Just In
- 7 hrs ago
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2021: ಇಲ್ಲಿದೆ ಬೆಸ್ಟ್ ವೇ ಸ್ ಟು ಸೆಲೆಬ್ರೇಟ್..
- 8 hrs ago
ಮಕ್ಕಳಿಗೆ ಪಿಸ್ತಾ ನೀಡಿದರೆ ಬುದ್ಧಿ ಶಕ್ತಿ ಹೆಚ್ಚುವುದರ ಜೊತೆಗೆ ಈ ಪ್ರಯೋಜನಗಳಿವೆ
- 9 hrs ago
ಸಂಬಂಧ ಲಾಂಗ್ ಡಿಸ್ಟಾನ್ಸ್ ನಲ್ಲಿದ್ದಾಗ ಈ ಪ್ರೀತಿ ಮಂತ್ರ ಸಹಾಯ ಮಾಡುತ್ತೆ..
- 11 hrs ago
ಕೊರೊನಾ 2ನೇ ಅಲೆ: ಹೀಗೆ ಮಾಡಿ ವೈರಸ್ ವಿರುದ್ಧ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸಿ
Don't Miss
- Automobiles
17 ನಗರಗಳಲ್ಲಿ 22 ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆದ ಎಂಜಿ ಮೋಟಾರ್
- News
ಭಾರತದಲ್ಲಿ ಫೆ.27 ಹಾಗೂ 28 ರಂದು ಕೊರೊನಾ ಲಸಿಕೆ ಪ್ರಕ್ರಿಯೆ ಇಲ್ಲ
- Movies
ಇವರೇ ನೋಡಿ ಭಟ್ಟರ ಎರಡನೇ ಗಾಳಿಪಟದ ನಾಯಕಿಯರು
- Sports
ಐಎಸ್ಎಲ್: ಕೇರಳಕ್ಕೆ ಸೋಲುಣಿಸಿದ ನಾರ್ಥ್ಈಸ್ಟ್ ಯುನೈಟೆಡ್ ಪ್ಲೇ ಆಫ್ ಗೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಫೆ. 26ರ ಮಾರುಕಟ್ಟೆ ದರ ಇಲ್ಲಿದೆ
- Education
RBI Grade B Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
20-3-2019- ಬುಧವಾರದ ದಿನ ಭವಿಷ್ಯ
ಮಹಾವಿಷ್ಣು ವಿಷ್ಣುವಿನ ಒಂದು ಅಂಶ, ಮಾನವ ಗ್ರಹಿಕೆಗೆ ಮೀರಿದ ಮತ್ತು ಎಲ್ಲ ಗುಣಲಕ್ಷಣಗಳನ್ನು ಮೀರಿದ ಪರಮ ರೂಪ. ವೈಷ್ಣವ ಪಂಥದ ಒಂದು ಪರಂಪರೆಯಾದ ಗೌಡೀಯ ವೈಷ್ಣವ ಪಂಥದಲ್ಲಿ, ಸಾತ್ವತ ತಂತ್ರವು ವಿಷ್ಣುವಿನ ಮೂರು ಭಿನ್ನ ರೂಪಗಳನ್ನು ವಿವರಿಸುತ್ತದೆ: ಮಹಾವಿಷ್ಣು, ಗರ್ಭೋದಕಷಾಯಿ ವಿಷ್ಣು ಮತ್ತು ಕ್ಷೀರೋದಕಷಾಯಿ ವಿಷ್ಣು.
