For Quick Alerts
ALLOW NOTIFICATIONS  
For Daily Alerts

ನವೆಂಬರ್ ನಲ್ಲಿ ವಾಹನ ಖರೀದಿ, ಮಾರಾಟಕ್ಕೆ ಇಲ್ಲಿದೆ ಶುಭ ಮಹೂರ್ತಗಳು

|

ಶುಭ ದಿನ ಮತ್ತು ಸಮಯದಲ್ಲಿ ಅಮೂಲ್ಯವಾದ, ಬಹುಪಯೋಗಿ ಅಥವಾ ಬೆಲೆಬಾಳುವ ಯಾವುದನ್ನಾದರೂ ಖರೀದಿಸುವ ಪದ್ಧತಿಯು ಭಾರತದಲ್ಲಿ ಹೆಚ್ಚಿನ ಮಹತ್ವವನ್ನು ಪಡೆದಿದೆ. ಅಲ್ಲದೇ, ಇಂತಹ ಆಚರಣೆಯನ್ನು ದೇಶದಲ್ಲಿ ಹಲವು ಯುಗಗಳಿಂದ ಜನರು ಅನುಸರಿಸುತ್ತಿದ್ದಾರೆ.

ಸಾಮಾನ್ಯವಾಗಿ ನಾವು ಸಹ ಯಾವುದೇ ವಸ್ತುಗಳನ್ನು ಖರೀದಿಸುವಾಗ ಅಥವಾ ಮಾರಾಟ ಮಾಡುವಾಗ ಒಳ್ಳೆಯ ದಿನ, ಒಳ್ಳೆಯ ಸಮಯ ಹಾಗೂ ಶುಭ ಮುಹೂರ್ತವನ್ನು ನೋಡುವುದು ವಾಡಿಕೆ. ಅಂತೆಯೇ, ಈ ರೀತಿ ಶುಭಘಳಿಗೆಯಲ್ಲಿ ಖರೀದಿಸಿದರೆ, ಮಾರಾಟ ಮಾಡಿದರೆ ನಮಗೆ ಹಾಗೂ ಖರೀದಿಸಿದ ವಸ್ತುವಿಗೂ ಯಾವುದೇ ಸಮಸ್ಯೆ ಆಗುವುದಿಲ್ಲ, ಅದು ದೀರ್ಘ ಕಾಲ ನಮ್ಮೊಂದಿಗೆ ಇರುತ್ತದೆ ಎಂದು ನಂಬಲಾಗುತ್ತದೆ.

ಅದರಲ್ಲೂ ವಾಹನಗಳ ಖರೀದಿ ಅಥವಾ ಮಾರಾಟ ಎಂದರೆ ಸ್ವಲ್ಪ ಜಾಗ್ರತೆ ಹೆಚ್ಚೇ ಇರುತ್ತದೆ. ಏಕೆಂದರೆ ವಾಹನಗಳನ್ನು ಖರೀದಿಸಿದಾಗ ಅಥವಾ ಮಾರಾಟ ಮಾಡಿದಾಗ ನಮಗೆ ಅದೃಷ್ಟ ತರಬೇಕು, ನಮ್ಮನ್ನು ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳಬೇಕು ಹಾಗೂ ಕಾಪಾಡಬೇಕು ಎಂದು ಎಲ್ಲರೂ ಅಪೇಕ್ಷಿಸುತ್ತಾರೆ.

ನೀವು ಸಹ , ನವೆಂಬರ್ ತಿಂಗಳಲ್ಲಿ ನಿಮ್ಮ ವಾಹನವನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಯೋಜಿಸುತ್ತಿದ್ದರೆ, ಶುಭ ದಿನಾಂಕಗಳನ್ನು ಪರಿಶೀಲಿಸುವುದು ಉತ್ತಮ. ನೀವು ಕಾರು, ಸ್ಕೂಟರ್, ಬೈಕು ಅಥವಾ ಟ್ರಕ್ ಹೀಗೆ ಯಾವುದೇ ವಾಹನಗಳನ್ನು ಖರೀದಿಸಿದರೂ ಅಥವಾ ಮಾರಾಟ ಮಾಡಿದರು ಮುಹೂರ್ತ ಮತ್ತು ಶುಭ ಸಮಯವನ್ನು ನೋಡಿಕೊಂಡು ಮುಂದುವರೆಯಿರಿ, ಇದರಿಂದ ನಿಮಗೆ ಒಳಿತಾಗಲಿದೆ.

