For Quick Alerts
ALLOW NOTIFICATIONS  
For Daily Alerts

ಭಾನುವಾರದ ದಿನ ಭವಿಷ್ಯ (20-10-2019)

|

ಭಾನುವಾರ ಎಂದರೆ ಸಾಮಾನ್ಯವಾಗಿ ಎಲ್ಲರೂ ಆನಂದದಿಂದ ಇರಲು ಇಷ್ಟ ಪಡುತ್ತಾರೆ. ಎಲ್ಲಾ ಒತ್ತಡಗಳನ್ನು ಬದಿಗಿಟ್ಟು ದಿನವಿಡೀ ವಿಶ್ರಾಂತಿಗೆ ಒಳಗಾಗಲು ಬಯಸುತ್ತಾರೆ. ಇನ್ನೂ ಕೆಲವರು ಶಾಪಿಂಗ್ ಮಾಡುವುದು ಅಥವಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದರ ಮೂಲಕ ಖುಷಿಪಡುತ್ತಾರೆ.ಒಟ್ಟಿನಲ್ಲಿ ಎಲ್ಲಾ ಕಾರ್ಯದ ಉದ್ದೇಶವು ಖುಷಿಯಾಗಿ ಇರಬೇಕೆನ್ನುವುದೇ ಆಗಿರುತ್ತದೆ.

ವಿಶ್ರಾಂತಿಗೆ ಮೀಸಲಾದ ಈ ಭಾನುವಾರ ನಿಮ್ಮ ಭವಿಷ್ಯಕ್ಕೆ ಯಾವೆಲ್ಲಾ ಬದಲಾವಣೆಯನ್ನುಂಟುಮಾಡುತ್ತದೆ? ವಿಶ್ರಾಂತಿಯ ಜೊತೆಗೆ ಒಂದಿಷ್ಟು ಖುಷಿಯನ್ನು ನೀಡುವುದೇ ಎಂದು ತಿಳಿದುಕೊಳ್ಳಲು ಈ ಮುಂದೆ ವಿವರಿಸಲಾದ ರಾಶಿ ಭವಿಷ್ಯವನ್ನು ಅರಿಯಿರಿ...

ಮೇಷ: 21 ಮಾರ್ಚ್ - 19 ಏಪ್ರಿಲ್

ಮೇಷ: 21 ಮಾರ್ಚ್ - 19 ಏಪ್ರಿಲ್

ಇಂದು ನೀವು ಪ್ರಣಯದ ಗಾಳಿಯಲ್ಲಿ ತೇಲುವಿರಿ. ನಿಮ್ಮ ಸಂಗಾತಿಯೊಂದಿಗೆ ನೀವು ಸಾಕಷ್ಟು ಸ್ಮರಣೀಯ ಸಮಯವನ್ನು ಕಳೆಯುತ್ತೀರಿ. ಬಹುಶಃ ನಿಮ್ಮ ನೆಚ್ಚಿನ ಭಕ್ಷ್ಯಗ ಳನ್ನು ಹೊಂದುವುದರ ಮೂಲಕ ಹೆಚ್ಚಿನ ಸಂತೋಷವನ್ನು ಪಡೆಯಬಹುದು. ನೀವು ಸಂಗಾತಿಯ ಮನಸ್ಥಿತಿಯನ್ನು ಹಾಳು ಮಾಡುವ ಸಾಧ್ಯತೆಗಳಿವೆ. ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸಿ. ಹಣದ ವಿಷಯಗಳು ಇಂದು ಸುಧಾರಿಸುತ್ತವೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ ಮುಂದಾಗಬಹುದು. ಉತ್ತಮ ಯಶಸ್ಸು ದೊರೆಯುವುದು. ಕೆಲಸದ ದೃಷ್ಟಿಕೋನದಿಂದ ದಿನವು ಅನುಕೂಲಕರವಾಗಿರುತ್ತದೆ. ನೀವು ಪೂರ್ಣ ಏಕಾಗ್ರತೆಯಿಂದ ಕೆಲಸ ಮಾಡುತ್ತೀರಿ. ಆರೋಗ್ಯ ಉತ್ತಮವಾಗಿರುತ್ತದೆ. ವ್ಯಾಯಾಮ ಮಾಡುವುದರ ಮೂಲಕ ದಿನವನ್ನು ಆರಂಭಿಸಿ.

