For Quick Alerts
ALLOW NOTIFICATIONS  
For Daily Alerts

ಮಗುವನ್ನು ಗರ್ಭದಿಂದ ಹೊರತೆಗೆದು ಶಸ್ತ್ರಚಿಕಿತ್ಸೆ ನಡೆಸಿದರು!

|

ಆಧುನಿಕ ವೈದ್ಯ ವಿಜ್ಞಾನವು ಇಂದಿನ ದಿನಗಳಲ್ಲಿ ಯಾವ ರೀತಿಯಾಗಿ ಮುಂದುವರಿದಿದೆ ಎಂದರೆ, ದೇಹದ ಯಾವ ಭಾಗವು ನಿಷ್ಕ್ರೀಯವಾದರೂ ಅದನ್ನು ಸರಿಪಡಿಸುವಷ್ಟು. ಅದೇ ರೀತಿ ಎಲ್ಲೋ ಒಬ್ಬರಿಗೆ ಬೇಕಾಗಿರುವ ಹೃದಯವನ್ನು ಇನ್ನೆಲ್ಲಿಂದಲೋ ತಂದು ಜೋಡಣೆ ಮಾಡಿ ಪ್ರಾಣ ಕಾಪಾಡುವರು. ಅದೇ ರೀತಿಯಾಗಿ ಈಗ ಗರ್ಭದಲ್ಲಿರುವಂತಹ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸುವಷ್ಟು ವೈದ್ಯಕೀಯ ವಿಜ್ಞಾನವು ಮುಂದುವರಿದಿದೆ.

Unborn Baby

ಈ ಲೇಖನದಲ್ಲಿ ನಾವು ನಿಮಗೆ ಅಂತಹ ಒಂದು ವೈದ್ಯಕೀಯ ವಿಜ್ಞಾನದ ಸಾಧನೆ ಬಗ್ಗೆ ಹೇಳಲಿದ್ದೇವೆ. ಗರ್ಭದಲ್ಲಿರುವ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ಯಶಸ್ವಿಯಾಗಿದ್ದಾರೆ. ಈ ಘಟನೆ ಬಗ್ಗೆ ಓದಿದರೆ ಆಗ ನಿಮಗೆ ವೈದ್ಯಕೀಯ ವಿಜ್ಞಾನವು ಇಷ್ಟು ಮುಂದುವರಿದೆಯಾ ಎಂದು ನಿಬ್ಬೆರಗಾಗಬಹುದು.

ಆ ದಂಪತಿಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ವೈದ್ಯರು ಸೂಚಿಸಿದರು

ಆ ದಂಪತಿಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ವೈದ್ಯರು ಸೂಚಿಸಿದರು

26ರ ಹರೆಯದ ಮಹಿಳೆ ಮತ್ತು ಆಕೆಯ ಸಂಗಾತಿಗೆ ಗರ್ಭಪಾತ ಮಾಡಿಸಿಕೊಳ್ಳಲು ವೈದ್ಯರು ಸಲಹೆ ನೀಡಿದರು. ಯಾಕೆಂದರೆ ಗರ್ಭದಲ್ಲಿ ಇರುವಂತಹ ಮಗುವಿಗೆ ಸ್ಪಿನಾ ಬೈಫಿಡಾ ಎನ್ನುವ ಸಮಸ್ಯೆ ಇತ್ತು. ಗರ್ಭಧಾರಣೆಯ 20ನೇ ವಾರದ ನಿಯಮಿತ ಸ್ಕ್ಯಾನಿಂಗ್ ವೇಳೆ ವೈದ್ಯರಿಗೆ ಈ ಸಮಸ್ಯೆ ಬಗ್ಗೆ ತಿಳಿದುಬಂತು. ಗರ್ಭದಲ್ಲಿರುವಂತಹ ಮಗುವಿನ ತಲೆಯು ಸರಿಯಾದ ಗಾತ್ರದಲ್ಲಿ ಇಲ್ಲವೆಂದು ವೈದ್ಯರಿಗೆ ಈ ವೇಳೆ ತಿಳಿದು ಬಂತು.

Most Read: ಇಥಿಯೋಪಿಯಾದ ಜನರಿಗೆ ಹಸಿ ಮಾಂಸ ಎಂದರೆ ಪಂಚಪ್ರಾಣ! ಪ್ರತಿನಿತ್ಯವು ಹಸಿ ಮಾಂಸ ತಿನ್ನುತ್ತಾರಂತೆ!!

ಸ್ಪಿನಾ ಬೈಫಿಡಾ ಬಗ್ಗೆ

ಸ್ಪಿನಾ ಬೈಫಿಡಾ ಬಗ್ಗೆ

ಗರ್ಭದಲ್ಲಿರುವಂತಹ ಮಗುವಿನ ಬೆನ್ನುಮೂಳೆಯು ಸರಿಯಾಗಿ ಬೆಳವಣಿಗೆ ಆಗದೆ ಇರುವಂತಹ ಪರಿಸ್ಥಿತಿಯನ್ನು ಸ್ಪಿನಾ ಬೈಫಿಡಾ ಎಂದು ಹೇಳುವರು. ಇದರ ಪರಿಣಾಮವಾಗಿ ಮುಂದೆ ಮಗು ಜನಿಸಿದ ಬಳಿಕ ಅದಕ್ಕೆ ಸರಿಯಾಗಿ ನಡೆದಾಡಲು ಆಗದು.

