For Quick Alerts
ALLOW NOTIFICATIONS  
For Daily Alerts

ರಾಶಿಚಕ್ರದ ಪ್ರಕಾರ ಹೇಗೆ ಕೋಪಗಳು ವ್ಯಕ್ತವಾಗುತ್ತವೆ ನೋಡಿ...

|

ಭಾವನೆ ಎನ್ನುವುದು ಮನುಷ್ಯನಿಗಿರುವ ಅತ್ಯುಮೂಲ್ಯವಾದ ಸಂವೇದನೆ. ತನ್ನ ಭಾವನೆಯಿಂದಲೇ ಅನೇಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾನೆ. ಯಾವ ಪ್ರಾಣಿಗೆ ಇಲ್ಲದಂತಹ ನವರಸಗಳನ್ನು ಮನುಷ್ಯನು ವ್ಯಕ್ತಪರಿಸುತ್ತಾನೆ. ತನ್ನಲ್ಲಿರುವ ಈ ವಿಶೇಷ ಗುಣಗಳಿಂದ ತನ್ನ ಸುತ್ತಲಿನ ಜನರನ್ನು ಆಕರ್ಷಿಸುವನು. ಕೆಲವೊಮ್ಮೆ ಅಹಿತಕರವಾದ ಭಾವನೆಯನ್ನು ವ್ಯಕ್ತಪಡಿಸುವುದರ ಮೂಲಕ ವ್ಯಕ್ತಿಗಳನ್ನು ದೂರಮಾಡಿಕೊಳ್ಳುವ ಸಾಧ್ಯತೆಗಳೂ ಇರುತ್ತವೆ. ಹಾಗಾಗಿ ಯಾವ ಸಂದರ್ಭದಲ್ಲಿ ತನ್ನ ಭಾವನೆಗಳು ಹೇಗಿರಬೇಕು ಎನ್ನುವುದರ ಪರಿಜ್ಞಾನ ಇದ್ದರೆ ವ್ಯಕ್ತಿಗೆ ಮತ್ತು ಅವನ ಸುತ್ತಲಿರುವ ಜನರಿಗೆ ಯಾವುದೇ ತೊಂದರೆ ಉಂಟಾಗದು.

ಭಾವನೆಗಳಲ್ಲಿ ಕೋಪ ಎನ್ನುವುದು ಅತ್ಯಂತ ಕೆಟ್ಟದ್ದು ಎನ್ನಬಹುದು. ವ್ಯಕ್ತಿ ಒಮ್ಮೆ ಕೋಪಕ್ಕೆ ಒಳಗಾದರೆ ಸಾಕಷ್ಟು ನಾಶದ ಕೆಲಸಗಳು ಮುಂದುವರಿಯುತ್ತವೆ. ತಾನು ಮಾನಸಿಕ ಒತ್ತಡಗಳನ್ನು ಅನುಭವಿಸುವುದಲ್ಲದೇ ಇತರರ ನೆಮ್ಮದಿಯನ್ನು ಹಾಳುಮಾಡುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ವ್ಯಕ್ತಿಯ ಕೋಪದಲ್ಲಿ ವಿವಿಧ ಬಗೆಯನ್ನು ಕಾಣಬಹುದು. ಸಣ್ಣಪುಟ್ಟ ಕೋಪಗಳು ಬಂದರೆ ಅಷ್ಟಾಗಿ ಯಾವುದೇ ಪರಿಣಾಮ ಉಂಟಾಗದು. ಅದೇ ವ್ಯಕ್ತಿಯ ಕೋಪವು ವಿಪರೀತಕ್ಕೆ ಹೋಗಿದೆ ಎಂದಾದಾಗ ಸಾಕಷ್ಟು ತೊಂದರೆ ಉಂಟಾಗುವುದು. ತನ್ನ ಸುತ್ತಲಲ್ಲಿ ಇರುವ ವಸ್ತುಗಳ ನಾಶವನ್ನು ಮಾಡಲು ಸಹ ಮುಂದಾಗುವ ಸಾಧ್ಯತೆಗಳಿರುತ್ತವೆ.