ಅದೃಷ್ಟ ಬಣ್ಣ: ಗುಲಾಬಿ

ಅದೃಷ್ಟ ಸಂಖ್ಯೆ: 17

ಅದೃಷ್ಟ ಸಮಯ: ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 2:30 ರವರೆಗೆ

ವೃಷಭ: 20 ಏಪ್ರಿಲ್ - 20 ಮೇ

ವೃಷಭ: 20 ಏಪ್ರಿಲ್ - 20 ಮೇ

ಕೆಲವು ಒಳ್ಳೆಯ ಸಂಗತಿಗಳಿಂದಾಗಿ ಈ ದಿನವು ನಿಮಗೆ ಉತ್ತಮವಾಗಿರುತ್ತದೆ. ಕೆಲವು ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳು ಇಂದು ಪರಿಹಾರ ಕಾಣುತ್ತವೆ. ನೀವು ಇಂದು ಶಾಂತ ಮತ್ತು ನಿರಾಳತೆಯನ್ನು ಅನುಭವಿಸುವಿರಿ. ಕುಟುಂಬದ ಬಂಧವು ಸಿಹಿಯಾಗಿರುತ್ತದೆ. ವಿಶೇಷವಾಗಿ ಸಂಗಾತಿಯು ನಿಮ್ಮ ಹೆತ್ತವರೊಂದಿಗೆ ಪ್ರತಿ ನಿರ್ಧಾರದಲ್ಲೂ ನಿಮ್ಮನ್ನು ಬೆಂಬಲಿಸುತ್ತಾರೆ. ಪರಸ್ಪರ ತಿಳುವಳಿಕೆಯೊಂದಿಗೆ ನಿಮ್ಮ ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಸುಧಾರಿಸುತ್ತದೆ. ಮಕ್ಕಳಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ನಿರೀಕ್ಷಿಸಬಹುದು. ಹಣಕಾಸಿನ ದೃಷ್ಟಿಯಿಂದ, ನೀವು ಧಾರ್ಮಿಕ ಕಾರ್ಯಗಳಿಗಾಗಿ ಹೆಚ್ಚು ಖರ್ಚು ಮಾಡಬಹುದು. ಆದಾಗ್ಯೂ, ಖರ್ಚು ಯಾವುದೇ ಸಮಸ್ಯೆಯನ್ನು ಉಂಟುಮಾಡುವುದಿಲ್ಲ. ನೀವು ತೃಪ್ತರಾಗಿರುತ್ತೀರಿ. ಕಚೇರಿ ಕೆಲಸವು ದಿನವಿಡೀ ನಿಮ್ಮನ್ನು ಕಾರ್ಯನಿರತವಾಗಿಸಬಹುದು. ಇಂದು ನೀವು ಸಣ್ಣ ಪ್ರಯಾಣವನ್ನು ಕೈಗೊಳ್ಳುವ ಸಾಧ್ಯತೆಗಳಿವೆ.

