For Quick Alerts
ALLOW NOTIFICATIONS  
For Daily Alerts

ಪ್ರೇಮಿಗಳ ದಿನ: ರಾಶಿ ಚಕ್ರಗಳ ಅನುಸಾರ ನಿಮಗೆ ಯಾವ ಮಾರ್ಗ ಶುಭ ತರುವುದು ನೋಡಿ

|

ಪ್ರೇಮಿಗಳ ದಿನಾಚರಣೆಯು ಪಾಶ್ಚಾತ್ಯ ರಾಷ್ಟ್ರಗಳಿಂದ ಬಂದ ಆಚರಣೆ ಆಗಿರಬಹುದು. ಆದರೆ ಅದರ ಆಚರಣೆಯನ್ನು ಪ್ರಪಂಚದಾದ್ಯಂತ ಆಚರಿಸುತ್ತಾರೆ. ಯುವಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಪ್ರೇಮಿಗಳ ದಿನಾಚರಣೆ ಅಥವಾ ವ್ಯಾಲೆಂಟೈನ್ಸ್ ಡೇ ಎಂದರೆ ಅದೊಂದು ಸಂಭ್ರಮ ಹಾಗೂ ಹಬ್ಬದ ದಿನದಂತೆ. ತಾವು ಮೆಚ್ಚಿದವರಿಗೆ ಉಡುಗೊರೆ ನೀಡುವುದು, ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದು, ಸಂಗಾತಿಯಾಗಲು ಅನುಮತಿ ಕೇಳುವುದು ಹೀಗೆ ವಿವಿಧ ಸಂಗತಿಗಳಿಗಾಗಿ ಸಾಕಷ್ಟು ಸಾಹಸ ಹಾಗೂ ಉಮ್ಮಸ್ಸನ್ನು ತೋರಲು ಮುಂದಾಗುತ್ತಾರೆ.

ಪ್ರೀತಿ-ಪ್ರೇಮ ಎನ್ನುವುದು ಹದಿಹರೆಯದ ಸಮಯದಲ್ಲಿ ಅಥವಾ ಯೌನಕ್ಕೆ ಕಾಲಿಟ್ಟ ಸಮಯದಲ್ಲಿ ಉಂಟಾಗುವುದು ಸಹಜ. ಪರಸ್ಪರ ವಿರುದ್ಧ ಲಿಂಗದವರನ್ನು ಆಕರ್ಷಿಸುವುದು, ಆಕರ್ಷಣೆಗಾಗಿ ಸಾಕಷ್ಟು ಸಾಹಸ ಹಾಗೂ ವರ್ತನೆಗಳನ್ನು ತೋರುವುದು ಸಹ ಸಹಜ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಪಡೆದುಕೊಳ್ಳುವ ಬದಲಾವಣೆಗಳು ಪ್ರೀತಿ ಎನ್ನುವ ನದಿಗೆ ಇಳಿಯಲು ಬಯಸುತ್ತದೆ.

ಬಯಸಿದ ಪ್ರೀತಿ ಜೀವನದಲ್ಲಿ ದೊರೆತರೆ ಸಾಕಷ್ಟು ಸಂತೋಷ ಹಾಗೂ ಉತ್ಸಾಹವಿರುತ್ತದೆ. ಅದೇ ಬಯಸಿದ ಪ್ರೀತಿ ಸಿಗದೆ ಹೋದಾಗ ಸಾಕಷ್ಟು ನೋವು, ದುಃಖ ಉಂಟಾಗುವುದು. ಮಾನಸಿಕವಾಗಿ ನೊಂದ ವ್ಯಕ್ತಿ ಅಂತಹ ಸಂದರ್ಭದಲ್ಲಿ ಆಘಾತಕಾರಿ ಕೃತ್ಯ ಕೈಗೊಳ್ಳುವ ಸಾಧ್ಯತೆಗಳು ಇರುತ್ತವೆ. ಅಂತಹ ಕೆಲಸಗಳಿಗೆ ಮುಂದಾಗದೆ, ನಾವು ಪ್ರೀತಿಸಿದ ವ್ಯಕ್ತಿ ನಮ್ಮ ಪ್ರೀತಿಯನ್ನು ಒಪ್ಪಿಕೊಳ್ಳದೆ ಹೋದರು ಸರಿ, ಅವರ ಜೀವನ ಸುಂದರವಾಗಿರಲಿ ಎನ್ನುವ ಮನಸ್ಸು ನಮ್ಮದಾಗಿರಬೇಕು. ಆಗಲೇ ಅದು ನಿಜವಾದ ಪ್ರೀತಿ ಎನಿಸಿಕೊಳ್ಳುವುದು.

