For Quick Alerts
ALLOW NOTIFICATIONS  
For Daily Alerts

ಉತ್ತಮ ವೈವಾಹಿಕ ಜೀವನಕ್ಕೆ ಯಾವ ನಕ್ಷತ್ರಕ್ಕೆ ಯಾವ ನಕ್ಷತ್ರ ಹೆಚ್ಚು ಹೊಂದಾಣಿಕೆ ಆಗುತ್ತದೆ

|

ಎಲ್ಲರ ಜೀವನದಲ್ಲೂ ವಿವಾಹ ಎಂಬುದು ಬಹಳ ಪ್ರಮುಖವಾದ ಘಟ್ಟ. ಉತ್ತಮ ಜೀವನ ಸಂಗಾತಿ ನಮ್ಮವರಾದರೆ ಇಡೀ ಬದುಕೇ ನೆಮ್ಮದಿ, ಸುಖ, ಶಾಂತಿಯಿಂದ ಇರುತ್ತದೆ. ಆದರೆ ವಿವಾಹಕ್ಕೂ ಮುನ್ನವೇ ಇವರು ನಮಗೆ ಹೊಂದಾಣಿಕೆ ಆಗುತ್ತಾರೆ ಇಲ್ಲವೇ ಎಂಬುದನ್ನು ನಿರ್ಣಯಿಸುವುದು ಹೇಗೆ? ಇದಕ್ಕೆಂದೇ ನಮ್ಮ ಹಿರಿಯರು ಜ್ಯೋತಿಶಾಸ್ತ್ರದ ಮೊರೆ ಹೋಗಿದ್ದಾರೆ. ವಧು-ವರರ ಜನ್ಮ ನಕ್ಷತ್ರವನ್ನು ಆಧರಿಸಿ ಹೊಂದಾಣಿಕೆ ಆಗುತ್ತದೆ ಇಲ್ಲವೇ ಎಂಬುದನ್ನು ಹೇಳುತ್ತಾರೆ.

1. ಏನಿದು ನಕ್ಷತ್ರ ಹೊಂದಾಣಿಕೆ?

1. ಏನಿದು ನಕ್ಷತ್ರ ಹೊಂದಾಣಿಕೆ?

ಮದುವೆಯ ಸಂದರ್ಭದಲ್ಲಿ ನಕ್ಷತ್ರದ ಹೊಂದಾಣಿಕೆಯು ಬಹಳ ಮುಖ್ಯವಾದ ಪಾತ್ರವಹಿಸುತ್ತದೆ. ನಕ್ಷತ್ರ ಹೊಂದಾಣಿಕೆಯ ನಂತರವಷ್ಟೇ ವಿವಾಹ ಪ್ರಸ್ತಾವದ ಮುಂದಿನ ಹಂತಕ್ಕೆ ಮುಂದುವರಿಯುತ್ತದೆ. ಮದುವೆ ಸಂದರ್ಭದಲ್ಲಿ ನಕ್ಷತ್ರಗಳ ಹೊಂದಾಣಿಕೆಯು ಪ್ರಾಚೀನ ಕಾಲದಿಂದಲೂ ಹಿಂದೂಗಳು ಪಾಲಿಸಿಕೊಂಡು ಬಂದ ಸಂಪ್ರದಾಯವಾಗಿದೆ. ಪ್ರತಿ ನಕ್ಷತ್ರದಿಂದ ನಕ್ಷತ್ರಕ್ಕೆ ಗುಣಲಕ್ಷಣಗಳು ಅನನ್ಯವಾಗಿರುವುದರಿಂದ, ಮದುವೆಗೆ ನಕ್ಷತ್ರದ ಹೊಂದಾಣಿಕೆಯನ್ನು ಜಾತಕಕ್ಕೆ ಹೊಂದಿಸಲು ಮತ್ತು ದಂಪತಿಗಳ ಹೊಂದಾಣಿಕೆಯನ್ನು ಪರೀಕ್ಷಿಸಲು ಬಳಸಲಾಗುತ್ತದೆ. ರಾಶಿ, ಸೂರ್ಯ ಚಿಹ್ನೆ ಮತ್ತು ಲಗ್ನದ ಹೊರತಾಗಿ, ನಕ್ಷತ್ರವನ್ನು ಆಧರಿಸಿದ ವಿವಾಹ ಹೊಂದಾಣಿಕೆಗೆ ಪ್ರಾಮುಖ್ಯತೆ ನೀಡಲಾಗಿದೆ.

