For Quick Alerts
ALLOW NOTIFICATIONS  
For Daily Alerts

ಬುಧವಾರದ ದಿನ ಭವಿಷ್ಯ: ವೃಶ್ಚಿಕ ರಾಶಿಯವರಿಗೆ ಇಂದು ಉತ್ತಮ ದಿನ

|

ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:

ಸಂವತ್ಸರ: ಶಾರ್ವರಿ
ಆಯನ: ದಕ್ಷಿಣಾಯನ
ಋತು: ಶರದ್
ಮಾಸ: ಕಾರ್ತಿಕಾ
ನಕ್ಷತ್ರ: ಬೆಳಗ್ಗೆ 10:40 ರ ವರೆಗೆ ಮೂಲಾ, ನಂತರ ಪೂರ್ವಾಷಾಢ
ಶುಕ್ಲ ಪಕ್ಷ
ರಾಹುಕಾಲ: ಮಧ್ಯಾಹ್ನ 12:06ರಿಂದ 01:26ರವರೆಗೆ
ಗುಳಿಕಕಾಲ: ಬೆಳಗ್ಗೆ 10:46ರಿಂದ 12:06ರವರೆಗೆ
ಯಮಗಂಡಕಾಲ: ಬೆಳಗ್ಗೆ 08:06 ರಿಂದ 09:26ರವರೆಗೆ
ದುರ್ಮುಹೂರ್ತ: ಬೆಳಗ್ಗೆ 11:45ರಿಂದ 12:28ರವರೆಗೆ

ಸೂರ್ಯೋದಯ: ಬೆಳಗ್ಗೆ 06:46ಕ್ಕೆ
ಸೂರ್ಯಾಸ್ತ: ಸಂಜೆ 05:26ಕ್ಕೆ

ಮೇಷ ರಾಶಿ:

ಮೇಷ ರಾಶಿ:

ನಿಮ್ಮ ಆರ್ಥಿಕ ಯೋಜನೆಗಳನ್ನು ರಹಸ್ಯವಾಗಿರಿಸಿದರೆ ಉತ್ತಮ. ಹಣಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಹೆಚ್ಚಾಗಿ ಯಾರಲ್ಲಿಯೂ ಮಾತನಾಡಲು ಹೋಗಬೇಡಿ. ಇಲ್ದರಿಂದ ನಿಮಗೇ ಕಷ್ಟವಾಗುತ್ತದೆ. ಈ ದಿನ ನಿಮ್ಮ ಮಾತು ಮತ್ತು ನಡವಳಿಕೆಯನ್ನು ನಿಯಂತ್ರಿಸಬೇಕು. ಇಲ್ಲದಿದ್ದರೆ ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗುತ್ತದೆ. ಇತರರ ವ್ಯವಹಾರಗಳಲ್ಲಿ ಅನಗತ್ಯವಾಗಿ ಮೂಗುತೂರಿಸುವುದನ್ನು ತಪ್ಪಿಸಿ. ಉದ್ಯೋಗಸ್ಥರಿಗೆ ಇಂದು ಉತ್ತಮ ದಿನವಾಗಲಿದೆ. ನಿಮಗೆ ಯಾವುದೇ ಜವಾಬ್ದಾರಿಯನ್ನು ನೀಡಲಾಗಿದ್ದರೂ, ನೀವು ಅದನ್ನು ಎಲ್ಲಾ ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ ಪೂರೈಸುತ್ತೀರಿ. ಮತ್ತೊಂದೆಡೆ, ವ್ಯಾಪಾರಸ್ಥರು ಸಹ ನಿರೀಕ್ಷಿತ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಆರೋಗ್ಯದ ದೃಷ್ಟಿಯಿಂದ ಇಂದು ಉತ್ತಮ ದಿನವಾಗಲಿದೆ. ಇಂದು ನೀವು ತುಂಬಾ ರಿಫ್ರೆಶ್ ಮತ್ತು ಎನರ್ಜೆಟಿಕ್ ಆಗಿರುತ್ತೀರಿ.

