For Quick Alerts
ALLOW NOTIFICATIONS  
For Daily Alerts

ಪಿತೃಪಕ್ಷದಲ್ಲಿ ಜನಿಸಿದ ಮಕ್ಕಳ ಭವಿಷ್ಯದ ಬಗ್ಗೆ ಇರುವ ನಂಬಿಕೆಗಳಿವು

|

ಪಿತೃಪಕ್ಷ ಹಿಂದೂಗಳಿಗೆ ತುಂಬಾ ಮಹತ್ವದ ದಿನಗಳಾಗಿವೆ. ಪಿತೃಪಕ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ಪಿತೃಪಕ್ಷ ಬರುತ್ತದೆ, ಈ ವರ್ಷ ಸೆಪ್ಟೆಂಬರ್‌ 10ರಿಂದ ಪಿತೃಪಕ್ಷ ಪ್ರಾರಂಭವಾಗಿ ಸೆಪ್ಟೆಂಬರ್ 25ಕ್ಕೆ ಮುಗಿಯಲಿದೆ.

ಈ 15 ದಿನಗಳು ಪಿತೃದೋಷ ಪರಿಹಾರಕ್ಕೆ ತುಂಬಾನೇ ಮಹತ್ವವಾದ ದಿನಗಳಾಗಿವೆ. ಪಿತೃದೋಷವಿದ್ದರೆ ಮನುಷ್ಯರಿಗೆ ಅನೇಕ ಸಮಸ್ಯೆಗಳು ಬರುತ್ತದೆ. ಅನಾರೋಗ್ಯ, ವ್ಯವಹಾರದಲ್ಲಿ ಅಡಚಣೆ, ಸಂತಾನ ಭಾಗ್ಯ ಇಲ್ಲದಿರುವುದು ಮುಂತಾದ ಅನೇಕ ತೊಂದರೆಗಳು ಎದುರಾಗುವುದು.

Baby Born In Pitru Paksha

ಈ ಎಲ್ಲಾ ದೋಷ ನಿವಾರಣೆಗೆ ಪಿತೃಪಕ್ಷದಲ್ಲಿ ತರ್ಪಣ ನೀಡಿದರೆ ಹಿರಿಯರ ಆಶೀರ್ವಾದದಿಂದ ಎಲ್ಲವೂ ಸರಿಹೋಗುವುದು ಎಂಬ ನಂಬಿಕೆ. ಈ ಪಿತೃಪಕ್ಷ ಅವಧಿಯಲ್ಲಿ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ. ಮಕ್ಕಳ ನಾಮಕರಣ, ಗೃಹ ಪ್ರವೇಶ, ಹೋಮ ಹೀಗೆ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ.

ಪಿತೃಪಕ್ಷದಲ್ಲಿ ಶ್ರಾದ್ಧ ಕಾರ್ಯದ ಮಹತ್ವ

ಪಿತೃಪಕ್ಷದಲ್ಲಿ ಶ್ರಾದ್ಧ ಕಾರ್ಯದ ಮಹತ್ವ

ಈ ಅವಧಿಯಲ್ಲಿ ಪೂರ್ವಜರಿಗೆ ಶ್ರಾದ್ಧ ಕಾರ್ಯ ಮಾಡಿದರೆ ಅವರ ಆಶೀರ್ವಾದ ನಮಗೆ ದೊರೆಯುವುದು. ಇದರಿಂದ ಮನೆಯಲ್ಲಿ ಖುಷಿ, ನೆಮ್ಮದಿ ಇರುತ್ತದೆ. ಮನೆಯಲ್ಲಿ ಮದುವೆ ವಯಸ್ಸಿನವರಿಗೆ ಕಂಕಣ ಭಾಗ್ಯ ಕೂಡಿ ಬರುವುದು, ನಮ್ಮ ಕಾರ್ಯದಲ್ಲಿ ಪ್ರಗತಿಯನ್ನು ಕಾಣಬಹುದು.