ಅದೃಷ್ಟ ಬಣ್ಣ: ಕಂದು

ಅದೃಷ್ಟ ಸಂಖ್ಯೆ: 35

ಅದೃಷ್ಟ ಸಮಯ: ಸಂಜೆ 5:00 ರಿಂದ 10:00 ರವರೆಗೆ

ಮಿಥುನ: 21 ಮೇ - 20 ಜೂನ್

ಮಿಥುನ: 21 ಮೇ - 20 ಜೂನ್

ನೀವು ಸ್ವಾವಲಂಬಿಗಳಾಗಬೇಕು. ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ನೀವು ನಿಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಆರ್ಥಿಕವಾಗಿ ಕೆಲವು ಅಸ್ಥಿರ ಪರಿಸ್ಥಿತಿ ಎದುರಿಸುವುದರಿಂದ ಹಣಕಾಸಿನ ವಿಷಯದಲ್ಲಿ ಅಷ್ಟು ಉತ್ತಮವಾದ ದಿನವಲ್ಲ ಎಂದು ಹೇಳಬಹುದು. ಇಂದು ಹೂಡಿಕೆ ಮಾಡುವುದನ್ನು ತಪ್ಪಿಸಿ. ಇದು ಕೆಲಸದ ಮುಂಭಾಗದಿಂದ ಮಿಶ್ರ ದಿನವಾಗಿರುತ್ತದೆ. ಸಹೋದ್ಯೋಗಿ ನಿಮ್ಮ ಕೆಲಸದಲ್ಲಿ ತೊಂದರೆ ಉಂಟುಮಾಡಬಹುದು. ಅದು ನಿಮ್ಮಿಬ್ಬರ ನಡುವೆ ಸಣ್ಣ ತಪ್ಪು ತಿಳುವಳಿಕೆಗೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಕೋಪಗೊಳ್ಳದಿರಲು ಪ್ರಯತ್ನಿಸಿ. ನಿಮ್ಮ ಪ್ರತಿಷ್ಠೆಗೆ ಕಳಂಕ ತರುವಂತಹ ಕೆಲಸವನ್ನು ಮಾಡುವುದನ್ನು ತಪ್ಪಿಸಿ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ನಿಮ್ಮ ಒತ್ತಡದ ಮಟ್ಟವನ್ನು ನಿಯಂತ್ರಣದಲ್ಲಿಡಿ ಏಕೆಂದರೆ ಅದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 21

ಅದೃಷ್ಟ ಸಮಯ: ಸಂಜೆ 4:00 - ರಾತ್ರಿ 9:15

ಕರ್ಕ: 21 ಜೂನ್ - 22 ಜುಲೈ

ಕರ್ಕ: 21 ಜೂನ್ - 22 ಜುಲೈ

ನಿಮ್ಮ ವೈವಾಹಿಕ ಜೀವನದಲ್ಲಿ ಒಂದು ಮಹತ್ವದ ತಿರುವು ದಾರಿಯಲ್ಲಿದೆ. ನೀವು ಬಹಳ ಸಮಯದ ನಂತರ ನಿಮ್ಮ ಸಂಗಾತಿಯೊಂದಿಗೆ ಸಾಕಷ್ಟು ಸಮಯ ಕಳೆಯುವಿರಿ. ಇಂದು ಇಬ್ಬರೂ ಆರಾಮವಾಗಿ ಕುಳಿತು ಎಲ್ಲಾ ಸಿಹಿ ಕ್ಷಣಗಳನ್ನು ಅನುಭವಿಸುವಿರಿ. ರೋಮ್ಯಾಂಟಿಕ್ ಜೀವನವು ಸಹ ಸಿಹಿಯಾಗಿರುತ್ತದೆ. ನಿಮ್ಮ ಸಂಗಾತಿಯನ್ನು ಭೇಟಿ ಮಾಡಲು ನೀವು ಕೆಲವು ವಿಶೇಷ ಸ್ಥಳಗಳಿಗೆ ಹೋಗಬಹುದು. ಭವಿಷ್ಯದಲ್ಲಿ ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ನಷ್ಟ ಉಂಟಾಗಬಹುದು. ಹಾಗಾಗಿ ಹಣಕಾಸಿನ ಬಗ್ಗೆ ಆದಷ್ಟು ಕಾಳಜಿ ವಹಿಸುವುದು ಉತ್ತಮ. ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚು. ಆದರೆ ಅದು ನಿಮಗೆ ತೊಂದರೆ ಕೊಡುವುದಿಲ್ಲ. ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಮರೆಯಬೇಡಿ.

ಅದೃಷ್ಟ ಬಣ್ಣ: ಕ್ರೀಮ್

ಅದೃಷ್ಟ ಸಂಖ್ಯೆ: 12

ಅದೃಷ್ಟ ಸಮಯ: ಮಧ್ಯಾಹ್ನ 2:00 ರಿಂದ 7:00 ರವರೆಗೆ

ಸಿಂಹ: 23 ಜುಲೈ - 22 ಆಗಸ್ಟ್

ಸಿಂಹ: 23 ಜುಲೈ - 22 ಆಗಸ್ಟ್

ಕಳೆದ ಕೆಲವು ದಿನಗಳಿಂದ ಅಂಟಿಕೊಂಡಿರುವ ಕೆಲಸವು ನಿಮ್ಮ ಕಠಿಣ ಪರಿಶ್ರಮದಿಂದ ಇಂದು ವೇಗವನ್ನು ಪಡೆದುಕೊಳ್ಳುತ್ತದೆ. ಈ ರೀತಿಯಲ್ಲಿ ಕೆಲಸವನ್ನು ಮುಂದುವರಿಸಿದರೆ ಶೀಘ್ರದಲ್ಲಿಯೇ ಯಶಸ್ಸು ದೊರೆಯುವುದು. ಕುಟುಂಬ ಜೀವನವು ಉತ್ತಮವಾಗಿ ಉಳಿಯುತ್ತದೆ. ನೀವು ಪೂರೈಸದ ಕೆಲವು ಹಳೆಯ ಭರವಸೆಗಳು ನಿಮ್ಮ ಸಂಗಾತಿಯ ಮನಸ್ಥಿತಿಯನ್ನು ಹಾಳುಮಾಡಬಹುದು. ಪ್ರೀತಿಯಿಂದ ಅವರನ್ನು ಮನವೊಲಿಸಲು ಪ್ರಯತ್ನಿಸಿ. ಪ್ರೀತಿಯ ವಿಷಯಗಳು ವಿವಾದಾಸ್ಪದವಾಗುತ್ತವೆ. ನಿಮ್ಮ ಸಂಗಾತಿಯೊಂದಿಗೆ ನೀವು ಸಣ್ಣ ಜಗಳವನ್ನು ಅನುಭವಿಸಬಹುದು. ನಿಮ್ಮ ಸಂಗಾತಿಯನ್ನು ಯಾವುದೇ ಕಾರಣಗಳಿಗಾಗಿ ಅನುಮಾನಿಸುವುದನ್ನು ತಪ್ಪಿಸಿ. ಏಕೆಂದರೆ ಅದು ನಿಮ್ಮ ಸುಂದರ ಸಂಬಂಧವನ್ನು ದುರ್ಬಲಗೊಳಿಸುತ್ತದೆ. ಆರೋಗ್ಯಕ್ಕೆ ಅನುಕೂಲಕರವಾದ ದಿನ.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 22

ಅದೃಷ್ಟ ಸಮಯ: ಬೆಳಿಗ್ಗೆ 9:20 - ಮಧ್ಯಾಹ್ನ 1:30

ಕನ್ಯಾ : 23 ಆಗಸ್ಟ್ - 22 ಸೆಪ್ಟೆಂಬರ್

ಕನ್ಯಾ : 23 ಆಗಸ್ಟ್ - 22 ಸೆಪ್ಟೆಂಬರ್

ನಿಮ್ಮ ಶತ್ರುಗಳು ಇಂದು ಸಕ್ರಿಯರಾಗಿರುವುದರಿಂದ ಜಾಗರೂಕರಾಗಿರಿ. ನಿಮ್ಮ ಎಲ್ಲಾ ಕಾರ್ಯಗಳಿಗೆ ಅಡ್ಡಿ ಪಡಿಸಲು ಸಾಕಷ್ಟು ಪ್ರಯತ್ನಗಳನ್ನು ನಡೆಸಬಹುದು. ಇಂದು ನೀವು ಹಣವನ್ನು ಪಡೆಯುತ್ತೀರಿ. ಆದರೆ ಅನಿರೀಕ್ಷಿತ ಖರ್ಚುಗಳು ನಿಮ್ಮ ಹಣವನ್ನು ಖಾಲಿ ಮಾಡಬಹುದು. ಸಂಜೆ ನೀವು ಬರಿಗೈಯಲ್ಲಿ ಹಿಂತಿರುಗಬೇಕಾಗಬಹುದು. ಹಣಕಾಸಿನ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಇಲ್ಲದಿದ್ದರೆ ಅದು ನಿಮ್ಮ ಮುಂದಿನ ಯೋಜನೆಗಳಿಗೆ ಅಡ್ಡಿಯಾಗಬಹುದು. ಕೆಲಸದ ವಾತಾವರಣವು ಉತ್ತಮವಾಗಿರುತ್ತದೆ. ಕೆಲವು ಪ್ರಮುಖ ಕಾರ್ಯವನ್ನು ಪೂರ್ಣಗೊಳಿಸಲು ನಿಮಗೆ ಅವಕಾಶ ಸಿಗಬಹುದು ಎಲ್ಲಾ ವಿಷಯದಲ್ಲೂ ಇಂದು ನೀವು ಅತ್ಯುತ್ತಮ ಕೆಲಸ ನಿರ್ವಹಿಸಲು ಪ್ರಯತ್ನಿಸಿ. ಉದ್ಯಮಿಗಳಿಗೆ ಹೊಸ ಕೆಲಸ ಸಿಗುವ ಸಾಧ್ಯತೆಗಳಿವೆ.

