Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸಂಗಾತಿಯ ವೀರ್ಯ ಸೇವಿಸಿದ ಮಹಿಳೆಗೆ ಅಲರ್ಜಿ ಉಂಟಾಯಿತು!
ದಂಪತಿಯು ಲೈಂಗಿಕ ಕ್ರಿಯೆ ವೇಳೆ ವಿವಿಧ ಭಂಗಿ ಹಾಗೂ ಹಲವಾರು ರೀತಿಯ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲಿರುವರು. ಆದರೆ ಇಂತಹ ಕೆಲವು ಪ್ರಯೋಗಗಳಿಂದ ಹಾನಿ ಉಂಟು ಆಗುವುದು ಎಂದು ಅವರಿಗೆ ತಿಳಿದಿರದು. ಯಾಕೆಂದರೆ ಕೆಲವೊಂದು ಸಲ ಯಾವುದೇ ಮೂಲದಿಂದ ಮಾಹಿತಿ ಪಡೆದುಕೊಂಡು ಅದನ್ನು ಮನೆಯಲ್ಲಿ ಪ್ರಯೋಗ ಮಾಡಲು ಯತ್ನಿಸುತ್ತೇವೆ. ಆದರೆ ಇದು ವ್ಯತಿರಿಕ್ತ ಪರಿಣಾಮ ಬೀರಬಹುದು.

ಹೀಗಾಗಿ ಎಚ್ಚರಿಕೆ ಅಗತ್ಯ. ಇಲ್ಲೊಬ್ಬರು ತನ್ನ ಸಂಗಾತಿಯ ವೀರ್ಯ ಸೇವನೆ ಮಾಡಿದ್ದು, ಇದರಿಂದ ಆಕೆಗೆ ಅಲರ್ಜಿ ಉಂಟಾಗಿರುವಂತಹ ಘಟನೆಯು ನಡೆದಿದೆ. ಈ ಘಟನೆ ಬಗ್ಗೆ ನೀವು ವಿವರವಾಗಿ ತಿಳಿದುಕೊಳ್ಳಿ ಮತ್ತು ಇದರಿಂದ ಖಂಡಿತವಾಗಿ ನೀವು ಭೀತಿಗೆ ಒಳಗಾಗುವಿರಿ.

ಆಕೆ ತನ್ನ ಸಂಗಾತಿ ಜತೆಗೆ ಸೆಕ್ಸ್ ನಡೆಸಿದಳು!
31ರ ಹರೆಯದ ಹೆಸರು ಬಹಿರಂಗ ಪಡಿಸದ ಮಹಿಳೆಯೊಬ್ಬಳು ತನ್ನ ಸಂಗಾತಿ ಜತೆಗೆ ಸೆಕ್ಸ್ ನಡೆಸಿದಳು. ಈಕೆ ಸ್ಪೇನ್ ನವಳು ಮತ್ತು ಸೆಕ್ಸ್ ವೇಳೆ ಆಕೆ ತನ್ನ ಸಂಗಾತಿ ವೀರ್ಯವನ್ನು ನುಂಗಿದಳು ಮತ್ತು ಇದರ ಬಳಿಕ ಆಕೆ ವಾಂತಿ ಮಾಡಲು ಆರಂಭಿಸಿದಳು. ಆಕೆಗೆ ಉಸಿರಾಡಲು ಕಷ್ಟವಾಯಿತು ಮತ್ತು ಬೊಕ್ಕೆಗಳು ಕಾಣಿಸಿಕೊಂಡವು.

ಆಕೆಗೆ ಅಲರ್ಜಿ ಉಂಟಾಯಿತು
ಈ ಮಹಿಳೆಗೆ ಪೆನ್ಸಿಲಿನ್ ನಿಂದಾಗಿ ಪ್ರಾಣಕ್ಕೆ ಹಾನಿ ಉಂಟು ಮಾಡಬಹುದಾದಂತಹ ಅಲರ್ಜಿಯು ಕಾಣಿಸಿಕೊಂಡಿತು. ಆಕೆ ತನ್ನ ಸಂಗಾತಿಯ ಜತೆಗೆ ಬಾಯಿಯ ಸೆಕ್ಸ್ ನಡೆಸುತ್ತಿದ್ದ ವೇಳೆ ಮತ್ತು ವೀರ್ಯವು ಹೊಟ್ಟೆಯ ಒಳಗೆ ಹೋದಾಗ ಈ ರೀತಿಯಾಗಿದೆ. '

ಆ ವ್ಯಕ್ತಿಯು ಕೆಲವು ಗಂಟೆಗಳ ಮೊದಲು ಆ್ಯಂಟಿಬಯೋಟಿಕ್ ಸೇವಿಸಿದ್ದ!
ಆ ವ್ಯಕ್ತಿಯು ಕೆಲವು ಗಂಟೆಗಳ ಮೊದಲು ಪೆನ್ಸಿಲಿನ್ ಎನ್ನುವ ಆ್ಯಂಟಿಬಯೋಟಿಕ್ ಸೇವನೆ ಮಾಡಿದ್ದ ಮತ್ತು ಪೆನ್ಸಿಲಿನಿಂದಾಗಿ ಮಹಿಳೆಗೆ ಅಲರ್ಜಿ ಉಂಟಾಗಿದೆ ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ. ಇದರಿಂದ ಮಹಿಳೆಯು ಈಗ ತೀವ್ರ ಆಘಾತಕ್ಕೆ ಒಳಗಾಗಿದ್ದಾಳೆ.

ಇದು ತುಂಬಾ ಅಪರೂಪದ ಪ್ರಕರಣ!
ಈ ರೀತಿಯ ಪ್ರಕರಣವು ದಾಖಲಾಗಿರುವುದು ಇದೇ ಮೊದಲು ಎಂದು ವೈದ್ಯಕೀಯ ಲೋಕವು ಹೇಳಿವೆ. ಔಷಧಿ ಸೇವನೆ ಮಾಡಿದ ಬಳಿಕ ಸೆಕ್ಸ್ ಕ್ರಿಯೆಯಲ್ಲಿ ತೊಡಗಿಕೊಳ್ಳುವ ವೇಳೆ ಜನರು ತುಂಬಾ ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು? ಕಮೆಂಟ್ ಬಾಕ್ಸ್ ಗೆ ಅಭಿಪ್ರಾಯ ಬರೆದುಹಾಕಿ.



Click it and Unblock the Notifications
