For Quick Alerts
ALLOW NOTIFICATIONS  
For Daily Alerts

ರಾಶಿ ಚಕ್ರಕ್ಕೆ ಅನುಗುಣವಾಗಿ ಶ್ರಾವಣ ಮಾಸದಲ್ಲಿ ಶಿವನ ಪೂಜೆ ಹೀಗೆ ಮಾಡಿ

|

ಶ್ರಾವಣ ಮಾಸ ಎಂದರೆ ಎಲ್ಲೆಲ್ಲೂ ಸಂಭ್ರಮ ಸಡಗರವನ್ನು ಚಲ್ಲುವ ಮಾಸ. ಈ ಮಾಸದಲ್ಲಿ ಸಾಕಷ್ಟು ಹಬ್ಬ-ಹರಿದಿನಗಳು ರುತ್ತವೆ. ಅವುಗಳ ಆಚರಣೆ, ಸಿದ್ಧತೆ ಹಾಗೂ ಸು-ದುಃಖಗಳನ್ನು ಹಂಚಿಕೊಳ್ಳುವುದು ಹೀಗೆ ವಿವಿಧ ಕಾರಣಗಳಿಗೆ ಸಂಭ್ರಮವನ್ನು ಸಲ್ಲಿಸುವ ಮಾಸ. ದೇವಾನು ದೇವತೆಗಳಿಗೆ ನಮ್ಮ ಭಕ್ತಿಯ ಪೂಜೆಯನ್ನು ಹಾಗೂ ಆರಾಧನೆಯನ್ನು ಗೈಯುವುದರ ಮೂಲಕ ಸಂತೋಷಗೊಳಿಸುವ ಮಾಸ ಎಂದು ಹೇಳಲಾಗುವುದು. ಶಿವ ದೇವರಿಗೆ ಶ್ರಾವಣ ಮಾಸವು ಹೆಚ್ಚು ಅಚ್ಚುಮೆಚ್ಚಿನದ್ದಾಗಿದೆ. ಪಾರ್ವತಿ ದೇವಿಯೊಂದಿಗೆ ಶಿವನು ಮತ್ತೆ ಒಂದಾಗಿರುವುದು ಈ ಮಾಸದಂದೇ ಎಂಬ ಪ್ರತೀತಿ ಇದ್ದು ಸ್ತ್ರೀಯರು ತಾವು ಬಯಸಿದವರನ್ನು ಪತಿಯಾಗಿ ಪಡೆದುಕೊಳ್ಳಲು ಈ ಮಾಸದಂದು ಶಿವನನ್ನು ಬೇಡಿಕೊಂಡರೆ ಅವರ ಮನೋಭಿಲಾಷೆ ಈಡೇರುತ್ತದೆ.

ಈ ಪವಿತ್ರವಾದ ಮಾಸವು ಆಷಾಢ ಮಾಸದ ನಂತರ ಆರಂಭವಾಗುತ್ತದೆ. ಶ್ರಾವಣ ಮಾಸವು ಎಲ್ಲರಲ್ಲೂ ನವ ಚೈತನ್ಯವನ್ನು ಮೂಡಿಸುವುದು. ಪ್ರಕೃತಿಯಲ್ಲೂ ಹಸಿರು ಸಿರಿ, ಬೆಳೆಗಳಿಗೆ ಸೂಕ್ತ ಪೋಷಣೆಯನ್ನು ನೀಡುವುದು. ಸಾಲು-ಸಾಲಾಗಿ ಬರುವ ಹಬ್ಬಗಳು ಜನರಲ್ಲಿ ಆನಂದವನ್ನು ತರುವುದು. ಕೆಲವು ವ್ರತ ಆಚರಣೆಗಳು ಸಮೃದ್ಧಿ ಹಾಗೂ ಸಂತೋಷವನ್ನು ನೀಡುವುದರ ಮೂಲಕ ನೆಮ್ಮದಿಯನ್ನು ನೀಡುವುದು. ಈ ಮಾಸದಲ್ಲಿ ಸಾಮಾನ್ಯವಾಗಿ ಎಲ್ಲರೂ ಹಬ್ಬಗಳ ಆಚರಣೆಯ ತಯಾರಿಯಲ್ಲಿ ನಿರತರಾಗಿರುತ್ತಾರೆ. ಈ ಮಾಸದಲ್ಲಿ ಪೂಜೆ ಮಾಡುವುದರಿಂದ ನಮ್ಮ ಎಲ್ಲಾ ಕಷ್ಟಗಳು ದೂರವಾಗುವುದು ಎಂದು ಹೇಳಲಾಗುವುದು. ಈ ಮಾಸ ವಿಶೇಷವಾಗಿ ಶಿವ ಪಾರ್ವತಿಗೆ ಮೀಸಲಾದ ತಿಂಗಳು ಎನ್ನಲಾಗುತ್ತದೆ. ಶಿವ-ಪಾರ್ವತಿಯನ್ನು ಆರಾಧನೆ ಮಾಡಿ, ಸುಮಂಗಲಿಯರಿಗೆ ಅರಿಶಿಣ, ಕುಂಕುಮ ಬಾಗಿನವನ್ನು ನೀಡುವ ವಾಡಿಕೆ ಇದೆ ಎಂದು ಹೇಳಲಾಗುವುದು.