ಇದಲ್ಲದೆ, ಉತ್ತಮ ಹೊಂದಾಣಿಕೆಯ ನಕ್ಷತ್ರ ಪ್ರೀತಿಯ ಹೊಂದಾಣಿಕೆಯು ಆಳವಾದ ಮತ್ತು ಹೆಚ್ಚು ತೃಪ್ತಿಕರ ಸಂಬಂಧಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ನಕ್ಷತ್ರದ ಆಧಾರದ ಮೇಲೆ ಉತ್ತಮ ವಿವಾಹ ಹೊಂದಾಣಿಕೆಯನ್ನು ಹೊಂದಿರುವ ದಂಪತಿಗಳು ಸಾಮಾನ್ಯವಾಗಿ ಉತ್ತಮ ತಿಳುವಳಿಕೆ, ಬಲವಾದ ಬದ್ಧತೆ ಮತ್ತು ಪರಸ್ಪರ ಬಾಂಧವ್ಯವನ್ನು ಆನಂದಿಸುತ್ತಾರೆ. ಸರಳವಾಗಿ ಹೇಳುವುದಾದರೆ, ವಿವಾಹ ಹೊಂದಾಣಿಕೆಯ ಸಮಯದಲ್ಲಿ ನಕ್ಷತ್ರದ ಹೊಂದಾಣಿಕೆಯು ವಿವಾಹದ ಅನ್ಯೋನ್ಯತೆ ಮತ್ತು ದೀರ್ಘಾಯುಷ್ಯದ ಸಂಕೇತ ಎನ್ನಬಹುದು.

2. ವಿವಾಹಕ್ಕೆ ನಕ್ಷತ್ರಗಳ ಹೊಂದಾಣಿಕೆ ಕನಿಷ್ಠ ಎಷ್ಟಿರಬೇಕು?

2. ವಿವಾಹಕ್ಕೆ ನಕ್ಷತ್ರಗಳ ಹೊಂದಾಣಿಕೆ ಕನಿಷ್ಠ ಎಷ್ಟಿರಬೇಕು?

ದಂಪತಿಗಳ ನಡುವಿನ ಉತ್ತಮ ಹೊಂದಾಣಿಕೆಗೆ ನಕ್ಷತ್ರಗಳ ಹೊಂದಾಣಿಕೆಯ ಒಕ್ಕೂಟಕ್ಕೆ ಕನಿಷ್ಠ 18 ಧನಾತ್ಮಕ ಅಂಶಗಳ ಅಗತ್ಯವಿದೆ. 18 ರಿಂದ 24 ಅಂಶಗಳು ಹೊಂದಾಣಿಕೆಯಾದರೆ, ಮದುವೆಗೆ ಅನುಮೋದಿಸಬಹುದು. 25 ರಿಂದ 32 ಅಂಶಗಳ ಹೊಂದಾಣಿಕೆಯನ್ನು ಉತ್ತಮ ಜೋಡಿ ಎಂದು ಪರಿಗಣಿಸಲಾಗಿದೆ, 33 ಮತ್ತು ಹೆಚ್ಚಿನ ಅಂಶಗಳು ಹೊಂದಿಕೆಯಾದರೆ ಅಂತಹ ಜೋಡಿಯನ್ನು ಅತ್ಯುತ್ತಮ ಜೋಡಿ, ಈ ಭೂಮಿಯಲ್ಲಿ ಅತೀ ಹೆಚ್ಚು ಹೊಂದಾಣಿಕೆ ಆಗಿ ಇರುವ, ಉತ್ತಮ ದಾಂಪತ್ಯ, ಅರ್ಥೈಸಿಕೊಳ್ಳುವುದು, ಮಾದರಿ ಜೋಡಿಯಾಗಿ ಇರುತ್ತಾರೆ ಎಂದು ನಂಬಲಾಗಿದೆ. ಒಟ್ಟಾರೆ ವಧುವಿನ ಜನ್ಮ ನಕ್ಷತ್ರದ ಗುಣಲಕ್ಷಣಗಳು ಹೆಚ್ಚಾಗಿ ವರನ ನಕ್ಷತ್ರದ ಗುಣಲಕ್ಷಣಗಳೊಂದಿಗೆ ಹೊಂದಿಕೆಯಾದರೆ ಅದನ್ನು ಉತ್ತಮ ಅಥವಾ ಮದುವೆಗೆ ಅತ್ಯುತ್ತಮ ನಕ್ಷತ್ರ ಸಂಯೋಜನೆ ಎಂದು ಹೇಳಲಾಗುತ್ತದೆ.