ಅದೃಷ್ಟ ಬಣ್ಣ: ಕೇಸರಿ

ಅದೃಷ್ಟ ಸಂಖ್ಯೆ: 12

ಅದೃಷ್ಟ ಸಮಯ: ಬೆಳಿಗ್ಗೆ 8:25 - ಮಧ್ಯಾಹ್ನ 12:55

ತುಲಾ: 23 ಸೆಪ್ಟೆಂಬರ್ - 22 ಅಕ್ಟೋಬರ್

ತುಲಾ: 23 ಸೆಪ್ಟೆಂಬರ್ - 22 ಅಕ್ಟೋಬರ್

ನಿಮ್ಮ ಕಚೇರಿಯಲ್ಲಿ ದೊಡ್ಡ ದಿನ ಕಾಯುತ್ತಿದೆ. ಹಿರಿಯರು ನಿಮ್ಮ ಪ್ರಮುಖ ಸಾಮರ್ಥ್ಯದಿಂದ ಪ್ರಭಾವಿತರಾಗುತ್ತಾರೆ. ಒಳ್ಳೆಯ ಕೆಲಸವನ್ನು ಮುಂದುವರಿಸಿ ಮತ್ತು ಶ್ರಮಿಸಿ. ನೀವು ಉದ್ಯಮಿಯಾಗಿದ್ದರೆ ನಿಮ್ಮ ನಿರೀಕ್ಷೆಗಳನ್ನು ಮೀರಿ ಪ್ರಯೋಜನಗಳನ್ನು ಪಡೆಯಲು ಅವಕಾಶವಿದೆ. ಸಣ್ಣ ವ್ಯಾಪಾರ ಪ್ರವಾಸ ಮಾಡುವ ಅನಿವಾರ್ಯತೆಯನ್ನು ತಂದೊಡ್ಡುವುದು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ನೀವು ಕುಟುಂಬ ಬಂಧದಲ್ಲಿ ಸ್ವಲ್ಪ ಕುಸಿತವನ್ನು ಎದುರಿಸಬೇಕಾಗಬಹುದು. ಶಾಂತವಾಗಿ ಮತ್ತು ತಾಳ್ಮೆಯಿಂದಿರಿ. ಪರಿಸ್ಥಿತಿಯನ್ನು ಸಿಹಿ ಪದಗಳಿಂದ ನಿರ್ವಹಿಸಲು ಪ್ರಯತ್ನಿಸಿ. ಸಂಗಾತಿಯೊಂದಿಗಿನ ಸಂಬಂಧವೂ ಪರಿಣಾಮ ಬೀರಬಹುದು. ಆರೋಗ್ಯವು ಇಂದು ಬೇಸರ ಹಾಗೂ ತೊಂದರೆ ಉಂಟಾಗಬಹುದು.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 28

