For Quick Alerts
ALLOW NOTIFICATIONS  
For Daily Alerts

ಭಾನುವಾರದ ದಿನ ಭವಿಷ್ಯ (27-10-2019)

|

ಸಮಸ್ತ ಓದುಗ ಬಾಂಧವರಿಗೆ ದೀಪಾವಳಿ ಹಬ್ಬದ ಶುಭಾಶಯಗಳು.

ಭಾನುವಾರ ಎಂದರೆ ಸಾಮಾನ್ಯವಾಗಿ ಎಲ್ಲರೂ ಆನಂದದಿಂದ ಇರಲು ಇಷ್ಟ ಪಡುತ್ತಾರೆ. ಎಲ್ಲಾ ಒತ್ತಡಗಳನ್ನು ಬದಿಗಿಟ್ಟು ದಿನವಿಡೀ ವಿಶ್ರಾಂತಿಗೆ ಒಳಗಾಗಲು ಬಯಸುತ್ತಾರೆ. ಇನ್ನೂ ಕೆಲವರು ಶಾಪಿಂಗ್ ಮಾಡುವುದು ಅಥವಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದರ ಮೂಲಕ ಖುಷಿಪಡುತ್ತಾರೆ. ಒಟ್ಟಿನಲ್ಲಿ ಎಲ್ಲಾ ಕಾರ್ಯದ ಉದ್ದೇಶವು ಖುಷಿಯಾಗಿ ಇರಬೇಕೆನ್ನುವುದೇ ಆಗಿರುತ್ತದೆ.

ವಿಶ್ರಾಂತಿಗೆ ಮೀಸಲಾದ ಈ ಭಾನುವಾರ ನಿಮ್ಮ ಭವಿಷ್ಯಕ್ಕೆ ಯಾವೆಲ್ಲಾ ಬದಲಾವಣೆಯನ್ನುಂಟುಮಾಡುತ್ತದೆ? ವಿಶ್ರಾಂತಿಯ ಜೊತೆಗೆ ಒಂದಿಷ್ಟು ಖುಷಿಯನ್ನು ನೀಡುವುದೇ ಎಂದು ತಿಳಿದುಕೊಳ್ಳಲು ಈ ಮುಂದೆ ವಿವರಿಸಲಾದ ರಾಶಿ ಭವಿಷ್ಯವನ್ನು ಅರಿಯಿರಿ...

ಮೇಷ: 21 ಮಾರ್ಚ್ - 19 ಏಪ್ರಿಲ್

ಮೇಷ: 21 ಮಾರ್ಚ್ - 19 ಏಪ್ರಿಲ್

ವೈವಾಹಿಕ ಜೀವನದಲ್ಲಿ ಇಂದು ಕೆಲವು ಸಂಘರ್ಷಗಳು ಉದ್ಭವಿಸಬಹುದು. ನಿಮ್ಮ ಸಂಗಾತಿಯೊಂದಿಗಿನ ಸಣ್ಣ ಚರ್ಚೆಯು ದೊಡ್ಡ ಜಗಳವಾಗಿ ಬದಲಾಗಬಹುದು. ಆದ್ದರಿಂದ, ನಿಮ್ಮ ಮಾತುಗಳಲ್ಲಿ ನಿಯಂತ್ರಣ ಇರಲಿ. ಕೋಪಕ್ಕಿಂತ ಹೆಚ್ಚಾಗಿ ವಿಷಯವನ್ನು ಪ್ರೀತಿಯಿಂದ ನಿರ್ವಹಿಸಿ. ಅತಿಯಾದ ಚಿಂತೆ ನಿಮ್ಮ ಮಾನಸಿಕ ಶಾಂತಿಯನ್ನು ಕಸಿದುಕೊಳ್ಳಬಹುದು. ಮಾನಸಿಕವಾಗಿ ಸದೃಢ ವಾಗಿರಲು ಧ್ಯಾನ ಮಾಡಿ . ಕೆಲಸದ ಮುಂಭಾಗದಿಂದ ದಿನವು ಸಕಾರಾತ್ಮಕವಾಗಿರುತ್ತದೆ. ನಿಮ್ಮ ಕಠಿಣ ಪರಿಶ್ರಮವು ಫಲ ನೀಡುತ್ತದೆ. ನೀವು ಉನ್ನತ ಸ್ಥಾನವನ್ನು ಪಡೆಯಬಹುದು. ಮನರಂಜನಾ ವಿಷಯಗಳು ಮತ್ತು ಆನಂದಕ್ಕಾಗಿ ಹಣವನ್ನು ಖರ್ಚು ಮಾಡುವುದರಿಂದ ತೊಂದರೆಗೆ ಒಳಗಾಗುವಿರಿ. ಉಳಿತಾಯದತ್ತ ಹೆಚ್ಚು ಗಮನಹರಿಸಿ. ಕುಟುಂಬದಲ್ಲಿ ವಿವಾದಗಳು ಉಂಟಾಗಬಹುದು. ಸಂಜೆ ಕೆಲವು ಒಳ್ಳೆಯ ಸುದ್ದಿಗಳನ್ನು ನಿರೀಕ್ಷಿಸಬಹುದು.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 42