ಜನ್ಮ ನಕ್ಷತ್ರಗಳ ಪ್ರಕಾರ ಮದುವೆಗೆ ಅತ್ಯುತ್ತಮ ನಕ್ಷತ್ರ ಸಂಯೋಜನೆ ಯಾವುದು ಇಲ್ಲಿದೆ ಪಟ್ಟಿ:

ಅಶ್ವಿನಿ ನಕ್ಷತ್ರಕ್ಕೆ ಹೊಂದಾಣಿಕೆ

ಅಶ್ವಿನಿ ನಕ್ಷತ್ರಕ್ಕೆ ಹೊಂದಾಣಿಕೆ

ಅಶ್ವಿನಿ, ಭರಣಿ, ರೋಹಿಣಿ, ಪುಷ್ಯ, ಸ್ವಾತಿ, ಆಶ್ಲೇಷ, ಅನುರಾಧ, ಪೂರ್ವ ಫಲ್ಗುಣಿ, ಉತ್ತರ ಫಲ್ಗುಣಿ, ಚಿತ್ರ, ಹಸ್ತ, ಧನಿಷ್ಟ, ಆರ್ದ್ರ

ಭರಣಿ ನಕ್ಷತ್ರಕ್ಕೆ ಹೊಂದಾಣಿಕೆ

ಭರಣಿ ನಕ್ಷತ್ರಕ್ಕೆ ಹೊಂದಾಣಿಕೆ

ಅಶ್ವಿನಿ, ಕೃತ್ತಿಕಾ, ಪುನರ್ವಸು, ಆಶ್ಲೇಷ, ಮಾಘ, ಉತ್ತರ ಆಷಾಢ, ಚಿತ್ರ, ಸ್ವಾತಿ, ಶ್ರವಣ, ಶತಭಿಷ

ಕೃತ್ತಿಕಾ ನಕ್ಷತ್ರಕ್ಕೆ ಹೊಂದಾಣಿಕೆ

ಕೃತ್ತಿಕಾ ನಕ್ಷತ್ರಕ್ಕೆ ಹೊಂದಾಣಿಕೆ

ಅಶ್ವಿನಿ, ಭರಣಿ, ರೋಹಿಣಿ, ಶ್ರವಣ, ಪುಷ್ಯ, ಮಾಘ, ಪೂರ್ವ ಫಲ್ಗುಣಿ, ಚಿತ್ರ, ಸ್ವಾತಿ, ಅನುರಾಧ, ಉತ್ತರ ಫಲ್ಗುಣಿ, ಶ್ರವಣ, ಧನಿಷ್ಠ

ರೋಹಿಣಿ ನಕ್ಷತ್ರಕ್ಕೆ ಹೊಂದಾಣಿಕೆ

ರೋಹಿಣಿ ನಕ್ಷತ್ರಕ್ಕೆ ಹೊಂದಾಣಿಕೆ

ರೋಹಿಣಿ, ಮೃಗಶಿರ, ಪುನರ್ವಸು, ಆಶ್ಲೇಷ, ಪೂರ್ವ ಫಲ್ಗುಣಿ, ಉತ್ತರ ಆಷಾಢ, ಚಿತ್ರ, ವಿಶಾಖ, ಧನಿಷ್ಟ,

