Just In
- 6 hrs ago
ಮನೆ ನವೀಕರಣ ಮಾಡುತ್ತಿದ್ದೀರಾ? ತಪ್ಪದೇ ಲೇಖನ ಓದಿ
- 8 hrs ago
ಆರು ಬೆರಳಿಗೆ ಕಾರಣ ಹಾಗೂ ಚಿಕಿತ್ಸೆ
- 10 hrs ago
ಮೇಕಪ್ ಹಚ್ಚಿದಾಗ ಎಂದಿಗೂ ಈ ಕೆಲಸಗಳನ್ನು ಮಾಡಲೇಬೇಡಿ
- 12 hrs ago
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
Don't Miss
- News
ಆಟಿಕೆ ಬಂದೂಕು ತೋರಿಸಿ ಮುಖ್ಯಮಂತ್ರಿ ಅಣ್ಣನನ್ನೇ ಅಪಹರಿಸಿದ ಐನಾತಿಗಳು
- Finance
ಫಾಸ್ಟ್ಟ್ಯಾಗ್ ಡೆಡ್ಲೈನ್ಗೆ ಸ್ವಲ್ಪ ವಿನಾಯಿತಿ
- Sports
ವಿಶ್ವ ಟಿ20ಯಲ್ಲಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಆಡಲಿದ್ದಾರೆ: ಡ್ವೇನ್ ಬ್ರಾವೊ
- Technology
ಲಿಂಕ್ಸ್ ಗಳನ್ನು ಕ್ಯೂಆರ್ ಕೋಡ್ ಬಳಸಿ ಹಂಚಿಕೊಳ್ಳುವುದು ಹೇಗೆ?
- Automobiles
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- Movies
ಜಯಲಲಿತಾ ಸಿನಿಮಾ ಬಳಿಕ ಮತ್ತೊಬ್ಬ ಸಿಎಂ ಬಯೋಪಿಕ್ ಸಾಧ್ಯತೆ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಕೋಳಿ ಮಾಂಸದ ಒಳಗಡೆ ಜೀವಂತ ಇಲಿ ಓಡಾಟ!
ಆಧುನಿಕವಾಗಿ ಮುಂದುವರಿದಿರುವ ಯುಗದಲ್ಲಿ ನಮಗೆ ಬೇಕಾಗಿರುವಂತ ಹೋಟೆಲ್ ಅಥವಾ ರೆಸ್ಟೋರೆಂಟ್ ನಿಂದ ಆಹಾರವನ್ನು ಕೆಲವೇ ನಿಮಿಷಗಳಲ್ಲಿ ನಾವು ಇದ್ದಲ್ಲಿಗೆ ತರಿಸಿಕೊಂಡು ತಿನ್ನುವಂತಹ ವ್ಯವಸ್ಥೆಯು ಬಂದಿದೆ. ಇದರಿಂದ ನಮ್ಮ ಸಮಯದ ಉಳಿತಾಯ ಆಗುವುದು ಮತ್ತು ಯಾವ ಹೋಟೆಲ್ ಎಂದು ಹುಡುಕಿಕೊಂಡು ಹೋಗುವಂತ ಪರಿಸ್ಥಿತಿಯು ಇಲ್ಲ. ಆದರೆ ನಾವು ಇಲ್ಲಿ ಒಂದು ಅಂಶವನ್ನು ಮುಖ್ಯವಾಗಿ ಗಮನಿಸಬೇಕು. ಅದು ಏನೆಂದರೆ ಆ ಹೋಟೆಲ್ ನಲ್ಲಿ ತಯಾರಿಸುವಂತಹ ಆಹಾರದಲ್ಲಿ ಎಷ್ಟು ಮಟ್ಟಿಗೆ ಸ್ವಚ್ಛತೆ ಬಗ್ಗೆ ಗಮನಹರಿಸುವರು ಎನ್ನುವುದು. ಇಲ್ಲವಾದಲ್ಲಿ ಸ್ವಚ್ಛತೆಯು ಇಲ್ಲದೆ ಇರುವಂತಹ ಆಹಾರವನ್ನು ನಾವು ಸೇವಿಸಬೇಕಾಗುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಇಂತಹ ಕೆಲವೊಂದು ವಿಡಿಯೋಗಳು ಹರಿದಾಡುವುದು ಇದೆ. ಖಾಸಗಿ ಹೋಟೆಲ್ ಗಳಿಂದ ಹಿಡಿದು ದೊಡ್ಡ ದೊಡ್ಡ ಸ್ಟಾರ್ ಹೋಟೆಲ್ ಮತ್ತು ರೈಲಿನಲ್ಲಿ ತಯಾರಿಸುವ ಆಹಾರದಲ್ಲಿ ಆಗುವ ಲೋಪಗಳ ಬಗ್ಗೆ ನಾವು ಹಲವಾರು ವಿಡಿಯೋಗಳನ್ನು ನೋಡಿದ್ದೇವೆ. ಇದು ನಮಗೆ ಆಹಾರ ಸೇವಿಸುವ ಮೊದಲು ಒಂದೆರಡು ಸಲ ಆಲೋಚಿಸುವಂತೆ ಮಾಡುವುದು. ಈ ಲೇಖನದಲ್ಲಿ ಅಂತಹ ಒಂದು ವಿಡಿಯೋ ಮತ್ತು ಆ ಘಟನೆ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ಓದಿಕೊಂಡು ಹೋಗಿ. ಹಸಿ ಕೋಳಿ ಮಾಂಸದ ಒಳಗಡೆ ಇಲಿಯೊಂದು ಕಂಡು ಬಂದಿದೆ. ಇದು ನಿಮಗೆ ತುಂಬಾ ವಿಚಿತ್ರ ಎಂದು ಅನಿಸಬಹುದು. ಆದರೆ ಇದು ನಡೆದಿರುವಂತಹ ನಿಜವಾದ ಘಟನೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನು ನೀವು ತಿಳಿಯಿರಿ.
ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ!
ರೆಡ್ಡಿಟ್ ಮತ್ತು ಫೇಸ್ ಬುಕ್ ನಲ್ಲಿ ಈ ವಿಡಿಯೋ ಈಗ ವೈರಲ್ ಆಗುತ್ತಲಿದೆ. ವಿಡಿಯೋದಲ್ಲಿ ನೋಡಿದಾಗ ಕೋಳಿ ಮಾಂಸದ ಒಳಗಡೆ ಜೀವಂತ ಇಲಿಯು ಹೋಗುತ್ತಿರುವುದು ಕಂಡುಬಂದಿದೆ. ಕೋಳಿಯ ಎರಡು ಕಾಲುಗಳ ನಡುವೆ ಹೊಟ್ಟೆಯ ಭಾಗದಲ್ಲಿ ಹೋಗಿ ಈ ಇಲಿಯು ಕುಳಿತುಕೊಂಡಿದೆ.
Most Read: ಸತ್ತ ಬಳಿಕ ಮಗುವಿಗೆ ಜನ್ಮ ನೀಡಿದ ಮಹಿಳೆಯ ಅಸ್ಥಿ ಪಂಜರ ಪತ್ತೆ!

ಇಲಿಯು ಹೊರಡೆ ಬಂದಿದೆ
ವ್ಯಕ್ತಿಯೊಬ್ಬ ಬಂದು ಕೋಳಿ ಮಾಂಸ ತುಂಬಿಸಿದ್ದ ಬಾಸ್ಕೆಟ್ ಗೆ ಬಡಿದಾಗ ಇಳಿ ಮರಿಯು ಹೊರಗೆ ಬಂದಿದೆ. ಸಿಂಗಾಪುರದ ಬಾಗಿಲು ಹಾಕಿದ್ದ ಕಾಫಿ ಶಾಪ್ ಹೊರಗಡೆ ಈ ಕೋಳಿ ಮಾಂಸದ ಬಾಸ್ಕೆಟ್ ನ್ನು ಇಡಲಾಗಿತ್ತು.