Wordship Lord Shiva

ಜಟಾಧಾರಿ ಶಿವನು ಜಗತ್ತಿನ ಕಲ್ಯಾಣ ಮಾಡುವ ವಿಶೇಷ ಮಾಸ ಅಥವಾ ತಿಂಗಳು ಎಂದು ಪರಿಗಣಿಸಲಾಗುವುದು. ಈ ಮಾಸದಲ್ಲಿ ಪರಮೇಶ್ವರನ ಸಾನಿಧ್ಯವಿರುತ್ತದೆ. ಈ ಹಿನ್ನೆಲೆಯಿಂದಲೇ ಶ್ರಾವಣದಲ್ಲಿ ಬರುವ ಸೋಮವಾರಗಳನ್ನು ಶಿವನಿಗೆ ಸಮರ್ಪಿಸಲಾಗಿದೆ. ಈ ಸೋಮವಾರಗಳನ್ನು ಶ್ರಾವಣ ಸೋಮವಾರ ವ್ರತ ಎಂದು ಆಚರಿಸುತ್ತಾರೆ. ಈ ದಿನದಂದು ಮಣ್ಣು, ಚಿನ್ನ ಅಥವಾ ಬೆಳ್ಳಿಯಿಂದ ಮಾಡಿದ ಶಿವಲಿಂಗಕ್ಕೆ ವಿಶೇಷ ಪೂಜೆ ಹಾಗೂ ಅಭಿಶೇಕವನ್ನು ಮಾಡಲಾಗುವುದು. ಈ ರೀತಿ ಮಾಡಿದರೆ ಅತ್ಯಂತ ಪುಣ್ಯ ಲಭಿಸುವುದು ಎಂದು ಸಾಕ್ಷಾತ್ ಸೋಮೇಶ್ವರನೇ ಗಿರಿಜೆಗೆ ಹೇಳಿದ್ದನು ಎಂದು ಪುರಾಣ ಕಥೆಗಳು ಉಲ್ಲೇಖಿಸುತ್ತವೆ.

ಶಿವನು ಅತ್ಯಂತ ಸರಳ ಹಾಗೂ ಶಕ್ತಿಯುತವಾದ ದೇವನು. ಸೃಷ್ಟಿಯ ಲಯಕರ್ತ ಎಂದು ಕರೆಸಿಕೊಳ್ಳುವ ಶಿವನಿಗೆ ಶ್ರಾವಣ ಮಾಸ ಮೀಸಲು. ಶಿವನ ಪ್ರೀತಿ ಪಾತ್ರರಾಗಬೇಕು ಅಥವಾ ಕೃಪೆಗೆ ಒಳಗಾಗಬೇಕು ಎಂದಾದರೆ ಅತ್ಯಂತ ಭಕ್ತಿಯ ಪೂಜೆ ಅತ್ಯಗತ್ಯ. ಈ ಮಾಸದಲ್ಲಿ ನಿತ್ಯವೂ ಶಿವನಿಗೆ ನೀರಿನ ಅಭಿಷೇಕ, ಹಾಲಿನ ಅಭಿಷೇಕ, ಬಿಲ್ವ ಪತ್ರೆಯ ಅರ್ಚನೆ, ನಿತ್ಯ ಮುಂಜಾನೆ ಶಿವ ಪಂಚಾಕ್ಷರಿಯ ಪಠಣೆ ಮಾಡಿದರೆ ಸಾಕು ಶಿವನು ನಿಮ್ಮ ಕಷ್ಟಗಳನ್ನು ಕರಗಿಸುವನು. ಜೊತೆಗೆ ನಿಮ್ಮ ಬಯಕೆಗಳನ್ನು ಈಡೇರಿಸುವುದರ ಮೂಲಕ ನಿಮಗೆ ಆಶೀರ್ವಾದ ಮಾಡುವನು ಎನ್ನಲಾಗುತ್ತದೆ.