ಮೃಗಶಿರ ನಕ್ಷತ್ರಕ್ಕೆ ಹೊಂದಾಣಿಕೆ

ಮೃಗಶಿರ ನಕ್ಷತ್ರಕ್ಕೆ ಹೊಂದಾಣಿಕೆ

ರೋಹಿಣಿ, ಮೃಗಶಿರ, ಆರ್ದ್ರ, ಪುನರ್ವಸು, ಪೂರ್ವ ಫಲ್ಗುಣಿ, ಹಸ್ತ, ಚಿತ್ರ, ವಿಶಾಖ, ಜ್ಯೇಷ್ಠ, ಶತಭಿಷ

ಆರ್ದ್ರ ನಕ್ಷತ್ರಕ್ಕೆ ಹೊಂದಾಣಿಕೆ

ಆರ್ದ್ರ ನಕ್ಷತ್ರಕ್ಕೆ ಹೊಂದಾಣಿಕೆ

ರೋಹಿಣಿ, ಮೃಗಶಿರ, ಆರ್ದ್ರ, ಪುನರ್ವಸು, ಪೂರ್ವ ಫಲ್ಗುಣಿ, ಹಸ್ತ, ಚಿತ್ರ, ವಿಶಾಖ, ಜ್ಯೇಷ್ಠ, ರೇವತಿ, ಪೂರ್ವ ಭದ್ರ

ಪುನರ್ವಸು ನಕ್ಷತ್ರಕ್ಕೆ ಹೊಂದಾಣಿಕೆ

ಪುನರ್ವಸು ನಕ್ಷತ್ರಕ್ಕೆ ಹೊಂದಾಣಿಕೆ

ಅಶ್ವಿನಿ, ಕೃತ್ತಿಕಾ, ರೋಹಿಣಿ, ಮೃಗಶಿರ, ಆರ್ದ್ರ, ಪುನರ್ವಸು, ಪುಷ್ಯ, ಮಾಘ, ಉತ್ತರ ಫಲ್ಗುಣಿ, ಚಿತ್ರ, ಸ್ವಾತಿ, ಅನುರಾಧ, ಮೂಲ, ಉತ್ತರ ಆಷಾಢ, ಶತಭಿಷ

ಪುಷ್ಯ ನಕ್ಷತ್ರಕ್ಕೆ ಹೊಂದಾಣಿಕೆ

ಪುಷ್ಯ ನಕ್ಷತ್ರಕ್ಕೆ ಹೊಂದಾಣಿಕೆ

ಆರ್ದ್ರ, ಪುಷ್ಯ, ಆಶ್ಲೇಷ, ಪೂರ್ವ ಫಲ್ಗುಣಿ, ಹಸ್ತ, ಸ್ವಾತಿ, ವಿಶಾಖ, ಪೂರ್ವ ಆಷಾಢ, ಶ್ರವಣ, ರೇವತಿ

ಆಶ್ಲೇಷ ನಕ್ಷತ್ರಕ್ಕೆ ಹೊಂದಾಣಿಕೆ

ಆಶ್ಲೇಷ ನಕ್ಷತ್ರಕ್ಕೆ ಹೊಂದಾಣಿಕೆ

ಅಶ್ವಿನಿ, ಮಾಘ, ಉತ್ತರ ಫಲ್ಗುಣಿ, ವಿಶಾಖ, ಮೂಲ, ಉತ್ತರ ಭದ್ರ ಧನಿಷ್ಟ, ಉತ್ತರ ಆಷಾಢ

ಮಾಘ ನಕ್ಷತ್ರಕ್ಕೆ ಹೊಂದಾಣಿಕೆ

ಮಾಘ ನಕ್ಷತ್ರಕ್ಕೆ ಹೊಂದಾಣಿಕೆ

ಭರಣಿ, ಕೃತಿಕಾ, ರೋಹಿಣಿ, ಆರ್ದ್ರ, ಪುನರ್ವಸು, ಆಶ್ಲೇಷ, ಮಾಘ, ಪೂರ್ವ ಫಲ್ಗುಣಿ, ಹಸ್ತ, ಸ್ವಾತಿ, ಅನುರಾಧ, ಜ್ಯೇಷ್ಠ, ಶ್ರವಣ, ಶತಭಿಷ

