For Quick Alerts
ALLOW NOTIFICATIONS  
For Daily Alerts

ಸಂಬಂಧದಲ್ಲಿ ನೋವು, ಕಡೆಗಣಿಸುವ ಭೀತಿ ಎದುರಿಸುವ ರಾಶಿಚಕ್ರದವರು

|

ಪ್ರತಿಯೊಂದು ಸಂಬಂಧದಲ್ಲೂ ಸಮಸ್ಯೆ ಎನ್ನುವುದು ಇದ್ದೇ ಇರುವುದು. ಅದರಲ್ಲೂ ಇಂದಿನ ದಿನಗಳಲ್ಲಿ ಸಂಬಂಧಗಳು ಉಳಿಯುವುದು ತುಂಬಾ ಕಡಿಮೆ. ಯಾಕೆಂದರೆ ಸಂಬಂಧದ ಮೌಲ್ಯಗಳು ಕುಸಿಯುತ್ತಿರುವಂತಹ ಸಂದರ್ಭದಲ್ಲಿ ಜನರು ಇದರಿಂದ ತುಂಬಾ ನೋವಿಗೆ ಒಳಗಾಗುವರು. ಸಂಬಂಧಗಳು ದೀರ್ಘಕಾಲ ತನಕ ಉಳಿಯಲು ಸಾಧ್ಯವಾಗದೆ ಇರಲು ಇಂದಿನ ಜೀವನಶೈಲಿ, ಒತ್ತಡ ಇತ್ಯಾದಿಗಳು ಕಾರಣವಾಗಿರಬಹುದು. ಇದರಿಂದ ಸಂಬಂಧಗಳು ಮುರಿದು ಬಿದ್ದು ನೋವುಂಟಾಗುವುದು ಹೆಚ್ಚು. ಆದರೆ ಈ ನೋವು ಎಷ್ಟು ಸಮಯ ಉಳಿಯವುದು ಎನ್ನುವುದು ಮಾತ್ರ ಆ ವ್ಯಕ್ತಿಯ ಮೇಲೆ ಅವಲಂಬಿತವಾಗಿರುವುದು.

ಕೆಲವು ಮುರಿದುಬಿದ್ದ ಸಂಬಂಧದ ನೋವನ್ನು ಬೇಗನೆ ಮರೆತುಬಿಟ್ಟರೆ, ಇನ್ನು ಕೆಲವರಿಗೆ ಇದು ತುಂಬಾ ದೀರ್ಘಕಾಲ ತನಕ ಕಾಡುವುದು. ಇದರಿಂದಾಗಿ ಪದೇ ಪದೇ ನೋವಿಗೊಳಗಾಗುವ ಭೀತಿ, ತಿರಸ್ಕರಿಸಲ್ಪಡುವ ಅಥವಾ ಕಡೆಗಣಿಸುವ ಭೀತಿ ಕಾಡುವುದು. ನಿಮ್ಮ ಸ್ನೇಹಿತರು ಅಥವಾ ಬಳಗದಲ್ಲಿ ಇಂತಹ ಜನರನ್ನು ನೀವು ಕಾಣುತ್ತಿರಬಹುದು. ಇಂತಹ ವ್ಯಕ್ತಿಗಳಿಗೆ ತಕ್ಷಣವೇ ಪ್ರೀತಿ ನೀಡಬೇಕು ಎಂದು ನಿಮಗೆ ಅನಿಸುವುದಿಲ್ಲವೇ? ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಯಾವ ಸ್ನೇಹಿತರು ಈ ಪಟ್ಟಿಯಲ್ಲಿ ಸ್ಥಾನ ಪಡೆಯಲಿರುವು ಎಂದು ನಾವು ಈ ಲೇಖನ ಮೂಲಕ ತಿಳಿಸಿಕೊಡಲಿದ್ದೇವೆ. ರಾಶಿ ಚಕ್ರಗಳಿಗೆ ಅನುಗುಣವಾಗಿ ಇದನ್ನು ಹೇಳಲಾಗಿದೆ. ನೀವು ತಿಳಿಯಿರಿ.

