For Quick Alerts
ALLOW NOTIFICATIONS  
For Daily Alerts

ನಂಬಿಕೆಯ ವಿಚಾರದಲ್ಲಿ ಸೋಲುತ್ತಿರುವ ಆರು ರಾಶಿಚಕ್ರದವರು!

|

ನಮ್ಮ ಹಿರಿಯರು ವೈವಾಹಿಕ ಜೀವನ ಸುವರ್ಣ ಮಹೋತ್ಸವ, ವಜ್ರ ಮಹೋತ್ಸವಗಳನ್ನು ಆಚರಣೆ ಮಾಡುತ್ತಿದ್ದರು. ಆದರೆ ಆಧುನಿಕ ಯುಗದಲ್ಲಿ ಕೆಲವೇ ವರ್ಷಗಳಲ್ಲಿ ಸಂಬಂಧವು ಕಡಿದು ಬೀಳುತ್ತಿರುವುದನ್ನು ಕಾಣಬಹುದಾಗಿದೆ. ಯಾಕೆಂದರೆ ಸಂಬಂಧವನ್ನು ಕಾಪಾಡಿಕೊಂಡು ಹೋಗುವುದು ಇಂದು ತುಂಬಾ ಕಠಿಣ ಸವಾಲಾಗಿದೆ. ಆಧುನಿಕ ಯುಗದಲ್ಲಿ ಬಂದಿರುವಂತಹ ಡೇಟಿಂಗ್ ಮತ್ತು ಲಿವ್ ಇನ್ ರಿಲೇಷನ್ ನಿಂದಾಗಿ ಸಂಬಂಧಗಳು ಬೇಗ ಕೆಡಲು ಪ್ರಮುಖ ಕಾರಣವಾಗಿದೆ.

Zodiac Signs

ಯಾವುದೇ ಸಂಬಂಧವಾದರೂ ಅಲ್ಲಿ ನಂಬಿಕೆ ಎನ್ನುವುದು ಅತೀ ಮುಖ್ಯವಾಗಿರುವುದು. ನಂಬಿಕೆ ಇದ್ದರೆ ಸಂಬಂಧವು ದೀರ್ಘ ಕಾಲ ಬಾಳುವುದು. ಆದರೆ ಈ ಲೇಖನದಲ್ಲಿ ನಾವು ನಿಮಗೆ ಹೇಳಲು ಹೊರಟಿರುವುದು ಕೆಲವೊಂದು ತುಂಬಾ ಆತ್ಮವಿಶ್ವಾಸದ ರಾಶಿಗಳು ಕೂಡ ನಂಬಿಕೆಯ ವಿಚಾರದಲ್ಲಿ ಸೋಲುತ್ತಿರುವುದು. ಸಂಬಂಧದಲ್ಲಿ ಯಾವ ರಾಶಿಯವರು ತುಂಬಾ ಸಮಸ್ಯೆ ಎದುರಿಸುವರು ಎಂದು ನೀವು ತಿಳಿಯಿರಿ.

