For Quick Alerts
ALLOW NOTIFICATIONS  
For Daily Alerts

ವೃಶ್ಚಿಕ ರಾಶಿಯವರ 10 ಅದ್ಭುತ ಸಂಗತಿಗಳು

|

ಹಿಂದೂ ಪಂಚಾಗ ಹಾಗೂ ಜ್ಯೋತಿಷ್ಯದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಹುಟ್ಟು ಹಾಗೂ ಅವನ ಭವಿಷ್ಯವು ಕುಂಡಲಿಯ ಅನ್ವಯದಂತೆ ನಡೆಯುತ್ತದೆ. ಕುಂಡಲಿ ಹಾಗೂ ಭವಿಷ್ಯವು ವ್ಯಕ್ತಿ ಹುಟ್ಟಿದ ಸಂದರ್ಭದಲ್ಲಿ ಯಾವ ನಕ್ಷತ್ರ ಹಾಗೂ ರಾಶಿಯನ್ನು ಹೊಂದಿದ್ದನು ಎನ್ನುವುದನ್ನು ಅವಲಂಬಿಸಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ನಕ್ಷತ್ರ ಹಾಗೂ ರಾಶಿಯನ್ನು ಹೊಂದಿರುತ್ತಾನೆ. ರಾಶಿಗಳ ಅನ್ವಯದಂತೆ ಗ್ರಹಗಳ ಪ್ರಭಾವ ಹಾಗೂ ಅದೃಷ್ಟಗಳನ್ನು ಅನುಭವಿಸುತ್ತಾನೆ. ವಿಶೇಷವಾಗಿ ಪಡೆದುಕೊಂಡ ರಾಶಿ ಚಕ್ರದ ಅನ್ವಯ ವಿವಿಧ ಮಾನಸಿಕ ಗುಣಗಳು ಹಾಗೂ ದೈಹಿಕ ವರ್ತನೆಗಳು ರೂಪುಗೊಂಡಿರುತ್ತದೆ.

ಹನ್ನೆರಡು ರಾಶಿಚಕ್ರಗಳು ವಿಶೇಷ ದೇವತೆಗಳ ಹಾಗೂ ಗ್ರಹಗಳ ಆಡಳಿತಕ್ಕೆ ಒಳಪಟ್ಟಿರುತ್ತದೆ. ಅಲ್ಲದೆ ವಿಶೇಷ ಚಿಹ್ನೆಗಳನ್ನು ಸಹ ಒಳಗೊಂಡಿರುತ್ತವೆ. ಇವುಗಳ ಅನ್ವಯದಲ್ಲಿಯೇ ಬದುಕಿನಲ್ಲಿ ವಿಶೇಷ ವಾತಾವರಣ ಹಾಗೂ ಬುಂಧು-ಮಿತ್ರರ ಒಡನಾಟವನ್ನು ಪಡೆದುಕೊಳ್ಳುವರು. ಇವುಗಳ ಆಧಾರದ ಮೇಲೆ ಹಾಗೂ ಪ್ರಭಾವದಿಂದ ತಮ್ಮ ವರ್ತನೆಯಲ್ಲಿ ವಿಭಿನ್ನತೆ ಹಾಗೂ ವಿಶೇಷತೆಯನ್ನು ರೂಪಿಸಿಕೊಂಡಿರುತ್ತಾರೆ. ಹಾಗಾಗಿ ಆಯಾ ರಾಶಿಚಕ್ರದಲ್ಲಿ ಜನಿಸಿದವರ ಮಾನಸಿಕ ಗುಣ ಹಾಗೂ ಕೆಲವು ವರ್ತನೆಗಳಲ್ಲಿ ಸಾಮ್ಯತೆಗಳಿರುತ್ತವೆ ಎನ್ನಲಾಗುವುದು.