ಉತ್ತಮ ಬಣ್ಣ: ಬಿಳಿ

ಶುಭ ಸಂಖ್ಯೆ: 2

ಶುಭ ಸಮಯ: ಸಂಜೆ 6:30 ರಿಂದ 10:15 ರವರೆಗೆ

ವೃಷಭ ರಾಶಿ:

ವೃಷಭ ರಾಶಿ:

ಉದ್ಯೋಗ ಮಾಡುವವರಿಗೆ ಇಂದು ತುಸು ಕಷ್ಟಕರ ದಿನ ಎಂದೇ ಹೇಳಬಹುದು. ಕೆಲಸ ಅಥವಾ ವ್ಯವಹಾರ ಯಾವುದೇ ಇರಲಿ, ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಈ ಸಮಯದಲ್ಲಿ ಸೋಮಾರಿತನವನ್ನು ತಪ್ಪಿಸುವುದು ನಿಮಗೆ ಒಳ್ಳೆಯದು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತವೆ. ಕುಟುಂಬದೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. ನೀವು ವಿವಾಹಿತರಾಗಿದ್ದರೆ, ನಿಮ್ಮ ಸಂಗಾತಿಯ ಬಗ್ಗೆ ಹೆಚ್ಚು ಗಮನ ಹರಿಸಲು ಪ್ರಯತ್ನಿಸಿ ಇಲ್ಲದಿದ್ದರೆ ನಿಮ್ಮ ಪ್ರೀತಿಪಾತ್ರರ ನಿರ್ಲಕ್ಷ್ಯಕ್ಕೆ ಒಳಗಾಗಬಹುದು. ಹಣದ ಮಟ್ಟಿಗೆ, ಈ ದಿನ ಮಿಶ್ರ ಫಲ. ನಿಮ್ಮ ಆದಾಯವು ಉತ್ತಮವಾಗಿರುತ್ತದೆ, ಆದರೆ ಪಡೆಯ ಬೇಕಾದ ಹಣ ಬರದೇ, ನಿಮ್ಮ ಚಿಂತೆ ಹೆಚ್ಚಾಗಬಹುದು. ಆರೋಗ್ಯದ ದೃಷ್ಟಿಯಿಂದ, ಆಹಾರದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಇಲ್ಲದಿದ್ದರೆ ದೀರ್ಘಕಾಲದ ಹೊಟ್ಟೆಯ ಕಾಯಿಲೆ ಕಾಡಬಹುದು.

ಉತ್ತಮ ಬಣ್ಣ: ಹಳದಿ

ಶುಭ ಸಂಖ್ಯೆ: 17

ಶುಭ ಸಮಯ: ಬೆಳಗ್ಗೆ 4:15 ರಿಂದ ಸಂಜೆ 4 ರವರೆಗೆ

ಮಿಥುನ ರಾಶಿ:

ಮಿಥುನ ರಾಶಿ:

ನೀವು ನೌಕರಿ ಮಾಡುತ್ತಿದ್ದರೆ ಮತ್ತು ಕಚೇರಿಯಲ್ಲಿ ಏನಾದರೂ ಸಮಸ್ಯೆ ಇದ್ದರೆ, ನಿಮ್ಮ ಸಮಸ್ಯೆಗೆ ಇಂದು ಪರಿಹಾರ ಸಿಗಬಹುದು. ಇಂದು ಬಹಳ ಸಮಯದ ನಂತರ ನೀವು ಕಷ್ಟಪಟ್ಟು ಕೆಲಸ ಮಾಡುತ್ತೀರಿ ಮತ್ತು ನಿಮ್ಮಿಂದ ಸಾಧ್ಯವಾದಷ್ಟು ಅತ್ಯುತ್ತಮ ಪ್ರಯತ್ನವನ್ನು ಕೆಲಸದಲ್ಲಿ ತೋರಿಸುತ್ತೀರಿ. ವ್ಯಾಪಾರಸ್ಥರಿಗೆ ಆರ್ಥಿಕ ಲಾಭ ಸಿಗುವ ಸಾಧ್ಯತೆ. ನೀವು ಮರದ ವ್ಯಾಪಾರ ಮಾಡುತ್ತಿದ್ದರೆ, ನೀವು ಅಪಾರ ಲಾಭ ಗಳಿಸಬಹುದು.

ಕುಟುಂಬ ಜೀವನದಲ್ಲಿ ಶಾಂತಿ ಇರುತ್ತದೆ. ಮನೆಯ ಕೆಲವು ಸದಸ್ಯರೊಂದಿಗೆ ನೀವು ಮನಸ್ತಾಪವನ್ನು ಹೊಂದಬಹುದು. ನಿಮ್ಮ ಮಾತನ್ನು ನೀವು ಸರಿಯಾಗಿ ನಿಯಂತ್ರಿಸಿ. ನಿಂದನೀಯ ಪದಗಳನ್ನು ಬಳಸಬೇಡಿ. ಇಲ್ಲದಿದ್ದರೆ ಸಂಬಂಧದಲ್ಲಿನ ಅಂತರವು ಗಣನೀಯವಾಗಿ ಹೆಚ್ಚಾಗುತ್ತದೆ. ಇಂದು ಆರ್ಥಿಕವಾಗಿ ಉತ್ತಮ ದಿನವಾಗಲಿದೆ. ಕೆಲವು ಸಂಪತ್ತನ್ನು ಪಡೆದುಕೊಳ್ಳಲಿದ್ದೀರಿ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ಇಂದು ಯಾವುದೇ ಸಮಸ್ಯೆ ಇಲ್ಲ.

ಉತ್ತಮ ಬಣ್ಣ: ಹಸಿರು

ಶುಭ ಸಂಖ್ಯೆ: 26

ಶುಭ ಸಮಯ: ಬೆಳಗ್ಗೆ 10 ರಿಂದ ಸಂಜೆ 4:20 ರವರೆಗೆ

ಕರ್ಕಾಟಕ:

ಕರ್ಕಾಟಕ:

ನೀವು ವಿದ್ಯಾರ್ಥಿಯಾಗಿದ್ದರೆ, ಇಂದು ನಿಮಗೆ ಬಹಳ ಶುಭ ದಿನವಾಗಲಿದೆ. ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ಪ್ರಯತ್ನದಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ಕಚೇರಿಯಲ್ಲಿ ಕೆಲಸ ಮಾಡುವವರು ಕಚೇರಿಯಲ್ಲಿಯೇ ಇದ್ದು ಕೆಲಸ ಮಾಡಬೇಕು. ನಿಮಗೆ ನೀಡಲಾದ ಯಾವುದೇ ಜವಾಬ್ದಾರಿಯನ್ನು ಎಚ್ಚರಿಕೆಯಿಂದ ಮತ್ತು ಶ್ರದ್ಧೆಯಿಂದ ಪೂರೈಸಲು ಪ್ರಯತ್ನಿಸಿ. ನಿಮ್ಮ ಯಾವುದೇ ಕೆಲಸವನ್ನು ಇತರರನ್ನು ನಂಬಿ ಬಿಟ್ಟುಹೋಗಬೇಡಿ. ಇಲ್ಲದಿದ್ದರೆ ನಿಮ್ಮ ಬಾಸ್ ನಿಮ್ಮ ಮೇಲೆ ಸಿಟ್ಟಾಗಬಹುದು. ಮತ್ತೊಂದೆಡೆ, ವ್ಯಾಪಾರಸ್ಥರು ಇಂದು ಚೌಕಾಶಿ ಮಾಡುವುದನ್ನು ತಪ್ಪಿಸಿದರೆ ಒಳ್ಳೆಯದು.

ಕುಟುಂಬ ಜೀವನದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ನೀವು ಮನೆಯ ಸದಸ್ಯರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಪೋಷಕರ ಆರೋಗ್ಯ ಉತ್ತಮವಾಗಿರುತ್ತದೆ. ಇಂದು ನೀವು ಅವರೊಂದಿಗೆ ಹೆಚ್ಚುವರಿ ಸಮಯವನ್ನು ಕಳೆಯಲು ಅವಕಾಶ ಪಡೆಯುತ್ತೀರಿ. ಹಣದ ಬಗ್ಗೆ ತಂದೆಯೊಂದಿಗೆ ಪ್ರಮುಖ ಚರ್ಚೆ ನಡೆಸಬಹುದು. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

ಉತ್ತಮ ಬಣ್ಣ: ನೀಲಿ

ಶುಭ ಸಂಖ್ಯೆ: 45

ಶುಭ ಸಮಯ: ಸಂಜೆ 4 ರಿಂದ 10:10 ರವರೆಗೆ

 ಸಿಂಹ ರಾಶಿ:

ಸಿಂಹ ರಾಶಿ:

ಇಂದು ನಿಮಗೆ ಮಿಶ್ರ ದಿನ. ದಿನದ ಆರಂಭವು ಅಷ್ಟು ಸರಿಯಾಗಿರುವುದಿಲ್ಲ. ಬೆಳ- ಬೆಳಗ್ಗೆ ಸಂಗಾತಿಯೊಂದಿಗೆ ಯಾವುದಾದರೂ ವಿಷಯಕ್ಕೆ ಮನಸ್ತಾಪ ಉಂಟಾಗಬಹುದು. ನೀವು ತಾಳ್ಮೆಯಿಂದ ಇದ್ದರೆ ಯಾವ ವಿಷಯವೂ ಸಮಸ್ಯೆ ಎನಿಸುವುದಿಲ್ಲ. ಹಣದ ಬಗ್ಗೆ ಮಾತನಾಡುವುದಾದರೆ, ಬರಬೇಕಾದ ಹಣ ಹಿಂತಿರುಗಿ ಬರುತ್ತದೆ, ಇದು ನಿಮ್ಮ ಚಿಂತೆಯನ್ನು ದೂರ ಮಾಡುತ್ತದೆ. ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಬುದ್ಧಿವಂತಿಕೆಯಿಂದ ಬಳಸಿದರೆ, ಅದು ನಿಮಗೆ ಅತ್ಯಂತ ಪ್ರಯೋಜನವಾಗಿದೆ. ನಿಮ್ಮ ತಾಯಿಯ ಆರೋಗ್ಯವು ಕೆಲವು ದಿನಗಳಿಂದ ಸರಿಯಾಗಿಲ್ಲದಿದ್ದರೆ ಇಂದು ಅವರ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಕೆಲಸದ ಬಗ್ಗೆ ಮಾತನಾಡುವುದಾದರೆ, ನಿಮ್ಮ ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚಿದ್ದರೆ, ನೀವು ಮೊದಲೇ ನಿಮ್ಮ ಕೆಲಸವನ್ನು ಯೋಜಿಸಿಕೊಳ್ಳುವುದು ಒಳ್ಳೆಯದು. ಇದರಿಂದ ತರಾತುರಿಯಲ್ಲಿ ಕೆಲಸ ಮಾಡುವುದನ್ನು ತಪ್ಪಿಸಬಹುದು. ವ್ಯಾಪಾರಸ್ಥರು ಸಾಕಷ್ಟು ಲಾಭ ಪಡೆಯಬಹುದು. ಆರೋಗ್ಯದ ವಿಷಯಗಳು ಉತ್ತಮವಾಗಿರುತ್ತವೆ, ಆದರೆ ಅತಿಯಾದ ಓಡಾಟವನ್ನು ತಪ್ಪಿಸಬೇಕು.

ಉತ್ತಮ ಬಣ್ಣ: ಆಕಾಶ ನೀಲಿ

ಶುಭ ಸಂಖ್ಯೆ: 27

ಶುಭ ಸಮಯ: ಬೆಳಗ್ಗೆ 6:20 ರಿಂದ ಮಧ್ಯಾಹ್ನ 3 ರವರೆಗೆ

ಕನ್ಯಾರಾಶಿ:

ಕನ್ಯಾರಾಶಿ:

ಹಣದ ವಿಷಯದಲ್ಲಿ ಇಂದು ನಿಮಗೆ ಅಷ್ಟು ಒಳ್ಳೆಯ ದಿನವಲ್ಲ. ಖರ್ಚುಗಳ ಪಟ್ಟಿ ದೊಡ್ಡದಿದೆ. ಮತ್ತೊಂದೆಡೆ, ಯಾವುದೋ ಹಳೆಯ ಸಾಲ ಹಿಂತಿರುಗಿಸುವುದಕ್ಕಾಗಿ ನಿಮ್ಮ ಮೇಲೆ ಹೆಚ್ಚಿನ ಒತ್ತಡ ಬೀಳಬಹುದು. ಹಣಕಾಸಿನ ವಿಷಯಗಳಲ್ಲಿ ನೀವು ಬಹಳ ಜಾಗರೂಕರಾಗಿರಿ. ಕೆಲಸದ ಬಗ್ಗೆ ಮಾತನಾಡುತ್ತಾ, ನೀವು ಇಂದು ಕಚೇರಿಯಲ್ಲಿ ಸಹೋದ್ಯೋಗಿಯೊಂದಿಗೆ ಸಂಭಾಷಣೆ ನಡೆಸಬಹುದು. ನಿಮ್ಮ ಕೋಪದ ಮನಸ್ಥಿತಿ ನಿಮಗೆ ತೊಂದರೆ ಉಂಟುಮಾಡಬಹುದು, ಆದ್ದರಿಂದ ನೀವು ನಿಮ್ಮನ್ನು ನಿಯಂತ್ರಿಸಬೇಕು. ವ್ಯಾಪಾರಸ್ಥರು ಇಂದು ಸಾಕಷ್ಟು ಓಡಾಡಬೇಕಾಗಬಹುದು. ನಿಮ್ಮ ಯಾವುದೇ ಪ್ರಮುಖ ಕೆಲಸಕ್ಕೆ ಅಡ್ಡಿ ಉಂಟಾಗುವುದರಿಂದ ನೀವು ನಷ್ಟ ಅನುಭವಿಸಬಹುದು. ಆರೋಗ್ಯದ ಬಗ್ಗೆ ಮಾತನಾಡುತ್ತಾ, ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಸುಸ್ತನ್ನು ಅನುಭವಿಸುವಿರಿ.