ಪೂರ್ವ ಫಲ್ಗುಣಿ ನಕ್ಷತ್ರಕ್ಕೆ ಹೊಂದಾಣಿಕೆ

ಪೂರ್ವ ಫಲ್ಗುಣಿ ನಕ್ಷತ್ರಕ್ಕೆ ಹೊಂದಾಣಿಕೆ

ಅಶ್ವಿನಿ, ಕೃತ್ತಿಕಾ, ಮೃಗಶಿರ, ಪುನರ್ವಸು, ಮಾಘ, ಉತ್ತರ ಆಷಾಢ, ಶತಭಿಷ, ಜ್ಯೇಷ್ಠ, ಮೂಲ, ಧನಿಷ್ಟ

ಉತ್ತರ ಫಲ್ಗುಣಿ ನಕ್ಷತ್ರಕ್ಕೆ ಹೊಂದಾಣಿಕೆ

ಉತ್ತರ ಫಲ್ಗುಣಿ ನಕ್ಷತ್ರಕ್ಕೆ ಹೊಂದಾಣಿಕೆ

ಅಶ್ವಿನಿ, ಭರಣಿ, ರೋಹಿಣಿ, ಆರ್ದ್ರ, ಹಸ್ತ, ಸ್ವಾತಿ, ಅನುರಾಧ, ಪೂರ್ವ ಆಷಾಢ, ಶ್ರವಣ, ಶತಭಿಷ, ಉತ್ತರ ಭದ್ರ

ಹಸ್ತ ನಕ್ಷತ್ರಕ್ಕೆ ಹೊಂದಾಣಿಕೆ

ಹಸ್ತ ನಕ್ಷತ್ರಕ್ಕೆ ಹೊಂದಾಣಿಕೆ

ಮೃಗಶಿರ, ಪುನರ್ವಸು, ಹಸ್ತ, ಚಿತ್ರ, ವಿಶಾಖ, ಜ್ಯೇಷ್ಠ, ಪೂರ್ವ ಆಷಾಢ, ಉತ್ತರ ಆಷಾಢ, ಧನಿಷ್ಠ

ಚಿತ್ರ ನಕ್ಷತ್ರಕ್ಕೆ ಹೊಂದಾಣಿಕೆ

ಚಿತ್ರ ನಕ್ಷತ್ರಕ್ಕೆ ಹೊಂದಾಣಿಕೆ

ಚಿತ್ರ, ರೋಹಿಣಿ, ಆರ್ದ್ರ, ಉತ್ತರ ಫಲ್ಗುಣಿ, ಹಸ್ತ, ಸ್ವಾತಿ, ಅನುರಾಧ, ಮೂಲ, ಶ್ರವಣ, ಶತಭಿಷ, ಉತ್ತರ ಭದ್ರ

ಸ್ವಾತಿ ನಕ್ಷತ್ರಕ್ಕೆ ಹೊಂದಾಣಿಕೆ

ಸ್ವಾತಿ ನಕ್ಷತ್ರಕ್ಕೆ ಹೊಂದಾಣಿಕೆ

ಭರಣಿ, ಮೃಗಶಿರ, ಪುನರ್ವಸು, ಚಿತ್ರ, ಸ್ವಾತಿ, ವಿಶಾಖ, ಜ್ಯೇಷ್ಠ, ಪೂರ್ವ ಆಷಾಢ, ಪೂರ್ವ ಭದ್ರ, ರೇವತಿ

ವಿಶಾಖ ನಕ್ಷತ್ರಕ್ಕೆ ಹೊಂದಾಣಿಕೆ

ವಿಶಾಖ ನಕ್ಷತ್ರಕ್ಕೆ ಹೊಂದಾಣಿಕೆ

ಅಶ್ವಿನಿ, ಭರಣಿ, ರೋಹಿಣಿ, ಮೃಗಶಿರ, ಆರ್ದ್ರ, ಪುಷ್ಯ, ಮಾಘ, ಅನುರಾಧ, ಮೂಲ, ಧನಿಷ್ಟ, ಶತಭಿಷ, ಉತ್ತರ ಭದ್ರ

