For Quick Alerts
ALLOW NOTIFICATIONS  
For Daily Alerts

ಬುಧವಾರದ ದಿನ ಭವಿಷ್ಯ (23-10-2019)

|

ಬುಧವಾರದ ದಿನ ಸೃಷ್ಟಿ ರಕ್ಷಕ ವಿಷ್ಣುವಿನ ದಿನ. ಮಹಾವಿಷ್ಣು ಯಾವಾಗ ಧರ್ಮ ನಾಶವಾಗುತ್ತದೆಯೋ, ಅಧರ್ಮ ಮಿತಿ ವೀರುತ್ತದೆಯೋ ಆಗ ವಿಷ್ಣು ನಾನಾ ಅವತಾರ ಎತ್ತುತ್ತಾನೆ.ಶಿಷ್ಟ ರಕ್ಷಣೆಗಾಗಿ ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮ ಸ್ಥಾಪನೆಗಾಗಿ ಪ್ರತಿಯುಗದಲ್ಲೂ ಅವತರಿಸುತ್ತಾನೆ. ಇದು ಭಗವದ್ಗೀತೆಯಲ್ಲಿ ಸಾಕ್ಷಾತ್ ಶ್ರೀ ಕೃಷ್ಣನೇ ಹೇಳಿರುವ ಮಾತು. ಈ ಮಾತಿನಂತೆ ಶ್ರೀ ಮಹಾವಿಷ್ಣು ದುಷ್ಟ ಶಕ್ತಿಯ ನಾಶಕ್ಕಾಗಿ ಧರ್ಮರಕ್ಷಣೆಗಾಗಿ ಕಾಲಕಾಲಕ್ಕೆ ಭೂಮಿಯ ಮೇಲೆ ಹತ್ತು ಅವತಾರಗಳನ್ನು ತಳೆದಿದ್ದಾನೆ.ಇದೇ ವಿಷ್ಣುವಿನ ದಶಾವತಾರ.

ವಿಷ್ಣುವಿನ ದಶವತಾರಗಳು, ಮತ್ಸ್ಯಾವತಾರ,ಕೂರ್ಮಾವತಾರ,ವರಹಾವತಾರ, ನರಸಿಂಹವತಾರ, ಪರಶುರಾಮನವತಾರ, ರಾಮಾವತಾರ ,ಕೃಷ್ಣಾವತಾರ, ಬುದ್ದಾವತಾರ ಮತ್ತು ಕಲ್ಕಿವತಾರ. ವಿಷ್ಣು ತ್ರಿಮೂರ್ತಿಗಳಲ್ಲಿ ಒಬ್ಬನಾಗಿದ್ದು,ಸಕಲ ಲೋಕಗಳ ಪಾಲಕ ಎಂದು ಭಗವದ್ಗೀತೆಯಲ್ಲಿ ವರ್ಣಿಸಿದಂತೆ 'ವಿಶ್ವರೂಪಿ'.ನಾರಾಯಣ ಎಂದೂ ಕರೆಯುತ್ತಾರೆ. ಧರ್ಮಸಂಸ್ಥಾಪನೆಗಾಗಿ ದಶಾವತಾರ ತಾಳಿ ಭೂಲೋಕವನ್ನು ರಕ್ಷಿಸಿದಾತ ಎಂದು ಪುರಾಣಗಳು ಕೊಂಡಾಡುತ್ತವೆ. ವಿಷ್ಣುವನ್ನು ಲಕ್ಮಿನಾರಾಯಣ, ಹರಿ, ಜನಾರ್ದನ, ಮಾಧವ, ಕೇಶವ, ಅಚ್ಚ್ಯುತ, ಶ್ರೀನಿವಾಸ ಎಂದೂ ಕರೆಯುತ್ತಾರೆ. ಕೀರ್ತಿನಾರಾಯಣನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.