Scorpios

ಕೆಲವು ಜ್ಯೋತಿಷ್ಯ ಲೆಕ್ಕಗಳ ಅನುಸಾರ ನಿರ್ದಿಷ್ಟ ಸಮಯ ಹಾಗೂ ಕಾಲದಲ್ಲಿ ಜನಿಸಿದವರು ಸಾಮಾನ್ಯವಾಗಿ ಒಂದೇ ರಾಶಿಯವರು ಎಂದು ಸಹ ಹೇಳಲಾಗುವುದು. ಅಂತಹ ಒಂದು ಲೆಕ್ಕಚಾರಗಳ ಅನ್ವಯದಂತೆ ಅಕ್ಟೋಬರ್ 23ರಿಂದ ನವೆಂಬರ್ 22ರ ಒಳಗೆ ಜನಿಸುವ ವ್ಯಕ್ತಿಗಳು ಸಾಮಾನ್ಯವಾಗಿ ವೃಶ್ಚಿಕ ರಾಶಿಯವರಾಗಿರುತ್ತಾರೆ. ವೇದಿಕ್ ಜ್ಯೋತಿಷ್ಯ ಶಾಸ್ತ್ರದ ಅನ್ವಯದ ಪ್ರಕಾರ ವೃಶ್ಚಿಕ ರಾಶಿಯವರನ್ನು ಮಂಗಳ ಗ್ರಹವು ಆಳುತ್ತದೆ. ಅದೇ ರೀತಿ ಪಾಶ್ಚಿಮಾತ್ಯ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ಲುಟೊ ವೃಶ್ಚಿಕ ರಾಶಿಯನ್ನು ಆಳುತ್ತದೆ ಎಂದು ಸಹ ಹೇಳಲಾಗುವುದು.

ವೃಶ್ಚಿಕ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಶ್ರಮಜೀವಿಗಳಾಗಿರುತ್ತಾರೆ. ಇಡಿದ ಕೆಲಸ ಹಾಗೂ ಅಂದುಕೊಂಡ ಗುರಿಯನ್ನು ತಲುಪುವವರೆಗೂ ತಮ್ಮ ನಿರಂತರವಾದ ಕೆಲಸವನ್ನು ಮುಂದುವರಿಸುತ್ತಲೇ ಇರುತ್ತಾರೆ. ತಮ್ಮ ಸಂಗಾತಿ ಹಾಗೂ ಸಂಸಾರಕ್ಕಾಗಿ ವಿಶೇಷ ಸ್ಥಾನ ಹಾಗೂ ಗೌರವವನ್ನು ಸಹ ನೀಡುವರು. ಕೋಪ ಹಾಗೂ ಆತುರವನ್ನು ಹೊಂದಿರುವ ಇವರಲ್ಲಿ ವಿವಿಧ ಅದ್ಭುತ ಗುಣಗಳು ಹುಟ್ಟಿನಿಂದಲೇ ಉಡುಗೊರೆಯಾಗಿ ಪಡೆದುಕೊಂಡಿರುತ್ತಾರೆ. ಅವರ ಕೆಲವು ವಿಶೇಷ ಗುಣಗಳಿಂದಲೇ ಸಮಾಜದಲ್ಲಿ ಹಾಗೂ ಸಂಸಾರದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿ ನಿಲ್ಲುತ್ತಾನೆ ಎಂದು ಹೇಳಲಾಗುವುದು.

Most Read: ಈ ರಾಶಿಯ ಮಹಿಳೆಯರು ಅತ್ಯುತ್ತಮ ರೀತಿಯಲ್ಲಿ ತಾಯಿಯ ಪಾತ್ರವನ್ನು ನಿರ್ವಹಿಸುವರು!

ವೃಶ್ಚಿಕ ರಾಶಿಯವರನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?

