For Quick Alerts
ALLOW NOTIFICATIONS  
For Daily Alerts

ದ್ರವಾಹಾರ ಪಥ್ಯ ಮಾಡಿ ಮೆದುಳಿಗೆ ಹಾನಿ ಮಾಡಿಕೊಂಡ ಮಹಿಳೆ!

|

ದೇಹದಲ್ಲಿ ಅತಿಯಾಗಿ ಬೆಳೆದಿರುವ ಬೊಜ್ಜು ಕರಗಿಸಿಕೊಳ್ಳಬೇಕು, ಎಲ್ಲರ ಮುಂದೆ ಫಿಟ್ ಆಗಿ ಕಾಣಿಸಿಕೊಳ್ಳಬೇಕು ಎನ್ನುವಂತಹ ಬಯಕೆಯು ಪ್ರತಿಯೊಬ್ಬ ಮಹಿಳೆಯಲ್ಲೂ ಇರುವುದು. ಆದರೆ ಹೆಚ್ಚಿನ ಮಹಿಳೆಯರಿಗೆ ತಮ್ಮ ದೇಹದಲ್ಲಿ ಇರುವಂತಹ ಬೊಜ್ಜು ತುಂಬಾ ನಾಚಿಕೆ ಉಂಟು ಮಾಡುವುದು. ಇದಕ್ಕಾಗಿ ಅವರು ಪ್ರತಿಯೊಂದು ವಿಧಾನವನ್ನು ಅಳವಡಿಸಿಕೊಂಡು ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ಬಯಸುವರು. ಆದರೆ ಇದು ಕೆಲವೊಂದು ಸಂದರ್ಭದಲ್ಲಿ ಸಾಧ್ಯವಾಗುವುದು. ದೇಹವು ಫಿಟ್ ಇರಬೇಕು ಎಂದಾದರೆ ಆಗ ಆಹಾರ ಕ್ರಮವು ಸರಿಯಾಗಿರಬೇಕು, ವ್ಯಾಯಾಮ ಮಾಡಬೇಕು. ಇದೆಲ್ಲವೂ ಇದ್ದರೆ ಆಗ ದೇಹದ ತೂಕ ಇಳಿಸಿಕೊಂಡು ಫಿಟ್ ಆಗಿರಬಹುದು.

 Brain Damage After Going On A Liquid Diet

ಇನ್ನು ಕೆಲವು ಜನರು ಅವರಿವರು ಹೇಳಿದಂತಹ ಮಾತನ್ನು ಕೇಳಿ ತುಂಬಾ ವಿಚಿತ್ರವಾದ ತಂತ್ರಗಳನ್ನು ಅನುಸರಿಸಿಕೊಂಡು ಬೊಜ್ಜು ಇಳಿಸಲು ಪ್ರಯತ್ನಿಸುವರು. ಆದರೆ ಇದು ಕೆಲವೊಮ್ಮೆ ತುಂಬಾ ಹಾನಿ ಉಂಟು ಮಾಡುವುದು. ಹೀಗೆ ಸರಿಯಾದ ಜ್ಞಾನವಿಲ್ಲದೆ ಇರುವವರಿಂದ ಸಲಹೆಗಳನ್ನು ಪಡೆದು, ಅಳವಡಿಸಿಕೊಂಡರೆ ಆಗ ಖಂಡಿತವಾಗಿಯೂ ಅದರಿಂದ ಅಡ್ಡಪರಿಣಾಮಗಳು ಬೀರುವುದು. ಇದರಿಂದ ವೃತ್ತಿಪರರು ಸೂಚಿಸಿರುವ ವಿಧಾನಗಳನ್ನು ಮಾತ್ರ ಅನುಸರಿಸಬೇಕು. ಇಂತಹ ಒಂದು ಘಟನೆಯನ್ನು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇಲ್ಲೊಬ್ಬರು ಮಹಿಳೆ ಕೇವಲ ದ್ರವಾಹಾರದ ಆಹಾರ ಕ್ರಮ ಅನುಸರಿಸಲು ಹೋಗಿ ಈಗ ಮೆದುಳಿಗೆ ಶಾಶ್ವತವಾಗಿ ಹಾನಿ ಮಾಡಿಕೊಂಡಿರುವರು. ಇದರ ಬಗ್ಗೆ ನೀವು ಮುಂದಕ್ಕೆ ಓದುತ್ತಾ ಸಾಗಿ....

