For Quick Alerts
ALLOW NOTIFICATIONS  
For Daily Alerts

2019ರ ಮಕರ ಸಂಕ್ರಾಂತಿ: ಮೂರು ರಾಶಿಯವರು ಕಠಿಣ ಸಮಯವನ್ನು ಎದುರಿಸಬೇಕಾಗಬಹುದು!

|

ಮಕರ ಸಂಕ್ರಾಂತಿ ಎಂದರೆ ಸೂರ್ಯನು ತನ್ನ ಪಥದಲ್ಲಿ ಕೊಂಚ ಬದಲಾವಣೆಯನ್ನು ಹೊಂದುವನು. ಪಂಚಭೂತಗಳಲ್ಲಿ ಒಂದಾದ ಸೂರ್ಯ ದೇವನು ತನ್ನ ದಾರಿಯಲ್ಲಿ ಕೊಂಚ ಬದಲಾವಣೆ ತೋರುವುದರ ಮೂಲಕ ಪ್ರಕೃತಿಗೆ ಹೊಸತನವನ್ನು ತಂದುಕೊಡುವನು. ಅದರಿಂದ ಪರಿಸರ ಹಾಗೂ ಜೀವ ಸಂಕುಲಕ್ಕೆ ಹೊಸ ಬದಲಾವಣೆ ಅಥವಾ ಹೊಸ ಜೀವನವನ್ನು ಆರಂಭಿಸಲು ಪ್ರೇರಣೆಯಾಗುತ್ತದೆ ಎಂದು ಸಹ ಹೇಳಲಾಗುವುದು. ಸೂರ್ಯ ತನ್ನ ಬೆಳಕನ್ನು ಭೂಮಿಗೆ ನೀಡುವ ಸಮಯದಲ್ಲಿ ವ್ಯತ್ಯಾಸಗಳು ಉಂಟಾಗುವುದು. ಇದರಿಂದ ಹೆಚ್ಚು ಸಮಯಗಳ ಕಾಲ ರೈತರಿಗೆ ಭೂಮಿಯಲ್ಲಿ ಕೆಲಸ ಮಾಡಲು ಅನುಕೂಲವಾಗುವುದು. ಜೊತೆಗೆ ಹೊಸ ಪೈರುಗಳನ್ನು ಮನೆಗೆ ತಂದು ದವಸ ಧಾನ್ಯಗಳ ಸಿರಿ ಮನೆಯಲ್ಲಿ ಬೆಳಗುವುದು ಎಂದು ಹೇಳಲಾಗುವುದು.

Makar Sankranti

ಮಕರ ಸಂಕ್ರಾಂತಿ ದೇಶದೆಲ್ಲೆಡೆ ಆಚರಿಸಲ್ಪಡುವ ಅತ್ಯಂತ ಜನಪ್ರಿಯ ಹಿಂದೂ ಹಬ್ಬಗಳಲ್ಲಿ ಒಂದು. ಇದು ಹಿಂದೂ ಪಂಚಾಂಗದ ಪ್ರಕಾರ ಒಂದು ವರ್ಷ ಜನವರಿ 14 ರಂದು ಕೆಲವು ಸಂದರ್ಭದಲ್ಲಿ ಜನವರಿ 15ರಂದು ಆಚರಿಸಲಾಗುತ್ತದೆ ಎಂದು ಹೇಳಲಾಗುವುದು. ಈ ವರ್ಷ ಅಂದರೆ 2019ರಲ್ಲಿ ಜನವರಿ 15ರಂದು ಆಚರಿಸಲಾಗುತ್ತದೆ. ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವುದರಿಂದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಕರ ರಾಶಿಯನ್ನು ಶನಿ ದೇವನು ಆಳುತ್ತಾನೆ ಎಂದು ಹೇಳಲಾಗುವುದು.