ಕನ್ಯಾ

ಕನ್ಯಾ

ಕನ್ಯಾ ರಾಶಿಯವರು ಪ್ರತಿಯೊಂದನ್ನು ಅತಿಯಾಗಿ ವಿಶ್ಲೇಷಿಸುವರು

ಸಹಜತೆ ಮತ್ತು ಹೃದಯದ ಮಾತನ್ನು ಕೇಳುವುದು ಸೂಕ್ಷ್ಮವಾಗಿರುವ ಕನ್ಯಾ ರಾಶಿಯವರಿಗೆ ಸಾಧ್ಯವಾಗದು. ರಾಶಿಚಕ್ರಗಳಲ್ಲಿ ತುಂಬಾ ಜಾಣ ರಾಶಿಯವರಾಗಿರುವಂತಹ ಕನ್ಯಾ ರಾಶಿಯವರು ಯಾವಾಗಲೂ ಒಂದು ನಿರ್ಧಾರಕ್ಕೆ ಬರುವ ಮತ್ತು ಪ್ರತಿಯೊಂದನ್ನು ಅತಿಯಾಗಿ ವಿಶ್ಲೇಷಣೆ ಮಾಡುವಂತಹ ಬಲೆಗೆ ಸಿಲುಕುವರು. ಪ್ರತಿಯೊಂದನ್ನು ವಿಶ್ಲೇಷಣೆ ಮಾಡುತ್ತಲಿದ್ದರೆ ಆಗ ನಂಬಿಕೆ ಉಂಟಾಗುವುದು ತುಂಬಾ ಕಷ್ಟ. ಇನ್ನು ಕನ್ಯಾ ರಾಶಿಯವರಿಗೆ ಈ ವರ್ಷ ವರ್ಷವು ತುಂಬಾ ಒಳ್ಳೆಯದಾಗಿರಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗುವುದು ಮತ್ತು ನಿಮಗೆ ಬೇಕಿರುವಂತಹ ಸ್ಥಳಕ್ಕೆ ನೀವು ಬರಲಿದ್ದೀರಿ. ಆರಂಭಿಕ ದಿನಗಳು ಸ್ವಲ್ಪ ಮಟ್ಟಿಗೆ ಕಠಿಣವಾಗಲಿದೆ. ಇದರಿಂದ ನಿಮಗೆ ಹಿನ್ನಡೆಯಾಗಬಹುದು. ಆದರೆ ಇದರಿಂದ ನೀವು ತುಂಬಾ ಸುಲಭವಾಗಿ ಪಾರಾಗಲಿದ್ದೀರಿ. ಅಸುರಕ್ಷಿತ ಭಾವನೆಯಿಂದ ನೀವು ಹೊರಗೆ ಬರುವುದು ತುಂಬಾ ಒಳ್ಳೆಯ ವಿಚಾರವೆಂದು ಅರಿತುಕೊಳ್ಳಬೇಕು. ಇದರಿಂದಾಗಿ ನಿಮಗೆ ತುಂಬಾ ಹಗುರ ಭಾವನೆ ಮತ್ತು ವ್ಯಕ್ತಿಯಾಗಿ ಬೆಳೆಯಲು ನೆರವಾಗಲಿದೆ.

