For Quick Alerts
ALLOW NOTIFICATIONS  
For Daily Alerts

ಬುಧವಾರದ ದಿನ ಭವಿಷ್ಯ: ಮೀನರಾಶಿಯವರೇ, ಇಂದು ಯಾವುದೇ ಪ್ರಯಾಣ ಬೇಡ.

|

ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:

ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು,
ಆಚಾರ್ಯ ಶ್ರೀ ರಾಘವೇಂದ್ರ ಭಟ್ ಕುಡ್ಲ.
ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಉಪಾಸಕರು

ಪ್ರೀತಿ- ಪ್ರೇಮ ವಿಚಾರ, ಸತಿ- ಪತಿ ಕಲಹ, ಮದುವೆ ವಿಳಂಬ, ಸಂತಾನ, ಉದ್ಯೋಗ, ವ್ಯಾಪಾರ ಸಮಸ್ಯೆ, ದೃಷ್ಟಿ ದೋಷ, ಕುಜ ದೋಷ, ವಾಮಾಚಾರ ಬಾಧಿತರಿಗೆ ಪರಿಹಾರ ನಿಶ್ಚಿತ.

ಹಣಕಾಸು ಸಮಸ್ಯೆ, ಅನಾರೋಗ್ಯ, ಶತ್ರು ಬಾಧೆ, ಗೃಹ ನಿರ್ಮಾಣದಲ್ಲಿ ಅಡೆ-ತಡೆಗಳಿದ್ದಲ್ಲಿ ಸುಲಭ ಪರಿಹಾರ ಒದಗಿಸಲಿದ್ದಾರೆ.

ನಿಮ್ಮ ಯಾವುದೇ ಸಮಸ್ಯೆಗೆ ಒಮ್ಮೆ ಭೇಟಿ ನೀಡಿ. ದುರ್ಗಾ ಅನುಗ್ರಹ ಜ್ಯೋತಿಷ್ಯ ಕೇಂದ್ರ ಮೊಬೈಲ್ ಫೋನ್ ಸಂಖ್ಯೆ 9845000635 .

https://sridurga-astrologer.com

ಸಂವತ್ಸರ: ಶಾರ್ವರಿ

ಆಯನ: ದಕ್ಷಿಣಾಯನ
ಋತು: ಶರತ್
ಮಾಸ: ಅಧಿಕ ಅಶ್ವಿನಿ
ನಕ್ಷತ್ರ: ರಾತ್ರಿ 08:41ರವರೆಗೆ ಪೂರ್ವ ಫಲ್ಘುಣಿ, ನಂತರ ಉತ್ತರ ಫಲ್ಘುಣಿ
ತಿಥಿ: ಕೃಷ್ಣ ಪಕ್ಷ
ರಾಹುಕಾಲ: ಮಧ್ಯಾಹ್ನ 12:07ರಿಂದ 01:33ರವರೆಗೆ
ಗುಳಿಕಕಾಲ: ಬೆಳಗ್ಗೆ 10:40ರಿಂದ 12:07ರವರೆಗೆ
ಯಮಗಂಡಕಾಲ: ಬೆಳಗ್ಗೆ 07:48ರಿಂದ 09:14ರವರೆಗೆ
ದುರ್ಮುಹೂರ್ತ: ಬೆಳಗ್ಗೆ 11:44ರಿಂದ 12:30ರವರೆಗೆ
ಸೂರ್ಯೋದಯ: ಬೆಳಗ್ಗೆ 06:21ಕ್ಕೆ
ಸೂರ್ಯಾಸ್ತ: ಸಂಜೆ 05:52ಕ್ಕೆ

ಮೇಷ ರಾಶಿ:

ಮೇಷ ರಾಶಿ:

