For Quick Alerts
ALLOW NOTIFICATIONS  
For Daily Alerts

ಸಿಟ್ಟು ಗೊಂಡಾಗ ಈ ರಾಶಿಯವರನ್ನು ಕಂಟ್ರೋಲ್ ಮಾಡುವುದೇ ಕಷ್ಟ!

|

ಸಿಟ್ಟು ಅನ್ನುವುದು ಮನುಷ್ಯನ ಸಹಜ ಪ್ರತಿಕ್ರಿಯೆ. ಸಿಟ್ಟು ಮಾಡದೆ ಇರಬೇಕಾದರೆ ಆಗ ಆತ ಎಲ್ಲವನ್ನು ತ್ಯಜಿಸಿರಬೇಕು ಮತ್ತು ಧಾನ್ಯದಲ್ಲಿ ಮುಳುಗಿ ಜ್ಞಾನ ಸಂಪಾದನೆ ಮಾಡಿರಬೇಕು. ನಾವೆಲ್ಲರೂ ಸಿಟ್ಟಾಗುತ್ತೇವೆ, ಕೆಲವೊಂದು ಸಲ ಈ ಸಿಟ್ಟು ನ್ಯಾಯಯುತವಾಗಿರುವುದು ಮತ್ತು ಇನ್ನು ಕೆಲವು ಸಲ ಇದಕ್ಕೆ ಅರ್ಥವೇ ಇರಲ್ಲ. ತುಂಬಾ ಸಿಟ್ಟಿನಲ್ಲಿ ಇರುವವರ ಜತೆಗೆ ನಾವು ಮಾತಿಗೆ ಇಳಿಯಬಾರದು ಎನ್ನುವ ರಹಸ್ಯವನ್ನು ತಿಳಿದು ಕೊಂಡಿರಬೇಕು. ಯಾರಾದರೂ ತುಂಬಾ ಸಿಟ್ಟಾಗಿದ್ದರೆ ಆಗ ನೀವು ಹಿಂದೆ ಸರಿದು, ಅವರಿಗೆ ದಾರಿ ಬಿಟ್ಟುಕೊಡಿ. ಅವರನ್ನು ಮತ್ತೆ ಕೆಣಕಬೇಡಿ ಮತ್ತು ಇದರಿಂದ ಅವರು ಮತ್ತಷ್ಟು ಸಿಟ್ಟಿಗೊಳಗಾಗುವರು. ಕೆಲವು ಜನರು ಸಿಟ್ಟಿಗೊಳಗಾಗುವ ವಿಚಾರವನ್ನು ನಾವು ಕೆದಕಲೇ ಬಾರದು.

ಅದರಲ್ಲೂ ಅವರು ಕೋಪಗೊಂಡಿರುವಂತಹ ಸನ್ನಿವೇಶದಲ್ಲಿ ಹೀಗೆ ಮಾಡಬಾರದು. ಆದರೆ ಪ್ರತಿಯೊಂದು ರಾಶಿಚಕ್ರಗಳು ಕೂಡ ತಮ್ಮದೇ ಆಗಿರುವ ವಿಧಾನದ ಮೂಲಕ ಸಿಟ್ಟನ್ನು ಪ್ರಕಟಿಸುತ್ತವೆ, ಇಂತಹ ಸಮಯದಲ್ಲಿ ಇವರನ್ನು ಕಂಟ್ರೋಲ್ ಮಾಡುವುದೇ ಕಷ್ಟ! ಕೆಲವೊಂದು ರಾಶಿಯವರು ಬೇರೆ ರಾಶಿಗಿಂತ ತುಂಬಾ ತೀವ್ರವಾಗಿ ಸಿಟ್ಟುಕೊಳ್ಳುವರು. ಸಿಟ್ಟುಗೊಂಡಿರುವ ವೇಳೆ ಯಾವ ರಾಶಿಯವರನ್ನು ಕೆಣಕಬಾರದು ಎಂದು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಲಿದ್ದೇವೆ. ನೀವು ಓದಿಕೊಂಡು ಮುಂದೆ ಸಾಗಿ...