ಅದೃಷ್ಟ ಸಮಯ: ಮಧ್ಯಾಹ್ನ 12:00 - ಸಂಜೆ 6:00

ವೃಶ್ಚಿಕ: 23 ಅಕ್ಟೋಬರ್ - 21 ನವೆಂಬರ್

ವೃಶ್ಚಿಕ: 23 ಅಕ್ಟೋಬರ್ - 21 ನವೆಂಬರ್

ಪ್ರೀತಿಯ ವಿಷಯದಲ್ಲಿ ಇಂದು ಬಹಳ ವಿಶೇಷ ದಿನ. ಪ್ರೀತಿಯ ಆಲೋಚನೆಗಳಲ್ಲಿ ನೀವು ಮುಳುಗುತ್ತೀರಿ. ನಿಮ್ಮ ಪ್ರೇಮಿಗೆ ವಿವಾಹದ ಪ್ರಸ್ತಾಪ ಮಾಡಲು ಸೂಕ್ತವಾದ ದಿನ. ನೀವು ವಿವಾಹಿತರಾಗಿದ್ದರೆ ನಿಮ್ಮ ಸಂಗಾತಿಯ ಸಹಾಯದಿಂದ ದೊಡ್ಡ ಲಾಭವನ್ನು ನಿರೀಕ್ಷಿಸಬಹುದು. ಇಂದು ನೀವು ಕೆಲವು ಪ್ರಮುಖ ನಿರ್ಧಾರಗಳನ್ನು ಸಹ ತೆಗೆದುಕೊಳ್ಳಬಹುದು. ದೀರ್ಘಕಾಲದಿಂದ ಕಾಯುತ್ತಿದ್ದ ಅವಕಾಶವು ಇಂದು ನಿಮ್ಮ ಬಾಗಿಲನ್ನು ತಟ್ಟಬಹುದು. ಕಷ್ಟಪಟ್ಟು ಕೆಲಸ ಮಾಡಿ ಮತ್ತು ಅವಕಾಶದ ಪೂರ್ಣ ಲಾಭವನ್ನು ಪಡೆದುಕೊಳ್ಳಿ. ಹಣದ ವಿಷಯಗಳು ಇಂದು ಉತ್ತಮವಾಗಿರುತ್ತವೆ. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನ.

ಅದೃಷ್ಟ ಬಣ್ಣ: ನೀಲಿ

ಅದೃಷ್ಟ ಸಂಖ್ಯೆ: 10

ಅದೃಷ್ಟ ಸಮಯ: ಸಂಜೆ 4:30 - ರಾತ್ರಿ 10:00

ಧನು: 22 ನವೆಂಬರ್ - 21 ಡಿಸೆಂಬರ್

ಧನು: 22 ನವೆಂಬರ್ - 21 ಡಿಸೆಂಬರ್

ನಿಮ್ಮ ಆರೋಗ್ಯವನ್ನು ಸುಧಾರಿಸಲು ಸಮತೋಲಿತ ಆಹಾರದ ಜೊತೆಗೆ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಬೇಕು. ನಿಮ್ಮ ಆರೋಗ್ಯವು ಕ್ಷೀಣಿಸುತ್ತಿರುವುದರಿಂದ ನಿರಂತರವಾಗಿ ಕೆಲಸ ಮಾಡುವುದನ್ನು ತಪ್ಪಿಸಿ. ವೃತ್ತಿಗೆ ಸಂಬಂಧಿಸಿದಂತೆ ಇಂದು ಸಾಮಾನ್ಯ ದಿನವಾಗಿರುತ್ತದೆ. ಉದ್ಯೋಗಿಯ ಕಾರ್ಯಕ್ಷಮತೆ ಬಹಳ ಶ್ಲಾಘನೀಯವಾಗಿರುತ್ತದೆ. ಆದರೆ ವ್ಯಾಪಾರಸ್ಥರಿಗೆ ಇಂದು ಯಾವುದೇ ವಿಶೇಷ ಲಾಭ ಸಿಗದಿರಬಹುದು. ಕುಟುಂಬದಲ್ಲಿ ಉದ್ವಿಗ್ನತೆ ಉಂಟಾಗಬಹುದು. ನಿಮ್ಮ ಹಿರಿಯ ಸಹೋದರನೊಂದಿಗಿನ ವಿವಾದವು ಮನೆಯಲ್ಲಿ ತೊಂದರೆ ಉಂಟುಮಾಡಬಹುದು. ಅವನೊಂದಿಗೆ ಯಾವುದೇ ರೀತಿಯ ಚರ್ಚೆಯನ್ನು ಮಾಡದಿರುವುದು ಉತ್ತಮ. ಏಕೆಂದರೆ ಅದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ನಿಮ್ಮ ಸಂಗಾತಿಯಿಂದ ಇಂದು ಯಾವುದೇ ಬೆಂಬಲವನ್ನು ನಿರೀಕ್ಷಿಸಲಾಗುವುದಿಲ್ಲ. ನಿಮ್ಮ ಪ್ರೀತಿಪಾತ್ರರು ಇಂದು ನಿಮ್ಮೊಂದಿಗೆ ಸಿಟ್ಟಾಗುತ್ತಾರೆ. ಖರ್ಚು ಮಾಡುವ ಮೊದಲು ಯೋಚಿಸಿ.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 2

