For Quick Alerts
ALLOW NOTIFICATIONS  
For Daily Alerts

ಸುಂದರವಾದ ಕವಿತೆಯನ್ನು ಬರೆಯುವ ಸಾಮರ್ಥ್ಯ ಹೊಂದಿರುವ ರಾಶಿಚಕ್ರದವರು

|

ಕಲೆ ಎನ್ನುವುದು ಎಲ್ಲರನ್ನೂ ಆಕರ್ಷಿಸುತ್ತದೆ. ಆದರೆ ಕೆಲವರನ್ನು ಮಾತ್ರ ಆಯ್ದುಕೊಳ್ಳುತ್ತದೆ. ಉತ್ತಮ ಕಲ್ಪನೆ ಹಾಗೂ ನಿರಂತರ ಅಭ್ಯಾಸದಲ್ಲಿ ತೊಡಗಿಕೊಳ್ಳುವವರಿಗೆ ಕಲೆ ಎನ್ನುವುದು ಸುಲಭವಾಗಿ ಒಲಿದು ಬರುವುದು. ಯಾರು ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಿಲ್ಲವೋ ಅಂತಹವರಿಗೆ ಯಾವುದೇ ಕಲೆಯು ಒಲಿಯಲು ಸಾಧ್ಯವಿಲ್ಲ. ಆಸಕ್ತಿ ಇರುವ ವಿಚಾರದಲ್ಲಿ ನಿರಂತರ ಆವಿಷ್ಕಾರ ಹಾಗೂ ಅಭ್ಯಾಸವನ್ನು ಕೈಗೊಂಡಾಗ ಮಾತ್ರ ಒಂದು ದಿನ ಯಶಸ್ಸಿನ ತುದಿಯನ್ನು ಮುಟ್ಟಬಹುದು. ಕಲೆಯಲ್ಲಿ ಸಾಕಷ್ಟು ಬಗೆಯ ವೈವಿದ್ಯತೆಗಳಿವೆ. ಪ್ರತಿಯೊಂದು ವಿದ್ಯೆ ಅಥವಾ ಕಲೆಯು ಸಹ ತನ್ನದೇ ಆದ ಪ್ರಾಮುಖ್ಯತೆ ಹಾಗೂ ವಿಶೇಷತೆಯಿಂದ ಕೂಡಿರುತ್ತವೆ. ಅವುಗಳನ್ನು ನಾವು ಕರಗತಗೊಳಿಸಿಕೊಂಡಾಗ ಮಾತ್ರ ಕಲೆಯ ಬಗ್ಗೆ ಜ್ಞಾನ ದೊರೆಯುವುದು. ಅಂತೆಯೇ ಅದರಲ್ಲಿ ನಮ್ಮ ಹಿರಿಮೆ ಹೆಚ್ಚುವುದು. ನಿರುತ್ಸಾಹ, ಸೋಮಾರಿತನ, ಇತರರನ್ನು ಹೀಯಾಳಿಸುವುದು, ತಾನೇ ಶ್ರೇಷ್ಠ ಎನ್ನುವ ಭಾವನೆಗಳು ನಮ್ಮಲ್ಲಿರುವ ವಿದ್ಯೆ ಹಾಗೂ ಕಲೆಯ ಮಟ್ಟವನ್ನು ತಗ್ಗಿಸುತ್ತವೆ. ವಿನಯತೆ ಇಲ್ಲದ ವಿದ್ಯೆ ಹಾಗೂ ಕಲೆಗೆ ಎಲ್ಲಿಯೂ ಮಾನ್ಯತೆ ದೊರೆಯದು.