 ವೃಷಭ(ಎಪ್ರಿಲ್ 20-ಮೇ 20)

ವೃಷಭ(ಎಪ್ರಿಲ್ 20-ಮೇ 20)

ಸೂರ್ಯ ಚಿಹ್ನೆಯಾಗಿರುವ ವೃಷಭ ರಾಶಿಯು ಗೂಳಿಯನ್ನು ಪ್ರತಿನಿಧಿಸುತ್ತದೆ. ಇದನ್ನು ನೋಡಿದರೆ ವೃಷಭ ರಾಶಿಯವರು ಎಷ್ಟರ ಮಟ್ಟಿಗೆ ಕೋಪಗೊಳ್ಳಬಹುದು ಎಂದು ನಾವು ಊಹಿಸ ಬಹುದು. ಕೋಪಗೊಂಡ ವೇಳೆ ಇರುವ ತುಂಬಾ ಹಿಂಸೆಗೆ ಇಳಿಯಬಹುದು ಮತ್ತು ಬೈಯ್ಯಬಹುದು. ಇವರು ಬೇರೆಯವರ ಮಾತು ಕೇಳುವುದು ತುಂಬಾ ಕಡಿಮೆ ಮತ್ತು ಹಠವಾದಿಗಳಾಗಿ ರುವರು. ಇವರು ಕೆಲವೊಂದು ಸರಿಯಾದ ಕಾರಣಗಳಿದಾಗಿ ಕೋಪಗೊಳ್ಳುವುದರಿಂದಾಗಿ ಇವರ ಕೋಪವನ್ನು ಅರ್ಥ ಮಾಡಿಕೊಳ್ಳಬಹುದು. ಅವರು ಕೋಪಗೊಂಡಿರುವ ವೇಳೆ ಶಾಂತವಾಗಿ ಎಂದು ಹೇಳಬಾರದು. ಅವರು ಅಸಹನೆಗೆ ಒಳಗಾದ ವೇಳೆ ತುಂಬಾ ಜೋರಾಗಿ ಕಿರುಚಾಡುವರು. ಕೋಪಗೊಂಡಿರುವ ವೇಳೆ ತಮ್ಮನ್ನು ಕೆಣಕಿರುವವರ ಬಗ್ಗೆ ಇವರಿಗೆ ತಾಳ್ಮೆ ಇರುವುದು ತುಂಬಾ ಕಡಿಮೆ.

ಕರ್ಕಾಟಕ (ಜೂನ್ 22-ಜುಲೈ 22)

ಕರ್ಕಾಟಕ (ಜೂನ್ 22-ಜುಲೈ 22)