ಮೇಷ: 21 ಮಾರ್ಚ್ - 19 ಏಪ್ರಿಲ್

ಮೇಷ: 21 ಮಾರ್ಚ್ - 19 ಏಪ್ರಿಲ್

ಇಂದು ನಿಮ್ಮ ವೈವಾಹಿಕ ಜೀವನವು ಅತ್ಯುತ್ತಮವಾಗಿರುತ್ತದೆ. ಸಂಗಾತಿಯು ನಿಮ್ಮನ್ನು ವಿಶ್ವದ ಪ್ರಮುಖ ವ್ಯಕ್ತಿ ಎಂದು ಭಾವಿಸುವಂತೆ ಮಾಡುತ್ತದೆ. ನಿಮ್ಮ ದಿನವನ್ನು ಹೆಚ್ಚು ವಿಶೇಷವಾಗಿಸಲು ಮುಂಬತ್ತಿ ಬೆಳಕಿನ ಊಟವನ್ನು ಮಾಡುವ ಸಾಧ್ಯತೆಗಳಿವೆ. ಕೆಲಸದ ಸ್ಥಳದಲ್ಲಿ ನೀವು ಜಾಗರೂಕರಾಗಿರಬೇಕು. ಅತಿಯಾದ ಕೋಪವನ್ನು ತೋರಿಸದಿರಿ. ಕೋಪ ನಿಯಂತ್ರಣದಲ್ಲಿ ಇಲ್ಲದೆ ಹೋದರೆ ತೊಂದರೆ ಎದುರಾಗಬಹುದು. ಈ ಹಿಂದೆ ನಿಮ್ಮ ಕೈ ಸೇರಬೇಕಾದ ಹಣವು ಇಂದು ನಿಮಗೆ ಸಿಗುವುದು. ಹಣದ ಹೂಡಿಕೆಗೆ ದಿನ ಉತ್ತಮವಾಗಿದೆ. ಆದರೆ ಜಾಗರೂಕರಾಗಿರಿ. ಹೂಡಿಕೆ ಮಾಡುವ ಮೊದಲು ಸಲಹೆ ತೆಗೆದುಕೊಳ್ಳಿ. ಆರೋಗ್ಯದ ಬಗ್ಗೆ ಅಸಡ್ಡೆ ಮಾಡಬೇಡಿ.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 12

ಅದೃಷ್ಟ ಸಮಯ: ಮಧ್ಯಾಹ್ನ 12:45 - ಸಂಜೆ 6:00

ವೃಷಭ: 20 ಏಪ್ರಿಲ್ - 20 ಮೇ

ವೃಷಭ: 20 ಏಪ್ರಿಲ್ - 20 ಮೇ

ವಿವಾಹಿತರಿಗೆ ಇಂದು ಉತ್ತಮವಾದ ದಿನ. ನಿಮ್ಮ ಸಂಗಾತಿಯಗಳ ನಡುವಿನ ಪರಸ್ಪರ ಹೊಂದಾಣಿಕೆ ತುಂಬಾ ಚೆನ್ನಾಗಿರುತ್ತದೆ. ಕೆಲಸದ ವಿಷಯದಲ್ಲಿ ನೀವು ಉತ್ತಮ ಅವಕಾಶಗಳನ್ನು ಪಡೆಯಬಹುದು. ಸಂಭಾಷಣೆಯಲ್ಲಿನ ದಕ್ಷತೆಯು ಇಂದು ನಿಮ್ಮ ಬಲವಾದ ಭಾಗವೆಂದು ಸಾಬೀತುಪಡಿಸುತ್ತದೆ. ಮಕ್ಕಳಿಂದ ಕೆಲವು ತೊಂದರೆ ಉಂಟಾಗಬಹುದು. ಮಕ್ಕಳ ವಿದ್ಯಾಭ್ಯಾಸ ಹಾಗೂ ಏಕಾಗ್ರತೆಯ ಕುರಿತು ನಿಮಗೆ ಹೆಚ್ಚಿನ ಗೊಂದಲ ಉಂಟಾಗಬಹುದು. ನೀವು ಅವರೊಂದಿಗೆ ಕಠಿಣ ಮನೋಭಾವವನ್ನು ಅಳವಡಿಸಿಕೊಳ್ಳದಿರುವುದು ಉತ್ತಮ. ಹಣಕಾಸಿನ ವಿಷಯಗಳು ಉತ್ತಮವಾಗಿ ಉಳಿಯುತ್ತವೆ. ಖರ್ಚು ಮಾಡುವ ಮೊದಲು ಬುದ್ಧಿವಂತಿಕೆಯಿಂದ ಖರ್ಚು ಮಾಡಿ.

