For Quick Alerts
ALLOW NOTIFICATIONS  
For Daily Alerts

ಸತ್ತ ಬಳಿಕ ಮಗುವಿಗೆ ಜನ್ಮ ನೀಡಿದ ಮಹಿಳೆಯ ಅಸ್ಥಿ ಪಂಜರ ಪತ್ತೆ!

|

ಹಿಂದಿನ ಕಾಲದಲ್ಲಿ ಯಾವ ರೀತಿಯ ನಾಗರಿಕತೆ ಇತ್ತು, ಎಲ್ಲಿ ಯಾವ ಜನಾಂಗದ ಜನರು ವಾಸವಾಗಿದ್ದರು ಮುಂತಾದ ಪ್ರಶ್ನೆಗಳಿಗೆ ಉತ್ತರ ಹುಡುಕುವುದೇ ಪ್ರಾಚ್ಯಶಾಸ್ತ್ರ ಇಲಾಖೆಯ ಕೆಲಸವಾಗಿದೆ. ಹಿಂದಿನ ಕಾಲದ ಜನರು ಬಳಸುತ್ತಿದ್ದ ಪಾತ್ರೆಗಳು, ಆಭರಣಗಳು ಇತ್ಯಾದಿ ಮಣ್ಣಿನ ಅಡಿಯಲ್ಲಿ ಉತ್ಖನನ ವೇಳೆ ಸಿಗುವುದು ಇದೆ. ಇನ್ನು ಕೆಲವೊಂದು ಸಂದರ್ಭದಲ್ಲಿ ಭೂಮಿ ಅಡಿಯಲ್ಲಿ ಹುದುಗಿ ಹೋಗಿರುವಂತಹ ಕೆಲವೊಂದು ನಗರಗಳು ಕೂಡ ಕಾಣಸಿಗುವುದು. ಪ್ರಾಚ್ಯ ಇಲಾಖೆಯು ನಡೆಸುವಂತಹ ಉತ್ಖನನ ತುಂಬಾ ಅದ್ಭುತವಾಗಿ ಇರುವಂತದ್ದಾಗಿ. ಇಂತಹ ಸಂದರ್ಭದಲ್ಲಿ ಕೆಲವು ಸಲ ಮನುಷ್ಯರ ಹಾಗೂ ಪ್ರಾಣಿಗಳ ಮೂಳೆಗಳು ಸಿಗುವುದು ಇದೆ.

ಇದು ಎಷ್ಟು ವರ್ಷಗಳ ಹಿಂದಿನದ್ದು ಎಂದು ಪ್ರಾಚ್ಯ ಇಲಾಖೆಯವರು ಪತ್ತೆ ಮಾಡುವರು. ಆದರೆ ಇಲ್ಲೊಂದು ಅತೀ ಕೂತುಹಲಕಾರಿಯಾದ ವಿಚಾರವನ್ನು ಪ್ರಾಚ್ಯ ಇಲಾಖೆಯು ಪತ್ತೆ ಮಾಡಿದೆ. ಇದು ಶತಮಾನಗಳಿಗಿಂತಲೂ ಹಿಂದಿನದ್ದು ಮತ್ತು ಇದಕ್ಕೆ ಒಳ್ಳೆಯ ಮೌಲ್ಯವು ಇದೆ. ಸಂಶೋಧನೆ ವೇಳೆ ಪ್ರಾಚ್ಯ ಇಲಾಖೆಯು ಕಂಡುಕೊಂಡಿರುವಂತಹ ವಿಚಾರವು ತುಂಬಾ ಆಸಕ್ತಿದಾಯಕವಾಗಿದೆ. ಇಲ್ಲಿ ಒಂದು ಮಧ್ಯಯುಗದ ಮಹಿಳೆಯ ಅಸ್ಥಿ ಪಂಜರ ಅವರಿಗೆ ಸಿಕ್ಕಿದೆ. ಇದರಲ್ಲಿ ವಿಶೇಷ ಏನು ಎಂದು ಕೇಳಬಹುದು. ಆದರೆ ಮಹಿಳೆಯ ಸಾವಿನ ಬಳಿಕ ಜನ್ಮ ತಾಳಿದ ಮಗುವಿನ ಅಸ್ಥಿ ಪಂಜರವು ಅಲ್ಲಿದೆ. ಈ ಕುತೂಹಲಕಾರಿ ವಿಚಾರದ ಬಗ್ಗೆ ನೀವು ಮತ್ತಷ್ಟು ವಿವರವಾಗಿ ತಿಳಿಯುತ್ತಾ ಸಾಗಿರಿ.