ಈ ಮಾತೃಸಹಜವಾಗಿರುವ ರಾಶಿಯು ಕೋಪಗೊಂಡಿರುವ ವೇಳೆ ತುಂಬಾ ಸಹನೆಯಿಂದ ಇರುವುದು ಎಂದು ನೀವು ಯಾವತ್ತಿಗೂ ಭಾವಿಸಬೇಕು. ಯಾಕೆಂದರೆ ಏಡಿಯು ಯಾವಾಗಲೂ ತುಂಬಾ ಜೋರಾಗಿ ನೋವುಂಟು ಮಾಡುವುದು. ಕರ್ಕಾಟಕ ರಾಶಿಯವರಿಗೆ ಸಿಟ್ಟು ಬಂದ ವೇಳೆ ಅವರು ಇದನ್ನು ಮನಸ್ಸಿನಲ್ಲಿ ಇಟ್ಟು ಕೊಳ್ಳುವರು ಮತ್ತು ತಮ್ಮ ಆಕ್ರಮಣಕಾರಿ ಮನೋಭಾವದ ಮೂಲಕ ಒಂದು ಎಚ್ಚರಿಕೆ ನೀಡುವರು. ಈ ಎಚ್ಚರಿಕೆಗೆ ಗಮನ ಕೊಡದೆ ಇದ್ದರೆ ಮತ್ತು ಪರಿಸ್ಥಿತಿ ಹಾಗೆ ಇದ್ದರೆ, ಆಗ ಸಿಟ್ಟು ಜ್ವಾಲಾಮುಖಿಯಾಗಿ ಸ್ಫೋಟಗೊಳ್ಳುವುದು ಮತ್ತು ಅದು ಹೊರಗೆ ಬರುವುದು. ಸಿಟ್ಟುಗೊಂಡಿರುವಂತಹ ಕರ್ಕಾಟಕ ರಾಶಿ ಯಾವಾಗಲೂ ಜ್ವಾಲಾಮುಖಿಯಂತೆ. ಯಾಕೆಂದರೆ ಇದು ವರ್ಷ ಗಟ್ಟಲೆ ಜಮೆಯಾದ ಬಳಿಕ ಸಿಡಿಯುವುದು. ಸಿಟ್ಟುಗೊಂಡಾಗ ಅವರ ಬಾಯಿಯಿಂದ ಬರುವುದು ನಿಮಗೆ ತುಂಬಾ ಅವಮಾನಿಸ ಬಹುದು. ಈ ಮಟ್ಟಕ್ಕೆ ಬರಲು ಕರ್ಕಾಟಕ ರಾಶಿಯವರಿಗೆ ತುಂಬಾ ಸಮಯ ಬೇಕಾಗುವುದು. ಆದರೆ ಇದು ಬಂದರೆ, ಆಗ ಅವರು ಶಾಂತಗೊಳ್ಳಲು ತುಂಬಾ ಸಮಯ ಬೇಕಾಗುತ್ತದೆ. ಸಿಟ್ಟುಗೊಂಡ ವೇಳೆ ಏಡಿಯ ಪಂಜವು ಹೊರಗೆ ಬರುವುದು. ಅದು ಯಾವ ರೀತಿ ಗಾಯ ಮಾಡುವುದು ಎಂದು ನಿಮಗೆ ತಿಳಿದಿರಬಹುದು. ಸಿಟ್ಟು ಗೊಂಡ ಕರ್ಕಾಟಕ ರಾಶಿಗೆ ಯಾವುದೇ ತಡೆ ಇರುವುದಿಲ್ಲ. ತುಂಬಾ ಪ್ರೀತಿ ವ್ಯಕ್ತಪಡಿಸುವಂತಹ ಕರ್ಕಾಟಕ ರಾಶಿಯವರನ್ನು ಕೋಪ ಗೊಳಿಸಿದರೆ ಆಗ ಅವರು ಅದರಲ್ಲಿ ಕುದಿಯುತ್ತಾ ಇರುವರು. ಇವರ ನೆನಪಿನ ಶಕ್ತಿ ತುಂಬಾ ಒಳ್ಳೆಯದಾಗಿರುವುದು ಮತ್ತು ಅವರು ನಿಮ್ಮನ್ನು ಅಷ್ಟು ಬೇಗನೆ ಮರೆತು ಬಿಡುವುದಿಲ್ಲ. ಇದರಿಂದಾಗಿ ಕರ್ಕಾಟಕ ರಾಶಿಯವರೊಂದಿಗೆ ವ್ಯವಹರಿಸುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು.

Most Read:ಒಟ್ಟು 12 ರಾಶಿಚಕ್ರದವರಲ್ಲಿ ಐದು ರಾಶಿಯವರ ವರ್ತನೆಯು ತುಂಬಾ ಕ್ರೂರವಾಗಿರುತ್ತದೆಯಂತೆ!

ಮೇಷ (ಮಾರ್ಚ್ 21-ಎಪ್ರಿಲ್ 19)

ಮೇಷ (ಮಾರ್ಚ್ 21-ಎಪ್ರಿಲ್ 19)