ವೃಶ್ಚಿಕ ರಾಶಿಯವರ ವ್ಯಕ್ತಿತ್ವವನ್ನು ಕುಳಿತು ನೋಡುವಂತಹ ವರ್ತನೆಯಿಂದ ಕೂಡಿರುತ್ತದೆ. ಇವರು ಪ್ರತಿಯೊಂದು ಬಾರಿಯೂ ವಿಶೇಷ ವರ್ತನೆ ಹಾಗೂ ಸ್ವಭಾವವನ್ನು ತೋರಿಸುತ್ತಾರೆ ಎಂದು ಹೇಳಬಹುದು. ಅತ್ಯಂತ ತೀಕ್ಷ್ಣ ಹಾಗೂ ನಿಗೂಢ ವ್ಯಕ್ತಿಗಳು ಎಂದು ಹೇಳಬಹುದು. ಇವರು ಸ್ನೇಹವನ್ನು ಮಾಡಿದರೆ ಅತ್ಯಂತ ನಿಷ್ಠಾವಂತ ವರ್ತನೆ ಹಾಗೂ ಭಾವನಾತ್ಮಕವಾಗಿಯೂ ಹೆಚ್ಚು ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಅದೇ ರೀತಿ ಶತ್ರುತ್ವವನ್ನು ಪಡೆದುಕೊಂಡರೆ ಅವರನ್ನು ಅತ್ಯಂತ ವೈರಿಯನ್ನಾಗಿಯೇ ಕಾಣುತ್ತಾರೆ. ಇವರು ಯಾವುದಾದರೂ ಕೆಲಸವನ್ನು ಒಪ್ಪಿಕೊಂಡರೆ ಅಥವಾ ಮಾತನ್ನು ನೀಡಿದರೆ ಅದನ್ನು ಪೂರ್ಣ ಗೊಳಿಸುವುದಕ್ಕೆ ಮುಂಚೆ ಹಾಗೆಯೇ ಹಿಂದಿರುಗುವುದಿಲ್ಲ. ಸ್ನೇಹ, ಸಂಬಂಧ ಹಾಗೂ ಬಾಂಧವ್ಯಗಳಿಗೆ ಬದ್ಧರಾಗಿರುತ್ತಾರೆ. ಇವರು ಸದಾ ತಾವು ಸರಿ ಎನ್ನುವ ಭಾವನೆಯಲ್ಲಿ ಇರುತ್ತಾರೆ. ಇವರು ಸದಾ ಸತ್ಯವನ್ನು ಹೇಳುವುದನ್ನು ಬಯಸುತ್ತಾರೆ. ಜೊತೆಗೆ ಅವರು ಸಹ ಹಾಗೆಯೇ ಇರುತ್ತಾರೆ. ಇವರಲ್ಲಿ ಇನ್ನೂ ಅನೇಕ ವಿಶೇಷ ಅಥವಾ ಅದ್ಭುತ ಗುಣಗಳನ್ನು ಒಳಗೊಂಡಿರುತ್ತಾರೆ. ಅಂತಹ ವಿಷಯಗಳನ್ನು ತಿಳಿಯಲು ಲೇಖನದ ಮುಂದಿನ ಭಾಗವನ್ನು ಓದಬೇಕು.

ರಹಸ್ಯವಾದ ಗುರಿಯಿರುತ್ತದೆ:

ವೃಶ್ಚಿಕ ರಾಶಿಯವರು ಸಾಮಾನ್ಯವಾಗಿ ರಹಸ್ಯವಾದ ಗುಣವನ್ನು ಹೊಂದಿರುತ್ತಾರೆ. ಇವರು ತಮ್ಮ ರಹಸ್ಯದ ಗುಣವನ್ನು ಸಾಮಾನ್ಯವಾಗಿ ಎಲ್ಲಾ ವಿಷಯದಲ್ಲೂ ಅನ್ವಯಿಸುತ್ತಾರೆ. ಅದು ಅವರು ಹೊಂದಿರುವ ಗುರಿಯ ವಿಷಯದಲ್ಲೂ ಅನ್ವಯವಾಗುತ್ತದೆ. ಇವರು ಯಾವುದೇ ಗುರಿ ಅಥವಾ ಆಸೆಯನ್ನು ಹೊಂದಿದ್ದರೆ, ಅದನ್ನು ನೆರವೇರಿಸುವ ತನಕ ಅಥವಾ ಅದರ ಫಲಿತಾಂಶ ಪಡೆದುಕೊಳ್ಳುವುದರ ಒಳಗೆ ಯಾವುದೇ ವ್ಯಕ್ತಿಗೂ ಅದರ ಸುಳಿವು ದೊರೆಯದಂತೆ ನೋಡಿಕೊಳ್ಳುತ್ತಾರೆ. ಇವರು ಸಾಮಾಣ್ಯವಾಗಿ ಹೆಚ್ಚು ಮಹತ್ವಾಕಾಂಕ್ಷೆಯನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ತಮ್ಮ ಗುರಿಯನ್ನು ಸಾಧಿಸಲು ಹೆಚ್ಚಿನ ಪರಿಶ್ರಮವನ್ನು ವಿನಿಯೋಗಿಸುತ್ತಾರೆ. ಒಮ್ಮೆ ಏನನ್ನಾದರೂ ಪಡೆದುಕೊಳ್ಳಬೇಕು ಅಥವಾ ಬಯಸುತ್ತಿದ್ದರೆ ಅದನ್ನು ಪಡೆದುಕೊಳ್ಳುವ ವರೆಗೂ ಸತತ ಪರಿಶ್ರಮವನ್ನು ವಿನಿಯೋಗಿಸುತ್ತಾರೆ.