ವ್ಯಕ್ತಿಯ ಭಾವನೆಗಳ ಮೇಲೆ ಗಮನಾರ್ಹ ಪ್ರಭಾವವನ್ನು ಬೀರುತ್ತವೆ

ವ್ಯಕ್ತಿಯ ಭಾವನೆಗಳ ಮೇಲೆ ಗಮನಾರ್ಹ ಪ್ರಭಾವವನ್ನು ಬೀರುತ್ತವೆ

ರಾಶಿಚಕ್ರಗಳು ವ್ಯಕ್ತಿಯ ಭಾವನೆಗಳ ಮೇಲೆ ಗಮನಾರ್ಹ ಪ್ರಭಾವವನ್ನು ಬೀರುತ್ತವೆ. ಒಂದೊಂದು ರಾಶಿಯು ವಿವಿಧ ಗ್ರಹಗಳ ಪ್ರಭಾವಕ್ಕೆ ಒಳಗಾಗುವುದರಿಂದ, ಆಯಾ ಗ್ರಹಗಳಿಗೆ ಅನ್ವಯಿಸಿದಂತೆ ವ್ಯಕ್ತಿಯ ಭಾವನೆಗಳ ಮೇಲೆ ಪ್ರಭಾವ ಉಂಟಾಗುವುದು. ಗ್ರಹಗಳ ಸ್ವಭಾವ ಹಾಗೂ ಪ್ರಭಾವಗಳು ವ್ಯಕ್ತಿಯ ವ್ಯಕ್ತಿತ್ವ ಹಾಗೂ ಭಾವನೆಗಳ ಮೇಲೆ ಅಧಿಕ ಪರಿಣಾಮ ಬೀರುವುದು. ಅದರಲ್ಲೂ ಗ್ರಹಗಳ ಪ್ರಭಾವದಿಂದಾಗಿ ವ್ಯಕ್ತಿಯು ವ್ಯಕ್ತಪಡಿಸುವ ಕೋಪದಲ್ಲಿ ಗಮನಾರ್ಹವಾದ ಭಿನ್ನತೆಯನ್ನು ನೋಡಬಹುದು. ಹಾಗಾಗಿ ಕೋಪ ಎನ್ನುವುದು ವ್ಯಕ್ತಿಯ ರಾಶಿಚಕ್ರಗಳಿಗೆ ಅನುಗುಣವಾಗಿ ಗಮನಾರ್ಹ ಭಿನ್ನತೆಯನ್ನು ಹೊಂದಿರುತ್ತಾರೆ. ಅದನ್ನು ವ್ಯಕ್ತಪಡಿಸುವುದು ಹಾಗೂ ನಿಯಂತ್ರಿಸುವ ಪರಿಯಿಂದಲೇ ವ್ಯಕ್ತಿತ್ವ ಏನು ಎನ್ನುವುದು ನಿರ್ಧಾರವಾಗುವುದು.

ವ್ಯಕ್ತಿ ಕೋಪಕ್ಕೆ ಒಳಗಾದಾಗ ಅದನ್ನು ನಿಯಂತ್ರಿಸುವ ಕಲೆಯನ್ನು ತಿಳಿದರಬೇಕು

ವ್ಯಕ್ತಿ ಕೋಪಕ್ಕೆ ಒಳಗಾದಾಗ ಅದನ್ನು ನಿಯಂತ್ರಿಸುವ ಕಲೆಯನ್ನು ತಿಳಿದರಬೇಕು

ಸಾಮಾನ್ಯವಾದ ಹಾಗೂ ನೈಸರ್ಗಿಕ ಪ್ರತಿಕ್ರಿಯೆಗಳಲ್ಲಿ ಕೋಪವೂ ಒಂದು. ಕೋಪ ಎನ್ನುವುದು ವ್ಯಕ್ತಿಯ ಮನಸ್ಸಿಗೆ ನೋವು, ಅವಮಾನ, ದ್ರೋಹ, ನಿಯಮಗಳ ಉಲ್ಲಂಘನೆ ಹೀಗೆ ವಿವಿಧ ಬಗೆಯ ನಕಾರಾತ್ಮಕ ಸಂಗತಿಗಳ ಕಾರಣದಿಂದಾಗಿ ಉಂಟಾಗುವುದು. ಅತಿಯಾದ ಕೋಪದಿಂದ ವ್ಯಕ್ತಿ ಸಾಕಷ್ಟು ಮಾನಸಿಕ ಗೊಂದಲ ಹಾಗೂ ರೋಗಗಳನ್ನು ಎದುರಿಸುವ ಸಾಧ್ಯತೆಗಳು ಇರುತ್ತವೆ. ಕೋಪದ ಪರಿಣಾಮದಿಂದ ವ್ಯಕ್ತಿ ತನ್ನ ಸುತ್ತಲಿನ ವಸ್ತು ಮತ್ತು ವ್ಯಕ್ತಿಯ ಮೇಲೆ ಗಂಭೀರವಾದ ಪ್ರಚೋದನೆಯನ್ನು ಉಂಟುಮಾಡುವನು. ಕೋಪದಿಂದ ವಿವಿಧ ಬಗೆಯ ಸಂದೇಶ ರವಾನೆ ಆಗುವುದು. ಹಾಗಾಗಿ ವ್ಯಕ್ತಿ ಕೋಪಕ್ಕೆ ಒಳಗಾದಾಗ ಅದನ್ನು ನಿಯಂತ್ರಿಸುವ ಕಲೆಯನ್ನು ತಿಳಿದರಬೇಕು ಎಂದು ಸಹ ಹೇಳಲಾಗುವುದು.