ಪ್ರೇಮಿಗಳಿಗೆ ಪ್ರತಿ ದಿನವೂ ಪ್ರೇಮಿಗಳ ದಿನಾಚರಣೆಯೇ!

ಪ್ರೇಮಿಗಳಿಗೆ ಪ್ರತಿ ದಿನವೂ ಪ್ರೇಮಿಗಳ ದಿನಾಚರಣೆಯೇ!

ಹಿಂದೂ ಆಚರಣೆಯಲ್ಲಿ ಪ್ರೇಮಿಗಳ ದಿನ ಎನ್ನುವ ವಿಶೇಷ ಆಚರಣೆ ಇಲ್ಲ. ಪ್ರೇಮಿಗಳಿಗೆ ಪ್ರತಿ ದಿನವೂ ಪ್ರೇಮಿಗಳ ದಿನಾಚರಣೆಯೇ ಎನ್ನುವುದನ್ನು ತಿಳಿಸುತ್ತದೆ. ಇಂಗ್ಲಿಷ್ ಪಂಚಾಂಗಗಳ ಪ್ರಕಾರ ದಿನಗಳ ಆಚರಣೆಯಾದರೂ ಹಿಂದೂ ಪ್ರಂಚಾಂಗದ ಪ್ರಕಾರ ಆಯಾ ದಿನಗಳ ವಿಶೇಷತೆಯನ್ನು ರಾಶಿಚಕ್ರಗಳಿಗೆ ಅನುಗುಣವಾಗಿ ವ್ಯಕ್ತಿಗಳು ಅನುಭವಿಸುತ್ತಾರೆ ಎನ್ನಲಾಗುವುದು. ಪ್ರತಿ ದಿನ ವಿಭಿನ್ನ ನಕ್ಷತ್ರಗಳು ತಿಥಿಗಳು ಬರುವುದರಿಂದ ರಾಶಿಚಕ್ರಗಳ ಮೇಲೆ ಅವುಗಳ ಪ್ರಭಾವ ಗಂಭೀರವಾಗಿಯೇ ಇರುತ್ತದೆ. ಹಾಗಾಗಿ ಫೆಬ್ರವರಿ 14 ಪ್ರೇಮಿಗಳ ದಿನವಾದರೂ ಅಂದು ನಕ್ಷತ್ರ ಹಾಗೂ ರಾಶಿ ಫಲಗಳ ಅನುಸಾರ ವ್ಯಕ್ತಿಯು ವಿಭಿನ್ನ ಅನುಭವವನ್ನು ಪಡೆದುಕೊಳ್ಳಬೇಕಾಗುವುದು. ನೀವು ಈಗಾಗಲೇ ಯಾರನ್ನಾದರೂ ಪ್ರೀತಿಸುತ್ತಿದ್ದರೆ ಅಥವಾ ನಿಮ್ಮ ಪ್ರೀತಿಯ ವಿಷಯವನ್ನು ನೆಚ್ಚಿಕೊಂಡವರ ಮುಂದೆ ಹೇಳಲು ಬಯಸುತ್ತಿದ್ದರೆ ಅದನ್ನು ಹೇಗೆ ವ್ಯಕ್ತಪಡಿಸಬೇಕು? ನೀವು ಉಡುಗೊರೆಯನ್ನು ನೀಡಲು ಮುಂದಾಗಿದ್ದರೆ ಅದನ್ನು ಹೇಗೆ ನೀಡಬೇಕು? ನಿಮ್ಮ ಉಡುಗೊರೆಯು ಯಾವ ರೀತಿಯಲ್ಲಿ ಪ್ರೇಮಿಯ ಮನಸ್ಸು ಗೆಲ್ಲುವುದು? 14ರ ದಿನ ನಿಮಗೆ ಎಷ್ಟು ಅನುಕೂಲಕರವಾಗಿದೆ ಎನ್ನುವಂತಹ ಅನೇಕ ವಿಷಯಗಳ ಕುರಿತು ಬೋಲ್ಡ್ ಸ್ಕೈ ರಾಶಿ ಚಕ್ರಗಳ ಅನುಸಾರ ವಿವರಣೆಯನ್ನು ನೀಡಿದೆ.