ಮಹಾವಿಷ್ಣು ಪದವು ಬ್ರಹ್ಮನ್ಪದವನ್ನು ಹೋಲುತ್ತದೆ, ಮತ್ತು ದೇವರ ಪರಮೋಚ್ಚ ವ್ಯಕ್ತಿತ್ವವಾಗಿದೆ. ಇದರರ್ಥ ಪರಮ ಸತ್ಯವನ್ನು ಮೊದಲು ಬ್ರಹ್ಮನ್ ಆಗಿ (ನಿರಾಕಾರ ಅಂಶ), ನಂತರ ಪರಮಾತ್ಮವಾಗಿ (ವ್ಯಕ್ತಿಗತ ಅಂಶ) ಮತ್ತು ಅಂತಿಮವಾಗಿ ಭಗವಾನ್ (ಮೈದಾಳಿದ ಪರಿಪೂರ್ಣತೆ) ಆಗಿ ಸಿದ್ಧಿ ಮಾಡಿ ಕೊಳ್ಳಲಾಗುತ್ತದೆ. ಹಾಗಾಗಿ ಭಕ್ತಿ ಭಗವಾನ್ ಕೃಷ್ಣನಿಗೆ (ವಿಷ್ಣುವಿನ ಅವತಾರ) ಹೋಗುತ್ತದೆ. ಈ ರೀತಿಯಲ್ಲಿ, ಭಕ್ತಿಯು ಯೋಗವನ್ನೂ ಮೀರಿಸುತ್ತದೆ ಮತ್ತು ಇದರ ಗುರಿ ಪರಮಾತ್ಮವಾಗಿದೆ. ಮಹಾವಿಷ್ಣುವು ಎಲ್ಲ ಭೌತಿಕ ಬ್ರಹ್ಮಾಂಡಗಳಲ್ಲಿ ಎಲ್ಲ ಜೀವಾತ್ಮಗಳ ಪರಮಾತ್ಮವಾಗಿದೆ. ಹಾಗಾಗಿ ಶಿವ, ಪರಾಶಕ್ತಿ, ಬ್ರಹ್ಮಸೇರಿದಂತೆ ಎಲ್ಲ ದೇವತೆಗಳು ಮಹಾವಿಷ್ಣು ವಿಸ್ತರಣೆಯ ಭಾಗವೆಂದು ಪರಿಗಣಿಸಲಾಗಿದೆ.ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ಮಂ ಜುನಾಥ್ ದೈವಜ್ಞ ಜ್ಯೋತಿಷ್ಯರು 9845743807

ಮೇಷ (20 ಮಾರ್ಚ್ 2019)
ಜನರ ಮನಸ್ಸನ್ನು ಗೆಲ್ಲುವ ಅವಕಾಶ ಲಭ್ಯವಾಗಲಿದೆ. ನಿಮ್ಮಿಂದ ಚಾಲನೆಗೊಂಡ ಉತ್ತಮ ಕಾರ್ಯವು ನಿಮ್ಮ ಕ್ರೀಯಾಶೀಲತೆಗೆ ಹಿಡಿದ ಕನ್ನಡಿಯಂತಾಗುವುದು. ಸಮಾಜದ ಜನರಿಂದ ಪ್ರಶಂಸೆಗಳ ಸುರಿಮಳೆ ಆಗುವುದು. ನಿಮ್ಮ ಇಚ್ಛಾಶಕ್ತಿಗೆ ಹೆಚ್ಚಿನ ಬಲ ಬರಲಿದೆ. ಅನೇಕ ಉತ್ತಮ ಕಾರ್ಯಗಳು ನಿಮ್ಮಿಂದ ನೆರವೇರಲ್ಪಡುವುದು. ಅಲ್ಲದೆ ಕೋರ್ಟು ಕಚೇರಿಯ ಕೆಲಸಗಳಲ್ಲಿ ಗೆಲುವು ನಿಮ್ಮ ದಾಗಲಿದೆ. ಎಷ್ಟೇ ಹಣ ಇದ್ದರೂ ವ್ಯಾಪಾರ, ವ್ಯವಹಾರಗಳಿಗೆ ಸಾಲದಾಗಬಹುದು. ಹಾಗಂತ ಹಣವನ್ನು ಪರರಿಂದ ಎರವಲು ಪಡೆಯದಿರಿ. ಪಡೆದ ಸಾಲವನ್ನು ತೀರಿಸಲು ನಿಮಗೆ ಕಷ್ಟ ವಾಗುವುದು. ಗುರುವಿನ ಮೊರೆ ಹೋಗುವುದು ಒಳಿತು. ಅದೃಷ್ಟ ಸಂಖ್ಯೆ:2