ರಾಶಿಚಕ್ರಗಳಿಗೆ ಅನುಸಾರವಾಗಿ ನೀವು ಯಾವ ಬಗೆಯ ಕೋಪವನ್ನು ವ್ಯಕ್ತಪಡಿಸುವಿರಿ?

ರಾಶಿಚಕ್ರಗಳಿಗೆ ಅನುಸಾರವಾಗಿ ನೀವು ಯಾವ ಬಗೆಯ ಕೋಪವನ್ನು ವ್ಯಕ್ತಪಡಿಸುವಿರಿ?

ನಿಮ್ಮ ಹಾಗೂ ನಿಮ್ಮವರ ರಾಶಿಚಕ್ರಗಳಿಗೆ ಅನುಸಾರವಾಗಿ ನೀವು ಯಾವ ಬಗೆಯ ಕೋಪವನ್ನು ವ್ಯಕ್ತಪಡಿಸುವಿರಿ? ಅದರ ಪ್ರಭಾವ ಬೇರೆಯವರಿಗೆ ಎಂತಹ ಸಂದೇಹವನ್ನು ರವಾನಿಸುವುದು? ನಿಮ್ಮವರ ಕೋಪದ ಸಂದರ್ಭದಲ್ಲಿ ನೀವು ಹೇಗೆ ಇರಬೇಕು? ನಿಮ್ಮ ಕೋಪದ ನಿಯಂತ್ರಣ ಹೇಗೆ? ನಿಮ್ಮ ರಾಶಿಚಕ್ರದ ಅನುಸಾರ ನೀವು ಯಾವ ಬಗೆಯ ಕೋಪಕ್ಕೆ ಒಳಗಾಗುವಿರಿ? ಹೀಗೆ ವಿವಿಧ ವಿಷಯಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕು ಎನ್ನುವ ಕುತೂಹವಿದ್ದರೆ ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ....

ಮೇಷ

ಮೇಷ

ಮೇಷ ರಾಶಿಯವರು ಕೋಪಕ್ಕೆ ಒಳಗಾದರೆ ಅನೇಕ ತೊಂದರೆ ಮತ್ತು ಒತ್ತಡಕ್ಕೆ ಕಾರಣವಾಗುವುದು. ರಾಶಿಚಕ್ರಗಳಲ್ಲಿ ಮೊದಲ ಚಿಹ್ನೆ ಮೇಷ. ಇದನ್ನು ಅತ್ಯಂತ ಕಿರಿಯ ಹಾಗೂ ಮಗುವಿನಂತಹ ಚಿಹ್ನೆ ಎಂದು ಸಹ ಗುರುತಿಸಲಾಗುವುದು. ಬೆಂಕಿಯ ಚಿಹ್ನೆಯನ್ನು ಒಳಗೊಂಡಿರುವ ಈ ರಾಶಿ ಚಕ್ರದ ವ್ಯಕ್ತಿಗಳಲ್ಲಿ ಕೋಪವು ಸಹ ಬೆಂಕಿಯ ರೂಪದಲ್ಲಿಯೇ ಬರುವುದು. ಇವರು ನೈಸರ್ಗಿಕವಾಗಿ ಬಹುಬೇಗ ಕೋಪಕ್ಕೆ ಒಳಗಾಗುತ್ತಾರೆ. ಹಾಗಂತ ಇವರ ಕೋಪವು ದೀರ್ಘ ಸಮಯಗಳ ಕಾಲ ಮುಂದುವರಿಯದು. ಇವರ ಕೋಪವು ಸಣ್ಣ-ಪುಟ್ಟ ಕಾರಣಗಳಿಂದಲೂ ಕೂಡಿರುತ್ತದೆ. ಇವರ ರಾಶಿಚಕ್ರದ ಮೇಲೆ ಚಂದ್ರನ ಪ್ರಭಾವದ ಕಾರಣದಿಂದಾಗಿ ಬಹುಬೇಗ ಕೋಪಗೊಳ್ಳುತ್ತಾರೆ. ರಾಶಿಯನ್ನು ಆಳುವ ಗ್ರಹವಾದ ಮಂಗಳನು ಆಂತರಿಕ ಭಾವನೆಗಳ ಮೇಲೆ ಪ್ರಭಾವ ಉಂಟುಮಾಡುವನು. ಈ ಹಿನ್ನೆಲೆಯಿಂದಲೇ ವ್ಯಕ್ತಿ ಸಾಕಷ್ಟು ನೋವು ಹಾಗೂ ಸಮಸ್ಯೆಯನ್ನು ಎದುರಿಸುವನು.