ಸಮಸ್ಯೆಗಳ ಪರಿಹಾರಕ:

ಯಾವುದಾದರೂ ಗಂಭೀರ ಸಮಸ್ಯೆಯಲ್ಲಿ ತೊಡಗಿಕೊಂಡಿದ್ದರೆ ವೃಶ್ಚಿಕ ರಾಶಿಯವರಲ್ಲಿ ಸಹಾಯವನ್ನು ಕೇಳಿದರೆ ಸಾಕು. ಎಂತಹ ಸಮಸ್ಯೆ ಆದರೂ ಅದಕ್ಕೆ ಸೂಕ್ತ ಪರಿಹಾರವನ್ನು ಹೇಳುವ ಸಾಮಥ್ರ್ಯವನ್ನು ಹೊಂದಿರುತ್ತಾರೆ. ಹಾಗೊಮ್ಮೆ ಯಾವುದಾದರೂ ಸಮಸ್ಯೆಯಲ್ಲಿ ಇವರ ಸಹಾಯದಿಂದ ಪರಿಹಾರವಾಗುತ್ತದೆ ಅಥವಾ ಸಮಸ್ಯೆ ದೂರವಾಗುತ್ತದೆ ಎಂದಾದರೆ ಅದನ್ನು ಪರಿಹರಿಸಲು ಮುಂದಾಗುವರು. ಸೂಕ್ತ ಸಹಾಯ ಮಾಡುವುದರ ಮೂಲಕ ನೆಮ್ಮದಿ ಅಥವಾ ಸಂತೋಷವನ್ನು ತಂದುಕೊಡುವರು.

ನೈಜವಾದ ಮೃದುತ್ವ ಇರುತ್ತದೆ:

ವೃಶ್ಚಿಕ ರಾಶಿಯ ವ್ಯಕ್ತಿಗಳು ಮೇಲ್ನೋಟಕ್ಕೆ ಅತ್ಯಂತ ಒರಟು ಹಾಗೂ ಗಟ್ಟಿ ಮನಸ್ಸಿನ ವ್ಯಕ್ತಿಗಳಂತೆ ಕಂಡುಬರುತ್ತಾರೆ ಆದರೆ ಆಂತರಿಕವಾಗಿ ಅತ್ಯಂತ ಮೃದು ವ್ಯಕ್ತಿಗಳು ಎಂದು ಹೇಳಲಾಗುವುದು. ಹಾಗಾಗಿಯೇ ವೃಶ್ಚಿಕ ರಾಶಿಯವರನ್ನು ಒಂದು ತೆಂಗಿನಕಾಯಿಗೆ ಹೋಲಿಸಲಾಗುತ್ತದೆ. ತೆಂಗಿನಕಾಯಿ ಹೇಗೆ ಹೊರಗಿನಿಂದ ಗಟ್ಟಿ ಹಾಗೂ ಒಳಗೆ ಮೃದುವಾಗಿ ತಂಪಾದ ಗುಣವನ್ನು ಹೊಂದಿರುತ್ತದೆಯೋ ಹಾಗೆ. ಆಂತರಿಕವಾಗಿ ಅತ್ಯಂತ ಅದ್ಭುತ ಪ್ರಿತಿ ವಿಶ್ವಾಸವನ್ನು ಹೊಂದಿರುವ ವ್ಯಕ್ತಿಗಳು ಎಂದು ಹೇಳಲಾಗುವುದು.