ವೃಷಭ
ಖರ್ಚುವೆಚ್ಚಗಳು ಹನುಮಂತನ ಬಾಲದ ಹಾಗೆ. ದುಡಿದ ಹಣವೆಲ್ಲವೂ ನೀರಿನಂತೆ ಖರ್ಚಾಗುತ್ತಿರುವುದು. ಹಾಗಾಗಿ ಖರ್ಚುವೆಚ್ಚಗಳ ಬಗ್ಗೆ ಕೈ ಹಿಡಿತ ಮಾಡುವುದು ಒಳ್ಳೆಯದು. ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲೂ ತಾಳ್ಮೆಯನ್ನು ಕಳೆದುಕೊಳ್ಳದೆ ಇರುವ ನಿಮ್ಮ ಗುಣವು ಬಂಧು ಬಾಂಧವರಲ್ಲಿ ಅಚ್ಚರಿಯನ್ನು ಮೂಡಿಸುವುದು. ಅಂತೆಯೇ ನಿಮ್ಮ ತಾಳ್ಮೆಯೇ ಮಹತ್ತರ ಕೀರ್ತಿಯನ್ನು ತಂದುಕೊಡುವುದು. ಬಂಧುಮಿತ್ರರನ್ನು ಪ್ರೀತಿಯಿಂದ ಆದರಿಸಬೇಕು ನಿಜ. ಆದರೆ ಅವರಿಗೆ ಪ್ರೀತಿಯನ್ನು ತೋರಿದಲ್ಲಿ ಅವರು ನಿಮ್ಮ ಬಗ್ಗೆ ಇಲ್ಲಸಲ್ಲದ ನಂಜನ್ನೆ ಕಾರುವರು. ಹಾಗಾಗಿ ಎಷ್ಟು ಬೇಕೋ ಅಷ್ಟು ಅವರೊಡನೆ ವ್ಯವಹರಿಸಿ. ಅದೃಷ್ಟ ಸಂಖ್ಯೆ:1

ಮಿಥುನ
ಯಾವುದೇ ಕಾರಣಕ್ಕೂ ಯಾರ ಜೊತೆಗೂ ವಾಗ್ವಾದಕ್ಕೆ ಇಳಿಯುವುದು ಬೇಡ. ನಿಮ್ಮ ಮಾತು ಕೃತಿಯಲ್ಲಿ ತಾಳ್ಮೆಯಿರಲಿ. ಮನೆಯಿಂದ ಹೊರಗೆ ಹೊರಡುವಾಗ ಗುರು, ಹಿರಿಯರ ಆಶೀರ್ವಾದ ಪಡೆದು ಹೊರಡಿ. ವಿನಾಕಾರಣ ಪರರ ವಿಷಯದಲ್ಲಿ ಭಾಗವಹಿಸದಿರಿ ಮತ್ತು ಕುತರ್ಕ, ಮುಂಗೋಪವನ್ನು ನಿಯಂತ್ರಿಸಿದಲ್ಲಿ ಹೆಚ್ಚು ಅನುಕೂಲವನ್ನು ಹೊಂದುವಿರಿ. ಗುರುವಿನ ಶುಭ ಸಂಚಾರದಿಂದ ಒಳಿತಾಗುವುದು.ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವ ಸಂದರ್ಭ ಎದುರಾಗಲಿದೆ. ಆದರೆ ಇದಕ್ಕೂ ಮುಂಚೆ ಸಂಗಾತಿಯ ಸಲಹೆಯನ್ನು ಸ್ವೀಕರಿಸುವುದು ಒಳ್ಳೆಯದು. ಇಲ್ಲದೆ ಇದ್ದಲ್ಲಿ ಅವರು ಮಧ್ಯ ಪ್ರವೇಶಿಸಿ ಆಗುವ ಕೆಲಸಕ್ಕೆ ಕಲ್ಲು ಹಾಕುವರು. ಅದೃಷ್ಟ ಸಂಖ್ಯೆ:2