ಮೇಷ

ಮೇಷ

ಜನವರಿ ತಿಂಗಳ ಅಂತ್ಯದ ಸಮಯದಲ್ಲಿಯೇ ನೀವು ನಿಮ್ಮ ಪ್ರೀತಿ ಪಾತ್ರರ ಬಗ್ಗೆ ಅಥವಾ ನಿಮ್ಮ ಪ್ರೇಮಿಯ ಪ್ರೀತಿಯ ಬಗ್ಗೆ ಹಾಗೂ ನೈಜ ಭಾವನೆಯ ಬಗ್ಗೆ ಸರಿಯಾಗಿ ಅರಿತುಕೊಂಡಿದ್ದೀರಿ. ನೀವು ಪ್ರಮುಖ ಯೋಜನೆಯನ್ನು ಮಾಡಬೇಕಾದ ಅಗತ್ಯವಿಲ್ಲ. ನೀವು ನಿಮ್ಮ ಪ್ರೀತಿ ಹಾಗೂ ಭಾವನೆಗಳ ಬಗ್ಗೆ ನಿಮ್ಮ ಕೈಬರಹದ ಮೂಲಕ ಪತ್ರವೊಂದನ್ನು ಬರೆಯಿರಿ. ನಿಮ್ಮ ಜೀವನದಲ್ಲಿ ನೀವು ಬಯಸಿದ ವ್ಯಕ್ತಿಯೊಂದಿಗೆ ಇದ್ದರೆ ಅವರ ಪ್ರೀತಿಗೆ ಧನ್ಯವಾದವನ್ನು ಹೇಳಿ. ಅದೇ ನೀವು ಬಯಸಿದ ವ್ಯಕ್ತಿಗೆ ನಿಮ್ಮ ಪ್ರೀತಿಯನ್ನು ಹೇಳಬೇಕು ಎಂದುಕೊಂಡಿದ್ದರೆ ನಿಮ್ಮ ಭಾವನೆ ಹಾಗೂ ಪ್ರೀತಿಯ ಬಗ್ಗೆ ಪತ್ರದಲ್ಲಿ ಬರೆದು ಅವರಿಗೆ ತಿಳಿಸಿ.

ವೃಷಭ

ವೃಷಭ

ಪ್ರೇಮಿಗಳ ದಿನವು ನಿಮಗೆ ಎಲ್ಲವೂ ತರ್ಕದಿಂದ ಕೂಡಿರುವ ಸಾಧ್ಯತೆಗಳಿರುತ್ತವೆ ಎಂದು ಹೇಳಲಾಗುವುದು. ನಕ್ಷತ್ರಗಳು ಹಾಗೂ ಗ್ರಹಗಳು ಅಷ್ಟು ಅನುಕೂಲಕರ ಸ್ಥಿತಿಯನ್ನು ಸೂಚಿಸುವುದಿಲ್ಲ. ಈ ವರ್ಷ ನೀವು ಕೆಲವು ತಾರ್ಕಿಕ ಬುದ್ಧಿವಂತಿಕೆಯಿಂದ ನಿಮ್ಮ ಪಾಲುದಾರರೊಂದಿಗೆ ಸಾಹಸದ ಆಟಗಳನ್ನು ಆಡುವುದರ ಬದಲು ಒಂದಷ್ಟು ವಿಶ್ರಾಂತಿಯನ್ನು ಪಡೆದುಕೊಳ್ಳಲು ಯೋಚಿಸಿ. ನಿಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ನಾಲ್ಕು ಗೋಡೆಯಿಂದ ಆಚೆ ಬರಲು ಪ್ರಯತ್ನಿಸಬೇಕು.