ಅದೃಷ್ಟ ಸಮಯ: ಮಧ್ಯಾಹ್ನ 1:05 - ಸಂಜೆ 5:00

ವೃಷಭ: 20 ಏಪ್ರಿಲ್ - 20 ಮೇ

ವೃಷಭ: 20 ಏಪ್ರಿಲ್ - 20 ಮೇ

ಇಂದು ನೀವು ಅನೇಕ ಸವಾಲುಗಳನ್ನು ಎದುರಿಸಬಹುದು. ನಿಮ್ಮ ಆಸೆಗೆ ಅನುಗುಣವಾಗಿ ಯಾವ ಕೆಲಸವೂ ನಡೆಯುತ್ತಿಲ್ಲ ಎಂದು ನೀವು ಭಾವಿಸುವಿರಿ. ಕೆಲವು ಪರಿಸ್ಥಿತಿಯಿಂದಾಗಿ ನೀವು ನಿರಾಶೆಗೊಳ್ಳಬಹುದು. ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಿಮ್ಮಿಬ್ಬರ ನಡುವೆ ಪರಸ್ಪರ ತಿಳುವಳಿಕೆ ಹೆಚ್ಚಾಗುತ್ತದೆ. ಆರ್ಥಿಕ ರಂಗದಲ್ಲಿ ದಿನವು ಅತ್ಯುತ್ತಮವಾಗಿರುತ್ತದೆ. ಇಂದು ನೀವು ಹಣವನ್ನು ಸಂಪಾದಿಸಲು ಉತ್ತಮ ಅವಕಾಶವನ್ನು ಪಡೆಯಬಹುದು. ಕುಟುಂಬ ಸದಸ್ಯರೊಂದಿಗೆ ಕೆಲವು ಸಮಸ್ಯೆಗಳು ಉದ್ಭವಿಸಬಹುದು. ಕೆಲಸದ ಸ್ಥಳದಲ್ಲಿ ವಿಷಯಗಳು ಉತ್ತಮವಾಗಿ ಕಾಣುತ್ತವೆ. ಅನಿರೀಕ್ಷಿತ ವ್ಯಾಪಾರ ಪ್ರವಾಸವನ್ನು ನಿರೀಕ್ಷಿಸಸಬಹುದು. ಅದು ನಿಮ್ಮನ್ನು ಆಯಾಸಗೊಳಿಸುತ್ತದೆ. ಕೆಲಸದ ಜೊತೆಗೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಅದೃಷ್ಟ ಬಣ್ಣ: ಕ್ರೀಮ್

