For Quick Alerts
ALLOW NOTIFICATIONS  
For Daily Alerts

ಈ ರಾಶಿಯ ಮಹಿಳೆಯರು ಅತ್ಯುತ್ತಮ ರೀತಿಯಲ್ಲಿ ತಾಯಿಯ ಪಾತ್ರವನ್ನು ನಿರ್ವಹಿಸುವರು!

|

ಮಗುವಿನ ಅಗತ್ಯತೆಯನ್ನು ಅರ್ಥಮಾಡಿಕೊಳ್ಳುವ ಏಕೈಕ ಜೀವ ಎಂದರೆ ತಾಯಿ. ತನ್ನ ಮಗುವಿಗಾಗಿ ಎಂತಹ ತ್ಯಾಗ ಹಾಗೂ ಕೆಲಸವನ್ನು ಮಾಡಲು ಸಿದ್ಧವಾಗಿರುವ ಮಮತಾಮಯೀ ತಾಯಿ. ತನ್ನ ಜೀವದಲ್ಲಿಯೇ ಒಂಬತ್ತು ತಿಂಗಳುಗಳ ಕಾಲ ಇಟ್ಟುಕೊಂಡು ಪೂಷಣೆ ಮಾಡುವವಳು. ಪ್ರಸವದ ಮೂಲಕ ಹೊರ ಜಗತ್ತಿಗೆ ಕಾಲಿಟ್ಟ ಮಗುವಿಗೂ ಆಹಾರ ಆರೈಕೆ ನೀಡುತ್ತಾ ಜೀವಕ್ಕೆ ಜೀವವಾಗಿ ನಿಲ್ಲುವವಳು ತಾಯಿ. ಮಗುವಿನ ಅಳು ಮತ್ತು ಸಂತೋಷದ ಧ್ವನಿಯನ್ನು ಮೊದಲು ಆಲಿಸುವವಳು ತಾಯಿ. ಹಾಗಾಗಿಯೇ ಮಗುವು ಸಹ ನೋವನ್ನು ಅನುಭವಿಸಿದರೆ ಮೊದಲು ಅಮ್ಮಾ ಎಂದು ಕೂಗುತ್ತದೆ. ಅದೇ ಸೃಷ್ಟಿಯ ನಿಯಮ ಎನ್ನಬಹುದು.

ಕಣ್ಣಿಗೆ ಕಾಣುವ ದೈವ ರೂಪ ಅಮ್ಮ. ಅಮ್ಮನಿಲ್ಲದ ಮಕ್ಕಳ ಬಾಳು ನೋವಿನಿಂದ ಕೂಡಿರುತ್ತದೆ. ಮಗುವಿಗಾಗಿ ತೋರುವ ಪ್ರೀತಿ, ವಾತ್ಸಲ್ಯ ಹಾಗೂ ಕರುಣೆಯನ್ನು ಬೇರೆ ಯಾವ ವ್ಯಕ್ತಿಯೂ ತೋರಲಾರ. ಮಗು ತಪ್ಪನ್ನು ಮಾಡಿದಾಗ ತಾಯಿ ಬೈಯಬಹುದು, ತಪ್ಪು ದಾರಿಯಲ್ಲಿ ನಡೆಯುವಾಗ ತಿದ್ದಿ, ಬುದ್ಧಿ ಹೇಳುವಳು, ದುಡುಕಿ ನಡೆದರೆ ತಕ್ಕ ಶಿಕ್ಷೆ ನೀಡುವುದರ ಮೂಲಕ ಸರಿ ದಾರಿಗೆ ತರುವಳು. ಏಕೆಂದರೆ ತಾಯಿ ಬಯಸುವುದು ಒಂದೇ... ಅದು ತನ್ನ ಮಗು ಸಮಾಜದಲ್ಲಿ ಸಮರ್ಥ ವ್ಯಕ್ತಿಯಾಗಬೇಕು, ಬುದ್ಧಿವಂತನಾಗಬೇಕು, ಯಾರ ನಿಂದನೆಗೂ ಒಳಗಾಗಬಾರದು, ಗೌರವಾನ್ವಿತ ವ್ಯಕ್ತಿಯಾಗಿ ಮೆರೆಯಬೇಕು ಎನ್ನುವ ಉದ್ದೇಶವಾಗಿರುತ್ತದೆ ಅಷ್ಟೆ. ತಾಯಿ ಮಗುವುನ ಭಾಂದವ್ಯ ಎಲ್ಲಾ ಬಂಧನಗಳಿಗಿಂತಲೂ ಮಿಗಿಲಾದದ್ದು. ಯಾವ ಸಂಬಂಧದ ವ್ಯಕ್ತಿಗಳು ಇಲ್ಲದೆಯಾದರೂ ಬದುಕಬಹುದು. ಇಲ್ಲವೇ ಆ ಸ್ಥಾನಕ್ಕೆ ಬೇರೆ ವ್ಯಕ್ತಿಯನ್ನು ತಂದು ನಿಲ್ಲಿಸಬಹುದು. ಅದೇ ತಾಯಿಯನ್ನು ಕಳೆದುಕೊಂಡರೆ ಅಥವಾ ತಾಯಿಯ ಸ್ಥಾನಕ್ಕೆ ಇನ್ನೊಬ್ಬ ವ್ಯಕ್ತಿಯನ್ನು ತಂದು ನಿಲ್ಲಿಸುತ್ತೇನೆ ಎನ್ನಲು ಸಾಧ್ಯವಿಲ್ಲ. ತಾಯಿಯ ಸ್ಥಾನವನ್ನು ತುಂಬುವ ಸಾಮರ್ಥ್ಯ ಯಾರಿಂದಲೂ ಸಾಧ್ಯವಿಲ್ಲ. ಹಾಗಾಗಿ ತಾಯಿ ಎನ್ನುವವಳು ದೇವರು ಮನುಷ್ಯನಿಗೆ ನೀಡಿದ ವರ, ಕಣ್ಣಿಗೆ ಕಾಣುವ ದೇವರು ಎಂದು ಹೇಳಲಾಗುವುದು