ಕೇವಲ ದ್ರವಾಹಾರ ಸೇವನೆ ಮಾಡಬೇಕೆಂದು ಸೂಚಿಸಲಾಗಿತ್ತು

ಕೇವಲ ದ್ರವಾಹಾರ ಸೇವನೆ ಮಾಡಬೇಕೆಂದು ಸೂಚಿಸಲಾಗಿತ್ತು

ತನ್ನ 40ರ ಹರೆಯದಲ್ಲಿದ್ದ ಮಹಿಳೆಗೆ ಕೇವಲ ದ್ರವಾಹಾರ ಮಾತ್ರ ಸೇವನೆ ಮಾಡಬೇಕು ಎಂದು ಹೇಳಲಾಗಿತ್ತು. ಇಸ್ರೇಲಿನ ಟೆಲ್ ಅವಿವ್ ಆಸ್ಪತ್ರೆಗೆ ಆಕೆಯನ್ನು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ದಾಖಲಿಸಲಾಯಿತು.

Most Read: ನೋವು ನಿವಾರಣೆಗೆ ಹಗ್ಗ ಹಾಕಿಕೊಂಡು ನೇತಾಡುವುದು- ಇದು ಚೀನಾದ ಹೊಸ ಟ್ರೆಂಡ್ ಅಂತೆ!!

ಮೂರು ವಾರಗಳ ಕಾಲ ಕೇವಲ ದ್ರವಾಹಾರ ಸೇವನೆ ಮಾಡುತ್ತಿದ್ದರು

ಮೂರು ವಾರಗಳ ಕಾಲ ಕೇವಲ ದ್ರವಾಹಾರ ಸೇವನೆ ಮಾಡುತ್ತಿದ್ದರು

ಟೆಲ್ ಅವಿವ್ ನಲ್ಲಿ ಆಕೆ ಒಬ್ಬರು ಪರ್ಯಾಯ ತಜ್ಞರನ್ನು ಭೇಟಿಯಾದ ಬಳಿಕ ಮೂರು ವಾರಗಳ ಕಾಲ ಕೇವಲ ದ್ರವಾಹಾರ ಮಾತ್ರ ಸೇವನೆ ಮಾಡುತ್ತಲಿದ್ದರು ಎಂದು ವರದಿಗಳು ಹೇಳಿವೆ.

ಆಕೆಯ ದ್ರವಾಹಾರದಲ್ಲಿ ಏನೆಲ್ಲಾ ಇತ್ತು

ಆಕೆಯ ದ್ರವಾಹಾರದಲ್ಲಿ ಏನೆಲ್ಲಾ ಇತ್ತು

ಆಹಾರ ಪಥ್ಯದಿಂದಾಗಿ ಮಹಿಳೆಗೆ ಕೇವಲ ನೀರು ಮತ್ತು ಹಣ್ಣಿನ ಜ್ಯೂಸ್ ಗಳನ್ನು ಮಾತ್ರ ಸೇವಿಸಲು ಹೇಳಲಾಗಿತ್ತು. ಇದರಿಂದಾಗಿ ಆಕೆಯ ದೇಹದಲ್ಲಿ ಉಪ್ಪಿನಾಂಶದ ಅಸಮತೋಲನ ಉಂಟಾಯಿತು. ಈ ಹಂತದಲ್ಲಿ ಆಕೆಯ ತೂಕವು 40 ಕೆಜಿಗಿಂತ ಕಡಿಮೆ ಆಯಿತು.