ನಿಮ್ಮ ಕುಟುಂಬಕ್ಕೆ ಇಂದು ಹೆಚ್ಚಿನ ಆದ್ಯತೆ ಕೊಡಿ. ನಿಮ್ಮ ಪ್ರೀತಿಪಾತ್ರರ ಜೊತೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ. ನಿಮ್ಮನ್ನು ಯಾವುದಾದರೂ ಚಿಂತೆ ಕಾಡುತ್ತಿದ್ದರೆ ಅದನ್ನು ನಿಮ್ಮ ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳಿ. ಅದರಿಂದ ಸಮಸ್ಯೆ ಖಂಡಿತ ಬಗೆಹರಿಸುತ್ತದೆ. ಕೆಲಸದ ಬಗ್ಗೆ ಮಾತನಾಡುವುದಾದರೆ, ದುಡಿಯುವ ಜನರಿಗೆ ದಿನ ಅನುಕೂಲಕರವಾಗಿರುತ್ತದೆ. ನಿಮ್ಮ ಕಠಿಣ ಪರಿಶ್ರಮದ ಫಲವಾಗಿ ನಿಮಗೆ ಉದ್ಯೋಗದಲ್ಲಿ ಭಡ್ತಿ ಸಿಗುವ ಸಾಧ್ಯತೆ ಇದೆ. ಸರ್ಕಾರಿ ಕೆಲಸ ಮಾಡುವವರ ಮೇಲೆ ಜವಾಬ್ದಾರಿಗಳು ಹೆಚ್ಚಾಗಬಹುದು. ನಿಮ್ಮ ಸ್ವಂತ ಸಣ್ಣ ಉದ್ಯಮವನ್ನು ಪ್ರಾರಂಭಿಸಲು ನೀವು ಬಯಸಿದರೆ, ಇಂದು ನಿಮ್ಮ ಯೋಜನೆಯನ್ನು ಮುಂದುವರಿಯಬಹುದು. ಹಣದ ವಿಷಯದಲ್ಲಿ ಉತ್ತಮ ದಿನ. ನಿಮ್ಮ ಆದಾಯವು ಉತ್ತಮವಾಗಿರುತ್ತದೆ ಆದರೆ ವೆಚ್ಚಗಳು ಕೂಡ ಹೆಚ್ಚಾಗಬಹುದು. ಆರೋಗ್ಯದ ಬಗ್ಗೆ ಮಾತನಾಡುವುದಾದರೆ, ಹಿಂದಿನ ದಿನದ ಆಹಾರವನ್ನು ಸೇವಿಸಬೇಡಿ.

ಉತ್ತಮ ಬಣ್ಣ: ಬಿಳಿ

ಶುಭ ಸಂಖ್ಯೆ: 10

ಶುಭ ಸಮಯ: ಮಧ್ಯಾಹ್ನ 2 ರಿಂದ 7 ರವರೆಗೆ

ವೃಷಭ ರಾಶಿ:

ವೃಷಭ ರಾಶಿ:

ನಿಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳಿ. ವಿಪರೀತ ಭಾವನಾತ್ಮಕವಾಗಿರುವುದು ಯಾವುದೇ ಅರ್ಥದಲ್ಲಿ ನಿಮಗೆ ಒಳ್ಳೆಯದಲ್ಲ. ನೀವು ಮಾನಸಿಕವಾಗಿ ಸದೃಢರಾಗಿರಬೇಕು. ಕೆಲಸದ ಆರಂಭದಲ್ಲಿ ಯಾವುದೇ ಪ್ರಮುಖ ಬದಲಾವಣೆ ಉಂಟಾಗಬಹುದು. ನೀವು ನೌಕರಿ ಮಾಡುವವರಾಗಿದ್ದರೆ, ಇದ್ದಕ್ಕಿದ್ದಂತೆ ನಿಮ್ಮ ವರ್ಗಾವಣೆಯ ಬಗ್ಗೆ ಮಾಹಿತಿ ಪಡೆಯಬಹುದು. ಮತ್ತೊಂದೆಡೆ, ವ್ಯಾಪಾರಸ್ಥರು ಉತ್ತಮ ಯಶಸ್ಸನ್ನು ಪಡೆಯುವ ನಿರೀಕ್ಷೆಯಿದೆ. ಸರ್ಕಾರದ ಕೆಲವು ಅಡಚಣೆಯಿಂದಾಗಿ, ನಿಮಗಾಗಿ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗದಿದ್ದರೆ ಇಂದು ಈ ಸಮಸ್ಯೆಯನ್ನು ಪರಿಹರಿಸಬಹುದು. ಸೌಂದರ್ಯವರ್ಧಕಗಳು, ಪೀಠೋಪಕರಣಗಳು ಮತ್ತು ಲೇಖನ ಸಾಮಗ್ರಿಗಳ ವ್ಯಾಪಾರಸ್ಥರಿಗೆ ಇಂದು ಪ್ರಯೋಜನಕಾರಿಯಾಗಲಿದೆ. ಯಾವುದೇ ಪರಿಸ್ಥಿತಿ ಇದ್ದರೂ, ನಿಮ್ಮ ಕೋಪವನ್ನು ನಿಯಂತ್ರಿಸಲು ನಿಮಗೆ ಸೂಚಿಸಲಾಗುತ್ತದೆ. ಹಣದ ಹರಿವು ಚೆನ್ನಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ಇಂದು ಮಿಶ್ರ ಫಲ. ನೀವು ಹೆಚ್ಚಿನ ಪ್ರಮಾಣದ ನೀರನ್ನು ಇಂದು ಸೇವಿಸಬೇಕು.