ಉತ್ತಮ ಬಣ್ಣ: ಗುಲಾಬಿ

ಶುಭ ಸಂಖ್ಯೆ: 12

ಶುಭ ಸಮಯ: ಮಧ್ಯಾಹ್ನ 3 ರಿಂದ 7 ರವರೆಗೆ

ತುಲಾ ರಾಶಿ:

ತುಲಾ ರಾಶಿ:

ಇಂದು ನಿಮಗೆ ಕೆಲವು ಸಮಸ್ಯೆಗಳು ಎದುರಾಗಬಹುದು. ಕುಟುಂಬದಲ್ಲಿ ಹೆಚ್ಚುತ್ತಿರುವ ಕಲಹದಿಂದಾಗಿ ನೀವು ಚಿಂತೆ ಮಾಡುತ್ತೀರಿ. ಮನೆಯ ಕಿರಿಯ ಸದಸ್ಯರೊಂದಿಗಿನ ನಿಮ್ಮ ಒಡನಾಟ ಹದಗೆಡಬಹುದು. ಹಣದ ವಿಷಯದಲ್ಲಿ ನಿಮ್ಮ ಪ್ರಯತ್ನಗಳು ವಿಫಲವಾಗಬಹುದು. ಈ ಬಗ್ಗೆ ನೀವು ಹೆಚ್ಚು ಚಿಂತಿಸಬೇಕಾಗಿಲ್ಲ. ಶೀಘ್ರದಲ್ಲೇ ನಿಮ್ಮ ಸಮಸ್ಯೆ ಬಗೆಹರಿಯುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಇಂದು ಒಂದು ಪ್ರಮುಖ ಚರ್ಚೆಯನ್ನು ನಡೆಸಬಹುದು, ನಿಮ್ಮ ಪ್ರೀತಿಪಾತ್ರರ ಮುಂದೆ ನಿಮ್ಮ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಲು ನಿಮಗೆ ಇಂದು ಸಾಧ್ಯವಾಗುತ್ತದೆ. ಕೆಲಸದ ಬಗ್ಗೆ ಮಾತನಾಡುವುದಾದರೆ, ಉದ್ಯೋಗಸ್ಥರು ತಮ್ಮ ಕೆಲಸದ ಬಗ್ಗೆ ಗಮನ ಹರಿಸಬೇಕು. ಕಚೇರಿಯಲ್ಲಿ, ನಿಮ್ಮ ಎಲ್ಲಾ ಕೆಲಸಗಳನ್ನು ವೇಗವಾಗಿ ಮಾಡಲು ನೀವು ಪ್ರಯತ್ನಿಸುತ್ತೀರಿ. ವ್ಯಾಪಾರಸ್ಥರಿಗಿಂದು ಮಿಶ್ರ ಫಲ.

ಉತ್ತಮ ಬಣ್ಣ: ಕಿತ್ತಳೆ

ಶುಭ ಸಂಖ್ಯೆ: 20

ಶುಭ ಸಮಯ: ಸಂಜೆ 5 ರಿಂದ 10 ರವರೆಗೆ

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ:

ಇಂದು ನಿಮಗೆ ಉತ್ತಮ ದಿನ. ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ದಿನವು ಅನುಕೂಲಕರವಾಗಿದೆ. ನಿಮ್ಮ ಕೆಲಸವನ್ನು ಬಲವಾದ ಸ್ಥೈರ್ಯ ಮತ್ತು ಆತ್ಮವಿಶ್ವಾಸದಿಂದ ಮಾಡಿದರೆ ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ಹಣದ ದೃಷ್ಟಿಯಿಂದ ದಿನ ಪ್ರಯೋಜನಕಾರಿಯಾಗಲಿದೆ. ನಿಮ್ಮ ಆದಾಯ ಉತ್ತಮವಾಗಿರುತ್ತದೆ. ಇಂದು ನೀವು ಹೆಚ್ಚುವರಿ ಹಣವನ್ನು ಗಳಿಸುವ ಸಾಧ್ಯತೆಯೂ ಇದೆ. ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆಯಲ್ಲಿನ ಸುಧಾರಣೆಯನ್ನು ನೋಡಿ ಹಿರಿಯ ಅಧಿಕಾರಿಗಳು ಸಾಕಷ್ಟು ತೃಪ್ತರಾಗುತ್ತಾರೆ. ವ್ಯಾಪಾರಿಗಳಿಗೆ ಯಾವುದೇ ವಿಶೇಷ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ನೀವು ಆಹಾರ ಮತ್ತು ಪಾನೀಯದ ವ್ಯವಹಾರವನ್ನು ಮಾಡುತ್ತಿದ್ದರೆ, ಸ್ವಚ್ಛತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.