ಕಣ್ಣಿಗೆ ಕಾಣುವ ದೈವ ರೂಪ ಅಮ್ಮ

ಕಣ್ಣಿಗೆ ಕಾಣುವ ದೈವ ರೂಪ ಅಮ್ಮ

ಕೆಲವೊಮ್ಮೆ ಜೀವನದ ಜಂಜಾಟ, ಸಮಸ್ಯೆಗಳ ಹೊರೆ, ಜವಾಬ್ದಾರಿಗಳ ಭಾರವನ್ನು ನಿರ್ವಹಿಸುವಾಗ ಸಂಬಂಧಗಳಲ್ಲಿ ಬೇಸರ, ಮುನಿಸು, ತಾರತಮ್ಯ, ಕೋಪ ಹೀಗೆ ಅನೇಕ ಬಗೆಯ ನೋವು-ನಲಿವುಗಳು ಉಂಟಾಗುತ್ತವೆ. ಅಂತಹ ಸಂದರ್ಭದಲ್ಲಿ ನಾವು ಕೆಲವು ಸಂಬಂಧಗಳ ಬಗ್ಗೆ ಅಥವಾ ವ್ಯಕ್ತಿಯ ಬಗ್ಗೆ ತಾತ್ಸಾರ ಅಥವಾ ಕಾಳಜಿಯನ್ನು ತೋರಿಸದೆ ಇರಬಹುದು ಇಲ್ಲವೇ ಅವುಗಳನ್ನು ಮರೆಯಯವ ಸಾಧ್ಯತೆಗಳಿವೆ. ಆಗ ಸಂಬಂಧಗಳಲ್ಲಿ ನಿಷ್ಠೆ ಹಾಗೂ ನಂಬಿಕೆ ಕಡಿಮೆಯಾಗುವುದು. ಇಂದಿನ ದಿನಮಾನ, ಆರ್ಥಿಕ ಸ್ಥಿತಿ, ಕುಟುಂಬ ವ್ಯವಸ್ಥೆ, ಖರ್ಚು-ವೆಚ್ಛಗಳ ಕಾರಣದಿಂದಾಗಿ ಮಹಿಳೆಯರು ಮನೆಯಿಂದಾಚೆ ಹೋಗಿ ದುಡಿಯುತ್ತಾರೆ. ಆರ್ಥಿಕವಾಗಿ ಬಲವನ್ನು ಪಡೆದುಕೊಳ್ಳಲು ಮಾಡುವ ಕೆಲಸದಿಂದಾಗಿ ಮಕ್ಕಳ ಲಾಲನೆ-ಪಾಲನೆಯಲ್ಲಿ ಕೊಂಚ ಅಡೆತಡೆ ಉಂಟಾಗುವುದು. ಬಹಳಷ್ಟು ಸಮಯದಲ್ಲಿ ಮಕ್ಕಳಿಗೆ ಅಮ್ಮನ ಆಶ್ರಯ ಅಗತ್ಯವಿದ್ದರೂ ಅದು ದೊರೆಯದೆ ಹೋಗಬಹುದು. ಆದರೆ ಕೆಲವು ವ್ಯಕ್ತಿಗಳು ಮಾತ್ರ ಎಂತಹದ್ದೇ ಸ್ಥಿತಿ ಎದುರಾದರೂ ತಾಯಿಯ ಸ್ಥಾನವನ್ನು ಮರೆಯುವುದಿಲ್ಲ. ತನ್ನ ಕರ್ತವ್ಯ ಹಾಗೂ ಪ್ರೀತಿಯನ್ನು ಮಕ್ಕಳಿಗಾಗಿ ಧಾರೆ ಎರೆಯುತ್ತಾರೆ. ಮಕ್ಕಳ ಏಳಿಗಾಗಿ ಎಂತಹ ತ್ಯಾಗ ಹಾಗೂ ಕೆಲಸವನ್ನಾದರೂ ಮಾಡಲು ಸಿದ್ಧರಾಗಿರುತ್ತಾರೆ ಎನ್ನಲಾಗುವುದು.