ಮಿಥುನ

ಮಿಥುನ

ನಿಮ್ಮ ಸಂಬಂಧ ಹಾಗೂ ಪ್ರೀತಿಯನ್ನು ಬಲಪಡಿಸಿಕೊಳ್ಳಲು ಅದೃಷ್ಟವು ನಿಮ್ಮ ಪರವಾಗಿಯೇ ನಿಂತಿದೆ. ಸಾಕಷ್ಟು ಅನುಕೂಲಕರವಾದ ಪರಿಸ್ಥಿತಿಯನ್ನು ಸಹ ಪಡೆದುಕೊಳ್ಳುವಿರಿ. ನೀವು ಕೆಲವು ಉದ್ದೇಶಗಳಿಗಾಗಿ ಗಂಭೀರ ವ್ಯಕ್ತಿಗಳೊಂದಿಗೆ ಒಂದಿಷ್ಟು ಸಮಯವನ್ನು ಕಳೆಯಲು ಬಯಸುವಿರಿ. ನೀವು ನಿಮ್ಮ ಪ್ರೇಮಿಯೊಂದಿಗೆ ಒಂದಿಷ್ಟು ಉತ್ತಮ ಸಮಯವನ್ನು ಕಳೆಯಲು ಸಿನಿಮಾ ಥಿಯೇಟರ್‍ಗೆ ಹೋಗುವುದು ಉತ್ತಮ.

ಕರ್ಕ

ಕರ್ಕ

ಹುಣ್ಣಿಮೆಯು ನಿಮಗೆ ಸಮೀಪ ಇರುವುದರಿಂದ ನೀವು ನಿಮ್ಮ ಪ್ರೀತಿಯಿಂದ ಹೆಚ್ಚು ಭಾವನಾತ್ಮಕ ಮತ್ತು ಸೂಕ್ಷ್ಮ ಭಾವನೆಯೊಂದಿಗೆ ಒಂದಷ್ಟು ಅನುಭವ ಹಾಗೂ ಸಮಯವನ್ನು ಕಳೆಯುವಿರಿ. ಕೆಲವು ಅದ್ಭುತ ಭಾವನೆಗಳು ನಿಮ್ಮ ಮೇಲೆ ಸುರಿಮಳೆಯನ್ನು ತರುವುದು. ನಿಮಗೆ ಪ್ರೇಮಿಯ ದಿನವು ಅದ್ಭುತದಿಂದ ಕೂಡಿರುತ್ತದೆ. ನಿಮ್ಮ ಪಾಲುದಾರರೊಂದಿಗೆ ಉತ್ತಮ ಚಲನ ಚಿತ್ರವನ್ನು ಮನೆಯಲ್ಲಿಯೇ ಕುಳಿತು ನೋಡಿ. ಪ್ರೀತಿಯನ್ನು ಪರಸ್ಪರ ಹಂಚಿಕೊಳ್ಳಿ.

Most Read: ಪಾಕಿಸ್ತಾನ ಪ್ರೇಮಿಗಳ ದಿನವನ್ನು 'ಸಹೋದರಿ ದಿನ' ವನ್ನಾಗಿ ಆಚರಿಸಲು ನಿರ್ಧರಿಸಿದೆಯಂತೆ!!