ಶಿವನು ಬಳಸುವ ಡಮರುವಿನಿಂದ ಮನೆಯಲ್ಲಿ ಧನಾತ್ಮಕ ಅಂಶ ಪ್ರಾಪ್ತಿಯಾಗುತ್ತದೆ. ಅಂತೆಯೇ ವಾತಾವರಣದಲ್ಲಿರುವ ಋಣಾತ್ಮಕ ಅಂಶಗಳು ದೂರಾಗುತ್ತವೆ. ಡಮರುವಿನ ಸ್ವರವು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಒಳ್ಳೆಯದು. ಶ್ರಾವಣದ ಮೊದಲ ದಿನ ಡಮರುವನ್ನು ಮನೆಗೆ ತನ್ನಿ ಹಾಗೂ ತಿಂಗಳ ಕೊನೆಯ ದಿನ ಇದನ್ನು ಮಗುವಿಗೆ ಉಡುಗೊರೆಯಾಗಿ ನೀಡಿ. ಇದರಿಂದ ಕುಟುಂಬಕ್ಕೆ ಶುಭವುಂಟಾಗುತ್ತದೆ.

ಹಿಂದೂ ಧರ್ಮದಲ್ಲಿ ಶಿವನನ್ನು ಭಸ್ಮ ಪ್ರಿಯ ಎಂದು ಕರೆಯುತ್ತಾರೆ. ಮೈಯೆಲ್ಲಾ ವಿಭೂತಿಯನ್ನು ಶಿವನು ಹಚ್ಚಿರುತ್ತಾರೆ ಎಂಬುದು ನಂಬಿಕೆಯಾಗಿದೆ. ಸಂತರು ಋಷಿ ಮುನಿಗಳು ಭಸ್ಮವನ್ನು ಪವಿತ್ರ ಎಂದು ಪರಿಗಣಿಸುತ್ತಾರೆ. ಶಿವನು ಕೂಡ ಸಾಧು ಯೋಗಿಯಾಗಿದ್ದಾರೆ. ಶಿವನ ಅನುಗ್ರಹವನ್ನು ಪಡೆದುಕೊಳ್ಳಲು ಮನೆಯ ಪೂಜಾ ಕೊಠಡಿಯಲ್ಲಿ ಭಸ್ಮವನ್ನು ಇರಿಸಿ.

ಪ್ರತಿಯೊಬ್ಬ ವ್ಯಕ್ತಿಯು ತನ್ನದೆ ಆದ ವಿವಿಧ ಸಮಸ್ಯೆಗಳನ್ನು ಹೊಂದಿರುತ್ತಾನೆ. ಅವನ ಸಮಸ್ಯೆಗಳಿಗೆ ಪರಿಹಾರ ನೀಡುವುದು ಕೆಲವು ಧಾರ್ಮಿಕ ಪೂಜೆ-ಪುನಸ್ಕಾರಗಳು. ಈ ಶ್ರಾವಣ ಮಾಸದಂದು ಪ್ರತಿಯೊಬ್ಬರು ತಮ್ಮ ರಾಶಿಚಕ್ರಗಳ ಅನ್ವಯಸದಂತೆ ಕೆಲವು ಬಗೆಯಲ್ಲಿ ವಿಶೇಷವಾದ ಶಿವನ ಆರಾಧನೆಯನ್ನು ಕೈಗೊಳ್ಳಬೇಕು. ಆಗಲೇ ನಿಮ್ಮ ಮನೋ ಕಾಮನೆಗಳು ಈಡೇರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾದರೆ ಯಾವ ರಾಶಿಯವರು, ಯಾವ ಬಗೆಯ ಪೂಜೆಯನ್ನು ಶಿವನಿಗೆ ಅರ್ಪಿಸಬೇಕು? ಎನ್ನುವುದನ್ನು ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ.

