುತ್ತಾರೆ ಮತ್ತು ನಿಮ್ಮ ಎಲ್ಲಾ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತ್ತೀರಿ. ಇಂದು ವ್ಯಾಪಾರಿಗಳಿಗೆ ಪ್ರಯೋಜನಕಾರಿಯಾಗಲಿದೆ. ಕೆಲವು ದೊಡ್ಡ ಆರ್ಥಿಕ ಲಾಭಗಳನ್ನು ಪಡೆಯುವ ಸಾಧ್ಯತೆಯೂ ಇದೆ. ಸಮಾಜದಲ್ಲಿ ನಿಮ್ಮ ಗೌರವವು ಹೆಚ್ಚಾಗುತ್ತದೆ ಮತ್ತು ನಿಮ್ಮ ಸಕಾರಾತ್ಮಕತೆಯಿಂದ ಜನರು ಹೆಚ್ಚು ಪ್ರಭಾವಿತರಾಗುತ್ತಾರೆ.

ಅದೃಷ್ಟ ಬಣ್ಣ: ತಿಳಿ ನೀಲಿ

ಅದೃಷ್ಟ ಸಂಖ್ಯೆ: 29

ಅದೃಷ್ಟ ಸಮಯ: ಮಧ್ಯಾಹ್ನ 2:00 ರಿಂದ 5:55 ರವರೆಗೆ

English summary

Dina Bhavishya 3 August 2020

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Monday, August 3, 2020, 4:00 [IST]
X