ವೃಷಭ

ವೃಷಭ

ವೃಷಭ ರಾಶಿಯವರು ಎತ್ತಿನ ಕೋಪವನ್ನು ಹೊಂದಿರುತ್ತಾರೆ. ಎತ್ತು ಅಷ್ಟು ಸುಲಭವಾಗಿ ಕೋಪಕ್ಕೆ ಒಳಗಾಗುವುದಿಲ್ಲ. ಹಾಗೊಮ್ಮೆ ಕೋಪಕ್ಕೆ ಒಳಗಾದರೆ ವೈರಿಯನ್ನು ನೆಲಸಮ ಮಾಡುವುದು. ಹಾಗೆಯೇ ವೃಷಭ ರಾಶಿಯ ವ್ಯಕ್ತಿಗಳು ಎನ್ನಲಾಗುವುದು. ಸಾಮಾನ್ಯವಾಗಿ ಮೃದು ಮತ್ತು ಸ್ಥಿರ ಮನಸ್ಸಿನ ವ್ಯಕ್ತಿಗಳಾಗಿರುತ್ತಾರೆ. ಇವರು ಒಮ್ಮೆ ಕೋಪಕ್ಕೆ ಒಳಗಾದರು ಎಂದಾದರೆ ಅವರನ್ನು ನಿಯಂತ್ರಿಸಲಾಗುವುದಿಲ್ಲ. ಅದು ಹಿಂಸಾತ್ಮಕ ರೂಪದಲ್ಲಿ ಅಂತ್ಯ ಕಾಣುವುದು. ಮೇಷ ರಾಶಿಯವರಂತೆ ಬಹುಬೇಗ ಕೋಪಕ್ಕೆ ಒಳಗಾಗದೆ ಇರಬಹುದು. ಆದರೆ ಕೋಪಕ್ಕೆ ಒಳಗಾದಾಗ ಗಂಭೀರದಿಂದ ಕೂಡಿರುತ್ತದೆ. ಚಂದ್ರನ ಪ್ರಭಾವದಿಂದ ಇವರಲ್ಲಿ ಕೋಪ ಅಧಿಕವಾಗಿರುತ್ತದೆ ಎನ್ನಲಾಗುವುದು. ಕೋಪ ಗೊಂಡ ಎತ್ತಿನಿಂದ ಹೇಗೆ ದೂರ ಉಳಿಯಬೇಕೋ ಹಾಗೆಯೇ ಇವರು ಕೋಪಕ್ಕೆ ಒಳಗಾದಾಗ ಇವರಿಂದ ಆದಷ್ಟು ದೂರ ಉಳಿಯಬೇಕು.

