For Quick Alerts
ALLOW NOTIFICATIONS  
For Daily Alerts

ಮೈಕಲ್ ಜಾಕ್ಸನ್‌ನಂತೆ ಕಾಣಿಸಲು 30 ಸಾವಿರ ಡಾಲರ್ ಖರ್ಚು ಮಾಡಿದ!

|

ಅಭಿಮಾನವೆನ್ನುವುದು ಹುಚ್ಚುತನಕ್ಕೆ ತಿರುಗಿದರೆ ಅದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ. ಯಾಕೆಂದರೆ ಅಭಿಮಾನದ ಹುಚ್ಚುತನದಿಂದ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ತಮ್ಮ ನೆಚ್ಚಿನ ಸೆಲೆಬ್ರಿಟಿಗಾಗಿ ಏನೇನೋ ಸಾಹಸಗಳನ್ನು ಮಾಡಲು ಹೋಗಿದ್ದಾರೆ. ವ್ಯಕ್ತಿಯೊಬ್ಬ ತನ್ನ ನೆಚ್ಚಿನ ಸೆಲೆಬ್ರಿಟಿ ರೀತಿ ಕಾಣಿಸಿಕೊಳ್ಳಬೇಕು ಎಂದು ಬಯಸಿದರೆ ಆಗ ಹೇಗಿರಬಹುದು ಎಂದು ನೀವೇ ಆಲೋಚನೆ ಮಾಡಿ.

ಇಲ್ಲೊಬ್ಬ ಯುವಕನು ತಾನು ಕೂಡ ಮೈಕಲ್ ಜಾಕ್ಸನ್ ರೀತಿ ಕಾಣಿಸಿಕೊಳ್ಳಬೇಕು ಎಂದು ಬಯಸಿದ್ದಾನೆ. ಈ ಘಟನೆ ಬಗ್ಗೆ ನೀವು ಇನ್ನಷ್ಟು ತಿಳಿಯಿರಿ. ಅರ್ಜೆಂಟೀನಾದ ಲಿಯೊ ಬ್ಲಾನ್ಕೋ ಎಂಬಾತ ಜಾಕ್ಸನ್ ರೀತಿಯಲ್ಲಿ ಕಾಣಿಸಿಕೊಳ್ಳಲು 11 ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡು 30000 ಡಾಲರ್ ವ್ಯಯಿಸಿದ್ದಾಣೆ. ತನ್ನ 15ನೇ ವಯಸ್ಸಿನಿಂದಲೇ ಆತ ಹಲವಾರು ರೀತಿಯ ಕಾಸ್ಮೆಟಿಕ್ ಚಿಕಿತ್ಸೆಗಳಿಗೆ ಒಳಗಾಗುತ್ತಿದ್ದಾನೆ.

Michael Jackson

ಲಿಯೋ ಹೇಳುವ ಪ್ರಕಾರ ತಾನು ಕೂಡ ಅಂತಿಮವಾಗಿ ಜಾಕ್ಸನ್ ರೀತಿಯೇ ಕಾಣಿಸಿಕೊಳ್ಳಬೇಕು. ಪಾಪ್ ನ ರಾಜನಾಗಿರುವ ದಂತಕಥೆ ದಿವಂಗತ ಜಾಕ್ಸನ್ ಗೆ ಇದನ್ನು ಅರ್ಪಿಸುತ್ತೇನೆ ಎಂದು ಆತ ಹೇಳುತ್ತಾನೆ. ಇದರಿಂದಾಗಿ ಆತ ಕೂಡ ಜಾಕ್ಸನ್ ನಂತೆ ಕಾಣಿಸಿಕೊಳ್ಳಬೇಕು ಎಂದು ಬಯಸಿರುವುದು.