ಮೇಷ ರಾಶಿಯವರು ಸಿಟ್ಟು ಗೊಂಡಾಗ ಪ್ರತಿಯೊಬ್ಬರಿಗೂ ಇದರ ಬಗ್ಗೆ ತಿಳಿಯುವುದು. ಇದನ್ನು ಅವರು ಹಿಡಿದಿಡುವ ಪ್ರಶ್ನೆಯೇ ಇಲ್ಲ. ಮೇಷ ರಾಶಿವರು ಸಿಂಹ ಮತ್ತು ಧನು ರಾಶಿಯಂತೆ ತುಂಬಾ ಬಲಿಷ್ಠ ಹಾಗೂ ಪ್ರತಿಕ್ರಿಯೆಯನ್ನು ನೀಡುವರು. ಆದರೆ ಮೇಷ ರಾಶಿಯವರು ಶಕ್ತಿ ಮತ್ತು ಅತ್ಯುತ್ಸಾಹವು ತುಂಬಾ ಹಿಂಸೆಯಾಗುವ ರೀತಿಯಲ್ಲಿ ಸಿಟ್ಟಿನಲ್ಲಿ ಸ್ಫೋಟಗೊಳ್ಳಬಹುದು. ಮೇಷ ರಾಶಿಯವರು ಒಂದು ರೀತಿಯಲ್ಲಿ ನಡೆದಾಡುವ ಟೈಂ ಬಾಂಬ್ ನಂತೆ. ಇದು ಯಾವಾಗ ಸಿಡಿಯುವುದು ಎಂದು ಹೇಳಲು ಸಾಧ್ಯವಿಲ್ಲ. ಇದನ್ನು ಅವರು ಅಡಗಿಸಲು ಪ್ರಯತ್ನಿಸಿದಷ್ಟು ಅದು ಅನಿರೀಕ್ಷಿತವಾಗಿ ಸಿಡಿಯುವುದು, ಮನಸ್ಥಿತಿಯನ್ನು ಬದಲಾಯಿಸುವುದು. ತಮ್ಮ ಅಸಹನೆಯನ್ನು ತಡೆದಿಡುವಲ್ಲಿ ಮೇಷ ರಾಶಿಯವರು ಅಷ್ಟು ಉತ್ತಮರಲ್ಲ ಮತ್ತು ಇದು ಯಾವುದೇ ಸಂದರ್ಭದಲ್ಲಿ ಸಿಡಿದು ದೊಡ್ಡ ಮಟ್ಟದಲ್ಲಿ ಜಗಳಕ್ಕೆ ಕಾರಣವಾಗಬಹುದು. ಮೇಷ ರಾಶಿಯು ಸಿಟ್ಟುಗೊಂಡ ವೇಳೆ ಜ್ವಾಲಾಮುಖಿಯು ಸಿಡಿದಂತೆ ಆಗುವುದು. ಸುತ್ತಲಿನವರ ಅವರ ಕಟು ಶಬ್ಧಗಳಿಂದ ಸುಟ್ಟು ಹೋಗುವರು. ಮೇಷ ರಾಶಿಯವರು ಸಿಟ್ಟುಗೊಂಡ ವೇಳೆ ಅವರಿಗೆ ಪರಿಸ್ಥಿತಿಯನ್ನು ತುಂಬಾ ವಿಸ್ತಾರವಾಗಿ ನೋಡಲು ಸಾಧ್ಯವಾಗದು. ಅವರ ಮಾತುಗಳು ಮತ್ತು ಕ್ರಮಗಳಿಂದ ಯಾರಿಗೂ ತೊಂದರೆ ಆಗುವುದು ಎಂದು ಪರಿಗಣಿಸದೆ ಅವರು ಕೋಪಗೊಳ್ಳುವರು. ಸಿಟ್ಟಿನಿಂದ ಹೇಳಲ್ಪಡುವಂತಹ ಮಾತುಗಳು ಸಂಬಂಧ ಕಡಿದುಕೊಳ್ಳಬಹುದು ಮತ್ತು ಕೆಲವೊಂದು ಸಂದರ್ಭದಲ್ಲಿ ಇದು ಎರಡು ರಾಷ್ಟ್ರಗಳ ನಡುವಿನ ಯುದ್ಧಕ್ಕೂ ಕಾರಣವಾಗಿದೆ.

ಸಿಂಹ(ಜುಲೈ 23- ಆಗಸ್ಟ್ 22)

ಸಿಂಹ(ಜುಲೈ 23- ಆಗಸ್ಟ್ 22)