ಅನುರಾಧಾ ನಕ್ಷತ್ರಕ್ಕೆ ಹೊಂದಾಣಿಕೆ

ಅನುರಾಧಾ ನಕ್ಷತ್ರಕ್ಕೆ ಹೊಂದಾಣಿಕೆ

ಭರಣಿ, ರೋಹಿಣಿ, ಆರ್ದ್ರ, ಪುನರ್ವಸು, ಆಶ್ಲೇಷ, ಪೂರ್ವ ಫಲ್ಗುಣಿ, ಅನುರಾಧ, ಜ್ಯೇಷ್ಠ, ಪೂರ್ವ ಆಷಾಢ, ಶ್ರವಣ, ಶತಭಿಷ, ಪೂರ್ವ ಭದ್ರ, ರೇವತಿ

ಜ್ಯೇಷ್ಠ ನಕ್ಷತ್ರಕ್ಕೆ ಹೊಂದಾಣಿಕೆ

ಜ್ಯೇಷ್ಠ ನಕ್ಷತ್ರಕ್ಕೆ ಹೊಂದಾಣಿಕೆ

ಕೃತ್ತಿಕಾ, ಉತ್ತರ ಫಲ್ಗುಣಿ, ಧನಿಷ್ಟ, ಪೂರ್ವ ಭದ್ರ, ಉತ್ತರ ಭದ್ರ, ರೋಹಿಣಿ, ಮೃಗಶಿರ, ಪುನರ್ವಸು

ಮೂಲ ನಕ್ಷತ್ರಕ್ಕೆ ಹೊಂದಾಣಿಕೆ

ಮೂಲ ನಕ್ಷತ್ರಕ್ಕೆ ಹೊಂದಾಣಿಕೆ

ಭರಣಿ, ಆರ್ದ್ರ, ಪೂರ್ವ ಫಲ್ಗುಣಿ, ಹಸ್ತ, ಪೂರ್ವ ಆಷಾಢ, ಶ್ರವಣ, ಶತಭಿಷ

ಪೂರ್ವ ಆಷಾಢ ನಕ್ಷತ್ರಕ್ಕೆ ಹೊಂದಾಣಿಕೆ

ಪೂರ್ವ ಆಷಾಢ ನಕ್ಷತ್ರಕ್ಕೆ ಹೊಂದಾಣಿಕೆ

ಉತ್ತರ ಆಷಾಢ, ಚಿತ್ರ, ವಿಶಾಖ, ಉತ್ತರ ಫಲ್ಗುಣಿ, ಧನಿಷ್ಟ, ಪೂರ್ವ ಭದ್ರ, ರೇವತಿ

ಉತ್ತರ ಆಷಾಢ ನಕ್ಷತ್ರಕ್ಕೆ ಹೊಂದಾಣಿಕೆ

ಉತ್ತರ ಆಷಾಢ ನಕ್ಷತ್ರಕ್ಕೆ ಹೊಂದಾಣಿಕೆ

ಅಶ್ವಿನಿ, ರೋಹಿಣಿ, ಆರ್ದ್ರ, ಪುಷ್ಯ, ಮಾಘ, ಪೂರ್ವ ಫಲ್ಗುಣಿ, ಹಸ್ತ, ಸ್ವಾತಿ, ಅನುರಾಧ, ಮೂಲ, ಶ್ರವಣ, ಶತಭಿಷ

ಶ್ರವಣ ನಕ್ಷತ್ರಕ್ಕೆ ಹೊಂದಾಣಿಕೆ

ಶ್ರವಣ ನಕ್ಷತ್ರಕ್ಕೆ ಹೊಂದಾಣಿಕೆ

ಭರಣಿ, ಕೃತ್ತಿಕಾ, ಮೃಗಶಿರ, ಪುನರ್ವಸು, ಆಶ್ಲೇಷ, ಪೂರ್ವ ಫಲ್ಗುಣಿ, ಚಿತ್ರ, ವಿಶಾಖ, ಜ್ಯೇಷ್ಠ, ಉತ್ತರ ಆಷಾಢ, ಶ್ರವಣ, ಧನಿಷ್ಟ, ಪೂರ್ವ ಭದ್ರ, ರೇವತಿ