most read: ಶ್ರಾವಣ ಮಾಸದಲ್ಲಿ ಶಿವನೊಂದಿಗೆ ಹನುಮಂತನನ್ನು ಪೂಜಿಸಿ- ಎಲ್ಲವೂ ಒಳ್ಳೆಯದಾಗುವುದು

Wordship Lord Shiva

ಜ್ಯೋತಿಷ್ಯ ಪರಿಹಾರಗಳು:

ಜ್ಯೋತಿಷ್ಯ ವಿಜ್ಞಾನದ ಪ್ರಕಾರ ಶ್ರಾವಣ ಮಾಸದಲ್ಲಿ ಶಿವನನ್ನು ಮೆಚ್ಚಿಸಲು ಅನೇಕ ಪರಿಹಾರಗಳು ಮತ್ತು ವಿಧಾನಗಳಿವೆ. ಶಿವನನ್ನು ಅತ್ಯಂತ ವಿನಮ್ರ ಮತ್ತು ಕರುಣಾಮಯಿ ದೇವರು ಎಂದು ಪರಿಗಣಿಸಲಾಗುತ್ತದೆ. ಅವನಿಗೆ ನಿಮ್ಮ ವಸ್ತು ಅಗತ್ಯವಿಲ್ಲ ಆದರೆ ನಿಮ್ಮ ಶುದ್ಧ ಭಕ್ತಿ ಯನ್ನು ಬಯಸುತ್ತಾನೆ. ಹಾಗಾಗಿ ನೀವು ನಿಮ್ಮ ರಾಶಿಗಳಿಗೆ ಅನುಗುಣವಾಗಿ ಶಿವನ ಆರಾಧನೆಯನ್ನು ಕೈಗೊಳ್ಳುವುದು ಉತ್ತಮ ಎಂದು ಹೇಳಲಾಗುವುದು.

ಮೇಷ ರಾಶಿ:

ದತುರಾ ಜೊತೆಗೆ ಶಿವಲಿಂಗದ ಮೇಲೆ ಹಸಿ ಹಾಲು ಮತ್ತು ಮೊಸರನ್ನು ಅರ್ಪಿಸಿದರೆ ಮೇಷ ರಾಶಿಯವರಿಗೆ ಶ್ರಾವಣ ತಿಂಗಳು ಹೆಚ್ಚಿನ ಲಾಭ ಹಾಗೂ ಪುಣ್ಯವನ್ನು ತಂದುಕೊಡುವುದು. ಅಲ್ಲದೆ ನೀವು ಪೂಜೆ ಮಾಡುವಾಗ ಕರ್ಪೂರದ ಆರತಿ ಹಾಗೂ ಬೆಳಕನ್ನು ಬೆಳಗಲು ಮರೆಯದಿರಿ. ಈ ರೀತಿ ಮಾಡುವುದರ ಮೂಲವೇ ಶ್ರದ್ಧೆ-ಭಕ್ತಿಯಿಂದ ಪೂಜೆ ಮಾಡುವುದು ಉತ್ತಮ.

ವೃಷಭ ರಾಶಿ:

ವೃಷಭ ರಾಶಿಯವರು ಯಾವುದೇ ಶಿವನ ದೇವಾಲಯ ಅಥವಾ ಹತ್ತಿರದ ಶಿವನ ದೇವಾಲಯಕ್ಕೆ ಭೇಟಿ ನೀಡಬೇಕು. ಅಲ್ಲಿ ಶೀವನಿಗೆ ಕಬ್ಬಿನ ಹಾಲಿನ ಅಭಿಷೇಕ ಮಾಡಬೇಕು. ಮತ್ತು ಗೋ ಗ್ರಾಸವನ್ನು ನೀಡಲು ಮರೆಯ ಬಾರದು. ದೇವರಿಗೆ ಇಷ್ಟವಾಗುವ ಸಿಹಿ ನೈವೇದ್ಯ ಅರ್ಪಿಸುವುದರ ಮೂಲಕ ಪೂಜೆಯನ್ನು ಪೂರ್ಣಗೊಳಿಸಿ.