Most Read: ಜ್ಯೋತಿಷ್ಯಶಾಸ್ತ್ರದ ಪ್ರಕಾರ 6 ರಾಶಿಯವರು ಮಕ್ಕಳಿಗೆ ಒಳ್ಳೆಯ ತಂದೆಯಾಗಿರುವರು!

ಕಣ್ಣಿಗೆ ಕಾಣುವ ದೈವ ರೂಪ ಅಮ್ಮ

ಕಣ್ಣಿಗೆ ಕಾಣುವ ದೈವ ರೂಪ ಅಮ್ಮ

ಕೆಲವು ರಾಶಿಚಕ್ರದಲ್ಲಿ ಜನಿಸಿದ ಮಹಿಳೆಯರು ತಮ್ಮ ತಾಯಿಯ ಸ್ಥಾನವನ್ನು ಸುಂದರವಾಗಿ ತುಂಬುತ್ತಾರೆ. ಆದರ್ಶ ತಾಯಿಯಾಗಿ ಮಕ್ಕಳ ಆಗು-ಹೋಗುಗಳ ಬಗ್ಗೆ ಚಿಂತನೆ ನಡೆಸುತ್ತಾಳೆ. ಮಕ್ಕಳ ಏಳಿಗೆಗೆ ಏನೇನು ಮಾಡಬೇಕೋ ಅದೆಲ್ಲವನ್ನು ಮಾಡಲು ಮುಂದಾಗುವರು. ಸೂಕ್ತ ಮಾರ್ಗದರ್ಶನ ಹಾಗೂ ಪ್ರೀತಿಯನ್ನು ನೀಡುವುದರ ಮೂಲಕ ಮಗುವಿನ ಬಾಳನ್ನು ಬೆಳಗುತ್ತಾರೆ ಎಂದು ಹೇಳಲಾಗುವುದು. ಹಾಗಾದರೆ ಆ ರಾಶಿಚಕ್ರಗಳು ಯಾವವು? ಆ ರಾಶಿಚಕ್ರದ ತಾಯಂದಿರ ಮನಃಸ್ಥಿತಿ ಹೇಗಿರುತ್ತದೆ? ಮಕ್ಕಳಿಗಾಗಿ ಅವರ ಪ್ರೀತಿ ಹಾಗೂ ಕೆಲಸ ಹೇಗಿರುತ್ತದೆ ಎನ್ನುವುದನ್ನು ತಿಳಿಯಲು ಲೇಖನದ ಮುಂದಿನ ಭಾಗವನ್ನು ಅರಿಯಿರಿ.

