For Quick Alerts
ALLOW NOTIFICATIONS  
For Daily Alerts

ರಾಶಿಚಕ್ರದ ಪ್ರಕಾರ ಅವಮಾನಕ್ಕೆ ಒಳಗಾದಾಗ ನಿಮ್ಮ ಪ್ರತಿಕ್ರಿಯೆ ಹೇಗಿರುವುದು ನೋಡಿ...

|

ಅವಮಾನ ಎನ್ನುವುದು ಮನುಷ್ಯನಿಗೆ ಸಹಿಸಲಾಗದ ಸಂಗತಿಯಾಗಿರುತ್ತದೆ. ಯಾರಾದರೂ ಅವಮಾನಿಸಿದರು ಅಥವಾ ಅವಮಾನಕ್ಕೆ ಒಳಗಾಗುವಂತಹ ಸನ್ನಿವೇಶವನ್ನು ಸೃಷ್ಟಿಸಿದ್ದಾರೆ ಎಂದಾಗ ಸಾಕಷ್ಟು ಬೇಸರ ಹಾಗೂ ಕೋಪ ಬರುವುದು ಸಹಜ. ಅವಮಾನವಾದಾಗ ನಮ್ಮ ಸಂವೇದನೆಯಲ್ಲಿ ಸಾಕಷ್ಟು ಬದಲಾವಣೆಯಗಳು ಉಂಟಾಗುತ್ತವೆ. ಅವು ಮಾನಸಿಕವಾಗಿ ಒತ್ತಡ ಹಾಗೂ ಕೋಪವನ್ನು ಉತ್ತೇಜಿಸುತ್ತದೆ. ಅಲ್ಲದೆ ಅವಮಾನಕ್ಕೆ ಒಳಗಾದೆವು ಎಂದರೆ ಎಲ್ಲರ ಬಾಯಲ್ಲಿ ಆಡಿಕೊಳ್ಳುವ ವಸ್ತುಗಳಾಗಿ ಬಿಡುತ್ತೇವೆ. ಜೊತೆಗೆ ಸಾಮಾಜಿಕವಾಗಿಯೂ ನಮ್ಮ ಗೌರವ ಕಡಿಮೆಯಾಗುವುದು.

ಮನೆಯಲ್ಲಿ, ಸಮಾಜದಲ್ಲಿ ಅಥವಾ ನಮ್ಮ ವೃತ್ತಿ ಕ್ಷೇತ್ರದಲ್ಲಿ ಅವಮಾನ ಉಂಟಾದರೆ ಆ ಕ್ಷೇತ್ರವನ್ನು ಬಿಟ್ಟು ತೆರಳುತ್ತಾರೆ. ಜೊತೆಗೆ ನಮ್ಮ ಅವಮಾನಕ್ಕೆ ಕಾರಣರಾದ ವ್ಯಕ್ತಿಯನ್ನು ಜೀವನ ಪರ್ಯಂತ ದ್ವೇಷಿಸುತ್ತೇವೆ. ಸಾಧ್ಯವಾದರೆ ಅವರಿಗೂ ಅಹಿತವನ್ನುಂಟುಮಾಡಲು ಅಥವಾ ಅವಮಾನವನ್ನು ಮಾಡಲು ಕಾಯುತ್ತಾ ಕುಳಿತಿರುತ್ತೇವೆ ಎಂದು ಹೇಳಬಹುದು. ಮಾನ ಎನ್ನುವುದು ವ್ಯಕ್ತಿಗೆ ಅತ್ಯಂತ ಶ್ರೇಷ್ಠ ಹಾಗೂ ಸ್ವಾಭಿಮಾನದ ಸಂಗತಿ. ಅದನ್ನು ಒಮ್ಮೆ ಕಳೆದುಕೊಂಡೆವು ಎಂದರೆ ಆ ಭಾವನೆಯಿಂದ ಆಚೆ ಬರುವುದು ಎಂದರೆ ಅದು ಸಾಕಷ್ಟು ಕಷ್ಟದ ಸಂಗತಿ.