ಉತ್ತಮ ಬಣ್ಣ: ಹಳದಿ

ಶುಭ ಸಂಖ್ಯೆ: 2

ಶುಭ ಸಮಯ: ಬೆಳಗ್ಗೆ 8 ರಿಂದ ಸಂಜೆ 5 ರವರೆಗೆ

ಮಿಥುನ ರಾಶಿ:

ಮಿಥುನ ರಾಶಿ:

ಇಂದು ನಿಮ್ಮ ನಿಂತುಹೋದ ಯಾವುದೇ ಕೆಲಸವನ್ನು ಪೂರ್ಣಗೊಳಿಸಬಹುದು, ಇದರಿಂದಾಗಿ ನೀವು ಆರ್ಥಿಕ ಲಾಭ ಪಡೆಯುವ ಸಾಧ್ಯತೆಯಿದೆ. ಯಾವುದೇ ಹಳೆಯ ಸಾಲವನ್ನು ಮರುಪಾವತಿಸುವಲ್ಲಿ ಇಂದು ನೀವು ಯಶಸ್ವಿಯಾಗುವಿರಿ. ಕೆಲಸದ ಬಗ್ಗೆ ಮಾತನಾಡುವುದಾದಲ್ಲಿ, ಉದ್ಯೋಗದಲ್ಲಿರುವವರು ಜಾಗರೂಕರಾಗಿರಬೇಕು. ಕೆಲಸದಲ್ಲಿ ಅಜಾಗರೂಕತೆ ನಿಮ್ಮನ್ನು ತೊಂದರೆಗೆ ಸಿಲುಕಿಸುತ್ತದೆ ಜೋಪಾನ. ಸಹೋದ್ಯೋಗಿಗಳೊಂದಿಗೆ ಅನಗತ್ಯ ಚರ್ಚೆಯನ್ನು ಮಾಡಬೇಡಿ. ವ್ಯಾಪಾರಿಗಳಿಗಿಂದು ಶುಭ ಕಾಲ. ನಿಮ್ಮ ಕೆಲಸವು ಹಣಕಾಸಿಗೆ ಸಂಬಂಧಪಟ್ಟಿದ್ದರೆ, ಇಂದು ನೀವು ನಿರೀಕ್ಷಿಸಿದಂತೆ ಫಲಿತಾಂಶಗಳನ್ನು ಪಡೆಯಬಹುದು. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಇಂದು ಕುಟುಂಬದೊಂದಿಗೆ ಬಹಳ ಮೋಜಿನ ಸಮಯವನ್ನು ಕಳೆಯುತ್ತೀರಿ. ನಿಮ್ಮ ಸಂಗಾತಿಯಿಂದ ನೀವು ವಿಶೇಷವಾದದ್ದೇನನ್ನೋ ಪಡೆಯುವಿರಿ. ನಿಮ್ಮ ಪ್ರೀತಿಪಾತ್ರರೊಂದಿಗಿನ ನಿಮ್ಮ ಸಂಬಂಧವು ಬಲವಾಗಿರುತ್ತದೆ. ಆರೋಗ್ಯದ ಬಗ್ಗೆ ಮಾತನಾಡುವುದಾದಲ್ಲಿ, ಚರ್ಮದ ಸಮಸ್ಯೆ ಇರಬಹುದು. ನಿಮ್ಮ ಬಗ್ಗೆ ಕಾಳಜಿ ವಹಿಸಿ.

ಉತ್ತಮ ಬಣ್ಣ: ಆಕಾಶ

ಶುಭ ಸಂಖ್ಯೆ: 16

ಶುಭ ಸಮಯ: ಸಂಜೆ 6 ರಿಂದ 9 ರವರೆಗೆ

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿ:

ನಿಮಗಿಂದು ಉತ್ತಮ ದಿನ. ನೀವು ಸಕಾರಾತ್ಮಕ ಮತ್ತು ಶಕ್ತಿಯುತ ಸಂವಹನವನ್ನು ನಡೆಸುತ್ತೀರಿ. ಇಂದು ನೀವು ಸಾಕಷ್ಟು ಉತ್ತಮವಾದದ್ದನ್ನು ಅನುಭವಿಸುವಿರಿ. ಕೆಲಸದ ವಿಷಯಕ್ಕೆ ಬಂದಾಗ, ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚಾಗಬಹುದು. ಆದಾಗ್ಯೂ, ನಿಮ್ಮ ಎಲ್ಲ ಕೆಲಸಗಳನ್ನು ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಪೂರ್ಣಗೊಳಿಸಲು ನೀವು ಪ್ರಯತ್ನಿಸಿರಿ. ಉನ್ನತ ಅಧಿಕಾರಿಗಳ ಜೊತೆಗೆ, ನೀವು ಸಹೋದ್ಯೋಗಿಗಳ ಬೆಂಬಲವನ್ನೂ ಪಡೆಯುತ್ತೀರಿ. ನಿಮ್ಮ ಕೆಲಸ ಗುರಿ ಆಧಾರಿತವಾಗಿದ್ದರೆ ಇಂದು ನಿಮ್ಮ ಗುರಿಯನ್ನು ಸುಲಭವಾಗಿ ತಲುಪಬಹುದು. ಸಣ್ಣ ವ್ಯಾಪಾರಿಗಳು ಇಂದು ಲಾಭ ಪಡೆಯಬಹುದು. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಮನೆಯಲ್ಲಿ ಸಾಮರಸ್ಯ ಉಳಿಯುತ್ತದೆ. ಇಂದು ಸಂಗಾತಿಯೊಂದಿಗೆ ಬಹಳ ವಿಶೇಷ ದಿನ ಕಳೆಯುವಿರಿ. ಹಣದ ಪರಿಸ್ಥಿತಿ ಸಾಮಾನ್ಯವಾಗಿರಲಿದೆ. ಇಂದು ವೆಚ್ಚಗಳು ಕಡಿಮೆ ಇರುತ್ತದೆ.