ಅದೃಷ್ಟ ಸಮಯ: ಮಧ್ಯಾಹ್ನ 12:00 - ಸಂಜೆ 7:00

ಮಕರ: 22 ಡಿಸೆಂಬರ್ - 19 ಜನವರಿ

ಮಕರ: 22 ಡಿಸೆಂಬರ್ - 19 ಜನವರಿ

ನೀವು ನಿಷ್ಪ್ರಯೋಜಕ ವಿಷಯಗಳಿಂದ ದೂರವಿರಲು ಬಯಸಿದರೆ, ನಿಮ್ಮ ಅನುಚಿತ ಮಾತುಗಳು ಪದಗಳು ತೊಂದರೆಯನ್ನುಂಟುಮಾಡಬಹುದು. ಕೆಲಸದ ಸ್ಥಳದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ಅನೇಕ ಕೆಲಸಗಳನ್ನು ಒಂದೇ ಸಮಯದಲ್ಲಿ ನಿರ್ವಹಿಸಬೇಕಾಗುವುದು. ನಿಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳ ಬೇಕು. ಎಲ್ಲಾ ಕೆಲಸಗಳನ್ನು ಸಮಯಕ್ಕೆ ಪೂರ್ಣಗೊಳಿಸಲು ಅವರು ನಿಮಗೆ ಸಹಾಯ ಮಾಡಬಹುದು. ಆರ್ಥಿಕ ಪರಿಸ್ಥಿತಿ ಕ್ಷೀಣಿಸಬಹುದು. ಇಂದು ನೀವು ಹಣದ ನಷ್ಟವನ್ನು ಎದುರಿಸಬೇಕಾಗುತ್ತದೆ. ಇಂದು ಹಣದ ವಿಷಯಗಳಲ್ಲಿ ಜಾಗರೂಕರಾಗಿರಿ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧವು ಸಿಹಿಯಾಗಿರುತ್ತದೆ. ಆರೋಗ್ಯದ ಬಗ್ಗೆ ಅಸಡ್ಡೆ ಮಾಡಬೇಡಿ. ನೀವು ಅನಾರೋಗ್ಯಕ್ಕೆ ಒಳಗಾಗಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಅದೃಷ್ಟ ಬಣ್ಣ: ಕಿತ್ತಳೆ