ಆಕೆಯ ಪರಿಸ್ಥಿತಿ ಬಿಗಡಾಯಿಸಿತು

ಆಕೆಯ ಪರಿಸ್ಥಿತಿ ಬಿಗಡಾಯಿಸಿತು

ವೈದ್ಯರು ಹೇಳುವ ಪ್ರಕಾರ ಮಹಿಳೆಗೆ ಹೈಪೋನಾಟ್ರಾಮಿಯಾ ಎನ್ನುವ ಸಮಸ್ಯೆಯು ಕಾಡಿತು. ಇದು ನೀರು ನಶೆಯಾಗುವಂತಹ ಪರಿಸ್ಥಿತಿಯಾಗಿದೆ. ರಕ್ತದಲ್ಲಿ ಉಪ್ಪಿನ ಅಂಶವು ತುಂಬಾ ಕಡಿಮೆ ಆದರೆ ಈ ರೀತಿಯ ಪರಿಸ್ಥಿತಿ ಬರುವುದು. ಹೊಟ್ಟೆಯು ಸರಿಯಾಗಿ ಇಲ್ಲದೆ ಇರುವ ವೇಳೆ ಅತಿಯಾಗಿ ನೀರು ಸೇವನೆ ಮಾಡುವಂತಹ ಜನರಲ್ಲಿ ಇಂತಹ ಸಮಸ್ಯೆ ಕಾಣಿಸುವುದು. ಇವರು ವಿದ್ಯುದ್ವಿಚ್ಛೇದಗಳ ಬಗ್ಗೆ ಚಿಂತೆ ಮಾಡುವುದಿಲ್ಲ. ಮಹಿಳೆಯ ಮೆದುಳಿಗೆ ಈಗ ಶಾಶ್ವತವಾಗಿ ಹಾನಿಯಾಗಿದೆ.

Most Read: ತಂದೆಯ ಅಸ್ಥಿಪಂಜರ ಜತೆಗೆ ಕಲಾವಿದನ ಫೋಟೋ ಶೂಟ್!!

ವೃತ್ತಿಪರರ ಬಗ್ಗೆ

ವೃತ್ತಿಪರರ ಬಗ್ಗೆ

ಇಸ್ರೇಲ್ ನಲ್ಲಿ ಇರುವಂತಹ ಕಾನೂನಿನ ಪ್ರಕಾರ ಅವರುಗೆ ಥೆರಪಿಸ್ಟ್ ಎಂದು ಹೇಳಿಕೊಳ್ಳಲು ಯಾವುದೇ ರೀತಿಯ ಪದವಿ ಬೇಕಾಗಿಲ್ಲ ಮತ್ತು ಅವರು ಆರೋಗ್ಯ ಸಂಬಂಧಿ ಸಲಹೆಗಳನ್ನು ನೀಡಬಹುದಾಗಿದೆ.

ಮುಂದಿನ ಸಲ ತೂಕ ಇಳಿಸಲು ನೀವು ಪ್ರಯತ್ನಿಸುತ್ತಿರುವಿರಾದರೆ ಆಗ ಹೆಚ್ಚು ಗಮನಹರಿಸಿ. ಇದಕ್ಕಾಗಿ ಸ್ವಲ್ಪ ಹೆಚ್ಚು ತಿಳುವಳಿಕೆ ಬೇಕು ಮತ್ತು ಸ್ವಲ್ಪ ಸಂಶೋಧನೆಯನ್ನು ನಾವು ಮಾಡಬೇಕು. ಇದರಿಂದ ಸರಿಯಾದ ಆಹಾರ ಪಥ್ಯವು ನಮಗೆ ಸಿಗುವುದು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆಯನ್ನು ನಮಗೆ ಬರೆದು ತಿಳಿಸಿ.

English summary

She Suffers Permanent Brain Damage After Going On A Liquid Diet

A woman was taken to a hospital in Tel Aviv, Israel, with brain damage. The woman was on a diet of only water and juice. Medics reveal that she was on diet for three weeks and her weight had dropped below 90 lb. According to reports, the liquid diet had caused salt imbalance and medics fear that the damage is permanent.
X
Desktop Bottom Promotion