ಲಿಯೋ ತಾಯಿ ಹೇಳುವ ಪ್ರಕಾರ ಮಗ ಈ ರೀತಿ ವರ್ತಿಸುತ್ತಿರುವ ಬಗ್ಗೆ ತುಂಬಾ ಚಿಂತೆಯಾಗಿತ್ತು. ಕೆಲವೊದು ಸಲ ಮಗನ ಕಡೆಗೆ ನೋಡಿ ಈತ ತನ್ನ ಮಗನೇ ಎಂದು ಅನಿಸುತ್ತಿತ್ತು ಎಂದು ಹೇಳಿದ್ದಾರೆ. ಸಣ್ಣದಾಗಿದ್ದನಿಂದಲೇ ತನಗೆ ಜಾಕ್ಸನ್ ಬಗ್ಗೆ ಮೋಹ ಹುಟ್ಟಿಕೊಂಡಿತು ಮತ್ತು ಆತ ತನ್ನ ಹೀರೋ ಎಂದು ಆಗಲೇ ನಿರ್ಧಾರ ಮಾಡಿಕೊಂಡಿದ್ದೆ. ಇದರಿಂದಾಗಿ ಆತ 11 ಪ್ಲಾಸ್ಟಿಕ್ ಸರ್ಜರಿ ಮತ್ತು ಇತರ ಪ್ರಕ್ರಿಯೆಗಳಿಗೆ ಒಳಗಾಗಿದ್ದಾನೆ.

ತನ್ನ ಈ ಎಲ್ಲಾ ಬದಲಾವಣಿಗಳಿಂದ ನನಗೆ ಇದುವರೆಗೆ ತೃಪ್ತಿ ಸಿಕ್ಕಿಲ್ಲ ಮತ್ತು ಸಂಪೂರ್ಣವಾಗಿ ಜಾಕ್ಸನ್ ರೀತಿಯಲ್ಲೇ ಕಾಣಲು ಇನ್ನಷ್ಟು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದೇನೆ. ಇದರಿಂದಾಗಿಯೇ ಆತನಿಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಅಭಿಮಾನಿಗಳು ಇದ್ದಾರೆ ಮತ್ತು ಆತ ಯಾವುದಾದರೂ ಶೋ ಅಥವಾ ಬೀದಿಗಳಲ್ಲಿ ಪ್ರದರ್ಶನ ನೀಡಿದರೂ ಜನರು ತನ್ನನ್ನು ಹಿಂಬಾಲಿಸುವರು ಎಂದು ಲಿಯೋ ಹೇಳಿಕೊಂಡಿದ್ದಾರೆ.

ಶಸ್ತ್ರಚಿಕಿತ್ಸೆ ಮಾಡಿಕೊಳ್ಳುವಂತಹ ಆತನ ಚಟಕ್ಕೆ ತಾಯಿ ಎಚ್ಚರಿಕೆ ನೀಡಿದ್ದಾರೆ ಮತ್ತು ಇದು ಸಲೂನ್ ಗೆ ಹೋದಂತೆ ಎಂದು ಭಾವಿಸುವುದು ಬೇಡ ಎಂದು ಆಕೆ ಹೇಳಿದ್ದಾರೆ. ಲಿಯೋ ಮೈಕಲ್ ಜಾಕ್ಸನ್ ನಂತೆ ಕಾಣಿಸಿಕೊಳ್ಳುತ್ತಿದ್ದರೂ ಆತ ಸಂಪೂರ್ಣವಾಗಿ ತನ್ನ ಹೀರೋನಂತೆ ಕಾಣಲು ಇನ್ನೂ ಹಲವಾರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಬಹುದು.

English summary

Man Spends $30,000 To Look Like Michael Jackson

Leo Blanco claims that he wishes to be the best Michael Jackson impersonator. Hence he has spent over $30,000 on 11 different surgeries. Leo's mum admits that the changes make her anxious and she at times even wonders if he is her real son! Even though he has undergone so many surgeries, he is still not satisfied with his look and plans to continue with the surgeries!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more