ಮೇಷ

ಮೇಷ

ಮೇಷ ರಾಶಿಯವರು ಏನೇ ಟೀಕೆಗಳು ಬಂದರೂ ಅದಕ್ಕೆ ತಕ್ಷಣವೇ ಉತ್ತರ ನೀಡುತ್ತಾರೆ. ಹೀಗಾಗಿ ಅವರು ತುಂಬಾ ಬಲಿಷ್ಠರು ಎಂದು ನಿಮಗೆ ಅನಿಸುತ್ತಿದೆಯಾ? ಆದರೆ ಅವರು ಒಳಗಿನಿಂದಲೇ ತುಂಬಾ ಸುಡುತ್ತಿರುತ್ತಾರೆ ಮತ್ತು ಎಲ್ಲಾ ಸಂದರ್ಭದಲ್ಲೂ ಅವರ ಸುಡುವ ಗುಣವು ನಿಮಗೆ ಕಂಡುಬರುವುದು. ಇಲ್ಲಿ ನಿಜವೇನೆಂದರೆ ಅವರು ತಮ್ಮ ಬಲಿಷ್ಠ ಮನೋಭಾವ ಮಾತ್ರ ನಿಮಗೆ ತೋರಿಸಿಕೊಡುವರು. ಆದರೆ ನೋವುಂಟು ಮಾಡುವ ಭೀತಿಯು ಅವರನ್ನು ಅತಿಯಾಗಿ ಕಾಡುವುದು. ಇವರು ತಮ್ಮ ಹೃದಯಕ್ಕೆ ತುಂಬಾ ಹತ್ತಿರವಾಗಿರುವ ಕಾರಣದಿಂದಾಗಿ ಸ್ವಲ್ಪ ನೋವಿನ ಭಾವನೆ ಮತ್ತು ಕಡೆಗಣನೆ ಅವರನ್ನು ತುಂಬಾ ಕಾಡುವುದು.

ಮಿಥುನ

ಮಿಥುನ

ಮಿಥುನ ರಾಶಿಯವರು ತುಂಬಾ ವಿಚಿತ್ರ ಎಂದು ನಿಮಗೆ ಅನಿಸಬಹುದು. ಯಾಕೆಂದರೆ ಅವರು ಹೆಚ್ಚಿಗೆ ಮಾತನಾಡಲ್ಲ ಮತ್ತು ಪ್ರತಿಯೊಬ್ಬರೊಂದಿಗೂ ಬೆರೆಯಲ್ಲ. ಆದರೆ ಇಲ್ಲಿ ನೀವು ತಿಳಿದಿರಬೇಕಾದ ವಿಚಾರವೆಂದರೆ, ಅವರಲ್ಲಿ ಭಾವನೆಗಳ ದೊಡ್ಡ ಸಾಗ, ಆಲೋಚನೆಗಳ ಜಗತ್ತು ಮತ್ತು ಪರಿಗಣನೆಯ ಸರಣಿಯು ಎಲ್ಲಾ ಸಮಯದಲ್ಲಿ ಅವರ ಮನಸ್ಸಿನಲ್ಲಿ ಓಡುತ್ತಲಿರುವುದು. ನೋವು ಮತ್ತು ಕಡೆಗಣಿಸುವ ಕಾರಣದಿಂದಾಗಿ ಅವರು ಸಂಬಂಧವನ್ನು ಕಡಿದುಕೊಳ್ಳುವರು.

ಸಿಂಹ

ಸಿಂಹ

ಸಿಂಹ ರಾಶಿಯವರು ತುಂಬಾ ಆತ್ಮವಿಶ್ವಾಸಿ ಮತ್ತು ಗೌರವಯುತ ವಾಗಿ ಕಾಣಿಸಿಕೊಳ್ಳುವರು. ಯಾಕೆಂದರೆ ಇವರು ಸಿಂಹ ರಾಶಿಯವರು. ಅದಾಗ್ಯೂ, ಘನತೆಯು ಹೆಚ್ಚಾಗಿದ್ದಂತೆ ಅದಕ್ಕೆ ನೋವುಂಟು ಆಗುವಂತಹ ಭೀತಿ ಕೂಡ ಅಧಿಕವಾಗಿ ಇರುವುದು. ಇವರು ತುಂಬಾ ಆತ್ಮವಿಶ್ವಾಸಿಗಳಾಗಿದ್ದರೂ ಯಾವಾಗಲೂ ತಮ್ಮನ್ನು ಸ್ವೀಕರಿಸಬೇಕು ಎಂದು ಬಯಸುವರು. ಇವರು ಇದರಲ್ಲಿ ವಿಫಲರಾದ ವೇಳೆ ಅವರಿಗೆ ತುಂಬಾ ನೋವಾಗುವುದು.