 ಮೇಷ

ಮೇಷ

ಮೇಷ ರಾಶಿಯ ವ್ಯಕ್ತಿಗಳು ನಾಯಕತ್ವ ಸ್ವಭಾವವನ್ನು ಹೊಂದಿದವರಾಗಿರುತ್ತಾರೆ. ಆದರೆ ಮಕ್ಕಳ ಲಾಲನೆ ಮತ್ತು ಪಾಲನೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಮಕ್ಕಳ ಮುಗ್ಧತೆಗೆ ಹಾಗೂ ಕಿಡಿಗೇಡಿತನಗಳಿಗೆ ತಡೆಯನ್ನು ಒಡ್ಡುವುದಿಲ್ಲ. ಅವರ ಚಟುವಟಿಕೆಗಳಿಗೆ ಪ್ರೋತ್ಸಾಹ ಹಾಗೂ ಪ್ರೀತಿಯನ್ನು ಎರಡಯುತ್ತಾರೆ. ಜೊತೆಗೆ ಮಕ್ಕಳ ಅಗತ್ಯತೆ ಹಾಗೂ ವರ್ತನೆಗಳ ಬಗ್ಗೆ ಸೂಕ್ಷ್ಮ ರೀತಿಯ ಅಧ್ಯಯನ ನಡೆಸುತ್ತಾರೆ. ಮಕ್ಕಳಿಗೆ ಇಷ್ಟವಾಗುವ ವಿಷಯದಲ್ಲಿ ಹಾಗೂ ಆಸಕ್ತಿಯ ವಿಚಾರದಲ್ಲಿ ಮುಂದೆ ಬರಲು ಪ್ರೋತ್ಸಾಹ ಹಾಗೂ ಸಹಕಾರವನ್ನು ನೀಡುವರು. ಮಕ್ಕಳಿಗೆ ಬೇಕಾದ ಎಲ್ಲಾ ರೀತಿಯ ಸಲಹೆ ಹಾಗೂ ಸಹಕಾರವನ್ನು ನೀಡುವರು. ಇವರು ಮಕ್ಕಳಿಗಾಗಿ ಮಾಡುವ ಎಲ್ಲಾ ಕೆಲಸಗಳು ಹಾಗೂ ವರ್ತನೆಗಳು ಮಕ್ಕಳಿಂದ ಉತ್ತಮ ವರ್ತನೆ ಇರಬೇಕು ಹಾಗೂ ಮಗು ಗೌರವಾನ್ವಿತ ವ್ಯಕ್ತಿಯಾಗಿ ಬಾಳಬೇಕು ಎನ್ನುವ ಹಂಬಲದಿಂದ ಕೂಡಿರುತ್ತದೆ ಎನ್ನಲಾಗುವುದು.

ವೃಷಭ

ವೃಷಭ

ಈ ರಾಶಿಯ ವ್ಯಕ್ತಿಗಳು ಅತ್ಯಂತ ತಾಳ್ಮೆಯಿಂದ ಕೂಡಿರುವ ವ್ಯಕ್ತಿಗಳಾಗಿರುತ್ತಾರೆ. ಇವರು ಬಹಳ ವಿರಳವಾಗಿ ಸಿಟ್ಟಾಗುತ್ತಾರೆ. ಒಮ್ಮೆ ಕೋಪಗೊಂಡಿದ್ದರೆ ಅದನ್ನು ತಣಿಸಲು ಕಷ್ಟ ಎನ್ನಲಾಗುವುದು. ಕೋಪಗೊಂಡಾಗ ಅವರ ನಿರ್ಧಾರಗಳು ಕಠಿಣವಾಗಿರುತ್ತದೆ. ಇವರು ತಾಳ್ಮೆಯಿಂದ ತಮ್ಮ ಮಕ್ಕಳನ್ನು ಪೋಷಿಸುತ್ತಾರೆ. ಮಕ್ಕಳ ಅಗತ್ಯತೆಗಳನ್ನು ಗಮನಿಸುತ್ತಾರೆ. ಮಕ್ಕಳಿಗೆ ಅಗತ್ಯತೆಗಳಿಗಿಂತಲೂ ಹೆಚ್ಚು ಸಹಕಾರ ಹಾಗೂ ಪ್ರೀತಿಯನ್ನು ಎರಡಯುತ್ತಾರೆ. ತಮ್ಮ ಮಕ್ಕಳೇ ಅವರಿಗೆ ಪ್ರಪಂಚವಾಗಿರುತ್ತದೆ. ಅಪಾರವಾದ ಇವರ ತಾಳ್ಮೆಯ ಸ್ವಭಾವದಿಂದಲೇ ಮಕ್ಕಳ ತಪ್ಪನ್ನು ಸಹಿಸಿಕೊಳ್ಳುವರು. ನಂತರ ಅದನ್ನು ತಿದ್ದುವುದರ ಮೂಲಕ ಸರಿಯಾದ ಮಾರ್ಗ ಹಾಗೂ ಸಂಸ್ಕಾರವನ್ನು ಮಕ್ಕಳಿಗೆ ನೀಡುವರು. ನಿಷ್ಕಲ್ಮಶವಾದ ಪ್ರೀತಿಯನ್ನು ಮಕ್ಕಳಿಗೆ ಎರೆಯುವುದರ ಮೂಲ ತಮ್ಮ ಬದುಕನ್ನು ಸಾರ್ಥಕ ಎನಿಸಿಕೊಳ್ಳುವರು.