ಮಕರ

ಮಕರ

ಮಕರ ರಾಶಿಯವರಿಗೆ ನಂಬಿಕೆ ಕಡಿಮೆ

ಮಕರ ರಾಶಿಯವರ ವ್ಯಕ್ತಿತ್ವವು ತೀರ್ಪು ನೀಡುವುದು ಮತ್ತು ಜನರನ್ನು ತಮ್ಮ ಹತ್ತಿರಕ್ಕೆ ಬಿಟ್ಟುಕೊಡುವುದು ಹಾಗೂ ಅವರನ್ನು ತುಂಬಾ ಆಳವಾಗಿ ತಿಳಿಯಲು ಪ್ರಯತ್ನಿಸುವುದು. ಮಕರ ರಾಶಿಯವರ ನಿರೀಕ್ಷೆಗೆ ನೀವು ತಲುಪದೆ ಇದ್ದರೆ ಆಗ ಅವರು ನಿಮ್ಮನ್ನು ಯಾವತ್ತಿಗೂ ನಂಬುವುದಿಲ್ಲ. ತಮಗೆ ತುಂಬಾ ಭಿನ್ನವಾಗಿರುವ ಜನರನ್ನು ಅರ್ಥ ಮಾಡಿಕೊಳ್ಳುವುದು ಈ ರಾಶಿಯವರಿಗೆ ತುಂಬಾ ಕಠಿಣವಾಗುವುದು. ಇನ್ನು ಈ ವರ್ಷದ ಅಂತ್ಯದ ವೇಳೆಗೆ ನೀವು ತುಂಬಾ ಕಡಿಮೆ ಒತ್ತಡ ಹಾಗೂ ಹೆಚ್ಚು ಆರಾಮವಾಗಿ ಇರಲಿದ್ದೀರಿ. ನೀವು ಅತಿಯಾಗಿ ಸಂಭ್ರಮಿಸಲು ಹೋಗಬೇಡಿ ಮತ್ತು ಏನು ನಡೆಯುತ್ತಿದೆಯೋ ಅದಕ್ಕೆ ಒಂದು ಕಾರಣವಿದೆ ಎಂದು ತಿಳಿಯಿರಿ. ನಿಮಗೆ ಹೊಸ ವರ್ಷದಲ್ಲಿ ಒಂದು ಸ್ಪಷ್ಟ ಚಿತ್ರಣವು ಕಾಣಲಿದೆ. ಕೆಟ್ಟ ಜನರಿಗೆ ಒಳ್ಳೆಯ ಜನರನ್ನು ನೀವು ಬೇರ್ಪಡಿಸಲಿದ್ದೀರಿ ಮತ್ತು ಎಲ್ಲಾ ವಿಚಾರಗಳು ಆಗ ನಿಮ್ಮ ಪರವಾಗಿ ಕೆಲಸ ಮಾಡಲು ಆರಂಭವಾಗುವುದು. ಇದರಿಂದಾಗಿ ನೀವು ದೃಢಮನಸ್ಸಿನಿಂದ ಇರಬೇಕು. ಪ್ರತಿಯೊಂದು ಹೊಸ ವರ್ಷ ಕೂಡ ಸ್ವಲ್ಪ ಸಿಹಿ ಹಾಗೂ ಕಹಿ ಉಂಟು ಮಾಡುವುದು. ಆದರೆ ನೀವು ಒಂದು ವಿಚಾರವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಅದೇನೆಂದರೆ ಅನುಭವವು ನಿಮ್ಮನ್ನು ಮತ್ತಷ್ಟು ಜವಾಬ್ದಾರಿಯುತರನ್ನಾಗಿ ಮಾಡುವುದು. ಇದರಿಂದ ನಿಮ್ಮೊಳಗೆ ಒಳ್ಳೆಯತನವು ಹೊರಬರುವುದು.

ಧನು

ಧನು

ಧನು ರಾಶಿ ಪ್ರೀತಿಯಲ್ಲಿ ಪ್ರೌಢತೆ ಹೊಂದಿಲ್ಲ

ಧನು ರಾಶಿಯವರು ಪ್ರೀತಿಯಲ್ಲಿ ತುಂಬಾ ಮುಂದೆ ಇರುವರು ಮತ್ತು ಎರಡನೇ ಡೇಟಿಂಗ್ ಬಳಿಕ ಅವರು ತುಂಬಾ ಸಂತೋಷವಾಗಿ ಯೋಜನೆಗಳನ್ನು ಹಾಕಿಕೊಳ್ಳುವರು. ಧನು ರಾಶಿಯು ಕ್ಷಮೆ ನೀಡುವಂತಹ ಗುಣವನ್ನು ಹೊಂದಿದೆ ಮತ್ತು ನಂಬಿಕೆ ಬರಲು ಇವರಿಗೆ ತುಂಬಾ ಸಮಯ ಬೇಕಾಗುತ್ತದೆ. ಇವರು ಮಾಡಿರುವಂತಹ ಎಲ್ಲಾ ತಪ್ಪುಗಳ ಕಡೆ ಇವರು ಗಮನಹರಿಸುವರು. ಹಸಿರು ಬಣ್ಣವನ್ನು ಧನು ರಾಶಿಯವರು ಇಟ್ಟುಕೊಂಡರೆ ಅದರಿಂದ ಅವರಿಗೆ ಹೊಸ ವರ್ಷದಲ್ಲಿ ಹೆಚ್ಚಿನ ಸಮೃದ್ಧಿ ಹಾಗೂ ಸುಖವು ಸಿಗುವುದು. ನಿಯಾನ್ ಬ್ಯಾಗ್ ಅಥವಾ ಹಸಿರು ಬಣ್ಣದ ಯಾವುದೇ ಬಟ್ಟೆಯನ್ನು ಧರಿಸಿದರೂ ಇದರಿಂದ ನಿಮಗೆ ಹೊಸ ವರ್ಷದಲ್ಲಿ ಒಳ್ಳೆಯದಾಗಲಿದೆ. ಕೆಂಪು ಬಣ್ಣ ಕೂಡ ನಿಮ್ಮ ಪ್ರೀತಿಯ ಜೀವನದಲ್ಲಿ ತುಂಬಾ ಅದ್ಭುತವನ್ನು ಉಂಟು ಮಾಡಲಿದೆ. ನೀಲಿ ಮತ್ತು ಹಳದಿ ಬಣ್ಣವನ್ನು ನೀವು ಕಡೆಗಣಿಸಬೇಕು. ಯಾಕೆಂದರೆ ಇದರಿಂದ ನಿಮಗೆ ಒಳ್ಳೆಯ ಫಲಿತಾಂಶ ಸಿಗದು.