ಪುರಾಣ ಇತಿಹಾಸದ ಕಥೆಗಳ ಪ್ರಕಾರ

ಪುರಾಣ ಇತಿಹಾಸದ ಕಥೆಗಳ ಪ್ರಕಾರ

ಪುರಾಣ ಇತಿಹಾಸದ ಕಥೆಗಳ ಪ್ರಕಾರ ಕೆಲವು ಸನ್ನಿವೇಶಗಳು ಹಾಗೂ ಕಥೆಗಳು ಹುಟ್ಟಿಕೊಂಡಿರುವುದು ಅವಮಾನಕ್ಕೆ ಒಳಗಾದ ಸಂಗತಿಯಿಂದ ಹಾಗೂ ಅವಮಾನ ಮಾಡಿರುವ ಕಾರಣದಿಂದಲೇ ಎಂದು ಹೇಳುತ್ತದೆ. ಪುರಾಣ ಇತಿಹಾಸದಲ್ಲಿ ಕಥೆಯನ್ನು ತೋರ್ಪಡಿಸುವುದರ ಮೂಲಕ ವ್ಯಕ್ತಿ ಅವಮಾನಕ್ಕೆ ಒಳಗಾದರೆ ಯಾವೆಲ್ಲಾ ಕೃತ್ಯಗಳನ್ನು ಮಾಡಬಲ್ಲ, ಅದರಿಂದ ಯಾವ ರೀತಿಯ ಮಾನಸಿಕ ಹಿಂಸೆ ಹಾಗೂ ಬದಲಾವಣೆಯನ್ನು ಕಂಡುಕೊಳ್ಳುತ್ತಾನೆ ಎನ್ನುವುದನ್ನು ತೋರಿಸಲಾಗಿದೆ. ಇಂದಿಗೂ ಸಮಾಜದಲ್ಲಿ ಕೆಲವು ಶ್ರೇಷ್ಠ ವ್ಯಕ್ತಿಗಳು ಅವಮಾನಕ್ಕೆ ಒಳಗಾದಾಗ ಯಾವರೀತಿಯ ಸಾಮಾಜಿಕ ಸುದ್ದಿಗಳು ಹುಟ್ಟಿಕೊಳ್ಳುತ್ತವೆ? ಅದನ್ನು ಸಾಧಿಸಿಕೊಳ್ಳುವುದು ಹಾಗೂ ತಪ್ಪು ಎನ್ನುವ ವಾದಗಳ ಮೊರೆಯನ್ನು ಹೇಗೆ ಕೈಗೊಳ್ಳುತ್ತಾರೆ ಎಂದು ನೋಡಬಹುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಚಕ್ರವು ತನ್ನದೇ ಆದ ವಿಶೇಷ ಸಂಗತಿಯನ್ನು ಹಾಗೂ ವಿಭಿನ್ನತೆಯನ್ನು ಒಳಗೊಂಡಿ ರುತ್ತದೆ. ಅಂತೆಯೇ ಆಯಾ ರಾಶಿಚಕ್ರಕ್ಕೆ ಅನುಗುಣವಾಗಿ ವ್ಯಕ್ತಿ ಮಾನಸಿಕ ಹಾಗೂ ದೈಹಿಕ ಸಂವೇದನೆ ಗಳನ್ನು ವ್ಯಕ್ತಪಡಿಸುತ್ತಾನೆ. ಅಂತೆಯೇ ಅವಮಾನಕ್ಕೆ ಒಳಗಾದರೂ ವಿಭಿನ್ನತೆಯ ಪ್ರತಿಕ್ರಿಯೆಯನ್ನು ನೀಡುತ್ತಾರೆ. ಜೊತೆಗೆ ಅವರ ಆಕ್ರೋಷಗಳು ಒಬ್ಬರಿಗಿಂತ ಒಬ್ಬರಲ್ಲಿ ಭಿನ್ನತೆ ಇರುತ್ತದೆ ಎಂದು ಹೇಳಲಾಗು ವುದು. ನಿಮಗೂ ನಿಮ್ಮ ರಾಶಿಚಕ್ರಗಳಿಗೆ ಅನುಗುಣವಾಗಿ ಅವಮಾನಕ್ಕೆ ಒಳಗಾದಾಗ ಯಾವ ರೀತಿಯ ಪ್ರತಿಕ್ರಿಯೆಯನ್ನು ನೀಡುತ್ತೀರಿ? ಎನ್ನುವುದನ್ನು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಮೇಷ

ಮೇಷ

ಮೇಷ ರಾಶಿಯ ವ್ಯಕ್ತಿಗಳು ಅತ್ಯಂತ ನೇರ ಸ್ವಭಾವವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಇವರು ಹಾಗೊಮ್ಮೆ ಯಾರಿಂದಲಾದರೂ ಅವಮಾನಕ್ಕೆ ಒಳಗಾದರೆ ಅವರಿಗೆ ಸುಮ್ಮನೆ ಬಿಡುವುದಿಲ್ಲ. ಅವಮಾನವನ್ನು ಸಹಿಸಿಕೊಂಡು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಅದಕ್ಕೆ ಸರಿಯಾದ ಪ್ರತಿಕ್ರಿಯೆಯನ್ನು

ನೀಡಿಯೇ ಬರುತ್ತಾರೆ. ತನಗೆ ಅವಮಾನ ಮಾಡುವವರಿಗೆ ಎಷ್ಟು ಧೈರ್ಯ ಎನ್ನುವುದನ್ನು ಪ್ರಶ್ನಿಸುತ್ತಾರೆ. ಅವಮಾನಕ್ಕೆ ಒಳಗಾಗು ವಂತೆ ಮಾಡಿದವರಿಗೆ ವ್ಯಂಗ್ಯ ನುಡಿಗಳಿಂದ ಸರಿಯಾದ ಇರಿತವನ್ನು ನೀಡುತ್ತಾರೆ. ಚುಚ್ಚು ಮಾತುಗಳಿಂದ ನೋವನ್ನುಂಟು ಮಾಡುತ್ತಾರೆ. ಮತ್ತೆ ಅವರು ಇವರ ಸುದ್ದಿಗೆ ಬರದಂತೆ ನೋಡಿ ಕೊಳ್ಳುವರು.

ವೃಷಭ

ವೃಷಭ

ಬಸವನ ಚಿಹ್ನೆಯನ್ನು ಒಳಗೊಂಡಿರುವ ವೃಷಭ ರಾಶಿಯ ವ್ಯಕ್ತಿಗಳು ಶಾಂತ ಸ್ವಭಾವದವರು. ಅವರು ಸುಲಭವಾಗಿ ಪ್ರತಿಕ್ರಿಯಿಸುವುದಿಲ್ಲ. ಇವರು ಸಾಕಷ್ಟು ಸಂಗತಿಗಳನ್ನು ಸಹಿಸಿಕೊಳ್ಳುತ್ತಾ ಹೋಗುತ್ತಾರೆ. ಇವರ ಸಹನೆಯ ಮಿತಿ ಮೀರಿದಾಗ ಗೂಳಿಯಂತೆ ಕೆರಳುವರು. ಇವರಿಗೆ ಮಾಡಿದ ಅವಮಾನವು ಅವರ

ಗಮನಕ್ಕೆ ಬರದೆ ಇದ್ದರೆ ಅಥವಾ ಅವರ ಗಮನಕ್ಕೆ ಬಾರದೆ ಹೋದರೆ ಅದನ್ನು ನಿರ್ಲಕ್ಷಿಸುತ್ತಾರೆ. ಹಾಗೊಮ್ಮೆ ಇವರ ಗಮನಕ್ಕೆ ಅವನಮಾನ ಮಾಡಿರುವುದು ತಿಳಿದು ಬಂದರೆ ಅವರನ್ನು ದ್ವೇಷಿಸುತ್ತಾರೆ. ಜೊತೆಗೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುವರು.