ಕಟಕ
ಸದಾ ಚಿಂತೆಯ ಮೂಡ್ ನಲ್ಲಿದ್ದು ಎಲ್ಲಾ ಕಳೆದುಕೊಂಡವರಂತೆ ಇರುವುದು ಸೂಕ್ತವಲ್ಲ. ಕತ್ತಲೆ ಕಳೆದ ಮೇಲೆ ಬೆಳಕು ಖಂಡಿತ ಬರುವುದು. ಶುಭ ದಿನಗಳು ನಿಮ್ಮ ಪಾಲಿಗೆ ಇವೆ. ಅಧೈರ್ಯ ಬೇಡ. ಕುಲದೇವರನ್ನು ನೆನೆದು ಕಾರ್ಯ ಪ್ರವೃತ್ತರಾಗಿ. ನಿಮ್ಮ ಕಾರ್ಯ ಯೋಜನೆಯನ್ನು ಕಾರ್ಯಗತಗೊಳಿಸಲು ಉತ್ತಮ ದಿನವಾಗಿದೆ. ಆಸ್ತಿ, ಮನೆಯ ವಿಚಾರದಲ್ಲಿ ಹೆಚ್ಚಿನ ಅನುಕೂಲ ಕಂಡು ಬರುವುದು. ಮನೆಯ ಸ್ತ್ರೀಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದೆ. ಆದರೆ ಕೇವಲ ಹಣದಿಂದ ಮಾನಸಿಕ ನೆಮ್ಮದಿಯನ್ನು ಪಡೆಯಲು ಆಗುವುದಿಲ್ಲ. ಮನೋನಿಯಾಮಕ ರುದ್ರದೇವರನ್ನು ಭಜಿಸಿ ಮತ್ತು ಮನೆಯಲ್ಲಿನ ಗುರು, ಹಿರಿಯರ ಆಶೀರ್ವಾದ ಪಡೆಯಿರಿ. ಅದೃಷ್ಟ ಸಂಖ್ಯೆ:3

ಸಿಂಹ
ಹಲಸಿನ ಹಣ್ಣನ್ನು ಕತ್ತರಿಸಲು ಸೂಜಿಯು ಉಪಯೋಗಕ್ಕೆ ಬರುವುದಿಲ್ಲ. ಅದಕ್ಕೆ ಹರಿತವಾದ ಚಾಕು ಬೇಕಾಗುವುದು. ಅಂತೆಯೇ ನಿಮ್ಮ ವಿರುದ್ಧ ಪಿತೂರಿ ನಡೆಸುವವರಿಗೆ ಬರಿ ಬಾಯಿಮಾತಿನ ಉಪಯೋಗವಿಲ್ಲ. ಅವರಿಗೆ ಕಾನೂನಿನ ಭಯ ಹುಟ್ಟುವಂತೆ ಮಾಡಿ. ಹೊಸ ಆರ್ಥಿಕ ನೀತಿಯು ನಿಮಗೆ ಕೆಲವು ಕಳಂಕಗಳನ್ನು ತರುವ ಸಾಧ್ಯತೆ ಇರುತ್ತದೆ. ಇದರಿಂದ ನೀವು ಪರರಿಗೆ ಕೊಡಬೇಕಾಗಿರುವ ಹಣವು ಸಕಾಲದಲ್ಲಿ ದೊರೆಯದೆ ಇರುವುದರಿಂದ ವಿನಾಕಾರಣ ಟೀಕೆಗೆ ಒಳಗಾಗುವಿರಿ. ಯಾವ ಹುತ್ತದಲ್ಲಿ ಯಾವ ಹಾವೋ ಎಂಬ ವಾಸ್ತವವನ್ನು ಅರಿತು ಹೆಜ್ಜೆ ಇಡಿ. ನೀವು ನಡೆಯುವ ದಾರಿ ಸರಿಯಾದದ್ದೇ ಆದರೆ ನಿಮ್ಮ ಆಪ್ತ ಹಿತೈಷಿಗಳು ನಿಮ್ಮ ದಾರಿಗೆ ಅಡ್ಡಬರುವರು. ಇಲ್ಲವೆ ಹಾದಿ ತಪ್ಪಿಸುವರು. ಅದೃಷ್ಟ ಸಂಖ್ಯೆ:6