ಮಿಥುನ ರಾಶಿ:

ಮಿಥುನ ರಾಶಿಯವರು ಸ್ಫಟಿಕದಿಂದ ತಯಾರಿಸಿರುವ ಶಿವಲಿಂಗಕ್ಕೆ ಪೂಜೆಯನ್ನು ಸಲ್ಲಿಸಬೇಕು ಸ್ಫಟಿಕ ಲಿಂಗ ದೊರೆಯದೆ ಇದ್ದರೆ ಯಾವುದಾದರೂ ಶಿವಲಿಂಗಕ್ಕೆ ಪೂಜಿಸತಕ್ಕದ್ದು. ಪೂಜೆಯ ಸಾರವನ್ನು ಉತ್ತಮ ಗೊಳಿಸಲು ನಿಮ್ಮ ರಾಶಿಯ ಅನುಗುಣವಾಗಿ ಶಿವನಿಗೆ ಕುಂಕುಮ, ಶ್ರೀಗಂಧ ಹಾಗೂ ಪರಿಮಳ ಭರಿತವಾದ ವಸ್ತುಗಳನ್ನು ಶಿವನಿಗೆ ಅರ್ತಿಸಬೇಕು.

most read: ಶ್ರಾವಣ ಮಾಸದಲ್ಲಿ ಉಪವಾಸ ಕೈಗೊಳ್ಳುವುದರ ಹಿಂದಿನ ರಹಸ್ಯ ಏನು ನೋಡಿ...

Wordship Lord Shiva

ಕರ್ಕ ರಾಶಿ:

ಈ ರಾಶಿಯ ವ್ಯಕ್ತಿಗಳು ಶ್ರಾವಣ ಮಾಸದಲ್ಲಿ ವಿಶೇಷವಾಗಿ ಶಿವನಿಗೆ ಅಷ್ಟಗಂಧ ಮತ್ತು ಶ್ರೀಗಂಧದ ಲೇಪನ ಅಥವಾ ದ್ರವ್ಯವನ್ನು ಅರ್ಪಿಸುವುದರ ಮೂಲಕ ಪೂಜೆ ಕೈಗೊಳ್ಳಬೇಕು. ಶುದ್ಧವಾದ ಗೋಧಿ ಹಿಟ್ಟಿನ ಚಪಾತಿಯನ್ನು ಶಿವನಿಗೆ ನೈವೇದ್ಯ ಮಾಡಿ. ಇದರಿಂದ ನಿಮಗೆ ಅತ್ಯುತ್ತಮ ಸಮಯ ಭವಿಷ್ಯದಲ್ಲಿ ದೊರೆಯುವುದು.

ಸಿಂಹ ರಾಶಿ:

ಸಿಂಹ ರಾಶಿಯ ವ್ಯಕ್ತಿಗಳು ಶ್ರಾವಣ ಮಾಸದಲ್ಲಿ ಶಿವಲಿಂಗಕ್ಕೆ ಅಥವಾ ಶಿವನ ಮೂರ್ತಿಗೆ, ಸಕ್ಕರೆಯನ್ನು ಬೆರೆಸಿರುವ ಹಣ್ಣಿನ ರಸವನ್ನು ತೆಗೆದುಕೊಂಡು ಅಭಿಷೇಕ ಮಾಡಬೇಕು. ಹೂವಿನ ಹಾರ ಹಾಗೂ ಕಿರೀಟಗಳಿಂದ ಅಲಂಕರಿಸಿ ಪೂಜೆ ಗೈದರೆ ಅತ್ಯುತ್ತಮ ಭವಿಷ್ಯವನ್ನು ಎದುರು ಕಾಣುವಿರಿ. ನೈವೇದ್ಯಕ್ಕಾಗಿ ಸಿಹಿ ತಿಂಡಿಯನ್ನು ನೀಡುವುದನ್ನು ಮರೆಯದಿರಿ.

ಕನ್ಯಾ ರಾಶಿ:

ಕನ್ಯಾ ರಾಶಿಯ ವ್ಯಕ್ತಿಗಳು ಶಿವಲಿಂಗಕ್ಕೆ ಬೇಲ್ ಎಲೆಗಳು, ಭಾರತೀಯ ಜುಜುಬ್ಸ್ ಹಣ್ಣನ್ನು ಅರ್ಪಿಸಬೇಕು. ಅಲ್ಲದೆ ಶಿವನಿಗೆ ಇಷ್ಟವಾಗುವ ಪತ್ರೆ ಎಲೆ, ಮುಳ್ಳಿನ ಸೇಬು ಎಲೆ, ಮತ್ತು ಗಾಂಜಾ ಎಲೆಯನ್ನು ಅರ್ಪಿಸಬೇಕು. ಕರ್ಪೂರ ಮಿಶ್ರಿತ ನೀರಿನಿಂದ ಸ್ನಾನ ಮಾಡಿಸುವುದರ ಮೂಲಕ ಪೂಜೆಯನ್ನು ಪೂರ್ಣಗೊಳಿಸಬೇಕು. ಹೀಗೆ ಮಾಡುವುದರಿಂದ ಮನದಿಂಗಿತವನ್ನು ಶಿವನು ಈಡೇರಿಸುವನು.