ಮಿಥುನ

ಮಿಥುನ

ಮಿಥುನ ರಾಶಿಯವರು ಅವಮಾನಕ್ಕೆ ಒಳಗಾದಾಗ ಹೆಚ್ಚಿನ ಸಂದರ್ಭದಲ್ಲಿ ಅದನ್ನು ನಿರ್ಲಕ್ಷಿಸುತ್ತಾರೆ. ಇವರು ಇವರು ಅವಮಾನಕ್ಕೆ ಒಳಗಾದ ಸಂದರ್ಭದಲ್ಲಿ ಹೆಚ್ಚಿನ ಜನರು ಇದ್ದರು ಅಥವಾ ಸಾರ್ವಜನಿಕರ ಎದುರು ಅವಮಾನ ಮಾಡಿದ್ದಾರೆ ಎಂದಾದರೆ ಅವರನ್ನು ದ್ವೇಷಿಸುತ್ತಾರೆ. ಜೊತೆಗೆ ಅವರನ್ನು ನಿರ್ಲಕ್ಷಿಸುವುದರ ಜೊತೆಗೆ ದೊಡ್ಡ ಸೇಡನ್ನು ತೀರಿಸಿಕೊಳ್ಳುವರು. ಅವರು ಅವಮಾನಿಸಿರುವ ಸಂಗತಿಯ ಕುರಿತು ಪ್ರತಿಕ್ರಿಯೆ ನೀಡುವುದರ ಜೊತೆಗೆ ತಕ್ಕ ಪಾಠವನ್ನು ಕಲಿಸುವರು.

ಕರ್ಕ

ಕರ್ಕ

ಕರ್ಕ ರಾಶಿಯವರಿಗೆ ಅವಮಾನದ ಸಂಗತಿ ಎಂದರೆ ಅದನ್ನು ಆಹಾರಕ್ಕೆ ಸಮಾನ ಎಂದು ಪರಿಗಣಿಸುತ್ತಾರೆ. ಅವರು ಯಾಕೆ ಅವಮಾನ ಮಾಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಅವರ ಉದ್ದೇಶವು ಕೆಟ್ಟದ್ದಾಗಿತ್ತು ಎಂದು ತಿಳಿದರೆ ಅದನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಾರೆ.

ನಂತರ ಅವರನ್ನು ಎಲ್ಲಿನೋಡಿದರೂ ಪ್ರತಿಕಾರದ ರೂಪದಲ್ಲಿಯೇ ನೋಡುತ್ತಾರೆ. ಜೊತೆಗೆ ಅವರಿಗೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅವರಿಂದ ಸಾಧ್ಯವಾದ ರೀತಿಯಲ್ಲೆಲ್ಲಾ ಪ್ರತಿಕಾರ ತೀರಿಸಿಕೊಳ್ಳುವುದರ ಮೂಲಕ ಅವಮಾನಿಸುತ್ತಾರೆ.

ಸಿಂಹ

ಸಿಂಹ

ಸಿಂಹ ರಾಶಿಯವರು ಅತ್ಯಂತ ಪ್ರತಿಕಾರದ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಹಾಗೊಮ್ಮೆ ಅವರಿಗೆ ಅವಮಾನ ಮಾಡಿದರು ಎಂದಾದರೆ ಅವರನ್ನು ಸುಮ್ಮನೆ ಬಿಡುವುದಿಲ್ಲ. ಸೂಕ್ತ ರೀತಿಯಲ್ಲಿ ಪಾಠಕಲಿಸುತ್ತಾರೆ. ಇವರ ಆಕ್ರೋಶ ಹಾಗೂ ದ್ವೇಷ ಹೇಗಿರುತ್ತದೆ ಎನ್ನುವುದನ್ನು ಅಷ್ಟು ಸುಲಭವಾಗಿ ಹೇಳಲು ಸಾಧ್ಯವಿಲ್ಲ. ಇವರನ್ನು ದ್ವೇಷದಿಂದ ನೋಡಬೇಕು ಅಥವಾ ಅವಮಾನಕ್ಕೆ ಒಳಪಡಿಸಬೇಕು ಎಂದರೆ ಸಾಕಷ್ಟು ಯೋಚನೆ ಮಾಡಿರಬೇಕು. ಏಕೆಂದರೆ ನಂತರ ಇವರು ನೀಡುವ ಪ್ರತ್ಯುತ್ತರ ಅತ್ಯಂತ ಗಂಭೀರವಾಗಿರುತ್ತದೆ.