Most Read: ಜ್ಯೋತಿಷ್ಯಶಾಸ್ತ್ರದ ಪ್ರಕಾರ-ಗುರುವಾರ ಜನಿಸಿದವರ ಕೆಲವು ಗುಣಗಳು ಹೀಗಿರುವುದು

ಎಂದಿಗೂ ಹಿಂದೇಟು ಹಾಕುವುದಿಲ್ಲ:

ವೃಶ್ಚಿಕ ರಾಶಿಯವರು ಅತ್ಯುತ್ತಮ ಸಾಧಕರು ಹಾಗೂ ಮಾತಿನಲ್ಲಿ ನಿಪುಣರು. ಇವರು ಯಾವುದೇ ವಿಷಯವನ್ನು ಮಾತನಾಡುವಾಗ ತಮ್ಮ ಭಾವನೆ ಹಾಗೂ ಮಾತನ್ನು ಹಿಂದೆ ತೆಗೆದುಕೊಳ್ಳುವುದಿಲ್ಲ. ಕೈಗೊಂಡ ಕೆಲಸದಲ್ಲಿ ಮುಂದೆ ಸಾಗಲು ಇಷ್ಟಪಡುವರೇ ಹೊರತು ಹಿಂದೇಟು ಹಾಕಲು ಬಯಸುವುದಿಲ್ಲ. ಕೈಗೊಂಡ ಕೆಲಸದಲ್ಲಿ ಅಥವಾ ತೊಟ್ಟ ನಿರ್ಧಾರದಲ್ಲಿ ಯಾವುದೇ ರೀತಿಯ ಅಡೆತಡೆಗಳು ಎದುರಾದರೂ ಅದನ್ನು ಎದುರಿಸುವ ಧೈರ್ಯ ಹಾಗೂ ಮನಃಸ್ಥಿತಿಯನ್ನು ಹೊಂದಿರುತ್ತಾರೆಯೇ ಹೊರತು ಹಿಂದೆ ಹೋಗುವುದು ಅಥವಾ ಕೈಗೊಂಡ ನಿರ್ಧಾರವನ್ನು ಕೈಬಿಡುವ ಕೆಲಸ ಮಾಡುವುದಿಲ್ಲ.

ಅತ್ಯುತ್ತಮ ರಕ್ಷಕರು:

ನಿಷ್ಠೆ ಮತ್ತು ಸ್ವಾಮ್ಯತೆಯನ್ನು ಅನುಸರಿಸುವ ವ್ಯಕ್ತಿತ್ವದವರು ಇವರು. ಇವರು ತಾವು ಪ್ರೀತಿಸುವ ವ್ಯಕ್ತಿಗಳಿಗೆ ಹಾಗೂ ತಮ್ಮನ್ನು ಇಷ್ಟಪಡುವ ವ್ಯಕ್ತಿಗಳಿಗಾಗಿ ಸದಾ ಪ್ರೀತಿ ಹಾಗೂ ರಕ್ಷಣೆಯನ್ನು ನೀಡುವರು. ಅವರಿಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿ ಇಡುತ್ತಾರೆ. ಇವರಲ್ಲಿರುವ ರಕ್ಷಣಾತ್ಮಕ ಗುಣ ಹಾಗೂ ಸ್ವಭಾವವು ಇವರ ಕುಟುಂಬ ಹಾಗೂ ಬಂಧು ಮಿತ್ರರಿಗೆ ರಕ್ಷಣೆಯನ್ನು ನೀಡುವುದು ಎಂದು ಹೇಳಲಾಗುವುದು.

ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ:

ಇವರಲ್ಲಿ ಸಾಮಾನ್ಯವಾಗಿ ಸಾಧಿಸುವ ಸ್ವಭಾವ ಹುಟ್ಟಿನಿಂದಲೇ ಬಂದಿರುತ್ತದೆ. ಯಾವುದೇ ವಿಷಯದಲ್ಲಿಯೂ ಇವರು ಅಷ್ಟು ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಜೊತೆಗೆ ತನ್ನಿಂದ ಆಗದು ಎನ್ನುವ ರೀತಿಯಲ್ಲಿ ವಿಷಯವನ್ನು ಅಥವಾ ಸಂಗತಿಯನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಹಾಗೊಮ್ಮೆ ಅಡೆತಡೆಗಳು ಅಥವಾ ಕಷ್ಟಗಳು ಎದುರಾದರೆ ಅದನ್ನು ತಡೆಯಲು ಬೇರೆಯ ವಿಧಾನ ಅಥವಾ ಮಾರ್ಗದ ಮೂಲಕ ಕೆಲಸವನ್ನು ಮತ್ತು ಗುರಿಯನ್ನು ತಲುಪುತ್ತಾರೆ.