ಅದೃಷ್ಟ ಸಂಖ್ಯೆ: 7

ಅದೃಷ್ಟ ಸಮಯ: ಸಂಜೆ 5:00 - ರಾತ್ರಿ 9:00

ಮಿಥುನ: 21 ಮೇ - 20 ಜೂನ್

ಮಿಥುನ: 21 ಮೇ - 20 ಜೂನ್

ವ್ಯಾಪಾರಿಗಳಿಗೆ ವಿಶೇಷವಾಗಿ ಅನುಕೂಲಕರವಾಗಿರುತ್ತದೆ. ನೀವು ಬಟ್ಟೆಗಳಿಗೆ ಸಂಬಂಧಿಸಿದ ವ್ಯವಹಾರವನ್ನು ಮಾಡುತ್ತಿರುವವರು ದೊಡ್ಡ ಆರ್ಥಿಕ ಲಾಭಗಳನ್ನು ಪಡೆಯುವ ಸಾಧ್ಯತೆಯಿದೆ. ವೈಯಕ್ತಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಸಂಭವಿಸಬಹುದು. ಇಂದು ನಿಮ್ಮ ಕೋಪವನ್ನು ನಿಯಂತ್ರಿಸಿ. ಇಲ್ಲದಿದ್ದರೆ ವಿಷಯವು ಕೈಯಿಂದ ಹೊರಬರಬಹುದು. ನಿಮ್ಮ ಸಂಗಾತಿಯೊಂದಿಗಿನ ಸಂಬಂಧವು ಸಾಮರಸ್ಯದಿಂದ ಕೂಡಿರುತ್ತದೆ. ಇಂದು ನೀವು ಪ್ರಮುಖ ನಿರ್ಧಾರ ತೆಗೆದುಕೊಳ್ಳಬಹುದು. ಹೊಸ ಕೆಲಸದಲ್ಲಿ ನೀವು ಇಂದು ಕಾರ್ಯನಿರತರಾಗಿರುತ್ತೀರಿ. ಪ್ರಣಯ ಜೀವನದಲ್ಲಿ ಕೆಲವು ಸಕಾರಾತ್ಮಕ ಸಂಗತಿಗಳು ಸಂಭವಿಸಬಹುದು. ಆರೋಗ್ಯವು ಉತ್ತಮವಾಗಿ ಇರುತ್ತದೆ.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 5

ಅದೃಷ್ಟ ಸಮಯ: ಮಧ್ಯಾಹ್ನ 2:45 - ಸಂಜೆ 4:00

ಕರ್ಕ: 21 ಜೂನ್ - 22 ಜುಲೈ

ಕರ್ಕ: 21 ಜೂನ್ - 22 ಜುಲೈ

ಇಂದು ನೀವು ನಿಮ್ಮ ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸುವುದಿಲ್ಲ. ಕೆಲಸದ ಬಗ್ಗೆ ನೀವು ತೆಗೆದುಕೊಳ್ಳುವ ನಿರ್ಧಾರಗಳು ಆರೋಗ್ಯದ ಮೇಲೆ ಒತ್ತಡವನ್ನುಂಟುಮಾಡುವುದು. ನಿಮ್ಮ ದಿನಚರಿಯನ್ನು ಸ್ವಲ್ಪ ಬದಲಾಯಿಸಿ. ಸಾಕಷ್ಟು ವಿಶ್ರಾಂತಿ ಪಡೆಯಿರಿ. ನಿಯಮಿತವಾಗಿ ವ್ಯಾಯಾಮ ಮಾಡಿ. ಆರೋಗ್ಯವಾಗಿರಲು ಪೌಷ್ಟಿಕ ಆಹಾರವನ್ನು ಸೇವಿಸಿ. ಆರ್ಥಿಕ ವಿಷಯಗಳಲ್ಲಿ ದಿನವು ಸಾಮಾನ್ಯವಾಗಿರುತ್ತದೆ. ಅಗತ್ಯವಿರುವ ವಿಷಯಗಳಿಗೆ ಮಾತ್ರ ಖರ್ಚು ಮಾಡಿ. ಹಣಕಾಸಿನ ವಿಷಯಗಳಲ್ಲಿ ಹಿರಿಯರ ಸಲಹೆಯೊಂದಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಿ. ಕೆಲಸದ ಬಗ್ಗೆ ಹೆಚ್ಚು ಗಮನಹರಿಸಿ. ವಿವಾಹಿತ ದಂಪತಿಗಳಿಗೆ ದಿನವು ತುಂಬಾ ವಿಶೇಷವಾಗಿರುತ್ತದೆ. ನಿಮ್ಮ ಸಂಗಾತಿಯು ಉತ್ತಮ ಮನಸ್ಥಿತಿಯಲ್ಲಿರುತ್ತಾ ರೆ ಮತ್ತು ನಿಮ್ಮೊಂದಿಗೆ ಹೆಚ್ಚು ಸಮಯ ಕಳೆಯುತ್ತಾ ರೆ.