ಕಲೆ ಎನ್ನುವುದು ಕೇವಲ ದೊಡ್ಡ ದೊಡ್ಡ ಸಂಗತಿಗಳಿಗೆ ಮಾತ್ರ ಮೀಸಲಾಗಿರುವುದಿಲ್ಲ. ಸಣ್ಣ-ಪುಟ್ಟ ಸಂಗತಿಗಳು ಸಹ ವಿಶೇಷ ವಿಚಾರ ಹಾಗೂ ಶ್ರೇಷ್ಠತೆಯನ್ನು ಪಡೆದುಕೊಂಡಿರುತ್ತವೆ. ಜನ ಸಮೂಹದ ಜೊತೆಗೆ ಬೆರೆವುದು, ಅವರೊಂದಿಗೆ ಮಾತನಾಡುವುದು, ವ್ಯವಹರಿಸುವುದು, ಮಾತಿನಲ್ಲಿ ಬಳಸುವ ಶಬ್ದಗಳು, ಶಬ್ದಗಳಿಂದ ರಚಿಸುವ ಪ್ರಾಸಗಳು ಕವಿತೆಯನ್ನು ಸೃಷ್ಟಿಸುತ್ತವೆ. ಜೊತೆಗೆ ಭಾಷೆಯಲ್ಲಿ ಇರುವ ಹಿಡಿತ, ಶಬ್ದಗಳ ಜ್ಞಾನ ಹಾಗೂ ಪ್ರತಿಭೆಯನ್ನು ಪ್ರತಿಬಿಂಬಿಸುತ್ತದೆ. ಈ ಹಿನ್ನೆಲೆಯಲ್ಲಿಯೇ ಕೆಲವರು ವಿಶೇಷ ರೀತಿಯ ಪದ್ಯ ಹಾಗೂ ಕವನಗಳನ್ನು ರಚಿಸುತ್ತಾರೆ. ಕವನಗಳ ರಚನೆ ಎನ್ನುವುದು ಅಷ್ಟು ಸುಲಭದ ಸಂಗತಿಯಲ್ಲ. ಅದರ ರಚನೆಯಲ್ಲಿ ಸರಳ ಭಾಷೆಯನ್ನು ಬಳಸಬೇಕು, ಆ ಪದ್ಯದಲ್ಲಿ ಅಡಗಿರುವ ಭಾವವು ಇತರರ ಮನಸ್ಸಿಗೆ ತಟ್ಟುವಂತಿರಬೇಕು. ಪದ್ಯ ರಚನೆಯಲ್ಲಿ ಬಳಸುವ ಶಬ್ದಗಳು ಪ್ರಾಸಬದ್ಧವಾಗಿದ್ದಾಗ ಅದನ್ನು ಹೇಳಲು ಹಾಗೂ ಕೇಳಲು ಅತ್ಯಂತ ಸಂತೋಷವನ್ನು ನೀಡುತ್ತದೆ. ಅಂತಹ ಜ್ಞಾನವು ವ್ಯಕ್ತಿಯ ಕಲ್ಪನೆಯ ಶಕ್ತಿ ಹಾಗೂ ಭಾವನಾತ್ಮಕ ಸಂವೇದನೆಗಳ ತುಡಿತದಿಂದ ಹುಟ್ಟಿಕೊಳ್ಳುತ್ತದೆ ಎನ್ನಲಾಗುವುದು. ಕವನವನ್ನು ರಚಿಸುವುದು, ಅದು ಇತರರಿಗೆ ಇಷ್ಟವಾಗುವಂತೆ ಆಗುವುದು ಅವರವರ ರಾಶಿಚಕ್ರಗಳ ಆಧಾರದ ಮೇಲೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯಲ್ಲಿ ಪದ್ಯ ಅಥವಾ ಕವನವನ್ನು ರಚಿಸುವ ಸಾಮಥ್ರ್ಯ ಇದೆ ಎಂದಾದರೆ ಅದು ಅವನ ರಾಶಿಚಕ್ರದ ಪ್ರಭಾವ ಎನ್ನುತ್ತದೆ. ಏಕೆಂದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ಅತ್ಯದ್ಭುತ ರೀತಿಯಲ್ಲಿ ಕವನವನ್ನು ರಚಿಸಬಲ್ಲರು. ಅವರು ಆಡುವ ಮಾತುಗಳು ಹಾಗೂ ಬಳಸುವ ಶಬ್ದಗಳು ಇತರರಿಗೆ ಅತ್ಯಂತ ಸಂತೋಷ ಹಾಗೂ ಸಮಾಧಾನವನ್ನು ನೀಡುವಂತಿರುತ್ತದೆ. ಅದಕ್ಕೆ ಕಾರಣ ಆಯಾ ರಾಶಿಚಕ್ರಗಳ ಆಧಾರದ ಮೇಲೆ ಗ್ರಹಗತಿಗಳು ನೀಡುವ ಆಶಿರ್ವಾದ ಎನ್ನಲಾಗುವುದು. ಹಾಗಾದರೆ ಆ ರಾಶಿಚಕ್ರಗಳು ಯಾವವು? ಆ ರಾಶಿಚಕ್ರಗಳ ಸಾಲಿನಲ್ಲಿ ನಿಮ್ಮ ರಾಶಿಚಕ್ರ ಇದೆಯೇ? ಎನ್ನುವಂತಹ ಕುತೂಹಲವಿದ್ದರೆ ಲೇಖನದ ಮುಂದಿನ ಭಾಗದಲ್ಲಿ ಪರಿಶೀಲಿಸಿ.