ಕನ್ಯಾ

ಕನ್ಯಾ

ಈ ರಾಶಿಯವರು ಅತ್ಯಂತ ಸೂಕ್ಷ್ಮ ಸ್ವಭಾವದವರು. ಇವರು ತಾವು ಅವಮಾನ ಅಥವಾ ದ್ವೇಷದ ಸಂಗತಿಯನ್ನು ಇವರು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಾರೆ. ಜೊತೆಗೆ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾರೆ. ಒಂದು ಕ್ಷಣ ಯಾರಿಂದ ತಪ್ಪಾಗಿದೆ? ಯಾಕೆ ಅವಮಾನಿಸಿದ್ದಾರೆ ಎಂದು ಮೊದಲು ಯೋಚಿಸುತ್ತಾರೆ. ತಪ್ಪು ಬೇರೆಯವರಿಂದಲೇ ಆಗಿದೆ ಎಂದರೆ ಅದಕ್ಕೆ ಸರಿಯಾದ ಪ್ರತ್ಯುತ್ತರ ಕೊಡದೆ ಹೋಗುವುದಿಲ್ಲ. ಗಾಯಕ್ಕೆ ಉಪ್ಪು ಹಾಕಿದಂತೆ

ಅವಮಾನ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳುತ್ತಾರೆ.

ತುಲಾ

ತುಲಾ

ಯಾರಾದರೂ ಇವರನ್ನು ಅವಮಾನ ಮಾಡಿದರೆ ತಕ್ಷಣವೇ ಪ್ರತ್ಯುತ್ತರ ನೀಡುವುದಿಲ್ಲ. ಅವರು ಅವಮಾನಿಸಲು ಏಕೆ ಮುಂದಾದರು? ಅದರ ಹಿಂದಿನ ಉದ್ದೇಶ ಏನಿರಬಹುದು? ಎನ್ನುವುದರ ಬಗ್ಗೆ ಯೋಚಿಸುತ್ತಾರೆ. ನಂತರ ಮರಳಿ ಪ್ರತಿಕ್ರಿಯೆ ನೀಡುತ್ತಾರೆ. ಸಮಾನತೆ ಹಾಗೂ ಸಮತೋಲನ ಕಾಯ್ದುಕೊಳ್ಳುವ

ಇವರು ಅನುಚಿತವಾಗಿ ವರ್ತಿಸುವುದನ್ನು ದ್ವೇಷಿಸುವರು. ಮನಸ್ಸಿಗೆ ನೋವುಂಟು ಮಾಡಿದವರ ಬಗ್ಗೆ ಸಾಕಷ್ಟು ದ್ವೇಷ ಹಾಗೂ ಬೇಸರವನ್ನು ಹೊಂದಿರುತ್ತಾರೆ. ಇವರ ದ್ವೇಷ ಹಾಗೂ ಕೋಪಕ್ಕೆ ಒಳಗಾದವರಿಗೆ ಸೂಕ್ತ ಪ್ರತ್ಯುತ್ತರ ನೀಡದೆ ಇರುವುದಿಲ್ಲ.

