For Quick Alerts
ALLOW NOTIFICATIONS  
For Daily Alerts

ಈ ಮಹಿಳೆಯ ಕಣ್ಣಿನ ಒಳಗಡೆ ಜೀವಂತ ಜೇನುನೊಣಗಳು ಪತ್ತೆ!!

|

ಸೂಚನೆ: ಈ ಲೇಖನದಲ್ಲಿ ಇರುವಂತಹ ಕೆಲವು ಫೋಟೊಗಳು ಕೆಲವು ಓದುಗರಿಗೆ ತೊಂದರೆ ಉಂಟು ಮಾಡಬಹುದು.

ನೀವು ಗಟ್ಟಿ ಹೃದಯದವರಾಗಿದ್ದರೆ ಮಾತ್ರ ಈ ಲೇಖನವನ್ನು ಓದುತ್ತಾ ಮುಂದೆ ಸಾಗಿ. ಹುಳು ಹಾಗೂ ಕೀಟಗಳು ಮನುಷ್ಯನ ದೇಹದಲ್ಲಿ ಇರುವುದು ಸಾಮಾನ್ಯ ವಿಚಾರ. ಇದೇ ವಿಭಾಗದಲ್ಲಿ ಹುಳು ಹಾಗೂ ಕೀಟಗಳು ಮಾನವನ ದೇಹದಲ್ಲಿ ಇರುವ ಬಗ್ಗೆ ವರದಿ ಮಾಡಿದ್ದೇವೆ.

Woman Had Bees Living In Her Eye!

ಈ ಲೇಖನದಲ್ಲಿ ಮಹಿಳೆಯ ಕಣ್ಣಿನಲ್ಲಿ ಸುಮಾರು ನಾಲ್ಕು ಜೀವಂತ ಜೇನುನೊಣಗಳು ಇರುವ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ನೀವು ಇದನ್ನು ಓದುತ್ತಾ ಸಾಗಿ.

ಇದು ವಿಶ್ವದಲ್ಲೇ ಮೊದಲು ಘಟನೆ ಎಂದು ನಂಬಲಾಗಿದೆ!

ಇದು ವಿಶ್ವದಲ್ಲೇ ಮೊದಲು ಘಟನೆ ಎಂದು ನಂಬಲಾಗಿದೆ!

ವೈದ್ಯರು ಹೇಳುವ ಪ್ರಕಾರ ಕಣ್ಣಿನಲ್ಲಿ ಜೀವಂತ ಜೇನುನೊಣಗಳು ವಾಸವಾಗಿರುವ ಬಗ್ಗೆ ಇದುವರೆಗೆ ವರದಿಯಾಗಿರುವುದು ತಿಳಿದಿಲ್ಲ. ಸುಮಾರು 3 ಮಿ.ಮೀ. ಉದ್ದದ ಜೇನುನೊಣಗಳು ಮಹಿಳೆಯ ಕಣ್ಣಿನಲ್ಲಿ ವಾಸಿಸುತ್ತಿದ್ದವು ಎಂದು ವರದಿಗಳು ಹೇಳಿವೆ.

ಈ ಜೇನುನೊಣಗಳು ಕಣ್ಣಿನ ಒಳಗಡೆ ಹೇಗೆ ಹೋದವು

ಈ ಜೇನುನೊಣಗಳು ಕಣ್ಣಿನ ಒಳಗಡೆ ಹೇಗೆ ಹೋದವು

ಈ ಮಹಿಳೆಯ ಗುರುತನ್ನು ಗೌಪ್ಯವಾಗಿ ಇಡಲಾಗಿದೆ. ಈ ಮಹಿಳೆಯು ತನ್ನ ಸಂಬಂಧಿಕರೊಬ್ಬರು ಸಾವನ್ನಪ್ಪಿದ ವೇಳೆ ಅಂತ್ಯಕ್ರಿಯೆಗೆ ಸ್ಮಶಾನಕ್ಕೆ ಹೋಗಿ ಬಂದ ಬಳಿಕ ಹೀಗೆ ಆಗಿದೆ.