ಅದೃಷ್ಟ ಸಂಖ್ಯೆ: 43

ಅದೃಷ್ಟ ಸಮಯ: ಬೆಳಿಗ್ಗೆ 10:45 - ಮಧ್ಯಾಹ್ನ 3:00

ಕುಂಭ: 20 ಜನವರಿ - 18 ಫೆಬ್ರವರಿ

ಕುಂಭ: 20 ಜನವರಿ - 18 ಫೆಬ್ರವರಿ

ಇಂದು ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಮೊದಲು ಶಾಂತವಾಗಿರಿ. ನಂತರ ನಿರ್ಧಾರ ತೆಗೆದುಕೊಳ್ಳಲು ಒಂದು ಹೆಜ್ಜೆ ಮುಂದಿಡಿ. ಪೋಷಕರೊಂದಿಗಿನ ಸಂಬಂಧ ಅರಳುತ್ತದೆ. ನಿಮ್ಮ ತಪ್ಪುಗಳಿಗೆ ನೀವು ಕ್ಷಮೆಯಾಚಿಸುತ್ತೀರಿ. ಹಿಂದಿನದನ್ನು ಮರೆತುಬಿಡುವುದರಿಂದ ನೀವು ಮತ್ತು ನಿಮ್ಮ ಪೋಷಕರು ಬಹಳ ಸಮಯದಿಂದ ಹೊಂದಿದ್ದ ದೂರವು ಇಂದು ಕಡಿಮೆಯಾಗುತ್ತದೆ. ನಿಮ್ಮ ವಿಶ್ವಾಸಾರ್ಹ ಸ್ನೇಹಿತನಿಂದ ನಿಮಗೆ ದ್ರೋಹವಾಗುವ ಸಾಧ್ಯತೆಗಳಿವೆ. ನಿಮ್ಮ ಸ್ನೇಹಿತನನ್ನು ಕುರುಡಾಗಿ ನಂಬುವುದನ್ನು ತಪ್ಪಿಸಿ. ವಿವಾಹಿತ ಜೀವನವು ಅನುಕೂಲಕರವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಪರಸ್ಪರ ತಿಳುವಳಿಕೆ ಸುಧಾರಿಸುತ್ತದೆ. ದಿನವನ್ನು ಚೆನ್ನಾಗಿ ಕಳೆಯಲಾಗುತ್ತದೆ ಮತ್ತು ನಿಮ್ಮ ಸಂಗಾತಿಯೊಂದಿಗೆ ಸ್ಮರಣೀಯವಾಗುವುದು. ನಿಮ್ಮ ಸಂಗಾತಿಯೊಂದಿಗೆ ನೀವು ಬಲವಾದ ಸಂಪರ್ಕವನ್ನು ಸಹ ಅನುಭವಿಸುವಿರಿ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಇಂದು ನೀವು ಖರೀದಿಯ ಮೂಲಕ ಹೆಚ್ಚಿನ ಲಾಭವನ್ನು ಪಡೆಯುತ್ತೀರಿ.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 14

ಅದೃಷ್ಟ ಸಮಯ: ಬೆಳಿಗ್ಗೆ 8:30 - ಮಧ್ಯಾಹ್ನ 1:00

ಮೀನ: 19 ಫೆಬ್ರವರಿ - 20 ಮಾರ್ಚ್

ಮೀನ: 19 ಫೆಬ್ರವರಿ - 20 ಮಾರ್ಚ್

ಒಂದು ಉತ್ತಮ ಅವಕಾಶ ಸಮೀಪಿಸುತ್ತಿದೆ. ಅದನ್ನು ಕಳೆದುಕೊಳ್ಳದಂತೆ ನಿಮ್ಮ ಮನಸ್ಸು ಮತ್ತು ಕಣ್ಣುಗಳನ್ನು ತೆರೆದಿಟ್ಟರೆ ಉತ್ತಮ. ಹಣದ ವಿಷಯಗಳಿಗೆ ಮಿಶ್ರ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಬಯಸಿದರೆ ವಿಭಿನ್ನವಾಗಿ ಯೋಚಿಸಬೇಕು. ಹಣಕಾಸಿನ ಯೋಜನೆಗಳಲ್ಲಿ ಬದಲಾವಣೆಗಳನ್ನು ಮಾಡಲು ನೀವು ಬಯಸಿದರೆ, ಬಜೆಟ್ ಅನ್ನು ಏಕಕಾಲದಲ್ಲಿ ಸಮತೋಲನಗೊಳಿಸಲು ಪ್ರಯತ್ನಿಸಿ. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಶಾಂತಿ ಉಳಿಯುತ್ತದೆ. ಇಂದು ಪಾಲುದಾರರಿಂದ ಉತ್ತಮ ಸಹಕಾರ ದೊರೆಯುವುದು. ಪ್ರೀತಿಗೆ ಸಂಬಂಧಿಸಿದಂತೆ ಉತ್ತಮವಾದ ದಿನ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಅವರ ಮುಂದೆ ವಿವಾಹದ ಪ್ರಸ್ತಾಪ ಮಾಡಬಹುದು. ಸಿಟ್ಟಾಗಿರುವ ನಿಮ್ಮ ಕುಟುಂಬದ ಸದಸ್ಯರನ್ನು ಸಂಪರ್ಕಿಸಲು ಇಂದು ಉತ್ತಮ ದಿನ. ನೀವು ಅವರನ್ನು ಸಾಂತ್ವಾನ ಮಡಬಹುದು

ಅದೃಷ್ಟ ಬಣ್ಣ: ಹಸಿರು

ಅದೃಷ್ಟ ಸಂಖ್ಯೆ: 18

ಅದೃಷ್ಟ ಸಮಯ: ಬೆಳಿಗ್ಗೆ 7:45 - ಮಧ್ಯಾಹ್ನ 2:30

English summary

Daily Horoscope 20 Oct 2019 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
X