ಮೇಷ

ಮೇಷ

ಮೇಷ ರಾಶಿಯವರು ಟೀಕಾತ್ಮಕವಾಗಿ ಅತಿ ಆಲೋಚಿಸುವರು

ಮೇಷ ರಾಶಿಯವರು ಯಾವುದೇ ಸಂಬಂಧದಲ್ಲಿ ಬೇಗನೆ ಸಿಲುಕುವರು. ಆದರೆ ಈ ರಾಶಿಯವರಲ್ಲಿ ಯಾವಾಗಲೂ ಸಂಶಯಗ್ರಸ್ತ ಮನಸ್ಸು ಇರುವುದು. ಮೇಷ ರಾಶಿಯವರು ಯಾವಾಗಲೂ ಸಂಬಂಧದಲ್ಲಿ ಇರಲು ಬಯಸುವರು. ಆದರೆ ಇವರು ಯಾವತ್ತಿಗೂ ವಂಚನೆ ಮತ್ತು ಹೃದಯ ಒಡೆಯುವುದನ್ನು ತಲೆಯಿಂದ ಹೊರಗಿಡುವುದಿಲ್ಲ. ಇನ್ನು ಮಂಗಳನ ಅಧಿಪತ್ಯ ಹೊಂದಿರುವಂತಹ ಈ ರಾಶಿಯು ಯಾವಾಗಲೂ ತುಂಬಾ ಪ್ರಜ್ವಲಿಸುವ ಮತ್ತು ಚಲಿಸುತ್ತಿರುವ ಕಾರಣ ಇವರಿಗೆ ಸರಿಯಾಗಿ ಹೊಂದಿಕೊಳ್ಳುವ ಬಣ್ಣ ಗುಲಾಬಿ. ಗುಲಾಬಿ ಬಣ್ಣವು ಪ್ರೀತಿಯ ಸಂಕೇತವಾಗಿದೆ. ಇದು ತನ್ನನ್ನು ಮತ್ತು ಇತರರನ್ನು ಪ್ರೀತಿಸುವಂತಹ ಸಂಕೇತವಾಗಿರುವುದು. ಗುಲಾಬಿ ಬಣ್ಣದ ಹೊರತಾಗಿ ಮೇಷ ರಾಶಿಯವರು ಕೆಂಪು ಬಣ್ಣ ಆಯ್ಕೆ ಮಾಡಿಕೊಳ್ಳಬಹುದು. ಕೆಂಪು ಬಣ್ಣವು ಶಕ್ತಿ ಮತ್ತು ಪರಿಶುದ್ಧತೆಯ ಪ್ರತೀಕವಾಗಿರುವುದು. ನೀವು ಕಡು ಬಣ್ಣಗಳಾಗಿರುವಂತಹ ಕಂದು ಅಥವಾ ಕಪ್ಪು ಬಣ್ಣವನ್ನು ತ್ಯಜಿಸಬೇಕು. ಇದರಿಂದ ನಿಮಗೆ ಒಳ್ಳೆಯದಾಗುವ ಬದಲು ಹೆಚ್ಚು ಕೆಟ್ಟದಾಗುವಂತಹ ಸಂಭವವು ಇದೆ.