ಅದೃಷ್ಟ ಬಣ್ಣ: ನೀಲಿ

ಅದೃಷ್ಟ ಸಂಖ್ಯೆ: 15

ಅದೃಷ್ಟ ಸಮಯ: ಸಂಜೆ 4:00 - ರಾತ್ರಿ 9:20

ಮಿಥುನ: 21 ಮೇ - 20 ಜೂನ್

ಮಿಥುನ: 21 ಮೇ - 20 ಜೂನ್

ನ್ಯಾಯಾಲಯದಲ್ಲಿ ಯಶಸ್ಸು ಹೊಂದಲು ಉತ್ತಮವಾದ ದಿನ. ವಕೀಲರ ಬಳಿ ಸಲಹೆ ಪಡೆಯಲು ಒಳ್ಳೆಯ ದಿನ. ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಮೆಚ್ಚುಗೆ ಪಡೆಯುವಿರಿ. ಅದು ನಿಮಗೆ ಸಂತೋಷ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಉದ್ಯೋಗಿಗಳು ಉತ್ತೇಜನ ಹಾಗೂ ಆರ್ಥಿಕವಾಗಿ ಲಾಭವನ್ನು ಪಡೆದುಕೊಳ್ಳುವರು. ಸಂಗಾತಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ಇದರಿಂದ ನಿಮ್ಮ ಸಂಬಂಧವು ಬಲಗೊಳ್ಳುತ್ತದೆ. ಆರ್ಥಿಕ ದೃಷ್ಟಿಯಿಂದ, ಇಂದು ನೀವು ಹಣ ಸಂಪಾದಿಸಲು ಮತ್ತು ಯಶಸ್ಸನ್ನು ಪಡೆಯಲು ತುಂಬಾ ಶ್ರಮಿಸುತ್ತೀರಿ. ನಿಮ್ಮ ಸಂಗಾತಿಯೊಂದಿಗಿನ ಎಲ್ಲಾ ತಪ್ಪುಗ್ರಹಿಕೆಯನ್ನು ತೆರವುಗೊಳಿಸಲು ಇಂದು ಅತ್ಯುತ್ತಮ ದಿನ. ಸಾಧ್ಯವಾದರೆ ನಿಮ್ಮ ಭಾವನೆಗಳ ಬಗ್ಗೆ ಅವರಿಗೆ ಅರಿವು ಮೂಡಿಸಿ. ಇದರಿಂದ ಸಂಗಾತಿಗೆ ನಿಮ್ಮ ಜೀವನದಲ್ಲಿ ಅವರು ಎಷ್ಟು ಪ್ರಮುಖವಾದ ವ್ಯಕ್ತಿ ಎನ್ನುವುದು ಅರಿವಾಗುತ್ತದೆ.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 30

ಅದೃಷ್ಟ ಸಮಯ: ಬೆಳಿಗ್ಗೆ 11:45 - ಸಂಜೆ 6:30

ಕರ್ಕ: 21 ಜೂನ್ - 22 ಜುಲೈ

ಕರ್ಕ: 21 ಜೂನ್ - 22 ಜುಲೈ

ಅದೃಷ್ಟ ಇಂದು ನಿಮ್ಮ ಕಡೆ ಇರುತ್ತದೆ. ನೀವು ತುಂಬಾ ಸಂತೋಷವಾಗಿರುತ್ತೀರಿ. ಆರ್ಥಿಕವಾಗಿ ದಿನವು ನಿಮಗೆ ಲಾಭದಾಯಕವಾಗಿದೆ. ನಿಮ್ಮ ಹಣಕಾಸಿನ ನಿರ್ಧಾರಗಳನ್ನು ನೀವು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ನೀವು ಇಂದು ಉತ್ತಮ ಲಾಭವನ್ನು ಗಳಿಸಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕಾಗಿ ಪ್ರಶಂಸಿಸಲಾಗುತ್ತದೆ. ಕೆಲವು ದಿನಗಳಿಂದ ನಿಮ್ಮ ವೈಯಕ್ತಿಕ ಜೀವನವು ನಿಮ್ಮ ಗಮನದ ಕೇಂದ್ರವಾಗಿದೆ. ಆದರೆ ಇಂದು ನೀವು ಸಾಮಾಜಿಕ ಕಾರ್ಯಗಳಿಗೆ ಹೆಚ್ಚಿನ ಗಮನ ನೀಡುತ್ತೀರಿ. ಬಡ್ತಿ ಮತ್ತು ಆರ್ಥಿಕ ಬೆಳವಣಿಗೆಯ ಸಾಧ್ಯತೆಗಳು ತುಂಬಾ ಪ್ರಬಲವಾಗಿರುವುದರಿಂದ ಉದ್ಯೋಗಿಗಳಿಗೆ ದಿನವು ಒಳ್ಳೆಯದು. ವೈವಾಹಿಕ ಜೀವನವು ಉತ್ತಮವಾಗಿ ಉಳಿಯುತ್ತದೆ. ಸಂಗಾತಿಯ ಪ್ರೀತಿ ಮತ್ತು ಒಡನಾಟ ಎರಡನ್ನೂ ನೀವು ಪಡೆಯುತ್ತೀರಿ. ಆರೋಗ್ಯವು ಸಂಪೂರ್ಣವಾಗಿ ಉತ್ತಮವಾಗಿರುತ್ತದೆ. ನೀವು ಮೊದಲಿಗಿಂತ ಹೆಚ್ಚು ಶಕ್ತಿಯುತವಾಗಿರುತ್ತೀರಿ.