Most Read: ಕೆಲವು ಬದಲಾವಣೆಗಳು ಪ್ರತಿಯೊಂದು ರಾಶಿಚಕ್ರದವರಿಗೆ ಕಷ್ಟದ ಸಂಗತಿಗಳಾಗಿರುತ್ತವೆ

ಮಿಥುನ

ಮಿಥುನ

ಇವರು ಅಷ್ಟು ಸುಲಭವಾಗಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲ. ತಮ್ಮ ಭಾವನೆಗಳ ಮೇಲೆ ಸಾಕಷ್ಟು ಹಿಡಿತವನ್ನು ಹೊಂದಿರುತ್ತಾರೆ. ಇವರು ಬಹುತೇಕ ಸಂದರ್ಭದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಕೊಳ್ಳುವುದು ಹಾಗೂ ಅಧಿಕ ಜನರೊಂದಿಗೆ ವ್ಯವಹರಿಸುವ ಕೆಲಸದಲ್ಲಿಯೇ ತಲ್ಲೀನರಾಗಿರುತ್ತಾರೆ. ಹಾಗಾಗಿ ಇವರಿಗೆ ತಮ್ಮ ಭಾವನೆಗಳನ್ನು ಹೇಗೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎನ್ನುವುದು ತಿಳಿದಿದೆ. ಎಂತಹ ಸನ್ನಿವೇಶ ಅಥವಾ ಸಿಟ್ಟಿನ ಸ್ಥಿತಿ ಎದುರಾದರೂ ಅದನ್ನು ಬಹಳ ಸುಲಭವಾಗಿ ನಿಯಂತ್ರಿಸುವರು. ಜೊತೆಗೆ ತಣ್ಣನೆಯ ಹೃದಯದಿಂದ ತೋರ್ಪಡಿಸುವರು. ಕೋಪದ ಗಡಿ ಮೀರಿದಾಗ ಗಂಭೀರ ಸ್ಥಿತಿಯನ್ನು ಪಡೆದುಕೊಳ್ಳುವರು.

ಕರ್ಕ

ಕರ್ಕ

ಇವರನ್ನು ಸಾಮಾನ್ಯವಾಗಿ ಭಾವನಾತ್ಮಕ ಜೀವಿಗಳು ಎಂದು ಪರಿಗಣಿಸಲಾಗುವುದು. ಇವರು ಭಾವನಾತ್ಮಕವಾಗಿ ವಿಷಯವನ್ನು ಸ್ವೀಕರಿಸುವರು. ಸಾಕಷ್ಟು ಕಾಳಜಿಯ ಸ್ವಭಾವದವರಾದ ಕರ್ಕ ರಾಶಿಯವರಿಗೆ ಕೋಪ ಬರುವುದೇ? ಎನ್ನುವುದನ್ನು ಕೇಳಿದರೆ ಹೌದು ಎನ್ನಲಾಗುತ್ತದೆ. ಇವರು ತಕ್ಷಣದಲ್ಲಿ ಕೋಪಕ್ಕೆ ಒಳಗಾಗದೆ ಇರಬಹುದು. ಆದರೆ ಕೋಪದಿಂದ ಮಾನಸಿಕವಾಗಿ ಉದ್ರೇಕಗಳನ್ನು ವ್ಯಕ್ತಪಡಿಸುತ್ತಾರೆ. ಇವರು ಒಮ್ಮೆ ಕೋಪಕ್ಕೆ ಒಳಗಾದರೆ ಗಂಭೀರ ಸ್ಥಿತಿಯಂತೆ ಇರುತ್ತದೆ. ಇವರ ಕೋಪವು ಕಡಲು ಉಕ್ಕಿದಂತೆ ಇರುತ್ತದೆ ಎನ್ನಲಾಗುವುದು.

ಸಿಂಹ

ಸಿಂಹ

ಗಂಭೀರ ಸ್ಥಿತಿಯ ಕೋಪಕ್ಕೆ ಒಳಗಾಗುವರು. ರಾಜ, ಸಮೂಹದ ಕೇಂದ್ರಬಿಂದುವಿನಂತೆ ಆಕರ್ಷಿಸಲು ಬಯಸುವವರು ಇವರು ಇವರ ಭಾವನೆಗಳಿಗೆ ಹಾನಿ ಅಥವಾ ನೋವು ಉಂಟಾದರೆ ಸುಲಭವಾಗಿ ಹಾನಿಯನ್ನುಂಟುಮಾಡುವರು. ಇವರು ಮಿಥುನ ರಾಶಿಯವರಂತೆ ಅಸಡ್ಡೆಯ ಕೋಪವನ್ನು ವ್ಯಕ್ತಪಡಿಸುವುದಿಲ್ಲ. ಕೋಪಕ್ಕೆ ಕಾರಣವಾದ ಸಂಗತಿ ಹಾಗೂ ವ್ಯಕ್ತಿಯ ಮೇಲೆ ಪ್ರತಿಕಾರವನ್ನು ತೋರುವರು. ಇವರ ಕೋಪ ಕೊಲೆ ಮಾಡುವಷ್ಟರ ಮಟ್ಟಿಗೆ ಹೋಗುವುದು ಎಂದರೆ ಆಶ್ಚರ್ಯವಿಲ್ಲ.