ನೆಟ್ಟಿಗರ ಪ್ರತಿಕ್ರಿಯೆ…
ಈ ವಿಡಿಯೋ ವೈರಲ್ ಆದ ವೇಳೆ ನೆಟ್ಟಿಗರು ತುಂಬಾ ಸಿಟ್ಟಾಗಿದ್ದಾರೆ. ಹಸಿ ಮಾಂಸವನ್ನು ಹೀಗೆ ತೆರೆದ ಬಾಸ್ಕೆಟ್ ನಲ್ಲಿ ಇಡುವುದು ತುಂಬಾ ಅಸ್ವಚ್ಛತೆಗೆ ಹಿಡಿದ ಕೈಗನ್ನಡಿ ಎಂದು ಕೆಲವು ನೆಟ್ಟಿಗರು ಸಿಡಿದಿದ್ದಾರೆ. ಕೋಳಿ ಮಾಂಸ ಸರಬರಾಜು ಮಾಡುವಂತಹ ವ್ಯಕ್ತಿಯು ಈ ದೊಡ್ಡ ತಪ್ಪು ಮಾಡಿದ್ದಾನೆ ಎಂದು ಇನ್ನು ಕೆಲವು ಮಂದಿ ನೆಟ್ಟಿಗರು ಆರೋಪ ಮಾಡಿದ್ದಾರೆ. ಮಾಂಸ ಸರಬರಾಜು ಮಾಡುವಾತ ಮತ್ತು ಈ ಕಾಫಿ ಶಾಪ್ ನ ಮಾಲಕ ಇಬ್ಬರು ಕೂಡ ಇಂತಹ ಬೇಜವಾಬ್ದಾರಿಗೆ ಜವಾಬ್ದಾರರು ಎಂದು ಇನ್ನು ಕೆಲವು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Most Read: ಮಗುವನ್ನು ಗರ್ಭದಿಂದ ಹೊರತೆಗೆದು ಶಸ್ತ್ರಚಿಕಿತ್ಸೆ ನಡೆಸಿದರು!

ಕ್ರಮ ಕೈಗೊಳ್ಳಲು ಆಗ್ರಹ
ಈ ವಾಕರಿಕೆ ಬರಿಸುವಂತಹ ವಿಡಿಯೋ ನೋಡಿರುವಂತಹ ಕೆಲವು ನೆಟ್ಟಿಗರು ಇದರ ನೈಜತೆಯನ್ನು ಪತ್ತೆ ಮಾಡಬೇಕು ಮತ್ತು ಈ ಪೋಸ್ಟ್ ನ ಮಾಹಿತಿಯನ್ನು ಸಾಮಾಜಿಕ ಜಾಲತಾಣದವರು ಸಂಗ್ರಹಿಸಬೇಕು. ಈ ಕಾಫಿ ಶಾಪ್ ನ ಚಿತ್ರವೂ ಶೇರ್ ಆದ ಬಳಿಕ ಈ ಬಗ್ಗೆ ತನಿಖೆ ನಡೆಯುತ್ತಿದೆ ಮತ್ತು ಈ ಕಾಫಿ ಶಾಪ್ ನ್ನು ಮುಚ್ಚಲಾಗಿದೆ ಎಂದು ವರದಿಗಳು ಹೇಳಿವೆ.
ವಿಡಿಯೋ ನೋಡಿದ ಬಳಿಕ ನಿಮಗೆ ಹೇಗನ್ನಿಸಿದೆ? ನಿಮ್ಮ ಅಭಿಪ್ರಾಯ ಕೂಡ ಇಲ್ಲಿ ಮಂಡಿಸಿ.