ಸಿಂಹ

ಸಿಂಹ

ಸಿಂಹ ರಾಶಿಯವರು ತಾವು ಅಂದುಕೊಂಡಿದ್ದ ಕೆಲವು ಕೆಲಸ ಅಥವಾ ಸಂಗತಿಯನ್ನು ನಿರಾಕರಿಸಲು ಮುಂದಾಗಿರುತ್ತಾರೆ ಎಂದು ತೋರುವುದು. ನೀವು ನಿಮ್ಮ ಜೀವನದಲ್ಲಿ ವಿಶೇಷ ವ್ಯಕ್ತಿಯಾಗಿರುವವರನ್ನು ಪಡೆದುಕೊಳ್ಳಲು ಹಾಗೂ ಅವರ ಆಶಯವನ್ನು ಪೂರೈಸಲು ಮುಂದಾಗಿ. ವಾರಾಂತ್ಯದಲ್ಲಿ ರಸ್ತೆ ಪ್ರವಾಸ ಅಥವಾ ಲಾಂಗ್ ಡ್ರೈವ್ ಹೋಗುವುದರ ಮೂಲಕ ನಿಮ್ಮ ಪ್ರೀತಿ ಪಾತ್ರರ ಮನಸ್ಸನ್ನು ಗೆಲ್ಲಿ ಎಂದು ಸಲಹೆ ನೀಡಲಾಗುವುದು. ನಿಮ್ಮ ಮನಸ್ಸಿನಲ್ಲಿ ಹಾಗೂ ನಿಮ್ಮವರ ಮನಸ್ಸಿನಲ್ಲಿದ್ದ ಗುಪ್ತ ಭಾವನೆಗಳು ಹೊರ ಬರುತ್ತವೆ ಎಂದು ಹೇಳಲಾಗುವುದು.

ಕನ್ಯಾ

ಕನ್ಯಾ

ಈ ವರ್ಷದ ಪ್ರೇಮಿಗಳ ದಿನದಲ್ಲಿ ಬಹುತೇಕ ಸಮಯವವನ್ನು ನೀವು ನಿಮ್ಮ ಮನೆಯಲ್ಲಿಯೇ ಕಳೆಯುವಿರಿ ಎಂದು ತೋರುತ್ತದೆ. ಈ ಕುರಿತು ಅಧಿಕ ಚಿಂತನೆಗೆ ಒಳಗಾಗುವ ಅಗತ್ಯವಿಲ್ಲ. ಉತ್ತಮ ಕಲ್ಪನೆ ಹಾಗೂ ಸ್ನೇಹದಿಂದ ಕೆಲವು ಊಹಾತ್ಮಕ ಆಟಗಳನ್ನು ಆಡುವಿರಿ. ನಿಮ್ಮ ಕೆಲವು ಅದ್ಭುತ ಪ್ರತಿಭೆಯು ನಿಮ್ಮವರ ಅರಿವಿಗೆ ಬರುವುದು. ಕೆಲವು ವಿನೋದದ ಆಟಗಳನ್ನು ಆಡುವುದರ ಮೂಲಕ ಸಂತೋಷವನ್ನು ಪಡೆದುಕೊಳ್ಳುವಿರಿ.

ತುಲಾ

ತುಲಾ

ಶನಿಯ ಪ್ರಭಾವ ತುಲಾ ರಾಶಿಯವರ ಮೇಲೆ ಗಂಭೀರವಾಗಿ ಇರುವುದರಿಂದ ನೀವು ನಿಮ್ಮ ವೃತ್ತಿ ಜೀವನದ ಕಡೆಗೆ ಹೆಚ್ಚು ಗಮನವನ್ನು ನೀಡುವಿರಿ. ಸೂಕ್ತ ಗುರಿಯನ್ನು ಸಾಧಿಸುವುದರ ಬಗ್ಗೆ ಹೆಚ್ಚು ಕಾರ್ಯನಿರತರಾಗಿರುತ್ತೀರಿ. ಉತ್ತಮ ಸೂರ್ಯೋದಯದ ಕಲ್ಪನೆಯಂತೆಯೇ ಸೂರ್ಯಾಸ್ತವೂ ಕೂಡ ಅಧಿಕ ರೋಮಾಂಚಕ ಹಾಗೂ ಪ್ರಣಯ ಪೂರ್ಣವಾಗಿರುತ್ತದೆ. ಜೊತೆಗೆ ಒಂದಿಷ್ಟು ವಿನೋದ ಹಾಗೂ ಪೋಷಣೆಯ ಭಾವನೆಯು ನಿಮ್ಮನ್ನು ಸಂತೋಷಗೊಳಿಸುವುದು.