ಆಕೆಗೆ ತೀವ್ರ ನೋವು ಕಾಣಿಸಿಕೊಂಡಿತು

ಆಕೆಗೆ ತೀವ್ರ ನೋವು ಕಾಣಿಸಿಕೊಂಡಿತು

ಗಾಳಿಯು ತನ್ನ ಮುಖಕ್ಕೆ ಬಡಿಯಿತು ಮತ್ತು ಧೂಳು ಕಣ್ಣಿನ ಒಳಗಡೆ ಹೋಗಿರಬಹುದು ಎಂದು ನಾನು ಭಾವಿಸಿಕೊಂಡಿದೆ ಎಂದು ಮಹಿಳೆಯು ಹೇಳಿದ್ದಾರೆ. ಆಕೆ ನೀರನ್ನು ಬಳಸಿಕೊಂಡು ಕಣ್ಣುಗಳನ್ನು ತೊಳೆದುಕೊಂಡಿದ್ದಾರೆ. ಆದರೆ ರಾತ್ರಿ ವೇಳೆ ಈ ನೋವು ತೀವ್ರವಾಗುತ್ತಾ ಹೋಯಿತು. ಆಕೆಗೆ ನೋವು ಹೆಚ್ಚಾಯಿತು ಮತ್ತು ಕಣ್ಣೀರು ಬರಲು ಆರಂಭವಾಯಿತು.

ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು

ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು

ವೈದ್ಯರು ಆಕೆಯ ಕಣ್ಣುಗಳನ್ನು ಪರೀಕ್ಷೆ ಮಾಡಿದ ವೇಳೆ ಅವರಿಗೆ ಅದರಲ್ಲಿ ಜೇನುನೊಣಗಳು ಕಾಣಿಸಿಕೊಂಡಿದೆ. ಅವರು ಅದನ್ನು ತುಂಬಾ ಎಚ್ಚರಿಕೆಯಿಂದ ಹೊರಗೆ ತೆಗೆದಿದ್ದಾರೆ. ಕಣ್ಣಿನ ಒಳಗಡೆ ಹೋದ ನಾಲ್ಕು ಗಂಟೆ ಬಳಿಕವೂ ಈ ಮೂರು ಜೇನುನೊಣಗಳು ಜೀವಂತವಾಗಿದ್ದ ಬಗ್ಗೆ ವೈದ್ಯರಿಗೆ ತುಂಬಾ ಅಚ್ಚರಿಯಾಗಿದೆ. ಆಕೆಗೆ ಚರ್ಮದ ಬ್ಯಾಕ್ಟೀರಿಯಾ ಸೋಂಕು ಆಗಿರುವ ಸೆಲ್ಯುಲೈಟಿಸ್ ಮತ್ತು ಕೆರಟೈಟಿಸ್ ಕಾಡಿದೆ. ಕಣ್ಣಿನ ಕಾರ್ನಿಯಾ ಭಾಗದಲ್ಲಿ ತುಂಬಾ ಉರಿಯೂತ ಕೂಡ ಕಂಡುಬಂದಿದೆ. ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಿದ ಬಳಿಕ ಆಕೆ ಇದರಿಂದ ಚೇತರಿಸಿಕೊಂಡಿರುವುದು ದೊಡ್ಡ ಅದೃಷ್ಟ ಎಂದು ಹೇಳಬಹುದು.

English summary

Woman Had Bees Living In Her Eye!

A woman had ended up in hospital after bees made a temporary home in her eye and they feasted on her tears and sweat. Medics released pictures of the four 3-millimetre-long bees that have been living inside the woman's eye for over 4 long hours.This is one of the most bizarre cases in medical history as doctors found living bees in a woman's eye!
X
Desktop Bottom Promotion