ಮೀನ

ಮೀನ

ಇತರ ರಾಶಿ ಚಕ್ರಗಳಿಗೆ ಹೋಲಿಸಿದರೆ ಮೀನ ರಾಶಿಯ ವ್ಯಕ್ತಿಗಳು ಅತ್ಯಂತ ಭಾವುಕ ವ್ಯಕ್ತಿಗಳು. ಜೊತೆಗೆ ಆತ್ಮದೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದಾರೆ ಎನ್ನಲಾಗುವುದು. ಹಗಲು ಕನಸು ಕಾಣುವ ಇವರು ಅದ್ಭುತ ಕಲ್ಪನೆಯ ಶಕ್ತಿಯನ್ನು ಹೊಂದಿದ್ದಾರೆ. ತಮ್ಮ ಕಲ್ಪನೆ ಹಾಗೂ ಆಲೋಚನೆಗಳನ್ನು ನಿಖರವಾಗಿ ನಿರ್ಣಯಿಸುತ್ತಾರೆ. ಆಗ ಅವುಗಳನ್ನು ಪದಗಳನ್ನಾಗಿ ಬದಲಾಯಿಸುವರು. ಪ್ರಪಂಚದ ಬಗ್ಗೆ ಅವರಿಗೆ ಇರುವ ಗ್ರಹಿಕೆಯು ಸಹ ಭಿನ್ನವಾಗಿದೆ. ಹಾಗಾಗಿಯೇ ಅವರು ಸುಂದರ ಮತ್ತು ಅನನ್ಯವಾದ ಕವಿತೆಯನ್ನು ತಯಾರಿಸುತ್ತಾರೆ ಎಂದು ಹೇಳಲಾಗುವುದು.

ಕರ್ಕ

ಕರ್ಕ

ಎಲ್ಲವನ್ನೂ ಅಡಗಿಸಬೇಕಾದ ಅವಶ್ಯಕತೆ ಕರ್ಕ ರಾಶಿಯವರಿಗೆ ಇಲ್ಲ. ಅವರು ಎಲ್ಲವನ್ನೂ ಕುರಿತು ಬಲವಾದ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಅವರು ಈ ಅಭಿಪ್ರಾಯಗಳನ್ನು ಒಂದು ಕವಿತೆಯ ರೂಪದಲ್ಲಿ ಪ್ರಸ್ತುತಪಡಿಸಲು ಇಷ್ಟಪಡುತ್ತಾರೆ. ಒಂದು ಕವಿತೆಯನ್ನು ಬರೆಯಲು ಅಥವಾ ನೀವು ಕೇಳಿರದ ಒಂದು ಸಂಯೋಜಿತ ರಚನೆಯನ್ನು ಇವರು ನಿಮ್ಮ ಮುಂದೆ ಇಡಬಹುದು. ಅಂತಹ ಅದ್ಭುತ ಕವನ ರಚನೆಯ ಶಕ್ತಿಯನ್ನು ಹೊಂದಿರುತ್ತಾರೆ. ಅವರ ಪ್ರತಿಭೆಯಿಂದ ನಿಮಗೆ ನಂಬಲಾಗದಂತಹ ಆಶ್ಚರ್ಯ ಹಾಗೂ ಸಂತೋಷ ಉಂಟಾಗಬಹುದು.

ವೃಶ್ಚಿಕ

ವೃಶ್ಚಿಕ

ಈ ರಾಶಿಯ ವ್ಯಕ್ತಿಗಳು ತಾವು ರಚಿಸುವ ಕವನದಲ್ಲಿ ಪ್ರಾಸಬದ್ಧತೆಯನ್ನು ಬಳಸುತ್ತಾರೆ. ಕೆಲವೊಮ್ಮೆ ಪ್ರಾಸಬದ್ಧತೆ ಇಲ್ಲದೆ ಹೋದರೂ ಬಳಸಿರುವ ಅದ್ಭುತ ಶಬ್ದಗಳು ಕವನಕ್ಕೆ ಹೊಸ ಸೊಬಗನ್ನು ನೀಡುವುದು. ಇವರು ಸೌಂದರ್ಯ ಮತ್ತು ಪ್ರಾಪಂಚಕಿ ಸೌಂದರ್ಯದ ಬಗ್ಗೆ ಹೆಚ್ಚು ಕವನವನ್ನು ಬಯರೆಯುತ್ತಾರೆ. ಅದರಲ್ಲಿಯೇ ಹೆಚ್ಚು ಆಸಕ್ತಿಯನ್ನು ಹೊಂದಿರುವವರಾಗಿರುತ್ತಾರೆ. ಕವನದಲ್ಲಿ ಸಾಮಾನ್ಯ ಪರಿಸ್ಥಿತಿ ಏನೆಂಬುದನ್ನು ತೋರಿಸುತ್ತಾರೆ. ಸೌಂದರ್ಯದ ತುಣುಕು ಸಹ ಅದರಲ್ಲಿ ಅಡಕವಾಗಿರುತ್ತದೆ. ತಮ್ಮ ಅಭಿಪ್ರಾಯ ಹಾಗೂ ಕಲ್ಪನೆಯನ್ನು ಬಹಳ ಸುಲಭವಾಗಿ ಕವನದ ರೂಪಕ್ಕೆ ತಿರುಗಿಸುವರು.