ಇಂದು ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಮತ್ತು ಕಷ್ಟಕರವಾದ ಕೆಲಸವನ್ನು ಪೂರ್ಣಗೊಳಿಸುವ ಮೂಲಕ ನಿಮಗೆ ಒಳ್ಳೆಯದಾಗುತ್ತದೆ. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುತ್ತೀರಿ. ನಿಮ್ಮ ಆರೋಗ್ಯದ ಬಗ್ಗೆ ಮಾತನಾಡಿದರೆ, ನಿಮ್ಮ ಆರೋಗ್ಯವು ತುಂಬಾ ಉತ್ತಮವಾಗಿರುತ್ತದೆ.

ಧನು ರಾಶಿ:

ಧನು ರಾಶಿ:

ನಿಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ. ಇಂದು ಹೆಚ್ಚಿನ ವೆಚ್ಚವಾಗಬಹುದಾದರೂ, ನಿಮ್ಮ ರಾಶಿ ನಕ್ಷತ್ರಗಳು ಯಾವುದೇ ರೀತಿಯ ಸಮಸ್ಯೆ ಉಂಟಾಗಲೂ ಬಿಡುವುದಿಲ್ಲ. ಮನೆ ದುರಸ್ತಿ ಅಥವಾ ಇತರ ಸೌಕರ್ಯಗಳಿಗಾಗಿ ನೀವು ಖರ್ಚು ಮಾಡುವ ಸಾಧ್ಯತೆಯಿದೆ. ಸಹೋದರ ಸಹೋದರರು ಮತ್ತು ಪೋಷಕರಿಗೆ ಸಹ ಬೆಂಬಲ ನೀಡುತ್ತೀರಿ. ಇಂದು ನೀವು ನಿಮ್ಮ ಎಲ್ಲಾ ನಿರ್ಧಾರಗಳನ್ನು ಪೂರ್ಣ ವಿಶ್ವಾಸದಿಂದ ತೆಗೆದುಕೊಳ್ಳುತ್ತೀರಿ, ಇದು ಮುಂಬರುವ ದಿನಗಳಲ್ಲಿ ನಿಮಗೆ ಉತ್ತಮ ಪ್ರಯೋಜನವನ್ನು ನೀಡುತ್ತದೆ. ಇಂದು ನೀವು ನಿಮ್ಮ ಬಗ್ಗೆಯೂ ಕೂಡ ಗಮನ ಹರಿಸುತ್ತೀರಿ. ನಿಮಗಾಗಿ ಹೊಸ ಬಟ್ಟೆ ಮತ್ತು ಆಭರಣಗಳನ್ನು ಸಹ ನೀವು ಖರೀದಿಸಬಹುದು. ವೈವಾಹಿಕ ಜೀವನದಲ್ಲಿ ಸಮಸ್ಯೆ ಇರಬಹುದು. ಸಂಗಾತಿಯು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸಬಹುದು. ಕೆಲಸದ ವಿಷಯದಲ್ಲಿ ದಿನವು ಉತ್ತಮವಾಗಿದೆ ಎಂದು ಹೇಳಬಹುದು. ಉದ್ಯೋಗವಾಗಲಿ ಅಥವಾ ವ್ಯವಹಾರವಾಗಲಿ, ಸಧ್ಯದಲ್ಲೇ ನಿಮಗೆ ಯಶಸ್ಸು ಸಿಗುವ ಲಕ್ಷಣಗಳಿವೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ನೀವು ತುಂಬಾ ಉಲ್ಲಾಸದಿಂದ ಇರುತ್ತೀರಿ.

ಉತ್ತಮ ಬಣ್ಣ: ಕಡು ಹಳದಿ

ಶುಭ ಸಂಖ್ಯೆ: 28

ಶುಭ ಸಮಯ: ಸಂಜೆ 5:40 ರಿಂದ 9:30 ರವರೆಗೆ

ಮಕರ ರಾಶಿ:

ಮಕರ ರಾಶಿ:

ಇಂದು ನಿಮಗೆ ಶುಭವಾಗಲಿದೆ. ನಿಮ್ಮ ಎಲ್ಲಾ ಕೆಲಸಗಳಲ್ಲಿಯೂ ನಿರೀಕ್ಷಿತ ಫಲಿತಾಂಶಗಳನ್ನು ಪಡೆಯುತ್ತೀರಿ, ಅದು ನಿಮಗೆ ತುಂಬಾ ಸಂತೋಷವನ್ನು ನೀಡುತ್ತದೆ. ನಿಮ್ಮ ಸಕಾರಾತ್ಮಕ ನಡವಳಿಕೆಯು ನಿಮ್ಮ ಸುತ್ತಮುತ್ತಲಿನ ಜನರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇತರರಿಗೆ ಸಹಾಯ ಮಾಡಲು ನೀವು ಅವಕಾಶವನ್ನು ಪಡೆಯಬಹುದು, ಈ ಅವಕಾಶವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಿ. ಇದರಿಂದ ನಿಮ್ಮ ಗೌರವ ಮತ್ತು ಪ್ರತಿಷ್ಠೆಯೂ ಹೆಚ್ಚಾಗುತ್ತದೆ. ಉದ್ಯೋಗಾಕಾಂಕ್ಷಿಗಳು ಬಡ್ತಿಯೊಂದಿಗೆ ಆದಾಯ ಹೆಚ್ಚಳದ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಇದಲ್ಲದೆ, ನೀವು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ ಹೊಸ ವ್ಯವಹಾರದಲ್ಲಿ ಹೂಡಿಕೆ ಮಾಡಲು ಅವಕಾಶ ಸಿಗುತ್ತದೆ.

ಇಂದು ಕುಟುಂಬದೊಂದಿಗೆ ಆನಂದದಾಯಕ ದಿನವಾಗಿರುತ್ತದೆ. ನೀವು ಎಲ್ಲರಿಂದ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತೀರಿ. ದಾಂಪತ್ಯ ಜೀವನದಲ್ಲಿ ಮಾಧುರ್ಯ ಹೆಚ್ಚಾಗುತ್ತದೆ. ಇಂದು ನಿಮ್ಮ ಸಂಗಾತಿಯು ತುಂಬಾ ರೋಮ್ಯಾಂಟಿಕ್ ಮನಸ್ಥಿತಿಯಲ್ಲಿರುತ್ತಾರೆ. ನಿಮ್ಮ ಆರೋಗ್ಯವು ಸುಧಾರಿಸಿ ನೀವು ಆರಾಮವಾಗಿರುತ್ತೀರಿ.

ಉತ್ತಮ ಬಣ್ಣ: ತಿಳಿ ಹಸಿರು

ಶುಭ ಸಂಖ್ಯೆ: 7

ಶುಭ ಸಮಯ: ಬೆಳಗ್ಗೆ 4 ರಿಂದ 2: 40 ರವರೆಗೆ

 ಕುಂಭ ರಾಶಿ:

ಕುಂಭ ರಾಶಿ:

ಭವಿಷ್ಯದಲ್ಲಿ ನೀವು ಪಶ್ಚಾತಾಪ ಪಡುವಂಥ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಚಿಂತನಶೀಲವಾಗಿ ಪ್ರತಿ ಹೆಜ್ಜೆಯನ್ನೂ ಮುಂದಕ್ಕೆ ಇಡುವುದು ಉತ್ತಮ. ಆರ್ಥಿಕವಾಗಿ ದಿನ ಅಷ್ಟು ಉತ್ತಮವಾಗಿರುವುದಿಲ್ಲ. ಇಂದು ನೀವು ವಿನೋದಕ್ಕಾಗಿ ಮತ್ತು ಸ್ನೇಹಿತರ ಜೊತೆ ಸಮಯ ಕಳೆಯಲು ಸಾಕಷ್ಟು ಹಣವನ್ನು ಖರ್ಚು ಮಾಡಬಹುದು, ಇದು ನಿಮ್ಮ ಬಜೆಟ್ ಪ್ಲಾನ್ ಗೆ ಸಮಸ್ಯೆಯಗಬಹುದು. ಹತ್ತಿರವಿರುವ ಯಾರಾದರೂ ನಿಮ್ಮನ್ನು ಮೋಸಗೊಳಿಸಬಹುದು. ನೀವು ಇತರರನ್ನು ಕುರುಡಾಗಿ ನಂಬದಿರುವುದು ಉತ್ತಮ.

ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ ಮತ್ತು ನಿಮ್ಮ ಸಂಬಂಧವೂ ಉತ್ತಮವಾಗಿರುತ್ತದೆ. ಇಂದು ಕಚೇರಿ ವಾತಾವರಣವು ಸಕಾರಾತ್ಮಕವಾಗಿರುತ್ತದೆ, ಅದು ನಿಮ್ಮ ಕೆಲಸದ ವೇಗವನ್ನು ಹೆಚ್ಚಿಸುತ್ತದೆ. ನಿಮ್ಮ ಉನ್ನತ ಅಧಿಕಾರಿಗಳ ಮನಸ್ಸನ್ನು ನೀವು ಗೆಲ್ಲುತ್ತೀರಿ. ವ್ಯವಹಾರದಲ್ಲಿ ದೊಡ್ಡ ಲಾಭ ಪಡೆಯುವ ಸಾಧ್ಯತೆಯಿದೆ. ಕೆಲವು ವೈಯಕ್ತಿಕ ಕೆಲಸಗಳಿಗಾಗಿ ನೀವು ಇದ್ದಕ್ಕಿದ್ದಂತೆ ಪ್ರಯಾಣಿಸಬೇಕಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಮಾತನಾಡಿದರೆ ತಲೆನೋವಿನ ಸಮಸ್ಯೆ ಇರಬಹುದು.

ಉತ್ತಮ ಬಣ್ಣ: ಮರೂನ್

ಶುಭ ಸಂಖ್ಯೆ: 10

ಶುಭ ಸಮಯ: ಬೆಳಗ್ಗೆ 7:00 ರಿಂದ ಸಂಜೆ 6 ರವರೆಗೆ

ಮೀನ ರಾಶಿ:

ಮೀನ ರಾಶಿ:

ನಿಮ್ಮ ಆರೋಗ್ಯ ಹದಗೆಟ್ಟಿದ್ದರೆ ಅದು ಇನ್ನೂ ಹೆಚ್ಚಿನ ಸಮಸ್ಯೆಯನ್ನು ಉಂಟುಮಾಡಬಹುದು. ಅನೇಕ ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸಿಗೆ ಬರಬಹುದು. ನೀವು ಕೋಪ ಮತ್ತು ಕಿರಿಕಿರಿಗೆ ಒಳಗಾಗುತ್ತೀರಿ. ನಿಮ್ಮ ಸುತ್ತಮುತ್ತಲಿನ ಜನರಿಂದ ಸ್ವಲ್ಪ ದೂರವಿರಲು ಪ್ರಯತ್ನಿಸುತ್ತೀರಿ. ಹೀಗಿರುವಾಗ ನಿಮ್ಮನ್ನು ನೀವು ನಿಯಂತ್ರಿಸುವುದು ಬಹಳ ಮುಖ್ಯ. ಕುಟುಂಬ ಜೀವನದಲ್ಲಿ ಅಪಶ್ರುತಿ ಇರುತ್ತದೆ. ನಿಮ್ಮ ಕೋಪವು ಕುಟುಂಬ ಸದಸ್ಯರ ಭಾವನೆಗಳನ್ನು ಘಾಸಿಗೊಳಿಸುತ್ತದೆ. ಇಂದು ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಆದಾಗ್ಯೂ, ನಿಮ್ಮ ಪರಸ್ಪರ ಅರಿತುಕೊಳ್ಳುವುದು ಮುಖ್ಯ ಹೀಗಾದಾಗ ನಿಮ್ಮ ನಡುವೆ ಯಾವುದೇ ಸಮಸ್ಯೆ ಇರುವುದಿಲ್ಲ.

ಇನ್ನು ಹಣದ ವಿಷಯದಲ್ಲಿ ಮಿಶ್ರ ದಿನ. ಇದ್ದಕ್ಕಿದ್ದಂತೆ ಕೆಲವು ದೊಡ್ಡ ವೆಚ್ಚಗಳು ಬರಬಹುದು. ಆದರೆ ಇಂದು ಹೊಸ ಆದಾಯದ ಮೂಲವೂ ಸಹ ದೊರೆಯಬಹುದು. ಕಚೇರಿಯಲ್ಲಿರುವ ಕೆಲವು ಸ್ವಾರ್ಥಿ ಸಹೋದ್ಯೋಗಿಗಳು ನಿಮ್ಮ ಕೆಲಸಕ್ಕೆ ಅಡ್ಡಿಪಡಿಸಬಹುದು. ಅಂಥವರ ಬಗ್ಗೆ ನೀವು ಜಾಗರೂಕರಾಗಿರಬೇಕು.

ಉತ್ತಮ ಬಣ್ಣ: ತಿಳಿ ಹಸಿರು

ಶುಭ ಸಂಖ್ಯೆ: 7

ಶುಭ ಸಮಯ: ಬೆಳಗ್ಗೆ 4 ರಿಂದ 2: 40 ರವರೆಗೆ

English summary

Dina Bhavishya 18 November 2020

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Wednesday, November 18, 2020, 4:00 [IST]
X