ವೃಶ್ಚಿಕ

ವೃಶ್ಚಿಕ

ವೃಶ್ಚಿಕ ರಾಶಿಯ ವ್ಯಕ್ತಿಗಳು ಯಾವಾಗಲು ಮೋಡಿ ಮಾಡುವ ಗುಣವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ವ್ಯಾಲೆಂಟೈನ್ ದಿನದಂದು ನಿಮ್ಮ ಪಾಲುದಾರರೊಂದಿಗೆ ಸ್ವಲ್ಪ ಸಮಯವನ್ನು ವ್ಯಯಿಸುವುದರ ಜೊತೆಗೆ ಸ್ನೇಹಿತರೊಂದಿಗೂ ಒಂದಿಷ್ಟು ಸಮಯವನ್ನು ಕಳೆಯಬೇಕಾಗುವುದು. ಪ್ರೇಮಿಗಳ ದಿನದಂದು ಒಂದು ಸಣ್ಣ ಪಾರ್ಟಿಯನ್ನು ಆಯೋಜಿಸಿ. ಇಲ್ಲವೇ ಒಳಾಂಗಣ ಆಟವನ್ನು ಆಯೋಜಿಸುವುದರ ಮೂಲಕ ನಿಮ್ಮ ಪ್ರೇಮಿಯನ್ನು ಹಾಗೂ ಸ್ನೇಹಿತರನ್ನು ಆಹ್ವಾನಿಸಿ. ಒಂದಿಷ್ಟು ಸಂತೋಷದ ಸಮಯವನ್ನು ಕಳೆಯಬಹುದು.

ಧನು

ಧನು

ಈ ವರ್ಷ ಗುರುವು ನಿಮ್ಮ ಪರವಾಗಿ ನಿಲ್ಲುವುದರಿಂದ ವರ್ಷಪೂರ್ತಿ ಅದೃಷ್ಟವನ್ನು ಪಡೆದುಕೊಳ್ಳುವಿರಿ. ವಿಶೇಷವಾಗಿ ಫೆಬ್ರುವರಿ ತಿಂಗಳಲ್ಲಿ ಎಂದು ಹೇಳಲಾಗುವುದು. ಈ ತಿಂಗಳ ಪೂರ್ತಿಯೂ ಅತ್ಯುತ್ತಮ ಸಮಯ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವಿರಿ. ಹೊರಗೆ ಹೋಗುವುದು, ಉತ್ಸಾಹದ ಆಟವನ್ನು ಆಡುವುದು ಹಾಗೂ ವಿಶೇಷ ಸಮಯವನ್ನು ಕಳೆಯುವುದರ ಮೂಲಕ ಸಂಗಾತಿ ಅಥವಾ ಪ್ರೇಮಿಯೊಂದಿಗೆ ಸಮಯವನ್ನು ಆನಂದಿಸಬಹುದು.

ಮಕರ

ಮಕರ

ಪ್ರೇಮಿಗಳ ದಿನದಂದು ನಕ್ಷತ್ರಗಳ ಸ್ಥಾನವು ಒಂದು ವಿಶೇಷ ಬದಲಾವಣೆಯನ್ನು ಪಡೆದುಕೊಳ್ಳುವುದರ ಜೊತೆಗೆ ಗಂಭೀರ ಪರಿಣಾಮ ಬೀರುತ್ತವೆ. ಶನಿಯು ಒಂದು ಪ್ರಮುಖ ಪರಿಣಾಮವನ್ನು ಬೀರುತ್ತದೆ ಎಂದು ಹೇಳಲಾಗುವುದು. ನೀವು ಬಹುಶಃ ಜೀವನದಲ್ಲಿ ಗಂಭೀರವಾದ ಮತ್ತು ಪ್ರೌಢ ಗ್ರಹಿಕೆಯನ್ನು ಪಡೆದುಕೊಂಡಿರಬಹುದು. ನಿಮ್ಮ ಪ್ರೀತಿಯ ಭಾವನೆಗಳು ನಿಜವಾದವು ಎಂದು ನೀವು ಬಯಸಿದರೆ ಮುಂದೆ ಹೋಗಿ. ನಿಮ್ಮ ಪ್ರೇಮಿಯ ಇಷ್ಟವಾದ ಸ್ಥಳಕ್ಕೆ ಕರೆದೊಯ್ದು ಅಲ್ಲಿ ನಿಮ್ಮ ಹೃದಯದ ಮಾತು ಹಾಗೂ ಭಾವನೆಗಳನ್ನು ಹೇಳಿ.