ಅದೃಷ್ಟ ಬಣ್ಣ: ಕಂದು

ಅದೃಷ್ಟ ಸಂಖ್ಯೆ: 7

ಅದೃಷ್ಟ ಸಮಯ: ಬೆಳಿಗ್ಗೆ 6:15 - ಬೆಳಿಗ್ಗೆ 11:30

ಸಿಂಹ: 23 ಜುಲೈ - 22 ಆಗಸ್ಟ್

ಸಿಂಹ: 23 ಜುಲೈ - 22 ಆಗಸ್ಟ್

ಪ್ರಣಯ ಜೀವನದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿರುತ್ತದೆ. ನಿಮ್ಮ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳಿ. ಏಕೆಂದರೆ ಸಣ್ಣ ಮಾತುಕತೆಗಳ ಜಗಳ ದೊಡ್ಡ ರೂಪವನ್ನು ಪಡೆಯಬಹುದು. ನಿಮ್ಮ ಸಂಬಂಧದಲ್ಲಿ ಬಿರುಕು ಉಂಟುಮಾಡಬಹುದು. ಇಂದು ನೀವು ಹಣದ ವಿಷಯದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ದಿನ ಮುಂದುವರಿದಂತೆ ಹಣಕಾಸು ಸುಧಾರಿಸುತ್ತದೆ. ನೀವು ಕೆಲವು ಪ್ರಮುಖ ವಸ್ತುಗಳನ್ನು ಸಹ ಖರೀದಿಸಬಹುದು. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮೋಜು ಮಾಡಲು ಉತ್ತಮ ದಿನ. ನೀವು ಇಂದು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢ ರಾಗಿರುವುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ. ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ. ಇಂದು ನಿಮ್ಮ ಯೋಜನೆಗಳು ಕೊನೆಯ ಕ್ಷಣದಲ್ಲಿ ಬದಲಾಗಬಹುದು.