ಈ ಅಸ್ಥಿ ಪಂಜರವು ಬೊಲೊಗ್ನ ಬಳಿ ಪತ್ತೆಯಾಗಿದೆ

ಈ ಅಸ್ಥಿ ಪಂಜರವು ಬೊಲೊಗ್ನ ಬಳಿ ಪತ್ತೆಯಾಗಿದೆ

ಮಧ್ಯಯುಗದ ಮಹಿಳೆಯ ಅಸ್ಥಿಪಂಜರು ಬೊಲೊಗ್ನ ಬಳಿ ಪತ್ತೆಯಾಗಿದೆ. ಮಹಿಳೆಯ ಅಸ್ಥಿಪಂಜರದ ಜತೆಗೆ ದಫನದ ಬಳಿಕ ಜನಿಸಿದ ಮಗುವಿನ ಅಸ್ಥಿಪಂಜರವು ಅಲ್ಲಿದೆ. ಶವಪೆಟ್ಟಿಗೆಯ ಒಳಗಡೆ ಮಹಿಳೆ ಹಾಗೂ ಮಗುವಿನ ಅಸ್ಥಿಪಂಜರವು ಪತ್ತೆ ಆಗಿದೆ.

ವಿಶ್ಲೇಷಕರು ಹೇಳುವ ಪ್ರಕಾರ

ವಿಶ್ಲೇಷಕರು ಹೇಳುವ ಪ್ರಕಾರ

ಶವಪೆಟ್ಟಿಗೆಯಲ್ಲಿ ಸಿಕ್ಕಿರುವಂತಹ ಮಧ್ಯಕಾಲೀನ ಯುಗದ ಮಹಿಳೆ ಮತ್ತು ಮಗುವಿನ ಅಸ್ಥಿ ಪಂಜರದ ಬಗ್ಗೆ ವಿಶ್ಲೇಷಕರು ಹೇಳುವ ಪ್ರಕಾರ, ಮಹಿಳೆಯು ಸಾವಿನ ವೇಳೆ ಸುಮಾರು 38 ವಾರಗಳ ಗರ್ಭಿಣಿ ಆಗಿದ್ದಿರಬಹುದು ಮತ್ತು ಆಕೆಯ ಸಾವಿನ ಬಳಿಕ ಶವಪೆಟ್ಟಿಗೆ ಒಳಗಡೆಯೇ ಮಗುವು ಬಲವಂತವಾಗಿ ಹೊರಗೆ ಬಂದಿದೆ.

Most Read: ಥಾಯ್ ಮಸಾಜ್ ನಿಂದ ಪಾರ್ಶ್ವವಾಯುವಿಗೆ ತುತ್ತಾದ ಮಹಿಳೆ

ಜನನದ ಕ್ರಮ

ಜನನದ ಕ್ರಮ

ಅಧ್ಯಯನಗಳು ಹೇಳುವ ಪ್ರಕಾರ ಈ ರೀತಿಯ ಹೆರಿಗೆಯು ದೇಹವು ಕೊಳೆಯಲು ಆರಂಭವಾಗುವ ವೇಳೆ ಉಂಟಾಗುವಂತಹ ಗ್ಯಾಸ್ ನಿಂದ ಆಗುವುದು. ಗ್ಯಾಸ್ ನ ಪರಿಣಾಮವಾಗಿ ಮಗು ಹೊರಗೆ ಬಂದಿರಬಹುದು. ಅದಾಗ್ಯೂ, ಈ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ.

Most Read: ಮಗುವನ್ನು ಗರ್ಭದಿಂದ ಹೊರತೆಗೆದು ಶಸ್ತ್ರಚಿಕಿತ್ಸೆ ನಡೆಸಿದರು!

ಮಹಿಳೆಗೆ ಒಂದು ಶಸ್ತ್ರಚಿಕಿತ್ಸೆ ಮಾಡಲಾಗಿತ್ತು

ಮಹಿಳೆಗೆ ಒಂದು ಶಸ್ತ್ರಚಿಕಿತ್ಸೆ ಮಾಡಲಾಗಿತ್ತು

ಮಹಿಳೆಯ ಅಸ್ಥಿಪಂಜರವನ್ನು ಸಂಶೋಧಕರು ಸರಿಯಾಗಿ ಪರಿಶೀಲನೆ ನಡೆಸಿದ್ದಾರೆ ಮತ್ತು ಆಕೆಗೆ ಪುರಾತನ ಶೈಲಿಯ ತಲೆ ಬುರುಡೆಯ ಶಸ್ತ್ರಚಿಕಿತ್ಸೆ `ತಲೆ ಬುರುಡೆ ಕೊರೆಯುವುದು'ಮಾಡಲಾಗಿತ್ತು ಎಂದು ಹೇಳಿದ್ದಾರೆ. ಇದರಿಂದಾಗಿ ಆಕೆಯ ಅಸ್ಥಿ ಪಂಜರದಲ್ಲಿ ಹಣೆ ಭಾಗದಲ್ಲಿ ಒಂದು ರೀತಿಯ ವಿಚಿತ್ರ ಗುರುತು ಕಾಣಿಸಿಕೊಂಡಿದೆ.

English summary

She Gave Birth After She Died

Experts from the University of Ferrara had recently found the remains of a woman who is believed to have lived in the 7th or 8th century AD. The woman was believed to have delivered a baby since a fully developed skeleton was found between the thighs of the woman.Skeleton Of A Medieval Woman Was Found With Her Baby Born After She Died
X
Desktop Bottom Promotion