Most Read: ಮನೋಶಾಸ್ತ್ರಜ್ಞರ ಪ್ರಕಾರ: ಸುಳ್ಳು ಹೇಳುವಿಕೆಯನ್ನು ತಿಳಿಸುತ್ತದೆ 'ಬಾಡಿ ಲ್ಯಾಂಗ್ವೇಜ್'

ಕುಂಭ

ಕುಂಭ

2019ರ ವರ್ಷ ನಿಮ್ಮ ರಾಶಿಯ ಅನುಸಾರ ಉತ್ತಮ ಪರಿವರ್ತನೆ ಹಾಗೂ ಪ್ರಭಾವವನ್ನು ಪಡೆದುಕೊಳ್ಳುವಿರಿ. ಹಾಗಾಗಿ ಈ ವರ್ಷ ನೀವು ಸಾಕಷ್ಟು ಪ್ರಾಯೋಗಿಕ ವ್ಯಕ್ತಿಯಾಗಿ ತೋರುವಿರಿ. ಪ್ರೇಮಿಗಳ ದಿನದಂದು ನೀವು ಒಂದಿಷ್ಟು ವಿರಾಮವನ್ನು ತೆಗೆದುಕೊಳ್ಳಬೇಕು. ನಿಮ್ಮ ಅಚ್ಚು ಮೆಚ್ಚಿನ ನಡೆಯನ್ನು ನೀವು ಕಂಡುಕೊಳ್ಳಬೇಕು. ನಿಮ್ಮ ಪ್ರೇಮಿಗಾಗಿ ಹಸಿರು ಬಣ್ಣದ ಅಲಂಕಾರವನ್ನು ಕೈಗೊಳ್ಳಿ. ಉತ್ತಮ ಆಲೋಚನೆಗಳು ಮತ್ತು ಪ್ರಕ್ರಿಯೆಗಳು ತಾಜಾ, ನೈಸರ್ಗಿಕ ಮತ್ತು ಧನಾತ್ಮಕ ಚಿಂತನೆಗಳಿಂದ ಕೂಡಿರುತ್ತದೆ.

ಮೀನ

ಮೀನ

ಗುರು ಗ್ರಹದ ಪ್ರಭಾವ ಈ ವರ್ಷ ನಿಮ್ಮ ಮೇಲೆ ಅಧಿಕವಾಗಿರುತ್ತದೆ. ಗುರು ಗ್ರಹದ ಧನಾತ್ಮಕ ಪ್ರಭಾವವು ಅದೃಷ್ಟವನ್ನು ತಂದುಕೊಡುವುದು ಎಂದು ಹೇಳಲಾಗುವುದು. ಹಾಗಾಗಿ ನಿಮ್ಮ ಪಾಲುದಾರರು ಈ ವರ್ಷ ನಿಮಗೆ ವಿಶೇಷ ಭಾವನೆಯನ್ನು ನೀಡುತ್ತಾರೆ. ನೀವು ನಿಮ್ಮ ಸಂಗಾತಿ ಅಥವಾ ಪ್ರೇಮಿಯಿಂದ ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವಿರಿ. ಜೊತೆಗೆ ಹೆಚ್ಚಿನ ಗಮನವನ್ನು ನೀಡುವಿರಿ. ನಿಮ್ಮ ಸಂಗಾತಿ ಅಥವಾ ಪ್ರೇಮಿಯೊಂದಿಗೆ ಒಂದಷ್ಟು ದೂರ ಜೊತೆ ಜೊತೆಯಾಗಿ ನಡೆದು ಸಾಗುವುದರ ಮೂಲಕ ಪ್ರೀತಿಯನ್ನು ಹೆಚ್ಚು ಆನಂದಿಸಬಹುದು.

English summary

Valentine's Day Ideas As Per Astrology

Valentine's Day is around the corner. So what are your plans for the day? How are you going to win the love of that special one whom you have enough admired secretly? Well, whatever your plans are, we would suggest you should also check out what your zodiac sign says about your Valentine's Day plans.
Story first published: Wednesday, February 13, 2019, 12:50 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more