ಸಿಂಹ ರಾಶಿಯವರು ತುಂಬಾ ನಾಟಕೀಯ ಮತ್ತು ಅಧಿಪತ್ಯ ಸಾಧಿಸುವವರು. ಸಿಂಹ ರಾಶಿಯವರು ಸಿಟ್ಟು ಅದು ಸಿಟ್ಟಾಗಿರಲ್ಲ, ಅದು ದೊಡ್ಡ ಮಟ್ಟದ ಕ್ರೋಧವಾಗಿರುವುದು. ಅವರ ಕ್ರೋಧವು ತುಂಬಾ ಜೋರಾಗಿ ಕಿರುಚುವ ಸದ್ದಿನ ಮೂಲಕ ಬರುವುದು. ಸಿಟ್ಟುಗೊಂಡ ವೇಳೆ ನಿಮ್ಮ ಆತ್ಮವಿಶ್ವಾಸವನ್ನೇ ಕುಂದಿಸುವಂತಹ ಮಾತನ್ನು ಅವರು ಆಡಬಹುದು. ಅವರು ಸಿಟ್ಟುಗೊಂಡಿರುವ ವೇಳೆ ಅವರು ತಾನು ಸರಿಯಾಗಿ ಇದ್ದೇನೆ ಮತ್ತು ವಾದದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಭಾವಿಸುವರು. ಸಿಂಹ ರಾಶಿಯವರು ತುಂಬಾ ಕೋಪಿಷ್ಠರು. ತಮ್ಮ ಅಧಿಪತ್ಯ ಸಾಧಿಸಲು ಅವರು ಸಿಟ್ಟುಗೊಳ್ಳುವರು. ತಾವು ಸರಿಯೆಂದು ಸಾಬೀತು ಮಾಡಲು ಅವರು ಏನು ಬೇಕಾದರೂ ಮಾಡಬಲ್ಲರು ಮತ್ತು ತಮ್ಮದು ತಪ್ಪು ಎಂದು ಒಪ್ಪಿಕೊಳ್ಳುವುದು ಕಡಿಮೆ. ಇವರು ಸಿಟ್ಟು ಗೊಂಡ ವೇಳೆ ಬೇರೆಯವರನ್ನು ಹೀಯಾಳಿಸಲು ಹಿಂದೆ ಮುಂದೆ ನೋಡಲ್ಲ. ಇವರು ಸಿಟ್ಟುಗೊಂಡಿರುವ ವ್ಯಕ್ತಿಗೆ ಏನು ಹೇಳದೆಯೂ ಇರಬಹುದು. ಇವರು ಅವರನ್ನು ತುಂಬಾ ಹೀನಾಯವಾಗಿ ಅವಮಾನಿಸಬಹುದು ಮತ್ತು ಇದರ ಬಗ್ಗೆ ಅವರಿಗೆ ಯಾವುದೇ ಪಶ್ಚಾತ್ತಾಪ ಇರುವುದಿಲ್ಲ. ಇವರು ಸಿಟ್ಟಿನಲ್ಲಿ ಅಂಧರಾಗಿರುವರು.

ವೃಶ್ಚಿಕ (ಅಕ್ಟೋಬರ್ 23ರಿಂದ ನವಂಬರ್ 21)

ವೃಶ್ಚಿಕ (ಅಕ್ಟೋಬರ್ 23ರಿಂದ ನವಂಬರ್ 21)

ವೃಶ್ಚಿಕ ರಾಶಿಯವರು ಯಾವಾಗಲೂ ತುಂಬಾ ಶಾಂತ ಮತ್ತು ಸಮತೋಲನದಲ್ಲಿ ಇರುವರು. ಇವರು ವೈಷಮ್ಯ ಸಾಧಿಸುವ ಅಭ್ಯಾಸ ಹೊಂದಿರುವರು ಮತ್ತು ಇದನ್ನು ಅವರು ವರ್ಷಗಳ ಕಾಲ ಮುಂದುವರಿಸಬಹುದು. ಆದರೆ ವೃಶ್ಚಿಕ ರಾಶಿಯವರು ಕೋಪಗೊಂಡ ವೇಳೆ ಅವರ ಬದಿಯಲ್ಲಿ ನಿಲ್ಲುವುದು ತುಂಬಾ ಕಷ್ಟ. ಇವರು ವೈಷಮ್ಯ ಸಾಧಿಸುವರು. ಅವರನ್ನು ಕೋಪಗೊಳಿಸಿ, ಹಾಗೆ ಸುಮ್ಮನೆ ಹೋಗುವಂತಿಲ್ಲ. ಮೇಷ ರಾಶಿಯವರು ನಿಷ್ಕ್ರೀಯ ಆಕ್ರಮಣಕಾರಿ ಆಗಿರುವ ಕಾರಣದಿಂದಾಗಿ ಅವರು ಸಿಟ್ಟು ಗೊಂಡಿದ್ದಾರೆ ಎಂದು ಬೇರೆಯವರಿಗೆ ತಿಳಿಯುವುದು ಕೂಡ ಇಲ್ಲ. ಕೋಪಗೊಂಡಿರುವ ವೇಳೆ ಅವರು ಕಬ್ಬಿಣದ ಕಡಲೆಯಾಗಿರುವರು. ಯಾಕೆಂದರೆ ತಮ್ಮ ಕೋಪಕ್ಕೆ ಕಾರಣವೇನು ಎಂದು ಅವರು ಹೇಳುವುದಿಲ್ಲ. ಅವರಿಗೆ ಇಷ್ಟವಾಗದೆ ಇರುವ ಜನರನ್ನು ತುಂಬಾ ಹೀಯಾಳಿಸುವರು ಮತ್ತು ಇದರಿಂದಾಗಿ ಅವರ ನಡವಳಿಕೆಯಲ್ಲಿ ತುಂಬಾ ಕೆಟ್ಟ ನಡೆಗಳು ಬರಬಹುದು.