ಉತ್ತಮ ಬಣ್ಣ: ನೀಲಿ

ಶುಭ ಸಂಖ್ಯೆ: 23

ಶುಭ ಸಮಯ: ಮಧ್ಯಾಹ್ನ 3 ರಿಂದ 10 ರವರೆಗೆ

ಸಿಂಹ ರಾಶಿ:

ಸಿಂಹ ರಾಶಿ:

ಹಣದ ವಿಷಯದಲ್ಲಿ ಇಂದು ಶುಭ. ನಿಮ್ಮ ಸರಿಯಾದ ಹಣಕಾಸು ಯೋಜನೆಗಳಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಇದ್ದಕ್ಕಿದ್ದಂತೆ, ಸಂಪತ್ತು ಪಡೆಯುವ ಸಾಧ್ಯತೆಯಿದೆ, ಅದು ಹಣಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸುತ್ತದೆ. ಕೆಲಸದ ಬಗ್ಗೆ ಮಾತನಾಡುವುದಾದರೆ, ಕಚೇರಿಯಲ್ಲಿನ ಒತ್ತಡದಿಂದಾಗಿ ನೀವು ಸರಿಯಾಗಿ ಕೆಲಸದ ಕಡೆಗೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳುವುದು ಮತ್ತು ನಕಾರಾತ್ಮಕ ಆಲೋಚನೆಗಳಿಂದ ದೂರವಿರುವುದು ಉತ್ತಮ. ನಿಮಗೆ ಏನಾದರೂ ಸಮಸ್ಯೆ ಇದ್ದರೆ ನೀವು ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಿ ಪರಿಹರಿಸಿಕೊಳ್ಳಿ. ವ್ಯಾಪಾರ ಮಾಡುವವರು ತರಾತುರಿಯಲ್ಲಿ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ. ನೀವು ದೊಡ್ಡ ಉದ್ಯಮಿಯಾಗಿದ್ದರೆ ನಿಮ್ಮ ಉದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಅನಗತ್ಯ ಚರ್ಚೆಯಿಂದ ನಿಮಗೇ ತೊಂದರೆ. ಮನೆಯ ವಾತಾವರಣದಲ್ಲಿ ಶಾಂತಿ. ಆದಾಗ್ಯೂ, ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ನಿಮಗೆ ಅವಕಾಶ ಸಿಗುವುದಿಲ್ಲ. ಆರೋಗ್ಯದ ದೃಷ್ಟಿಯಿಂದ ದಿನ ಉತ್ತಮವಾಗಿರುತ್ತದೆ. ಕೆಲಸದ ಜೊತೆಗೆ ನೀವು ವಿಶ್ರಾಂತಿಯತ್ತಲೂ ಗಮನ ಹರಿಸಬೇಕು.

ಉತ್ತಮ ಬಣ್ಣ: ಕಿತ್ತಳೆ

ಶುಭ ಸಂಖ್ಯೆ: 4

ಶುಭ ಸಮಯ: ಬೆಳಗ್ಗೆ 6 ರಿಂದ ಮಧ್ಯಾಹ್ನ 2: 30 ರವರೆಗೆ

ಕನ್ಯಾರಾಶಿ:

ಕನ್ಯಾರಾಶಿ:

ಇಂದಿನ ದಿನ ಉದ್ಯೋಗಿಗಳಿಗೆ ಬಹಳ ಮುಖ್ಯವಾಗುತ್ತದೆ. ನೀವು ನಿಮ್ಮ ಕೆಲಸವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ಇತರ ಕಂಪನಿಗಳಿಗೆ ಅರ್ಜಿ ಸಲ್ಲಿಸಲು ಸಮಯವು ಅನುಕೂಲಕರವಾಗಿರುತ್ತದೆ. ಮತ್ತೊಂದೆಡೆ, ವ್ಯಾಪಾರಸ್ಥರು ತಮ್ಮ ವ್ಯವಹಾರವನ್ನು ಮುಂದುವರೆಸುವ ಬಗ್ಗೆ ಯೋಚಿಸುತ್ತಿದ್ದು, ಹಣಕಾಸಿನ ಸಮಸ್ಯೆಗಳಿಂದಾಗಿ, ನಿಮ್ಮ ಯೋಜನೆ ಮಧ್ಯದಲ್ಲಿ ಸಿಲುಕಿಕೊಂಡಿದ್ದರೆ, ಇಂದು ನೀವು ಉತ್ತಮ ಫಲಿತಾಂಶ ದೊರೆಯುತ್ತದೆ. ಮನೆಯಲ್ಲಿ ಹಠಾತ್ ಚರ್ಚೆಯ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಧೈರ್ಯ ಮತ್ತು ತಾಳ್ಮೆಯಿಂದ ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಕೋಪವನ್ನು ನಿಯಂತ್ರಿಸಿ. ತಾಳ್ಮೆಯಿಂದ ವ್ಯವಹರಿಸಿ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ. ನಿರ್ಲಕ್ಷ್ಯವು ಅವರ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ಇದ್ದಕ್ಕಿದ್ದಂತೆ ಕೆಲವು ಅತಿಥಿಗಳು ಸಂಜೆ ಮನೆಗೆ ಬರಬಹುದು.