ಸೂರ್ಯನ ಬದಲಾವಣೆ

ಸೂರ್ಯನ ಬದಲಾವಣೆ

ಸೂರ್ಯನು ಜನವರಿ 14ರ ಮಧ್ಯಾಹ್ನ 1.24ರ ವೇಳೆಗೆ ಮಕರ ರಾಶಿಯ ಪ್ರವೇಶ ಮಾಡುವನು. ಸೂರ್ಯ ದೇವನ ಪಥದಲ್ಲಿ ಬದಲಾವಣೆ ಹೊಂದಿದ ಸಂಜೆಯ ಅವಧಿಯಿಂದ ಮರುದಿನದ ವೇಳೆಯಲ್ಲಿ ಮಕರ ಸಂಕ್ರಾಂತಿ ಎಂದು ಆಚರಿಸ ಲಾಗುವುದು. ಹಾಗಾಗಿ ಮಕರ ಸಂಕ್ರಾಂತಿಯನ್ನು ಈ ವರ್ಷದ ಜನವರಿ 14ರ ಸಂಜೆಯಿಂದ ಪ್ರಾರಂಭವಾಗಿ ಜನವರಿ 15ರ ಪೂರ್ತಿ ದಿನವನ್ನು ಮಕರ ಸಂಕ್ರಾಂತಿ ಎಂದು ಆಚರಿಸಲಾಗುವುದು. ಸೂರ್ಯನ ಈ ಬದಲಾವಣೆಯಿಂದ ಮುಂದಿನ 26 ದಿನಗಳ ಕಾಲ ಸಾಕಷ್ಟು ಪ್ರಭಾವ ಬೀರುವುದು. ಅದು ಕೆಲವು ರಾಶಿಯವರಿಗೆ ಧನಾತ್ಮಕ ಹಾಗೂ ಕೆಲವರಿಗೆ ಋಣಾತ್ಮಕ ಪ್ರಭಾವವನ್ನುಂಟು ಮಾಡುವುದು ಎಂದು ಹೇಳಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನ ಪಥದಲ್ಲಿ ಉಂಟಾದ ಬದಲಾವಣೆ ಹಾಗೂ ಇತರ ಗ್ರಹಗತಿಗಳ ಪ್ರಭಾವದಿಂದ ಮೂರು ರಾಶಿಚಕ್ರದವರು ಅತ್ಯಂತ ಕಠಿಣ ಸಮಯವನ್ನು ಎದುರಿಸಬೇಕಾಗುವುದು. ಆದರೆ ಕೆಲವು ಉತ್ತಮ ಸಂಗತಿಗಳಿಂದ ಸನ್ನಿವೇಶಗಳನ್ನು ಸೂಕ್ತ ರೀತಿಯಲ್ಲಿ ಎದುರಿಸುವಿರಿ. ಅದು ನಿಮಗೆ ಸಾಕಷ್ಟು ಧೈರ್ಯವನ್ನು ತಂದುಕೊಡುವುದು ಎಂದು ಹೇಳಲಾಗುವುದು. ಹಬ್ಬದ ಸಂಭ್ರಮದಿಂದ ನಂತರ ಸಾಕಷ್ಟು ಕಠಿಣ ಸಂದರ್ಭಗಳನ್ನು ಮಿಥುನ, ಕರ್ಕ ಮತ್ತು ಕುಂಭ ರಾಶಿಯವರು ಎದುರಿಸಬೇಕಾಗುವುದು ಎಂದು ಹೇಳಲಾಗುವುದು.

Most Read: ಹುಟ್ಟಿದ ದಿನಾಂಕ ಗೊತ್ತಿದ್ದರೆ ಸಾಕು, ವೈವಾಹಿಕ ಜೀವನದ ಬಗ್ಗೆ ತಿಳಿಯಬಹುದು!