ವೃಶ್ಚಿಕ

ವೃಶ್ಚಿಕ

ವೃಶ್ಚಿಕ ರಾಶಿಯವರು ಮೇಲ್ನೋಟಕ್ಕೆ ಸೂಕ್ಷ್ಮ ವ್ಯಕ್ತಿಗಳಂತೆ ಕಾಣದಿದ್ದರೂ ವಿಷಯವನ್ನು ಬಹಳ ಸೂಕ್ಷ್ಮವಾಗಿ ತೆಗೆದು ಕೊಳ್ಳುತ್ತಾರೆ. ಅವಮಾನದ ಸಂಗತಿಗಳು ಇವರ ಹೃದಯವನ್ನು ಬಡಿಯುವುದು. ಅನಾವಶ್ಯಕವಾಗಿ ವಿರೋಧಿಸುವ ಹಾಗೂ ಅವಮಾನಿಸುವ ವ್ಯಕ್ತಿಗಳಿಗೆ ಸರಿಯಾದ ಪ್ರತ್ಯುತ್ತರ ನೀಡುತ್ತಾರೆ. ಜೊತೆಗೆ ಅದರ ಸೇಡನ್ನು ತೀರಿಸಿಕೊಳ್ಳಲು ಅಪರಾಧ ಮಾಡುವುದರ ಮೂಲಕವೂ ಹೋಗುವ ಸಾಧ್ಯತೆಗಳಿವೆ. ಏಕೆಂದರೆ ಇವರ ದೃಷ್ಟಿಯಲ್ಲಿ ಅವಮಾನ ಮಾಡುವುದು ಅತ್ಯಂತ ಅಪರಾಧ ಎಂದು ಪರಿಗಣಿಸುತ್ತಾರೆ.

ಧನು

ಧನು

ಧನು ರಾಶಿಯ ವ್ಯಕ್ತಿಗಳು ಅವಮಾನಕ್ಕೆ ಒಳಗಾದರೆ ಅದನ್ನು ಮೊದಲು ವ್ಯಾಖ್ಯಾನಿಸಲು ಪ್ರಯತ್ನಿಸುತ್ತಾರೆ. ವಾದಗಳು, ಕಾದಾಟಗಳು, ತಪ್ಪು ಗ್ರಹಿಕೆ ಎಲ್ಲವೂ ತಪ್ಪೆಂದು ಗ್ರಹಿಸುತ್ತಾರೆ. ಹಾಗಾಗಿ ಇವರು ಎಲ್ಲಾ ಸಂಗತಿಯಲ್ಲೂ ಸಕಾರಾತ್ಮಕ ವಿಷಯವನ್ನು ಪಡೆದುಕೊಳ್ಳಲು ಬಯಸುತ್ತಾರೆ. ಅವಮಾನ ಹಾಗೂ ದುಷ್ಟು ಕೃತ್ಯವನ್ನು ಎಸಗಿದವರಿಗೆ ಸರಿಯಾದ ಪ್ರತ್ಯುತ್ತರ ನೀಡುತ್ತಾರೆ. ಸೇಡನ್ನು ಸೂಕ್ತ ರೀತಿಯಲ್ಲಿ ತೀರಿಸಿ ತೋರಿಸುವರು. ಅವಮಾನಿಸುವ ವ್ಯಕ್ತಿಗಳಿಂದ ದೂರ ಸರಿಯುತ್ತಾರೆ. ನಂತರದ ದಿನದಲ್ಲಿ ಎಂದಿಗೂ ಅವರ ಸಹವಾಸವನ್ನು ಮಾಡುವುದಿಲ್ಲ.

ಮಕರ

ಮಕರ

ಇವರು ಅವಮಾನ ಮಾಡಿದ ವ್ಯಕ್ತಿಗಳಿಗೆ ಸೂಕ್ತ ಉತ್ತರ ನೀಡದೆ ಹೋಗರು. ಪ್ರತಿಯೊಬ್ಬರಿಗೂ ತಾವು ಮಾಡುವ ಕೃತ್ಯ ಹಾಗೂ ವರ್ತನೆಯ ಬಗ್ಗೆ ಸೂಕ್ತ ನಿಲುವು ಇರುತ್ತದೆ. ಹಾಗೊಮ್ಮೆ ವ್ಯಕ್ತಿ ಒಬ್ಬರನ್ನು ಅವಮಾನಿಸಿದ ಎಂದರೆ ಅದು ಉದ್ದೇಶ ಪೂರ್ವಕ ವಾಗಿಯೇ ಇರುತ್ತದೆ ಎಂದು ತಿಳಿಯುವರು. ಜೊತೆಗೆ

ಅಂತಹ ಕೃತ್ಯವನ್ನು ಇವರಿಗೆ ತೋರಿಸಿದರೆ ಸರಿಯಾದ ಪಾಠ ಕಲಿಸುವರು. ಅವಮಾನಕ್ಕೆ ಸೂಕ್ತ ಉತ್ತರವನ್ನು ಆ ಕ್ಷಣದಲ್ಲಿಯೇ ನೀಡುವರು. ಅಂತಹ ವ್ಯಕ್ತಿಗಳಿಗೆ ಯಾವುದೇ ಗೌರವವನ್ನು ನೀಡುವುದಿಲ್ಲ.