ಕನ್ಯಾ

ಕನ್ಯಾ

ಈ ರಾಶಿಯು ಭೂಮಿಯ ಚಿಹ್ನೆಯನ್ನು ಒಳಗೊಂಡಿದೆ. ಈ ರಾಶಿಯ ವ್ಯಕ್ತಿಗಳು ಶಾಂತ ಹಾಗೂ ತಾಳ್ಮೆಯ ವ್ಯಕ್ತಿಗಳಾಗಿರುತ್ತಾರೆ. ಇವರು ಬಹುತೇಕ ಸಂದರ್ಭದಲ್ಲಿ ತಪ್ಪಾದ ಭಾವನೆಗಳಿಗೆ ಒಳಗಾಗುತ್ತಾರೆ. ಅತಿಯಾದ ವಿಮರ್ಷೆಯ ಗುಣವು ಕೆಲವೊಮ್ಮೆ ಅನುಚಿತತೆಯ ಸಂದರ್ಬವನ್ನು ಸೃಷ್ಟಿಸುವುದು. ಇವರಲ್ಲಿ ಹತಾಶೆಯ ಭಾವನೆ ಉಂಟಾದಾಗ ಉಗ್ರವಾದ ಪ್ರಚೋದನೆ ವ್ಯಕ್ತಪಡಿಸುವರು. ಮೇಷ ರಾಶಿಯವರಂತೆ ಹಿಂಸಾತ್ಮಕ ಪ್ರತಿಕ್ರಿಯೆಯನ್ನು ನೀಡುವರುವಿವರು ಸಾಮಾನ್ಯವಾಗಿ ಉದ್ವೇಗಗಳನ್ನು ನಿಯಂತ್ರಿಸುವುದಿಲ್ಲ.. ಅಲ್ಲದೆ ಇವರ ವ್ಯಕ್ತಿತ್ವದಲ್ಲಿ ಇತರರನ್ನು ನೋಯಿಸುವುದನ್ನು ಬಯಸುವುದಿಲ್ಲ ಎನ್ನಲಾಗುವುದು.

Most Read: ಈ 5 ರಾಶಿಚಕ್ರದವರು ದ್ವೇಷ ಕಟ್ಟಿಕೊಳ್ಳುವುದಿಲ್ಲ-ಇತರರ ತಪ್ಪನ್ನು ಬೇಗನೇ ಕ್ಷಮಿಸಿ ಬಿಡುವರು

ತುಲಾ

ತುಲಾ

ಈ ರಾಶಿಯ ವ್ಯಕ್ತಿಗಳು ಕೋಪವನ್ನು ತಮ್ಮಲ್ಲಿಯೇ ಅದುಮಿ ಹಿಡಿಯುತ್ತಾರೆ. ಇವರು ತಮ್ಮ ಭಾವನೆಗಳ ಮೇಲೆ ಸಾಕಷ್ಟು ನಿಯಂತ್ರಣ ಹೊಂದಿರುತ್ತಾರೆ. ಜೊತೆಗೆ ಸಮತೋಲನವನ್ನು ಕಾಯ್ದುಕೊಳ್ಳುವುದರ ಮೂಲಕ ಕೋಪವನ್ನು ನಿಯಂತ್ರಿಸುತ್ತಾರೆ. ಇವರ ಮಿತಿ ಅಥವಾ ಸಹನೆಯನ್ನು ಮೀರಿದಂತಹ ಕೋಪ ಬಂದರೆ ಕೋಪದಲ್ಲಿ ಕೊಲೆ ನಡೆಯಬಹುದು. ಸಂಗತಿಗಳು ಕೊಲೆಯಲ್ಲಿ ಮುಕ್ತಾಯವಾಗಬಹುದು ಎಂದು ಹೇಳಲಾಗುವುದು. ಮಧ್ಯವರ್ತಿಗಳಂತೆ ವರ್ತಿಸುವ ಸಂದರ್ಭದಲ್ಲಿ ಸಾಕಷ್ಟು ನಿಯಂತ್ರಣವನ್ನು ಹೊಂದಿರುತ್ತಾರೆ.

Most Read: ರಾಶಿಚಕ್ರದ ಅನುಸಾರ ಪ್ರೀತಿಯಲ್ಲಿ ಬಿದ್ದಾಗ ಯಾವ್ಯಾವ ರಾಶಿಯವರು ಹೇಗೆಲ್ಲಾ ವರ್ತಿಸುತ್ತಾರೆ ನೋಡಿ...