ತುಲಾ

ತುಲಾ

ತುಲಾ ರಾಶಿಯ ವ್ಯಕ್ತಿಗಳು ಸದಾ ಸಮತೋಲನವನ್ನು ನಿರ್ವಹಿಸುವ ವ್ಯಕ್ತಿಗಳಾಗಿರುತ್ತಾರೆ. ಇವರು ಪರಿಪೂರ್ಣ ವ್ಯಕ್ತಿಗಳು ಎಂದು ಪರಿಗಣಿಸಲಾಗುತ್ತದೆ. ಶಾಂತಿ ಪ್ರಿಯರು ಹಾಗೂ ಮೃದು ಮನಸ್ಸಿನ ವ್ಯಕ್ತಿಗಳು. ಇವರು ಮಕ್ಕಳಿಗೆ ಯಾವುದೇ ರೀತಿಯ ಶಿಕ್ಷೆಯನ್ನು ವಿಧಿಸುವುದಿಲ್ಲ. ತಪ್ಪು-ಸರಿಗಳನ್ನು ಸರಿಯಾಗಿ ಪರಿಗಣಿಸಿ ಶಿಕ್ಷೆಯನ್ನು ನೀಡುತ್ತಾರೆ. ಇವರು ತಮ್ಮ ಚಿಂತನೆ ಹಾಗೂ ಆಸಕ್ತಿಗಳನ್ನು ತಮ್ಮದೇ ಆದ ರೀತಿಯಲ್ಲಿ ಬೆಳೆಸಿಕೊಂಡಿರುತ್ತಾರೆ. ಅದರ ಅನುಸಾರ ಮಕ್ಕಳನ್ನು ಬೆಳೆಸುತ್ತಾರೆ. ಜೊತೆಗೆ ಮಕ್ಕಳ ಮೇಲೆ ಅದ್ಭುತ ಪ್ರೀತಿ ಹಾಗೂ ವಾತ್ಸಲ್ಯವನ್ನು ಎರೆಯುತ್ತಾರೆ. ಮಕ್ಕಳಲ್ಲೂ ಪರಿಸ್ಥಿತಿ ಅಥವಾ ವಿಷಯಗಳಿಗೆ ಅನುಸಾರವಾಗಿ ಹೇಗೆ ನಿರ್ಣಯವನ್ನು ತೆಗೆದುಕೊಳ್ಳಬೇಕು? ಸರಿಯಾದ ಆಯ್ಕೆ ಹಾಗೂ ಸಮತೋಲನವನ್ನು ಕಾಯ್ದುಕೊಳ್ಳುವುದು ಹೇಗೆ? ಎನ್ನುವುದರ ಜ್ಞಾನವನ್ನು ಹೇಳಿಕೊಡುವರು.