ಕುಂಭ

ಕುಂಭ

ಯಾರಾದರೂ ಇವರನ್ನು ಅವಮಾನ ಮಾಡಿದರೆ ಅದನ್ನು ಅಷ್ಟು ಸುಲಭವಾಗಿ ತೆಗೆದುಕೊಳ್ಳುವುದಿಲ್ಲ. ಅಂತಹ ವ್ಯಕ್ತಿಯನ್ನು ಇವರು ಹತ್ತಿರ ಇರಿಸಿ ಕೊಳ್ಳುವುದಿಲ್ಲ. ಜೊತೆಗೆ ಆಪ್ತರ ಪಟ್ಟಿಯಿಂದ ಅವರನ್ನು ತೆಗೆದುಹಾಕುವರು. ನಂತರ ಅವರೊಂದಿಗೆ ಸ್ನೇ-ಸಂಬಂಧವನ್ನು ಸಹ ಕಡಿದುಕೊಳ್ಳುವರು. ಅವಮಾನವನ್ನು ಮಾಡುವವರಿಗೆ ಸೂಕ್ತ ಪಾಠವನ್ನು ಕಲಿಸುವರು. ಸೇಡು ತೀರಿಸುವುದು ಎಂದರೆ ಇವರಿಗೆ ಅತ್ಯಂತ ಮಹತ್ತರವಾದ ಸಂಗತಿಯಾಗಿರುತ್ತದೆ. ತಮ್ಮ ಮನಸ್ಸಿಗೆ ನೋವು ಮಾಡಿದವರ ಬಗ್ಗೆ ಯಾವುದೇ ಅನುಕಂಪ ಹಾಗೂ ಪ್ರೀತಿಯನ್ನು ತೋರುವುದಿಲ್ಲ.

ಮೀನ

ಮೀನ

ಈ ರಾಶಿಯ ವ್ಯಕ್ತಿಗಳು ಅವಮಾನವನ್ನು ಅತ್ಯಂತ ವೈಯಕ್ತಿಕವಾಗಿ ಪರಿಗಣಿಸುತ್ತಾರೆ. ಅದನ್ನು ಅವರು ಅಷ್ಟು ಸುಲಭವಾಗಿ ನಿರ್ಲಕ್ಷಿಸುವುದಿಲ್ಲ. ಅವರ ಭಾವನೆಗಳಿಗೆ ಉಂಟಾದ ನೋವನ್ನು ಅಷ್ಟು ಸುಲಭವಾಗಿ ಮರೆಯುವುದಿಲ್ಲ.ಅವಮಾನ ಮಾಡಿದವರಿಗೆ ಅರಿಯಾದ ರೀತಿಯಲ್ಲಿ ಪ್ರತ್ಯುತ್ತರ ನೀಡುವುದರ ಮೂಲಕ ಪಾಠಕಲಿಸುತ್ತಾರೆ. ಭಾವನಾತ್ಮಕ ವ್ಯಕ್ತಿಗಳಾದ ಇವರು ಸಾಮಾನ್ಯವಾಗಿ ಇತರರಿಗೆ ಅವಮಾನ ಮಾಡಲು ಇಷ್ಟ ಪಡುವುದಿಲ್ಲ. ಎಲ್ಲರನ್ನೂ ಹೆಚ್ಚು ಪ್ರೀತಿ ವಿಶ್ವಾಸದಿಂದ ಕಾಣಲು ಪ್ರಯತ್ನಿಸುತ್ತಾರೆ.

English summary

Your Reaction When You Are Insulted Based On Your Zodiac

How do you deal with it when you are insulted by a friend or a foe in public? Do you regret not having reverted properly or for having reverted with more than what was needed? Astrology says that even the reaction to when a person gets insulted by somebody can be predicted on the basis of zodiac signs.
X
Desktop Bottom Promotion