 ಪಿತೃಪಕ್ಷದಲ್ಲಿ ಮಕ್ಕಳ ಜನನ ಅದೃಷ್ಟವೇ?

ಪಿತೃಪಕ್ಷದಲ್ಲಿ ಮಕ್ಕಳ ಜನನ ಅದೃಷ್ಟವೇ?

ಧಾರ್ಮಿಕ ನಂಬಿಕೆಗಳ ಪ್ರಕಾರ ಪಿತೃಪಕ್ಷದಲ್ಲಿ ಜನಿಸಿದ ಮಕ್ಕಳು ಅದೃಷ್ಟವಂತರು. ಆ ಮಕ್ಕಳು ಭವಿಷ್ಯದಲ್ಲಿ ದೊಡ್ಡ ವ್ಯಕ್ತಿಗಳಾಗಿ ಬೆಳೆಯುತ್ತಾರೆ, ಅವರು ಜೀವನದಲ್ಲಿ ತುಂಬಾ ಸಾಧನೆ ಮಾಡುತ್ತಾರೆ ಎಂದು ಹೇಳಲಾಗುವುದು.

ಪಿತೃಪಕ್ಷದಲ್ಲಿ ಜನಿಸಿದ ಮಕ್ಕಳಿಗೆ ಹಿರಿಯರ ಆಶೀರ್ವಾದವಿರುತ್ತೆ

ಪಿತೃಪಕ್ಷದಲ್ಲಿ ಜನಿಸಿದ ಮಕ್ಕಳಿಗೆ ಹಿರಿಯರ ಆಶೀರ್ವಾದವಿರುತ್ತೆ

ಪಿತೃಪಕ್ಷದಲ್ಲಿ ಹಿರಿಯರು ಭೂಮಿಗೆ ಬರುತ್ತಾರೆ ಎಂಬ ಎಂಬ ನಂಬಿಕೆ ಇದೆ, ಈ ಪಿತೃಪಕ್ಷದಲ್ಲಿ ಜನಿಸುವ ಮಕ್ಕಳಿಗೆ ಹಿರಿಯರ ಆಶೀರ್ವಾದ ಕೂಡ ಸಿಗುವುದು, ಇದರಿಂದ ಆ ಮಕ್ಕಳಿಗೆ ತುಂಬಾ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ.

ಪಿತೃಪಕ್ಷದಲ್ಲಿ ಜನಿಸಿದ ಮಕ್ಕಳು ಮನೆಗೆ ಸಂತೋಷ ತರುತ್ತಾರೆ, ಆ ಮಕ್ಕಳಿಂದ ಮನೆಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ.

ಸೂಚನೆ: ಇಲ್ಲಿ ನೀಡಿರುವ ಅಂಶವನ್ನು ಜನರ ನಂಬಿಕೆಗಳ ಅಧಾರದ ಮೇಲೆ ಹೇಳಲಾಗಿದೆ, ಪಿತೃಪಕ್ಷದಲ್ಲಿ ಮಕ್ಕಳು ಜನಿಸಿದರೆ ಆ ಮನೆಯಲ್ಲಿ ಬೆಳವಣಿಗೆಯಾಗುತ್ತದೆ ಎಂದು ಹಿರಿಯರು ಹೇಳುವುದನ್ನು ನೀವೂ ಕೇಳಿರಬಹುದು ಅಲ್ವಾ? ಇಲ್ಲಿ ನೀಡಿರುವ ಅಂಶ ನಿಮ್ಮ ನಂಬಿಕೆ ಬಿಟ್ಟದ್ದು.

English summary

Baby Born In Pitru Paksha: Know the future of children born on pitru paksha in kannada

Baby Born In Pitru Paksha: What is the future of baby born in pitru paksha, read on....
Story first published: Saturday, September 10, 2022, 16:13 [IST]
X
Desktop Bottom Promotion