ಸಿಂಹ

ಸಿಂಹ

ಸಿಂಹ ರಾಶಿಯವರು ತುಂಬಾ ಕೆಟ್ಟ ಸಂಗಾತಿ ಆಯ್ಕೆ ಮಾಡುವರು

ಸಿಂಹ ರಾಶಿಯವರು ಯಾವಾಗಲೂ ಅಗ್ನಿಯ ಚಿಹ್ನೆ ಆಗಿರುವ ಕಾರಣದಿಂದಾಗಿ ಮೊದಲ ಸಲವೇ ಅವರು ತುಂಬಾ ಅದ್ಭುತವಾದ ಪ್ರಭಾವ ಬೀರುವರು. ಇದರ ಹೊರತಾಗಿ ಅವರು ಪ್ರತಿಯೊಬ್ಬರಿಗೂ ತಮ್ಮ ಹೃದಯದಲ್ಲಿ ಸ್ಥಾನ ನೀಡುವರು. ರಾಶಿ ಚಕ್ರಗಳಲ್ಲಿ ಸಿಂಹ ರಾಶಿಯವರು ತುಂಬಾ ಆಯ್ಕೆಯಿಂದ ಸಂಬಂಧದಲ್ಲಿ ಸಿಲುಕುವ ರಾಶಿಯವರು. ಆದರೆ ಇವರ ಬೇಡಿಕೆಗಳಿಂದಾಗಿ ಅಂತಿಮವಾಗಿ ಇವರು ತಮಗೆ ಹೊಂದಾಣಿಕೆ ಆಗದೆ ಇರುವಂತಹ ಸಂಗಾತಿಯನ್ನು ಆಯ್ಕೆ ಮಾಡುವರು. ಹೊಂದಾಣಿಕೆ ಇಲ್ಲದೆ ಇರುವಂತಹ ಸಂಗಾತಿ ಜತೆಗೆ ಡೇಟಿಂಗ್ ಮಾಡಿದರೆ ಆಗ ನಂಬಿಕೆ ಮೂಡುವುದಿಲ್ಲ. ಇನ್ನು ಸೂರ್ಯನ ಅಧಿಪತ್ಯಕ್ಕೆ ಒಳಗಾಗಿರುವ ಸಿಂಹ ರಾಶಿಗೆ 2019ರಲ್ಲಿ ಹೊಂದಿಕೊಳ್ಳುವ ಬಣ್ಣವೆಂದರೆ ಅದು ಹಳದಿ. ಇದಕ್ಕೆ ಹೊರತಾಗಿಯೂ ಈ ರಾಶಿಯವರು ಕೆಲವು ಕಡು ಬಣ್ಣವಾಗಿರುವಂತಹ ಬಂಗಾರ, ಕೆಂಪು ಮತ್ತು ಹಸಿರು ಬಣ್ಣವನ್ನು ಪರಿಗಣಿಸಬಹುದು. ಇದು ಕೂಡ ಇವರಿಗೆ ಒಳ್ಳೆಯದನ್ನು ಉಂಟು ಮಾಡಲಿದೆ. ನೀವು ಒಂದು ಕೆಂಪು ಬಟ್ಟೆ ಖರೀದಿ ಮಾಡಿಕೊಳ್ಳಿ ಮತ್ತು ಇದರಿಂದ ನಿಮ್ಮ ಅದೃಷ್ಟ ಮತ್ತು ಎಲ್ಲರ ಆಕರ್ಷಣೆಗೂ ಒಳಗಾಗುವಿರಿ. ಪುರುಷರು ಹಳದಿ ಅಥವಾ ಕೆಂಪು ಬಣ್ಣವನ್ನು ತಮ್ಮ ಜೀವನದಲ್ಲಿ ಬಳಸಿಕೊಳ್ಳುವ ಮೂಲಕ ಕಳೆದುಕೊಂಡಿರುವ ಆತ್ಮವಿಶ್ವಾಸ ಮರಳಿ ಪಡೆಯಬಹುದು.