ವೃಶ್ಚಿಕ

ವೃಶ್ಚಿಕ

ಶ್ರಮ ಜೀವಿಗಳಾದ ಇವರು ಸಾಮಾನ್ಯವಾಗಿ ಇತರರ ವಿಷಯಗಳಿಗೆ ತಲೆಕೊಡುವುದಿಲ್ಲ. ಆದರೆ ಇವರ ಸುದ್ದಿಗೆ ಬಂದರೆ ಅಥವಾ ಅವರ ಕೋಪಕ್ಕೆ ಕಾರಣವಾದವರ ವಿರುದ್ಧ ಪ್ರತಿಕಾರ ಪಡೆಯದೆ ಹಿಂದಿರುಗುವುದಿಲ್ಲ. ಇವರ ಮನಸ್ಸು ಅತ್ಯಂತ ತೀವ್ರ ಹಾಗೂ ರಹಸ್ಯ ಮಯವಾಗಿರುತ್ತದೆ. ಮಂಗಳನ ಪ್ರಭಾವಕ್ಕೆ ಒಳಗಾದ ಇವರು ನೈಸರ್ಗಿಕವಾಗಿಯೇ ಅಧಿಕ ಕೋಪಕ್ಕೆ ಒಳಗಾಗುತ್ತಾರೆ. ಇವರ ಕೋಪವು ಅತ್ಯಂತ ವಿನಾಶಕಾರಿ ಹಾಗೂ ಕ್ಷಮಿಸದಂತಹ ಕೆಟ್ಟ ಪ್ರವಾಹದಂತೆ ಇರುತ್ತದೆ. ಇವರು ಸಿಟ್ಟಿಗೆ ಒಳಗಾದರೆ ಸೇಡು ತೀರಿಸಿಕೊಳ್ಳದೆ ಹೋಗುವ ವ್ಯಕ್ತಿಗಳಲ್ಲ.

ಧನು

ಧನು

ಈ ರಾಶಿಯ ವ್ಯಕ್ತಿಗಳು ವಸ್ತು ಮತ್ತು ವ್ಯಕ್ತಿಯಲ್ಲಿ ಧನಾತ್ಮಕ ಸಂಗತಿಯನ್ನು ಪರಿಗಣಿಸುತ್ತಾರೆ. ಸಾಕಷ್ಟು ತಾಳ್ಮೆಯನ್ನು ಹೊಂದಿರುವ ವ್ಯಕ್ತಿಗಳಾದ ಇವರು ಸ್ವಲ್ಪ ಮೊಂಡು ಸ್ವಭಾವಕ್ಕೆ ಒಳಗಾಗುತ್ತಾರೆ. ಇವರ ಮೊಂಡು ಸ್ವಭಾವವು ಕೆಲವೊಮ್ಮೆ ಇತರರನ್ನು ನೋಯಿಸಬಹುದು. ಸೂಕ್ಷ್ಮ ಸ್ವಭಾವದವರಾದ ಇವರಿಗೆ ಎಲ್ಲವೂ ನೆನಪಿನಲ್ಲಿ ಇರುತ್ತದೆ. ಮನಸ್ಸಿಗೆ ನೋವುಂಟುಮಾಡಿದವರನ್ನು ಕ್ಷಮಿಸುವುದಿಲ್ಲ. ತಮ್ಮಲ್ಲಿ ಉಂಟಾದ ಕೋಪವನ್ನು ಅಷ್ಟು ಸುಲಭವಾಗಿ ತೋರಿಸುವುದಿಲ್ಲ. ಕೋಪವು ನಿಯಂತ್ರಣ ಮೀರಿದಾಗ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದು ಸಹ ಇವರಿಗೆ ತಿಳಿದಿರುವುದಿಲ್ಲ.