ಅದೃಷ್ಟ ಬಣ್ಣ: ಹಸಿರು

ಅದೃಷ್ಟ ಸಂಖ್ಯೆ: 15

ಅದೃಷ್ಟ ಸಮಯ: ಬೆಳಿಗ್ಗೆ 12:45 - ಸಂಜೆ 5:20

ಸಿಂಹ: 23 ಜುಲೈ - 22 ಆಗಸ್ಟ್

ಸಿಂಹ: 23 ಜುಲೈ - 22 ಆಗಸ್ಟ್

ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಮಾಧುರ್ಯ ಇರುತ್ತದೆ. ನೀವು ಇಂದು ನಿಮ್ಮ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಬಹುದು. ಸಂತರ ಆಶೀರ್ವಾದವನ್ನು ಸ್ವೀಕರಿಸುತ್ತೀರಿ. ನಿಮ್ಮ ಸಂಗಾತಿಯಿಂದ ವಿಶೇಷ ಆಶ್ಚರ್ಯವನ್ನು ನಿರೀಕ್ಷಿಸಬಹುದು. ಅದು ಖಂಡಿತವಾಗಿಯೂ ನಿಮ್ಮ ಮುಖದಲ್ಲಿ ಸಂತೋಷವನ್ನು ತರುತ್ತದೆ. ನಿಮ್ಮ ಸಂಗಾತಿಗೆ ಸುಳ್ಳು ಹೇಳುವುದನ್ನು ನಿಲ್ಲಿಸಿ. ನಿಮ್ಮ ಎಲ್ಲಾ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುವುದರಿಂದ ದಿನವು ಅದೃಷ್ಟಶಾಲಿಯಾಗಲಿದೆ. ಇಂದು ನೀವು ಉತ್ತಮ ಮತ್ತು ಆತ್ಮವಿಶ್ವಾಸವನ್ನು ಅನುಭವಿಸುವಿರಿ. ನಿಮ್ಮ ಎಲ್ಲಾ ಅಪೂರ್ಣ ಕಾರ್ಯಗಳನ್ನು ಮುಗಿಸಲು ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತೀರಿ. ಉದ್ಯೋಗ ಬದಲಾವಣೆಯ ಸಾಧ್ಯತೆಯಿದೆ. ಆರೋಗ್ಯವು ಉತ್ತಮವಾಗಿರುತ್ತದೆ.

ಅದೃಷ್ಟ ಬಣ್ಣ: ಆಳವಾದ ಕೆಂಪು

ಅದೃಷ್ಟ ಸಂಖ್ಯೆ: 6

ಅದೃಷ್ಟ ಸಮಯ: ಮಧ್ಯಾಹ್ನ 1:00 - ಸಂಜೆ 5:00

ಕನ್ಯಾ: 23 ಆಗಸ್ಟ್ - 22 ಸೆಪ್ಟೆಂಬರ್

ಕನ್ಯಾ: 23 ಆಗಸ್ಟ್ - 22 ಸೆಪ್ಟೆಂಬರ್

ಹಣದ ದೃಷ್ಟಿಯಿಂದ ಅದೃಷ್ಟದ ದಿನವಾಗಲಿದೆ. ಇಂದು ನೀವು ಸಾಕಷ್ಟು ಶಾಪಿಂಗ್ ಮಾಡುತ್ತೀರಿ ಮತ್ತು ಅಮೂಲ್ಯವಾದದ್ದನ್ನು ಪಡೆಯಬಹುದು. ಎಲ್ಲಾ ಕೆಲಸ ಕಾರ್ಯಗಳನ್ನು ಕಠಿಣ ಪರಿಶ್ರಮದಿಂದ ಪೂರ್ಣಗೊಳಿಸುತ್ತೀರಿ. ಭೂಮಿ, ಮನೆ, ವಾಹನಕ್ಕೆ ಸಂಬಂಧಿಸಿದ ಕಾನೂನು ಪ್ರಕರಣದಲ್ಲಿ ನ್ಯಾಯಯುತ ಫಲಿತಾಂಶವನ್ನು ನಿರೀಕ್ಷಿಸಬಹುದು. ಉದ್ಯಮಿಗಳಿಗೆ ಫಲಪ್ರದವಾದ ದಿನ. ಕೈಯಲ್ಲಿ ಹೊಸ ಕಾರ್ಯದೊಂದಿಗೆ ನಿಮ್ಮ ವ್ಯವಹಾರವು ಮತ್ತಷ್ಟು ಬೆಳೆಯುತ್ತದೆ. ವಿವಾಹದ ಸಮಸ್ಯೆಗಳು ಕೊನೆಗೊಳ್ಳುತ್ತವೆ ಮತ್ತು ನಿಮ್ಮ ಸಂಗಾತಿಯೊಂದಿಗಿನ ಸಂಬಂಧವು ಸುಧಾರಿಸುತ್ತದೆ. ಪ್ರೀತಿಯಿಂದ ದಂಪತಿಗಳಿಗೆ ದಿನವು ವಿಶೇಷವಾಗಿರುತ್ತದೆ. ನೀವಿಬ್ಬರೂ ಮದುವೆಯ ನಿರ್ಧಾರ ತೆಗೆದುಕೊಳ್ಳಬಹುದು. ಒಂದು ಸಣ್ಣ ಪ್ರವಾಸವನ್ನು ನಿರೀಕ್ಷಿಸಬಹುದು. ಅದು ನಿಮಗೆ ತುಂಬಾ ಶುಭವಾಗಿರುತ್ತದೆ.