ಉತ್ತಮ ಬಣ್ಣ: ಕಡುಗೆಂಪು

ಶುಭ ಸಂಖ್ಯೆ: 30

ಶುಭ ಸಮಯ: ಮಧ್ಯಾಹ್ನ 12 ರಿಂದ ಸಂಜೆ 6 ರವರೆಗೆ

ತುಲಾ ರಾಶಿ:

ತುಲಾ ರಾಶಿ:

ಆಲಸ್ಯವನ್ನು ಇಂದು ದೂರಮಾಡಿ. ಕಚೇರಿಯಲ್ಲಿ ನಿಮ್ಮ ನಿಧಾನಗತಿಯ ಕೆಲಸ ನಿಮ್ಮ ತೊಂದರೆಗಳನ್ನು ಹೆಚ್ಚಿಸುತ್ತದೆ. ಆದಾಗ್ಯೂ ದಿನ ಉತ್ತಮವಾಗಿದೆ, ನಿಮ್ಮ ಕೆಲಸವನ್ನು ವೇಗವಾಗಿ ಪೂರ್ಣಗೊಳಿಸಲು ಪ್ರಯತ್ನಿಸಿ. ನೀವು ನಿರ್ಲಕ್ಷ್ಯ ವಹಿಸಿದರೆ, ನಿಮ್ಮನ್ನು ಪ್ರಮುಖ ಜವಾಬ್ದಾರಿಗಳಿಂದ ತೆಗೆಯಬಹುದು. ಇಂದು ವ್ಯಾಪಾರಿಗಳಿಗೆ ಮಿಶ್ರ ದಿನವಾಗಿರುತ್ತದೆ. ದಿನದ ಆರಂಭವು ಸ್ವಲ್ಪ ನಿಧಾನವಾಗಿರುತ್ತದೆ, ಆದರೆ ದಿನದ ಎರಡನೇ ಭಾಗದಲ್ಲಿ ಯೋಗ್ಯವಾದ ಲಾಭವನ್ನು ಗಳಿಸಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗಿನ ಸಂಬಂಧವು ಸುಧಾರಿಸುತ್ತದೆ, ವಿಶೇಷವಾಗಿ ಮನೆಯ ಹಿರಿಯರು ನಿಮ್ಮೊಂದಿಗೆ ತುಂಬಾ ಸಂತೋಷವಾಗಿರುತ್ತಾರೆ. ಆರ್ಥಿಕ ದೃಷ್ಟಿಯಿಂದ, ದಿನವು ಸ್ವಲ್ಪ ದುಬಾರಿ! ನಿಮ್ಮ ಬಜೆಟ್ ಪ್ರಕಾರ ನೀವು ಹೋಗುವುದು ಒಳ್ಳೆಯದು. ಮಗುವಿನ ಕಡೆಯಿಂದ ಸಮಸ್ಯೆ ಬರಬಹುದು. ಅವರ ಆರೋಗ್ಯದ ಬಗ್ಗೆ ನಿಮ್ಮ ಕಾಳಜಿ ಹೆಚ್ಚಾಗಬಹುದು. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ಹೆಚ್ಚಿನ ಒತ್ತಡವನ್ನು ತೆಗೆದುಕೊಳ್ಳುವ ಮೂಲಕ ನಿಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳಬೇಡಿ. ನಿಮ್ಮ ಉತ್ತಮ ಯೋಚನೆಯೇ ನಿಮಗೆ ಒಳಿತನ್ನು ಮಾಡುತ್ತದೆ.