ಕನ್ಯಾ
ನಿಮ್ಮ ಮನೆದೇವರ ಸನ್ನಿಧಾನಕ್ಕೆ ಹೋಗಿ ಬನ್ನಿ. ಬಹಳ ದಿನಗಳಿಂದ ಹರಕೆ ಹೊತ್ತುಕೊಂಡು ಅದನ್ನು ತೀರಿಸಲಾಗದೆ ಒದ್ದಾಡುತ್ತಿದ್ದೀರಿ. ಆದಷ್ಟು ಶೀಘ್ರವಾಗಿ ಗುರು ಕಾಣಿಕೆಯನ್ನು ಸಲ್ಲಿಸಿ ಗುರುವಿನ ಆಶೀರ್ವಾದವನ್ನು ಪಡೆಯಿರಿ. ಮನೆಯ ಹಿರಿಯ ರೊಬ್ಬರಿಂದ ನಿಮ್ಮ ಪೂರ್ವಿಕರ ಆಸ್ತಿಗೆ ಸಂಬಂಧಪಟ್ಟಂತೆ ಮಹತ್ವದ ಮಾಹಿತಿಯೊಂದು ನಿಮಗೆ ಲಭ್ಯವಾಗಲಿದೆ. ಇದರಿಂದ ನಿಮಗೆ ಅನುಕೂಲವೇ ಆಗುವುದು. ನಿಮ್ಮ ಮಹತ್ತರ ಆಸೆಯೂ ಕೈಗೂಡುವುದು. ಅವಕಾಶಗಳು ನಿಮ್ಮ ಸುತ್ತಲೇ ಗಿರಕಿ ಹೊಡೆಯು ತ್ತಿರುವುದು. ಬಹುದಿನದ ಕನಸು ನನಸಾಗುವ ಕಾಲವಿದೆ. ಆದರೆ ಅದನ್ನು ಎದುರಿಸುವ ಧೈರ್ಯವನ್ನು ಸಂಪಾದಿಸಿ. ಧೈರ್ಯಂ ಸರ್ವತ್ರ ಸಾಧನಂ ಎಂಬುದನ್ನು ಮರೆಯದಿರಿ. ಅದೃಷ್ಟ ಸಂಖ್ಯೆ:9

ತುಲಾ
ಮಾತಿನಲಿ ಗಾಂಭೀರ್ಯವಿರಲಿ. ನಿಮ್ಮ ಅಧಿಕಾರಕ್ಕೆ ತಕ್ಕಂತೆ ವರ್ತಿಸಿ. ಇಲ್ಲದೆ ಇದ್ದಲ್ಲಿ ನಿಮ್ಮ ಕೈ ಕೆಳಗೆ ಕೆಲಸ ಮಾಡುವವರೆ ನಿಮ್ಮನ್ನು ಕಂಡು ಅಪಹಾಸ್ಯ ಮಾಡುವರು. ಇಲ್ಲವೆ ನಿಮ್ಮ ಮಾತಿಗೆ ಬೆಲೆಯನ್ನು ನೀಡುವುದಿಲ್ಲ. ಕೆಲಸ ಮಾಡುವ ಸ್ಥಳದಲ್ಲಿ ಮೇಲಧಿಕಾರಿಗಳ ಪ್ರಶಂಸೆಗೆ ಒಳಗಾಗುವಿರಿ. ಇದರಿಂದ ನಿಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಉತ್ಸಾಹ ಮೂಡುವುದು. ಸಂಗಾತಿಯ ಸಲಹೆ, ಸಹಕಾರಗಳನ್ನು ತಿರಸ್ಕರಿಸದಿರಿ. ವೃಥಾ ಮನೋವ್ಯಾಕುಲ, ಅಂಜಿಕೆ, ಅಭದ್ರತೆಗಳು ನಿಮ್ಮನ್ನು ಕಾಡುವವು. ಮನೆಯಲ್ಲಿ ಸಕಲ ಸೌಲಭ್ಯಗಳಿದ್ದರೂ ಅದನ್ನು ಅನುಭವಿಸುವ ಯೋಗವಿರುವುದಿಲ್ಲ. ಸಂಗಾತಿಯ ಕುಹಕ ನುಡಿಯು ನಿಮ್ಮ ಆತ್ಮಸ್ಥೈರ್ಯವನ್ನು ಕೆಣಕುವುದು. ಅದೃಷ್ಟ ಸಂಖ್ಯೆ:9