Most Read:ಸುಂದರವಾದ ಕವಿತೆಯನ್ನು ಬರೆಯುವ ಸಾಮರ್ಥ್ಯ ಹೊಂದಿರುವ ರಾಶಿಚಕ್ರದವರು

ವೃಶ್ಚಿಕ

ವೃಶ್ಚಿಕ

ವೃಶ್ಚಿಕ ರಾಶಿಯ ಗುಣವು ಯಾವ ರೀತಿಯಲ್ಲಿ ಇದೆ ಎಂದರೆ ಅವರಿಗೆ ಪ್ರತಿಯೊಂದು ವಿಚಾರವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಬರುತ್ತದೆ. ಇವರು ಇದನ್ನು ಮೊದಲೇ ನಿಯಂತ್ರಿಸಿ ಕೊಳ್ಳುವರು. ಸಂಬಂಧ ಮತ್ತು ಭಾವನೆಗಳ ವಿಚಾರಕ್ಕೆ ಬಂದರೂ ಇದೇ ರೀತಿಯಾಗಿರುವುದು. ತಮಗೆ ಸಂಬಂಧದಲ್ಲಿ ನೋವಾಗದಿರಲಿ ಎಂದು ಯಾವಾಗಲೂ ಪ್ರಯತ್ನಿಸುವರು. ಆದರೆ ಇವರು ಭೀತಿ ಯಿಂದ ಬಳಲುವರು. ಇದು ಪ್ರಜ್ಞಾಪೂರ್ವಕ ಅಥವಾ ಅವ್ಯಕ್ತ ಭೀತಿ ಆಗಿರಬಹುದು. ತಮಗೆ ನೋವಾಗಬಹುದು ಎನ್ನುವ ಭೀತಿಯಿಂದ ಇವರು ಮೊದಲೇ ಸಂಬಂಧ ಕಡಿದುಕೊಳ್ಳುವರು.

ಧನು

ಧನು

ಧನು ರಾಶಿಯವರು ಜನರನ್ನು ತುಂಬಾ ನಂಬುವರು ಮತ್ತು ಇದರ ಬಳಿಕ ನೋವಿಗೊಳಗಾಗುವರು. ಇಲ್ಲಿ ಅವರು ಪಾಠ ಕಲಿತು ಕೊಳ್ಳಬೇಕು. ಜನರು ತಮಗೆ ನೋವುಂಟು ಮಾಡುವರು ಎಂದು ಕೂಡ ಅವರು ತಿಳಿಯುವರು. ಇದರಿಂದಾಗಿ ಮತ್ತೊಮ್ಮೆ ನೋವಿನ ಪರಿಸ್ಥಿತಿ ಬರುವ ಭೀತಿಗೆ ಒಳಗಾಗುವರು. ಆದರೆ ಇದರ ಅರ್ಥ ಅವರು ನಂಬುವುದಿಲ್ಲ ಎಂದಲ್ಲ. ಅವರು ಯಾವಾಗಲೂ ನೋವಿಗೊಳಗಾಗುವ ಭೀತಿಯಲ್ಲೇ ಇರುವರು. ಸಂಬಂಧದಲ್ಲಿ ಅವರಿಗೆ ನೋವು ಮತ್ತು ಕಡೆಗಣಿಸುವ ಭೀತಿ ಕಾಡುತ್ತಿರುತ್ತದೆ ಎಂದು ಜ್ಯೋತಿಷ್ಯಶಾಸ್ತ್ರವು ಹೇಳಿದೆ.

English summary

Zodiac Signs Who Fear Rejection And Getting Hurt

Some people are quite sensible when it comes to relationships. They trust but with a tinge of doubt of betrayal. They live in constant fear of getting hurt or ignored or rejected. Well, astrology says that these people can be identified on the basis of their zodiac signs. Aries, Gemini, Leo, Scorpio, Sagittarius and Pisces are some of them.
Story first published: Monday, April 1, 2019, 13:02 [IST]
X
Desktop Bottom Promotion