ಅದೃಷ್ಟ ಬಣ್ಣ: ಕಿತ್ತಳೆ

ಅದೃಷ್ಟ ಸಂಖ್ಯೆ: 3

ಅದೃಷ್ಟ ಸಮಯ: ಮಧ್ಯಾಹ್ನ 2:40 - ಸಂಜೆ 4:00

ಕನ್ಯಾ: 23 ಆಗಸ್ಟ್ - 22 ಸೆಪ್ಟೆಂಬರ್

ಕನ್ಯಾ: 23 ಆಗಸ್ಟ್ - 22 ಸೆಪ್ಟೆಂಬರ್

ವೃತ್ತಿಗೆ ಸಂಬಂಧಿಸಿದಂತೆ ಇಂದು ಉತ್ತಮವಾದ ದಿನ. ವ್ಯವಹಾರಕ್ಕೆ ಸಂಬಂಧಿಸಿದ ಪ್ರಯಾಣವು ಲಾಭದಾಯಕವಾಗಿರುತ್ತದೆ. ಇಂದು ಮಾಡಿದ ಹೂಡಿಕೆಯು ನಿಮಗೆ ಅಪೇಕ್ಷಿತ ಫಲಿತಾಂಶಗಳನ್ನು ನೀಡುತ್ತದೆ. ಉದ್ಯೋಗಿಗಳಿಗೂ ಒಳ್ಳೆಯ ದಿನ. ಇಂದು ನೀವು ಸಾಕಷ್ಟು ಶಾಪಿಂಗ್ ಮಾಡುತ್ತೀರಿ. ಹೊಸ ಬಟ್ಟೆ ಮತ್ತು ಆಭರಣಗಳ ಸ್ವೀಕೃತಿಯಿಂದಲೂ ಸಂತೋಷವಾಗುತ್ತದೆ. ವೈವಾಹಿಕ ಜೀವನದಲ್ಲಿ ನಿಮ್ಮ ಸಂಗಾತಿಯನ್ನು ಅಸಮಾಧಾನಗೊಳಿಸಬಹುದು. ಕೋಪವನ್ನು ನೀವು ನಿಯಂತ್ರಿಸಬೇಕು. ಪ್ರೀತಿಯ ವಿಷಯಗಳಲ್ಲಿ ನಿಮ್ಮ ಸಂಗಾತಿಯ ಬಗ್ಗೆ ಕೇಳಿದ ವಿಷಯಗಳನ್ನು ಕುರುಡಾಗಿ ನಂಬಬೇಡಿ. ಸತ್ಯವನ್ನು ಸರಿಯಾಗಿ ಪರೀಕ್ಷಿಸಿ. ಇಂದು ನೀವು ಯಾವುದೇ ಸಾಮಾಜಿಕ ಅಥವಾ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಳ್ಳಬಹುದು.

ಅದೃಷ್ಟ ಬಣ್ಣ: ಗುಲಾಬಿ

ಅದೃಷ್ಟ ಸಂಖ್ಯೆ: 2

ಅದೃಷ್ಟ ಸಮಯ: ಮಧ್ಯಾಹ್ನ 1:30 - ರಾತ್ರಿ 8:00

ತುಲಾ: 23 ಸೆಪ್ಟೆಂಬರ್ - 22 ಅಕ್ಟೋಬರ್

ತುಲಾ: 23 ಸೆಪ್ಟೆಂಬರ್ - 22 ಅಕ್ಟೋಬರ್

ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನಿಮ್ಮ ಸಂಗಾತಿಯ ಪ್ರೀತಿ ಮತ್ತು ಕಾಳಜಿ ನಿಮಗೆ ಸಂತೋಷವನ್ನು ನೀಡುತ್ತದೆ. ಇಂದು ನೀವು ನಿಮ್ಮ ಕುಟುಂಬ ಸದಸ್ಯರು ಮತ್ತು ಮಕ್ಕಳೊಂದಿಗೆ ಶಾಂತ ದಿನವನ್ನು ಆನಂದಿಸುವಿರಿ. ಕೆಲಸದ ಸ್ಥಳದಲ್ಲಿ ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಬಗ್ಗೆ ಮಾತನಾಡುವವರ ಬಾಯಿ ಮುಚ್ಚಿಸುವಿರಿ. ನೀವು ನಿರುದ್ಯೋಗಿಗಳಾಗಿದ್ದರೆ ಮತ್ತು ದೀರ್ಘಕಾಲದವರೆಗೆ ಉದ್ಯೋಗವನ್ನು ಹುಡುಕುತ್ತಿದ್ದರೆ ಇಂದು ನಿಮಗೆ ಉತ್ತಮ ಉದ್ಯೋಗ ಸಿಗುತ್ತದೆ. ಆರೋಗ್ಯವನ್ನು ನಿರ್ಲಕ್ಷಿಸಬೇಡಿ. ಇಲ್ಲದಿದ್ದರೆ ಸಣ್ಣ ಕಾಯಿಲೆ ಭವಿಷ್ಯದಲ್ಲಿ ಭಯಾನಕ ರೂಪವನ್ನು ಪಡೆಯಬಹುದು. ಎಣ್ಣೆಯುಕ್ತ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ.