ವೃಶ್ಚಿಕ
ಸಾಡೇಸಾತ್ ಶನಿಯ ಪ್ರಭಾವ ಹೇಗೆ ತಿರುಗುತ್ತದೆ ಎನ್ನುವುದೇ ಗೊತ್ತಾಗುವುದಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆದಿದೆ ಎನ್ನುತ್ತಿ ರುವಾಗಲೇ ದಿಢೀರನೆ ಸಮಸ್ಯೆಗಳು ಎದುರಾಗುವುದು. ಆಂಜನೇಯ ಸ್ವಾಮಿಯನ್ನು ಅನನ್ಯತೆಯಿಂದ ಭಜಿಸಿ ಆನಂದ ಭರಿತರಾಗಿ. ಮುಖ ನೋಡಿ ಮಣೆ ಹಾಕುವ ಮಂದಿಯು ನಿಮ್ಮ ಸುತ್ತಲಿರುವರು. ಅವರ ವರ್ತನೆಯು ನಿಮಗೆ ಬೇಸರವನ್ನುಂಟು ಮಾಡುವುದು. ಆದರೆ ಇದೆಲ್ಲವೂ ನಿಮ್ಮ ಜೀವನದಲ್ಲಿನ ಪರೀಕ್ಷೆಗಳು ಇದಕ್ಕೆ ಹೆದರುವ ಅವಶ್ಯಕತೆ ಇರುವುದಿಲ್ಲ. ಬಂಧುಗಳು, ಸ್ನೇಹಿತರು ನಿಮಗೆ ಸಕಾಲದಲ್ಲಿ ಸಹಾಯ ಮಾಡುವುದಿಲ್ಲ. ಗ್ರಹಗಳ ಸಂಚಾರ ವ್ಯತಿರಿಕ್ತವಾದಾಗ ಸ್ವಂತ ಮಕ್ಕಳೆ ನಿಮ್ಮನ್ನು ದೂರುವರು ಮತ್ತು ಹಣಕಾಸಿನ ನೆರವಿಗಾಗಿ ನಿಮ್ಮನ್ನು ಪೀಡಿಸುವರು. ಆಂಜನೇಯ ಸ್ತೋತ್ರವನ್ನು ಪಠಿಸಿ. ಅದೃಷ್ಟ ಸಂಖ್ಯೆ:4

ಧನಸ್ಸು
ಒಳ್ಳೆಯ ದಿನಗಳಿಗಾಗಿ ಉತ್ತಮ ಪ್ರಯತ್ನವನ್ನು ಮಾಡುತ್ತಿರುವಿರಿ. ನಿಮ್ಮ ಪ್ರಯತ್ನದಲ್ಲಿ ಎಳ್ಳಷ್ಟು ಕುಂದಿಲ್ಲ. ಆದರೆ ಜನ್ಮಶನಿಯು ನಿಮ್ಮ ಪ್ರಯತ್ನಗಳು ಕೈಗೂಡಲು ಅಡೆತಡೆಯನ್ನುಂಟು ಮಾಡುತ್ತಿರುವರು. ದಶರಥಕೃತ ಶನಿಯ ಮಂತ್ರವನ್ನು ಪಠಿಸಿ. ಅಧಿಕ ಆತ್ಮವಿಶ್ವಾಸದಿಂದ ಕಾರ್ಯ ಪ್ರವೃತ್ತರಾಗುವಿರಿ. ಹಾಗಾಗಿ ನಿಮ್ಮ ಕಾರ್ಯಗಳು ಮನಸ್ಸಿನಂತೆ ಕೈಗೂಡುವುದು. ನಿಮಗೆ ಬರಬೇಕಾದ ಹಣಕಾಸು ನಿಮ್ಮ ಕೈಸೇರುವುದು. ಪ್ರಯಾಣದಲ್ಲಿ ಎಚ್ಚರದಿಂದ ಇರಿ. ನಿಮ್ಮ ಹಲವು ರೀತಿಯ ಪ್ರವಾಸ ಯೋಜನೆಗಳ ಪಟ್ಟಿಯು ಒಂದು ಹಂತಕ್ಕೆ ತಲುಪುವುದು. ಆತ್ಮೀಯ ಸ್ನೇಹಿತರು ನಿಮಗೆ ಸಹಕಾರಿಯಾಗಿ ನಿಲ್ಲುವರು. ವಿವಿಧ ಮೂಲಗಳಿಂದ ಹಣಕಾಸು ಬರುವುದು. ಅದೃಷ್ಟ ಸಂಖ್ಯೆ:3