ಸ್ವಯಂ ವಿಮರ್ಶಾತ್ಮಕ ಗುಣ ಹೊಂದಿರುತ್ತಾರೆ:

ಈ ರಾಶಿಯ ವ್ಯಕ್ತಿಗಳು ಎಲ್ಲಾ ವಿಷಯದಲ್ಲೂ ತಮ್ಮದೆ ಆದ ನಿರ್ಧಾರ ಹಾಗೂ ಭಾವನೆಯನ್ನು ಹೊಂದಲು ಬಯಸುತ್ತಾರೆ. ವಿಷಯಗಳು ಅಥವಾ ಯಾವುದಾದರು ಗಂಭಿರ ಸಂಗತಿಗಳು ಎದುರಾದರೆ ಅದನ್ನು ಮೊದಲು ಸ್ವಯಂ ವಿಮರ್ಶೆ ಹಾಗೂ ಪರಿಷ್ಕರಣೆ ನಡೆಸುತ್ತಾರೆ. ನಂತರ ಅದರ ಸತ್ಯ ಸಂಗತಿಯನ್ನು ತಿಳಿದ ಬಳಿಕ ತಮ್ಮದೇ ಆದ ನಿರ್ಧಾರವನ್ನು ಕೈಗೊಳ್ಳುವರು.

ಉತ್ತಮ ಧೈರ್ಯವಂತರು:

ಇವರು ಅತ್ಯುತ್ತಮವಾದ ಧೈರ್ಯವನ್ನು ಹೊಂದಿರುತ್ತಾರೆ. ಇವರ ಧೈರ್ಯದ ಪರಿಣಾಮವಾಗಿಯೇ ದೊಡ್ಡ ದೊಡ್ಡ ಸವಾಲುಗಳನ್ನು ಎದುರಿಸಲು ಮುಂದಾಗುವರು. ಜೊತೆಗೆ ಎಂತಹದ್ದೇ ಸ್ಥಿತಿಯನ್ನು ಅಳುಕಿಲ್ಲದೆ ಎದುರಿಸುವರು. ಇದಕ್ಕೆ ಕಾರಣ ಇವರಲ್ಲಿ ಇರುವ ಅದ್ಭುತ ಸತ್ಯದ ವರ್ತನೆ ಹಾಗೂ ಗುಣಗಳು ಎನ್ನಲಾಗುವುದು. ಇವರು ತಮಗೆ ಎದುರಾದ ಯಾವುದೇ ಅಡೆತಡೆಗೆ ಹೆಚ್ಚಿನ ಚಿಂತನೆ ನಡೆಸುವುದಿಲ್ಲ.

ಎಂದಿಗೂ ಇಲ್ಲಾ ಎನ್ನುವ ಶಬ್ದ ಹೇಳುವುದಿಲ್ಲ:

ವೃಶ್ಚಿಕ ರಾಶಿಯವರ ಶಬ್ದಕೋಶದಲ್ಲಿ ಇಲ್ಲ ಎನ್ನುವ ಶಬ್ದವೇ ಇಲ್ಲ ಎನ್ನಬಹುದು. ಏಕೆಂದರೆ ಇವರು ಯಾವುದೇ ಕೆಲಸ ನಿರ್ವಹಿಸಲು ಸಹ ಇಲ್ಲ ಎನ್ನುವುದಿಲ್ಲ. ಕೊಟ್ಟ ಮಾತಿಗೆ ತಪ್ಪು ನಡೆಯುವುದಿಲ್ಲ. ಸಹಾಯ ಕೇಳಿಕೊಂಡವರಿಗೆ ಇಲ್ಲ ಎಂದು ಸಹ ಹೇಳುವುದಿಲ್ಲ. ಎಲ್ಲವನ್ನೂ ಮಾಡುವ ಹಾಗೂ ಎದುರಿಸುವ ಸತ್ಯವಂತಿಕೆಯ ಧೈರ್ಯದ ಸ್ವಭಾವ ಇವರದ್ದಾಗಿರುತ್ತದೆ.

English summary

Strange Facts about Scorpios

The very mention of Scorpio zodiac sign makes people sit up and take notice. This is because they are mysterious individuals with an intense nature. They make loyal friends and dangerous enemies. They are devoted lovers and will do anything to ensure their loved ones are happy and protected. If they have agreed or committed to a project or relationship, they will not back down. They go by their gut and most often than not, they are right. It is best to not lie to a Scorpio because they will see through it until the end.
X
Desktop Bottom Promotion