ಅದೃಷ್ಟ ಬಣ್ಣ: ನೀಲಿ

ಅದೃಷ್ಟ ಸಂಖ್ಯೆ: 16

ಅದೃಷ್ಟ ಸಮಯ: ಮಧ್ಯಾಹ್ನ 1:30 - ಮಧ್ಯಾಹ್ನ 3:30

ವೃಶ್ಚಿಕ: 23 ಅಕ್ಟೋಬರ್ - 21 ನವೆಂಬರ್

ವೃಶ್ಚಿಕ: 23 ಅಕ್ಟೋಬರ್ - 21 ನವೆಂಬರ್

ಇಂದು ನೀವು ಮಿಶ್ರ ಫಲವನ್ನು ಅನುಭವಿಸುವಿರಿ. ನೀವು ಉದ್ಯಮಿಯಾಗಿದ್ದರೆ ಹಠಾತ್ ಲಾಭವನ್ನು ಪಡೆಯಬಹುದು. ನೀವು ನಿಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಹೊಂದುವ ಸಾಧ್ಯತೆಯಿದೆ. ಕುಟುಂಬ ಸದಸ್ಯರೊಂದಿಗಿನ ವ್ಯತ್ಯಾಸಗಳು ನಿಮ್ಮ ಭಾವನೆಗಳನ್ನು ಘಾಸಿಗೊಳಿಸಬಹುದು. ನೀವು ಕಚೇರಿಯಲ್ಲಿ ತುಂಬಾ ಶ್ರಮವಹಿಸಬೇಕಾಗಬಹುದು. ಆದರೆ ನಿಮ್ಮ ಉನ್ನತ ಅಧಿಕಾರಿಗಳ ಪ್ರಶಂಸೆ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಸೃಜನಾತ್ಮಕ ಹವ್ಯಾಸಗಳು ನಿಮಗೆ ಆರಾಮವನ್ನು ನೀಡುತ್ತದೆ. ವೈವಾಹಿಕ ಜೀವನದಲ್ಲಿ ಕೆಲವು ಒತ್ತಡ ಉಂಟಾಗಬಹುದು. ಹಳೆಯ ಕಾನೂನು ವಿಷಯದಲ್ಲಿ ಅಡಚಣೆ ಉಂಟಾಗುವುದು. ಆರೋಗ್ಯ ಉತ್ತಮವಾಗಿರಲು ಬಯಸುವುದಾದರೆ ಮದ್ಯ ಸೇವಿಸಬೇಡಿ.

ಅದೃಷ್ಟ ಬಣ್ಣ: ಹಚ್ಚ ಹಸಿರು

ಅದೃಷ್ಟ ಸಂಖ್ಯೆ: 24

ಅದೃಷ್ಟ ಸಮಯ: ಬೆಳಿಗ್ಗೆ 9:00 - ರಾತ್ರಿ 8:20

ಧನು ರಾಶಿ: 22 ನವೆಂಬರ್ - 21 ಡಿಸೆಂಬರ್

ಧನು ರಾಶಿ: 22 ನವೆಂಬರ್ - 21 ಡಿಸೆಂಬರ್

ನಿಮ್ಮ ಸೋಮಾರಿತನವನ್ನು ನೀವು ತ್ಯಜಿಸಬೇಕು. ಪ್ರಮುಖ ಕೆಲಸದತ್ತ ಗಮನ ಹರಿಸಬೇಕು. ಇಲ್ಲದಿದ್ದರೆ ನೀವು ತೊಂದರೆಯಲ್ಲಿ ಸಿಲುಕಬಹುದು. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಅಡೆತಡೆಗಳನ್ನು ಎದುರಿಸಬಹುದು. ಗುರುಗಳು ಬಹಳ ಬೆಂಬಲ ನೀಡುತ್ತಾರೆ. ನೀವು ಮನೆಯಲ್ಲಿ ಕುಟುಂಬ / ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸುವಿರಿ. ಇದರಿಂದ ದಿನ ಪೂರ್ತಿ ಅಧಿಕ ಕೆಲಸದೊತ್ತಡವನ್ನು ಅನುಭವಿಸಬೇಕಾಗುವುದು. ಹೆಚ್ಚು ಕೆಲಸದ ಹೊರೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇಲ್ಲದಿದ್ದರೆ ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸಿಗೆ ಬರಲು ಬಿಡಬೇಡಿ. ಅದು ನಿಮ್ಮ ಕೆಲಸವನ್ನು ಹಾಳುಮಾಡುತ್ತದೆ. ಕುಟುಂಬದಲ್ಲಿ ಕೆಲವು ಸಮಸ್ಯೆ ಉಂಟಾಗಬಹುದು. ನಿಮ್ಮ ಸಂಗಾತಿಯು ನಿಮಗೆ ವಿಶೇಷ ಭಾವನೆ ಮೂಡಿಸುವರು.

ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 8

ಅದೃಷ್ಟ ಸಮಯ: ಮಧ್ಯಾಹ್ನ 12:00 - ಸಂಜೆ 7:00

ಮಕರ: 22 ಡಿಸೆಂಬರ್ - 19 ಜನವರಿ

ಮಕರ: 22 ಡಿಸೆಂಬರ್ - 19 ಜನವರಿ

ನೀವು ಇಂದು ಉತ್ಸಾಹವನ್ನು ಅನುಭವಿಸುವಿರಿ. ನಿಮ್ಮ ಎಲ್ಲಾ ಯೋಜನೆಗಳು ಯಶಸ್ವಿಯಾಗುತ್ತವೆ. ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುವಿರಿ. ಹೆಚ್ಚುವರಿ ಆದಾಯಕ್ಕಾಗಿ ನಿಮ್ಮ ಸೃಜನಶೀಲ ವಿಚಾರಗಳನ್ನು ಬಳಸಿ. ಉದ್ಯೋಗವನ್ನು ಹುಡುಕುತ್ತಿರುವವರು ಇಂದು ಸುಲಭವಾಗಿ ಕೆಲಸವನ್ನು ಪಡೆದುಕೊಳ್ಳಬಹುದು. ನಿಮ್ಮ ಗುಪ್ತ ವೈಶಿಷ್ಟ್ಯವನ್ನು ಬಳಸಿಕೊಂಡು ನೀವು ದೊಡ್ಡ ಲಾಭವನ್ನು ಗಳಿಸಬಹುದು. ವೈವಾಹಿಕ ಜೀವನವು ಸಂತೋಷವಾಗಿ ಉಳಿಯುತ್ತದೆ. ನಿಮ್ಮಿಬ್ಬರ ನಡುವಿನ ಪ್ರೀತಿ ಹೆಚ್ಚಾಗುತ್ತದೆ. ನಿಮ್ಮ ಸಂಗಾತಿಯು ಬೆಂಬಲಿಸುವರು. ಇಂದು ನೀವು ಕೆಲವು ಪ್ರಸಿದ್ಧ ಮತ್ತು ಪ್ರಭಾವಶಾಲಿ ಜನರನ್ನು ಭೇಟಿ ಮಾಡಬಹುದು. ಈ ಸಭೆ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ನಿಮ್ಮ ಜೀವನದಲ್ಲಿ ಕೆಲವು ನಿಯಮಗಳನ್ನು ಬಹಳ ಪ್ರಾಮಾಣಿಕತೆ ಮತ್ತು ಹೃದಯದಿಂದ ಅನುಸರಿಸಿ. ಏಕೆಂದರೆ ಇವು ಜನರ ಹೃದಯವನ್ನು ಗೆಲ್ಲಲು ಮತ್ತು ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 9

ಅದೃಷ್ಟ ಸಮಯ: ಮಧ್ಯಾಹ್ನ 2:00 - ಸಂಜೆ 7:00

ಕುಂಭ: 20 ಜನವರಿ - 18 ಫೆಬ್ರವರಿ

ಕುಂಭ: 20 ಜನವರಿ - 18 ಫೆಬ್ರವರಿ

ಇಂದು ನಿಮಗೆ ಸಾಮಾನ್ಯವಾದ ದಿನ. ಎಲ್ಲಾ ಕೆಲಸ ಕಾರ್ಯಗಳಲ್ಲೂ ಹಿನ್ನೆಡೆಯನ್ನು ಅನುಭವಿಸಬಹುದು. ಆರ್ಥಿಕ ದೃಷ್ಟಿಯಿಂದಲೂ ನಿಮ್ಮ ಖರ್ಚು ಹೆಚ್ಚಾಗಬಹುದು. ಹಠಾತ್ ಹಣ ನಷ್ಟವಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಎಲ್ಲಾ ಹಣಕಾಸಿನ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ಕೈಗೊಳ್ಳಿ. ನಿಮ್ಮ ಎಲ್ಲಾ ಪ್ರಮುಖ ಕಾರ್ಯಗಳನ್ನು ಇಂದು ಪೂರ್ಣಗೊಳಿಸಿ. ಸ್ನೇಹಿತರು ಮತ್ತು ಕುಟುಂಬದವರ ಬೆಂಬಲದೊಂದಿಗೆ ನೀವು ಸಂಪೂರ್ಣ ವಿಶ್ವಾಸ ಹೊಂದುವಿರಿ. ನಿಮ್ಮ ಸಂಗಾತಿಯ ಹೃದಯದಿಂದ ಬರುವ ಪದಗಳು ನಿಮ್ಮ ದಿನವನ್ನು ಸಂತೋಷವಾಗಿರಿಸುತ್ತದೆ. ಸಂಗಾತಿಯೊಂದಿಗೆ ಈ ಹಿಂದೆ ಜಗಳವಾಡಿದ್ದರೂ ಇಂದು ಪರಿಸ್ಥಿತಿಗಳು ಉತ್ತಮ ರೀತಿಯಲ್ಲಿ ಬದಲಾವಣೆಯನ್ನು ಕಂಡುಕೊಳ್ಳುತ್ತವೆ. ಆರೋಗ್ಯವಾಗಿರಲು ಪ್ರತಿದಿನ ಸ್ವಲ್ಪ ವ್ಯಾಯಾಮ ಅಗತ್ಯ. ನಿಮ್ಮ ಆರೋಗ್ಯದತ್ತ ಗಮನ ಹರಿಸಿ ಏಕೆಂದರೆ ದುರ್ಬಲ ದೇಹವು ಮನಸ್ಸನ್ನು ದುರ್ಬಲಗೊಳಿಸುತ್ತದೆ.