ಮಕರ
ನಿಮಗೇ ಎಲ್ಲವೂ ಗೊತ್ತು ಎಂಬ ಅಹಂಕಾರದಿಂದ ಪರರು ಉಪದೇಶಿಸಿದ ಮಾತುಗಳನ್ನು ಅಲಕ್ಷ್ಯ ಮಾಡುವುದರಿಂದ ಮಾಡುತ್ತಿರುವ ವ್ಯಾಪಾರದಲ್ಲಿ ಹಾನಿಯನ್ನು ಅನುಭವಿಸುವಿರಿ. ಯಾವಾಗಲೂ ಸೋತು ಗೆಲ್ಲುವುದು ಜಾಣರ ಲಕ್ಷ ಣ. ಪ್ರಮುಖ ಕಾಗದ ಪತ್ರಗಳನ್ನು ಜೋಪಾನವಾಗಿಟ್ಟುಕೊಳ್ಳಿ. ಯಾವ ಕಾಲದಲ್ಲಿ ಆದರೂ ದಿಢೀರನೆ ತಪಾಸಣಾ ಅಧಿಕಾರಿಗಳು ನಿಮ್ಮ ಕಚೇರಿಗೆ ಬರುವ ಸಾಧ್ಯತೆ ಇರುತ್ತದೆ. ಕುಲದೇವರ ಸ್ಮರಣೆ ಹಾಗೂ ಹಿರಿಯರ ಅಶೀರ್ವಾದ ಪಡೆದು ಮನೆಯಿಂದ ಹೊರಡಿ. ಪ್ರತಿಯೊಬ್ಬರ ಮನೆಯ ದೋಸೆಯೂ ತೂತೇ. ಆದರೆ ಹಾಗಂತ ನಿಮ್ಮ ಮನೆಯ ದೋಸೆಯ ತೂತು ದೊಡ್ಡದಾಗಲು ಬಿಡಬೇಡಿ. ಮನೆ ಸದಸ್ಯರೆಲ್ಲರೂ ಒಂದೆಡೆ ಸೇರಿ ಈಗಿರುವ ಸಮಸ್ಯೆಯ ಪರಿಹಾರಕ್ಕಾಗಿ ಚಿಂತಿಸಿ. ಅದೃಷ್ಟ ಸಂಖ್ಯೆ:1

ಕುಂಭ
ಸದ್ಯದ ಪರಿಸ್ಥಿತಿಯಲ್ಲಿ ನಿಮ್ಮ ಮುಂದೆ ಇರುವ ಕಾರ್ಯಭಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ. ಅದು ನಿಮ್ಮನ್ನು ಉತ್ತುಂಗ ಶಿಖರಕ್ಕೆ ಕೊಂಡೊಯ್ಯುವುದು. ಆಗ ಯಾರ ಸಹಾಯ ಬೇಕಾಗುವುದಿಲ್ಲ. ಇಟ್ಟ ಹೆಜ್ಜೆಯನ್ನು ಹಿಂದೆ ಇಡದಿರಿ. ಓದುವ ಹಾಗೂ ಪ್ರಾಧ್ಯಾಪಕರ ವೃತ್ತಿಯಲ್ಲಿ ಆಸಕ್ತಿ ಹೊಂದಿದ ಜನರಿಗೆ ಅನೇಕ ರೀತಿಯ ಪ್ರೋತ್ಸಾಹ ಲಭ್ಯವಾಗಲಿದೆ. ಮನೆಯ ಕಡೆಯಿಂದ ಉತ್ತಮ ವಿಚಾರಗಳು ಬರುವುದು. ವಿವಾಹ ಸಂಬಂಧ ಪ್ರಸ್ತಾಪ ಎದುರಾಗುವುದು. ಹಣಕಾಸು ವಿಚಾರದಲ್ಲಿ ನಿಮ್ಮ ಎಚ್ಚರದ ಜಾಗೃತೆ ಅವಶ್ಯ. ನಿಮ್ಮ ಸ್ನೇಹಿತರು, ಸಹಪಾಠಿಗಳು ಮತ್ತು ಕಾರ್ಯಕ್ಷೇತ್ರದಲ್ಲಿನ ಸಹೋದ್ಯೋಗಿಗಳ ನೆರವು ನಿಮಗೆ ನಿರಂತರವಾಗಿರುತ್ತದೆ. ನೀವು ನಂಬಿದ ಗುರುಗಳನ್ನು ಅನನ್ಯ ಭಜಿಸಿ. ಅದೃಷ್ಟ ಸಂಖ್ಯೆ:2

ಮೀನ
ಅತಿ ಪರಿಚಯವು ಅನಾದರವನ್ನುಂಟು ಮಾಡುತ್ತದೆ. ನಿಮ್ಮ ಸುತ್ತಮುತ್ತಲಿನವರು ನಿಮ್ಮನ್ನು ಕುರಿತು ಅತಿಸಲುಗೆಯನ್ನು ಬೆಳೆಸಿಕೊಳ್ಳುವರು. ಇದರಿಂದ ನೀವು ಅವರ ಹಂಗಿನ ಅರಮನೆಯಲ್ಲಿ ಜೀವಿಸುವಂತೆ ಆಗುವುದು. ನಿಮ್ಮತನವನ್ನು ಉಳಿಸಿಕೊಳ್ಳಿ. ವಿನಾಕಾರಣವಾಗಿ ಅಪವಾದಗಳು ಎದುರಾಗುವ ಸಂಭವವಿದೆ. ಅತ್ಯಂತ ನಂಬುಗೆಗೆ ಪಾತ್ರರಾದ ಸ್ನೇಹಿತರು ಅಥವಾ ಬಂಧುಗಳು ನಿಮ್ಮನ್ನು ಸರಿಯಾಗಿ ಅರ್ಥೈಸಿಕೊಳ್ಳುವುದಿಲ್ಲ. ಹಣವಿಲ್ಲದವನನ್ನು ಯಾರೂ ಆದರಿಸುವುದಿಲ್ಲ. ಹಾಗಾಗಿ ಹಣ ಸಂಪಾದಿಸುವ ಕಲೆ ತಿಳಿಯಿರಿ. ನೀವು ಆದರಿಸುವ ಜನರಿಂದಲೇ ವಿಶ್ವಾಸದ್ರೋಹ ಆಗುವ ಸಾಧ್ಯತೆ ಇರುತ್ತದೆ. ನಿಮ್ಮನ್ನು ಆಗಂತುಕರು ವಿಪರೀತ ಹೊಗಳಿ ನಿಮ್ಮಿಂದ ದ್ರವ್ಯವನ್ನು ಅಪಹರಿಸುವರು. ಈ ಬಗ್ಗೆ ಸದಾ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು
ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು. ಮದುವೆ, ಸಂತಾನ ಕೊರತೆ , ಶತ್ರುಕಾಟ, ಕುಜ ದೋಷ ಪರಿಣಾಮ, ಮಕ್ಕಳು ತೊಂದರೆ, ಸ್ತ್ರೀಪುರುಷ ಪ್ರೇಮ ವಿಚಾರ, ವಿದೇಶಿಯೋಗ, ಅನಾರೋಗ್ಯ, ಮನೆಕಟ್ಟುವ ಯೋಗ, ರಾಜಕೀಯದ ಭವಿಷ್ಯ, ಸ್ಥಾನಮಾನ ತೊಂದರೆ, ಕುಟುಂಬದಲ್ಲಿದ್ದ ಸಮಸ್ಯೆ, ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/whatsapp