ಅದೃಷ್ಟ ಬಣ್ಣ: ಮರೂನ್

ಅದೃಷ್ಟ ಸಂಖ್ಯೆ: 25

ಅದೃಷ್ಟ ಸಮಯ: ಬೆಳಿಗ್ಗೆ 4:20 - ಮಧ್ಯಾಹ್ನ 12:00

ತುಲಾ: 23 ಸೆಪ್ಟೆಂಬರ್ - 22 ಅಕ್ಟೋಬರ್

ತುಲಾ: 23 ಸೆಪ್ಟೆಂಬರ್ - 22 ಅಕ್ಟೋಬರ್

ಆರ್ಥಿಕ ಪರಿಸ್ಥಿತಿಗಳು ಇಂದು ಉತ್ತಮವಾಗಿರುತ್ತವೆ. ವೆಚ್ಚಗಳು ಹೆಚ್ಚಾಗುತ್ತವೆ. ಆದರೆ ನೀವು ಕೆಲವು ಹೊಸ ಆದಾಯದ ಮೂಲಗಳನ್ನು ಪೂರೈಸುವ ನಿರೀಕ್ಷೆಯಿದೆ. ಇಂದು, ಹೊಟ್ಟೆಗೆ ಸಂಬಂಧಿಸಿದ ಯಾವುದೇ ರೋಗವು ನಿಮ್ಮನ್ನು ಕಾಡಬಹುದು. ನಿಮ್ಮ ಕೆಲಸಕ್ಕೆ ಸಮಯ ತೆಗೆದುಕೊಳ್ಳಿ. ಆರೋಗ್ಯದ ಬಗ್ಗೆಯೂ ಗಮನಹರಿಸಿ. ಇಂದು ನೀವು ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತೀರಿ ಮತ್ತು ಮಾನಸಿಕ ತೊಂದರೆ ಅನುಭವಿಸುವಿರಿ. ಅತ್ಯಲ್ಪ ವಿಷಯಗಳ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಲು ಇದು ಉತ್ತಮ ಸಮಯ. ಇಂದು ನೀವು ಎಲ್ಲೋ ಪ್ರಯಾಣಿಸಬಹುದು ಅದು ನಿಮಗೆ ಆರ್ಥಿಕ ಲಾಭವನ್ನು ನೀಡುತ್ತದೆ. ನಿಮ್ಮ ಸಂಗಾತಿಯ ಅಸಾಮಾನ್ಯ ಬೇಡಿಕೆಯನ್ನು ಒಪ್ಪಬೇಡಿ. ಆದರೆ ಅವರನ್ನು ಪ್ರೀತಿಯಿಂದ ಸಾಂತ್ವಾನಗೊಳಿಸಿ. ನಿಮ್ಮ ಖಾಲಿತನ ಮತ್ತು ಬೇಸರವನ್ನು ನಿವಾರಿಸಲು ಸ್ನೇಹಿತರೊಂದಿಗೆ ಬೆರೆಯಿರಿ ಅಥವಾ ಆಸಕ್ತಿ ದಾಯಕ ಪುಸ್ತಕವನ್ನು ಓದಿ