ಅದೃಷ್ಟ ಬಣ್ಣ: ಮರೂನ್

ಅದೃಷ್ಟ ಸಂಖ್ಯೆ: 6

ಅದೃಷ್ಟ ಸಮಯ: ಬೆಳಿಗ್ಗೆ 8:00 - ಮಧ್ಯಾಹ್ನ 2:15

ಮೀನ: 19 ಫೆಬ್ರವರಿ - 20 ಮಾರ್ಚ್

ಮೀನ: 19 ಫೆಬ್ರವರಿ - 20 ಮಾರ್ಚ್

ವ್ಯವಹಾರದ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಕಾರ್ಯನಿರತರಾಗಿರುತ್ತೀರಿ. ಹೊಸ ಆರ್ಥಿಕ ಯೋಜನೆಯನ್ನು ಇಂದು ಅಂತಿಮಗೊಳಿಸಬಹುದು. ನಿಮ್ಮ ಶತ್ರುಗಳು ನಿಮಗೆ ಹಾನಿ ಮಾಡಲು ಪ್ರಯತ್ನಿಸುವುದರಿಂದ ನೀವು ಅವರೊಂದಿಗೆ ಜಾಗರೂಕರಾಗಿರಬೇಕು. ಆರೋಗ್ಯವು ಉತ್ತಮವಾಗಿರುವುದಿಲ್ಲ. ನೀವು ಮಾನಸಿಕವಾಗಿ ಅಸ್ಥಿರತೆಯನ್ನು ಅನುಭವಿಸುವಿರಿ. ಆರ್ಥಿಕ ದೃಷ್ಟಿಯಿಂದ ಇಂದು ನಿಮಗೆ ಉತ್ತಮ ದಿನ. ಇದ್ದಕ್ಕಿದ್ದಂತೆ ನಿಮ್ಮ ಹಣಕಾಸಿನ ಭಾಗವು ದೊಡ್ಡ ಆರ್ಥಿಕ ಲಾಭದಿಂದ ಬಲಗೊಳ್ಳುತ್ತದೆ. ಈ ಸಮಯದಲ್ಲಿ ಜಾಗರೂಕರಾಗಿರಿ ಮತ್ತು ವ್ಯರ್ಥ ವೆಚ್ಚವನ್ನು ತಪ್ಪಿಸಿ. ನಿಮ್ಮ ಭವಿಷ್ಯಕ್ಕಾಗಿ ಹಣವನ್ನು ಸೇರಿಸಲು ಪ್ರಯತ್ನಿಸಿ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಕುಟುಂಬದೊಂದಿಗೆ ಪ್ರೀತಿ ಮತ್ತು ವಿಶ್ವಾಸ ಹೆಚ್ಚಾಗುತ್ತದೆ.

ಅದೃಷ್ಟ ಬಣ್ಣ: ಗುಲಾಬಿ

ಅದೃಷ್ಟ ಸಂಖ್ಯೆ: 32

ಅದೃಷ್ಟ ಸಮಯ: ಮಧ್ಯಾಹ್ನ 3:30 - ರಾತ್ರಿ 8:00

English summary

Daily Horoscope 23 Oct 2019 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
X