ಉತ್ತಮ ಬಣ್ಣ: ಗುಲಾಬಿ

ಶುಭ ಸಂಖ್ಯೆ: 7

ಶುಭ ಸಮಯ: ಸಂಜೆ 4:15 ರಿಂದ 10 ರವರೆಗೆ

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ:

ನೀವು ನೌಕರಿ ಮಾಡುವವರಾಗಿದ್ದರೆ ನಿಮ್ಮ ಭಡ್ತಿಗಾಗಿ ಎದುರು ನೋಡುತ್ತಿದ್ದರೆ, ನೀವು ಕೆಲಸದ ಬಗ್ಗೆ ಜವಾಬ್ದಾರಿ ಮತ್ತು ವಿಶ್ವಾಸಾರ್ಹತೆಯನ್ನು ಮೊದಲು ಹೆಚ್ಚಿಸಿಕೊಳ್ಳಬೇಕು. ನಿಮ್ಮ ಬಾಸ್ ಕಚೇರಿಯಲ್ಲಿ ನಿಮಗೆ ವಹಿಸುವ ಯಾವುದೇ ಕೆಲಸವಿದ್ದರೂ ಅದನ್ನು ಮೊದಲು ಪೂರ್ಣಗೊಳಿಸಲು ಪ್ರಯತ್ನಿಸಿ, ನಿಮ್ಮ ಬಗ್ಗೆ ಅವರಿಗೆ ಯಾವುದೇ ಕೆಟ್ಟ ಭಾವನೆ ಬರದಂತೆ ನೋಡಿಕೊಳ್ಳಿ. ನೀವು ಸಹಭಾಗಿತ್ವದಲ್ಲಿ ವ್ಯಾಪಾರ ಮಾಡುವವರಾಗಿದ್ದರೆ, ಪಾಲುದಾರರೊಂದಿಗೆ ಮನಸ್ತಾಪ ಉಂಟಾಗಬಹುದು. ಈ ರೀತಿಯ ಪರಿಸ್ಥಿತಿಯಲ್ಲಿ, ನೀವು ಪ್ರಜ್ಞೆಯೊಂದಿಗೆ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಮ್ಮ ವ್ಯವಹಾರದ ಮೇಲೆ ಪರಿಣಾಮ ಬೀರಬಹುದು. ಹಣದ ಪರಿಸ್ಥಿತಿ ಬಲವಾಗಿರುತ್ತದೆ. ಇಂದು ನೀವು ಯಾವುದೇ ಅಮೂಲ್ಯ ವಸ್ತುವನ್ನು ಖರೀದಿಸಬಹುದು. ಆರೋಗ್ಯದ ಬಗ್ಗೆ ಮಾತನಾಡುವುದಾದರೆ, ಇಂದು ದಿನ ಉತ್ತಮವಾಗಿದೆ. ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ತುಂಬಾ ಸದೃಢರಾಗಿರುತ್ತೀರಿ.

ಉತ್ತಮ ಬಣ್ಣ: ನೇರಳೆ

ಶುಭ ಸಂಖ್ಯೆ: 14

ಶುಭ ಸಮಯ: ಸಂಜೆ 5:10 ರಿಂದ 9:50

ಧನು ರಾಶಿ:

ಧನು ರಾಶಿ:

ನೀವು ಕೆಲಸವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ನೀವು ಇಂದು ಉತ್ತಮ ಸುದ್ದಿ ಕೇಳುವಿರಿ. ನೀವು ಕಠಿಣ ಪರಿಶ್ರಮ ಮತ್ತು ಸಮರ್ಪಣೆಯೊಂದಿಗೆ ಕೆಲಸ ಮಾಡುತ್ತೀರಿ, ಹಾಗಾಗಿ ಶೀಘ್ರದಲ್ಲೇ ನಿಮ್ಮ ವೃತ್ತಿಜೀವನದಲ್ಲಿ ಹೊಸ ತಿರುವು ಬರಲಿದೆ. ವ್ಯಾಪಾರಿಗಳು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ನಿಮ್ಮ ಆತುರವು ನಿಮ್ಮ ಕೆಲಸವನ್ನು ಹಾಳುಮಾಡುತ್ತದೆ. ಮರದ ವ್ಯಾಪಾರ ಮಾಡುವವರು ಉತ್ತಮ ಲಾಭ ಪಡೆಯಬಹುದು. ದೊಡ್ಡ ವ್ಯವಹಾರ ಮಾಡಲು ನಿಮಗೆ ಅವಕಾಶ ಸಿಗುತ್ತದೆ. ಮನೆಯ ವಾತಾವರಣ ಉತ್ತಮವಾಗಿರುತ್ತದೆ. ಸಹೋದರ ಅಥವಾ ಸಹೋದರಿಗೆ ಸಂಬಂಧಿಸಿದ ಯಾವುದೇ ಒಳ್ಳೆಯ ಸುದ್ದಿಯನ್ನು ಕೇಳಬಹುದು. ನೀವು ಅವಿವಾಹಿತರಾಗಿದ್ದರೆ, ನಿಮ್ಮ ಮದುವೆಯನ್ನು ಮನೆಯಲ್ಲಿ ಚರ್ಚಿಸಬಹುದು. ಆದರೆ ನಿರ್ಧಾರಗಳನ್ನು ಅವಸರದಲ್ಲಿ ತೆಗೆದುಕೊಳ್ಳಬೇಡಿ. ಆರೋಗ್ಯದ ಬಗ್ಗೆ ಮಾತನಾಡುವುದಾದರೆ ನೀವು ಹೊರಗೆ ಆಹಾರವನ್ನು ತಿನ್ನುವುದನ್ನು ತಪ್ಪಿಸಬೇಕು.