ಅದೃಷ್ಟ ಬಣ್ಣ: ನೀಲಿ

ಅದೃಷ್ಟ ಸಂಖ್ಯೆ: 2

ಅದೃಷ್ಟ ಸಮಯ: ಬೆಳಿಗ್ಗೆ 7:15 - ಮಧ್ಯಾಹ್ನ 2:05

ವೃಶ್ಚಿಕ: 23 ಅಕ್ಟೋಬರ್ - 21 ನವೆಂಬರ್

ವೃಶ್ಚಿಕ: 23 ಅಕ್ಟೋಬರ್ - 21 ನವೆಂಬರ್

ದಿನವು ಶುಭವಾಗಿರುತ್ತದೆ. ನೀವು ಮಾನಸಿಕವಾಗಿ ತೃಪ್ತಿ ಮತ್ತು ದೃಢವಾಗಿರುತ್ತೀರಿ. ಅಲ್ಲದೆ ನಿಮ್ಮ ಆರೋಗ್ಯವು ತುಂಬಾ ಉತ್ತಮವಾಗಿರುತ್ತದೆ. ಕೆಲಸಗಳನ್ನು ಉತ್ಸಾಹದಿಂದ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ಹಣಕಾಸಿನ ವಿಷಯಗಳು ಉತ್ತಮವಾಗಿ ಉಳಿಯುತ್ತವೆ. ನೀವು ಹೊಸ ಆದಾಯದ ಮೂಲವನ್ನು ಪಡೆಯುತ್ತೀರಿ. ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಇಂದು ಕೆಲವು ಆಸ್ತಿ-ಸಂಬಂಧಿತ ವಹಿವಾಟುಗಳನ್ನು ಪೂರ್ಣಗೊಳಿಸುವುದರಿಂದ ನೀವು ಲಾಭ ಪಡೆಯುತ್ತೀರಿ. ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಮುಂದುವರಿಯುತ್ತದೆ. ಕಷ್ಟದ ಸಂದರ್ಭಗಳಲ್ಲೂ ನಿಮ್ಮ ಸಂಗಾತಿಯು ನಿಮ್ಮೊಂದಿಗೆ ನಿಲ್ಲುತ್ತಾರೆ. ನಿಮ್ಮಿಬ್ಬರ ನಡುವಿನ ಪರಸ್ಪರ ಹೊಂದಾಣಿಕೆ ಬಲವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಪ್ರಣಯ ಜೀವನದಲ್ಲಿ ಎಲ್ಲವೂ ಸಾಮಾನ್ಯವಾಗಲಿದೆ. ಆರೋಗ್ಯದ ದೃಷ್ಟಿಯಿಂದ ದಿನ ಉತ್ತಮವಾಗಿದೆ. ನೀವು ಸಂಜೆ ಯಾವುದಾದರೂ ಧಾರ್ಮಿಕ ಸ್ಥಳಕ್ಕೆ ಹೋಗಬಹುದು.

ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 18

ಅದೃಷ್ಟ ಸಮಯ: ಬೆಳಿಗ್ಗೆ 7:45 - ಮಧ್ಯಾಹ್ನ 12:00

ಧನು: 22 ನವೆಂಬರ್ - 21 ಡಿಸೆಂಬರ್

ಧನು: 22 ನವೆಂಬರ್ - 21 ಡಿಸೆಂಬರ್

ಇಂದು ಬಹಳಷ್ಟು ಕಾಳಜಿಗಳು ನಿಮ್ಮನ್ನು ಕಾಡುತ್ತವೆ. ನಿಮ್ಮ ಮನಸ್ಸು ಪ್ರಕ್ಷುಬ್ಧವಾಗಿರುತ್ತದೆ. ನೀವು ಯಾವುದೇ ಕೆಲಸದ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ತಾಯಿಯ ಆರೋಗ್ಯ ಇಂದು ಉತ್ತಮವಾಗಿರುವುದಿಲ್ಲ. ನಿರ್ಲಕ್ಷ್ಯವು ಅವಳ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ಆದ್ದರಿಂದ ಅವರ ಬಗ್ಗೆ ವಿಶೇಷ ಕಾಳಜಿ ವಹಿಸಿ. ವಿವಾಹಿತ ದಂಪತಿಗಳಿಗೆ ಇಂದು ಉತ್ತಮ ದಿನವಾಗಬಹುದು. ನಿಮ್ಮ ಸಂಗಾತಿಯಿಂದ ನಿಮಗೆ ಸಂಪೂರ್ಣ ಪ್ರೀತಿ ಮತ್ತು ಬೆಂಬಲ ಸಿಗುತ್ತದೆ. ಅವರೊಂದಿಗಿನ ನಿಮ್ಮ ಸಂಬಂಧವು ಮೊದಲಿಗಿಂತ ಹೆಚ್ಚು ತೀವ್ರವಾಗಿರುತ್ತದೆ. ಪ್ರೀತಿಯ ವ್ಯವಹಾರಗಳಲ್ಲಿ ಸ್ವಲ್ಪ ತಪ್ಪು ತಿಳುವಳಿಕೆ ಉಂಟಾಗಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಮಿಶ್ರಫಲ ಪಡೆಯುವಿರಿ. ನಿಮ್ಮ ಬಜೆಟ್ ಪ್ರಕಾರ ಖರ್ಚು ಮಾಡಿ. ನೌಕರರು ಇಂದು ತಮ್ಮ ಮೇಲಧಿಕಾರಿಗಳ ಮುಂದೆ ಸರಿಯಾಗಿ ವರ್ತಿಸುವಂತೆ ಎಚ್ಚರಿಕೆಯಿಂದ ಇರಬೇಕು.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 20