Most Read: ನಂಬಿಕೆಯ ವಿಚಾರದಲ್ಲಿ ಸೋಲುತ್ತಿರುವ ಆರು ರಾಶಿಚಕ್ರದವರು!

ಮಕರ(ಡಿಸೆಂಬರ್ 22-ಜನವರಿ 19)

ಮಕರ(ಡಿಸೆಂಬರ್ 22-ಜನವರಿ 19)

ಮಕರ ರಾಶಿಯವರು ಯಾವಾಗಲು ತುಂಬಾ ವಿಚಾರಶಕ್ತಿಯುಳ್ಳ ಮತ್ತು ಸರಳ ವ್ಯಕ್ತಿಗಳು. ಅವರು ತುಂಬಾ ವಿಚಾರಗಳನ್ನು ಸಹಿಸಿಕೊಳ್ಳುವರು ಮತ್ತು ಇದನ್ನು ಅವರು ತಮ್ಮೊಳಗೆ ಇಟ್ಟುಕೊಳ್ಳುವರು. ಆದರೆ ಬೇರೆಯವರು ಗಡಿ ದಾಡಿದ ವೇಳೆ ಅಥವಾ ಅವರನ್ನು ಕೋಪಗೊಳಿಸಿದಾಗ, ಅಲ್ಲಿಂದ ತೆರಳುವುದೇ ಒಳ್ಳೆಯದು. ಮಕರ ರಾಶಿಯವರು ಕೋಪಗೊಂಡರೆ ಆಗ ನೀವು ಅಲ್ಲಿಂದ ತೆರಳಿ ಮತ್ತು ಹಿಂತಿರುಗಿ ನೋಡಬೇಡಿ. ಮಕರ ರಾಶಿಯವರು ಕೋಪಗೊಂಡ ವೇಳೆ ಅವರು ತಮ್ಮ ತಾಳ್ಮೆ ಕಳೆದುಕೊಳ್ಳುವರು ಮತ್ತು ಇದು ತುಂಬಾ ಅಪಾಯಕಾರಿ. ಇವರು ಕೋಪಗೊಂಡ ವೇಳೆ ಅವರಿಗೆ ಬುದ್ಧಿವಾದ ಹೇಳಲು ಹೋದರೆ ಆಗ ಆ ವ್ಯಕ್ತಿಯನ್ನು ಕೂಡ ಹೀಯಾಳಿಸುವರು. ಈ ಮಾತುಗಳು ಅವರಿಗೆ ತುಂಬಾ ನೋವುಂಟು ಮಾಡಬಹುದು. ಇಂತಹ ಕೋಪ ಎಂದಿಗೂ ನೋಡಿಲ್ಲವೆಂದು ಅವರು ಹೇಳಬಹುದು. ಸುಲಭವಾಗಿ ಸಿಟ್ಟಿಗೊಳಗಾಗುವುದು ಈ ರಾಶಿಯವರ ದೊಡ್ಡ ಮಟ್ಟದ ದೌರ್ಬಲ್ಯವಾಗಿದೆ.

English summary

Most difficult to control these Zodiac Signs When they Angry!

All of us get angry - sometimes, the anger is justified and sometimes it is not. It’s no secret that you probably shouldn’t mess with someone if they’re already mad. If you see that someone is mad, your first instinct is to probably back up and give them space -no need to provoke them and make them even angrier. But some people have buttons that you should NEVER press. These buttons should ESPECIALLY be avoided when they are angry. Each zodiac sign expresses their anger in different ways. Some zodiac signs express their anger more than others.
X
Desktop Bottom Promotion