ಉತ್ತಮ ಬಣ್ಣ: ಹಳದಿ

ಶುಭ ಸಂಖ್ಯೆ: 26

ಶುಭ ಸಮಯ: ಬೆಳಗ್ಗೆ 8:55 ರಿಂದ ಮಧ್ಯಾಹ್ನ 12 ರವರೆಗೆ

ಮಕರ ರಾಶಿ:

ಮಕರ ರಾಶಿ:

ನೌಕರಸ್ಥರಾಗಿದ್ದರೆ ಜಾಗೂರಕರಾಗಿರಬೇಕು. ಕಚೇರಿಯಲ್ಲಿ ಬಾಸ್ ಮಾತುಗಳನ್ನು ನಿರ್ಲಕ್ಷಿಸಬೇಡಿ. ನೀವು ನಿಮ್ಮ ಗಮನವನ್ನು ಕೆಲಸದ ಮೇಲೆ ಕೇಂದ್ರೀಕರಿಸಿ ಮತ್ತು ಎಲ್ಲಾ ನಿಯಮಗಳನ್ನು ಅನುಸರಿಸಿ. ನೀವು ಹೋಟೆಲ್ ಅಥವಾ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಇಂದು ನೀವು ಉತ್ತಮ ಲಾಭ ಗಳಿಸುತ್ತೀರಿ. ಯಾವುದಾದರೂ ವಿಷಯದಲ್ಲಿ ನಿಮ್ಮ ಮನಸ್ಸು ಬದಲಾಯಿಸಬೇಕೆಂಬ ಬಯಕೆ ಈಡೇರಬಹುದು. ಯಾವುದೇ ನಿರ್ಧಾರಗಳನ್ನು ಅವಸರದಲ್ಲಿ ತೆಗೆದುಕೊಳ್ಳದಿದ್ದರೆ ಉತ್ತಮ. ಎಚ್ಚರಿಕೆಯಿಂದ ಯೋಚಿಸಿದ ನಂತರವೇ ನಿಮ್ಮ ಅಂತಿಮ ನಿರ್ಧಾರ ತೆಗೆದುಕೊಳ್ಳಿ. ಹಣದ ಪರಿಸ್ಥಿತಿ ತೃಪ್ತಿಕರವಾಗಿರುತ್ತದೆ. ಇಂದು ವೆಚ್ಚಗಳು ಹೆಚ್ಚಾಗಬಹುದು ಆದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನೀವು ಹೆತ್ತವರ ವಾತ್ಸಲ್ಯ ಮತ್ತು ಆಶೀರ್ವಾದವನ್ನು ಪಡೆಯುತ್ತೀರಿ, ಇಂದು ನೀವು ತಂದೆಯಿಂದ ಸ್ವಲ್ಪ ಆರ್ಥಿಕ ಲಾಭವನ್ನು ಕೂಡ ಪಡೆಯಬಹುದು. ನಿಮ್ಮ ಸಂಗಾತಿಯೊಂದಿಗೆ ಬಾಂಧವ್ಯ ಹೆಚ್ಚಾಗುತ್ತದೆ ಮತ್ತು ಪರಸ್ಪರ ಸಾಕಷ್ಟು ಸಮಯವನ್ನು ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ಇಂದು ನೀವು ಶೀತ, ನೆಗಡಿ ಮತ್ತು ಕಫದಿಂದ ತೊಂದರೆಗೊಳಗಾಗುತ್ತೀರಿ.

ಉತ್ತಮ ಬಣ್ಣ: ಕ್ರೀಮ್ (ತಿಳಿ ಬಿಳಿ)

ಶುಭ ಸಂಖ್ಯೆ: 22

ಶುಭ ಸಮಯ: ಸಂಜೆ 4 ರಿಂದ 8:55 ರವರೆಗೆ

ಕುಂಭ ರಾಶಿ:

ಕುಂಭ ರಾಶಿ:

ಕೆಲಸ ಮಾಡುವ ಕ್ಷೇತ್ರದಲ್ಲಿ ಕೆಲವು ಸವಾಲುಗಳು ಎದುರಾಗಬಹುದು, ಆದರೆ ಇದರ ಹೊರತಾಗಿಯೂ ನೀವು ಯಶಸ್ಸನ್ನು ಪಡೆಯುತ್ತೀರಿ. ಉದ್ಯಮಿಗಳು ಬಹಳ ಸಮಯದಿಂದ ಕಾಯುತ್ತಿದ್ದ ಆರ್ಥಿಕ ಲಾಭವು ಇಂದು ಕೈಸೇರುವ ಸಾಧ್ಯತೆ. ಹೊಸ ಕೆಲಸಕ್ಕೆ ಯೋಜನೆ ರೂಪಿಸುವ ಮುನ್ನ ಯೋಚಿಸಿ. ಯೊಜನೆಯ ಬಗ್ಗೆ ಸಂಪೂರ್ಣ ಗಮನ ಇರಲಿ. ವೈಯಕ್ತಿಕ ಜೀವನದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ನಿಮ್ಮ ಮನೆಯ ನೆಮ್ಮದಿಗಾಗಿ ನೀವು ಇಂದು ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕು. ನೀವು ವಿವಾಹಿತರಾಗಿದ್ದರೆ, ಇಂದು ನಿಮ್ಮ ಸಂಗಾತಿಯು ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ನಿರ್ಲಕ್ಷ್ಯ ವಹಿಸದೇ ಅವರನ್ನು ನೋಡಿಕೊಳ್ಳಿ.