ಮಕರ

ಮಕರ

ಭೂಮಿಯ ಚಿಹ್ನೆಯನ್ನು ಹೊಂದಿರುವ ರಾಶಿಚಕ್ರ ಇದು. ಪ್ರಕೃತಿಯಲ್ಲಿ ಇವರು ಗಟ್ಟಿ ಮನಸ್ಸಿನವರು ಎಂದು ಹೇಳಲಾಗುವುದು. ಇವರು ತಮ್ಮ ಬಹುತೇಕ ಭಾವನೆಗಳನ್ನು ಸುಲಭವಾಗಿ ಮರೆಮಾಚುತ್ತಾರೆ. ಅದರಲ್ಲಿ ಅವರ ಕೋಪವು ಒಳಗೊಂಡಿರುತ್ತದೆ. ಸಾಮಾನ್ಯವಾಗಿ ಎಲ್ಲಾ ಸನ್ನಿವೇಶಗಳನ್ನು ಸುಂದರವಾಗಿ ನಿಭಾಯಿಸಬಲ್ಲ ವ್ಯಕ್ತಿಗಳಾಗಿರುತ್ತಾರೆ. ಇವರು ತಮಗೆ ಬಂದ ಕೋಪವನ್ನು ಸಹ ಸಹಜವಾಗಿಯೇ ಮರೆ ಮಾಚುತ್ತಾರೆ. ಆದರೆ ತಾಳ್ಮೆಯ ಗಡಿ ಮೀರಿದಾಗ ಆಘಾತಕಾರಿಯಾದ ಪ್ರತಿಕ್ರಿಯೆಯನ್ನು ನೀಡುವರು.

ಕುಂಭ

ಕುಂಭ

ಭಾವನಾತ್ಮಕ ಜೀವಿಗಳು ಎಂದು ಪರಿಗಣಿಸಲಾಗುವುದು. ಇವರು ತಮ್ಮ ಜೀವನದಲ್ಲಿ ಕೆಲಸ, ಸ್ನೇಹಿತರು, ಕುಟುಂಬದ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡುವರು. ಅಲ್ಲದೆ ಅವರ ವಿಷಗಳಲ್ಲಿ ರಾಜತಾಂತ್ರಿಕತೆಯನ್ನು ನೋಡುತ್ತಾರೆ. ಇವರ ಭಾವನೆಗಳು ಅಷ್ಟು ಸುಲಭ ರೀತಿಯಲ್ಲಿ ಹತೋಟಿಯಲ್ಲಿ ಇಟ್ಟುಕೊಳ್ಳುವುದಿಲ್ಲ. ಹತಾಶೆ ಹಾಗೂ ಬೇಸರ ಉಂಟಾದಾಗ ಇವರು ಏನು ಮಾಡಿಕೊಳ್ಳುತ್ತಾರೆ ಎನ್ನುವುದರ ಅರಿವು ಅವರಿಗಿರುವುದಿಲ್ಲ. ಕೋಪಗೊಂಡಾಗ ತಮ್ಮ ಹರಿತವಾದ ನಾಲಿಗೆಯಿಂದ ಶಬ್ದಗಳನ್ನು ಬಳಸುತ್ತಾರೆ. ಅದನ್ನು ಎದುರಿಸುವುದು ಅಷ್ಟು ಸುಲಭವಾಗಿರುವುದಿಲ್ಲ ಎನ್ನಲಾಗುವದು.

ಮೀನ:

ಮೀನ:

ಈ ರಾಶಿಯ ವ್ಯಕ್ತಿಗಳು ಅತ್ಯಂತ ಸೂಕ್ಷ್ಮ ಪ್ರವೃತ್ತಿಯವರಾಗಿರುತ್ತಾರೆ. ಇವರು ಇತರರ ಭಾವನೆಗಳನ್ನು ಸಹ ಸೂಕ್ಷ್ಮವಾಗಿ ಪರಿಗಣಿಸುವರು. ಸುತ್ತಲಿನ ಜನರು ನೋವು ಅಥವಾ ದುಃಖವನ್ನು ಅನುಭವಿಸುತ್ತಿದ್ದರೆ ಅವರಿಗೆ ಸಾಂತ್ವಾನ, ಹಾಗೂ ಸಹಾನುಭೂತಿ ತೋರುವರು. ಇವರು ಕೋಪದ ಸಂವೇದನೆಗೆ ಒಳಗಾದಾಗ ತಮ್ಮ ಭಾವನೆಯನ್ನು ರಹಸ್ಯದ ರೂಪದಲ್ಲಿ ಮರೆಮಾಚುವರು. ಇವರ ನೋವಿಗೆ ಅಥವಾ ಸಿಟ್ಟಿಗೆ ಕಾರಣರಾದವರಿಗೆ ಪ್ರತಿಶುಲ್ಕ ನೀಡದೆ ಇರುವುದಿಲ್ಲ.

English summary

What makes your zodiac sign angry?

Zodiac signs influence personality traits & similarly, decide what angers each sign.They determine characteristics of a person, distinguishing what makes them different from one and another. The manifestation of anger too is different for each zodiac sign as different planets and elements in nature rule each of these signs. Moreover, these two aspects heavily influence how the overall character of an individual born under any of the sun signs will be formed.
X
Desktop Bottom Promotion