ಹಬ್ಬದ ಸಡಗರದ ನಂತರ

ಹಬ್ಬದ ಸಡಗರದ ನಂತರ

ಹಬ್ಬದ ಸಡಗರದ ನಂತರ 26 ದಿನಗಳ ಕಾಲ ಯಾವ ರೀತಿಯ ಕಠಿಣ ಸ್ಥಿತಿ ಅಥವಾ ಸನ್ನಿವೇಶಗಳನ್ನು ಈ ಮೂರು ರಾಶಿಚಕ್ರದವರು ಎದುರಿಸಬೇಕಾಗುವುದು? ಅವರ ಸ್ಥಿತಿಯಲ್ಲಿಯೇ ಹೇಗೆ ಪರಿವರ್ತನೆ ಕಂಡುಕೊಳ್ಳುವರು. ಅವುಗಳಿಂದ ಜೀವನದಲ್ಲಿ ಯಾವ ಬದಲಾವಣೆ ಅನಿವಾರ್ಯವಾಗುವುದು? ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಅಥವಾ ನಿಮ್ಮ ರಾಶಿಚಕ್ರವೂ ಈ ಮೂರು ರಾಶಿಚಕ್ರದಲ್ಲಿ ಒಂದು ಎಂದಾಗಿದ್ದರೆ ಆ ಕುರಿತು ಸಾಕಷ್ಟು ವಿಷಯಗಳನ್ನು ಅರಿಯುವ ಹಂಬಲದಲ್ಲಿ ಇದ್ದರೆ ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿರುವ ರಾಶಿಚಕ್ರದ ವಿವರಣೆಯನ್ನು ಅರಿಯಿರಿ.

ಮಿಥುನ

ಮಿಥುನ

ಧೈರ್ಯವಂತರೂ ಹಾಗೂ ಬುದ್ಧಿವಂತರೂ ಆದ ಮಿಥುನ ರಾಶಿಯ ವ್ಯಕ್ತಿಗಳು ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಹಾಗೂ ಹೆಸರನ್ನು ಪಡೆದುಕೊಳ್ಳಲು ಪ್ರಯತ್ನಿಸುವರು. ಅವರ ಇಂತಹ ಪ್ರಯತ್ನಗಳು ಅಥವಾ ಯಾವುದೇ ಸಂಗತಿಯ ಕುರಿತಾಗಿಯಾದರೂ ಹೆಚ್ಚು ಜಾಗರೂಕರಾಗಿರಬೇಕು. ಸಂಕ್ರಾಂತಿ ಹಬ್ಬದ ಸಮಯದಲ್ಲಿ ಉಂಟಾದ ಸೂರ್ಯನ ಸಂಚಾರದ ಪರಿವರ್ತನೆಯು ಮಿಥುನ ರಾಶಿಯವರ ಮೇಲೆ ಸಾಕಷ್ಟು ಋಣಾತ್ಮಕ ಪರಿಣಾಮವನ್ನು ಬೀರುವುದು. ಈ ಗಾಗಲೇ ಈ ರಾಶಿಯವರ ಎಂಟನೇ ಮನೆಯಲ್ಲಿ ಕೇತು ಇದ್ದಾನೆ. ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುತ್ತಿರುವುದರಿಂದ ಸಾಕಷ್ಟು ಕಷ್ಟಗಳು ಎದುರಾಗಬಹುದು.

Most Read: ಈ ವರ್ಷ 2019ರಲ್ಲಿ ಈ ಮೂರು ರಾಶಿಯವರು ದುರಾದೃಷ್ಟದ ದಿನವನ್ನು ಎದುರಿಸಲಿದ್ದಾರಂತೆ!