ನವೆಂಬರ್ ಮಾಸದಲ್ಲಿ ಯಾವ ದಿನದಲ್ಲಿ ಹಾಗೂ ಯಾವ ಶುಭ ಘಳಿಗೆಯಲ್ಲಿ ವಾಹನ ಖರೀದಿಸಿದರೆ ನಿಮಗೆ ಶುಭ ತಂದುಕೊಡಲಿದೆ ಎಂದು ತಿಳಿಯಲು ಮುಂದೆ ಲೇಖನ ಓದಿ.

ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನಿಮ್ಮ ನೆಚ್ಚಿನ ವಾಹನವನ್ನು ಈ ಶುಭಮುಹೂರ್ತದಲ್ಲಿ ಖರೀದಿಸಿ.

ನೆಚ್ಚಿನ ವಾಹನವನ್ನು ಈ ಶುಭಮುಹೂರ್ತದಲ್ಲಿ ಖರೀದಿಸಿ

ನೆಚ್ಚಿನ ವಾಹನವನ್ನು ಈ ಶುಭಮುಹೂರ್ತದಲ್ಲಿ ಖರೀದಿಸಿ

ನವೆಂಬರ್ 4 2019

ನವೆಂಬರ್ 4 - ಸೋಮವಾರದ ಮುಹೂರ್ತ: ಬೆಳಿಗ್ಗೆ 6:35ರಿಂದ ಮರುದಿನ ನ.5ರ ಮುಂಜಾನೆ 4:57ರವರೆಗೆ.

ನಕ್ಷತ್ರ: ಶ್ರವಣ, ಧನಿಷ್ಟ

ತಿಥಿ: ಅಷ್ಟಮಿ

ನವೆಂಬರ್ 6 2019

ನವೆಂಬರ್ 6- ಬುಧವಾರದ ಮುಹೂರ್ತ: ಬೆಳಿಗ್ಗೆ 7:21 ರಿಂದ ಮರುದಿನ ನ.7ರ ಬೆಳಿಗ್ಗೆ 6:37ರವರೆಗೆ.

ನಕ್ಷತ್ರ: ಶತಭಿಷಾ

ತಿಥಿ: ದಶಮಿ

ನೆಚ್ಚಿನ ವಾಹನವನ್ನು ಈ ಶುಭಮುಹೂರ್ತದಲ್ಲಿ ಖರೀದಿಸಿ

ನೆಚ್ಚಿನ ವಾಹನವನ್ನು ಈ ಶುಭಮುಹೂರ್ತದಲ್ಲಿ ಖರೀದಿಸಿ

ನವೆಂಬರ್ 10 2019

ನವೆಂಬರ್ 10- ಭಾನುವಾರದ ಮುಹೂರ್ತ: ಬೆಳಿಗ್ಗೆ 06:39ರಿಂದ ಸಂಜೆ 4:33ರವರೆಗೆ.

ನಕ್ಷತ್ರ: ರೇವತಿ

ತಿಥಿ: ತ್ರಯೋದಶಿ

ನವೆಂಬರ್ 14 2019

ನವೆಂಬರ್ 14- ಗುರುವಾರದ ಮುಹೂರ್ತ: ಸಂಜೆ 7:55 ರಿಂದ ಮರುದಿನ ನ.15ರ ಬೆಳಿಗ್ಗೆ 6:43ರವರೆಗೆ.

ನಕ್ಷತ್ರ: ರೋಹಿಣಿ, ಮೃಗಶಿರ್ಷ

ತಿಥಿ: ತೃತೀಯ

ನೆಚ್ಚಿನ ವಾಹನವನ್ನು ಈ ಶುಭಮುಹೂರ್ತದಲ್ಲಿ ಖರೀದಿಸಿ

ನೆಚ್ಚಿನ ವಾಹನವನ್ನು ಈ ಶುಭಮುಹೂರ್ತದಲ್ಲಿ ಖರೀದಿಸಿ

ನವೆಂಬರ್ 15 2019

ನವೆಂಬರ್ 15- ಶುಕ್ರವಾರದ ಮುಹೂರ್ತ: ಬೆಳಿಗ್ಗೆ 6:43ರಿಂದ ಸಂಜೆ 7:46ರವರೆಗೆ.