ಉತ್ತಮ ಬಣ್ಣ: ಕಂದು

ಶುಭ ಸಂಖ್ಯೆ: 8

ಶುಭ ಸಮಯ: ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ

ಮೀನ ರಾಶಿ:

ಮೀನ ರಾಶಿ:

ಒಂದು ದಿನದ ಮೊದಲಾರ್ಧ ಶುಭ. ಕೆಲಸದ ವಿಷಯದಲ್ಲಿ ಮಂಗಳಕರ. ವಿಶೇಷವಾಗಿ ನೀವು ಕೆಲಸವನ್ನು ಮಾಡಿದರೆ ಹಿರಿಯ ಅಧಿಕಾರಿಗಳಿಂದ ನಿಮಗೆ ಸರಿಯಾದ ಮಾರ್ಗದರ್ಶನ ಸಿಗುತ್ತದೆ. ನಿಮ್ಮ ಕಾರ್ಯಕ್ಷಮತೆಯಲ್ಲಿಯೂ ಸುಧಾರಣೆ ಕಾಣಬಹುದು. ಮತ್ತು ನಿಮ್ಮ ಕೆಲಸದಿಂದ ನೀವು ತೃಪ್ತರಾಗುತ್ತೀರಿ. ಮತ್ತೊಂದೆಡೆ, ವ್ಯಾಪಾರ ವರ್ಗವು ಹೆಚ್ಚಿನ ಶ್ರಮದಿಂದ ನಿರೀಕ್ಷಿತ ಫಲಿತಾಂಶಗಳನ್ನು ಪಡೆಯಬಹುದು. ಮತ್ತೊಂದೆಡೆ, ಇಂದು ನೀವು ವ್ಯವಹಾರಕ್ಕಾಗಿ ಎಲ್ಲಿಗಾದರೂ ಪ್ರಯಾಣಿಸಲಿದ್ದರೆ, ಅದನ್ನು ತಪ್ಪಿಸಿಕೊಳ್ಳಿ. ಮನೆಯಲ್ಲಿಯೇ ಇರಿ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಮಕ್ಕಳಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ನೀವು ಇಂದು ಕೇಳುವಿರಿ. ಅವರು ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಪ್ರಮುಖ ಯಶಸ್ಸನ್ನು ಪಡೆಯಬಹುದು. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

ಉತ್ತಮ ಬಣ್ಣ: ಕೆಂಪು

ಶುಭ ಸಂಖ್ಯೆ: 19

ಶುಭ ಸಮಯ: ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ

ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು,

ಆಚಾರ್ಯ ಶ್ರೀ ರಾಘವೇಂದ್ರ ಭಟ್ ಕುಡ್ಲ.

ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಉಪಾಸಕರು

ಪ್ರೀತಿ- ಪ್ರೇಮ ವಿಚಾರ, ಸತಿ- ಪತಿ ಕಲಹ, ಮದುವೆ ವಿಳಂಬ, ಸಂತಾನ, ಉದ್ಯೋಗ, ವ್ಯಾಪಾರ ಸಮಸ್ಯೆ, ದೃಷ್ಟಿ ದೋಷ, ಕುಜ ದೋಷ, ವಾಮಾಚಾರ ಬಾಧಿತರಿಗೆ ಪರಿಹಾರ ನಿಶ್ಚಿತ.

ಹಣಕಾಸು ಸಮಸ್ಯೆ, ಅನಾರೋಗ್ಯ, ಶತ್ರು ಬಾಧೆ, ಗೃಹ ನಿರ್ಮಾಣದಲ್ಲಿ ಅಡೆ-ತಡೆಗಳಿದ್ದಲ್ಲಿ ಸುಲಭ ಪರಿಹಾರ ಒದಗಿಸಲಿದ್ದಾರೆ.

ನಿಮ್ಮ ಯಾವುದೇ ಸಮಸ್ಯೆಗೆ ಒಮ್ಮೆ ಭೇಟಿ ನೀಡಿ. ದುರ್ಗಾ ಅನುಗ್ರಹ ಜ್ಯೋತಿಷ್ಯ ಕೇಂದ್ರ ಮೊಬೈಲ್ ಫೋನ್ ಸಂಖ್ಯೆ 9845000635 .

https://sridurga-astrologer.com

English summary

Dina Bhavishya 14 October 2020.

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
X