ತುಲಾ

ತುಲಾ

ತುಲಾ ರಾಶಿಯ ವ್ಯಕ್ತಿಗಳು ಕಲೆಯ ಪ್ರೇಮಿಗಳು. ಅವರು ಸುಂದರವಾದ ವಸ್ತುಗಳನ್ನು ಅಥವಾ ಕ್ಷಣಗಳಲ್ಲಿ ಸೌಂದರ್ಯವನ್ನು ನೋಡಬಹುದು. ಸನ್ನಿವೇಶದ ಸಕಾರಾತ್ಮಕ ಮತ್ತು ಋಣಾತ್ಮಕ ಎರಡೂ ಕಡೆಗಳನ್ನು ಸ್ಪಷ್ಟವಾಗಿ ಗಮನಹರಿಸಬಹುದು. ಅವರು ಬಾಧಕಗಳ ಬಗ್ಗೆ ಒಟ್ಟಿಗೆ ಹೇಳುವ ಸುಂದರವಾದ ರೇಖೆಗಳನ್ನು ರಚಿಸಬಹುದು ಆದರೆ ಹೆಚ್ಚಿನ ಸಾಧನೆಗಳನ್ನು ಹೆಚ್ಚು ಆಕರ್ಷಿಸುವಂತೆ ಮಾಡುವರು..

ಮಿಥುನ

ಮಿಥುನ

ಮಿಥುನ ರಾಶಿಯ ವ್ಯಕ್ತಿಗಳು ಸಮರ್ಥ ಸಂವಹನಕಾರರು. ಅವರು ತಮ್ಮ ಪದಗಳನ್ನು ಇತರರು ಭ್ರಷ್ಟಗೊಳಿಸಬಹುದು ಎಂದು ಭಾವಿಸುತ್ತಾರೆ. ಅವರು ಮಾತನಾಡುವುದಕ್ಕಿಂತ ಹೆಚ್ಚು ಬರವಣಿಗೆಯ ಮೂಲಕ ತಮ್ಮನ್ನು ತಾವು ವ್ಯಕ್ತಪಡಿಸು ಸುತ್ತಾರೆ. ಹೆಚ್ಚು ಆರಾಮದಾಯಕ ಸ್ಥಿತಿಯಲ್ಲಿ ಇರಲು ಬಯಸುವ ವ್ಯಕ್ತಿಗಳೂ ಹೌದು. ಇವರು ಬಳಸುವ ಪದಗಳು ಕಾವ್ಯಾತ್ಮಕವಾಗಿ ಇರುವುದಿಲ್ಲ. ಆದರೆ ಅದ್ಭುತ ಪದಗಳ ಬಳಕೆಯಿಂದ ಕವನವನ್ನು ಅತ್ಯಂತ ಆಕರ್ಷಕವಾಗಿ ಇರುವಂತೆ ಮಾಡುತ್ತಾರೆ. ಸದಾ ಕಾಲ ಇವರ ಮನಸ್ಸು ಕಲಾತ್ಮಕವಾಗಿ ಯೋಚಿಸುತ್ತ ಇರುತ್ತದೆ. ಹಾಗಾಗಿಯೇ ಇವರು ರಚಿಸುವ ಕವನಗಳು ಹೆಚ್ಚು ಆಕರ್ಷಕ ಹಾಗೂ ಸುಂದರವಾಗಿ ಮೂಡಿ ಬರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುವುದು..

English summary

Zodiac Signs That Are The Most Poetic

Isn't it a wonder how astrology can help us find out just so much about a person just through his zodiac sign? It can tell us about one's hobbies, interests and talents. For instance, according to astrology, people belonging to zodiac signs are the most poetic. These zodiacs are Cancer, Gemini, Libra, Scorpio and Pisces.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X