ನಕ್ಷತ್ರ: ಮೃಗಶಿರ್ಷ

ತಿಥಿ: ತ್ರಿತಿಯ

ನವೆಂಬರ್ 17 2019

ನವೆಂಬರ್ 17- ಭಾನುವಾರದ ಮುಹೂರ್ತ: ಬೆಳಿಗ್ಗೆ 6:45ರಿಂದ ಮರುದಿನ ನ.18ರ ಬೆಳಿಗ್ಗೆ 6:46ರವೆರೆಗೆ.

ನಕ್ಷತ್ರ: ಪುನರ್ವಸು, ಪುಷ್ಯ

ತಿಥಿ: ಪಂಚಮಿ, ಶಾಂತಿ

ನೆಚ್ಚಿನ ವಾಹನವನ್ನು ಈ ಶುಭಮುಹೂರ್ತದಲ್ಲಿ ಖರೀದಿಸಿ

ನೆಚ್ಚಿನ ವಾಹನವನ್ನು ಈ ಶುಭಮುಹೂರ್ತದಲ್ಲಿ ಖರೀದಿಸಿ

ನವೆಂಬರ್ 18 2019

ನವೆಂಬರ್ 18- ಸೋಮವಾರದ ಮುಹೂರ್ತ: ಬೆಳಿಗ್ಗೆ 6:46ರಿಂದ ಸಂಜೆ 5:10ರವರೆಗೆ.

ನಕ್ಷತ್ರ: ಪುಷ್ಯ

ತಿಥಿ: ಶಕ್ತಿ

ನವೆಂಬರ್ 22 2019

ನವೆಂಬರ್ 22- ಶುಕ್ರವಾರದ ಮುಹೂರ್ತ: ಬೆಳಿಗ್ಗೆ 4:42 ರಿಂದ ಮರುದಿನ ನ.23ರ ಬೆಳಿಗ್ಗೆ 6:24ರವರೆಗೆ

ನಕ್ಷತ್ರ: ಹಸ್ತ

ತಿಥಿ: ಏಕಾದಶಿ

ನೆಚ್ಚಿನ ವಾಹನವನ್ನು ಈ ಶುಭಮುಹೂರ್ತದಲ್ಲಿ ಖರೀದಿಸಿ

ನೆಚ್ಚಿನ ವಾಹನವನ್ನು ಈ ಶುಭಮುಹೂರ್ತದಲ್ಲಿ ಖರೀದಿಸಿ

ನವೆಂಬರ್ 24 2019

ನವೆಂಬರ್ 24- ಭಾನುವಾರದ ಮುಹೂರ್ತ: ಬೆಳಿಗ್ಗೆ 6:50ರಿಂದ ಮರುದಿನ ನ.25ರ ಮುಂಜಾನೆ 1:06ರವರೆಗೆ.

ನಕ್ಷತ್ರ: ಚಿತ್ರ, ಸ್ವಾತಿ

ತಿಥಿ: ತ್ರಯೋದಶಿ

ಈ ದಿನ ವಾಹನಗಳನ್ನು ಖರೀದಿಸಲೇಬೇಡಿ

ನವೆಂಬರ್ 3 ಮತ್ತು 7ರಂದು ವಾಹನ ಖರೀದಿ ಮಾಡದೇ ಇರುವುದು ಒಳಿತು. ಇಂದು ವಾಹನ ಖರೀದಿಗೆ ಶುಭ ಮುಹೂರ್ತ ಇದ್ದರೂ ತೀರಾ ಕಡಿಮೆ ಅವಧಿಯ ಶುಭ ಮುಹೂರ್ತ ಇರುವುದರಿಂದ ಆದಷ್ಟು ವಾಹನ ಖರೀದಿಗೆ ಮುಂದಾಗಬೇಡಿ.

English summary

Auspicious Dates For Buying And Selling Vehicles on November 2019

If you are planning to either buy or sell your vehicle in the month of November, then it is better to check out the auspicious dates. No matter what automobiles you buy, be it a car, scooter, bike or a truck, make sure you see the muhurat and the shubh time. Purchasing anything on an auspicious day and time has been given great significance in India and has been followed by people in this country for ages.
Story first published: Saturday, November 2, 2019, 19:00 [IST]
X