ಮಿಥುನ

ಮಿಥುನ

ಗ್ರಹಗತಿಗಳ ಅನಾನುಕೂಲತೆ ಹಾಗೂ ದುಷ್ಪರಿಣಾಮದಿಂದ ವ್ಯಕ್ತಿಯು ಅಪಘಾತವನ್ನು ಅನುಭವಿಸುವ ಸಾಧ್ಯತೆಗಳಿವೆ. ಹಾಗಾಗಿ ಮಿಥುನ ರಾಶಿಯವರು ದೀರ್ಘ ಪ್ರಯಾಣ ಮತ್ತು ಅಪಾಯಕಾರಿ ಕಾರ್ಯಗಳನ್ನು ಕೈಗೊಳ್ಳಬಾರದು. ಅದೇ ಇವರು ಮಾಡುತ್ತಿದ್ದ ಕೆಲಸ ಅಥವಾ ವ್ಯಾಪಾರ ಕ್ಷೇತ್ರದಲ್ಲಿ ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಈ ಸಂಗತಿಯಿಂದ ನೀವು ಮಾನಸಿಕವಾಗಿ ಉತ್ತಮ ಸ್ಥಿತಿಯನ್ನು ಪಡೆದುಕೊಳ್ಳುವಿರಿ.

ಕರ್ಕ

ಕರ್ಕ

ವೈಯಕ್ತಿಕ ಜೀವನ ಹಾಗೂ ಪಾಲುದಾರರ ಬಗ್ಗೆ ಸಾಕಷ್ಟು ಅಭಿಮಾನ ಹಾಗೂ ಕಾಳಜಿಯನ್ನು ತೋರುವವರು ಕರ್ಕ ರಾಶಿಯ ವ್ಯಕ್ತಿಗಳು. ಇವರು ತಮ್ಮ ಜೀವನದಲ್ಲಿ ಕುಟುಂಬ ಹಾಗೂ ಸಂಗಾತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವರು ಎಂದು ಹೇಳಲಾಗುತ್ತದೆ. ಆದರೆ 2019ರ ಸಂಕ್ರಾಂತಿಯ ಸಂಭ್ರಮದ ನಂತರ ಕೊಂಚ ದುಃಖದ ಸ್ಥಿತಿಯನ್ನು ಎದುರಿಸಬೇಕಾಗುವುದು. ಸೂರ್ಯನು ಕರ್ಕ ರಾಶಿಯವರ ಏಳನೇ ಮನೆಯಲ್ಲಿ ಪ್ರವೇಶವನ್ನು ಪಡೆಯುವನು. ಇದರ ಪ್ರಭಾವ ವೈವಾಹಿಕ ಜೀವನ ಅಥವಾ ವಿವಾಹದ ವಿಚಾರದ ಮೇಲೆ ಹೆಚ್ಚಿನ ಪ್ರಭಾವ ಬೀರುವುದು.

ಕರ್ಕ

ಕರ್ಕ

ಸೂರ್ಯನ ಸಂಚಾರ ಹಾಗೂ ಗ್ರಹಗತಿಗಳ ಅಸಹಕಾರ ಸ್ಥಿತಿಯಿಂದ ಕರ್ಕ ರಾಶಿಯವರ ಕೌಟುಂಬಿಕ ಜೀವನದಲ್ಲಿ ಅನೇಕ ತೊಡಕುಗಳನ್ನು ಅನುಭವಿಸುವ ಸಾಧ್ಯತೆಗಳಿವೆ. ವ್ಯಾಪಾರ ಕ್ಷೇತ್ರದಲ್ಲಿ ಪಾಲುದಾರಿಕೆಯ ಹೆಚ್ಚು ಸಹಕಾರ ಅಗತ್ಯ ಎನ್ನುವ ಅನುಭವಕ್ಕೆ ಬರಬಹುದು. ಹಾಗಾಗಿ ನೀವು ಸಮನ್ವಯವನ್ನು ಕಳೆದುಕೊಂಡಿದ್ದರೆ ಶಾಂತಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು. ಆದಾಗ್ಯೂ ಕೆಲವು ಶತ್ರುಗಳು ನಿಮ್ಮ ವಿರುದ್ಧವಾಗಿ ಹುಟ್ಟಿಕೊಳ್ಳುವ ಸಾಧ್ಯತೆಗಳಿವೆ ಎಂದು ಜ್ಯೋತಿಷ್ಯ ಶಾಸ್ತ್ರ ಎಚ್ಚರಿಸುವುದು.

Most Read: ಮಕರ ಸಂಕ್ರಾಂತಿ 2019: ದಿನಾಂಕ, ಸಮಯ, ಹಾಗೂ ಮಹತ್ವ

ಕುಂಭ

ಕುಂಭ

ಕುಂಭ ರಾಶಿಯ ವ್ಯಕ್ತಿಗಳು ಮೌನಿಗಳು, ಕ್ರಿಯಾಶೀಲರು ಹಾಗೂ ಸ್ವತಂತ್ರ್ಯ ಪ್ರಿಯರು. ಇವರು ತಮ್ಮ ಕ್ರಿಯಾಶೀಲತೆಗೆ ತಕ್ಕಂತೆ ಅಗತ್ಯವಾದ ವಸ್ತುಗಳ ಖರೀದಿಯನ್ನು ಹೆಚ್ಚಾಗಿ ಮಾಡುವರು. ಕೆಲವೊಮ್ಮೆ ಸಾಕಷ್ಟು ವಸ್ತುಗಳ ಖರೀದಿಯು ಹೆಚ್ಚು ಸಂತೋಷ ಹಾಗೂ ತೃಪ್ತಿಯನ್ನು ನೀಡುವುದು. ಈ ವರ್ಷದ ಸಂಕ್ರಾಂತಿಯಲ್ಲಿ ಸೂರ್ಯ ಪಡೆದುಕೊಳ್ಳುವ ಅಥವಾ ಸಂಚರಿಸುವ ಪಥದಿಂದ ಸಾಕಷ್ಟು ಋಣಾತ್ಮಕ ಅನುಭವವನ್ನು ಇವರು ಅನುಭವಿಸಬೇಕಾಗುವುದು. ಸಂಕ್ರಾಂತಿ ಹಬ್ಬದ ನಂತರ ಇವರು ಆರ್ಥಿಕವಾಗಿ ಬಿಕ್ಕಟ್ಟನ್ನು ಎದುರಿಸಬೇಕಾಗುವುದು.

ಕುಂಭ

ಕುಂಭ

ಗ್ರಹಗತಿಯ ಅನುಕೂಲತೆಯು ಚೆನ್ನಾಗಿ ಇರದ ಕಾರಣ ನಿಮ್ಮ ಖರ್ಚಿನ ವಿಚಾರದಲ್ಲಿ ಹೆಚ್ಚಳವುಂಟಾಗುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ಇವರು ಅಗತ್ಯ ಇರುವುದನ್ನು ಮಾತ್ರ ಖರೀದಿಸಲು ಮುಂದಾಗಬೇಕು. ಅನಗತ್ಯ ವಸ್ತುಗಳ ಕಡೆಗೆ ಒಲವು ಅಥವಾ ಮನಸ್ಸು ಆಕರ್ಷಣೆಗೆ ಒಳಗಾಗದಂತೆ ನೋಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿಯೇ ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಸಾಧ್ಯತೆಗಳಿವೆ. ಹಾಗಾಗಿ ಮನಸ್ಸು ಬಯಸಿದ ಎಲ್ಲಾ ವಸ್ತುಗಳನ್ನು ಖರೀದಿಸಲು ಮುಂದಾಗದಿರಿ. ಓಡಾಟದ ಖರ್ಚುಗಳು ಉಳಿಯುತ್ತವೆ. ಇದರಿಂದ ಸಾಕಷ್ಟು ಹಣವನ್ನು ಉಳಿಸಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ನಿಮಗೆ ಎಚ್ಚರಿಕೆ ನೀಡುವುದು.

English summary

Zodiacs That Might Have A Tough Time by Makar Sankranti in 2019

Makar Sankranti is one of the most popular Hindu festivals as it is celebrated throughout the country. It is observed as per the Gregorian calendar on 14 January. However, this year it will be celebrated on 15 January 2019. The day marks the transit of Sun into Capricorn, the astrological zodiac sign associated with Saturn or Shani Dev.
X
Desktop Bottom Promotion