ತುಲಾ ರಾಶಿ:

ತುಲಾ ರಾಶಿಯವರು ಶಿವಲಿಂಗಕ್ಕೆ ವಿವಿಧ ಹೂಗಳಿಂದ ಕೂಡಿದ ನೀರನ್ನು ಅಭಿಷೇಕ ಮಾಡಿಸಬೇಕು. ನಿಮ್ಮ ಪೂಜೆಯಲ್ಲಿ ಪತ್ರೆ ಎಲೆ, ಮೊಗ್ರಾ, ಗುಲಾಬಿ ಹೂ ಮತ್ತು ಶ್ರೀಗಂಧವನ್ನು ಬಳಸಬೇಕು. ನಿಮ್ಮ ಭವಿಷ್ಯ ಉತ್ತಮ ಫಲಿತಾಂಶದಿಂದ ಕೂಡಿರುತ್ತದೆ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿಯವರು ಶಿವಲಿಂಗವನ್ನು ಶುದ್ಧ ನೀರಿನಿಂದ ಸ್ನಾನಮಾಡಿಸಿ, ಪೂಜೆಯನ್ನು ಪ್ರಾರಮಭಿಸಬೇಕು. ಜೇನುತುಪ್ಪದೊಂದಿಗೆ ಶುದ್ಧವಾದ ಬೆಣ್ಣೆ ಮತ್ತು ತುಪ್ಪದ ಲೇಪನವನ್ನು ಮಾಡಬೇಕು. ನಂತರ ಶುದ್ಧ ನೀರಿನಿಂದ ಸ್ವಚ್ಛಗೊಳಿಸಬೇಕು. ಹೀಗೆ ಮಾಡುವುದರಿಂದ ವಿಶೇಷವಾದ ಶಿವನ ಪೂಜೆ ಮಾಡಿದಂತಾಗುವುದು. ಶುಭವನ್ನು ಭವಿಷ್ಯದಲ್ಲಿ ಅನುಭವಿಸುವರು.

ಧನು ರಾಶಿ:

ಧನು ರಾಶಿಯವರು ಶಿವ ಲಿಂಗಕ್ಕೆ ಒಣ ಹಣ್ಣುಗಳನ್ನು ಅರ್ಪಿಸಬೇಖು. ಗುಲಾಬಿ ಹೂವು, ಬಿಲ್ವ ಪತ್ರೆ ಹೀಗೆ ಶುಭಕರವಾದ ವಸ್ತುಗಳನ್ನು ಶಿವನಿಗೆ ನೀಡಬೇಕು. ಹೀಗೆ ಮಾಡುವುದರಿಂದ ಈ ರಾಶಿಯವರಿಗೆ ಭವಿಷ್ಯದಲ್ಲಿ ತುಂಬಾ ಶುಭ ಸಂಗತಿಯು ನೆರವೇರುವುದು. ಶಿವನಿಗೆ ಆರತಿ ಮಾಡುವುದರ ಮೂಲಕ ನಿಮ್ಮ ಪೂಜೆಯನ್ನು ಮುಗಿಸಬಹುದು.

Wordship Lord Shiva

ಮಕರ ರಾಶಿ:

ಮಕರ ರಾಶಿ ರಾಶಿಯವರು ಸಾಂಪ್ರದಾಯಿಕವಾಗಿ ಗೋದಿ ಹಿಟ್ಟನ್ನು ಶಿವನಿಗೆ ನೀಡಬೇಕು. ಅಲ್ಲದೆ ಶಿವನ ಹೆಸರಿನಲ್ಲಿ ಗೋಧಿಯನ್ನು ದಾನ ಮಾಡಬೇಕು. ಈ ವಿಧಾನವು ನಿಮ್ಮ ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳಿಂದ ಪಾರಾಗಬಹುದು.