ವೈದ್ಯರು ಗರ್ಭದಲ್ಲಿಯೇ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿಸುವ ಆಯ್ಕೆ ನೀಡಿದರು

ವೈದ್ಯರು ಗರ್ಭದಲ್ಲಿಯೇ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿಸುವ ಆಯ್ಕೆ ನೀಡಿದರು

ವೈದ್ಯರು ಆ ದಂಪತಿಗೆ ಹೊಸ ಆಯ್ಕೆ ನೀಡಿದರು. ಇದರಲ್ಲಿ ಗರ್ಭದಲ್ಲಿಯೇ ಮಗುವಿನ ಪರಿಸ್ಥಿತಿಯನ್ನು ಜನಿಸುವ ಮೊದಲೇ ಶಸ್ತ್ರಚಿಕಿತ್ಸೆ ಮೂಲಕವಾಗಿ ಸರಿ ಮಾಡುವುದು. ಈ ಶಸ್ತ್ರಚಿಕಿತ್ಸೆಯಲ್ಲಿ ತಾಯಿ ಗರ್ಭದಿಂದ ಮಗುವನ್ನು ಹೊರಗೆ ತೆಗೆದು, ಬಳಿಕ ಮಗುವಿನ ಬೆನ್ನುಮೂಳೆಯನ್ನು ಸರಿಪಡಿಸುವುದು. ಇದರಿಂದ ಮುಂದೆ ಮಗು ಜನಿಸಿದ ಬಳಿಕ ಅದಕ್ಕೆ ಸಾಮಾನ್ಯ ಜೀವನ ಸಾಗಿಸಲು ಸಾಧ್ಯವಾಗುವುದು.

Most Read: ಈತನ ಕರುಳಿನ ತುಂಡನ್ನೇ ತೆಗೆದು ಹಾಕಿದ ವೈದ್ಯರು! ಯಾಕೆ ಗೊತ್ತೇ?

ಮಗುವನ್ನು ಮತ್ತೆ ಗರ್ಭದೊಳಗೆ ಇಡಲಾಯಿತು

ಮಗುವನ್ನು ಮತ್ತೆ ಗರ್ಭದೊಳಗೆ ಇಡಲಾಯಿತು

ಶಸ್ತ್ರಚಿಕಿತ್ಸೆ ಬಳಿಕ ಮಗುವನ್ನು ಮತ್ತೆ ಅದೇ ಸ್ಥಿತಿಯಲ್ಲಿ ಗರ್ಭದಲ್ಲಿ ಇಡಲಾಯಿತು. ಇದರಿಂದ ಮಹಿಳೆಯು ಸಂಪೂರ್ಣ ಗರ್ಭಧಾರಣೆ ಸಮಯವನ್ನು ಪೂರೈಸಿ, ಮಗುವಿಗೆ ಜನ್ಮ ನೀಡಬೇಕು. ಈ ಶಸ್ತ್ರಚಿಕಿತ್ಸೆಯು ತುಂಬಾ ಯಶಸ್ವಿಯಾಗಿದೆ ಮತ್ತು ಇದನ್ನು ಪೋಷಕರು ಆಯ್ಕೆ ಮಾಡಿಕೊಳ್ಳಬಹುದು ಎಂದು ವೈದ್ಯರು ಹೇಳಿದ್ದಾರೆ. ಶೇ. 80ರಷ್ಟು ದಂಪತಿಯು ಇಂತಹ ಸಮಸ್ಯೆಯಿದ್ದಾಗ ಗರ್ಭಪಾತ ಮಾಡಿಸಿಕೊಳ್ಳುವರು ಎಂದು ಅಧ್ಯಯನ ವರದಿಗಳು ಬಹಿರಂಗಪಡಿಸಿವೆ. ಇದೊಂದು ವೈದ್ಯಕೀಯ ಲೋಕದ ಅದ್ಭುತವಾದ ಶಸ್ತ್ರಚಿಕಿತ್ಸೆ ಎಂದರೆ ತಪ್ಪಾಗದು. ಇಂತಹ ವೈದ್ಯಕೀಯ ವಿಜ್ಞಾನದಿಂದಾಗಿ ಮಕ್ಕಳು ವಿಕಲಾಂಗರಾಗಿ ಹುಟ್ಟುವಂತಹ ಸಮಸ್ಯೆಯು ಕಡಿಮೆಯಾಗಬಹುದು. ಈ ಶಸ್ತ್ರಚಿಕಿತ್ಸೆ ಬಗ್ಗೆ ನಿಮ್ಮ ಅಭಿಪ್ರಾಯ ಏನು? ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ನಮಗೆ ಬರೆದು ತಿಳಿಸಿ.

English summary

Unborn Baby Was Removed From Mum’s Womb For Surgery

An unborn baby was removed from the mother's womb for a surgery and was later put back inside safely. The 26-year-old pregnant woman who hails from UK has become one of the first in the state to undergo a pioneering surgery on her baby's spine while the baby was still in the womb.
X
Desktop Bottom Promotion