ಅದೃಷ್ಟ ಸಮಯ: ಸಂಜೆ 5:00 - ರಾತ್ರಿ 10:00

ಮಕರ: 22 ಡಿಸೆಂಬರ್ - 19 ಜನವರಿ

ಮಕರ: 22 ಡಿಸೆಂಬರ್ - 19 ಜನವರಿ

ವೈವಾಹಿಕ ಜೀವನ ಸಾಮರಸ್ಯದಿಂದ ಉಳಿಯುತ್ತದೆ. ಇಂದು ನೀವಿಬ್ಬರೂ ಪರಸ್ಪರ ಸ್ವಲ್ಪ ಉತ್ತಮ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ. ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಗೆ ಬಹಿರಂಗವಾಗಿ ವ್ಯಕ್ತಪಡಿಸಲು ದಿನ ಅನುಕೂಲಕರವಾಗಿದೆ. ನಿಮ್ಮ ತಂದೆಯೊಂದಿಗೆ ವಾಗ್ವಾದ ಸಂಭವಿಸಬಹುದು. ಅವರು ಬಯಸುವುದು ನಿಮ್ಮ ಒಳ್ಳೆಯದನ್ನು ಎಂದು ನೀವು ಅರ್ಥಮಾಡಿಕೊಳ್ಳಬೇಕು. ಅವರ ಸಲಹೆಯಂತೆ ನೀವು ನಡೆದರೆ ಉತ್ತಮ. ಹಣ ಇಂದು ಉತ್ತಮವಾಗಿರುವುದಿಲ್ಲ. ಹೆಚ್ಚುತ್ತಿರುವ ಖರ್ಚಿನಿಂದಾಗಿ ಹಣಕಾಸಿನ ಅಡಚಣೆ ಉಂಟಾಗಬಹುದು. ಇತರರ ಒತ್ತಡದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಇತರರ ಮೇಲೆ ಆಳುವ ನಿಮ್ಮ ಅಭ್ಯಾಸವು ತೊಂದರೆಗೆ ಸಿಲುಕಿಸಬಹುದು. ಎಲ್ಲರೊಂದಿಗೆ ಉತ್ತಮ ನಡವಳಿಕೆಯನ್ನು ಇಟ್ಟುಕೊಳ್ಳುವುದು ನಿಮಗೆ ಒಳ್ಳೆಯದು. ನಿಮ್ಮ ಯೋಜನೆಗಳು ಕೊನೆಯ ಕ್ಷಣದಲ್ಲಿ ಬದಲಾಗಬಹುದು.