ಧನಿಷ್ಟ ನಕ್ಷತ್ರಕ್ಕೆ ಹೊಂದಾಣಿಕೆ

ಧನಿಷ್ಟ ನಕ್ಷತ್ರಕ್ಕೆ ಹೊಂದಾಣಿಕೆ

ಅಶ್ವಿನಿ, ಕೃತಿಕಾ, ರೋಹಿಣಿ, ಆರ್ದ್ರ, ಪುಷ್ಯ, ಮಾಘ, ಉತ್ತರ ಆಷಾಢ, ಹಸ್ತ, ಸ್ವಾತಿ, ಅನುರಾಧ, ಮೂಲ, ಉತ್ತರ ಫಲ್ಗುಣಿ, ಶ್ರವಣ, ಧನಿಷ್ಟ, ಪೂರ್ವ ಭದ್ರ, ರೇವತಿ

ಶತಭಿಷ ನಕ್ಷತ್ರಕ್ಕೆ ಹೊಂದಾಣಿಕೆ

ಶತಭಿಷ ನಕ್ಷತ್ರಕ್ಕೆ ಹೊಂದಾಣಿಕೆ

ಭರಣಿ, ಮೃಗಶಿರ, ಪುನರ್ವಸು, ಮಾಘ, ಉತ್ತರ ಫಲ್ಗುಣಿ, ಚಿತ್ರ, ಪೂರ್ವ ಫಲ್ಗುಣಿ, ವಿಶಾಖ, ಜ್ಯೇಷ್ಠ, ಪೂರ್ವ ಆಷಾಢ, ಧನಿಷ್ಟ, ಪೂರ್ವ ಭದ್ರ, ರೇವತಿ

ಪೂರ್ವ ಭದ್ರ ನಕ್ಷತ್ರಕ್ಕೆ ಹೊಂದಾಣಿಕೆ

ಪೂರ್ವ ಭದ್ರ ನಕ್ಷತ್ರಕ್ಕೆ ಹೊಂದಾಣಿಕೆ

ಅಶ್ವಿನಿ, ಮೃಗಶಿರ, ಆರ್ದ್ರ, ಪುಷ್ಯ, ಮಾಘ, ಉತ್ತರ ಫಲ್ಗುಣಿ, ಚಿತ್ರ, ಸ್ವಾತಿ, ಅನುರಾಧ, ಮೂಲ

ಉತ್ತರ ಭದ್ರ ನಕ್ಷತ್ರಕ್ಕೆ ಹೊಂದಾಣಿಕೆ

ಉತ್ತರ ಭದ್ರ ನಕ್ಷತ್ರಕ್ಕೆ ಹೊಂದಾಣಿಕೆ

ಭರಣಿ, ರೋಹಿಣಿ, ಆರ್ದ್ರ, ಪುನರ್ವಸು, ಮಾಘ, ಪೂರ್ವ ಫಲ್ಗುಣಿ, ಹಸ್ತ, ಸ್ವಾತಿ, ವಿಶಾಖ, ಜ್ಯೇಷ್ಠ, ಶ್ರವಣ, ಪೂರ್ವ ಆಷಾಢ, ರೇವತಿ

ರೇವತಿ ನಕ್ಷತ್ರಕ್ಕೆ ಹೊಂದಾಣಿಕೆ

ರೇವತಿ ನಕ್ಷತ್ರಕ್ಕೆ ಹೊಂದಾಣಿಕೆ

ಅಶ್ವಿನಿ, ಕೃತ್ತಿಕಾ, ಮೃಗಶಿರ, ಪುನರ್ವಸು, ಪುಷ್ಯ, ಮಾಘ, ಪೂರ್ವ ಫಲ್ಗುಣಿ, ಉತ್ತರ ಫಲ್ಗುಣಿ, ಹಸ್ತ, ಸ್ವಾತಿ, ಅನುರಾಧ, ಮೂಲ

English summary

27 Nakshatra Compatibility - Best Nakshatra Match for Marriage in Kannada

Here we are discussing about 27 Nakshatra Compatibility - Best Nakshatra Match for Marriage in Kannada. Read more.
Story first published: Thursday, August 12, 2021, 11:18 [IST]
X
Desktop Bottom Promotion