ಮಕರ

ಮಕರ

ಮಕರ ರಾಶಿಯವರು ಸಹ ಮೇಷ ರಾಶಿಯವರಂತೆ ನಾಯಕತ್ವವನ್ನು ವಹಿಸುತ್ತಾರೆ. ಮೇಲ್ನೋಟಕ್ಕೆ ಗಂಭೀರ ವ್ಯಕ್ತಿಯಂತೆ ಕಂಡುಬಂದರೂ ಆಂತರಿಕವಾಗಿ ಅತ್ಯಂತ ಮೃದು ಸ್ವಭಾವದವರಾಗಿರುತ್ತಾರೆ. ತಮ್ಮ ಮಕ್ಕಳ ತಪ್ಪು -ಒಪ್ಪುಗಳನ್ನು ಸರಿಯಾಗಿ ಪರಿಶೀಲಿಸಿ, ಸರಿಯಾದ ರೀತಿಯ ಮಾರ್ಗದರ್ಶನ ಹಾಗೂ ಪ್ರೀತಿಯನ್ನು ಎರೆಯುತ್ತಾರೆ. ಮಕ್ಕಳ ಬದುಕಿಗೆ ಸರಿಯಾದ ಮಾರ್ಗದರ್ಶನದ ಬೆಳಕನ್ನು ಚಲ್ಲುವರು. ಶ್ರಮ ಜೀವಿಗಳಾದ ಇವರು ಮಕ್ಕಳ ಅಭಿವೃದ್ಧಿ ಹಾಗೂ ಏಳಿಗೆಗಾಗಿ ಯಾವೆಲ್ಲಾ ಕೆಲಸವನ್ನು ಕೈಗೊಳ್ಳಬಹುದು ಎನ್ನುವುದು ತಿಳಿದುಕೊಂಡು, ನಂತರ ಮುಂದಿನ ಕೆಲಸ ಕಾರ್ಯವನ್ನು ಕೈಗೊಳ್ಳುವರು. ತಮ್ಮ ಮಕ್ಕಳಿಗಾಗಿ ಹಾಗೂ ಅವರ ಬದುಕಿಗಾಗಿಯೇ ಜೀವನದ ಎಲ್ಲಾ ಕೆಲಸ ಕಾರ್ಯಗಳು ಮುಡಿಪಾಗಿರುತ್ತವೆ.

ಮೀನ

ಮೀನ

ಮೀನ ರಾಶಿಯವರು ಸಾಮಾನ್ಯವಾಗಿ ಭಾವನಾತ್ಮಕ ಜೀವಿಗಳು. ಇವರು ತಮ್ಮವರು ಹಾಗೂ ಬಂಧು ಬಾಂಧವರಿಗೆ ಸಾಕಷ್ಟು ಪ್ರೀತಿಯನ್ನು ಎರಡಯುವರು. ಅದರಲ್ಲೂ ತಮ್ಮ ಮಕ್ಕಳಿಗೆ ಪ್ರೀತಿಯ ಮಳೆಯನ್ನು ಸುರಿಸುವರು. ಮಕ್ಕಳ ಬೇಕು ಬೇಡಗಳನ್ನು ಬಹುಬೇಗ ಅರ್ಥಮಾಡಿಕೊಳ್ಳುವರು. ಅವರ ಭಾವನೆಗೆ ಬೇಕಾದ ಸಂಗತಿಗಳು ಹಾಗೂ ಕೆಲಸವನ್ನು ಎಷ್ಟೇ ಕಷ್ಟವಾದರೂ ನಿರ್ವಹಿಸಿಕೊಡುವರು. ಬಹಳ ಸೂಕ್ಷ್ಮ ರೀತಿಯಲ್ಲಿ ಮಕ್ಕಳ ಅಗತ್ಯತೆಯನ್ನು ಅರಿತುಕೊಳ್ಳುವರು. ಪ್ರಕೃತಿ ಪ್ರೇಮಿಗಳು ಹಾಗೂ ಕಲೆಯಲ್ಲಿ ಹೆಚ್ಚಿನ ಜ್ಞಾನ ಹಾಗೂ ಆಸಕ್ತಿಯನ್ನು ಹೊಂದಿದವರಾಗಿರುತ್ತಾರೆ. ಇವರು ತಮ್ಮ ಮಗುವಿನಲ್ಲೂ ಇದೇ ಗುಣಗಳನ್ನು ಬೆಳೆಸಲು ಪ್ರಯತ್ನಿಸುವರು.

English summary

Zodiac Signs Who Make The Best Moms

Do you often imagine how you would behave as a mother? Does the idea of motherhood panic you or make you feel overjoyed? Can you take well care of a kid or you just think they are difficult to handle? Do those kids in your neighbourhood like you? Astrology says that Arians, Cancerians, Taureans, Capricorns and Pisceans can be great moms.
X