ಅದೃಷ್ಟ ಬಣ್ಣ: ಕಿತ್ತಳೆ

ಅದೃಷ್ಟ ಸಂಖ್ಯೆ: 14

ಅದೃಷ್ಟ ಸಮಯ: ಮಧ್ಯಾಹ್ನ 12:00 - ರಾತ್ರಿ 9:00

ಕುಂಭ: 20 ಜನವರಿ - 18 ಫೆಬ್ರವರಿ

ಕುಂಭ: 20 ಜನವರಿ - 18 ಫೆಬ್ರವರಿ

ಕೆಲವು ಸಂಬಂಧಿಕರ ಕಾರಣಗಳಿಂದ ಸಂಗಾತಿಗಳ ನಡುವೆ ಪರಸ್ಪರ ಬೇಸರ ಉಂಟಾಗಬಹುದು. ಅದರಿಂದ ನಿಮಗೆ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ಯಾವುದೇ ಮೂರನೇ ವ್ಯಕ್ತಿಗೆ ಹಸ್ತಕ್ಷೇಪ ಮಾಡಲು ಅವಕಾಶ ನೀಡ ಬೇಡಿ. ನಿಮ್ಮ ನಂಬಿಕೆಯನ್ನು ಬಲಪಡಿಸಲು ಪ್ರಯತ್ನಿಸಿ. ಕೆಲಸದ ಮುಂಭಾಗದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಕಠಿಣ ಪರಿಶ್ರಮದ ಬಗ್ಗೆ ನಿಮ್ಮ ಮುಖ್ಯಸ್ಥರಿಂದ ಮೆಚ್ಚುಗೆ ದೊರೆಯುವುದು. ಅದು ನಿಮಗೆ ಹೆಚ್ಚಿನ ಸಂತೋಷ ನೀಡುತ್ತದೆ. ನೀವು ಹೊಸ ಮತ್ತು ಪ್ರಮುಖ ಜವಾಬ್ದಾರಿಯನ್ನು ನಿಯೋಜಿಸಬಹುದು. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅವಸರ ಬೇಡ. ಇಲ್ಲದಿದ್ದರೆ ನಷ್ಟಗಳು ಸಂಭವಿಸಬಹುದು. ಪೋಷಕರಿಂದ ಪೂರ್ಣ ಬೆಂಬಲ ಪಡೆದರೆ ನೀವು ಸಂತೋಷವಾಗಿರುತ್ತೀರಿ. ಪ್ರಣಯದ ದೃಷ್ಟಿಕೋನದಿಂದ ಇಂದು ಬಹಳ ಒಳ್ಳೆಯ ದಿನ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಆಯ್ಕೆಯ ಸ್ಥಳಕ್ಕೆ ನೀವು ಭೇಟಿ ನೀಡಬಹುದು.

ಅದೃಷ್ಟ ಬಣ್ಣ: ಕಂದು

ಅದೃಷ್ಟ ಸಂಖ್ಯೆ: 37

ಅದೃಷ್ಟ ಸಮಯ: ಸಂಜೆ 4:30 - ರಾತ್ರಿ 11:00

ಮೀನ: 19 ಫೆಬ್ರವರಿ - 20 ಮಾರ್ಚ್

ಮೀನ: 19 ಫೆಬ್ರವರಿ - 20 ಮಾರ್ಚ್

ಮೀನ ರಾಶಿಯವರಿಗೆ ಇಂದು ಬಹಳ ಮೋಜಿನ ದಿನ. ಅವರು ಪ್ರಯಾಣದಲ್ಲಿ ನಿರತರಾಗಿರುತ್ತಾರೆ. ಪಾರ್ಟಿ ಮಾಡುತ್ತಾರೆ ಮತ್ತು ಸ್ನೇಹಿತರೊಂದಿಗೆ ಮೋಜು ಮಾಡುತ್ತಾರೆ. ಹಣದ ದೃಷ್ಟಿಯಿಂದ ಒಳ್ಳೆಯ ದಿನ. ನಿಮ್ಮ ಆದಾಯ ಹೆಚ್ಚಾಗಬಹುದು. ಆದರೆ ನೀವು ಹಣವನ್ನು ಎರವಲು ಪಡೆಯುವುದನ್ನು ತಪ್ಪಿಸಬೇಕು. ಸಂಗಾತಿಯ ಸಹಾಯದಿಂದ ಒಂದು ಪ್ರಮುಖ ಕಾರ್ಯವನ್ನು ಪೂರ್ಣಗೊಳಿಸುವಿರಿ. ನಿಮ್ಮ ಸಂತೋಷವು ದ್ವಿಗುಣಗೊಳ್ಳುತ್ತದೆ. ಇಂದು ನೀವು ದಿನವಿಡೀ ಒಳ್ಳೆಯದನ್ನು ಅನುಭವಿಸುವಿರಿ. ಆರೋಗ್ಯದಲ್ಲಿ ಸುಧಾರಣೆ ಇರುತ್ತದೆ. ಒಟ್ಟಾರೆಯಾಗಿ ದಿನವು ನಿಮಗೆ ತುಂಬಾ ಪ್ರಯೋಜನಕಾರಿಯಾಗಲಿದೆ.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 22

ಅದೃಷ್ಟ ಸಮಯ: ಮಧ್ಯಾಹ್ನ 1:30 - ರಾತ್ರಿ 9:15

English summary

Daily Horoscope 27 Oct 2019 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Sunday, October 27, 2019, 4:00 [IST]
X