ವೃಶ್ಚಿಕ

ವೃಶ್ಚಿಕ

ವೃಶ್ಚಿಕ ರಾಶಿಯವರು ಅಡಗಿಕೊಳ್ಳುವರು

ವೃಶ್ಚಿಕ ರಾಶಿಯವರ ವ್ಯಕ್ತಿತ್ವು ತುಂಬಾ ಆಳ ಮತ್ತು ವಿಚಿತ್ರವಾಗಿ ಇರುವುದು. ಆದರೆ ನಿಜವೇನೆಂದರೆ ವೃಶ್ಚಿಕ ರಾಶಿಯವರು ತಮ್ಮ ನಿಜ ಮುಖವನ್ನು ಮುಚ್ಚಿಟ್ಟುಕೊಳ್ಳುವರು. ಇವರು ತಮ್ಮ ಜೀವನಕ್ಕಿಂತ ದೊಡ್ಡ ಮಟ್ಟದ ವ್ಯಕ್ತಿತ್ವ ಪ್ರದರ್ಶಿಸುವರು. ಇವರು ನಂಬಿಕೆಯನ್ನಿಡಲು ಕಷ್ಟಪಡುವರು ಮತ್ತು ಸಂಬಂಧದಲ್ಲಿ ಹೃದಯವನ್ನು ಬಿಚ್ಚಿಡುವುದಿಲ್ಲ. ವೃಶ್ಚಿಕ ರಾಶಿಯವರು ತುಂಬಾ ಉತ್ಸಾಹಿಗಳು ಮತ್ತು ಮಂಗಳ ಗ್ರಹವು ಈ ರಾಶಿಗೆ ಅಧಿಪತಿಯಾಗಿರುವ ಕಾರಣದಿಂದಾಗಿ ಮುಂಬರುವ ವರ್ಷವು ನಿಮಗೆ ತುಂಬಾ ಶುಭವಾಗಿರುವುದು ಮತ್ತು ನೀವು ಕಪ್ಪು ಬಣ್ಣವನ್ನು ನೆಚ್ಚಿಕೊಂಡಿಬೇಕು. ಹೆಚ್ಚಿನವರು ಕಪ್ಪು ಬಣ್ಣವು ಅಶುಭ ಎಂದು ಭಾವಿಸಿರುವರು. ಆದರೆ ಈ ಬಣ್ಣವು ಬಲ, ಗಂಭೀರತೆ ಮತ್ತು ಶಕ್ತಿಯನ್ನು ನೀಡುವುದು. ನೀವು ಹಸಿರು ಮತ್ತು ಹಳದಿ ಬಣ್ಣದಿಂದ ದೂರವಿರಬೇಕೆಂದು ಹೇಳಲಾಗಿದೆ.

English summary

Zodiac Signs Really Struggle With Trust Issues

Relationships are definitely hard work, so much so that we don’t think anyone has ever said the contrary. Modern dating and hookup culture are responsible for making trust issues more and more prevalent in our society. Believe it or not, trust issues impact most relationships and even the most confident of zodiac signs can fall victim to trust issues. Discover which zodiac signs struggle most with trust issues in relationships.
X
Desktop Bottom Promotion