ಕುಂಭ ರಾಶಿ:

ಕುಂಭ ರಾಶಿಯವರು ದೂರದಿಂದಲೇ ಇರುವ ಶಿವಲಂಗದಲ್ಲಿ ಮಿಶ್ರ ಬಿಳಿ ಮತ್ತು ಕಪ್ಪು ಎಳ್ಳು ಬೀಜಗಳನ್ನು ಅರ್ಪಿಸಬೇಕು. ಶಿವಲಿಂಗವನ್ನು ನೀರಿನಿಂದ ಸ್ನಾನ ಮಾಡುವುದರಿಂದ ಪ್ರಾರಂಭಿಸಿ ನಂತರ ಎಳ್ಳು ಬೀಜಗಳನ್ನು ಅತ್ಯಂತ ಭಕ್ತಿಯಿಂದ ಸುರಿಯಿರಿ.

ಕುಂಭ ರಾಶಿ:

ಕುಂಭ ರಾಶಿಯವರು ಶ್ರಾವಣ ಮಾಸದಲ್ಲಿ ಶಿವನ ಕೃಪೆಗೆ ಒಳಗಾಗಲು ಬಿಳಿ ಮತ್ತು ಕಪ್ಪು ಎಳ್ಳನ್ನು ಅರ್ಪಿಸಬೇಕು. ಮೊದಲು ಶುದ್ಧವಾದ ನೀರಿನಿಂದ ಅಭಿಷೇಕ ಮಾಡಿ. ನಂತರ ಎಳ್ಳನ್ನು ಶಿವನಿಗೆ ಭಕ್ತಿಯಿಂದ ಸುರಿಯಿರಿ. ಇದರಿಂದ ನಿಮ್ಮ ಬಯಕೆಗಳನ್ನು ಶಿವನು ಈಡೇರಿಸುವನು. ಕಷ್ಟಗಳು ದೂರವಾಗುವುದು.

ಮೀನ ರಾಶಿ:

ಶ್ರಾವಣ ಮಾಸದಲ್ಲಿ ಮೀನ ರಾಶಿಯವರು ಆಲದ ಮರದ ಕೆಳಗೆ ಶಿವಲಿಂಗದ ಪೂಜೆ ಮಾಡಬೇಕು. ಈ ಪೂಜೆಯಲ್ಲಿ ವಿಶೇಷವಾಗಿ ಶಿವನಿಗೆ ಬಿಲ್ವ ಪತ್ರೆಯನ್ನು ಅರ್ಪಿಸುವುದರ ಮೂಲಕ ಬಾಯಲ್ಲಿ "ಓಂ ನಮಃ ಶಿವಾಯ" ಜಪವನ್ನು ಪಠಿಸಬೇಕು. ಕೊನೆಯಲ್ಲಿ ಆರತಿಯನ್ನು ಮಾಡುವುದರ ಮೂಲಕ ಪೂಜೆಯನ್ನು ಪೂರ್ಣಗೊಳಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಭವಿಷ್ಯದಲ್ಲಿ ಉತ್ತಮ ಫಲಗಳು ಲಭಿಸುತ್ತವೆ. ಅಲ್ಲದೆ ಪುಣ್ಯವು ಪ್ರಾಪ್ತಿಯಾಗುವುದು.

ಪ್ರತಿಯೊಬ್ಬರು ಶ್ರಾವಣ ಮಾಸದಲ್ಲಿ ಶಿವನಿಗೆ ಶ್ರದ್ಧಾ ಭಕ್ತಿಯಿಂದ ಪೂಜೆಯನ್ನು ಸಲ್ಲಿಸಬೇಕು. ಹೀಗೆ ಮಾಡುವುದರಿಂದ ನಮ್ಮ ಅರಿವಿಗಿಂತಲೂ ಮುಗಲಾದ ಶುಭ ಸೂಚನೆಗಳು ಹಾಗೂ ಶುಭ ಫಲಗಳು ದೊರೆಯುತ್ತವೆ. ಸರಳ ಹಾಗೂ ಶಕ್ತಿಯುತವಾದ ದೇವ ಶಿವನು ನಮ್ಮನ್ನು ಹಾಗೂ ನಮ್ಮ ಕುಟುಂಬವನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುವನು ಎಂದು ಹೇಳಲಾಗುವುದು.

English summary

Wordship Lord Shiva as per your Zodiac during the month of Shravana

Per the astrological sciences, there are many remedies and solutions advised for the month of Shravan and to impress Lord Shiva. Shiva is considered to be the most humble and kind God and he doesn't need your material, but your pure devotion. So let's delve into the nitty-gritty of what is it that you should do per your zodiac in this month?
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more